ನಿತಾಖತ್ ತಂದ ಕಿತಾಪತಿ
nitaqat_1ಕಬ್ಬಿಣದ ಮಂಚದ ಮೇಲೆ ಹಾಸಿದ ಚಾಪೆಯ ಸಂದುಗಳಲ್ಲಿ ತಿಗಣೆಗಳು ಕುಟುಂಬವಾಗಿ ವಾಸಿಸುತ್ತಿದೆ. ಕೆಲಸ ಮುಗಿಸಿ ಸುಸ್ತಿನಿಂದ ಬಂದು ಮಲಗಿದಾಗ ತಿಗಣೆಗಳ ಕಡಿತ ಗೊತ್ತಾಗುವುದಿಲ್ಲ. ಆದರೆ ಕೆಲಸವಿಲ್ಲದ ದಿನಗಳು ಕಷ್ಟ. ನೆರೆಯ ಶಿಹಾಬ್ ಗತ್ತಿನಿಂದ ನಡೆಯುವುದು, ದೊಡ್ಡ ಬಂಗಲೆ ಮನೆಯಲ್ಲಿ ವಾಸಿಸುವುದನ್ನು ಕಂಡಾಗ  ’ಬಾಪ’ ಒಂದು ದಿನ ಹೇಳಿದರು. ಮಗು ಕಬೀರ್ ನೀನು ಹೀಗಿದ್ದರೆ ಸಾಕೆ? ನಿನ್ನ ಹಿಂದೆ  ಹಾಗೂ’ ಇರುವ ಮೋಳು, ಪಾತು ನಿಂಗೆ ಕಾಣಿಸುತ್ತಿಲ್ಲವೇ? ಇವರನ್ನು ಒಂದು ದಾರಿಗೆ ಮಾಡಿ ಬಿಡಬೇಡವೇ, ನನ್ನಿಂದ ಇನ್ನು ಏನೂ ಮಾಡಲು ಸಾಧ್ಯವಾಗಬಹುದೆಂದೆನಿಸುತ್ತಿಲ್ಲ. ನನ್ನ ಅಸಹಾಯಕತೆ ನಿಂಗೆ ತಿಳಿದಿದೆ  ತಾ. ಈ ’ಬಾಪ’ನಿಗೆ  ಬ್ಲಾಕ್ ಮೂರು ಆಗಿ ಬಿಟ್ಟಿದೆ, ಎಂದು ಡಾಕ್ಟರ್ ಹೇಳಿದ್ದಾರೆ. ಮಸೀದಿಗೆ ಒಂದಿಷ್ಟು ವೇಗವಾಗಿ ನಡೆದರೆ ಶ್ವಾಸ ಕಟ್ಟಿ ಬಿಡುತ್ತದೆ. ಮೆಲ್ಲಮೆಲ್ಲನೆ ಹೆಜ್ಜೆ ಹಾಕಬೇಕಾಗುತ್ತದೆ. ’ಉಮ್ಮಾ’ನಿಗೂ ಆರೋಗ್ಯ ಕಮ್ಮಿ. ಯಾವಾಗಲೂ ಸೊಂಟನೋವು. ಮತ್ತೆ ಕಿರಿಯ ಸಹೋದರ ಶಫೀಕ್ ಎಂಟನೆ ತತಗತಿಗಷ್ಟೇ ತಲುಪಿದ್ದಾನೆ. ಹತ್ತನೇ ತರಗತಿಗಿಂತ ಹೆಚ್ಚು  ಕಲಿಸಬೇಕಿದ್ದರೆ ಹತ್ತು ಮೈಲು ನಡೆಯಬೇಕು ಅದೆಲ್ಲ ಆಗ್ಬಹುದೋ ಏನೋ? ಅದೇ ಕಾರಣಕ್ಕೆ ಯಾಗಿತ್ತು ಶಿಹಾಬ್‌ನೊಂದಿಗೆ ಒಂದು ವೀಸಾ ಕೇಳಿದ್ದು.  ಬಾಪರವರು ತಾನೇ ಶಿಹಾಬ್‌ನ ತಂದೆ ಮೊಹಿದ್ದೀನ್ ಹಾಜಿಯವರನ್ನು ಭೇಟಿ ಮಾಡಿ ಮಾತನಾಡಿದ್ದು. ನೆರವಿಗೆ ಮಸೀದಿಯ ಉಸ್ತ್ರಾದರನ್ನು ಸೇರಿಸಿದ್ದರು. ಉಸ್ತಾದ್ ಹೇಳಿದ್ದರು,  ಹಾಜರ್ರೇ ನಿಮಗೆ ಗೊತ್ತಿದೇ ತಾನೆ. ಬಾಪುಟ್ಟಿ ಕಾಕನವರು ತೀರಾ ಕಂಗಾಲಾಗಿದ್ದಾರೆ. ಎರಡೂ ಹೆಣ್ಣು ಮಕ್ಕಳು ಮನೆ ತುಂಬಿ ನಿಂತಿದ್ದಾರೆ. ಮಗ ಕಬೀರ್‌ನನ್ನು ಯಾವುದಾದರೂ ಉದ್ಯೋಗಕ್ಕೆ  ಜಿದ್ದಾಗೆ ಒಟ್ಟಿಗೆ ಕರಕೊಂಡು ಹೋಗಲು ಶಿಹಾಬ್‌ನೊಂದಿಗೆ ನೀವು ಹೇಳಿದರೆ  ನಡೆಯದ ಕೆಲ್ಸವಲ್ಲ ಶಿಹಾಬ್ ವಿಷಯವೆಲ್ಲ ಹೇಳಿದ. ಕಬೀರನಿಗೆ ನಾನು ವೀಸಾ ತೆಗೆದುಕೊಡಬಲ್ಲೆ.  ಹಣ ಮತ್ತೆ ಅಲ್ಲಿ ಬಂದು ಕೊಟ್ಟರೆ ಸಾಕು. ಟಿಕೇಟಿನ ಹಣ ಮಾತ್ರ ನೀನೇ ಮಾಡಬೇಕು. ಕೆಲಸವನ್ನು ನೀನೇ ಮಾಡಿಕೊಳ್ಳಬೇಕು. ನಾನಿಲ್ಲಿ ಒಂದು ಕಂಪೆನಿ ಪೋನ್ಸರ್ ಆದ್ದರಿಂದ ನಿನ್ನನ್ನು ನೋಡಿಕೊಳ್ಳಲು  ಟೈಮ್ ಸಿಗದು. ಹಾಗೆಯೇ ಆಗಿತ್ತು ಜಿದ್ದಾ ತಲುಪಿದ್ದು. ಕಫೀಲನನ್ನು ಭೇಟಿಯಾಗಿ ಕಾಗದ ವಗೈರೆ ಸರಿಪಡಿಸಿ, ತಿಂಗಳು ಪ್ರತಿ ಕೊಡುವ ರಿಯಾಲ್ ಕೂಡ ಗೊತ್ತುಪಡಿಸಲಾಯಿತು.  ಸದ್ಯ ಬಿನ್ ಸಾಗರ್ ಕಂಪೆನಿಯಲ್ಲಿ ಆಫೀಸ್ ಬಾಯ್ ಆಗಿ ಕೆಲಸ ಸಿಕ್ಕಿತು. ಅಲ್ಲಿ ಮಲೆಯಾಳಿಗಳು ತುಂಬಿರುವ ಕಟ್ಟಡದಲ್ಲಿ ತಂಗಳು ಒಂದು ಬೆಡ್ ಸರಿಪಡಿಸಲಾಯಿತು. ಐದಾರು ತಿಂಗಳು ಕಳೆದಾಗ ಅಷ್ಟಿಷ್ಟು ಪರಿಚಯವಾಯಿತು. ಡ್ರೈವಿಂಗ್ ಲೈಸನ್ಸ್ ಮಾಡಿಕೊಳ್ಳಲು ಅಷ್ಟೇನು ಕಷ್ಟವಾಗಲಿಲ್ಲ. ಪ್ರತಿ  ತಿಂಗಳು ಸಿಗುತ್ತಿದ್ದ ಕಾಸು ಬಾಪನಿಗೆ ಕಳುಹಿಸಿಕೊಡಲಾಗುತ್ತಿತ್ತು. ಮದ್ದು ತೆಗೆದುಕೊಳ್ಳುವಂತೆ ಹೇಳಲು ಮರೆಯಲಿಲ್ಲ. ಈ ಮಧ್ಯೆ ಊರಿನಿಂದ ಒಂದು ಫೋನ್ ಕರೆ. ಏನು ಮಾಡುವುದು? ಅದೊಂದು ಭಾನುವಾರ ಬೆಳಗ್ಗೆ ’ಬಾಪ’ ಏಳಲಿಲ್ಲ. ರಾತ್ರಿ ಊಟ ಮುಗಿಸಿ ಮಲಗಿದವರು. ಅಂದು ರಾತ್ರಿ ಕೂಡ ’ಬಾಪ’  ಮೋಳು ಮತ್ತು ಪಾತುವಿನ ವಿಷ್ಯ ’ಉಮ್ಮಾ’ ನೊಂದಿಗೆ ಹೇಳಿದ್ದು ಫೋನ್ ಮುಖಾಂತರ ತಿಳಿಯಿತು. ಬಿನ್ ಸಾಗರ್ ಕಂಪೆನಿಯ ಕೆಲ್ಸಕ್ಕೆ  ರಾಜಿ  ಕೊಟ್ಟು ಒಂದು ನಿಸಾನ್ ಕಾರು ಖರೀದಿಸಿ, ಜಿದ್ದದಲ್ಲಿ ಟ್ಯಾಕ್ಸಿ ಓಡಿಸುವ ಯೋಚನೆ ಮನದಲ್ಲಿ ಹೇಳದ ಟೈಮ್ ಯಾವುದೆಂದು ನೆನಪಿಲ್ಲ. ಆದರೆ ಹೆಚ್ಚಿನ ರಾತ್ರಿಗಳಲ್ಲೂ ಮಲಗಿದಾಗ ಊರಿನ ವಿಚಾರ ಮನತುಂಬ ಗಿರಕಿ ಹೊಡೆಯುತ್ತಿತ್ತು. ವಾಸಕ್ಕೊಂದು ಮನೆ, ಸಹೋದರಿಯರ ಮದುವೆ, ತಮ್ಮನ ಶಿಕ್ಷಣ, ನನ್ನ ಮದುವೆ , ಮಕ್ಕಳು-ಉಮ್ಮನ ನೆರವಿಗೊಂದು ಆಳು, ಅದಕ್ಕೆ ಹಣ ಬೇಕು. ಜಿದ್ದಾದಲ್ಲಿ ಟ್ಯಾಕ್ಸಿ ಓಡಿಸಿ ದೊಡ್ಡ ದುಡ್ಡು ಮಾಡಿಕೊಂಡ ಹಲವರನ್ನು ಪರಿಚಯ ಮಾಡಿಕೊಳ್ಳಲಾಯಿತು. ಐದು ರಿಯಾಲಿಗೆ ಪೆಟ್ರೋಲ್ ಹಾಕಿದರೆ ಐವತ್ತು ರಿಯಾಲಿಗೆ ಸುಗಮವಾಗಿ ಓಡಿಸಬಹುದು. ಜಿದ್ದಾ - ರಿಯಾದ್, ಜಿದ್ದಾ-ಮಕ್ಕ, ಹೀಗೆ ಒಳ್ಳೆಯ ಓಟದ ರೂಟ್ ಯತೀಂ ಖಾನ, ಮಸ್ಜಿದ್, ಮದ್ರಸ, ಹೆಣ್ಣುಮಕ್ಕಳ ಮದುವೆ, ರೋಗಿಗಳ ಚಿಕಿತ್ಸೆ ಹೀಗೆ ಎಲ್ಲದಕ್ಕೂ ನೆರವಾಗಲೂ ಸಾಧ್ಯವಾಗುವಷ್ಟು ವರಮಾನ. ಒಂದು ಬಾರಿ ಊರಿಗೆ ಹೋಗಿ ಬಂದದ್ದಾಯಿತು ಎಲ್ಲರಿಗೂ ಅತ್ಯಗತ್ಯ ಉಡುಪು ಮತ್ತು ಗ್ರಹೋಪಕರಣಗಳನ್ನು ಕೊಳ್ಳಲಾಯಿತು. ಮದುವೆ ಸಂಬಂಧ ಹಲವು ಬಂದವು. ಮೋಳಿನ ಮದುವೆ ಗೊತ್ತು ಮಾಡಲಾಯಿತು.  ೨೫ ಪವನ್ ಚಿನ್ನ ಮತ್ತು ೧.೫೦ ಲಕ್ಷ ರೂಪಾಯಿ ವರದಕ್ಷಿಣೆ. ಹೆಚ್ಚಿನ ಆಡಂಭರವಿಲ್ಲದೆ ಮದುವೆ ಮಾಡಿ ಕಳುಹಿಸಲಾಯಿತು. ಇನ್ನು ಪಾತುವಿನ ಮದುವೆ ಮುಂದಿನ ಬಾರಿ ಬಂದಾಗ ನಡೆಸಬಹುದು.  ಉಮ್ಮಾ, ಕುಟುಂಬ ಹಾಗೂ ಊರವರಿಗೂ ಎಲ್ಲರಿಗೂ ಸಂತೋಷವಾಯಿತು. ’ಬಾಪ’ನ  ಅನುಪಸ್ಥಿತಿ ಮನಸ್ಸನ್ನು ತುಂಬಾ ಕಾಡಿತು. ಮರಳಿ ಜಿದ್ದಾಗೆ ಬಂದು ವಾರವಾಗುವುದರೊಳಗೆ ’ನಿತಾಖತ್’ ಆದೇಶ ಹೊರ ಬಿತ್ತು.  ಕೆಲಸ ಮಾಡುವುದು ನೈಜ ಪೋನ್ಸ್‌ರ್‌ನ ಕೈಕೆಳಗೆ ಮಾತ್ರವಾಗಿರಬೇಕು. ನನ್ನ ಕಫೀಲಿಗೆ ಹೇಳಿಕೊಳ್ಳುವಂತಹ ಕಂಪೆನಿಗಳಿಲ್ಲ.  ಇರುವುದು ಬಹಳಷ್ಟು ಫ್ರೀ ವೀಸಾದವರು. ಅವರು ನೀಡುವ ಕಫಾಲತ್ತು ಆಗಿದೆ ಅವರ ಮುಖ್ಯ  ಹಣಕಾಸಿನ ಮಾರ್ಗ. ಬಹಳಷ್ಟು ಪ್ರಯತ್ನ ನಡೆಸಲಾಯಿತು.  ಯಾವುದು ಫಲ ಕೊಡಲಿಲ್ಲ ಕಡೆಗೆ ಹೇಗಾದರೂ ಮಾಡಿ ಟಿಕೇಟ್ ಚಿಲ್ಲರೆ ಸಾಮಾನುಗಳಿಗೆ ಹಣದೊಂದಿಗೆ ಒಂದಿಷ್ಟು ಪಾಕೆಟ್ ಮನಿ ಇಟ್ಟುಕೊಂಡು  ಕರಿಪ್ಯೂರಿಗೆ ಮರಳಿ ಹಾರಲಾಯಿತು. ಮನೆಗೆ ತಲುಪಿದ ಅದೇ ದಿನ ಊರಿನ ಮಸೀದಿ ಕಮಿಟಿಯವರು ಬಂದರು. ಮಸೀದಿಗೆ ಹೊಸ ಕಾರ್ಪೆಟ್ ಹಾಕಬೇಕು. ಏನಿಲ್ಲವೆಂದರೂ ಒಂದು ಲಕ್ಷ ರೂಪಾಯಿ ಬೇಕಾಗಬಹುದು. ಇದ್ದುದರಲ್ಲಿ ಐದು ಸಾವಿರ ಅವರಿಗೆ ಕೊಡಲಾಯಿತು. ಮಾರನೆ ದಿನ  ಜನಪರ ಕ್ಲಬ್‌ನವರು ಬಂದರು. ಒಂದು ಆಂಬುಲೆನ್ಸ್ ಖರೀದಿಸಲೇ ಬೇಕು. ಐದು ಲಕ್ಷ ರೂಪಾಯಿ ಬೇಕು. ಮನೆಯೊಳಗೆ ಹೋಗಿ ಪಾಕೆಟ್ ಬಿಚ್ಚಿ ನೋಡಿದಾಗ ಇಪ್ಪತ್ತು ಸಾವಿರಕ್ಕೂ ಕಡಿಮೆ ದುಡ್ಡು ಇರುವುದು. ಐದು ಸಾವಿರ ಅವರಿಗೂ ಕೊಡಲಾಯಿತು. ಮೋಳು ಮತ್ತು  ಬಾವ ಬಂದರು. ವಾಪಸ್ಸು ಹೋಗುವ ಮೊದಲು ಮೋಳು ಸ್ವಲ್ಪ ಹಣ ಸಾಲ ಕೇಳಿದಳು ಐದು ಸಾವಿರ ಅವಳಿಗೂ ಕೊಡಲಾಯಿತು. ಉಮ್ಮಾನನ್ನು ವೈದ್ಯರಿಗೆ ತೋರಿಸಬೇಕು. ಹಾಗೆ ಕರಕೊಂಡು ಹೋಗಿ ಚಕಪ್, ಚಿಕಿತ್ಸೆ, ಮದ್ದು, ವೈದ್ಯರ ಫೀಸು ಎಂದೆಲ್ಲ  ಮೂರು ಸಾವಿರ ಖರ್ಚಾದವು. ಅಂಗಡಿಗೆ ಹೋಗಿ ಚಿಲ್ಲರೆ ಚಿಲ್ಲರೆ ಸಾಮಾನುಗಳನ್ನು ಖರೀದಿಸಲಾಯಿತು. ಮನೆಗೆ ಬಂದಾಗ ಬಹಳಷ್ಟು ಕಲೆಕ್ಸನ್‌ನವರು ಬಂದು ಹೋಗುತ್ತಿದ್ದರು. ಸ್ವಲ್ಪ ಅವರಿಗೂ ಕೊಡಲಾಯಿತು. ನಂತರ ನಾನು ಬೆಡ್ ರೂಂಗೆ ಹೋಗಿ ಕದ ಮುಚ್ಚಿಕೊಂಡೆ. ಬಾಕಿ ಇರುವ ಹಣ ಲೆಕ್ಕ ಮಾಡಿ ನೋಡಿದೆ. ಮತ್ತೇ ಮತ್ತೇ ಹಲವು ಸಲ ಎಣಿಸಿ ನೋಡಿದೆ ಐದು ಸಾವಿರ  ಭರ್ತಿ ಕೂಡ ಇಲ್ಲ. ಕಲೆಕ್ಸನ್‌ನವರು  ನಾಳೆಯೂ  ಬಾರದೆ ಇರಲಾರರು.  ಅಗತ್ಯ ಕೆಲಸಗಳು ನಡೆಯಬೇಕು. ಜಿದ್ದಾದ ಮಂಚದ ತಿಗಣೆಯ ಕೋಸಾದಿಯತಿ  ಕಡಿತ ನನ್ನ ನಿದ್ದೆಗೆ ಒಮ್ಮೆಯೂ ಭಂಗ ತರಲಿಲ್ಲ. ಈಗ ನನ್ನ ಬೆಡ್ ರೂಮಿನಲ್ಲಿ ತಿಗಣೆ, ಸೊಳ್ಳೆ, ಯಾವುದೂ ಇಲ್ಲ. ಆದರೆ ನಿದ್ದೆ ಬರುವುದಿಲ್ಲ. ’ನಿತಖತ್’ ಎಂಬ ಕಠೋರ ಭಯೋತ್ಪಾದಕ ತನ್ನ ಬೇಟೆ ಮುಂದುವರಿಸಿದ್ದಾನೆ! ಹಾಜಿ ಪಿನಂಗೋಡ್ ಅಬೂಬಕ್ಕರ್

Files

Related Posts

Leave A Comment

Voting Poll

Get Newsletter