ಚುನಾವಣಾ ಬಾಂಡ್ ಹಗರಣ :ಪ್ರಜಾಪ್ರಭುತ್ವಕ್ಕೆ ಕಪ್ಪು ಚುಕ್ಕೆ
ಇದು ನಿಮಗೆಲ್ಲರಿಗೂ ತಿಳಿದಿರುವ ವಿಷಯ ವಿಶ್ವದ ಅತಿ ದೊಡ್ಡ ಹಗರಣ ಚುನಾವಣಾ ಬಾಂಡ್ ಇಂದು ದೇಶದಲ್ಲಿ ಬಹು ಚರ್ಚಿತ ಚುನಾವಣಾ ಬಾಂಡನ್ನು ಸುಪ್ರೀಂ ಕೋರ್ಟ್ ಸಂವಿಧಾನ ಪೀಠವು ಅಸಂವಿಧಾನಿಕ ಎಂದು ಕರೆದು ರದ್ದುಪಡಿಸಿದೆ.ಮೋದಿ ನೇತೃತ್ವದ ಸರ್ಕಾರದ ಕಳೆದ ಹತ್ತು ವರ್ಷಗಳ ಆಡಳಿತದಲ್ಲಿ ಇಲ್ಲಿನ ಅತಿ ಶ್ರೀಮಂತರು, ಶ್ರೀಮಂತರು ತುಂಬಾ ಪ್ರಭಾವಶಾಲಿಗಳಾಗಿ ಬೆಳೆದು ಸರ್ಕಾರವನ್ನೇ ನಿಯಂತ್ರಿಸುವ ಮಟ್ಟಕ್ಕೆ ತಲುಪಿದರು.ಪ್ರಭುತ್ವವು ಸಹ ತನ್ನ ರಾಜಕೀಯ ಹಿತಾಸಕ್ತಿಗಾಗಿ ಇವರ ಬಂಡವಾಳವನ್ನು ಅನೈತಿಕವಾಗಿ ಬಳಸಿಕೊಂಡಿತು ಈ ಅಪವಿತ್ರ ಮೈತ್ರಿಯ ಮುಂದುವರಿದ ಭಾಗವೇ ಚುನಾವಣಾ ಬಾಂಡ್ ಹಗರಣ ಎನ್ನುವ ಭ್ರಷ್ಟಾಚಾರ.ಈ ಚುನಾವಣಾ ಬಾಂಡ್ ಎನ್ನುವ ಹಗರಣ ಪ್ರಜಾಪ್ರಭುತ್ವದ ತಳಹದಿಯನ್ನೇ ಅಲುಗಾಡಿಸುವಷ್ಟು ಅಘಾತವಾಗಿದೆ ಮತ್ತು ಆಳವಾಗಿದೆ. 2017ರಲ್ಲಿ ಆಗಿನ ಹಣಕಾಸು ಮಂತ್ರಿ ದಿ.ಅರುಣ್ ಜೇಟ್ಲಿಅವರು ಸಂಸತ್ತಿನ ಪರಿಶೀಲನೆಗೆ ಒಳಪಡುವ ಎಲ್ಲಾ ಮಾರ್ಗಗಳನ್ನು ತಿರಸ್ಕರಿಸಿ ಈ ಅಪಾರದರ್ಶಕ ದೇಣಿಗೆ ಪದ್ಧತಿಯನ್ನು ಏಕ ಪಕ್ಷಿಯವಾಗಿ ಮನಿ ಬಿಲ್ ಮೂಲಕ ಅನುಮೋದನೆ ಪಡೆದುಕೊಂಡರು. ಇದಾಗಿತ್ತು ಚುನಾವಣಾ ಬಾಂಡ್ ಬರಲು ಕಾರಣ
ಇದರ ನಿಯಮಗಳ ಪ್ರಕಾರ ರಾಜಕೀಯ ಪಕ್ಷಗಳ ಹೆಸರಿನಲ್ಲಿ ಬಾಂಡ್ ಖರೀದಿಸುವ ಉದ್ಯಮಿಗಳು/ ವ್ಯಕ್ತಿಗಳ ಮಾಹಿತಿ ಗೌಪ್ಯವಾಗಿರುತ್ತದೆ ತಮ್ಮ ಹೆಸರಿನಲ್ಲಿರುವ ಈ ನಿರ್ದಿಷ್ಟ ಬಾಂಡನ್ನು ನಗದೀ ಕರಿಸುವ ಪಕ್ಷಗಳ ಮಾಹಿತಿಯು ಸಾರ್ವಜನಿಕವಾಗಿ ಗೌಪ್ಯವಾಗಿರುತ್ತೆ. ಯಾವ ಪಕ್ಷಕ್ಕೆ ಎಷ್ಟು ರೊಕ್ಕ ಬಂದಿದೆ ಅನ್ನೋದು ಮಾತ್ರ ಬಹಿರಂಗವಾಗುತ್ತದೆ.ಇದರ ಕರಾಳತೆ ಎಂದರೆ ಅಧಿಕಾರದಲ್ಲಿರುವ ಬಿಜೆಪಿ ಪಕ್ಷಕ್ಕೆ ತನಗೆ ಸೇರಿದೆ ಎಲ್ಲಾ ಬಾಂಡುಗಳ ವಿವರಗಳ ಜೊತೆಗೆ ವಿರೋಧ ಪಕ್ಷಗಳಿಗೆ ಸೇರಿದ ಬಾಂಡುಗಳ ಎಲ್ಲಾ ಮಾಹಿತಿ ಲಭ್ಯವಿರುತ್ತದೆ. ಆದರೆ ವಿರೋಧ ಪಕ್ಷಗಳಿಗೆ ತಮ್ಮ ಪಕ್ಷಕ್ಕೆ ದೊರಕಿದ ದೇಣಿಗೆ ಕುರಿತು ಮಾತ್ರ ಮಾಹಿತಿ ಇರುತ್ತದೆ.ಕೇವಲ ತನಗೆ ಮಾತ್ರ ಲಭ್ಯವಿರುವ ಸಮಗ್ರ ಮಾಹಿತಿಯನ್ನು ಬಿಜೆಪಿ ಪಕ್ಷವು ದುರ್ಬಳಕೆ ಮಾಡಿಕೊಳ್ಳುವ ಎಲ್ಲಾ ಸಾಧ್ಯತೆಗಳಿವೆ.ಇದೇ ಹಗರಣವನ್ನು ವಿಶ್ಲೇಷಿಸಿದಾಗ ಮೋದಿ ನೇತೃತ್ವದ ಬಿಜೆಪಿ ಸರಕಾರವು ಭ್ರಷ್ಟಾಚಾರವನ್ನು ಸಾಂಸ್ಥಿಕರಿಸಿರುವುದು ಸಾಬೀತಾಗುತ್ತದೆ. ಇಲ್ಲಿ ಮತ್ತೊಂದು ದುರಂತವೆಂದರೆ ದೇಶದ ಅತಿದೊಡ್ಡ ರಾಷ್ಟ್ರೀಯ ಬ್ಯಾಂಕ್ ಎಂದು ಕರೆಯಲ್ಪಡುವ ಎಸ್ ಬಿ ಐ ತನ್ನ ಸ್ವಾಯತ್ತತೆಯನ್ನು ಮರೆತು ಸಂಪೂರ್ಣವಾಗಿ ಬಿಜೆಪಿ ಪಕ್ಷದ ಕಾರ್ಯಕರ್ತನಂತೆ ವರ್ತಿಸಿರುವುದು, ಸಾರ್ವಜನಿಕವಾಗಿ ಮಾಹಿತಿ ಕೊಡಲು ನಿರಾಕರಿಸಿರುವುದು, ಸುಪ್ರೀಂಕೋರ್ಟ್ ಚಾಟಿ ಬೀಸಿದ ನಂತರ ಮಾಹಿತಿ ಕೊಡಲು ತಡವಾಗುತ್ತದೆ ಎಂದು ನೆಪ ಹೇಳುವುದು ಎಲ್ಲವೂ ಬ್ಯಾಂಕಿಂಗ್ ವ್ಯವಸ್ಥೆಯೇ ಕುಸಿದು ಹೋಗಿರುವುದಕ್ಕೆ, ವಿಶ್ವಾಸಾರ್ಹತೆ ಕಳೆದುಕೊಂಡಿರುವುದಕ್ಕೆ ಪುರಾವೆ ಎನ್ನಬಹುದು.
ಹಗರಣದ ವಿವರಗಳು :
ಲಭ್ಯವಿರುವ ಮಾಹಿತಿಯ ಪ್ರಕಾರ 2017 - 18 ರಿಂದ ನವಂಬರ್ 2023 ರವರೆಗಿನ ಆರು ವರ್ಷಗಳ ಅವಧಿಯಲ್ಲಿ ಉದ್ಯಮಿಗಳು /ವ್ಯಕ್ತಿಗಳು ಬಿಜೆಪಿ ಪಕ್ಷಕ್ಕೆ 6,986.5 ಕೋಟಿ ಮೊತ್ತದ ಬಾಂಡ್ ಖರೀದಿಸಿದ್ದಾರೆ. ಮತ್ತೊಂದು ಮಾಹಿತಿ ಪ್ರಕಾರ ಬಾಂಡ್ ಯೋಜನೆ ಶುರುವಾದ ದಿನದಿಂದ ಫೆಬ್ರವರಿ 2024ರ ವರೆಗೆ ಬಿಜೆಪಿಯು 8,252 ಕೋಟಿ ಮೊತ್ತವನ್ನು ಪಡೆದುಕೊಂಡಿದೆ. ಟಿಎಂಸಿ ಪಕ್ಷಕ್ಕೆ 1, 397 ಕೋಟಿ, ಕಾಂಗ್ರೆಸ್ಸಿಗೆ 1,334 ಕೋಟಿ, ಬಿ ಆರ್ ಎಸ್ ಗೆ 1, 322 ಕೋಟಿ,ಬಿಜೆಡಿ ಗೆ 656 ಕೋಟಿ,ವೈ ಎಸ್ ಆರ್ ಪಿ ಪಿ ಗೆ 442.8 ಕೋಟಿ ಮೊತ್ತದ ಬಾಂಡ್ ಖರೀದಿಸಿದ್ದಾರೆ. ಬಿಜೆಪಿಗೆ 2018-19 ರಲ್ಲಿ 1,451 ಕೋಟಿ 2019- 20ರಲ್ಲಿ 2,255 ಕೋಟಿ ಮೊತ್ತದ ಬಾಂಡ್ ಕರೀದಿಸಿದ್ದಾರೆ.ಅತಿ ಹೆಚ್ಚು ಚುನಾವಣಾ ಬಾಂಡ್ ಖರೀದಿ ಮಾಡಿದ್ದು ಲಾಟರಿ ಕಿಂಗ್ ಎಂದು ಹೆಸರು ವಾ ಸಿಯಾಗಿದ್ದ ತಮಿಳುನಾಡು ಮೂಲದ ಸ್ಯಾನ್ಟಿಯಾಗೋ ಮಾರ್ಟಿನ್. ಈತ ಫ್ಯೂಚರ್ ಗೇಮಿಂಗ್ ಮತ್ತು ಹೋಟೆಲ್ ಸರ್ವೀಸೇಸ್ ಕಂಪನಿಯ ಸ್ಥಾಪಕ.1368 ಕೋಟಿಗಳ ಬಾಂಡ್ ಪಾವತಿ ಮಾಡಿದ್ದಾನೆ. ಇಂತಹ ಹಗರಣದಲ್ಲಿ ಇರುವಂತಹ ಪ್ರಮುಖ ಪಕ್ಷ ಆಡಳಿತರೂಢ ಕೇಂದ್ರದ ಪಕ್ಷ ಬಿಜೆಪಿಯಾಗಿದೆ. ಬಿಜೆಪಿಗೆ ಮಾತ್ರ ಇಷ್ಟು ಬಾಂಡ್ ಹಣ ಎಲ್ಲಿಂದ ಹರಿದು ಬಂತು ಎಂಬುದು ಸಮಸ್ಯೆಯಾಗಿ ಉಳಿದಿದೆ..
ಮಿಕ್ ದಾದ್ ಕುಂತೂರು