ಶೇಖ್ ಅಬ್ದುಲ್ ಹಕೀಮ್ ಮುರಾದ್

ಶೇಖ್ ಅಬ್ದುಲ್ ಹಕೀಮ್ ಮುರಾದ್ ಇಸ್ಲಾಮಿಕ್ ಸಾಂಪ್ರದಾಯಿಕತೆಯ ನವೀನ ಪ್ರತಿಪಾದಕರು, ಪ್ರಸಿದ್ಧ ಮುಸ್ಲಿಂ ಚಿಂತಕರು ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಅತ್ಯುತ್ತಮ ಕೊಡುಗೆಗಳ ನೀಡಿದವರಾಗಿದ್ದಾರೆ ಶೇಖ್ ಅಬ್ದುಲ್ ಹಕೀಮ್ ಮೂರಾದ್. ಅಶ್'ಅರಿ ಮಝ್ಹಬ್ ಸೇರಿದ ಅವರು ಪರಿಪೂರ್ಣ ಸುನ್ನಿ ವಿದ್ವಾಂಸರಾಗಿದ್ದಾರೆ. ಕೇಂಬ್ರಿಡ್ಜ್ ಇಸ್ಲಾಮಿಕ್ ಕಾಲೇಜಿನ ಸಂಸ್ಥಾಪಕರಾದ ಇವರು ಪ್ರಸ್ತುತ ದೀನ್ ಆಗಿದ್ದಾರೆ. ಅವರು 1979 ರಲ್ಲಿ ಇಸ್ಲಾಂಗೆ ಮತಾಂತರಗೊಂಡರು. ವಿಶ್ವದ ಮೇಲೆ ಪ್ರಭಾವ ಬೀರಿದ 500 ಮುಸ್ಲಿಂ ವ್ಯಕ್ತಿಗಳ ಪಟ್ಟಿಯಲ್ಲಿ, ಅವರನ್ನು 2018, 2019, 2020, 2021 (ಶ್ರೇಯಾಂಕ: 47) ವರ್ಷಗಳಲ್ಲಿ ಸತತವಾಗಿ ಎಣಿಸಲಾಗಿದೆ. 1960 ರಲ್ಲಿ ಇಂಗ್ಲೆಂಡ್‌ನ ಲಂಡನ್‌ನಲ್ಲಿ ಕ್ರಿಶ್ಚಿಯನ್ ಕುಟುಂಬದಲ್ಲಿ ಜನಿಸಿದರು. ಅವರ ಮೊದಲ ಹೆಸರು ತಿಮೋತಿ ಜಾನ್ ವಿಂಟರ್.

ಅವರ ಪೋಷಕರು ಕಲೆ ಮತ್ತು ವಾಸ್ತುಶಿಲ್ಪದಲ್ಲಿ ಪರಿಣತರು. ಅವರು ವೆಸ್ಟ್‌ಮಿನಿಸ್ಟರ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪೂರ್ಣಗೊಳಿಸಿದರು. ನಂತರ ಅವರು ಕೇಂಬ್ರಿಡ್ಜ್ ಮತ್ತು ಪೆನ್‌ಬ್ರೋಕ್ ಕಾಲೇಜುಗಳಿಂದ 1983 ರಲ್ಲಿ ಅರೇಬಿಕ್‌ನಲ್ಲಿ ಪ್ರಥಮ ಶ್ರೇಣಿಯೊಂದಿಗೆ (ಇಸ್ಲಾಂ ಧರ್ಮವನ್ನು ಸ್ವೀಕರಿಸಿದ ನಂತರ) ಪದವಿ ಪಡೆದರು.

 ನಂತರ ಅವರು ಈಜಿಪ್ಟ್‌ನ ವಿಶ್ವಪ್ರಸಿದ್ಧ ಅಲ್- ಅಝ್ಹರ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿದರು. ಅದರೊಂದಿಗೆ ಸೌದಿ ಅರೇಬಿಯಾ , ಯಮನಿನ ಪ್ರಖ್ಯಾತ ಪಂಡಿತರಿಂದ ವಿದ್ಯಾರ್ಜನೆಗೈದರು. ಅದರ ನಂತರ,ಅವರು ಇಂಗ್ಲೆಂಡಿಗೆ ಮರಳಿ ಲಂಡನ್ ವಿಶ್ವವಿದ್ಯಾಲಯದಿಂದ ಟರ್ಕಿಶ್ ಮತ್ತು ಪರ್ಷಿಯನ್ ಭಾಷೆ ಕಲಿತರು. ಆಧುನಿಕ ಜೀವನ ವಿಧಾನದಲ್ಲಿ ಇಸ್ಲಾಮಿಕ್ ನಂಬಿಕೆಗಳನ್ನು ಹೇಗೆ ಪ್ರಸ್ತುತಪಡಿಸಬೇಕು ಎಂಬುದರ ಕುರಿತು ಅವರು ತಮ್ಮ ಭಾಷಣಗಳು ಮತ್ತು ಬರಹಗಳಲ್ಲಿ ವಿಶ್ಲೇಷನೆ ನಡೆಸುವುದರಲ್ಲಿ ಯಶಸ್ವಿಯಾಗಿದ್ದಾರೆ.

 ಅವರು ಬ್ರಿಟಿಷ್ ಮುಸ್ಲಿಂ ಇಮಾಮರಿಗೆ (ದರ್ಮ ಪ್ರಬೋಧಕರು/ ಧರ್ಮ ನಾಯಕರು) ತರೆಬೇತಿ ನೀಡಲು 2009 ಸ್ಥಾಪಿತಗೊಂಡ ಕೇಂಬ್ರಿಡ್ಜ್ ಮುಸ್ಲಿಂ ಕಾಲೇಜಿನ ಪ್ರಮುಖ ವ್ಯಕ್ತಿಯಾಗಿದ್ದಾರೆ. ಅವರು ಪೂರ್ವ ಯುರೋಪ್ ಆಂಗ್ಲೋ-ಮುಸ್ಲಿಂ ಫೆಲೋಶಿಪ್‌ ಮತ್ತು ಪ್ರಮುಖ ಸುನ್ನಿ ಹದೀಸ್ ಸಂಗ್ರಹಗಳ ಅತ್ಯುತ್ತಮ ಪಾಂಡಿತ್ಯಪೂರ್ಣ ಅರೇಬಿಕ್ ಆವೃತ್ತಿಗಳನ್ನು ಪ್ರಕಟಿಸಿದ ಸುನ್ನ: ಪ್ರೊಜೆಕ್ಟ್ ಇದರ ಡೈರೆಕ್ಟರ್ ಆಗಿ ಕಾರ್ಯನಿರ್ವಹಿಸಿದ್ದರು. ಬರವಣಿಗೆಯಲ್ಲಿ ಸಕ್ರಿಯ ನೈಪುಣ್ಯತೆ ಹೊಂದಿದ ಇವರು ವಿವಿಧ ವಿಷಯಗಳ ಬಗ್ಗೆ ಅನೇಕ ಕೃತಿಗಳನ್ನು ಬರೆದಿದ್ದಾರೆ. Around Haslemere,Commentary on the Eleventh Contentions,Muslim Songs of the British Isles,Montmorency's Book of Rhymes,Understanding Islam and the Muslims,Travelling Home: Essays on Islam in Europe (ಯುರೋಪಿಯನ್ ಇಸ್ಲಾಮಿಕ್ ಚಳುವಳಿಗಳ ಕುರಿತು ಬರೆಯಲಾದ ಲೇಖನಗಳು), Understanding the Four Madhhabs: Facts About Ijtihad and Taqlid (ನಾಲ್ಕು ಮಝ್ಹ ಬ್ ಗಳ ವಿವರಣೆ) . Bombing without Moonlight: The Origins of Suicidal Terrorism ಪ್ರಧಾನ ಗ್ರಂಥಗಳು. ಇದರ ಜೊತೆಗೆ, ಪ್ರಮುಖ ಇಸ್ಲಾಮಿಕ್ ಪಠ್ಯಗಳನ್ನು ಇಂಗ್ಲಿಷ್‌ಗೆ ಅನುವಾದಿಸಿದ್ದಾರೆ. ಅವುಗಳಲ್ಲಿ ಪ್ರಸಿದ್ಧ ಇಮಾಮ್ ಗಜಾಲಿ (ರ) ಅವರ "ಇಹ್ಯಾ ಉಲೂಮುದ್ದೀನ್" ಗ್ರಂಥದ ಎರಡು ಸಂಪುಟಗಳ ಅನುವಾದ ಮತ್ತು ಇಮಾಮ್ ಬುಸ್ವುರಿಯ ಬುರ್ದಾ ಕಾವ್ಯದ ಅನುವಾದ. ಅವರ ಅಕಾಡೆಮಿಕ್ ಪ್ರಕಟಣೆಗಳಲ್ಲಿ ಇಸ್ಲಾಮಿಕ್ ಥಿಯಾಲಜಿ ಮತ್ತು ಮುಸ್ಲಿಂ-ಕ್ರಿಶ್ಚಿಯನ್ ಸಂಬಂಧಗಳ ಕುರಿತು ಹಲವಾರು ಲೇಖನಗಳನ್ನು ಒಳಗೊಂಡಿವೆ, ಜೊತೆಗೆ ರಾಜಕೀಯ ಮತ್ತು ದೇವತಾಶಾಸ್ತ್ರದ ಕುರಿತು ಟರ್ಕಿಯಲ್ಲಿ ಎರಡು ಪುಸ್ತಕಗಳನ್ನು ಬರೆದಿದ್ದಾರೆ. ಅವರು ಕೇಂಬ್ರಿಡ್ಜ್ ಕಂಪ್ಯಾನಿಯನ್ ಟು ಕ್ಲಾಸಿಕಲ್ ಇಸ್ಲಾಮಿಕ್ ಥಿಯಾಲಜಿ (2008) ನ ಸಂಪಾದಕರಾಗಿದ್ದಾರೆ. 2007 ರಲ್ಲಿ ಕಿಂಗ್ ಅಬ್ದುಲ್ಲಾ ಅವಾರ್ಡ್ ಲಭಿಸಿತು. BBC ರೇಡಿಯೊ 4 ರಲ್ಲಿ 'ಥಾಟ್ ಫಾರ್ ದಿ ಡೇ' ಸರಣಿಯನ್ನು ಮುನ್ನಡೆಸಿದರು.

ಕೇಂಬ್ರಿಡ್ಜ್‌ನಲ್ಲಿ ಸುಮಾರು ಸಾವಿರಕ್ಕೂ ಮಿಕ್ಕೂ ವಿಶ್ವಾಸಿಗಳಿಗೆ ಆರಾಧಿಸಲು ಸ್ಥಾಪಿಸಿದ ಕೇಂಬ್ರಿಡ್ಜ್ ಸೆಂಟ್ರಲ್ ಮಸೀದಿಯ ಸ್ಥಾಪಕರಾಗಿದ್ದಾರೆ. ಉತ್ತಮವಾಗಿ ನಿರ್ಮಿಸಲಾದ ಈ ಮಸೀದಿ ಕಟ್ಟಡವು ಅದರ ಅತ್ಯುನ್ನತ ಧಾರ್ಮಿಕ ಕೇಂದ್ರವಾಗಿಯೂ ಕಾರ್ಯನಿರ್ವಹಿಸುತ್ತಿದೆ. ಈ ಮಸೀದಿಯು ಯುರೋಪ್‌ನ ಮೊದಲ ಇಕೋ-ಮಸೀದಿ ಎಂದು ಪ್ರಸಿದ್ಧವಾಗಿದೆ. (ಏಪ್ರಿಲ್ 2019 ರಲ್ಲಿ ಉದ್ಘಾಟನೆಗೊಂಡದ್ದು) ಪ್ರಸ್ತುತ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ಇಸ್ಲಾಮಿಕ್ ಅಧ್ಯಯನಗಳ ಪ್ರಾಧ್ಯಾಪಕರಾಗಿ, ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹಲವಾರು ಭಾಷೆಗಳಲ್ಲಿ ಪ್ರಾವೀಣ್ಯತೆ ಹೊಂದಿರುವ ಅವರ ಉಪನ್ಯಾಸಗಳು ಮತ್ತು ತರಗತಿಗಳು ಪ್ರಸಿದ್ಧವಾಗಿದೆ.

 

Related Posts

Leave A Comment

Voting Poll

Get Newsletter