- IRSHAD AJJAVARA
- Jan 8, 2021 - 12:56
- Updated: Oct 17, 2023 - 13:59
- 485
ಲೌವ್ ಜಿಹಾದ್ : ಉತ್ತರ ಪ್ರದೇಶ ಉತ್ತರಖಾಂಡ್ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ನಿಂದ ಆದೇಶ
ಲವ್ ಜಿಹಾದ್ ನಿಲ್ಲಿಸಲು ಗೋಸ್ಕರ ಉತ್ತರಪ್ರದೇಶ ಮತ್ತು ಉತ್ತರ ಖಂಡ್ ನಲ್ಲಿ ಜಾರಿಗೊಳಿಸಿದ ಮತಾಂತರ ತಡೆ ಕಾಯ್ದೆಯನ್ನು ವಿರೋಧಿಸಿ ಸುಪ್ರೀಂಕೋರ್ಟ್ ಈ ಎರಡು ರಾಜ್ಯಗಳಿಗೆ ನೋಟಿಸ್ ನೀಡಿದೆ. ಬಲವಂತ ಮತ ಪರಿವರ್ತನೆ ನಿರೋಧನ ಕಾಯಿದೆಯಿಂದಾಗಿದೆ ಈ ತೀರ್ಮಾನ.
ದೇಶದ ಮೂಲಭೂತ ಹಕ್ಕುಗಳು ಮತ್ತು ಧಾರ್ಮಿಕ ಹಕ್ಕುಗಳ ವಿರುದ್ಧವಾಗಿ ಈ ನಿಯಮವೇರಿದ ಅರ್ಜಿದಾರನು ನೀಡಿದ ದೂರಿನಲ್ಲಿ ವ್ಯಕ್ತಪಡಿಸಿದ್ದಾರೆ. ಸಾಮೂಹಿಕ ಭಿನ್ನತೆ ಮತ್ತು ಅಲ್ಪಸಂಖ್ಯಾತರ ವಿರೋಧದಿಂದಾಗಿ ಇಂತಹ ನಿಯಮಗಳನ್ನು ಜಾರಿಗೊಳಿಸುತ್ತಿರುವುದು ಎಂದು ಅವರು ಆರೋಪಿಸಿದರು.
ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸುವ ಮೊದಲು ಹೈಕೋರ್ಟಿಗೆ ಯಾಕೆ ನೀವು ಅರ್ಜಿ ಸಲ್ಲಿಸಲಿಲ್ಲ, ಎಂಬ ಕಾರಣದಿಂದ ಅರ್ಜಿಯನ್ನು ತಿರಸ್ಕರಿಸಿದ್ದರು.ನಂತರ ಈ ನಿಯಮ ಹಲವು ರಾಜ್ಯಗಳಲ್ಲಿ ಜಾರಿಗೊಳಿಸಬಹುದು ಎಂಬ ಕಾರಣಕ್ಕೆ ಸುಪ್ರೀಂಕೋರ್ಟ್ ಅರ್ಜಿಯನ್ನು ಪರಿಶೀಲಿಸಲು ಒಪ್ಪಿಕೊಂಡಿದೆ.
ಉತ್ತರಪ್ರದೇಶ ಸರ್ಕಾರ ಕಾನೂನು ಬಾಹಿರ ಮತಾಂತರ ನಿಷೇಧ ಅಧ್ಯಾದೇಶವನ್ನು 2020 ರಲ್ಲಿ ಜಾರಿಗೆ ತಂದಿತು.ಅನಂತರ ಪೊಲೀಸರು ಈ ಕಾಯ್ದೆಯಡಿಯಲ್ಲಿ ಹಲವು ಮುಸ್ಲಿಮರನ್ನು ಬಂಧಿಸಿದ್ದರು. ಉತ್ತರಾಖಂಡ ಸರಕಾರದ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆ 2018 ಕೂಡ ವಿವಾಹದ ಕಾರಣಕ್ಕೆ ಮತಾಂತರ ಮಾಡುವುದನ್ನು ನಿಷೇಧಿಸುತ್ತದೆ.
ವಕೀಲ ವಿಶಾಲ್ ಠಾಕ್ರೆ ಹಾಗೂ ಸರಕಾರೇತರ ಸಂಸ್ಥೆ 'ಸಿಟಿಜನ್ ಫಾರ್ ಜಸ್ಟಿಸ್ ಆಂಡ್ ಪೀಸ್' ಸಲ್ಲಿಸಿದ ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಎಸ್.ಎ ಬೋಬ್ಡೆ ಹಾಗೂ ನ್ಯಾಯಮೂರ್ತಿಗಳಾದ ವಿ.ರಾಮ ಸುಬ್ರಹ್ಮಣ್ಯ ಹಾಗು ಬೋಪಣ್ಣ ಅವರನ್ನು ಒಳಗೊಂಡ ಪೀಠ ವಿಚಾರಣಿ ನಡೆಸಿತ್ತು.
ಈ ಕಾನೂನಿನ ನಿಬಂಧನೆಗಳು ದಮನಕಾರಿ ಎಂದು 'ಸಿಟಿಜನ್ ಫಾರ್ ಜಸ್ಟಿಸ್ ಆಂಡ್ ಪೀಸ್' ಅನ್ನು ಪ್ರತಿನಿಧಿಸಿದ ಹಿರಿಯ ನ್ಯಾಯವಾದಿ ಚಂದೇರ್ ಉದಯ ಸಿಂಗ್ ವಾದಿಸಿದರು.ಬೇರೆ ಧರ್ಮದ ವ್ಯಕ್ತಿಯನ್ನು ವಿವಾಹವಾಗಲು ಪೂರ್ವಾನುಮತಿ ಪಡೆಯುವ ಅಗತ್ಯ ಅಸಹ್ಯಕರ ಎಂದು ಅವರು ಹೇಳಿದರು.
Related Posts
Leave A Comment
Popular Posts
Recommended Posts
Voting Poll
ಹೊಸದಾಗಿ ಪ್ರಾರಂಭಿಸಲಾದ ಇಸ್ಲಾಮ್ ಆನ್ ವೆಬ್ ಕನ್ನಡ ಪೋರ್ಟಲ್ ನೊಂದಿಗೆ ನಿಮ್ಮ ಅನುಭವವನ್ನು ನೀವು ಹೇಗೆ ಮೌಲ್ಯಮಾಪನ ಮಾಡುತ್ತೀರಿ.
Get Newsletter
Subscribe to our newsletter to get latest news, popular news and exclusive updates.