ಇಂದು ಐಪಿಎಫ್ ಬೆಂಗಳೂರು ಪ್ರದೇಶವು ಎಸ್ಎಸ್ ಸಿ ಪರೀಕ್ಷೆಯ ಕುರಿತು ಗಮನ ಹರಿಸುವ ಕಾರ್ಯಕ್ರಮವನ್ನು ನಡೆಸಿದೆ
ಅಲ್ಹಮ್ದುಲಿಲ್ಲಾಹ್, ಕೆಲವು ಒಳನೋಟ ಲಭಿಸಿತು. ಮುಸ್ಲಿಂ ಸಮುದಾಯ ಈ ಪರೀಕ್ಷೆ ಬಗ್ಗೆ ಹೆಚ್ಚು ತಿಳಿದಿಲ್ಲ. ನಾನು ಈ ಕೆಲಸಕ್ಕೆ ಹಾಜರಾಗುವ ಮುಂಚೆ, ಕೇಂದ್ರ ಸರಕಾರ ಇದರ ಮುಖ್ಯ ಪೋಸ್ಟ್ಗಳನ್ನು ಹೇಗೆ ನೇಮಿಸಿಕೊಳ್ಳುತ್ತಿದೆಂದು ತಿಳಿದಿರಲಿಲ್ಲ
6 ತಿಂಗಳ ಎಸ್ಎಸ್ ಸಿ ಕಠಿಣ ತರಬೇತಿಯ ಮೂಲಕ ಮುಸ್ಲಿಂ ಸಮುದಾಯದ ಭವಿಷ್ಯವನ್ನು ಬದಲಾಯಿಸಬಹುದು.
ಸಿಬಿಐ, ಎನ್ಐಎ, ಆದಾಯ ತೆರಿಗೆ, ಜಾರಿ ನಿರ್ದೇಶನಾಲಯ ( ಇಡಿ), ಆರ್ ಬಿ ಐ, ಸಿಎಜಿ, ಇತ್ಯಾದಿ ಹುದ್ದೆಗಳ ಖಾಲಿ, ಎಸ್ಎಸ್ ಸಿ ಪರೀಕ್ಷೆಯ ಮೂಲಕ ಭರ್ತಿಯಾಗಿವೆ.
ಹಾಗೂ ದೆಹಲಿ ಪೊಲೀಸ್ ನಂತಹ ಹಲವಾರು ಖಾಲಿ ಹುದ್ದೆಗಳಿಗೆ ಕಾಲಕಾಲಕ್ಕೆ ಎಸ್ಎಸ್ ಸಿ ಅನೇಕ ಪರೀಕ್ಷೆಗಳನ್ನು ನಡೆಸುತ್ತಿದೆ.
ಆದರೆ ದುರದೃಷ್ಟವಶಾತ್, ಎಸ್ ಎಸ್ ಸಿ ಪರೀಕ್ಷೆಯ ಬಗ್ಗೆ ಮುಸ್ಲಿಂ ಸಮುದಾಯಕ್ಕೆ ಹೆಚ್ಚಿನ ಅರಿವು ಇಲ್ಲ, ಹಾಗೂ ಇನ್ನೂ ನಮ್ಮ ಯುವಕರು ಎಸ್ ಎಸ್ ಸಿ ಪರೀಕ್ಷೆಯ ತಯಾರಿ ಬಗ್ಗೆ ಮಾತನಾಡುವುದು ನನಗೆ ಕಾಣಿಸುತ್ತಿಲ್ಲ.
ಪ್ರತಿವರ್ಷ, ಎಸ್ಎಸ್ ಸಿ, ಸಿಜೆಎಲ್ ಹಾಗೂ ಇತರ ಸಂಬಂಧಿತ ಪರೀಕ್ಷೆಯಿಂದ 12000 - 17000 ವರೆಗೆ ಕೇಂದ್ರ ಸರ್ಕಾರದ ಪೋಸ್ಟ್ಗಳು ಲಭ್ಯವಿದೆ.
ಈಗಿನ ಅನೇಕ ಮುಸ್ಲಿಂ ಯುವಕರು ಯುಪಿಎಸ್ ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾರೆ, ಆದರೆ ನೈಜವಾಗಿ ಈ ಪರೀಕ್ಷೆಯಿಂದ ಪ್ರತಿವರ್ಷ ಕೇವಲ 800 - 1000 ಪೋಸ್ಟ್ಗಳು ಮಾತ್ರ ಪೂರೈಸುತ್ತಿದೆ. ಮತ್ತು ಯುಪಿಎಸ್ ಸಿ ಪರೀಕ್ಷೆಯ ನಮೂನೆ ಕ್ರಿಯಾತ್ಮಕವಾಗಿರುತ್ತದೆ ಹಾಗೂ ಪ್ರತಿವರ್ಷ ಸಿಲ್ಲೇಬಸ್ ಬದಲಾಗುತ್ತಲೇಯಿರುತ್ತದೆ. ಆದರೆ ಎಸ್ಎಸ್ ಸಿ ಪರೀಕ್ಷೆಯದ್ದು ಸ್ಥಿರವಾಗಿರುತ್ತದೆ, ಇದಾಗಿದೆ ಎಸ್ಎಸ್ ಸಿ ಪರೀಕ್ಷೆಯ ಮತ್ತೊಂದು ಪ್ರಯೋಜನೆ.
ಇಂಗ್ಲಿಷ್, ಗಣಿತ, ಸಾಮಾನ್ಯ ಜ್ಞಾನದ ಬಗ್ಗೆ ಗಮನ ಹರಿಸಲು ಸಿದ್ಧರಾಗಿರುವ ಮುಸ್ಲಿಂ ವಿದ್ಯಾರ್ಥಿಗಳಿಗೆ ಈ ಪರೀಕ್ಷೆಯನ್ನು ಅತಿ ಸುಲಭವಾಗಿ ಭೇಧಿಸಬಹುದು.
ಕಾರ್ಯಕ್ರಮದ ನಿರೂಪಕ ಉಲ್ಲೇಖಿಸಿದ ಸುವರ್ಣ ಪದವನ್ನು ಇಲ್ಲಿ ನಾನು ಉದ್ದರಿಸುತ್ತಿದ್ದೇನೆ *" 90% ಮುಸ್ಲಿಂ ಸಂಸ್ಥೆಗಳು ಮತ್ತು ಅದರ ನಾಯಕರು ಸಮುದಾಯದ ಸಮಸ್ಯೆಗಳ ಬಗ್ಗೆ ಚರ್ಚಿಸುತ್ತಾರೆ, 9% ಸಮಸ್ಯೆಗಳ ಪರಿಹಾರದ ಬಗ್ಗೆ ಚರ್ಚಿಸುತ್ತಾರೆ, ಆದರೆ 1% ಮಾತ್ರ ಪರಿಹಾರದ ಮೇಲೆ ಪ್ರವರ್ತಿಸುತ್ತಾರೆ, ನೀವು ನಿಜವಾಗಿಯೂ ಮುಸ್ಲಿಂ ಸಮುದಾಯದ ಭವಿಷ್ಯ ಮತ್ತು ಪ್ರಸ್ತುತ ಸ್ಥಿತಿಯನ್ನು ಬದಲಾಯಿಸಲು ಬಯಸುತ್ತಿದ್ದರೆ ನೀವು ಆ 1% ನಲ್ಲಿ ಆಗಲು ಪ್ರಯತ್ನಿಸಿ.*
(14/8/2020. 1:39 pm)
✍️ಡಾ. ನೂರ್ ಜಹಾನ್.
(ಎಸ್ಎಸ್ ಸಿ ಅಧಿಸೂಚನೆ 2020)
ಖಾಲಿ ಹುದ್ದೆಗಳು:5846
ವರ್ಗ :ಕೇಂದ್ರ ಸರ್ಕಾರಿ ಉದ್ಯೋಗಗಳು
ಅರ್ಹತೆ : 12th*
ಆಯ್ಕೆ :ಬರಹೆ,ಇಂಟರ್ವ್ಯೂ
ಸಂಬಳ. :ರೂ69,100/-
ಕೊನೆಯ ದಿನಾಂಕ:7.9.2020
*ನೊಂದಾಯಿಸಿ:* https://bit.ly/3kapOYv