ಮತಾಂತರದ ದುರ್ನಾತ
16406.conversion1ಸಂಘಪರಿವಾರ ಉತ್ತರ ಪ್ರದೇಶದ ಕೆಲವೆಡೆ ಆರಂಭಿಸಿರುವ ಮತಾಂತರ ಕಾರ್ಯಕ್ರಮ ದೇಶದಾದ್ಯಂತ ಭಾರಿ ಸುದ್ದಿ ಮಾಡುತ್ತಿರುವಾಗಲೇ ಇದು ಮೋದಿ ಸರಕಾರವನ್ನು ಕಪ್ಪುಹಣದ ಚರ್ಚೆಯಿಂದಲೂ ರಕ್ಷಿಸಿದೆ. ಅದೇನಿದ್ದರೂ ಮತಾಂತರ ಎಂಬ ಆಯಾಮದಲ್ಲಿ ಮಾತ್ರ ಇದನ್ನು ಚರ್ಚಿಸುವಾಗ ’ಘರ್ ವಾಪಸಿ’ ಅಥವಾ ’ಮರಳಿ ಮನೆಗೆ’ ಎನ್ನುವ ಇವರ ಘೋಷ ವಾಕ್ಯ ಸಂಘ ಪರಿವಾರದವರು ಭಾರತದ ಭವ್ಯ ಇತಿಹಾಸವನ್ನು ಸಂಕುಚಿತವಾಗಿ ಮತ್ತು ದೋಷಪೂರಿತವಾಗಿ ಓದಿ ಕೊಂಡಿದ್ದಾರೆ ಎಂಬುದನ್ನು ತಿಳಿಸುತ್ತದೆ. ವಸಾಹ ತುಶಾಹಿಗಳ ಪ್ರತಿಯೊಂದನ್ನೂ ವಿರೋಧಿಸುವ ಸಂಘಪರಿವಾರದವರು ಇತಿಹಾಸದ ವಿಷಯದಲ್ಲಿ ಮಾತ್ರ ಇವರನ್ನು ಅನುಸರಿಸುತ್ತಿರುವುದು ದೇಶಕ್ಕೆ ಅಂಟಿಕೊಂಡ ದುರಂತ ಮತ್ತು ಅದುವೇ ಈ ದೇಶದ ಕೋಮುಸಾಮರಸ್ಯಕ್ಕೆ ಉಂಟಾಗಿರುವ ದೊಡ್ಡ ಹಿನ್ನಡೆ. ವಸಾಹತು ಶಾಹಿಗಳು ಮಂಡಿಸಿರುವ ಸಿದ್ದಾಂತದಂತೆ ಮ ತಾಂತರದಲ್ಲಿ ಮೂರು ವಿಧವಿದೆ. ಮೊದಲನೆಯದು, ಎಲ್ಲ ಮುಸ್ಲಿ ಮರೂ ಬಲವಂತವಾಗಿ ಮತಾಂತರಿಸಲ್ಪಟ್ಟವರು, ಎರಡನೆಯದು, ಕ್ರೈಸ್ತ ಹಾಗು ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳಲು ಆಮಿಷ ನೀಡ ಲಾಯಿತು ಎನ್ನುವ ವಾದ, ಮೂರನೆಯದ್ದು, ಹಿಂದೂ ಧರ್ಮದಲ್ಲಿ ಇದ್ದ ಜಾತಿ ಶೋಷಣೆಯಿಂದ ಬೇಸತ್ತು ಅವರು ಸ್ವಇಚ್ಚೆಯಿಂದ ಮತಾಂತರಗೊಂಡರು ಎನ್ನುವುದು. ಪ್ರಸ್ತುತ ಮೂರು ವಾದಗಳನ್ನು ಅರಿಜೋನಾ ವಿಶ್ವವಿದ್ಯಾಲಯದ ಪ್ರೊಫೆಸರ್ ಆಗಿರುವ ರಿಚರ್ಡ್ ಎಂ ಈಟನ್ ಬಲವಾಗಿ ತಳ್ಳಿ ಹಾಕಿದ್ದಾರೆ. ತಮ್ಮ ’ಅಪ್ರೋಚ್ ಟು ದ ಸ್ಟಡಿ ಆಫ್ ಕನ್‌ವರ್ಷನ್ ಟು ಇಸ್ಲಾಂ ಇನ್ ಇಂಡಿಯಾ’ ಎಂಬ ಪ್ರಬಂಧದಲ್ಲಿ ಅವರು ಒಂದು ಪ್ರಶ್ನೆಯನ್ನು ಕೇಳುತ್ತಾರೆ. ’ರಾಜಕೀಯ ಪ್ರವೇಶಿಸುವ ಮುಸ್ಲಿಮರ ಸಂಖ್ಯೆ ಮತ್ತು ಇಸ್ಲಾಮಿಗೆ ಮತಾಂತರವಾಗುವ ಅನ್ಯಧರ್ಮೀಯರ ಪ್ರಮಾಣ ಇವೆರಡಕ್ಕೂ ವಿಲೋಮ ಸಂಬಂಧವಿರುವುದೇಕೆ? ಅದಕ್ಕೆ ಅವರೇ ಉತ್ತರಿಸಿದ್ದು, ’ಮುಸ್ಲಿಮರ ಆಳ್ವಿಕೆ ಇರುವಲ್ಲೆಲ್ಲ ಅವರು ಬಲವಂತವಾಗಿ ಮತಾಂತರ ಮಾಡಿದ್ದರು ಎಂದಾದರೆ ಮುಸ್ಲಿಮರು ಸುದೀರ್ಘ ಕಾಲ ಆಳ್ವಿಕೆ ನಡೆಸಿದ ದಕ್ಷಿಣ ಏಷ್ಯಾ ಕೂಡ ಅದೇ ರೀತಿ ಇರಬೇಕಿತ್ತು. ಪೂರ್ವ ಬಂಗಾಳ ಅಥವಾ ಪಶ್ಚಿಮ ಪಂಜಾಬ್ ನಂತಹಾ ರಾಜ್ಯಗಳಲ್ಲಿ ಹೆಚ್ಚು ಮತಾಂತರ ನಡೆದಿದೆ. ಆದರೆ ಈ ರಾಜ್ಯಗಳು ಸಾಮ್ರಾಜ್ಯದ ಅಂಚಿನಲ್ಲಿದ್ದ ಭೂಪ್ರದೇಶಗಳಾಗಿತ್ತು. ಅಂದರೆ ಅವರು ಅರಣ್ಯದಂಚಿನಲ್ಲಿ ಪ್ರಾಣಿಗಳನ್ನು ಮೇಯಿಸುವ ಕೆಲಸ ಮಾಡುವವರಾಗಿದ್ದರು. ಹಿಂದೂ ಧರ್ಮದ ಜಾತಿವ್ಯವಸ್ಥೆ ಪ್ರಕಾರ ಹಿಂದೂ ಧರ್ಮದೊಂದಿಗೆ ಸೇರಿಕೊಳ್ಳುವ ಅವಕಾಶ ಅವರಿಗೆ ಇರಲಿಲ್ಲ. ಅದಕ್ಕಾಗಿಯೇ ಈಟನ್ ಇನ್ನೊಂದು ಸ್ಥಳದಲ್ಲಿ ಬಹಳ ಸ್ಪಷ್ಟವಾಗಿ ಹೇಳುತ್ತಾರೆ. ಅದೇನೆಂದರೆ, ಪೂರ್ಣ ಪ್ರಮಾಣದಲ್ಲಿ ಹಿಂದುಗಳೇ ಆಗಿರದಿದ್ದ ಸಮುದಾಯಗಳ ಜನರು ಇಸ್ಲಾಂ ಧರ್ಮಕ್ಕೆ ಮತಾಂತರ ಆಗಿರುವುದರಿಂದ ದಕ್ಷಿಣ ಏಷ್ಯಾದ ಮುಸ್ಲಿಮರಿಗೆ ಹಿಂದೂ ಸಮಾಜ ವ್ಯವಸ್ಥೆಯಿಂದ ವಿಮೋಚನೆ ದೊರಕಿಸುವ ಪ್ರಮೇಯವೇ ಉದ್ಭವಿಸುವುದಿಲ್ಲ. ಆದರೆ ಸಾಮ್ರಾಜ್ಯದ ಹೃದಯಭಾಗವಾಗಿದ್ದ ಗಂಗಾ ಬಯಲು ಪ್ರದೇಶದಲ್ಲಿ ಮತಾಂತರ ಕಡಿಮೆ ಪ್ರಮಾಣದಲ್ಲಿತ್ತು. ಪೂರ್ಣ ಪ್ರ ಮಾಣದಲ್ಲಿ ಹಿಂದೂಧರ್ಮದೊಂದಿಗೆ ಸೇರಿಕೊಂಡ ವರ ಸಂಖ್ಯೆ ಅಲ್ಲಿ ಅಧಿಕವಾಗಿತ್ತು. ಮುಸ್ಲಿಂ ಅರಸರು ಈ ದೇಶದ ಮುಕ್ಕಾಲು ಭಾಗವನ್ನು ೮೦೦ ವರ್ಷಗಳ ಕಾಲ ಆಳಿದ್ದಾರೆ. ಬಲವಂತ ಮಾಡುವುದಿದ್ದರೆ ಇಡೀ ದೇಶವನ್ನೇ ಆ ಅವಧಿಯೆಡೆಯಲ್ಲಿ ಇಸ್ಲಾಮೀ ಕರಣಗೊಳಿಸಬಹುದಿತ್ತಲ್ಲವೇ? ಹಿಂದೂ ಧರ್ಮದಲ್ಲಿದ್ದ ಜಾತಿ ವ್ಯವಸ್ಥೆ ಇಲ್ಲಿ ಇಸ್ಲಾಂ ಹಾಗು ಕ್ರೈಸ್ತ ಧರ್ಮದ ಬೆಳವಣಿಗೆಗೆ ಕಾರಣವಾಯಿತು.ಈ ಸತ್ಯಾಂಶವನ್ನು ಸಂಘ ಪರಿವಾರದವರು ಒಪ್ಪಿಕೊಳ್ಳದೆ ಅವರನ್ನೆಲ್ಲ ಬಲವಂತ ಮಾ ಡಲಾಯಿತೆನ್ನುವ ಪುರಾವೆ ರಹಿತ ವಾದದಲ್ಲಿ ಜೋತುಬಿದ್ದಿದೆ. ಹಿಂದೂ ಧರ್ಮವೆಂಬುದು ಹಿಂದಿನ ಕಾಲದಲ್ಲಿ ಜಾತಿ ಪದ್ಧತಿಯಲ್ಲಿ ನಲುಗಿತ್ತು ಹಲವಾರು ಮೂಢನಂಬಿಕೆಗಳಿಂದ ದೋಷಪೂರಿತವಾಗಿತ್ತೆಂಬ ಹಗಲು ಸತ್ಯವನ್ನು ಸಂಘಪರಿವಾರ ಒಪ್ಪಿಕೊಳ್ಳದಿರುವುದು ಅವರ ಸಂಕುಚಿತ ಮನೋಭಾವಕ್ಕೆ ಸಾಕ್ಷಿಯಾಗಿದೆ. ಸಂಘ ಪರಿವಾರದವರು ವಾದಿಸುವಂತೆ ರಾತ್ರಿ ಬೆಳಗಗುವುದ ರೊಳಗೆ ಬಲವಂತವಾಗಿ ಅಥವಾ ಆಮಿಷ ನೀಡಿ ಇಲ್ಲಿ ಯಾರೂ ಯಾ ರನ್ನೂ ಮತಾಂತರ ಮಾಡಲಿಲ್ಲ. ಅವೆಲ್ಲವೂ ಶತನಮಾನಗಳ ಕಾಲದ ಸಾಮಾಜಿಕ ಒಡನಾಟದಿಂದ ನಡೆದಿದೆ. ಸೂಫಿಸಂತರ ಬಗ್ಗೆ ಇಲ್ಲಿಯ ನಿವಾಸಿಗಳಿಗಿದ್ದ ಅಪಾರ ನಂಬಿಕೆ ಮತ್ತು ಭಕ್ತಿಯಿಂದ ಅದು ನಡೆದಿತ್ತು. ಜಾತಿ ಆಧಾರಿತವಾಗಿ ಜನರ ಜೀವನ ಮಟ್ಟ ನಿರ್ಣಯಿಸಲ್ಪಡುವ ಕಾಲದಲ್ಲಿ ಸಾಮರ್ಥ್ಯಕ್ಕೆ ಬೆಲೆ ಇರಲಿಲ್ಲ. ಸಮಾನತೆ, ಸ್ವಾತಂತ್ರ್ಯ, ಮಾನ್ಯತೆ, ಬದುಕುವ ಹಕ್ಕು ಕೆಲ ಜಾತಿಯವರಿಗೆ ನೀಡಿದ್ದು ಮೊಘಲ್ ಅರಸರಾಗಿದ್ದಾರೆ ವಾಸಿಸಲು ತುಂಡು ಭೂಮಿ ಪಡೆದುಕೊಳ್ಳಲು ಅರ್ಹತೆ ಇಲ್ಲದವರಿಗೆ ಕೃಷಿ ಭೂಮಿಯನ್ನು ನೀಡಿದ್ದರು. ಅದಕ್ಕಗಿಯೇ ಈಟನ್ ’ವಾಸ್ತವ ಹೀಗಿರುವಾಗ ಇಸ್ಲಾಂ ಧರ್ಮವನ್ನು ಈ ಹಿಂದೆ ಭಾವಿಸಿದಂತೆ ಖಡ್ಗಗಳ ಧರ್ಮ ಎನ್ನದೆ ನೇಗಿಲ ಧರ್ಮ ಎನ್ನುವುದು ಸೂಕ್ತವಾದೀತು. ಕೊನೆ ಪಕ್ಷ ಭಾರತದಲ್ಲಂತೂ ಇದು ಸತ್ಯ’. ಧರ್ಮದಲ್ಲಿ ಬಲತ್ಕಾರವಿಲ್ಲ ಎಂದು ಇಸ್ಲಾಂ ಸ್ಪಷ್ಟವಾಗಿ ಹೇಳಿದೆ. ಆಮಿಷಗಳಿಗೆ ಬಲಿಯಾಗಿ ಓರ್ವ ಇಸ್ಲಾಂ ಸ್ವೀಕರಿಸಿದರೆ ಆತ ಮುಸ್ಲಿಮನಾಗಲು ಸಾಧ್ಯವಿಲ್ಲ. ಪ್ರವಾದಿ ನುಡಿಯಂತೆ ’ತೋಲ್ಬಲದಿಂದ ದೇಹವನ್ನು ಮಣಿಸಬಹುದು. ಆದರೆ ಹೃದಯವನ್ನಲ್ಲ. ಪ್ರಮಾಣಿಕತೆ ಇರದಲ್ಲಿ ಸತ್ಯ ವಿಶ್ವಾಸವೂ ಇರುವುದಿಲ್ಲ’.

ಅನೀಸ್ ಕೌಸರಿ ವೀರಮಂಗಿಲ ಫ್ರೊ.ಪೆಸರ್, ಕೆಐಸಿ ಕುಂಬ್ರ

Related Posts

Leave A Comment

Voting Poll

Get Newsletter