ವಧು ನೋಡುವುದು ; ಧಾರ್ಮಿಕ ಮತ್ತು ಅಧಾರ್ಮಿಕ ಆಚಾರಗಳು
ಇಸ್ಲಾಮಿಕ ವೀಕ್ಷಣೆ ಪ್ರಕಾರ ಮಹತ್ವದ ಕರ್ಮವಾಗಿದೆ ವಿವಾಹ. ವಿವಾಹ ಬಂಧಕ್ಕೆ ಏರ್ಪಡುವ ಮುನ್ನ ಲಲಿತವಾದ ಕೆಲ ಮಾರ್ಗ ನಿರ್ದೇಶಗಳನ್ನು ಇಸ್ಲಾಂ ಆದೇಶಿಸಿದೆ. ಹಾದಿಗಳನ್ನು ಸರಿಪಡಿಸುವಾಗ ಯಾವುದೇ ಕರ್ಮ ಸಂಪೂರ್ಣವಾಗುವುದು.
ವಿವಾಹ ಸಂಬಂಧವು ಅಭಿಚ್ಛೇದ ಮತ್ತು ಅನಂತವಾಗಿ ಮುಂದುವರಿಯುವಾಗ ಅದಕ್ಕೆ ವಿವರಣಾತ್ಮಕ ಅರ್ಥಗಳು ಬಂದು ಸೇರುವುದು. ಸ್ನೇಹವಾಗಿದೆ ವಿವಾಹ ಬಂಧವನ್ನು ಶಾಶ್ವತಗೊಳಿಸುವ ಹೇತು. ಇದೇ ಕಾರಣದಿಂದಾಗಿದೆ ವಿವಾಹಕ್ಕೆ ಮುಂಚಿತವಾಗಿ ಪರಸ್ಪರ ವಧು ಅನ್ವೇಷಣೆ ಪುಣ್ಯಕರ್ಮವಾಗಿ ಇಸ್ಲಾಂ ಪ್ರಸ್ಥಾಪಿಸಿದ್ದು. ಕಂಡು ಪರಸ್ಪರ ಇಷ್ಟಪಟ್ಟ ನಂತರವಾಗಿದೆ ಹೆಣ್ಣನ್ನು ಪತ್ನಿಯಾಗಿ ಸ್ವೀಕರಿಸಬೇಕಾದದ್ದು. ಮುಂಚಿತವಾಗಿ ವಧುವನ್ನೇ ನೋಡದೆ, ವಿವಾಹವಾದ ಬಳಿಕ ಪರಸ್ಪರ ಸುಖಕರವಾದ ಜೀವನ ಸಾಗಿಸಲು ಪ್ರಯಾಸ ಪಡುವುದಕ್ಕಿಂತ ಮುಂಚಿತವಾಗಿ ವಧು ನೋಡಿ ವಿವಾಹವಾಗುವುದಾಗಿದೆ ಬಹುಮೇಲು. ಒಂದು ಹೆಣ್ಣನ್ನು ವಿವಾಹಗಳು ಮುಂದಾದ ಮುಘಿರಾ(ರ)ರ ಬಳಿ "ನೀನು ಹೆಣ್ಣನ್ನು ನೋಡಿದೆಯಾ? ಎಂಬ ನೆಬಿ(ಸ)ರ ಪ್ರಶ್ನೆಯು ಇಲ್ಲಿ ಇದರ ಮಹತ್ವವನ್ನು ತಿಳಿಸುತ್ತದೆ. ವಿವಾಹವಾದ ನಂತರ ಪರಸ್ಪರ ಇಷ್ಟಪಡಲು ಸಾಧ್ಯವಾಗದಿದ್ದರೆ ಅವರಡೆಯಲ್ಲಿ ಸ್ನೇಹ ಹೇಗೆ ಉಂಟಾಗುತ್ತದೆ. ಅಥವಾ, ಇಬ್ಬರೂ ಪರಸ್ಪರ ಕಂಡು ಇಷ್ಟ ಪಟ್ಟ ನಂತರ ಪ್ರಾರಂಭಿಸಬೇಕಾದ ಬಂಧವಾಗಿದೆ ವಿವಾಹ ಬಂಧ. ಇಲ್ಲಿ ಮಾತಾಪಿತರ ನಿರ್ಬಂಧಗಳಿಗೆ ದೊಡ್ಡ ಆದ್ಯತೆ ಏನು ಇಲ್ಲ.
ಒದೆ ನೋಡುದೆಂಬ ಲಲಿತವಾದ ಮತಾಚಾರಕ್ಕೆ ಊರ ಆಚಾರದ ಕೆಲ ಬಣ್ಣ ಬಳಿದಾಗ ಹೆಣ್ಣು ನೋಡುವುದೆಂಬ ಪುಣ್ಯಕರ್ಮ ಅನೇಕ ಊರುಗಳಲ್ಲಿ ದುರಾಚಾರವಾಗಿಯೂ,ಅನಿಸ್ಲಾಮಿಕವಾಗಿಯೂ ಪರಿಣಮಿಸಿದೆ ಎಂಬುವುದು ಖೇದಕರ. ವಿವಾಹವಾಗಲು ಇಚ್ಚಿಸುವ ಒಬ್ಬರು ವಿವಾಹ ಅಭ್ಯರ್ಥನೆಗೆ ಮುಂಚಿತವಾಗಿ ಓರ್ವ ಹೆಣ್ಣಿನ ಮುಖ ಮತ್ತು ಮುಂಗೈ ನೋಡುವುದು, ಅವಳು ಕೂಡ ಅವನ ಅವುರತ್ ಅಲ್ಲದ ಭಾಗವನ್ನು ನೋಡುವುದು, ಇವರಿಬ್ಬರು ಪರಸ್ಪರ ಕಂಡು ಇಷ್ಟ ಪಟ್ಟರೆ ವಿವಾಹ ಅಭ್ಯರ್ಥನೆ ಮಾಡುವುದು ಅನಂತರ ವಿವಾಹಿತರಾಗುವುದು. ಇದೇ ಇಸ್ಲಾಂ ಮುಂದಿಟ್ಟ ಲಲಿತವಾದ ವಧು ನೋಡುವ ಕರ್ಮ.
ವಿವಾಹಿತನಾಗಲು ಇಚ್ಚಿಸುವ ಪುರುಷನಿಗೆ ಮಾತ್ರವಾಗಿದೆ ವದು ನೋಡುವುದು ಸುನ್ನುತ್ತಾದದ್ದು. ಪುರುಷನಿಗೆ ನೋಡಲು ಸಾಧ್ಯವಾಗದೇ ಇದ್ದಲ್ಲಿ ಹೆಣ್ಣನ್ನು ಕಂಡು ತನಗೆ ವಿವರಿಸಿ ಕೊಡಲು ಬೇಕಾಗಿ ಕೆಲ ಸ್ತ್ರೀಯರನ್ನೊ ಅಥವಾ ಹೆಣ್ಣಿನ ಮಹರಂ (ಮದುವೆ ಹರಾಂ) ಆದ ಯಾವುದಾದರೂ ಪುರುಷರನ್ನು ಕಳುಹಿಸಬಹುದಾಗಿದೆ. ಎಂದರೆ, ವಿವಾಹಿತನಾಗಲು ಇಚ್ಚಿಸುವ ಪುರುಷನ ಅಪ್ಪನಿಗೂ ಕೂಡ ವಧುವನ್ನು ನೋಡುವುದು ಸುನ್ನತಿಲ್ಲ ಎಂದರ್ಥ. ಮಗ ವಿವಾಹಿತನಾಗುವ ತನಕ ಸೊಸೆಯಾಗಿ ಬರಲಿಕ್ಕಿರುವವಳು ತಂದೆಗೆ ಅನ್ಯಸ್ತ್ರೀಯಾಗಿರುತ್ತಾಳೆ. ಮತ್ತು ಅವಳನ್ನು ನೋಡುವುದು ತಂದೆಗೆ ನಿಷಿದ್ಧವಾಗಿದೆ. ತಂದೆ ನೋಡಿ ಇಷ್ಟ ಪಟ್ಟರೇ, ಎಂದು ನೋಡಬೇಕಿಲ್ಲ ಎಂದಾಗಿದೆ ವಾಸ್ತವ್ಯ. ವಧು ನೋಡಲು ಬೇಕಾಗಿ ಅಧಿಕೃತ ಕಾರ್ಯಕ್ರಮ ರೂಪಿಸಿ ತಂದೆ ಮತ್ತು ಸ್ನೇಹಿತರೊಂದಿಗು ವಧು ನೋಡುವ ನಮ್ಮ ಈ ಊರಿನ ಆಚಾರ ಎಲ್ಲ ರೀತಿಯಲ್ಲಿ ನಿರುತ್ಸಾಹಕಾರವು , ವಿರೋಧಿಸಬೇಕಾದ ದುರಾಚಾರವಾಗಿದೆ.
ವಧು ನೋಡಿ ವಿವಾಹ ಅಭ್ಯರ್ಥನೆಯೂ ಮಾಡಿ ನಿಶ್ಚಯಿಸಿದರೆ ಆದಷ್ಟು ಬೇಗ ವಿವಾಹವಾಗಬೇಕು. ನಿಖಾಹ್ ಆಗುವವರೆಗೆ ಅವಳು ಅನ್ಯಸ್ತ್ರೀ ಆಗಿರುತ್ತಾಳೆ . ಅವಳೊಂದಿಗೆ ಚಾಟಿಂಗ್ ಮಾಡುವುದು ಹಾಗೂ ಮಾತನಾಡುವುದು ಕರ್ಮ ಶಾಸ್ತ್ರ ನಿಯಮ ಪ್ರಕಾರ ಅನ್ಯಸ್ತ್ರೀಯೊಂದಿಗಿರುವ ಅದೇ ವಿಧಿ ಆಗಿರುತ್ತದೆ. ವಿವಾಹ ಅನುಬಂಧಿತ ಕಾರ್ಯವೆಲ್ಲವೂ ಇಸ್ಲಾಂ ಸೂಚಿಸಿದ ಅದೇ ರೀತಿ ಮರಳಿ ಬಂದಿದ್ದರೆ ಎಂದು ಆಗ್ರಹಿಸುತ್ತೇನೆ .....ಆಮೀನ್
ಮೂಲ: ಅಬ್ದುಲ್ ಬಾಸಿತ್ ಹುದವಿ ಕೂಲುರು
ಅನುವಾದ: ಮುಹಮ್ಮದ್ ಜುನೈದ್