ಅಪರಾಧಿಗಳನ್ನು ಬೆಳೆಸುವ ಕಾನೂನು???
INDIA-FLAG-LAW-JUSTICE- ಸಂದ್ಯಾ ವೇಳೆ ಕೂಲಿ ಕೆಲಸ ಮುಗಿಸಿಕೊಂಡು ಮನೆಗೆ ಬರುತ್ತಿದ್ದ ಸೊಮಣ್ಣನಿಗೆ ಮನೆ ತಲುಪಿದಾಗ ಕಂಡ ದೃಶ್ಯ ತಂದೆಯೊಬ್ಬನಿಗೆ ಕಂಡು ಸುಮ್ಮನಿರಲಾಗದ ಪರಿಯಾಗಿತ್ತು. ಮನೆಯಲ್ಲಿದ್ದ ತನ್ನಿಬ್ಬರು ಹೆಣ್ಮಕ್ಕಳನ್ನು ಬಲಾತ್ಕಾರ ಮಾಡಲೆತ್ನಿಸುತ್ತಿರುವ ಇಬ್ಬರು ಪೋರರು. ಸೋಮಣ್ಣನಿಗೆ ಕೋಪ ನೆತ್ತಿಗೇರಿ ಮಾಡುವುದೇನೆಂದು ತೋಚಲಿಲ್ಲ. ಆತ ಅತ್ತಿತ್ತ ನೋಡಿ ಅಲ್ಲೇ ಬಿದ್ದಿದ್ದ ಮರದ ತುಂಡೊಂದ್ದನ್ನು ಕೈಗೆತ್ತಿಕೊಂಡು  ಪೋರರ ಶಿರಕ್ಕೆ ಹೊಡೆದೇ ಬಿಡುತ್ತಾನೆ. ಶಕ್ತಿಯಾದ ಹೊಡೆತ ಪೋರರನ್ನು ಶವವಾಗಿಸಿ ನೆಲಕ್ಕುರುಳಿಸುತ್ತದೆ. ಸೋಮಣ್ಣ ಈ ರೀತಿ ಮಾಡದಿರುತ್ತಿದ್ದರೆ ಅಲ್ಲಿ ಹಾಳಾಗಿ ಹೋಗುವುದು ತನ್ನಿಬ್ಬರು ಕರುಳ ಕುಡಿಗಳ ಬಾಳು......... ಕಾನೂನಿನ ಮುಂದೆ ಈಗ ಆ ತಂದೆ ಒಬ್ಬ ಕೊಲೆಗಾರ! ಆತನ ಬಂಧನವಾಗುತ್ತದೆ. ಹತ್ತು ಹದಿನೈದು ವರುಷಗಳ ಕಾಲ ಜೈಲು ಶಿಕ್ಷೆ ಪ್ರಖ್ಯಾಸಲ್ಪಡುತ್ತದೆ. ಜೈಲು ಕಂಬಿಗಳ ಮುಂದೆ ನಂತರದ ದಿನಗಳು, ಕಳೆಯ ಬೇಕಾಗಿ ಬರುತ್ತದೆ. ಇದು ಆತನಡೆಸಿದ ಕೊಲೆಗೆ ತಕ್ಕ ಶಿಕ್ಷೆಯೆಂದು ಬೇಕಿದ್ದರೆ ಹೇಳಬಹುದು. ಆದರೆ ಆ ತಂದೆಯ ಮುಂದೆಯೂ ಇನ್ನಷ್ಟು ಹುಂಜಗಳ ಕಾಮ ದಾಹಕ್ಕೆ ಬಲಿಯಾದರೆ ಅದಕ್ಕುತ್ತರ ನೀಡಲು ನಮ್ಮ ಕಾನೂನಿಗೆ ಸಾಧ್ಯವೋ? ತಿನ್ನಲು, ಹೊಟ್ಟೆಗೆ ಹಿಟ್ಟಿಲ್ಲವೆಂದು ಸ್ವತಃ ಆ ಹೆಣ್ಮಕ್ಕಳೇ ಅಡ್ಡದಾರಿ ಹಿಡಿದು ಬಿಡುವ ಸಾಧ್ಯತೆಗಳೂ ಬಂದು ಬಿಡಲಾರದೆಂದು ಹೇಳಲು ಸಾಧ್ಯವೋ? ಖಂಡಿತಾ ಅಸಾಧ್ಯವಾದರೆ, ಇನ್ನು ಕಾನೂನು ಕೊಲೆಗಾರ ಹೇಳಿ ಜೈಗಲಿಟ್ಟಿದ ತಂದೆ ಶಿಕ್ಷೆಯನ್ನಭವಿಸಿ ಕೊನೆಗೊಂದು ದಿನ ಹೊರಬಂದು ಸರ್ವನಾಶವಾದ ತನ್ನ ಮಕ್ಕಳ ಬಾಳನ್ನು ಕಂಡು ಬಿಟ್ಟರೆ ಆತನ ನಂತರದ ದಿನಗಳು ಇನ್ನಷ್ಟು ಘೋರವಾಗಬಹುದು. ಕಾನೂನಿಗೆ, ಸರಕಾರಕ್ಕೆ ವಿರುದ್ಧವಾಗಿ ಬಾಳಬೇಕೆಂದು ಆತನಿಗೆ ತೋಚುವಂತೆ ಆತನ ಹೆಣ್ಮಕ್ಕಳ ಬಾಳು ಬತ್ತಿ ಹೋಗಿರಬಹುದು. ಬೀದಿ ವೇಶ್ಯೆಯರಾಗಿ, ಬಾರು ಡಾನ್ಸರುಗಳಾಗಿ ಅವರನ್ನು ಮಾರ್ಪಡಿಸಿ ಬಿಟ್ಟು ಇಲ್ಲಿ ಕೆಲ ಮಂದಿ ಕಾನೂನಿನ ಕೈಗಳಿಂದ ತಪ್ಪಿಸಿ ಕುಂತಿರಬಹುದು. ಎಲ್ಲರಿಗೂ ಮರುಪಾಠ ಕಲಿಸದೆ ಆ ತಂದೆಯ ಉರಿಯುವ ಹೃದಯಕ್ಕೆ ಸುಮ್ಮನಿರಲು ಅಸಾಧ್ಯ. ಆತನ ಕೈಗಳು ಇನ್ನಷ್ಟು ಕೊಲೆ ಮಾಡಲು ಹಂಬಲಿಸಬಹುದು. ಮುಂದೆ ಆತ ಬಲು ದೊಡ್ಡ ಕೊಲೆಗಾರನಾಗಿ ಬೆಳೆಯುವುದು ಗ್ಯಾರೆಂಟಿ. ಸಮಾಜದಲ್ಲಿ ಈ ತೆರನಾದ ಅಪರಾಧಿಗಲು ಬಹಳಷ್ಟಿದ್ದಾರೆ. ಒಮ್ಮೆ ಜೈಲು ಸೇರಿ ಮತ್ತೆ ಹೊರಬಂದು ಮತ್ತೂ ಅಪರಾಧಗಳನ್ನು ಮಾಡಿ ಜೈಲು ಸೇರುವವರು. ಹೆಚ್ಚಿನ ಕೈದಿಗಳೂ ಯಾವುದಾದರೊಂದು ಘಟನೆಯಿಂದ ಮನನೊಂದು ಕೊಂಡವರೇ. ಸಾಮಾನ್ಯ ಜನ ಇವರಿಗೆ ಅಪರಾಧವೆಸಗುವುದರಲ್ಲಿ ಅಷ್ಟು ಒಲುಮೆ ಇರಬಹುದೆಂದು ತಿಳಿವಂತೆ ಅವರು ಅಪರಾಧಗಳನ್ನೇ ಮಾಡುತ್ತಿರುತ್ತಾರೆ. ನಿಜಕ್ಕೂ ಅವರನ್ನು ಅಪರಾಧಿ ಪಟ್ಟಕ್ಕೇರಿಸಿ ಬಿಡುವುದು ಗೈದ ಯಾವುದಾದರೂ ಒಂದು ಹೊರಜಗದ ಕಣ್ಣು ಕಾಣದ ಸತ್ಕಾರ್ಯಗಳಾಗಿಕೊಂಡಿರುತ್ತವೆ. ಅಪರಾಧಿಗಳ ಮಾನಸಿಕವಸ್ಥೆ, ಅವರೊಳಗಿನ ಉರಿವ ಹ್ಲದಯದ ಮಿಡಿತ, ಕಾನೂನು ತಮಗೆ ಮಾಡಿದ ಮೋಸ ಇದ್ಯಾವುದೂ ಅಷ್ಟು ಪಕ್ಕನೆ ಹೊರಪ್ರಪಂಚಕ್ಕೆ ಅರ್ಥವಾಗದು. ಶಿಕ್ಷೆ ಕೈದಿಗಳು ತಮ್ಮ ತಪ್ಪುಗಳನ್ನು ತಿದ್ದಿಕೊಂಡು ಮುಂದೆ ಸಜ್ಜನಿಕೆಯುಳ್ಳವರಾಗಿ ಬೆಳೆಯಲು ಸ್ಫೂರ್ತಿ ನೀಡಬೇಕು. ಅಲ್ಲದೆ ಲಭಿಸಲ್ಪಟ್ಟ ಶಿಕ್ಷೆಯಿಂದ ’ಕೈದಿ’ ಇನ್ನಷ್ಟು ಕುಕೃತ್ಯಗಳನ್ನು ಮಾಡಲು ಪ್ರೇರಣೆಯಾಗುವ ಪರಿಯಾಗಬಾರದು. ನಂತರ ಕಾನೂನುಬಾಹಿರ ಕ್ರಿಯೆಗಳಲ್ಲಿ ಆತನನ್ನು ತೊಡಗಿಸಲು ಅವಕಾಶ ನೀಡಬಾರದು. ತೆರೆದು ಹೇಳಬೇಕಂದರೆ, ಸಮಾಜದಲ್ಲಿ ರೌಡಿಗಳನ್ನು, ಕೊಲೆಗಟುಕರನ್ನು, ಸುಳಿಗೆಕೋರರನ್ನು ಬೆಳೆಸುವಲ್ಲಿ ನಮ್ಮ ಕಾನೂನು ವಹಿಸುವ ಪಾತ್ರ ಸಣ್ಣದೇನಲ್ಲ.  ಪ್ರತಿಯೊಬ್ಬ ಅಪರಾಧಿಯ ಬಳಿಗೂ ಒಬ್ಬ ಮುಗ್ಧ ಮುಗ್ಧ ಮನುಷ್ಯನಿದ್ದಾನೆ. ಕೊರಗಿಕೊಂಡು ಕಣ್ಣೀರಿಳಿಸಿಕೊಂಡು ತನಗೂ ಸಾಮಾನ್ಯ ನರನಂತೆ ಬಾಳಬೇಕೆಂದು ಹಂಬಲಿಸಿಕೊಂಡು ಆದರೂ ಅಪರಾಧಿ ತನಗಾದ ಮೋಹದ ಸೇಡು ತೀರಿಸದೆ ಒಳಗಿನ ಮುಗ್ಧತೆ ಹೊರಬರುವುದೇ ಇಲ್ಲ. ಕಾನೂನಿಗೆ ವಿರುದ್ಧವಾಗಿ ನಿಂತು ತನಗೆ ಅಪರಾಧಿ ತನ್ನ ಕಥೆ, ವ್ಯಥೆಗಳನ್ನರಿಯದಿದ್ದುದ್ದಕ್ಕೆ ಕಾನೂನಿನ ಮುಂದೆ ಅಪಕೃತ್ಯಗಳನ್ನೇ ಗೆಯ್ಯುತ್ತಾ ಹೋಗುತ್ತಾನೆ. ಕಾನೂನು ಜೈಲಿಗಟ್ಟುವ ಒಬ್ಬ ವ್ಯಕ್ತಿಗೆ ಶಿಕ್ಷೆ ಲಭಿಸುವುದರ ಜೊತೆಗೆ ಆತನ ಕುಟುಂಬಕ್ಕೆ ರಕ್ಷಣೆಯೂ, ಅವನು ಮಾಡಿದ್ದು ಅಪರಾಧವೆಂದಾಗಿದ್ದರೆ ಅದಕ್ಕಿರುವ ಪಶ್ಚಾತ್ತಾಪವೂ ಅಪರಾಧಿಯ ಮನದಲ್ಲಿ ಬರುವಂತಾಗಬೇಕು. ಹೊರನೋಟಕ್ಕೆ ಅಪರಾಧವೆಂದು ವ್ಯಕ್ತವಾಗಿ ಕಂಡರೂ ಅದರೊಳ ಮರ್ಮವೇನೆಂದು ಅರಿಯಲು ಕಾನೂನು ಮುಂದೆ ನಿಲ್ಲಬೇಕು. ಅಲ್ಲದಿದ್ದರೆ ಕಾನೂನಿಗೆ ಅರ್ಥವಿಲ್ಲ. ಕಾನೂನಿನ ಪ್ರಕಾರ ನಿರಪರಾಧಿಗಳು ಶಿಕ್ಷೆಗೊಳಗಾಗದಿದ್ದರೂ ಒಬ್ಬ ನಿರಪರಾಧಿ ಶಿಕ್ಷಿಸಲ್ಪಡಬಾರದು ಎಂದಾಗಿದೆ. ಇದು ಕೇವಲ ಹೇಳಿಕೊಳ್ಳುವ ಕಾನೂನು ಗ್ರಂಥದಲ್ಲಿ ಬರೆದಿಡುವ ಪ್ರಮೇಯವಾಗಿ ಮಾತ್ರ ಉಳಿದುಕೊಂಡಿದೆ. ಇಲ್ಲಿ ಲಕ್ಷ ಅಪರಾಧಿಗಳು ಹೊರಗಿದ್ದು ನಿರಪರಾಧಿಗಳಿಗೆ ಶಿಕ್ಷೆಯಾಗುತ್ತಲೂ ಇದೆ. ಕಾನೂನಿಗೆ ಕಳೆಯಾಗಿ ಕಾಣುವ ಮತ್ತೊಂದು ಅವಸ್ಥೆಯಿದು. ಹೇಳಲಿಕ್ಕಿರುವುದು ಒಂದೇ ’ದೇಶದ ಕಾನೂನು ಅಪರಾಧಿಗಳನ್ನು ಹುಟ್ಟುಹಾಕದಿರಲಿ’.

-ನಿಝಾಮುದ್ದೀನ್ ಕೊಳಂಬೆ

Related Posts

Leave A Comment

Voting Poll

Get Newsletter