ಪ್ರಸಿದ್ಧ ವ್ಯಕ್ತಿಗಳು ಕಂಡಂತೆ? ಇಸ್ಲಾಂ

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಶ್ರೀ ಅಣ್ಣಾದೊರೈಯವರು ೧೯೫೭ ರ ಅಕ್ಟೋಬರ್ ೭ ರಂದು ಪ್ರವಾದಿಜೀವನ ಕುರಿತು ಒಂದು ಭಾಷಣ ಮಾಡಿದ್ದರು ಅದನ್ನು ಇಲ್ಲಿ ಉಲ್ಲೇಖಿಸುವುದು ಸೂಕ್ತ ವೆನಿಸುತ್ತದೆ.ತನ್ನಭಾಷಣದಲ್ಲಿ ಅಣ್ಣಾದೊರೈಯವರು ಈ ರೀತಿ ಹೇಳಿದ್ದರು. “ಇಸ್ಲಾಂ ಧರ್ಮದ ತತ್ವಗಳು ಮತ್ತು ವಿಶ್ವಾಸಗಳ ಅಗತ್ಯ ಆರನೇ ಶತಮಾನದಲ್ಲಿದ್ದಂತೆಯೇ ಇಂದಿನ ಜಗತ್ತಿಗೂ ಇದೆ. ಇಂದು ಜಗತ್ತು ಅನೇಕ ಸಿದ್ಧಾಂತಗಳ ಹುಡುಕಾಟದಲ್ಲಿ ಎಡವಿ ಬೀಳುತ್ತಿದೆ; ಎಲ್ಲಿಯೂ ಅದಕ್ಕೆ ತ್ರಪ್ತಿ ಲಭಿಸಿಲ್ಲ. ಇಸ್ಲಾಂ ಕೇವಲ ಒಂದು ಧರ್ಮವಲ್ಲ. ಅದು ಒಂದು ಜೀವನ ಸಿದ್ಧಾಂತ ಮತ್ತು ಅತ್ಯುತ್ತಮ ಜೀವನ ವ್ಯವಸ್ಥೆ ಯಾಗಿದೆ.ಈ ಜೀವನ ಕ್ರಮವನ್ನು ಲೋಕದ ಅನೇಕ ರಾಷ್ಟ್ರಗಳು ಪಾಲಿಸುತ್ತಿವೆ.” ಇಸ್ಲಾಮೀ ಜೀವನ ಸಿದ್ಧಾಂತ ಮತ್ತು ಇಸ್ಲಾಮೀ ಜೀವನ ವ್ಯವಸ್ಥೆಯನ್ನು ನಾವು ಹೊಗಳುವುದು ಏಕೆ? ಅಣ್ಣಾದೊರೈಯವರು ಹೇಳುತ್ತಾರೆ “..ಇಸ್ಲಾಮೀ ಜೀವನ ಸಿದ್ಧಾಂತವು ಮನುಷ್ಯ ಮನಸ್ಸಿನಲ್ಲಿ ಏಳುವ ಎಲ್ಲ ಸಂಶಯಗಳಿಗೆ ಅತ್ಯುತ್ತಮ ರೀತಿಯಲ್ಲಿ ಉತ್ತರನೀಡುತ್ತದೆ ಎಂಬುದಕ್ಕಾಗಿ ಮಾತ್ರ.”ಇಸ್ಲಾಮಿನ ಇನ್ನೊಂದು ಗುಣ ವಿಶೇಷತೆಯೇನಂದರೆ ಯಾರು ಆ ಧರ್ಮವನ್ನು ಸ್ವೀಕರಿಸದನೋ ಅವನು ಕುಲ-ಗೋತ್ರಗಳ ಭೇದಭಾವವನ್ನು ಮರೆತೇ ಬಿಟ್ಟನು.ಮುದಗತ್ತೂರಿನಲ್ಲಿ (ತಮಿಳುನಾಡಿನ ಒಂದು ಊರು) ಪರಸ್ಪರ ಕತ್ತು ಕೊಯ್ಯುತ್ತಿದ್ದ ಜನರು ಇಸ್ಲಾಂ ಸ್ವೀಕರಿಸ ತೊಡಗಿದಾಗ ಇಸ್ಲಾಂ ಅವರನ್ನು ಅಣ್ಣ ತಮ್ಮಂದಿರಾಗಿ ಮಾರ್ಪಡಿಸಿತು.ಎಲ್ಲ ಭೇದಭಾವವೂ ಕೊನೆಗೊಂಡಿತು.ನೀಚ ಕುಲದವರು ನೀಚರಾಗಿ ಉಳಿಯಲಿಲ್ಲ.ಎಲ್ಲರೂ ಸನ್ಮಾನ್ಯರೂ ಗೌರವಾನ್ವಿತರೂ ಆಗಿ ಮಾರ್ಪಟ್ಟರು. ಎಲ್ಲರೂ ಸಮಾನ ಹಕ್ಕುಗಳನ್ನೂ ಹೊಂದಿದವರಾಗಿ ಪರಸ್ಪರ ಸಹೋದರತೆಯ ಬಂಧನದಲ್ಲಿ ಬಿಗಿಯಲ್ಪಟ್ಟಿತು. ಇದೇರೀತಿ ಮಹಾತ್ಮ ಗಾಂಧೀಜಿಯವರೊಮ್ಮೆ ಹೇಳಿದ್ದರು “ಒಂದು ವೇಳೆ ನಾನು ಭಾರತದ ಸರ್ವಾಧಿ ಕಾರಿ ಯಾದರೆ ಒಂದು ಕಾಲದಲ್ಲಿ ಇಸ್ಲಾಮೀ ಸಾಮ್ರಾಜ್ಯದ ಖಲೀಫರಾಗಿದ್ದ ಉಮರ್ ರಂತೆ ಆಡಳಿತ ನಡೆಸುತ್ತೇನೆ” ನ್ಯಾಯ ಸ್ಥಾಪಿಸುವಲ್ಲಿ ವಿಜಯಿಯಾಗಿದ್ದ ಉಮರ್(ರ) ರವರ ಆಡಳಿತಾವಧಿಯು ಎಲ್ಲ ವಿಧ ದಲ್ಲೂ ಮಾದರೀ ಆಡಳಿತವಾಗಿತ್ತು. ಮಕ್ಕಾನಗರದ ಸಾಮಾನ್ಯ ಆಡು ಮೇಯಿಸುವವನ ಮಗನಾಗಿದ್ದ ಉಮರ್ ರನ್ನು’ಖಲೀಫ’ರನ್ನಾಗಿ ಮಾಡಿದುದೇ ಇಸ್ಲಾಂ ಮತ್ತು ಇಸ್ಲಾಮೀ ಸಿದ್ಧಾಂತವಾಗಿತ್ತು. ಡಾ .ಹೆಚ್ ಮೈಕಲ್ ಹಾರ್ಟ್ ಮನುಷ್ಯ ಚರಿತ್ರೆಯಲ್ಲಿ ಸಾಧನೆಗಳನ್ನು ಮಾಡಿದ ನೂರುಜನ ಗಣ್ಯರ ಕುರಿತಂತೆ ಒಂದು ಗ್ರಂಥ ರಚಿಸುತ್ತಾರೆ ಆದರೆ ಅವರೆಲ್ಲರ ಪೈಕಿ ಮುಹಮ್ಮದ್(ಸ)ರಿಗೆ ಮೊದಲ ಸ್ಥಾನ ಕೊಡಲು ಅವರು ನಿರ್ಬಂಧಿತರಾಗುತ್ತಾರೆ. ಏಕೆಂದರೆ ಕೇವಲ ಇಪ್ಪತ್ತಮೂರು ವರ್ಷಗಳ ಅಲ್ಪ ಅವಧಿಯಲ್ಲಿ ಜೀವನದ ಎಲ್ಲ ರಂಗಗಳಲ್ಲಿಯೂ ಸ್ವಾಸ್ಥ್ಯವನ್ನು ಕಳೆದು ಕೊಂಡಂತಹ ಸಮಾಜದಲ್ಲಿ ತನ್ನ ವಿಚಾರಗಳನ್ನು ಕಾರ್ಯ ರೂಪಕ್ಕೆ ತಂದು ಒಂದು ಆದರ್ಶಪೂರ್ಣ ಜನಸಮೂಹವನ್ನು ಕಟ್ಟಿಬೆಳೆಸಿ ಅಡಿಯಿಂದ ಮುಡಿವರೆಗೆ ಪೂರ್ಣ ಪ್ರಮಾಣದಲ್ಲಿ ಬದಲಾದ ಒಂದು ರಾಷ್ಟ್ರವನ್ನು ಸ್ಥಾಪಿಸಿ ತೋರಿಸಿದ ಹೆಗ್ಗಳಿಕೆ ಇಡೀ ಮಾನವ ಇತಿಹಾಸದಲ್ಲೇ ಕೇವಲ ಮುಹಮ್ಮದ್(ಸ)ರಿಗೆ ಮಾತ್ರ ಸೇರಿದ್ದಾಗಿದೆ. ನ್ಯಾಯ ಸ್ಥಾಪಿಸುವಲ್ಲಿ ವಿಜಯಿಯಾಗಿದ್ದ ಉಮರ್(ರ) ರವರ ಆಡಳಿತಾವಧಿಯು ಎಲ್ಲ ವಿಧ ದಲ್ಲೂ ಮಾದರೀ ಆಡಳಿತವಾಗಿತ್ತು. ಮಕ್ಕಾನಗರದ ಸಾಮಾನ್ಯ ಆಡು ಮೇಯಿಸುವವನ ಮಗನಾಗಿದ್ದ ಉಮರ್ ರನ್ನು’ಖಲೀಫ’ರನ್ನಾಗಿ ಮಾಡಿದುದೇ ಇಸ್ಲಾಂ ಮತ್ತು ಇಸ್ಲಾಮೀ ಸಿದ್ಧಾಂತವಾಗಿತ್ತು. ಡಾ .ಹೆಚ್ ಮೈಕಲ್ ಹಾರ್ಟ್ಮ ನುಷ್ಯ ಚರಿತ್ರೆಯಲ್ಲಿ ಸಾಧನೆಗಳನ್ನು ಮಾಡಿದ ನೂರುಜನ ಗಣ್ಯರ ಕುರಿತಂತೆ ಒಂದು ಗ್ರಂಥ ರಚಿಸುತ್ತಾರೆ ಆದರೆ ಅವರೆಲ್ಲರ ಪೈಕಿ ಮುಹಮ್ಮದ್(ಸ)ರಿಗೆ ಮೊದಲ ಸ್ಥಾನ ಕೊಡಲು ಅವರು ನಿರ್ಬಂಧಿತರಾಗುತ್ತಾರೆ. ಏಕೆಂದರೆ ಕೇವಲ ಇಪ್ಪತ್ತಮೂರು ವರ್ಷಗಳ ಅಲ್ಪ ಅವಧಿಯಲ್ಲಿ ಜೀವನದ ಎಲ್ಲ ರಂಗಗಳಲ್ಲಿಯೂ ಸ್ವಾಸ್ಥ್ಯವನ್ನು ಕಳೆದು ಕೊಂಡಂತಹ ಸಮಾಜದಲ್ಲಿ ತನ್ನ ವಿಚಾರಗಳನ್ನು ಕಾರ್ಯ ರೂಪಕ್ಕೆ ತಂದು ಒಂದು ಆದರ್ಶಪೂರ್ಣ ಜನಸಮೂಹವನ್ನು ಕಟ್ಟಿಬೆಳೆಸಿ ಅಡಿಯಿಂದ ಮುಡಿವರೆಗೆ ಪೂರ್ಣ ಪ್ರಮಾಣದಲ್ಲಿ ಬದಲಾದ ಒಂದು ರಾಷ್ಟ್ರವನ್ನು ಸ್ಥಾಪಿಸಿ ತೋರಿಸಿದ ಹೆಗ್ಗಳಿಕೆ ಇಡೀ ಮಾನವ ಇತಿಹಾಸದಲ್ಲೇ ಕೇವಲ ಮುಹಮ್ಮದ್(ಸ)ರಿಗೆ ಮಾತ್ರ ಸೇರಿದ್ದಾಗಿದೆ. ಪ್ರಸಿದ್ಧ ತತ್ವಜ್ಞಾನಿ ಹಾಗೂ ಖ್ಯಾತ ಚಿಂತಕನಾದ ಬರ್ನಾಡ್ ಷಾ ಹೇಳುವಂತೆ “ಆಧುನಿಕ ಲೋಕದ ಎಲ್ಲ ವಿಧ ಸಮಸ್ಯೆಗಳನ್ನು ಬಗೆಹರಿಸಬೇಕಾದರೆ ಅದಕ್ಕಿರುವ ಒಂದೇ ಒಂದು ಮಾರ್ಗ ಮುಹಮ್ಮದರಂತಹ ಓರ್ವ ವ್ಯಕ್ತಿಯನ್ನು ಸರ್ವಾಧಿಕಾರಿಯನ್ನಾಗಿ ಮಾಡುವುದಾಗಿದೆ.” ಅದೇ ಪ್ರಕಾರ, “ಲೋಕದಲ್ಲಿ ಶಾಶ್ವತವಾಗಿ ಉಳಿಯುವ ಒಂದು ಧರ್ಮವಿದ್ದರೆ ಅದು ಇಸ್ಲಾಂ ಮಾತ್ರ ವಾಗಿದೆ ಎಂದೂ ಬರ್ನಾಡ್ ಷಾ ಹೇಳಿರುತ್ತಾನೆ.

Related Posts

Leave A Comment

Voting Poll

Get Newsletter