ಮುದ್ದುಕಂದಮ್ಮಗಳ ಕೊಂದವರಿಗೆ ಅದ್ಯಾವ ಧರ್ಮ..??
urlಕೆ.ಎಂ.ಎ. ಕೊಡುಂಗಾಯಿ ಫಾಝಿಲ್ ಹನೀಫಿ ಖಂಡಿತವಾಗಿಯೂ ನಿಮ್ಮ ರಕ್ತ, ನಿಮ್ಮಮಾನ, ನಿಮ್ಮಸೊತ್ತು ನಿಷಿದ್ಧವಾಗಿದೆ. ಈ ದಿನದ ಹಾಗು ಸ್ಥಳದ ಪಾವಿತ್ರ್ಯತೆಯನ್ನು ಕಾಪಾಡುವ ರೀತಿಯಲ್ಲಿ ಅವುಗಳನ್ನು ಕಾಪಾಡಬೇಕು ಮತ್ತು ಸಂರಕ್ಷಿಸಬೇಕು ಹಾಗಂತ ಪ್ರವಾದಿಮುಹಮ್ಮದ್ ಮುಸ್ತಫಾ (ಸಲ್ಲಲ್ಲಾಹುಅಲೈಹಿವಸಲ್ಲಂ) ರವರು ತಮ್ಮ ಐತಿಹಾಸಿಕ ಹಜ್ಜತುಲ್ ವಿದಾಹ್ ಭಾಷಣ (ವಿದಾಯಭಾಷಣ)ದಲ್ಲಿ ಪವಿತ್ರ ದಿನ ಹಾಗು ಪವಿತ್ರ ಕಬಾ ನೆಲೆನಿಂತ ಸ್ಥಳವನ್ನು ಸಾಕ್ಷಿಯಾಗಿಸಿ ಜಗತ್ತಿಗೆ ಕರೆ ನೀಡಿದರು. ನಿಜಹೇಳಬೇಕೆಂದರೆ ಪ್ರವಾದಿ ಜಗತ್ತಿಗೆ ನೀಡಿದ ಕರೆ ಒಂದರ್ಥದಲ್ಲಿ ಅದೊಂದುಎಚ್ಚರಿಕೆಯ ಕರೆಗಂಟೆಯಾಗಿತ್ತು. ಸ್ವಸ್ಥ ಸಮಾಜ ಬಲಿಷ್ಠ ಶಾಂತಿಯುತ ಜಗತ್ತು ಕಟ್ಟುವಉಮೇದಿ, ಹಪಹಪಿ, ದೂರದೃಷ್ಟಿ, ಕನಸುಎಲ್ಲವೂಆಘೋಷಣೆಯಲ್ಲಿಅಡಕವಾಗಿರುವುದೆಂದುಸರಾಸರಿಮನಸ್ಸಿಗೆತಿಳಿಯುವಸತ್ಯ. ನೆತ್ತರು, ಮಾನ, ಸೊತ್ತುಈಮೂರುಪರಸ್ಪರಭದ್ರವಾಗಿಸಂರಕ್ಷಿಸಲ್ಪಟ್ಟಾಗಅಲ್ಲಿಶಾಂತಿ, ಪ್ರೀತಿ, ನ್ಯಾಯ, ನೀತಿ, ಕರುಣೆ, ಅನುಕಂಪಎಲ್ಲವೂನೆಲೆಸುತ್ತದೆ. ಕೋಪತಾಪ, ಹಗೆ, ವೈರ, ಅಸೂಯೆಮೊದಲಾದದುಷ್ಟಸಂಗತಿಗಳುಹೇಳಹೆಸರಿಲ್ಲದಂತೆಗಂಟುಮೂಟೆಕಟ್ಟುತ್ತದೆ. ಎಲ್ಲಿ ಆಮೂರು ಸಂಗತಿಗಳಿಗೆ ಅಪಾಯ ಎದುರಾಗುತ್ತೋ ಅಂದುಎಲ್ಲೆಡೆ ಶಾಂತಿಮರೀಚಿಕೆಯಾಗುತ್ತದೆ. ಅನ್ಯಾಯ, ಅಕ್ರಮ, ಕೊಲೆ, ಸುಲಿಗೆ, ಹಿಂಸೆ, ದ್ವೇಷ, ಎಲ್ಲವೂ ನರ್ತಿಸತೊಡಗುತ್ತದೆ. ಏಕೆಂದರೆ ಒಬ್ಬನ ಹಕ್ಕನ್ನು ಕಸಿದುಕೊಳ್ಳುವ ಕುತಂತ್ರಕ್ಕೆ ಇನ್ನೊಬ್ಬಕೈಹಾಕಿದಾಗ ಅಲ್ಲಿಘರ್ಷಣೆ, ಶೋಷಣೆ, ಎಗ್ಗಿಲ್ಲದೆನಡೆಯುತ್ತದೆ. ಆಗ ಮನುಷ್ಯಶಾಂತಿ, ಪ್ರೀತಿ, ನ್ಯಾಯ-ನೀತಿಯ ಬದುಕಿನ ರೀತಿಗೆ ಇತಿಶ್ರೀಹಾಡಿಬಿಡುತ್ತಾನೆ. ಎಲ್ಲಡೆ ಭಯ, ಭೀತಿ, ಆವರಿಸಿಕೊಂಡುಹತ್ತುಹಲವುಅನಾಹುತಗಳುಎದುರಾಗುತ್ತವೆ. ಎಲ್ಲೆಡೆಮನುಷ್ಯತ್ವ, ಮಾನವೀಯತೆಎಂಬುವುದು ಸಂಪೂರ್ಣ ಮಾಯವಾಗಿ ಅಮಾನುಷ, ರಾಕ್ಷಸೀಕೃತ್ಯಗಳೇ ಮೇಳೈಸುತ್ತದೆ. ಅದೇಕಾರಣಕ್ಕೆನೋಡಿಪವಿತ್ರಧರ್ಮದಶಾಂತಿ, ಸತ್ಯ, ಸನ್ಮಾರ್ಗದಸಂದೇಶವಾಹಕರಾಗಿಬಂದಅಂತಿಮಪ್ರವಾದಿಯವರುತಮ್ಮಅಂತಿಮಭಾಷಣದಲ್ಲಿಪ್ರೀತಿ, ಕರುಣೆಗೆನೆಲೆ ಸಿಗುವ ಶಾಂತಿಯಹಕ್ಕಿಗಳು ಜಗತ್ತಿನಾದ್ಯಂತ ಹಾರಾಡುವ ಸನ್ನಿವೇಶ ನಿರ್ಮಾಣ ಮಾಡಲು ಮಾನವಹಕ್ಕಿನಸಂರಕ್ಷಣೆಗೆ ಕರೆ ನೀಡಿದರು. ಇಷ್ಟಕ್ಕೂಕಟ್ಟಕಡೆಯಪ್ರವಾದಿಯವರಕಟ್ಟಪ್ಪಣೆಅದೆಷ್ಟುಜಗತ್ತಿಗೆಜರೂರತ್ತೆಂದುಮಾನವ, ಪ್ರತಿಷ್ಟೆ ಬಿಟ್ಟು ಚಿಂತನೆಗೆ ಹಚ್ಚಿಬಿಟ್ಟರೆ ಖಂಡಿತಾ ಜಗತ್ತು ಇಂದುಎಲ್ಲ ತೆರನಾದ ಕಷ್ಟನಷ್ಟಗಳಿಗೂ ಗಂಟುಮೂಟೆ ಕಟ್ಟಿ ಶ್ರೇಷ್ಟ, ಬಲಿಷ್ಟ ಸಮಾಜ ಕಟ್ಟಲು ಸಾಧ್ಯ ಎಂಬಸತ್ಯ ಹಗಲಿನ ಸೂರ್ಯನಷ್ಟೇ ಸ್ಪಷ್ಟ. ಅಷ್ಟಕ್ಕೂ ಜಗತ್ತಿನಲ್ಲಿ ಸಮಸ್ಯೆಗಳು ನಮ್ಮ ಜನರಿಗೂ ಸಿಗದಷ್ಟುತುಂಬಿರಬಹುದು. ಆದರೆಮನುಷ್ಯನ ನೆತ್ತರು, ಮಾನ, ಸೊತ್ತುಈಮೂರುಪರಸ್ಪರಸಂರಕ್ಷಿಸಲ್ಪಟ್ಟಾಗಎಲ್ಲೆಡೆಪ್ರೀತಿ, ನಂಬಿಕೆ ಮೂಡಿದಾಗ ಎಲ್ಲಸಮಸ್ಯೆಗಳೂ ತನ್ನಿಂತಾನೆ ಇಲ್ಲವಾಗಿಬಿಡುತ್ತದೆ. ಒಬ್ಬ ವ್ಯಕ್ತಿ ತನ್ನ ಹಕ್ಕನ್ನು ನ್ಯಾಯಯುತವಾಗಿ ಪಡೆದು ಸಂಭಂಧಗಳಲ್ಲಿ ಗೌರವಸಿಕ್ಕಿ ಇತರರಿಂದ ಅಪಮಾನಿನಾಗುವ ಇಲ್ಲವೇ ಅನ್ಯಾಯ, ಅಕ್ರಮಕ್ಕೊಳಗಾಗುವ ಪ್ರಮೇಯವೇ ಬಾರದಿದ್ದಾಗ ಅಕ್ರಮ, ಹಿಂಸೆಗಳು ಭುಗಿದೇಳಲು ಅಸಾಧ್ಯ. ಅದೇ ಸಂಧರ್ಬ ಅದಕ್ಕೆ ವಿರುಧ್ಧವಾಗಿ ಯಾವಾಗ ಪರಿಸ್ಥಿತಿಬದಲಾಗುತ್ತದೆಯೋ ಆಗಅಶಾಂತಿಯ ಸನ್ನಿವೇಶ ನಿರ್ಮಾಣವಾಗುತ್ತದೆ. ಹಿಂಸೆಗಳುಭುಗಿಲೇಳುತ್ತದೆ. ಆಗ ಅಲ್ಲಿ ಎಲ್ಲಾಸಮಸ್ಯೆಗಳೂ ಸುರುಳಿ ಸುರುಳಿಯಾಗಿ ಎಡೆಬಿಚ್ಚಿಕೊಳ್ಳುತ್ತವೆ. ಅಷ್ಟಕ್ಕೂಇಂದುಮನುಷ್ಯವೈಜ್ಞಾನಿಕವಾಗಿಪ್ರಗತಿಯನಾಗಲೋಟದಲ್ಲಿರಬಹುದುಆದರೆಪರಸ್ಪರಪ್ರೀತಿ, ಕರುಣೆ, ಇತರರಿಗೆ ನೆರವಾಗುವ ಹೃದಯ ಸಂವೇದನೆಯೆಂಬುವುದು ಮಾತ್ರ ಮರೆತುಬಿಟ್ಟಿದ್ದಾನೆ. ಹಾಗೆನೋಡಿದರೆ ಮನುಷ್ಯನ ಒಳಿತಿಗಾಗಿ ಹಾಗು ಸ್ಪಸ್ಥಸಮಾಜದ ನಿರ್ಮಾಣಕ್ಕಾಗಿಯೇ ಇರುವ ಧರ್ಮದ ಹೆಸರಿನಲ್ಲೇ ಇಂದುಹಿಂಸೆಗಳುನಡೆಯುತ್ತದೆ. ಅಶಾಂತಿನಿರ್ಮಾಣವಾಗುತ್ತದೆ ಎಂದರೆಅದೆಂಥ ವಿಪರ್ಯಾಸ ಹೇಳಿ. ಅಲ್ಲ, ಯಾವ ಧರ್ಮ ಹಿಂಸೆಯನ್ನು ಭೋಧಿಸಿದೆ? ಯಾವಧರ್ಮ ಪರ ಧರ್ಮದ್ವೇಷವನ್ನು ಕಲಿಸಿಕೊಟ್ಟಿದೆ ಹೇಳಿ?. ಹಾಗಾದರೆ ಮನುಷ್ಯ ಧರ್ಮದ ಶಾಂತಿಯ ತಿರುಳಿನಿಂದ ದೂರ ಸಾಗಿ ಧರ್ಮಾಚರಣೆಯಿಂದ ಮುಕ್ತನಾಗಿ ಕೇವಲ ನಾಮಧಾರಿಯಾಗಿ ಮಾರ್ಪಟ್ಟದ್ದಾನೆ ಎಂದಲ್ಲವೇಅರ್ಥ. ಧರ್ಮದ ಹೆಸರಿನಲ್ಲಿ ನಡೆಯುವ ಕೋಮುವಾದ, ಉಗ್ರವಾದ, ಭಂಯೋತ್ಪಾದನೆ ಹೀಗೆ ಏನೇಇರಲಿ ಈಎಲ್ಲಾ ದುಷ್ಕೃತ್ಯಗಳನ್ನು ಸರ್ವರೂ ವಿರೋಧಿಸಬೇಕಿದೆ. ಏಕೆಂದರೆ ಹಿಂಸೆ ಧರ್ಮವಾಗಲು ಸಾಧ್ಯವೇ ಇಲ್ಲ. ಸ್ವಸ್ಥ ನಾಡು, ಸಮಾಜದನಿರ್ಮಾಣಕ್ಕೆಯೇ ಧರ್ಮವಿರುವುದು. ಅಂತಲೇಮೊನ್ನೆನೆರೆಯಪೇಶಾವರದಶಾಲೆಯಲ್ಲಿದಾಳಿನಡೆಸಿನೂರಮೂವತ್ತೆರಡುಎಳೆಯಮಕ್ಕಳಸಹಿತನಾಗರಿಕರನ್ನುಮಾರಣಹೋಮನಡೆಸಿದಉಗ್ರವಾದಿಗಳನ್ನುಏನೆಂದುಕರೆಯಬೇಕು? ಕ್ರೂರ, ಹೇಯ, ರಾಕ್ಷಸೀಕೃತ್ಯಗಳನ್ನುನಡೆಸಿನಮ್ಮನೋವುಅವರಿಗೂಅರ್ಥವಾಗಲೀಎಂದುಹೇಳಿಕೊಂಡರಲ್ಲಾ, ಅಲ್ಲ, ಯಾರಿಗೆಅರ್ಥವಾಗಲೀ? ಎಳೆಯ ಕಂದಮ್ಮಗಳಿಗಾ? ತಮ್ಮಮೇಲಿನ ಸೇನಾದಾಳಿಗೆ ಪ್ರತಿಕಾರ ಎನ್ನುವ ಇವರ ಮನಸ್ಥಿತಿ ಎಂತಹದ್ದುಹೇಳಿ?. ಅಷ್ಟಕ್ಕೂಹಿಂಸೆಗೆಹಿಂಸೆಪ್ರತಿಕಾರವೇ? ಯಾವ ಧರ್ಮ ಅಂತಹದ್ದು ಕಲಿಸಿಕೊಡುತ್ತದೆ? ಅನಿರೀಕ್ಷಿತವಾಗಿ ಮೇಲೆರಗಿದ ರಾಕ್ಷಸಿಗಳಿಗೆ ಬೆಂಚು, ಕುರ್ಚಿ, ಮೇಜು, ಡೆಸ್ಕುಗಳ ಕೆಳಗೆ ಅಡಗಿಸಿಕೊಂಡ ಎಳೆಯಮಕ್ಕಳನ್ನು ಬೆದರಿಸಿ ಒಡಲುಗಳಿಗೆ ಗುಂಡುಗಳನ್ನು ಸಿಡಿಸಿ ಹಾಲುಗಳ್ಳದ ಕಂದಮ್ಮಗಳನ್ನು ಕೊಂದು ಮುಗಿಸಿದರಲ್ಲಾ, ಮರಣದಿಂದ ತಪ್ಪಿಸಿಕೊಳ್ಳಳು  ಓಡಿದ ಹಸುಳೆಗಳನ್ನು ಬೆನ್ನಟ್ಟಿಕೊಂದರಲ್ಲ ಇಂತಹಾ ಕ್ರೂರಹೃದಯಗಳಿಗೆ ಕರುಣೆ ಭೋಧಿಸಿದ ಪವಿತ್ರ ಧರ್ಮಗಳ ಹೆಸರು ಹೇಳಲು ಯಾವಹಕ್ಕಿದೆ ಹೆಳಿ? ಇಷ್ಟಕ್ಕೂಕೇವಲಇದೊಂದಕ್ಕೆಸೀಮಿತವಲ್ಲ. ಇರಾಕ್, ಅಫ್ಘನ್, ಪ್ಯಲೆಸ್ತೀನ್‌ಗಳಲ್ಲಿ ಮಕ್ಕಳು, ಮಹಿಳೆಯರೆನ್ನದೆ, ನಾಗರಿಕ ಮಾರಣಹೋಮನಡೆಯುತ್ತದೆಯಲ್ಲ, ಇವೆಲ್ಲವೂ ಪೈಶಾಚಿಕ ಕೃತ್ಯಗಳೆ. ಅವುಗಳನ್ನೂ ಖಂಡಿಸಬೇಕಾಗಿದೆ. ಇನ್ನು ಧರ್ಮದ ಹೆಸರಿನಲ್ಲಿ ಕೋಮುಗಲಭೆ ಹುಟ್ಟು ಹಾಕಲು ಯಾರೇ ಪ್ರಯತ್ನಿಸಿದರೂ ಅದುಖಂಡನೀಯ. ಕೋಮುವಾದ-ಉಗ್ರವಾದ ಈಎರಡೂ ವೈರಸ್‌ಗಳೇ ಆಗಿದೆ. ಅಂಥದ್ದಕ್ಕೆ ಧರ್ಮದ ಬಣ್ಣ ಲೇಪಿಸದೆ ಸರ್ವರೂ ಖಂಡಿಸಬೇಕಾಗಿದೆ. ಏಕೆಂದರೆ ಧರ್ಮದಲ್ಲಿ ಅಂಥದ್ದಕ್ಕೆ ಛಾನ್ಸ್ಇಲ್ಲ. ಅಂತಲೇ ಯಾರೋ ಅಂಥತಪ್ಪುಗಳನ್ನು ಮಾಡಿದರೆ ಆಹೆಸರಿನಲ್ಲೇ ಧರ್ಮಗಳನ್ನು ದ್ವೇಷಿಸುವುದು ಸಲ್ಲದು. ಅದಿರಲಿ, ಅನ್ಯಾಯ, ಅಕ್ರಮ, ಹಿಂಸೆಕಾಳಗದಲ್ಲಿ ತೊಡಗಿ ಅಂದಾಕಾರದಲ್ಲಿ ಮಳುಗಿದ್ದ ಜನರನ್ನು ಕೇವಲಇಪ್ಪತ್ತಮೂರುವರ್ಷಗಳಅವಧಿಯಲ್ಲಿಸತ್ಯ, ಶಾಂತಿ, ಪ್ರೀತಿಭೋದಿಸಿಮಾದರಿನಡೆನುಡಿಯಮೂಲಕಬದಲಿಸಿಉತ್ತಮಸಮಾಜವಾಗಿಕಟ್ಟಿದಪ್ರವಾದಿಮುಹಮ್ಮದ್ಮುಸ್ತಫಾ (ಸ.ಅ) ರವರ ಜನ್ಮಜಯಂತಿ ರಬೀವುಲ್ ಅವ್ವಲ್ ಮತ್ತೆ ಬಂದು ನಿಂತಿರುವ ಈ ಟೈಮಲ್ಲಿ ಪ್ರವಾದಿಯವರ ಶಾಂತಿಪ್ರೀತಿಯ ಸರ್ವಕಾಲಿಕ ಸಂದೇಶ ಜಗತ್ತಿಗೆ ಶಾಂತಿಯ ಬೆಳಕುನೀಡಲಿ, ಕೋಮುವಾದ, ಉಗ್ರವಾದ, ಭಯೋತ್ಪಾದನೆಅಳಿದುಸುಂದರ, ಸ್ವಸ್ಥಜಗತ್ತುನಿರ್ಮಾಣವಾಗಲಿಎಂದುಆಶಿಸೋಣ.

Related Posts

Leave A Comment

Voting Poll

Get Newsletter