ಸನಾತನ ಧರ್ಮ ಇಸ್ಲಾಂ

123ಇಸ್ಲಾಂ ಧರ್ಮದ ಪ್ರಚಾರ ಸಂಘದ ಮೊದಲ ಪ್ರವಾದಿ ಹಝ್ರತ್ ಆದಂ ನೆಬಿ(ಅ)ರಾಗಿದ್ದರು. ಅಂದರೆ ಈ ಜಗತ್ತಿನ ಪ್ರಥಮ ಮನುಷ್ಯನಾದ ಆದಂ ನಬಿಯವರು ಇಸ್ಲಾಮಿನ ಮೊದಲ ಪ್ರವಾದಿಯಾಗಿದ್ದು, ಯಾವಾಗ ಮನುಷ್ಯೋತ್ಪತ್ತಿ ಪ್ರಾರಂಭವಾಯಿತೋ ಅಂದಿನಿಂದಲೇ ಇಸ್ಲಾಂ ಧರ್ಮದ ಉಗಮವಾಗಿದೆ. ಆದೂದರಿಂದ ಇಸ್ಲಾಂ ಸನಾತನ ದರ್ಮ ಎನ್ನುವುದು ಪ್ರಸ್ತುತ. ಹಝ್ರತ್ ಹಾಗೂ ಅವ್ವಾಹ್ ದಂಪತಿಗಳ ಮಕ್ಕಳಿಗೆ ಆದಂ ನೆಬಿಯವರೇ ಪ್ರವಾದಿಯಾಗಿದ್ದರು. ಅವರು ಇಸ್ಲಾಮ್ ಧರ್ಮವನ್ನು ಪ್ರಚಾರಪಡಿಸಿದರು. ಅರಾಧನೆಗೆ ಅರ್ಹನಾದವ ಅಲ್ಲಹನು ಮಾತ್ರವಾಗಿದ್ದಾನೆ. ಆತನಿಗೆ ಸಮಾನಾಂತರ ವ್ಯಕ್ತಿಯಾಗಲೀ, ಸಹಾಯಕನಾಗಲೀ ಇಲ್ಲ. ಆತನು ಪರಮಾಧಿಕಾರಿಯಾಗಿದ್ದಾನೆ ಎಂದು ಸಮುದಾಯಕ್ಕೆ ಉಪದೇಶಿಸಿದರು. ಕಾಲವು ಉರುಳುತ್ತಿತ್ತು. ತಲೆಮಾರುಗಳು ಕಳೆದು ಹೋದವು. ಸಾವು ಎಂಬ ಸಹಜಸ್ಥಿತಿಯು ಸರ್ವರನ್ನೂ ಬಲಿ ತೆಗೆಯುತ್ತಾ ಹೋಯಿತು. ಹೀಗೆ ತಲೆಮಾರುಗಳು ಕಳೆದು ಹೋದಂತೆ ಪೂರ್ವಿಕರ ಸಾವಿನಿಂದ ನೊಂದುಕೊಂಡ ಅಂದಿನ ಜನರು ಅವರನ್ನು ನೆನಪಿಸುತ್ತಾ ದುಃಖಿಸತೊಡಗಿದರು. ಮಾತ್ರವಲ್ಲ ನಮ್ಮ ತಂದೆ ತಾಯಂದಿರು ಅಗಲಿದರೂ ಅವರನ್ನು ಸದಾ ಸ್ಮರಿಸಲು ಹಾಗೂ ಅವರ ನೆನಪು ಮಾಸಿ ಹೋಗದೆ ಚಿರವಾಗಿರಲು ಒಂದು ತಂತ್ರವನ್ನು ಉಪಯೋಗಿಸಿದರು. ಅದುವೇ ಮುಂದೆ ಜನ ಭಿನ್ನಾಭಿಪ್ರಯಕ್ಕೆ ಕಾರಣವಾಯಿತು. ಅದೇನೆಂದರೆ, ತಮ್ಮ ಹಿರಿಯರ ಚಿರನೆನಪಿಗಾಗಿ ಅವರ ಸ್ವರೂಪವನ್ನು ಹೋಲುವಂತಹ ಪ್ರತಿರೂಪವನ್ನು ಸೃಷ್ಠಿಸುವುದಾಗಿತ್ತು. ಅದಕ್ಕಾಗಿ ಅವರು ತಮ್ಮ ಪೂರ್ವಿಕರ ರೂಪವನ್ನು ಮಣ್ಣಿನಿಂದಲೂ ಕಲ್ಲು ಮರಗಳಿಂದಲೂ ಕೆತ್ತಿಸಿ ಮನೆಯೊಳಗೆ ಪ್ರತಿಷ್ಠಾಪಿಸಿದರು. ಹೀಗೆ ಪ್ರತಿ ದಿನವೂ ಆ ಬಿಂಬ (ಮೂರ್ತಿ)ಯನ್ನು ನೋಡಿ ತಮ್ಮ ಪೂರ್ವಿಕರನ್ನು ಸ್ಮರಿಸಲು ಆರಂಭಿಸಿದರು. ಮೂರ್ತಿಯಿಂದ ಆಶಿರ್ವಾದ ಪಡೆಯುವುದು. ಅವರನ್ನು ಹೊಗಲಿ ಹಾಡುವುದು, ಮೂರ್ತಿಯ ಮುಂದೆ ಅವರಿಗಿಷ್ಟವಾದ ಆಹಾರವನ್ನು ತಂದಿಟ್ಟು ತಿನ್ನುವಂತೆ ಬೇಡಿಕೊಳ್ಳುವುದು ದಿನ ನಿತ್ಯದ ರೂಡಿಯಾಗಿ ಹೋಯಿತು. ಅಲ್ಲದೆ ಕಾಲ ಕ್ರಮೆಣ ಇದೊಂದು ಆರಾಧನೆಯಾಗಿ ಮಾರ್ಪಟ್ಟಿತು ಕೂಡ. ಆದರೆ ಈ ಎಲ್ಲಾ ಪ್ರಹಸನಗಳು ಇಸ್ಲಾಮಿನ ಸಿದ್ಧಾಂತ ಹಾಗೂ ಏಕ ದೈವ ವಿಶ್ವಾಸಕ್ಕೂ ವಿರುದ್ದವಾದ್ದರಿಂದ ಅಲ್ಲಿ ಇತರ ಧರ್ಮಗಳು ಹುಟ್ಟಿಕೊಳ್ಳಲು ಕಾರಣವಾಯಿತು. ಕೊನೆಗೆ ಈ ನೂತನ ಸಿದ್ದಾಂತವು ವ್ಯಾಪಕಗೊಳ್ಳುತ್ತಾ, ಪ್ರಕೃತಿ ವಸ್ತುಗಳ ಮೇಲೆ ದೈವಿಕತೆಯನ್ನು ಕಾಣಲು ತೊಡಗಿದರು. ಅವರು ಚಂದ್ರನನ್ನೂ, ಸೂರ್ಯನನ್ನೂ ದೇವರಾಗಿ ಪೂಜಿಸ ತೊಡಗಿದರು ಈ ರೀತಿಯಲ್ಲಿ ವ್ಯತ್ಯಸ್ಥಗೊಂಡ ಜನ ಸಮುದಾಯವನ್ನು ನೈಜ ಹಾದಿಗೆ ತರುವುದೇ ಇಸ್ಲಾಮಿನ ಪ್ರಚಾರದ ಮೂಲ ಉದ್ದೇಶವಾಗಿತ್ತು. ಅದಕ್ಕಾಗಿ ಅಲ್ಲಾಹನು ಕಾಲಕ್ಕಣುಗುಣವಾಗಿ ಲಕ್ಷಕ್ಕೂ ಮಿಕ್ಕ ಪ್ರವಾದಿ(ಇಸ್ಲಾಂ ಧರ್ಮ ಪ್ರಚಾರಕ)ಯರನ್ನು ಈ ಜಗತ್ತಿಗೆ ಕಳುಹಿಸಿದನು. ಹಝ್ರತ್ ಆದಂ ನೆಬಿ (ಅ)ರಿಂದ ಹಿಡಿದು ಅಂತ್ಯ ಪ್ರವಾದಿ ಹಝ್ರತ್ ಪ್ರವಾದಿ ಮುಹಮ್ಮದ್ ಫೈಗಂಬರ್ (ಅ.ಸ)ರವರೆಗಿನ ಈ ಪ್ರವಾದಿ ಪರಂಪರೆಯು ಇಸ್ಲಾಮಿನ ಪ್ರಚಾರಕ್ಕಾಗಿ ಹಾಗೂ ದಾರಿ ತಪ್ಪಿದ ಸಮುದಾಯಕ್ಕೆ ಮಾರ್ಗದರ್ಶಿಯಾಗಿಯೂ ನಿಯೋಜಿಸಲ್ಪಟ್ಟರು. ಅಲ್ಲಾಹನು ಅವರಿಗಾಗಿ ಧರ್ಮ ಗ್ರಂಥಗಳನ್ನು ಅವತರಿಸಿದ. ಅವುಗಳ ಪೈಕಿ ಕುರ್‌ಆನ್ ಅತ್ಯಂತ ಶ್ರೇಷ್ಠ ಗ್ರಂಥವಾಗಿದೆ. ಇಸ್ಲಾಮಿನ ಪ್ರಮುಖ ಗ್ರಂಥಗಳಾದ ಝಬೂರ್ ತೌರತ್ ಇಂಜೀಲ್ ಮುಂತಾದ ಗ್ರಂಥಗಳು ಅಂದಿನ ಪ್ರವಾದಿಗಳ ಕಾಲಕ್ಕೆ ಮಾತ್ರ ಸೀಮಿತವಾಗಿತ್ತು ಅದರೆ ಅಂತ್ಯ ಪ್ರವಾದಿ ಹಝ್ರತ್ ಪ್ರವಾದಿ ಮುಹಮ್ಮದ್(ಸ.ಅ)ರವರಿಗೆ ಲಭಿಸಿದ ಕುರ್‌ಆನ್ ಸರ್ವ ಕಾಲಕ್ಕೂ ಸೀಮಿತವಾದ್ದಾಗಿದೆ. ಜಗತ್ತಿನ ಸೃಷ್ಟಿಯಿಂದ ಹಿಡಿದು ಭವಿಷ್ಯದಲ್ಲಿ ಈ ಜಗತ್ತು ಅಂತ್ಯವಾಗುವವರೆಗಿನ ಸರ್ವ ವಿಷಯಗಳು ಈ ಗ್ರಂಥದಲ್ಲಿ ಅಡಗಿದೆ. ಕುರ್‌ಆನ್ ಒಂದು ವಿಸ್ಮಯವಾಗಿದೆ ಅದನ್ನು ಪಾರಾಯಣ ಮಾಡಿ ಪವಿತ್ರ ಇಸ್ಲಾಂ ಧರ್ಮದ ನೈಜ ಭಕ್ತನಾಗಿ ಬದುಕಲು ಆ ಭಗವಂತ ಅಲ್ಲಾಹನು ಕರುಣಿಸಲಿ ಆಮೀನ್

-ಯೂಸುಫ್ ಎಂ. ಮುಂಡೋಳೆ

Related Posts

Leave A Comment

Voting Poll

Get Newsletter