ಮುಹಮ್ಮದ್ ನೆಬಿ(ಸ) : ಸಹಿಷ್ಣುತೆಯ ಪ್ರತೀಕ
ತನ್ನ ಜೀವನದಿಂದ ಹಾಗೂ ಕರ್ಮಗಳಿಂದ ಪ್ರೇರಿತರಾದ ಪ್ರವಾದಿ ಪೈಗಂಬರ್ (ಸ) ರವರು ಮನುಷ್ಯರಿಗೆ ಹಾಗೂ ಜಿನ್ನ್ ಗಳಿಗೆ ಇನ್ನಿತರ ವಸ್ತುಗಳಿಗೆ ಅನುಗ್ರಹೀತರಾಗಿದ್ದರು. ಅವರ ಜೀವನವು ತನ್ನ ಜವಾಬ್ದಾರಿಯ ಹೊರತು ಸರ್ವರಿಗೂ ದೊರಕಬೇಕಾದ ನೀತಿ ಮತ್ತು ಅವಕಾಶಗಳನ್ನು ಗಳಿಸಿಕೊಡುತ್ತಿದ್ದದರು. ಆ ದಿವ್ಯ ಪ್ರಕಾಶದಿಂದ, ಲೋಕದ ಆಕ್ರಮಣ ಲೂಟಿಯನ್ನು ಕೊನೆಗೊಳಿಸಿ, ಈ ಭೂಮಿಯಲ್ಲಿ ಶಾಂತಿಯುತವಾದ ವಾತಾವರಣವನ್ನು ಸೃಷ್ಟಿಸಲು ಪ್ರೀತಿ, ಸಮತ್ವ, ಸಹಬಾಳ್ ಮತ್ತು ಸಹಿಷ್ಣುತೆಯಿಂದ ಕೊಡಿದ ಆಧುನಿಕ ಯುಗವನ್ನು ರಚಿಸಿದರು.
ಇವು ಸತ್ಯವೆಂದು ತಿಳಿದರೂ ಶತ್ರುಗಳು ವಿಶುದ್ಧ ಇಸ್ಲಾಮಿನ ಹಾಗೂ ಪ್ರವಾದಿ (ಸ)ರನ್ನು ಭಿನ್ನವಾಗಿ ಚಿತ್ರೀಕರಿಸಲು ಶ್ರಮಿಸುತ್ತಿರುವ ಸಮಕಾಲಿನ ಸಂದರ್ಭದಲ್ಲಿ ಪ್ರವಾದಿ ಜೀವನದ ಸವಿಶೇಷತೆಗಳನ್ನು ವಾಚಿಸಬೇಕು. ಪ್ರವಾದಿಯವರ ವ್ಯಕ್ತಿ ಜೀವನ ಮತ್ತು ಸಾಮೂಹಿಕ ಜೀವನವಿಡೀ ನೀತಿ, ಪ್ರೀತಿ ಮತ್ತು ಸಹನೆಯಾಗಿತ್ತು.
ಅನುಚರರೊಂದಿಗೆ ಇರುವ ಪ್ರೀತಿ ಸ್ವಾಭಾವಿಕ ಆದರೆ ಪರಾಕ್ರಮಿಗಳೊಂದಿಗೆ ಸಹಿಷ್ಣುತೆಯಿಂದ ಹಾಗೂ ಕ್ಷಮಾಶೀಲತೆಯಿಂದ ವರ್ತಿಸುವ ಆ ಗುಣ ಚರಿತ್ರೆ ಪುಟಗಳಲ್ಲಿ ಕಾಣಲು ಸಾಧ್ಯ ಇದನ್ನು ಮರೆಮಾಚಲು ಶ್ರಮಿಸುತ್ತಿರುವ ಶತ್ರುಗಳಲ್ಲಿ ಪ್ರವಾದಿಯ ಸುಂದರವಾದ ಜೀವನದ ಸತ್ಯವನ್ನು ಹೇಳಿಯೇ ತಕ್ಕದ್ದು. ಕಲುಷಿತವಾದ ವರ್ತಮಾನದಲ್ಲಿ ನೀತಿ ಧರ್ಮದ ಮೂಲ್ಯವನ್ನು ಮಹಾತ್ಮರ ಜೀವನದ ಮೂಲಕ ಲೋಕಕ್ಕೆ ತಿಳಿಸಿದರೆ ಮಾತ್ರ ಸಮೂಹವನ್ನು ಸನ್ಮಾರ್ಗಕ್ಕೆ ಕೊಂಡೊಯ್ಯಲು ಸಾಧ್ಯ. ಹೀಗೆ ನೋಡಿದರೆ ಚರಿತ್ರೆಯಲ್ಲಿ ಅತುಲ್ಯನಾದವರು ಪ್ರವಾದಿ ನೆಬಿ(ಸ).
ಇಡೀ ಲೋಕವು ಇಸ್ಲಾಮಿನ ಅಧೀನದಲ್ಲಿ ಹೊಂದುಗೂಡಲು ಪ್ರಕಟಿಸಲಿಲ್ಲ. ಆದರೆ ಶಾಂತಿಯುತವಾದ ಕಾಲಾವಸ್ಥೆಯಲ್ಲಿ ಸತ್ಯವನ್ನು ಪಸರಿಸಿ ಆಕ್ರಮಣದಿಂದ ಮುಕ್ತಿ ಹೊಂದಬೇಕು ಎಂಬುದಾಗಿದೆ ಅವರ ನುಡಿ. ಎಲ್ಲರಿಗೂ ಮನುಷ್ಯನೆಂಬ ನೆಪದಲ್ಲಿ ಅವಕಾಶಗಳು ಪರಸ್ಪರ ಭೇದವಿಲ್ಲದೆ ದೊರಕಬೇಕೆಂದು ಅವರ ಜೀವನದ ಹಾದಿಯಿಂದ ತೋರಿಸಿಕೊಟ್ಟರು. ಕೋಮು ಗಲಭೆಯು ಸಮಾಜದೆಡೆಯಲ್ಲಿ ಭಿನ್ನತೆಯನ್ನು ಉದ್ಬವಿಸುವ ಮೂಲವಸ್ತು. ಮನುಷ್ಯರು 'ರಹ್ಮಾನ್' ಎಂಬ ಅಲ್ಲಾಹನ ನಾಮದ ಗುಣ ವಿಶೇಷತೆಯನ್ನು ತಿಳಿದುಕೊಂಡು ಸರ್ವ ಸೃಷ್ಟಿಗಳಲ್ಲಿ ಕರುಣೆಯನ್ನು ರೂಢಿ ಮಾಡಲು ಪ್ರವಾದಿಯವರ ಕಲ್ಪನೆ.
ಸೃಷ್ಟಿಗಳೆಲ್ಲರೂ ಅಲ್ಲಾಹನ ದಾಸರು, ಇವರಲ್ಲಿ ಅತಿಯಾಗಿ ಶ್ರೇಷ್ಟರು ಅವನ ದಾಸರಲ್ಲಿ ಸಹಾನುಭೂತಿ- ವುಳ್ಳವನಾಗಿದ್ದಾನೆ. ಮನುಷ್ಯರೊಡನೆ ಕರುಣೆ ತೋರದವನಿಗೆ ಅಲ್ಲಾಹನ ಕರುಣೆ ದೊರಕುವುದಿಲ್ಲ. ಈ ಕಾರ್ಯದಲ್ಲಿ ಧಾರ್ಮಿಕ ಭಿನ್ನತೆಗೆ ಯಾವುದೇ ಪ್ರಾಮುಖ್ಯತೆ ಇಲ್ಲ, ಹಾಗೂ ಇಸ್ಲಾಮಿನ ರಾಷ್ಟ್ರಗಳಲ್ಲಿ ಯಾವ ಜಾತಿಯವನಾದರೂ ಈ ನಿಯಮ ಉಲ್ಲಂಘಿಸಿಯದರೆ ಅವನಿಗೆ ರಕ್ಷಣೆ ಒದಗಿಸಲು ಕಡ್ಡಾಯವಾಗಿದೆ. ಮೆಕ್ಕಾ ವಿಜಯದ ಸುಸಂದರ್ಭದಲ್ಲಿ ಬಹುಪರಿಗಣೆ ನೀಡಿದ್ದು ಪ್ರವಾದಿಯನ್ನು ಜೀವನಪೂರ್ತಿ ಕುತಂತ್ರಗೈದವರು ಅಬೂ-ಸುಫ್ಯಾನ್ .
ಆದರ್ಶಕ್ಕೆ ಬೇಕಾಗಿ ಕುಟುಂಬ ಮತ್ತು ಮಣ್ಣನ್ನು ತ್ಯಜಿಸಿ ಮದೀನಕ್ಕೆ ವಲಸೆ ಬಂದ ನಂತರದ ದಿನಗಳಲ್ಲಿ ಮಕ್ಕಾದ ಸಹೋದರ ವಾಸಿಗಳು ಕಡುಬಡತನದಿಂದ ಬಳಲುತ್ತಿದ್ದಾರೆ ಎಂದು ತಿಳಿದ ಪ್ರವಾದಿಯು 500 ಚಿನ್ನ ನಾಣ್ಯಗಳನ್ನು ಕಳುಹಿಸಿದರು. ಯಾರಿಗಾದರೂ ಸಾಂತ್ವನ ನೀಡಲು ಬಾವುಟದ ಬಣ್ಣ- ಜಾತಿಯ ಕೈಸಾಕ್ಷಿ ಪರಿಶೀಲಿಸಬೇಕೆಂದಿಲ್ಲ ಎಂದಾಗಿದೆ ಅವರ ನುಡಿ. ಇದರೊರೆತು ಬೇರೆ ಸಾಕ್ಷಿ ಬೇಕಾ? ಅವಿಶ್ವಾಸಿಗಳ ಬೇಡಿಕೆಯಂತೆ ಸಹಾಯ ನೀಡಲು ಹಾಗೂ ಒಂದು ವೇಳೆ ರೋಗಪೀಡಿತರಾದರೆ ಸುಶ್ರೂಷಿಸುವ ವಿಶಾಲ ಮನೋಭಾವದ ಪ್ರವಾದಿಯವರು ಭೌತಿಕವಾಗಿ ಏನು ಆಕಾಂಕ್ಷಿಸಲಿಲ್ಲ. ಶತ್ರುಗಳ ಎದುರಾಗಿ ಪ್ರಾರ್ಥನೆ ಮಾಡಲು ಅನುಚರರು ಪ್ರಶ್ನಿಸಿದಾಗ ಪ್ರವಾದಿಯು ಅಲ್ಲಾಹನಲ್ಲಿ ಸನ್ಮಾರ್ಗ ಹೊಂದಲು ಅವರಿಗೆ ಪ್ರಾರ್ಥನೆ ಮಾಡಿದರು. ಇಸ್ಲಾಮಿನ ಶತ್ರು ಸಮುದಾಯವೆಂದು ಚರಿತ್ರೆ ಪುಟಗಳಲ್ಲಿ ಉಲ್ಲೇಖಿಸಲಾದ ಜೂದನ ಜನಾಝವನ್ನು ನಿಂತು ಬಹುಮಾನಿಸಿದರು. ಕೊನೆಯುಸಿರಲೆಯುವ ಕ್ಷಣ ತನ್ನ ಬಳಿ ಇದ್ದ ಪಡೆಯಂಗಿಯನ್ನು ಜೂದನ ಬಳಿ ಜಮೀನಲ್ಲಿಟ್ಟಿದ್ದರು, ಇದು ಅಪರಿಚಿತನಾದ ಓರ್ವ ಅತಿಥಿ ರಾತ್ರಿ ಮದೀನಾ ನಗರ ಪ್ರವೇಶಿಸಿದಾಗ ಅವನನ್ನು ಸತ್ಕರಿಸಲು ಗೋಧಿ ಹುಡಿಯನ್ನು ಖರಿದಿಸಲು ಸಾಲ ಮಾಡಿದ ಹಣವಾಗಿದೆ.
ಪ್ರವಾದಿಯ ಅಧಿಕಾರದಲ್ಲಿಯೇ ಆರಾಧನೆ ಮಾಡಲು ಎಲ್ಲಾ ಸ್ವಾತಂತ್ರ್ಯ ನೀಡಿದರು. ನಜ್ರಾನಿಂದ ಬಂದ ಕ್ರಿಶ್ಚನ್ ಗುಂಪಿಗೆ ಪ್ರಾರ್ಥನೆ ನಿರ್ವಹಿಸಲು ಮಸೀದಿಯಲ್ಲಿ ಸೌಕರ್ಯ ಒದಗಿಸಿದರು ಹಾಗೂ ಮದೀನಾ ತಲುಪಿದ ಜೂದರಲ್ಲಿ ಹಾಗೂ ಕ್ರಿಶ್ಚನ್ನರಲ್ಲಿ ಐಕ್ಯದೊಂದಿಗೆ ಪ್ರಕಟಿಸಿದ ಅಲ್ಪಕಾಲದ ನಂತರ ಬೈತುಲ್ ಮುಖದ್ದಸಿಗೆ ಮುಖ ಮಾಡಿ ನಮಾಜ್ ಮಾಡಿದರು. ಮದೀನಾದ ಜೂದರೊಂದಿಗಿರುವ ಒಪ್ಪಂದದ ಪ್ರಕಾರ ಯುದ್ದಸಂಪತ್ತಿನಲ್ಲಿ ಅವಕಾಶವನ್ನು ಮಾಡಿದರು. ಶಾಂತಿಯುತವಾದ ವಾತಾವರಣದಲ್ಲಿ ಜೀವಿಸುವ ಅವಿಶ್ವಾಸಿ ಸಹೋದರನನ್ನು ಕೊಲೆಗೈದರೆ ಸ್ವರ್ಗದ ಪರಿಮಳವು ನಿಷಿದ್ಧವಾಗಿದಾಗ ಲೋಕದಲ್ಲಿ ಪ್ರಸಿದ್ಧವಾದ ಮದೀನಾದ ರಾಜರನ್ನು ಹಾಗೂ ದಿವ್ಯ ಆದರ್ಶವನ್ನು ಯಾವನೋ ಅವಿವೇಕಿ ಮಾಡಿದ ತಪ್ಪಿನಿಂದಾಗ ಇಸ್ಲಾಮಿನ ಅಪರಾಧಿ ಎಂದು ಪ್ರಕಟಿಸುವ ಕಿಡಿಕೇಡಿಗಳು ಸತ್ಯ ತಿಳಿಯಬೇಕಾಗಿದೆ. ಸಿರಿಯಾ ಮಣ್ಣಿಗೆ ಹೊರಟ ಸೇನೆಗೆ ಪ್ರಪ್ರಥಮ ಖಲೀಫ ಸಿದ್ದೀಖ್(ರ) ರವರ ಉಪದೇಶ ಸ್ಮರಣೀಯ, ಮಠದ ಮಂಟಪದಲ್ಲಿ ಪ್ರಾರ್ಥನೆಯಲ್ಲಿ ನಿರತರಾದ ಋಷಿಗಳನ್ನು ಕಡಿಯಬಾರದು, ದೇವಾಲಯಗಳನ್ನು ನೆಲೆಸಮಗೊಳಿಸಬಾರದು, ಹಿರಿಯರಿಗೆ, ಕಿರಿಯರಿಗೆ ಹಾಗೂ ಹೆಣ್ಣಿಗೆ ಯಾವುದೇ ತೊಂದರೆಗಳನ್ನು ನೀಡಬಾರದು. ವಯಸ್ಸಾದ ಬಿಕ್ಷೆಬೇಡುವ ಜೂದನನ್ನು ಕಂಡ ಖಲೀಫ ಉಮರ್ (ರ)ರವರು ಮನೆಗೆ ಆಹ್ವಾನಿಸಿ ಅತಿಥಿ ಸತ್ಕರಿಸುತ್ತಾ ಖಜಾನೆಯಿಂದ ಅನುದಾನ ನೀಡಿದರು. ಸಿರಿಯ ಸಂದರ್ಶನ ವೇಳೆಯಲ್ಲಿ ಹರಿದ ಖಮೀಸನ್ನು ತೊಳೆದು ಹೊಲಿಯುವ ಗಳಿಗೆಯಲ್ಲಿ ಕ್ರೈಸ್ತ ಗೆಳೆಯನ ಬಟ್ಟೆಯನ್ನು ಧರಿಸಿ ಅವನ ಪಾತ್ರೆಯಲ್ಲಿ ಅಂಗಸ್ನಾನ ಮಾಡಿದರು. ಬಹುಸ್ವರ ಸಮೂಹಗಳೆಡೆಯಲ್ಲಿ ಒಬ್ಬ ಮುಸಲ್ಮಾನನ ನಡವಳಿಕೆಯು ಚರಿತ್ರೆ ಪುಟಗಳಲ್ಲಿ ಮಾದರಿಯಾಗಿರುತ್ತದೆ. ಇಸ್ಲಾಮೇತರ ರಾಜರನ್ನು ಪ್ರವಾದಿಯವರು ಹಾಗೂ ಖಲೀಫರು ಬಹುಮಾನಿಸಿದರು.
ವಿವಿಧ ರಾಜ್ಯದಿಂದ ಪ್ರವಾದಿ ಸಂದೇಶದಿಂದ ಮಾದೀನಾ ತಲುಪಿದ ದಾಸರು ಪ್ರವಾದಿಯ ನಡವಳಿಕೆಯಿಂದ ಆಕೃಷ್ಠರಾಗಿ ಇಸ್ಲಾಂ ಸ್ವೀಕರಿಸುತ್ತಿದ್ದರು. ನಜ್ಜಾಶೀ ರಾಜನ ದಾಸರು ಮದೀನಾ ತಲುಪಿದಾಗ ಪ್ರವಾದಿಯು ತನ್ನ ಕೈಯಿಂದ ಆಹಾರ ಬಡಿಸಿದರು. ಆಕಾಶ - ಭೂಮಿಗಳೊಂದಿಗೆ ಸೌಮ್ಯದಿಂದ ವರ್ತಿಸಿ ಸಮತ್ವದ ವಿತ್ಯಸ್ಥ ಪಾಠಗಳನ್ನು ನೀಡಿದ ಆ ಮಹಾತ್ಮನ ಹೆಸರಲ್ಲಿ ಆಕ್ರಮಣಕ್ಕೆ ಒತ್ತು ನೀಡುವ ಇಸ್ಲಾಮಿನ ನಾಮ ಹೇಳಲು ಯಾವುದೇ ಅರ್ಹತೆ ಇಲ್ಲ. ಮುಸ್ಲಿಮರನ್ನು ಅಪರಾಧಿ ಗುಂಡಿಯಲ್ಲಿ ಬೀಳಿಸಲು ಪ್ರಯತ್ನಿಸುವವನ ಮುಂದೆ ಪ್ರಶ್ನೆ ಕೇಳಲೇಬೇಕು? ಧರ್ಮದ ಹಾಗೂ ಜಾತಿಯ ಹೆಸರಲ್ಲಿ ಭಿನ್ನತೆಯನ್ನು ಸೃಷ್ಟಿಸುವ ಹಾಗೂ ಶಾಂತಿಯುತವಾಗಿ ಜೀವಿಸುವ ಜನರೆಡೆಯಲ್ಲಿ ಅಪಪ್ರಚಾರ ಮಾಡಿ ರಾಷ್ಟ್ರೀಯ ಲಾಭ ಪಡೆಯುವ ಕುತಂತ್ರವನ್ನು ಮನುಷ್ಯ ಪ್ರೇಮಿಗಳಾಗಿ ಜೀವಿಸುವ ನಾವು ತಿಳಿಯಲೇಬೇಕು.
ಮೂಲ: ಡಿ. ಅಬೂಬಕ್ಕರ್ ಹುದವಿ
ಅನುವಾದ: ಅರ್ಫಾಝ್ ಮುಕ್ವೆ