ಮಲಿಕ್ ಅಲ್ ಮುಝಫ್ಫರ್ : ನೆಬಿ ದಿನ ಆಚರಿಸಿದ ಪ್ರಥಮ ಆಡಳಿತಗಾರ

ಪ್ರವಾದಿ (ಸ) ರವರ ಜನ್ಮದಿನವನ್ನು ಅಧಿಕೃತವಾಗಿ ಆಚರಿಸಿದ ಪ್ರಥಮ ಆಡಳಿತಗಾರ, ಎರ್ಬಿಲಿನ ಆಡಳಿತಗಾರನಾಗಿದ್ದ ಮುಝಫ್ಫರುದ್ದೀನ್ ಅಬೂ ಸಈದ್ ಗೋಕ್ಬೊರಿಯವರಾಗಿದ್ದಾರೆ.ಸುನ್ನೀ ಪಂಡಿತರು ಅವರ ನೆಬಿದಿನಕ್ಕೆ ಸಂಬಂಧಿಸಿದ ಪ್ರಸ್ತಾವನೆಗಳೊಂದಿಗೆ ಉಲ್ಲೇಖಿಸಿದ್ದಾರೆ.

ಇಮಾಮ್ ಸುಯೂತಿ ಮತ್ತು ಇಬ್ನು ಕಸೀರ್ ಇವರನ್ನು ಉಲ್ಲೇಖಿಸಿದ್ದು ಈ ರೀತಿಯಾಗಿದೆ "ಮಹಾನರಾದ ಕುಲೀನರು ಉನ್ನತ ಸ್ಥಾನವಿರುವ ಬಾಧುಷಗಳಲ್ಲಿ ಓರ್ವರಾಗಿದ್ದರು ಮುಝಫ್ಫರುದ್ದೀನ್ ಗೋಕ್ಬೊರಿ. ಗುಣವಂತನಾದ ಅವರು ಖಸಿಯೂನಿನ ಸನ್ನಿಧಿಯಲ್ಲಿ ಅಲ್- ಮುಝಫ್ಫರಿ ಮಸೀದಿಯನ್ನು ಸ್ಥಾಪಿಸಿದರು. "ಅವರು ಫುಖಹಾಗಳನ್ನೂ ಮುಹದ್ದಿಸೀನ್ಗಳನ್ನೂ ಇಷ್ಟಪಡುತ್ತಿದ್ದರು" ಎಂದು ಇಮಾಮ್ ಹಾಫಿದುಝ್ಝಹಬಿ ಉಲ್ಲೇಖಿಸಿದ್ದಾರೆ.ಇದೇ ರೀತಿಯಲ್ಲಿ ಇಬ್ನು ಅಝೀಝ್ ಮುಂತಾದ ಮುಸ್ಲಿಂ ಚರಿತ್ರೆಗಾರರೆಲ್ಲಾ ಇವರನ್ನು ಗುರುತಿಸಿದ್ದಾರೆ.

 ಎಲ್ಲಾ ವರ್ಷವೂ ಅದ್ಭುತಕರವಾದ ರೀತಿಯಿಂದಲೇ ಎರ್ಬಿಲ್ ಪಟ್ಟಣದಲ್ಲಿ ನೆಬಿ ದಿನವನ್ನು ಆಚರಿಸಿಕೊಂಡಿದ್ದರು.ರಬೀಉಲ್ ಅವ್ವಲ್ ತಿಂಗಳಲ್ಲಿ ಪುಣ್ಯಕರ್ಮಗಳಿಗಾಗಿ ರಾಜ ಎರ್ಬಿಲ್  ಅಲ್ ಮುಝಫ್ಫರ್ ರವರು ತನ್ನ ಸಂಪತ್ತುಗಳನ್ನು ಖರ್ಚು ಮಾಡುತ್ತಿದ್ದರು.ವರ್ಷಂಪ್ರತಿ ಸರಿಸುಮಾರು ಮೂರುಸಾವಿರ ದೀನಾರುಗಳನ್ನು ನೆಬಿದಿನಕ್ಕಾಗಿ ಖರ್ಚು ಮಾಡಿಕೊಂಡಿದ್ದರೆಂದು ಚರಿತ್ರಗಾರರು ಉಲ್ಲೇಖಿಸುತ್ತಾರೆ. ಬಗ್ದಾದ್, ಮೌಸಿಲ್ ಮುಂತಾದ ಎರ್ಬಿಲಿನ ನೆರೆಹೊರೆ ಪ್ರದೇಶಗಳಿಂದ ಪಂಡಿತರೂ,ಸೂಫೀವರ್ಯರೂ, ಭಾಷಣಗಾರರೂ,ಕವಿಗಳೂ ಪಟ್ಟಣಕ್ಕೆ ಹರಿದು ಬರುತ್ತಿದ್ದರು.ನೆಬಿದಿನದ ಎರಡು ದಿನ ಮುಂಚೆಯೇ ಪಟ್ಟಣದ ಮೂಲೆಗಳು ಹಾಗೂ ಕೊಟ್ಟಿಗೆಗಳು ಬಲಿ ಮೃಗಗಳಿಂದ ತುಂಬುತ್ತದೆ.ಪಟ್ಟಣವಿಡಿ ಮದ್ಹುಗಳಿಂದ ಮುಳುಗುತ್ತದೆ.ರಬೀಉಲ್ ಅವ್ವಲ್ ಹನ್ನೆರಡರ ದಿನ ಬೆಳಿಗ್ಗೆಯೇ ಪಟ್ಟಣ ಮೈದಾನವು ಜನರಿಂದ ತುಂಬುತ್ತವೆ. ಮದಹ್ ಭಾಷಣಗಳಿಂದಲೂ ಹಾಡುಗಳಿಂದಲೂ ಪಟ್ಟಣ ಬೀದಿಗಳು ಆಕರ್ಷಣೀಯವಾಗುತ್ತದೆ.ಅದೇ ಕಾರ್ಯಕ್ರಮದಲ್ಲಿ ಅನ್ನದಾನವೂ ಬಹಳ ಸಡಗರದಿಂದ ನಡೆಯುತ್ತವೆ.

ಮಲಿಕ್ ಎರ್ಬಿಲ್:

ಪರಿಶುದ್ಧ ಖುದ್ಸಿನ ವಿಮೋಚಕ, ಸ್ವಲಾಹುದ್ದೀನ್ ಅಯ್ಯೂಬಿಯ ಎಲ್ಲಾ ವಿಜಯಗಳೂ ಅವರ ಸಾಮರ್ಥ್ಯ, ಪ್ರಾಪ್ತಿ ಹಾಗೂ ಛಲಗಳಾಗಿರಲಿಲ್ಲ. ಹಾಗೂ ತಂತ್ರಗಳ ಮಾತ್ರ ಫಲಗಳು ಉಂಟಾಗಿರಲಿಲ್ಲ.ಹಲವಾರು ಮುಸ್ತಷೀರುಗಳೊಂದಿಗೆ,ಯುದ್ಧ ತಂತ್ರಜ್ಞಾನಿಗಳೊಂದಿಗೆ, ಸೈನಿಕ ನೇತಾರರುಗಳೊಂದಿಗೆ ನಡೆಸಿದ ಹಲವಾರು ಚರ್ಚೆಗಳಾಗಿದೆ ಅವರ ವಿಜಯಕ್ಕೆ ದಾರಿ ಬಿಟ್ಟದ್ದು.ಆ ರೀತಿಯಲ್ಲಿ ಸ್ವಲಾಹುದ್ದೀನ್ ಅಯ್ಯೂಬಿ ತನ್ನ ಯುದ್ಧ ತಂತ್ರಗಳನ್ನು ಚರ್ಚಿಸುತ್ತಿದ್ದ ಒಬ್ಬ ಸೈನಿಕ ನೇತಾರನೂ ರಾಜ್ಯಪಾಲರೂ ಆಗಿದ್ದ ಮಲಿಕು ಎರ್ಬಿಲ್ ಎಂದೇ ಪ್ರಸಿದ್ಧರಾದ ಮುಝಫ್ಫರುದ್ದೀನ್ ಅಬೂ ಸಈದ್ ಗೋಕ್ಬೊರಿ.

ಗೋಕ್ಬೊರಿ ಜನಿಸಿದರು. ಇಂದಿನ ಉತ್ತರ ಇರಾಖಿನಲ್ಲಾಗಿದೆ ಎರ್ಬಿಲ್ ಪಟ್ಟಣ ಸ್ಥಿತಿ ಗೊಳ್ಳುವುದು."ಗೋಕ್ಬೊರಿ" ಎಂಬ ಪದವು "ನೀಲಿ ತೋಳ" ಎಂದರ್ಥ ನೀಡುವ ಹಳೆಯ ಟರ್ಕಿಷ್ ಪದವಾಗಿದೆ.ಇವರ ಧೀರತೆಯಿಂದ ಹಾಗೂ ಯುದ್ಧ ತಂತ್ರಗಾರಿಕೆಯಲ್ಲಿ ನಿಪುಣನಾಗಿದ್ದರಿಂದ ಈ ಹೆಸರಿನಿಂದ ಪ್ರಸಿದ್ಧ ಪಡೆದರು. ಇರ್ಬಲ್ ರಾಜನಾಗಿದ್ದ ಝೈನುದ್ದೀನ್ ಅಲೀ ಬಿನ್ ಬುಖ್ತುಕೀರ್ ಎಂಬವರು ಇವರ ತಂದೆಯಾಗಿದ್ದರು. ಬಾಲ್ಯಕಾಲದಲ್ಲಿಯೇ ಜ್ಞಾನ ಪಡೆಯಲು, ಸದ್ಗುಣವನ್ನು ರೂಪಿಸಿಕೊಳ್ಳಲು, ಹಾಗೂ ಯುದ್ಧ ತಂತ್ರಗಳನ್ನೂ ಕಲಿಸಿಕೊಡಲು ತಂದೆಯು ಮುಝಫ್ಫರುದ್ದೀನ್ಗೆ ಆರೈಕೆ ಮಾಡಿ ನೇಮಿಸಿದ್ದು ಪ್ರಮುಖ ಪಂಡಿತರನ್ನಾಗಿತ್ತು.

ಹಿಜ್ರ 563 ರಲ್ಲಿ ತನ್ನ ಹದಿನಾಲ್ಕನೇ ವಯಸ್ಸಿನಲ್ಲಿ ತಂದೆ ಮರಣ ಹೊಂದಿದಾಗ ಮುಝಫ್ಫರುದ್ದೀನ್ ಆಡಳಿತಗಾರನಾಗಿ ಸ್ಥಾನಕೇರಿದ್ದರೂ ಕಿರಿಯನಾಗಿದ್ದ ಕಾರಣ ಸ್ವಂತವಾಗಿ ಆಡಳಿತಕ್ಕೆ ಪ್ರಾಪ್ತನಲ್ಲ ಎಂದು ತಿಳಿದುಕೊಂಡು 'ನಾಇಬುಲ್ ಇಮಾರ' ಅಲ್ ಮುಜಾಹಿದುದ್ದೀನ್ ಕೈಮಾಸಿಯವರು ಆಡಳಿತವನ್ನು ನಿರ್ವಹಿಸುತ್ತಿದ್ದರು.ಗುಲಾಮನಾಗಿದ್ದ ಮುಜಾಹಿದುದ್ದೀನಿಗೆ ವಿಮೋಚನೆ ಮಾಡಿದ್ದೂ ಎರ್ಬಿಲ್ ಅರಮನೆಯ ಅಮೀರಾಗಿ ಮಾಡಿದ್ದೂ ಮುಝಫ್ಫರುದ್ದೀನಿನ ತಂದೆ ಝೈನುದ್ದೀನ್ ಅಲಿ ಬಿನ್ ಬುಖ್ತುಕೀರ್ ಆಗಿದ್ದರು.

ಕೆಲವು ವರ್ಷಗಳ ನಂತರ ಮುಝಫ್ಫರುದ್ದೀನ್ ಆಡಳಿತದಲ್ಲಿ ತನ್ನದಾದ ಸಾನಿಧ್ಯವನ್ನು ವ್ಯಕ್ತಪಡಿಸಲಿಕ್ಕಿರುವ ಪ್ರಯತ್ನಗಳನ್ನು ಪ್ರಾರಂಭ ಮಾಡಿದರು.ಅಮೀರ್ ಮುಜಾಹಿದುದ್ದೀನಿನ ಜೊತೆಗಿರುವ ಅಭಿಪ್ರಾಯಬಿನ್ನತೆಗಳು ಶಕ್ತವಾಗುತ್ತಾ ಸಂಭಂದವು ದುಸ್ಥಿತಿಗೆ ತಲುಪಿತು.ಇದರಿಂದ ಮುಜಾಹಿದುದ್ದೀನ್ ಮುಝಫ್ಫರನ್ನು ಸ್ಥಾನಭ್ರಷ್ಟ ಮಾಡಿದನು.ನಂತರ ಸಹೋದರ ಝೈನುದ್ದೀನ್‌ ಯೂಸುಫನ್ನು ಆಡಳಿತಗಾರನಾಗಿ ನೇಮಿಸುತ್ತಾನೆ.ನಂತರ ಸ್ವಲಾಹುದ್ದೀನ್ ಅಯ್ಯೂಬಿಯ ಸಾರಥ್ಯದಲ್ಲಿ ಮುಝಫ್ಫರುದ್ದೀನ್ ಆಡಳಿತವನ್ನು ಮರಳಿ ಪಡೆದರು.

ಅಯ್ಯೂಬಿಯ ನಂಬಿಕಸ್ತ:

ಸ್ಥಾನಭ್ರಷ್ಟ ಮಾಡಿ ಊರಿಂದ ಗಡಿಪಾರು ಮಾಡಲ್ಪಟ್ಟ ಮುಝಫ್ಫರುದ್ದೀನ್ ಮೌಸಿಲಿನ ಅಮೀರ್ ಸೈಫುದ್ದೀನ್ ಗಾಸಿ II ರವರನ್ನು ಸಮೀಪಿಸಿ ಎರ್ಬಿಲಿನಲ್ಲಿ ತನ್ನ ಆಡಳಿತವನ್ನು ಹಿಂತಿರುಗಿ ಪಡೆಯಲು ಸಹಾಯಾಭ್ಯರ್ಥನೆಯನ್ನು ಮಾಡಿದ.ಆದರೆ ಮೌಸಿಲಿನ ಆಡಳಿತಗಾರನು ಅಭ್ಯರ್ಥನೆಯನ್ನು ಕೇಳಿಕೊಳ್ಳದೆ ಇರ್ಬಿಲಿನ ಬದಲಾಗಿ ಹಾರನ್ ಪಟ್ಟಣವನ್ನು ಮುಝಫ್ಫರುದ್ದೀನಿಗೆ ನೀಡಿದನು.

ಹಿಜ್ರ 569 ರಿಂದ 578 ರವರೆಗೆ ಝೆಂಗಿನ ಅಮೀರಿನ ಸನ್ನಿಧಿಯಲ್ಲಿ ಹಾರನಿನ ಅಮೀರಾಗಿ ಮುಂದುವರೆದರು.ಈ ಕಾಲದಲ್ಲಾಗಿತ್ತು ಸ್ವಲಾಹುದ್ದೀನ್ ಅಯ್ಯೂಬಿ ಮಿಸ್ರಿನ ಆಡಳಿತಗಾರನಾಗುವುದು.ಕುರಿಶ್ ಸೇನೆಯೊಡನೆ ಯುದ್ಧಮಾಡಿ ಶಾಮನ್ನು ಮಿಸ್ರನ್ನು ಪರಿಸರ ಪ್ರದೇಶಗಳನ್ನೂ ಒಟ್ಟೂಗೂಡಿಸಿ ಇಸ್ಲಾಮಿಕ ಏಕೀಕರಣ ಎಂಬ ಗುರಿಯೊಂದಿಗೆ ಬೃಹತ್ ಸಾಮ್ರಾಜ್ಯವಾಗಿ ಮಾರ್ಪಡಿಸಿದರು.ಅದೇ ವೇಳೆ ಯುದ್ಧವಿಲ್ಲದೆ ಸಮಾಧಾನದ ಮಾರ್ಗಗಳ ಮೂಲಕ ಹಲವಾರು ದೇಶಗಳ ಆಡಳಿತಗಾರರು ತಮ್ಮ ಸರ್ಕಾರಗಳನ್ನು ಸ್ವಲಾಹುದ್ದೀನ್ ಅಯ್ಯೂಬಿಗೆ ಬಿಟ್ಟುಕೊಟ್ಟರು.ಹಾಗೆಯೇ ಮುಝಫ್ಫರುದ್ದೀನ್ ತನ್ನ ಆಳ್ವಿಕೆಯ ಕೇಂದ್ರವಾದ ಹಾರಾನನ್ನು ಹಾಗೂ ಸಹೋದರ ಝೈನುದ್ದೀನ್ ಯೂಸುಫ್ ಎರ್ಬಿಲನ್ನೂ ಅಯ್ಯೂಬಿಗೆ ಬಿಟ್ಟುಕೊಟ್ಟರು.

ಧೀರನಾದ ಯೋಧ:

ಮೌಸಿಲಿನ ಆಡಳಿತಗಾರನಿಂದ ಮೋಚಿತನಾದ ಮುಝಫ್ಫರುದ್ದೀನ್ ರವರು ಸ್ವಲಾಹುದ್ದೀನ್ ಅಯ್ಯೂಬಿಯ ಸೌಹಾರ್ದ ಪುಟಕದ ಪ್ರಧಾನ ವ್ಯಕ್ತಿಯಾದರು.ಈ ಸಂದರ್ಭದಲ್ಲಿ ಮುಝಫ್ಫರುದ್ದೀನಿಗೆ ಕುರಿಶು ಸೇನೆಯ ವಿರುದ್ಧವಾಗಿ ಯುದ್ಧ ಮಾಡಲು ಅವಕಾಶ ಲಭಿಸಿತು.ರಣಾಂಗಣದಲ್ಲಿರುವ ಮುಝಫ್ಫರುದ್ದೀನಿನ ಯುದ್ಧ ತಂತ್ರಗಳಿಂದಲೂ ಧೀರತೆಯಿಂದಲೂ ಆಕರ್ಷಿತನಾದ ಸ್ವಲಾಹುದ್ದೀನ್ ಅಯ್ಯೂಬಿ ತನ್ನ ಸಂಬಂಧವನ್ನು ಸದೃಢಪಡಿಸಲು ತನ್ನ ಸಹೋದರಿ ರಬೀಆ ಖಾತೂನನ್ನು ಮುಝಫ್ಫರುದ್ದೀನಿಗೆ ಮದುವೆ ಮಾಡಿಕೊಟ್ಟನು.

ಹಿಜ್ರ 580 (ಎ.ಡಿ. 1 184)ರಲ್ಲಿ ಫ್ರಾಂಗ್ ಸೇನಾಧಿಪತಿಯಾದ ರೊನಾಲ್ಡನ್ನು ಸೋಲಿಸಿ ಜೋರ್ಡಾನಿನ ಕರಕ್ ಕೋಟೆಯಲ್ಲಿ ಸ್ವಲಾಹುದ್ದೀನ್ ಅಯ್ಯೂಬಿಗೆ ವಿಜಯ ಪ್ರಾರಂಭವಾಯಿತು.ನಂತರ ಎಲ್ಲಾ ಯುದ್ಧ ವಿಜಯಗಳಲ್ಲಿಯೂ ಸ್ವಲಾಹುದ್ದೀನ್ ಅಯ್ಯೂಬಿಯ ಜೊತೆಗೆ ಮುಝಫ್ಫರುದ್ದೀನ್ ನಿರ್ಣಾಯಕವಾದ ಪಾತ್ರವಹಿಸಿದರು.ಸ್ವಲಾಹುದ್ದೀನ್ ಅಯ್ಯೂಬಿ ಖುದುಸ್ ಹಿಂತಿರುಗಿ ಪಡೆದ ಚರಿತ್ರೆ ಪ್ರಸಿದ್ಧವಾದ ಹಿತ್ತೀನ್ (ಎ.ಡಿ. 1187) ಯುದ್ಧದಲ್ಲಿ ಮೌಸಿಲಿನಿಂದಲೂ ಹಾಗೂ ಅರೇಬಿಯಾದಿಂದಲೂ ಸೇನೆಗಳನ್ನು ಮುನ್ನಡೆಸಲಿಕ್ಕಿರುವ ಜವಾಬ್ದಾರಿ ಮುಝಫ್ಫರುದ್ದೀನಿಗಾಗಿತ್ತು.ಆ ಯುದ್ಧದಲ್ಲಿ ಸ್ವಲಾಹುದ್ದೀನ್ ಅಯ್ಯೂಬಿಯ ಸಂಘವು ಕುರಿಶ್ ಸಂಘದ ವಿರುದ್ಧವಾಗಿ ಉನ್ನತವಾದ ವಿಜಯವನ್ನು ಪಡೆಯಿತು.

ಯುದ್ಧ ತಂತ್ರಗಳನ್ನು ಹಾಕುವುದರಲ್ಲಿ ಪ್ರಸಿದ್ಧನಾದ ಮುಝಫ್ಫರುದ್ದೀನಿನ ಬುದ್ಧಿಯಲ್ಲಿ ಒಂದು ವಿಚಿತ್ರ ಚಿಂತೆ ಹೊಳೆಯಿತು.ಯುದ್ಧ ಮೈದಾನದಲ್ಲಿ ಶತ್ರು ಪಕ್ಷದ ಸುತ್ತಲೂ ಇರುವ ಕಾಡಿನ ಹುಲ್ಲುಗಾವಲಿಗೆ ಬೆಂಕಿ ಹಾಕುವುದು, ಅದರಿಂದ ಉಂಟಾಗುವ ಹೊಗೆ ಕಾರಣದಿಂದಾಗಿ ಶತ್ರುಗಳು ಯುದ್ಧದಿಂದ ಅಶ್ರದ್ಧರಾಗುತ್ತಾರೆ.ಇದು ಅವರ ವಿಜಯಕ್ಕೆ ಕಾರಣವಾಗುತ್ತದೆ.

ಸೇವೆಯ ರಂಗ:

ಅಂಗವಿಕಲರಿಗೂ ಹಾಗೂ ಇತರ ಕಾರಣಗಳಿಂದ ಸಮೂಹದಿಂದ ದೂರ ಮಾಡಲ್ಪಟ್ಟ ಜನರ ವಿಭಾಗಕ್ಕೂ, ಕುಟುಂಬವಿಲ್ಲದೆ ಒಬ್ಬಂಟಿಯಾಗಿ ಜೀವಿಸುವವರಿಗೂ, ವ್ಯತ್ಯಸ್ಥ ರೋಗಗಳಿಂದ ಬಳಲುತ್ತಿರುವವರಿಗೂ ಮುಝಫ್ಫರುದ್ದೀನ್ ಎಂದೆಂದಿಗೂ ಆಶ್ರಯವಾಗಿದ್ದರು. ಅವರಿಗೆ ಪ್ರತ್ಯೇಕವಾದ ವಾಸ ಸ್ಥಳಗಳನ್ನು ಸಿದ್ಧಪಡಿಸಿದರು. ಅವರಿಗೆ ಅಗತ್ಯ ವಸ್ತು ಸಾಮಾಗ್ರಿಗಳನ್ನು ತಲುಪಿಸಲು ವ್ಯವಸ್ಥೆ ಮಾಡಿದರು. ವಾರದಲ್ಲಿ ಎರಡು ಬಾರಿ ಮುಝಫ್ಫರುದ್ದೀನ್ ಇಂತಹ ಜನರನ್ನು ಸಂದರ್ಶಿಸಿ, ಅವರೊಂದಿಗೆ ಕುಶಲೊಪರಿ ನಡೆಸಿ ಅವರ ತಮಾಷೆಗಳಲ್ಲಿ ಸೇರಿಕೊಂಡಿದ್ದರು.

ಕುರುಶಿಯ ಸೇನಾಧಿಪತಿಗಳು ಬಂಧಿಯಾಗಿಸಿದವರ ಕುಟುಂಬಗಳಿಗೆ ಪ್ರತ್ಯೇಕವಾದ ಪರಿಗಣನೆಯನ್ನು ಕೊಟ್ಟಿದ್ದರು. ಬಂಧಿಗಳನ್ನು ಮೋಚಿಸಲು ನಿರಂತರವಾಗಿ ದೂತರನ್ನು ಕಲಿಸಿಕೊಳ್ಳುತ್ತಿದ್ದನು.ಅವನು ಈ ವಿಷಯದಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸಿದ ಫಲವಾಗಿ 60,000 ಬಂಧಿಗಳನ್ನು ಕುರಿಶ್ ಸೇನಾಧಿಪತಿಗಳಿಂದ ರಕ್ಷಪಡಿಸಲು ಸಾಧ್ಯವಾಯಿತು ಎಂದು ಚರಿತ್ರೆ ರೇಖೆಗಳು ಸಾಕ್ಷಿ ಪಡಿಸುತ್ತದೆ.ಮತ್ತು ಇತರ ಉದ್ದೇಶಗಳಿಂದಾಗಿ ಬರುವ ಜನರನ್ನು ಸ್ವೀಕರಿಸಲಿಕ್ಕೂ ಅವರಿಗೆ ತಂಗಲು ಒಂದು ಅತಿಥಿ ಮಂದಿರವನ್ನು ಸ್ಥಾಪಿಸಿದರು.ಬಡವರಾದ ಯಾತ್ರಿಕರಿಗೆ ಯಾತ್ರಾ ವೆಚ್ಚಗಳನ್ನು ನೀಡಿ ಮರಳಿ ಕಲುಹಿಸುತ್ತಿದ್ದರು.

ಮುಝಫ್ಫರುದ್ದೀನಿನ ಸಹಾಯದ ಮನಸ್ಸು ಮಕ್ಕಾದಲ್ಲೂ ಮದೀನಾದಲ್ಲೂ ಹರಡಿತು.ಮೂವತ್ತು ಸಾವಿರ ದೀನಾರ್ ಬೆಲೆಯಿರುವ ಆಹಾರ ಪದಾರ್ಥಗಳೂ ಉಡುಪುಗಳೂ ಹೊಂದಿರುವ ಕಾಫಿಲಗಳನ್ನು ಎಲ್ಲಾ ವರ್ಷವೂ ಅವರು ಹರಮೈನಿಗೆ ಕಳುಹಿಸಿ ಕೊಡುತ್ತಿದ್ದರು. ಮಕ್ಕಾ ಮದೀನದ ನಿವಾಸಿಗಳನ್ನು ಸಂದರ್ಶಿಸುವನು. ಪ್ರತ್ಯೇಕವಾಗಿ ಹಜ್ಜ್ ತಿಂಗಳುಗಳಲ್ಲಿ ಅನುಭವಿಸುತ್ತಿದ್ದ ಜಲ ಲಭ್ಯತೆಯ ಕೊರತೆಯನ್ನು ಪರಿಹರಿಸಲು ಎರಡು ಪಟ್ಟಣಗಳಲ್ಲೂ ದೊಡ್ಡ ಜಲಸಂಭರಣಿಯನ್ನು ಸ್ಥಾಪಿಸಿದನು.

ವಫಾತ್:

ಸರಾಸರಿ ಅರ್ಧಶತಕಗಳ ಕಾಲ ಎರ್ಬಿಲ್ ಪಟ್ಟಣವನ್ನು ಆಳ್ವಿಕೆ ಮಾಡಿದ ಮುಝಫ್ಫರುದ್ದೀನ್ 80- ನೇಯ ವಯಸ್ಸಿನಲ್ಲಾಗಿದೆ ಮರಣ ಹೊಂದುವುದು.

ಹಿಜ್ರ 630 (ಎ. ಡಿ. 1233)ರಲ್ಲಿ ರಮದಾನ್ ತಿಂಗಳು ಎಂಟನೇ ದಿನ ಮುಝಫ್ಫರುದ್ದೀನ್ ಈ ಲೋಕದಿಂದ ಮರೆಯಾದರು.ಮೂರು ವರ್ಷಗಳ ನಂತರ 1236 ರಲ್ಲಿ ಮಂಗೋಳಿಯನ್ ಸೇನೆಯು ಎರ್ಬಿಲಿನಲ್ಲಿ ಲೂಟಿ ಮಾಡಿದರು. ಆದರೆ ಅವರಿಗೆ ಕೋಟೆಯನ್ನು ವಶಪಡಿಸಲು ಸಾಧಿಸಲಿಲ್ಲ.1258 ರಲ್ಲಿ ಎರ್ಬಿಲ್ ಪಟ್ಟಣವು ಮಂಗೋಳಿಯನ್ ಜನರಲ್ ಬೈಜು ನೋಯನ್ ರವರ ಅಧೀನದಲ್ಲಾಯಿತು.

ಮಕ್ಕಾದಲ್ಲಿ ದಫನ್ ಮಾಡಬೇಕು ಎಂದಾಗಿತ್ತು ಮುಝಫ್ಫರುದ್ದೀನಿನ ವಸಿಯ್ಯತ್ ಆ ವಸಿಯ್ಯತನ್ನು ಸರಿಸಿಕೊಂಡು ಜನಾಝದೊಂದಿಗೆ ಮಕ್ಕಾಗೆ ಹೊರಟರೂ, ದಾರಿ ಮಧ್ಯೆಯಿದ್ದ ತಡೆಗಳಿಂದ ಕೊನೆಗೆ ಕೂಫಾದಲ್ಲಿ ಅಲಿ (ರ) ರವರ ಮಕ್ಬರದ ಸಮೀಪದಲ್ಲಿ ದಫನ್ ಮಾಡಲಾಯಿತು.ಆ ಪ್ರವಾಧಿ ಪ್ರೇಮಿಯ ಜೊತೆಗೆ ಅಲ್ಲಾಹು ನಮ್ಮನ್ನೂ ಸ್ವರ್ಗ ಲೋಕದಲ್ಲಿ ಒಂದುಗೂಡಿಸಲಿ- ಆಮೀನ್

 

                                                                                                                                          ಅಖ್ದಂ ಶಾಹಿಲ್,ಸುಳ್ಯ 

 

Related Posts

Leave A Comment

Voting Poll

Get Newsletter