ಕೆಪಿ ಅಬ್ದುಲ್  ಜಬ್ಬಾರ್ ಉಸ್ತಾದ್ :ಜೀವನವು ಸಂದೇಶವೂ
      ಲಕ್ಷದ್ವೀಪಿನಲ್ಲಿ ಜನಿಸಿ ಕೇರಳದಲ್ಲಿ ಕಲಿತು ಕರ್ನಾಟಕವನ್ನು ಸೇವಾ ಕೇಂದ್ರವಾಗಿಸಿ ಪರಿಶುದ್ಧ ದೀನನ್ನು ತನ್ನ ಜೀವನದಲ್ಲಿ ಪರಂಪರೆಗಳಿಗೆ ಪಸರಿಸಿದ ಮಹಾಪಂಡಿತರಾಗಿದ್ದರು ಸಮಸ್ತ ಉಪಾಧ್ಯಕ್ಷ ಕೆ ಪಿ ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ ಎಂಬ ಮಿತ್ತಬೈಲ್ ಉಸ್ತಾದ್. 
ಕುಟುಂಬ 
1947ರಲ್ಲಿ ಲಕ್ಷದ್ವೀಪಿನ ಕಿಲ್ತಾನ್ ದ್ವೀಪದಲ್ಲಿ ಮಹಾನರು  ಜನಿಸಿದರು. ಊರ ಖಾಝಿಯೂ ಪಂಡಿತರು ಆಗಿದ್ದರು ಅವರ ತಂದೆ ಅಲ್ ಹಾಜಿ ಸಿರಾಜ್ ಕೋಯಾ ಮುಸ್ಲಿಯಾರ್. ತಾಯಿ ಬಿ ಫಾತಿಮಾ ಕಾಟ್ಟಿಪ್ಪಾಆಗಿದ್ದಾರೆ.ಲಕ್ಷ್ಮೀದ್ವೀಪಿನಲ್ಲಿ ಹೆಸರುವಾಸಿಯಾದ ಶೈಖ್ ಅಹ್ಮದ್ ನಕ್ಷಬಂದಿ (ರ )ರವರ ಪರಂಪರೆಯಲ್ಲಿ ನಾಲ್ಕನೆಯ ಪುತ್ರ ಆ ಮಹಾನುಭಾವರು ವಲಿ ಮತ್ತು ಆರಿಫ್ ಆಗಿದ್ದರು. ಅವರ ಪರಂಪರೆಯಲ್ಲಿ ಉಳಿದುಕೊಂಡವರಲ್ಲಿ ಹಲವರು ಖಾಝಿಗಳು ಪಂಡಿತರು ಆಗಿದ್ದರು.
ವಿದ್ಯಾಹರ್ತೆ
ವೇಲ್ಲೂರು ಬಾಕಿಯಾತು ಸ್ವಾಲಿಹಾತ್ ನಲ್ಲಾಗಿತ್ತು ಪ್ರಥಮ ವಿದ್ಯಾಭ್ಯಾಸ.ಶೇಖ್ ಅಬ್ದುಲ್ ರಹಮಾನ್ ಫಲ್ ಫರಿ (ರ )ರವರ ಶಿಷ್ಯತ್ವವನ್ನು ಸ್ವೀಕರಿಸಿದರು ಅವತ್ತೆಲ್ಲಾ ಕೇರಳದಲ್ಲಿ ಧಾರ್ಮಿಕ ವಿದ್ಯಾಭ್ಯಾಸವನ್ನು ಪೂರ್ತಿಕರಿಸಿದರೆ ತಫ್ಸೀರಿಗಾಗಿ ವೆಲ್ಲೂರಿಗೆ ಹೋಗುವುದಾಗಿತ್ತು ರೂಢಿ. ಹಲವು ಜನರು ಸಹಪಾಠಿಗಳಾಗಿದ್ದರು ಧಾರ್ಮಿಕ ಮತ ಪಂಡಿತರು ಸಮಸ್ತದ ಉನ್ನತರು ಆಗಿದ್ದ ಮರ್ಹೂಂ ನಾಟಿಗ ಮುಸ್ಲಿಯಾರ್,ಮಲಬಾರ್ ಇಸ್ಲಾಮಿಕ್ ಕಾಂಪ್ಲೆಕ್ಸ್ ನ ಜನರಲ್ಲಿ ಸೆಕ್ರೆಟರಿ ಯು ಎಂ ಅಬ್ದುರ್ರಹ್ಮಾನ್ ಮುಸ್ಲಿಯಾರ್, ನೀಲೇಶ್ವರಂ ಖಾಝಿಯಾಗಿದ್ದ ಮರ್ ಹೂಂ ಮಹಮೂದ್ ಮುಸ್ಲಿಯಾರ್ ಮುಂತಾದವರೆಲ್ಲರು ಉಸ್ತಾದರ ಸಹಪಾಠಿ ಗಳಾಗಿದ್ದರು.ಅಲ್ಲಿದ್ದ ಸಂದರ್ಭದಲ್ಲಿ ಹಲವಾರು ವಿಜ್ಞಾನ ಶಿಖರವನ್ನು ಅರಿಯಲು ಸಾಧ್ಯವಾಯಿತು.ಮದೀನಾ ಯೂನಿವರ್ಸಿಟಿಯಲ್ಲಿ ಕಲಿಯುವ ಆಸಕ್ತಿಯು ಅಧಿಕವಾಯಿತು. ನಂತರ ಅಲ್ಲಿಯ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡು ವೀಸಾದ ಕಾರಣಗಳಿಂದ ಆ ಶ್ರಮವನ್ನು ಕೊನೆಗೊಳಿಸಬೇಕಾಯಿತು.
ಸೇವೆಯ ರಂಗ 
ಕರ್ನಾಟಕದ ಮಿತ್ತಬೈಲು ಮಸೀದಿಯ ಮುದರ್ರಿಸ್ ಸೇವೆಯ ಮೊದಲು ಅಡ್ಯಾರ್ ಕಣ್ಣೂರ್, ಲಕ್ಷದ್ವೀಪಿನ ಅಗತ್ತಿ,ಸ್ವದೇಶದ ಕಿಲ್ತಾನ್ ಎಂಬ ಸ್ಥಳಗಳಲ್ಲಿ ಸೇವೆ ಮಾಡಿದರು.ಬೇರೆ ಸ್ಥಳಗಳಲ್ಲಿ ಸೇವೆ ಮಾಡಿದ್ದು ವಿರಳವಾಗಿದೆ.
1971ರಲ್ಲಿ ಮಿತ್ತಬೈಲಿನಲ್ಲಿ ಸೇವೆಯ ಪ್ರಾರಂಭ. ಆ ಸಮಯದಿಂದ ಪ್ರಾರಂಭವಾದ ಈ ಪಯಣವು ಅಲ್ಲಾಹುವಿನ ಅನುಗ್ರಹದಿಂದ ವಿಶಾಲವಾದ ದರ್ಸ್ ವಿದ್ಯಾಭ್ಯಾಸವು ಬಿಡುವಿಲ್ಲದೆ ಸಾಕಾರವಾಗಿ ಬಂದಿದೆ. ಇದರ ಪರಿಣಾಮವಾಗಿ ಬಿರುದು ದಾರಿಗಳಾಗಿ ಹೊರಬಂದ ವಿದ್ಯಾರ್ಥಿಗಳು ಕರ್ನಾಟಕ ಹಾಗೂ ಲಕ್ಷದೀಪಿನಲ್ಲಿ ಪ್ರಬೋಧನ ರಂಗದಲ್ಲಿ ನಿರತರಾಗಿದ್ದಾರೆ. ಈ ಬಹುದೊಡ್ಡ ಶಿಷ್ಯ ವೃಂದವು ಮಲಬಾರಿನ ಕಾಸರಗೋಡು ಎಂಐಸಿ ಎಂಬಲ್ಲಿ ಆರ್ಷದುಲ್ ಉಲೂಮ್ ನಲ್ಲಿ ಹೊರಬರುವ ವಿದ್ಯಾರ್ಥಿಗಳು ಅರ್ ಶದಿಗಳು ಆಗುತ್ತಾರೆ.
ಎರಡು ಬಾರಿ ಪರಿಶುದ್ಧವಾದ ಹಜ್ ಕರ್ಮ ನಿರ್ವಹಿಸಿದರು. ಇನ್ನೊಂದು ಬಾರಿ ಅಜ್ಮಣಿನ ಮೆಡಿಕಲ್ ಕಾಲೇಜ್ ಉದ್ಘಾಟನಾ ಪ್ರಯುಕ್ತ ವಿದೇಶಕ್ಕೆ ಹೋಗಿದ್ದರು.
ಸಮಸ್ತದಲ್ಲಿ ಸೇವೆ ಸಲ್ಲಿಸಿದ ಸಂಧರ್ಭಗಳು 
ವಿದ್ಯಾಭ್ಯಾಸದ ಕಾಲದಲ್ಲಿ ಸಮಸ್ತದ ಸಮಾರಂಭಗಳಲ್ಲಿ ಭಾಗವಹಿಸುತ್ತಿದ್ದರು. ಹಾಗೂ ಶಂಸುಲ್ ಉಲಮಾರ ವಿವಿಧ ವಾದ ಪ್ರತಿವಾದಗಳಲ್ಲಿ ಉಸ್ತಾದರು  ಸಭೀಕರಾಗಿದ್ದರು.
1989ರಲ್ಲಾಗಿದೆ ಸಮಸ್ತ ವಿಭಜನೆ ಯಾಗುವುದು.ಈ ಸಂದರ್ಭದಲ್ಲಿ ಅಲ್ಲಾಹುವಿನ ಅನುಗ್ರಹದಿಂದ ಮಂಗಳೂರಿನ ಆಸುಪಾಸಿನಲ್ಲಿ ಸಮಸ್ತದ ಕಾರ್ಯ ಚಟುವಟಿಕೆಗಳು ಬಹಳ ಚುರುಕಾಗಿ ನಡೆಸಲು ಕಾರ್ಯಕರ್ತರು ಶ್ರಮಿಸುತ್ತಿದ್ದರು.ಆದ್ದರಿಂದ ಸಮಸ್ತದ ವಿಭಜನೆಯ ಅಲೆಯು ಕರ್ನಾಟಕದ ಭಾಗದಲ್ಲಿ ಬೇಗನೆ ತಲುಪಲು ಅಸಾಧ್ಯವಾಯಿತು. ಸಮಸ್ತದ ವಿಭಜನೆಯ ಮೊದಲು ಕರ್ನಾಟಕದ ಧಾರ್ಮಿಕ ಕಾರ್ಯವನ್ನು  ನಡೆಸಿಕೊಂಡು ಬಂದದ್ದು ಕರ್ನಾಟಕ ಜಂ ಇಯ್ಯತುಲ್ ಮುಅಲ್ಲಿಮರಾಗಿದ್ದರು. ಆದರೆ ವಿಭಜನೆಯಿಂದ ಮೆಲ್ಲನೆ ಕರ್ನಾಟಕದ ಜಂ ಇಯ್ಯತುಲ್ ಉಲಮಾ ನಿಶ್ಚಲಗೊಳಿಸಿ ಸಮಸ್ತ ಕೇರಳ ಜಂ ಇಯ್ಯತುಲ್ ಉಲಮಾ ಅಸಾಧಾರಣವಾಗಿ ಬರುತ್ತಿತ್ತು.
ಈ ವಿಭಜನೆಯ ಪ್ರಯುಕ್ತ ಸಮೂಹವು ಕಂಗೆಟ್ಟಿರುವ ಸಂದರ್ಭದಲ್ಲಿ ಮಂಗಳೂರಿನ ಟೌನ್ ಹಾಲ್ ನಲ್ಲಿ ಪ್ರತಿಪಕ್ಷ ಪಾರ್ಟಿಯು ಬಹುದೊಡ್ಡ ಸಮ್ಮೇಳನವನ್ನು ಏರ್ಪಡಿಸಿ ಸಮಸ್ತವನ್ನು ವಿಮರ್ಷಿಸಿದ ಸಂದರ್ಭವನ್ನು ಮರೆಯಲು ಅಸಾಧ್ಯ. ನಂತರ ಮದರಸ ಗಳಲ್ಲಿ ಪ್ರತಿಪಕ್ಷವನ್ನು ಹೊರ ತೆಗೆದು ಹೊಸ ಪಠ್ಯಕ್ರಮ ಹಾಗೂ ಬಿಡುವಿಲ್ಲದೆ ವೀಕ್ಷಣೆಯನ್ನು ನಡೆಸಲು ಶಕ್ತವಾಗಿ ಮುಂದೆ ಬಂದರು.
ಸೇವೆಯಲ್ಲಿ ಮುಳುಗಿದ ಜೀವನ 
ಸೇವೆಯು ಜೀವನದ ಸಂದೇಶ ಎಂದು ಕಂಡ ಅಪೂರ್ವ ಪಂಡಿತರಲ್ಲಿ ಹೆಸರುವಾಸಿಯಾಗಿದ್ದರು ಕೆಪಿ ಅಬ್ದುಲ್ ಜಬ್ಬಾರ್ ಮುಸ್ಲಿಯಾರ್. 50 ಸಂವತ್ಸರ ಕಾಲ ಮಿತ್ತ ಬೈಲಿನಲ್ಲಿ ದರ್ಸ್  ನಡೆಸಿ ಒಳ್ಳೆಯ ಮಾರ್ಗಕ್ಕೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಿದರು.ಸಮಸ್ತದ ಧಾರ್ಮಿಕ ಪಂಡಿತರ ಸಭೆಯನ್ನು ಕರ್ನಾಟಕದಲ್ಲಿ ಸ್ಥಾಪಿಸಲು ಉಸ್ತಾದರ ಕೊಡುಗೆ ಅತ್ಯಮೂಲ್ಯವಾಗಿದೆ. ಒಂದೊಂದು ಚಿಕ್ಕ ಗ್ರಾಮಕ್ಕೆ ಪ್ರವೇಶಿಸಿ ಅಲ್ಲಿನ ಸುನ್ನತ್ ಜಮಾ ಅತಿನ ಕಾರ್ಯಕರ್ತರನ್ನು ಒಂದುಗೂಡಿಸುವಲ್ಲಿ ಯಶಸ್ವಿಯಾದರು. ಮುಂದಿನ ತಲೆಮಾರನ್ನು ಉತ್ತುಂಗಕ್ಕೆ ತಲುಪಿಸಲು ತನ್ನ ವಯಸ್ಸು ನೋಡದೆ ಎಲ್ಲರನ್ನು ತನ್ನ ಕೇಂದ್ರಕ್ಕೆ ಸ್ವಾಗತಿಸಿದರು.
ತಸವ್ವುಫಿನ ಜೀವನ 
ವಿಜ್ಞಾನವನ್ನು ಗಳಿಸಲು ಉಸ್ತಾದರಿಗೆ ದಾಹವಾಗಿತ್ತು. ಗೋಳಶಾಸ್ತ್ರ ತಸವ್ವುಫ್,ಕರ್ಮ ಶಾಸ್ತ್ರ ಎಂಬ ವಿಷಯದಲ್ಲಿ ಉತ್ಸುಕ್ಕರಾಗಿದ್ದರು.ಗೋಳಶಾಸ್ತ್ರ ಎಂಬ ವಿಷಯ ಸಂಬಂಧಿಸಿ ಕಲಿಯಲು ದಿಲ್ಲಿಯಿಂದ ಓರ್ವ ವ್ಯಕ್ತಿ ಬಂದದ್ದು ಉಸ್ತಾದರ ಈ ವಿಷಯದ ಪಾಂಡಿತ್ಯವನ್ನು ತಿಳಿದು ಆಶ್ಚರ್ಯ ಗೊಂಡ ಘಟನೆಯು ಉಸ್ತಾದ್ರ ಗೋಳ ಶಾಸ್ತ್ರ ಪಾಂಡಿತ್ಯವನ್ನು ಅಲೆಯಲು ಸಾಧ್ಯವಾಗುತ್ತದೆ. ನಿರಂತರವಾದ ಪುಸ್ತಕ ಓದುವಿನಲ್ಲಿ ನಿರತರಾಗಿದ್ದರು.ಜೀವನವನ್ನು ತಸವ್ವುಫಿನ ಭಾಗವಾಗಿ ಬದಲಿಸಿದ ಉಸ್ತಾದರು ಗ್ರಂಥಾಲಯದಲ್ಲಿ ಪುಸ್ತಕದ ಸ್ಥಾನವನ್ನು ಪಡೆದದ್ದು ತಸವ್ವುಫ್ ಗ್ರಂಥವಾಗಿದೆ.  ಉಸ್ತಾದರ ಜೀವನವು  ವಿನಯದಿಂದಾಗಿತ್ತು. ಚಿಕ್ಕ ಚಿಕ್ಕ ಪುಟಾಣಿಗಳೊಂದಿಗೆ ನಗಿಸುತ್ತ ಆಟವಾಡುತ್ತಿದ್ದರು. ಲಕ್ಷದ್ವೀಪಿನಲ್ಲಿ ಪ್ರಸಿದ್ಧಿ ಪಡೆದ ಸೂಫಿ ಪಂಡಿತರಾದ ಗುಲಾಂ ಅಹಮದ್ ನಕ್ಷೆಬಂದಿಯ ನಾಲ್ಕನೆಯ ಪುತ್ರನಾಗಿ ಜನಿಸಿದ ಉಸ್ತಾದರ ವ್ಯಕ್ತಿತ್ವ ಅಡಗಿಸಿರಲು ಸಾಧ್ಯವಾಗದ ಪುಸ್ತಕವಾಗಿದೆ. ಇಸ್ಲಾಂ ಧರ್ಮದೊಂದಿಗೆ ಇರುವ ಅದಮ್ಯ ಬಂಧಹಾಗೂ ಧರ್ಮದ ಎಲ್ಲಾ ಕಾರ್ಯ ಚಟುವಟಿಕೆಗಳಲ್ಲಿ ನಿಯತ್ತಾಗಿ ಕಾರ್ಯನಿರ್ವಹಿಸುತ್ತಿದ್ದರು. ಕರ್ಕಶವಾಗಿ ಮಾತನಾಡಲು ಸಾಧ್ಯವಾಗುವ ಸಮಯದಲ್ಲಿ ಅಲ್ಲಾಹುವಿನ ದೀನಿನ ವಿಷಯವು ಯಾರದೇ ಸ್ವಾರ್ಥ ಸಂಪಾದನೆಗೆ ಬಿಡದೆ ದೊಡ್ಡ ಶಬ್ದದಿಂದ ಹೊರಬಂದ ಆ ಮಾತು ಧೈರ್ಯ ದ ಸಂಕೇತವಾಗಿದೆ. ಲಕ್ಷದೀಪದ ಜನರೊಂದಿಗೆ ವಿನಯದಿಂದ ನಡೆದು ಅವರಲ್ಲಿ ಓರ್ವ ವ್ಯಕ್ತಿಯಾಗಿದ್ದರು ಉಸ್ತಾದರು.ತನ್ನ ಪಿತಾಮಹರು ಪ ಸರಿಸಿದ ಸೂಫಿ ಸರಣಿಯ ಮೂಲಕ ಲಕ್ಷದ್ವೀಪದ ವಾಸಿಗಳನ್ನು ತನ್ನೊಂದಿಗೆ ಸೇರಿಸಿದ ಮಹಾನ್ ವ್ಯಕ್ತಿಯಾಗಿದ್ದರು ಉಸ್ತಾದರು.ಮಂಗಳೂರಿನಿಂದ ಲಕ್ಷದ್ವೀಪದ  ಕಡೆಗೆ ಆಧುನಿಕ ಹಡಗು ಪರಿಚಯವಾಗುವುದು 2000 ದಲ್ಲಾಗಿತ್ತು. ಇದರ ಹಿಂದಿರುವ ಬಹುದೊಡ್ಡ ಶಕ್ತಿ  ಉಸ್ತಾದರಾಗಿದ್ದರು. ಅವರು ಜನ ಸೇವೆಯೇ ಅತ್ಯುತ್ತಮ ಮಾದರಿಯಾಗಿದ್ದರು. ಲಕ್ಷದ್ವೀಪಿನಲ್ಲಿ ಧಾರ್ಮಿಕ ಹಾಗೂ ಭೌತಿಕ ವಿದ್ಯಾ ಕೇಂದ್ರವನ್ನು ಸ್ಥಾಪಿಸಲು ಉಸ್ತಾದರ ಕನಸಾಗಿತ್ತು.ಅದರ ಕುರಿತು ಎಲ್ಲರೊಂದಿಗೆ ಮಾತನಾಡುತ್ತಿದ್ದರು.
ಮಂಗಳೂರಿನ ಆತ್ಮೀಯ ಶಬ್ದ.
 
ಮಂಗಳೂರು ಭಾಗದ ಧಾರ್ಮಿಕ ಕಾರ್ಯ ಚಟುವಟಿಕೆಯ ಕೊನೆಯ ಮಾತಾಗಿತ್ತು ಉಸ್ತಾದರು. ವಾಣಿಜ್ಯ,ಮನೆ ಕೆಲಸ ಮುಂತಾದ ಕಾರ್ಯಗಳಲ್ಲಿ ಓರ್ವ ಉತ್ತಮ ಮಾರ್ಗದರ್ಶಕರಾಗಿದ್ದರು. ದಿನಾಲು ಮನೆ  ಸಂದರ್ಶಿಸುವ ಜನಸಾಗರವೇ ಇದಕ್ಕೆ ಸಾಕ್ಷಿ.ಹಾಗೂ ಮಂಗಳೂರಿನ ಧಾರ್ಮಿಕ ಕೇಂದ್ರಗಳನ್ನು ಸ್ಥಾಪಿಸಲು ಉಸ್ತಾದರ ಶ್ರಮವು ಅತ್ಯಮೂಲ್ಯವಾಗಿದೆ. ತನ್ನ ಪಿತಾಮಹರಾದ ಸೂಫಿಗಳ ಗ್ರಂಥವು ಜನರೇಡೆಯಲ್ಲಿ ಸ್ವಾಧೀನ ಪಡೆಯದ ಕಾರಣ ಉಸ್ತಾದರೂ ಬೇಸರಗೊಂಡರು. ಆ ಗ್ರಂಥವನ್ನು ಪ್ರಸಿದ್ಧೀಕರಿಸಲು ಉಸ್ತಾದರೂ ಅವಿರತ ಶ್ರಮಿಸಿದರೂ ಕ ಅದನ್ನು ಮರೆಮಾಚಲು ಅನೇಕರು ಶ್ರಮ ಪಡುತ್ತಿದ್ದರು. ಇನ್ನೂ ನಮ್ಮ ಕರ್ತವ್ಯಎಂದರೆ ಉಸ್ತಾದರ ಹಾಗೂ ಉಸ್ತಾದರ ಪಿತಾಮಹರ ಗ್ರಂಥವನ್ನು ಮುಂದಿನ ತಲೆಮಾರಿಗೆ ಕೈ ಸೇರಬೇಕು. ಉಸ್ತಾದರ ಅಮೂಲ್ಯವಾದ ಸಂದೇಶ ಎಂದರೆ ದೀನನ್ನು ತನ್ನದೇ ಮೂಲಕ ತೋರಿಸಿ ಕೊಟ್ಟರು ಆ ಮಹತ್ತರವಾದ ಸಂದೇಶವು ಜೀವನದಲ್ಲಿ ಮುನ್ನಡೆಸಿ ಇಹ ಲೋಕದಲ್ಲಿ ವಿಜಯಗೊಳ್ಳಲು ಅಲ್ಲಾಹನು ಅನುಗ್ರಹಿಸಲಿ ಆಮೀನ್.
                                                                                                                                               ಅರ್ಫಾಜ್ ಮುಕ್ವೆ

Related Posts

Leave A Comment

Voting Poll

Get Newsletter