ಕರ್ಮ ಶಾಸ್ತ್ರ ಚೌಕ್ಕಟ್ಟಿನಡಿ ಮಹಿಳೆ
ಪರಿಶುದ್ಧ ಇಸ್ಲಾಂ ಮಹಿಳೆಯರಿಗೆ ಮಹತ್ವದ ಸ್ಥಾನ ನೀಡಿದೆ.ಪವಿತ್ರ ಖುರ್ಆನಿನ ಒಂದು ಅಧ್ಯಾಯವೇ ' ಅನ್ನಿಸಾಅ್' ಅಂದರೆ ಮಹಿಳೆಯರು ಎಂಬ ಹೆಸರಿನಲ್ಲಿದೆ. ಸ್ವಹಾಬಿ ವನಿತೆಯರಿಂದ ಹಲವು ವಿಚಾರ ಕಲಿಯಬಹುದಾಗಿದೆ, ಅವರಲ್ಲಿ ಚರಿತ್ರೆ ಪುಟಗಳಲ್ಲಿ ಉನ್ನತ ಸ್ಥಾನ ಲಭಿಸಿದ ಸ್ವಹಾಬಿ ವನಿತೆಯರು ಬಹಳಷ್ಟು ಅರಿವುಳ್ಳವರಾಗಿದ್ದರು. ಆದ್ದರಿಂದ ನಾವು ತಿಳಿಯಬಹುದಾಗಿದೆ 'ಜ್ಞಾನವು' ಒಬ್ಬರನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯುತ್ತದೆಯೆಂದು ಪ್ರವಾದಿ (ಸ) ಹೇಳಿದರು:-
طلب العلم فريضة على كل مسلم و مسلمة
"ಮುಸ್ಲಿಮರಾದ ಎಲ್ಲಾ ಸ್ತ್ರೀ ಪುರುಷರಿಗೆ ಜ್ಞಾನ ಕಲಿಯುವುದು ಕಡ್ಡಾಯವಾಗಿದೆ"ಮಹತ್ತರ ಸ್ಥಾನದಲ್ಲಿರುವ ಸ್ವಾಹಾಬಿ ವನಿತೆಗಳೂ ಅದರಲ್ಲೂ ಪ್ರತ್ಯೇಕವಾಗಿ ನೆಬಿ (ಸ. ಅ) ರ ಪತ್ನಿಯರಾದ ಉಮ್ಮಹಾತುಲ್ ಮುಹ್ಮಿನೀನ್ ಗಳು ಪರಿಶುದ್ದ ಇಸ್ಲಾಮಿನ ಕಾರ್ಯಗಳನ್ನು ಶೇಖರಿಸಿ ಪ್ರವಾದಿ (ಸ.ಅ) ರ ಸುನ್ನತಗಳನ್ನು ಪ್ರಚಾರಪಡಿಸುತ್ತಾ ದೀನಿಗಾಗಿ ಹಲವಾರು ತ್ಯಾಗಗಳನ್ನು ಮಾಡಿದರು. ಹಲವು ಸ್ತ್ರೀಗಳು ಅವರ ವೈಯುಕ್ತಿಕ ವಿಚಾರಕ್ಕೆ ಸಂಭಂಧಿಸಿದ ಸಂಶಯ ಮೂಡಿದಾಗ ನಬಿಯೊಂದಿಗೆ ಕೇಳಲು ನಾಚಿಕೆ,ಹಿಂಜರಿಕೆಯಾದಾಗ ಪರಿಹಾರ ಕಂಡುಕೊಳ್ಳಲು ಅವರು ಸಂಪರ್ಕಿಸಿದ್ದು ಉಮ್ಮಹಾತುಲ್ ಮುಹ್ಮಿನ್ಗಳನ್ನು.
ಈ ಕಾರಣದಿಂದಲೇ ನಾಲ್ಕಕ್ಕಿಂತ ಹೆಚ್ಚಿನ ಮಹಿಳೆಯರನ್ನು ಮದುವೆಯಾಗಲು ಪ್ರವಾದಿ (ಸ)ರಿಗೆ ಅಲ್ಲಾಹನು ಅನುಮತಿ ನೀಡಿದ್ದು.ಅನ್ಯ ಸ್ತ್ರೀಯರಿಗೆ ತಿಳಿಯದ ಹಲವು ವಿಷಯ ಅರಿಯಲು ಈ ಕಾರಣದಿಂದ ಸಾಧ್ಯವಾಯಿತು.ಪ್ರವಾದಿ ಜೀವನದ ಪ್ರತಿ ಘಳಿಗೆಯನ್ನು ಅರಿತು ಅದನ್ನು ಸಮೂಹದ ಮುಂದೆ ತಲುಪಿಸುವಲ್ಲಿ ಅವರ ಪತ್ನಿಯರ ದೊಡ್ದ ಶ್ರಮವಿದೆ. ಸೈಯ್ಯಿದತ್ ಆಯಿಷಾ (ರ.ಅ) ರವರು 2210 ಹದೀಸ್ ಗಳನ್ನು ಕ್ರೋಡೀಕರಿಸಿ ಮುಸ್ಲಿಂ ಜಗತ್ತಿಗೆ ಸಮರ್ಪಿಸಿದ್ದಾರೆ. ಈ ಕಾರಣದಿಂದಲೇ ನೆಬಿ (ಸ) ಹೇಳಿದ್ದು "ನೀವು ಈ ಬಳಿ ವರ್ಣದ (ಆಯಿಷಾ) ಮಹಿಳೆಯಿಂದ ದೀನ್ ಕಲಿಯಿರಿ. ಇನ್ನೂ ಪ್ರವಾದಿಯ ಇತರ ಪತ್ನಿಯರಾದ ಉಮ್ಮು ಸಲಮ ಬೀಬಿ: 378, ಅಫ್ಸಾ ಬೀವಿ : 60, ಉಮ್ಮ ಹಬೀಬ ಬೀವಿ : 65, ವೈಮುನಾ ಬೀವಿ : 76, ಸಫಿಯ್ಯ ಬೀವಿ : 10 ಹದೀಸ್ಗಳನ್ನು ಕ್ರೋಡಿಕರಿಸಿ ವರದಿ ಮಾಡಿದ್ದಾರೆ.
ರಸೂಲುಲ್ಲಾಹಿ (ಸ.ಅ) ರ ಮಕ್ಕಳಲ್ಲಿ ಫಾತಿಮಾ (ರ ಅ) ರನ್ನು ಹೊರತು ಪಡಿಸಿ ಉಳಿದೆಲ್ಲ ಮಕ್ಕಳು ರಸೂಲರ ಜೀವಿತಾವಧಿಯಲ್ಲೇ ಮರಣ ಹೊಂದಿದರು. ಆದ್ದರಿಂದ ಅವರಿಂದ ಯಾವುದೇ ಹದೀಸ್ ವರದಿಯಾಗಲಿಲ್ಲ. ಫಾತಿಮಾ ಬೀವಿ (ರ ಅ) ರಿಂದ 18 ಹದೀಸ್ಗಳು ವರದಿಯಾಗಿದೆ. ಅನ್ಸಾರಿಗಳಾದ ಮಹಿಳೆಯರು ಇಲ್ಮ್ ಕಲಿಯುವುದರಲ್ಲಿ ಹೆಚ್ಚು ಆಸಕ್ತಿ ತೋರುತ್ತಿದ್ದರು. ಆಯಿಶಾ(ರ.ಅ) ಹೇಳುತ್ತಾರೆ:- ಅನ್ಸಾರಿಗಳಾದ ಸ್ತ್ರೀಗಳು ಬಹಳ ಉತ್ತಮವಾಗಿದ್ದರು. ದೀನಿನ ಅರಿವು ಕಲಿಯಲು ಅವರನ್ನು ನಾಚಿಕೆ ತಡೆಯುತ್ತಿರಲಿಲ್ಲ". ಅಬೂ ಮೂಸಲ್ ಅಶ್ಹರಿ (ರ.ಅ) ಹೇಳುತ್ತಾರೆ "ನಮಗೆ ಅಥವಾ ಅನುಯಾಯಿಗಳಿಗೆ ಯಾವುದೇ ಹದೀಸ್ಗಳಲ್ಲಿ ಸಂಶಯ ಇದ್ದರೆ ಅದರ ಕುರಿತು ಆಯಿಷಾ ಬೀವಿಯೊಂದಿಗೆ ಕೇಳಿದರೆ ಅದರ ಕುರಿತುಳ್ಳ ಎಲ್ಲಾ ಅರಿವುಗಳು ಅವರಲ್ಲಿ ಇರುತ್ತಿತ್ತು.
ಒಮ್ಮೆ ಅನ್ಸಾರಿಯಾದ ಸ್ತ್ರೀಯೊಬ್ಬರು ಪ್ರವಾದಿ ಸ.ಅ ರೊಂದಿಗೆ ಕೇಳಿದರು" ಓ ಪ್ರವಾದಿ ವರ್ಯರೇ, ಅಲ್ಲಾಹನು ಸತ್ಯವನ್ನು ಹೇಳಲು ಎಂದಿಗೂ ನಾಚಿಕೆ ಪಡಲ್ಲ. ಓರ್ವ ಸ್ತ್ರೀಗೆ ಸ್ವಪ್ನ ಸ್ಕಲನವಾದರೆ ಆಕೇ ಸ್ನಾನ ಮಾಡಬೇಕೇ...? ಆಗ ನಬಿ (ಸಅ ) ಹೇಳಿದರು"ಹೌದು ಆಕೆ ವೀರ್ಯ ಕಂಡರೆ ಸ್ನಾನ ಮಾಡಬೇಕು" ಆಗ ಅಲ್ಲಿದ್ದ ಉಮ್ಮು ಸಲಮ ಬೀವಿ ನಾಚಿಕೆಯಾಗಿ ಮುಖವನ್ನು ಮರೆಸಿ ಕೇಳಿದರು " ನೆಬಿಯೇ , ಸ್ತ್ರಿ ಗಳಿಗೆ ಸ್ವಪ್ನ ಸ್ಕಲನವಾಗುತ್ತದೆಯೇ? ಅದಕ್ಕೆ ನೆಬಿ (ಸ) "ಹೌದು ಹೇಗೆ.... ಮಗುವಿಗೆ ತಾಯಿಯ ರೀತಿಯ ಸಾದೃಶ್ಯ ಉಂಟಾಯಿತು" ಎಂದರು.
ಸ್ತ್ರೀಗಳಿಗೆ ನೆಬಿ(ಸ) ಉಪದೇಶ ನೀಡುತ್ತಿದ್ದರು. ಪ್ರಖ್ಯಾತ ಸ್ವಹಾಬಿ ಅಬೂ ಹುರೈರಾ (ರ.ಅ) ಹೇಳುತ್ತಾರೆ"ಮಹಿಳೆಯರೊಂದಿಗೆ ನೆಬಿ (ಸ) ಹೇಳುತ್ತಿದ್ದರು ಯಾವುದೇ ಸ್ತ್ರೀಯು ಅವಳ ಮೂರು ಮಕ್ಕಳು ಚಿಕ್ಕಪ್ರಾಯದಲ್ಲಿ ಮರಣಹೊಂದಿದರೆ ಆ ಮಕ್ಕಳ ಕಾರಣದಿಂದ ಆಕೆ ಸ್ವರ್ಗ ಪ್ರವೇಶಿಸುತ್ತಾಳೆ". ಆಗ ಅಲ್ಲಿದ್ದ ಮಹಿಳೆಯ ಕೇಳಿದಳು ಎರಡು ಮಕ್ಕಳು ಮರಣಹೊಂದಿದರೆ....?ಎರಡು ಮಕ್ಕಳ ಕಾರಣದಿಂದಲೋ ಮಹಿಳೆ ಸ್ವರ್ಗ ಪ್ರವೇಶಿಸುತ್ತಾರೆ ಎಂದು ನಬಿ (ಸ) ಉತ್ತರಿಸಿದರು.
ಇಮಾಮ್ ಖಲ್ಯೂಬಿ (ರ) ಹೇಳುತ್ತಾರೆ "ಸ್ತ್ರೀಗಳಿಗೆ ಹೈಲ್ ಮತ್ತು ಅದಕ್ಕೆ ಸಂಬಂಧಿಸಿದ ಕಾರ್ಯಗಳು ಕಲಿಯುವುದು ಕಡ್ಡಾಯವಾಗಿದೆ. "ಹಾಶಿಯತುಲ್ ಖಲ್ಯೂಬಿ". ಓರ್ವ ಸ್ತ್ರೀ ಔಷಧಿಗಳನ್ನು ಉಪಯೋಗಿಸಿ ಹೈಳ್ ನಿಫಾಸ್ ಮುಂತಾದವುಗಳನ್ನು ಮುಂದೂಡುವುದಾದರೆ ಅವಳು ನಮಾಜ್ ಮಾಡಬೇಕೆಂದಿಲ್ಲ (بشرة الكريم). ಮತ್ತೊಂದು ಮಸ್ಅಲ ಸ್ತ್ರಿಗಳು ಯಾವಾಗಲೂ ಅರಿತಿರಬೇಕು. ಹೈಲ್ ನ ಪ್ರಾರಂಭ ಮತ್ತು ಮುಗಿಯುವ ಸಮಯ ಮತ್ತು ಅದರ ಸಂಕ್ಷಿಪ್ತ ಕಾರ್ಯಗಳ ಕುರಿತು. ಇಮಾಮ್ ಗಳು ಹೇಳುತ್ತಾರೆ:-ಹೈಳ್ ನಿಫಾಸ್ ಪ್ರಾರಂಭವಾಗುವಾಗ ಹೊತ್ತಿನಿಂದ ನಮಾಜ್ ಮಾಡಲು ಸಮಯ ಸಿಕ್ಕಿದರೆ ಅವಳು ಅದನ್ನು ಕಳಾ ಮಾಡಬೇಕು.
ಒಂದು ವೇಳೆ ಹೈಲ್ ಮುಗಿಯಿತು ಅದರ ತಟಸ್ಥ ವೆಲ್ಲ ಹೋಯಿತು ಎಂದಾದರೆ ಆ ಸಮಯದಲ್ಲಿ ಒಂದು ತಕ್ಬೀರ್ ಸಮಯ ಮಾತ್ರ ಬಾಕಿ ಇದೆಯೆಂದರೆ ಆ ನಮಾಜ್ ಮತ್ತು ಅದಕ್ಕೆ ಜಮ್ಮು ಮಾಡುವ ನಮಾಜ್ ಇದ್ದರೆ ಅದನ್ನು ನಿರ್ವಹಿಸಬೇಕು. ಉದಾಹರಣೆಗೆ ನೋಡುವುದಾದರೆ ಸ್ತ್ರೀಗೆ ಮಗರಿಬ್ ಮುಂಚೆ ಒಂದು ತಕ್ಬೀರ್ ಹೇಳುವ ಸಮಯ ಬಾಕಿ ಇರುವಾಗ ಹೈಲ್ ಮುಗೀತು ಎಂದಾದರೆ ಆಕೆ ಆಸರ್ ನೊಂದಿಗೆ ಲುಹ್ರ್ ನಮಾಜ್ ಮಾಡಬೇಕು.
ಇಮಾಂ ಅಲ್ಲಾಮ ಶ್ವಾದಬಿಗೀ ಹೇಳುತ್ತಾರೆ:-ಓರ್ವ ಮಹಿಳೆ ಹೈಳ್ ಸಮಯಗಳಲ್ಲಿ ನಮಾಜ್ ಉಪವಾಸ ತ್ಯಜಿಸುವಾಗ ಇದು ಅಲ್ಲಾಹು ಮತ್ತು ರಸೂಲರ ಆಜ್ಞೆಯಂತೆ ತ್ಯಜಿಸುತ್ತಿದ್ದೇನೆ ಎಂದು ಭಾವಿಸಿಕೊಂಡರೆ ಆಕೆಗೆ ನಮಾಜ್ ಉಪವಾಸ ಮಾಡಿದ ಪ್ರತಿಫಲವಿದೆ.ಓರ್ವ ಸಾಧಾರಣ ಮಹಿಳೆಗೆ ನಾಲ್ಕು ವಿಧದಲ್ಲಿ ಔರತ್ ಗಳಿವೆ. ಅನ್ಯ ಪುರುಷರ ಎದುರು ಶರೀರವನ್ನು ಸಂಪೂರ್ಣವಾಗಿ ಮುಚ್ಚಬೇಕು,ವಿವಾಹ ಬಂಧ ಹರಾಂ ಆದ ಪುರುಷರ ಎದುರಲ್ಲಿ ಕಾಲಿನ ಮಂಡಿಕೀಲಿನಿಂದ ಹೆಕ್ಕುಲದ ವರೆಗೆ ಮುಚ್ಚಬೇಕು. ಕಾಫಿರ್ ಗಳಾದ ಸ್ತ್ರೀಯರ ಎದುರು ಸಾಧಾರಣವಾಗಿ ಕೆಲಸ ಮಾಡುವ ಸಮಯದಲ್ಲಿ ತಲೆ, ಕುತ್ತಿಗೆ, ಅಂಗೈ ಮತ್ತುಕಾಲುಪಾದ ಹೊರತು ಪಡಿಸಿ ಎಲ್ಲವನ್ನು ಮುಚ್ಚಬೇಕು. ಔರತ್ ಮುಚ್ಚುವ ಕಾರ್ಯದಲ್ಲಿ ಹೆಚ್ಚು ಶ್ರದ್ಧೆ ಇರಬೇಕಾದದ್ದು ನಮಾಜಿನಲ್ಲಿ.ಶರೀರದ ಕೂದಲೋ ಚರ್ಮವೋ ತೋರ್ಪಡಿಸಿ ಕಾಣುವ ರೀತಿಯಲ್ಲಿ ನಮಾಜ್ ಮಾಡಬಾರದು.ಕಾಲಿನ ಪಾದ ಕೂಡ ಮುಚ್ಚಬೇಕು.
ಮತ್ತೊಂದು ಗಂಭೀರವಾಗಿ ಪರಿಗಣಿಸಬೇಕಾದ ಕಾರ್ಯವಾಗಿದೆ ಅನ್ಯ ಪುರುಷರ ಎದುರು ಮುಖ ಅಂಗೈ ಮುಚ್ಚಿ ತೋರ್ಪಡಿಸದಂತೆ ವಸ್ತ್ರ ಧರಿಸುವುದು.ಇದರ ಬಗ್ಗೆ ಶ್ರದ್ಧೆಯಿಂದ ಚಿಂತಿಸಬೇಕಿದೆ. ಈ ಕಾರ್ಯಗಳನ್ನು ವಿಶುದ್ಧ ಕುರ್ ಆನ್ ನಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ಇಮಾಮ್ ಅಲ್ಲಾಮ ಕುರ್ದಿ ಹೇಳುತ್ತಾರೆ " ಅನ್ಯ ಪುರುಷರ ಶರೀರದ ದೇಹದ ಭಾಗದಿಂದ ಯಾವುದೇ ಒಂದು ಭಾಗ ನೋಡಲು ಸ್ತ್ರೀಗಳಿಗೆ ಹರಾಮ್ ಆಗಿದೆ. ಅಲ್ಲಿ ಯಾವುದೇ ಪಿತ್ನವಾಗುವುದಿಲ್ಲ ಎಂಬ ನಂಬಿಕೆ ಇದ್ದರೂ ಯಾವುದೇ ಕಾಮ ವಿಚಾರ ಇಲ್ಲದಿದ್ದರೂ ಅದು ಹರಾಮ್ ಆಗಿದೆ.(ಶರ್ವಾನಿ) ಅಲ್ಲಾಹನು ನಮಗೆ ದೀನಿನ ಅರಿವನ್ನು ನೀಡಿ ಆತನು ಇಷ್ಟ ಪಡುವ ಸಜ್ಜನರ ಸಾಲಿನಲ್ಲಿ ಸೇರಿಸಲಿ (آمين).
ಶರೀಫ್ ಹೈತಮಿ ದಾರಿಮಿ