ಮೊಹರಂನ ಉಪವಾಸ ಮತ್ತು ಚರಿತ್ರೆಗಳು
 ಪೂರ್ವಕಾಲದಲ್ಲಿ ತಾವು ಮಾಡಿದ ಪಾಪಗಳಿಂದ ಜಗದೊಡೆಯ ನಲ್ಲಿ ಪಾಪ ವಿಮೋಚನೆಯನ್ನು ಯಾಚಿಸಿ ಹೊಸ ಜನ್ಮವನ್ನು ನಿರ್ಮಿಸುವ ತಯಾರಿನಲ್ಲಾಗಿದೆ ಸತ್ಯ ವಿಶ್ವಾಸಿಗಳು. ನಷ್ಟವಾದ ವೈಭವದ ದಿನಗಳಲ್ಲಿ ಒಳಿತು ಮತ್ತು ಪಾಪವೂ ಅಧಿಕರಿಸಿ ರಬಹುದು,ಆದರೂ ಇನ್ನು ಬರುವ ದಿನಗಳಲ್ಲಿ ಹೂಬಿಡುವ ಮರಗಳಿಗೆ ಸಮಾನರಾಗಿರಬೇಕೆಂಬ ಆಲೋಚನೆಯಲ್ಲಾಗಿದೆ ಪ್ರತಿಯೊಬ್ಬ ಸತ್ಯವಿಶ್ವಾಸಿಯ ಹೃದಯವು. ಮೊಹರಂ ಎಂಬ ಹಿಜ್ರಾ ಪ್ರಾರಂಭದ ತಿಂಗಳಿಗೆ ಆದೇಶಿಸಲಾಗಿದ ವಿಶೇಷತೆಯೂ, ಇತರ ತಿಂಗಳುಗಳಿಗಿಂತ ವಿಭಿನ್ನವಾಗಿದೆ.ಯುದ್ಧಮಾಡುವುದನ್ನು ನಿಷೇಧಿಸಲಾದ ತಿಂಗಳುಗಳಲ್ಲಿ ಒಂದಾದ ಈ ಮೊಹರಂ ತಿಂಗಳು ಹಲವು  ಸುಪ್ರಧಾನವಾದ ಘಟನೆಗಳಿಗೆ ಸಾಕ್ಷಿಯಾದ ಒಂದು ತಿಂಗಳಾಗಿದೆ.ಮೊಹರಂನ ಕುರಿತು ಹೇಳಲು ಇನ್ನೂ ಹೆಚ್ಚು ಇವೆ. ಅದೂ ಸಹ ಸಂತೋಷದ ಮತ್ತು ದುಃಖಗಳ ,ಪರೀಕ್ಷಣೆಗಳ, ಶಿಕ್ಷೆಗಳ ಐತಿಹಾಸಿಕ ಕಥೆಗಳಾಗಿದೆ.
 ಮೊಹರ್ರಮ್ ಎಂದು ಕೇಳುವಾಗಲೇ ಓರ್ವ ಸತ್ಯವಿಶ್ವಾಸಿಯ ಮನದಲ್ಲಿ ಸ್ಪಷ್ಟವಾಗುವುದು ಆಶೂರಾಹ್,ತಾಸೂಆಹ್ ಅಥವಾ ಮೊಹರಂ ತಿಂಗಳ 9ನೇ ಮತ್ತು 10ನೇ ದಿನಗಳಾಗಿದೆ. ಇತರ ತಿಂಗಳುಗಳಿಗಿಂತ ಮೊಹರಂ ತಿಂಗಳನ್ನು ಬೇರ್ಪಡಿಸುವುದರಲ್ಲಿ ಈ ಎರಡು ದಿನಗಳು ಮುಖ್ಯವಾದ ಪಾತ್ರವನ್ನು ವಹಿಸುತ್ತವೆ. ಅದೇ ರೀತಿ ಈ ಎರಡು ದಿನಗಳಲ್ಲಿ ಉಪವಾಸ ಹಿಡಿಯುವುದು ಸುನ್ನತ್ ಆದ ಒಂದು ಕಾರ್ಯವೂ ಆಗಿದೆ.
ಆಶುರಾ ಚರಿತ್ರೆಗಳ ಭಂಡಾರ
ಇತಿಹಾಸ ಕಂಡ ಬಹುದೊಡ್ಡ ಧಿಕ್ಕಾರಿಯೂ ಮತ್ತು ಕ್ರೂರ ಆಡಳಿತಗಾರನೂ, ನಾನೇ ಬಹುದೊಡ್ಡ ದೇವರೂ ಎಂದು ಅಹಂಕರಿಸಿದ ಫಿರ್ ಔನ್ ನ ಪತನವೂ,ಮೂಸಾ ನೆಬಿ(ಅ) ಮತ್ತು ಅವರ ಸಮುದಾಯದ ಪುನರುತ್ಥಾನವು ಮೊಹರಂ ಹತ್ತರಲ್ಲಾಗಿತ್ತು.ಅಧಿಕಾರದ ರಥದಲ್ಲಿ ದುರ್ಬಲವರ್ಗಗಳನ್ನು ಗುಲಾಮರನ್ನಾಗಿಯೂ ಮತ್ತು ಅಕ್ರಮಿಸಿಕೊಂಡು ಪ್ರತೀಕಾರ ತೀರಿಸಿಕೊಂಡ ಫರೋವನಿಗೆದುರಾಗಿ ಸತ್ಯ ವಿಶ್ವಾಸದ ಸಾಮರ್ಥ್ಯವಿಟ್ಟು ಪ್ರತಿರೋಧದಂತೆ ನಿಂತ ಮೂಸ ನೆಬಿಯವರ ಮತ್ತು ಅವರ ಸಮೂಹದ ವಿಜಯದ ಅನುಸ್ಮರಣಾ ದಿವಸವೂ ಕೂಡ ಇದೇ ಆಗಿದೆ. ಧಿಕ್ಕಾರಿಗಳಾದ ಶತ್ರುಗಳ ಮುಂದೆ ಈಮಾನಿನ ಬಲದಿಂದ ಅಜೇಯನಾಗಿ ನಿಂತ  ಮೂಸಾ ನೆಬಿಯರೂ ಮತ್ತು ಅವರ ಸಮೂಹವು ನಂಬಿಕೆಯ ಪಾಠಗಳನ್ನಾಗಿದೆ ಜಗತ್ತಿಗೆ ಪ್ರಸ್ತುತಪಡಿಸಿದ್ದು.
ಪ್ರತಿಯೊಬ್ಬ ಮುಸಲ್ಮಾನನ ಮನಸ್ಸನ್ನೇ ನೋವಿಸುವ ಒಂದು ದುರಂತ ಘಟನೆ ನಡೆದದ್ದು ಮೊಹರಂ ಹತ್ತರಂದಾಗಿತ್ತು. ಪ್ರವಾದಿಯವರ ಮೊಮ್ಮಗ ಅಲಿ ರಲಿಯಲ್ಲಾಹು ಅನ್ಹುರವರ ಮತ್ತು ಪ್ರವಾದಿಯವರ ಕಿರಿಯ ಮಗಳಾದ ಫಾತಿಮಾ ಎಂಬವರ ಪುತ್ರನಾದ ವಿಶ್ವ ಮುಸ್ಲಿಮರ ನಾಯಕನಾದ ಹುಸೇನ್(ರ) ಖಾರ್ಭಾಲಾದಲ್ಲಿ ಕ್ರೂರವಾಗಿ ಕೊಲ್ಲಲ್ಪಟ್ಟದ್ದು  ಈ ದಿವಸದಲ್ಲಿ ಆಗಿತ್ತು.(ಇಮಾಮ್ ತ್ವಬ್ ರಾನೀ)
      "ಮಹಾ ಪ್ರವಾಹದಿಂದ ರಕ್ಷೆ ಹೊಂದಲು ಬೇಕಾಗಿ ಹಡಗು ಹತ್ತಿದ ನೂಹ್ ನೆಬಿ ಮತ್ತು ಅವರ ಸಮೂಹವು ಹಡಗಿನಿಂದ ಇಳಿದದ್ದೂ ಸಹ ಮೊಹರಂ ಹತ್ತರಿಂದಾಗಿತ್ತು.(ಇಮಾಮ್ ಬೈಹಶೀ)"
 ಇದಲ್ಲದೆ, ಸ್ವರ್ಗ-ನರಕ ,ಅರ್ಶ್,ಕಲಮ್,ಲೌಹುಲ್ ಮಹ್ ಫೂಳ್ ಮುಂತಾದವುಗಳೆಲ್ಲಾ ಸೃಷ್ಟಿಸಲ್ಪಟ್ಟದ್ಧು ಮೊಹರಂ ಹತ್ತರಂದಾಗಿದೆ. ಹಾಗೆಯೇ ಆದಂ ನೆಬಿ (ಅ) ರವರ(ತೌಬಾ)ಪಶ್ಚಾತ್ತಾಪವನ್ನು ಅಲ್ಲಾಹನು ಸ್ವೀಕರಿಸಿದ್ದು ಮತ್ತು ಇಬ್ರಾಹಿಂ ನೆಬಿಅವರನ್ನು ನಂಬ್ರೂದ್ನ ಬೆಂಕಿಯಿಂದ ರಕ್ಷೆಪಡಿಸಿದ್ದೂ, ಮೂಸ ನೆಬಿ ರವರಿಗೆ ತೌರಾತ್ ಅವತೀರ್ಣಗೊಂಡದ್ದೂ, ಯೂಸುಫ್ ನೆಬಿಯವರು ಜೈಲಿನಿಂದ ಬಿಡುಗಡೆಯಾದ ದ್ದೂ, ಅದೇ ದಿನ ಯಾಕೂಬ್ ನೆಬಿಯವರ ದೃಷ್ಟಿ ಮರಳಿ ಸಿಕ್ಕಿದ್ದೂ, ಅಯ್ಯೂಬ್ ನೆಬಿ (ಅ)ನ ಆರೋಗ್ಯ ಮರಳಿ ಪಡೆದದ್ದೂ, ಯೂನುಸ್ ನೆಬಿಯವರು ಮೀನಿನ ಹೊಟ್ಟೆಯಿಂದ ರಕ್ಷ ಪಟ್ಟದ್ದೂ, ಮತ್ತು ಸುಲೇಮಾನ್ ನೆಬಿ ರವರು ವಿಶ್ವದ ಚಕ್ರವರ್ತಿ ಯಾದದ್ದು, ಮತ್ತು ಮೊದಲ ಬಾರಿಗೆ ಮಳೆಸುರಿದ ದೆಲ್ಲ ಈ ದಿನದಲ್ಲಾಗಿತ್ತು.(ಇಯಾನತ್2/266).
    
ಸಂಕ್ಷಿಪ್ತವಾಗಿ ಹೇಳುವುದಾದರೆ ಮೊಹರಂ ಹತ್ತು ಇಸ್ಲಾಂ ಧರ್ಮದ ಅದ್ಭುತ ಇತಿಹಾಸಕ್ಕೆ ಹೊಸ ಅಧ್ಯಾಯಗಳನ್ನು ಸೇರಿಸಿದ ದಿನವಾಗಿದೆ.
ಅಶುರಾ ತಾಸುಆ ಉಪವಾಸಗಳ ಐತಿಹಾಸಿಕ ಹಿನ್ನೆಲೆ
ಮೊಹರಂ ಹತ್ತರ ಉಪವಾಸ (ಆಶುರಾ)ಸುನ್ನತಿ ಮಾಡಲು ಉತ್ತಮ ಐತಿಹಾಸಿಕ ಬೆಂಬಲವನ್ನು ಹೊಂದಿದೆ.ಮೂಸಾ ನಬಿ ಮತ್ತು ಅವರ ಸಮುದಾಯವೂ ಫರೋವನ ಕೈಗಳಿಂದ ರಕ್ಷೆ ಹೊಂದಿದ್ದಕ್ಕಾಗಿ ಕೃತಜ್ಞತೆಯಿಂದ ಯಹೂದಿಗಳು ಮೊಹರಂ ಹತ್ತರಂದು ಉಪವಾಸ ಹಿಡಿಯುತ್ತಾರೆ.
ಇಬ್ನ್ ಅಬ್ಬಾಸ್ (ರ) ಹೇಳುತ್ತಾರೆ "ಪ್ರವಾದಿ (ಸ) ಮದೀನಾ ತಲುಪಿದಾಗ ಅಲ್ಲಿನ ಯಹೂದಿಗಳು"ಅಶುರಾ"ದಿನದಂದು ಉಪವಾಸ ಮಾಡುವುದನ್ನು ಗಮನಿಸಿದರು, ಅವರು ಅದರ ಕುರಿತು ವಿಚಾರಿಸಿದಾಗ ಅವರು ಹೇಳಿದರು "ಇಂದಿನ ದಿನವಾಗಿದೆ ಮೂಸಾ ನೆಬಿ(ಅ) ಮತ್ತು ಬನೂಇಸ್ರಾಈಲರನ್ನು ಫಿರ್ ಔನಿನ  ಕೈಗಳಿಂದ ರಕ್ಷೆ ಹೊಂದಿಸಿದ್ದು. ಆದುದರಿಂದ ಆ ದಿನವನ್ನು ಗೌರವಾರ್ಥವಾಗಿ ಆದರಿಸಿ ನಾವು ಉಪವಾಸ ಹಿಡಿಯುತ್ತೇವೆ. ಆಗ ನೆಬಿ(ಸ) ಹೇಳಿದರು: ನಾವು ನಿಮಗಿಂತಲೂ ಮೂಸಾ ನೆಬಿಯವರಿಗೆ ಸಂಬಂಧವಿರುವ ವರು. ಆದ್ದರಿಂದ ಪ್ರವಾದಿ (ಸ) ಆ ದಿನದಂದು ವೃತ  ಅನುಷ್ಠಿಸಲು ನಮಗೆ ಆಜ್ಞಾಪಿಸಿದರು.(ಸ್ವಹೀಹ್ ಬುಖಾರಿ)
 " ಆಗ ಮೊಹರಮ್ ಒಂಬತ್ತು (ತಾಸುಆ) ಉಪವಾಸ ಸುನ್ನತ್ ಇಲ್ಲವೇ ಎಂದು ಸಂಶಯ ಇಬರಬಹುದು. ಅಬ್ದುಲ್ಲಾ ಹಿಬ್ನು ಅಬ್ಬಾಸ್ (ರ) ಹೇಳುತ್ತಾರೆ: ಪ್ರವಾದಿ (ಸ) ಅವರು ಆಶುರಾ ದಿನದಲ್ಲಿ ಉಪವಾಸ ಹಿಡಿಯುತ್ತಿದ್ದರು ಮತ್ತು ಇತರರಿಗೆ ಉಪವಾಸ ಮಾಡಲು ಆಜ್ಞಾಪಿಸಿದಾಗ ಅವರ ಸಹಚರರು ಕೇಳಿದರು;"ಪ್ರವಾದಿಯವರೇ ಈ ದಿನವನ್ನು ಯಹೂದಿಗಳು ವೈಭವೀಕರಿಸುತ್ತಾರೆ". ಆಗಲೇ ಪ್ರವಾದಿ ( ಸ) ಹೇಳಿದರು:"ಅಲ್ಲಾಹನು ಉದ್ದೇಶಿಸಿದ ರೆ ಮುಂದಿನ ವರ್ಷ ಮೊಹರಂ 9ರಂದು ನಾವು ಉಪವಾಸ ಮಾಡುತ್ತೇವೆ."ಮುಂದಿನ ವರ್ಷದಲ್ಲಿ ಪ್ರವಾದಿ(ಸ) ಅವರು ವಫಾತಾದರು. ಎಂದು ಇಬ್ನು ಅಬ್ಬಾಸ್  (ರ)ಅವರು ಹೇಳಿದ್ದಾರೆ.(ಸ್ವಹೀಹ್ ಮುಸ್ಲಿಂ)"
 ಈ ಹದೀಸ್ ಅನ್ನು ಆಧರಿಸಿ ಮೊಹರಂನ ಎಲ್ಲಾ 9ರಂದು ಉಪವಾಸ ಹಿಡಿಯಲು ಸುನ್ನತ್ತಾಗಿದೆ ಎಂದು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ.ಮೊಹರಂ 9ರಂದು ಮತ್ತು ಹತ್ತರೊಂದಿಗೆ 11ರಂದು ಸಹ ಉಪವಾಸ ಹಿಡಿಯಲು ಸುನ್ನತ್ತಾಗಿದೆ. ನೀವು ಆಶುರಾ ದಿನದಂದು ಉಪವಾಸ ಹಿಡಿಯಿರಿ, ಯಹೂದಿಗಳಿಗಿಂತ   ನೀವು ಭಿನ್ನವಾಗಿರಬೇಕು ಮತ್ತು ಹಿಂದಿನ ದಿನ ಮತ್ತು ನಂತರದ ದಿನ ಉಪವಾಸ ಮಾಡಬೇಕು ಎಂದು ಹೇಳುವ ವರದಿಯನ್ನು ಇಮಾಮ್ ಅಹ್ಮದ್ ( ರ) ರವರು ಸಂತಸಪಡಿಸಿದ್ದಾರೆ. (ಇಆನತ್2/266)
ಮೊಹರಂ ಹತ್ತರ ಉಪವಾಸವು ಸುನ್ನತಿನ ಪ್ರಮುಖ ಉಪವಾಸಗಳಲ್ಲಿ ಒಂದಾಗಿದೆ. ಇಬ್ನ್ ಅಬ್ಬಾಸ್ ( ರ) ಹೇಳ್ತಾರೆ:ದಿನಗಳಲ್ಲಿ ಮೊಹರಂ ಹತ್ತರಲ್ಲಿ ಮತ್ತು ತಿಂಗಳುಗಳಲ್ಲಿ ರಂಜಾನಿನ ಲ್ಲಾಗಿದೆ ಪ್ರವಾದಿಯವರು  ಅತ್ಯಂತ ಬಲವಂತದಿಂದ ಉಪವಾಸ ಹಿಡಿಯುವುದಾಗಿ ನಾನು ನೋಡಿದ್ದೇನೆ.(ಸ್ವಹೀಹ್ ಬುಖಾರಿ )
 "ಆಶೂರಾ ದಿನದಂದು  ಕುಟುಂಬಕ್ಕೆ ಸಮೃದ್ಧವಾದ ಆಹಾರವನ್ನು ಕೊಡುವುದು ಬಹಳ ಸದ್ಗುಣ ವಾದ ಕಾರ್ಯವಾಗಿದೆ. ಸಾಮಾನ್ಯವಾಗಿ ಆಹಾರದಲ್ಲಿ ಮಿತಗೊಳಿಸಬೇಕಾಗಿದೆ. ಆದರೆ, ಆತಿಥ್ಯದ ಸಮಯದಲ್ಲಿಯೂ, ಮತ್ತು ವಿಶೇಷ ದಿನಗಳಲ್ಲಿಯೂ, ಆಹಾರವನ್ನು ಸಮೃದ್ಧವಾಗಿ ನೀಡುವುದು ಸುನ್ನತ್ತಾಗಿದೆ.(ತರ್ಶಿಹ್)"
ಆದರೆ ಕೆಲವು ಪ್ರತ್ಯೇಕತಾ ವಾದಿಗಳು ಪವಿತ್ರ ಮೊಹರಂ ತಿಂಗಳ ಆಚರಣೆಗಳಿಗೆ ಕಳಂಕ ತರುವಂತಹ ಚಲನೆಗಳು ಮತ್ತು ಘೋಷಣೆಗಳನ್ನು ಮಾಡಲು ಪ್ರಯತ್ನಿಸುತ್ತಿದ್ದಾರೆ. ಅಂತಹ ಜನರು ಇತಿಹಾಸವನ್ನು ಶಿಲುಬೆಗೆ ಏರಿಸುವ ಮೂಲಕ ಸತ್ಯವನ್ನು ವಿರೂಪಗೊಳಿಸಲು ಪ್ರಯತ್ನಿಸಿದಾಗ, ಸಮಾಜವು ಯಾವುದು ಸರಿ ಮತ್ತು ಯಾವುದು ತಪ್ಪು ಎಂದು  ತಿಳಿಯದೇ ಸಂಶಯ ವ್ಯಕ್ತ ಪಡಿಸುತ್ತದೆ.ಖರ್ಭಾಲದಲ್ಲಿ ಇಮಾಮ್ ಹುಸೇನ್ ರವರ ಹತ್ಯೆಗೆ ಸಂಬಂಧಿಸಿದಂತೆ ವಿಶ್ವದ ವಿವಿಧ ಭಾಗಗಳಲ್ಲಿ ಶಿಯಾಗಳು ಆಯೋಜಿಸಿದ್ದ ಮೊಹರಂ ಆಚರಣೆಗಳಿಗೆ ಯಾವುದೇ ಅಧಿಕೃತ ಪುರಾವೆಗಳು ಅಥವಾ ಬೆಂಬಲಗಳಿಲ್ಲ. ಮೊಹರಂ ಮಾಸಕ್ಕೆ ಕಳಂಕ ತರುವ ಹೊಸ ಆಚರಣೆಗಳಿಗೆ ಬಲಿಯಾಗದಂತೆ ಸಮಾಜ ಎಚ್ಚರ ವಹಿಸಬೇಕು.

Related Posts

Leave A Comment

Voting Poll

Get Newsletter