ಮಹಾತ್ಮ ಗಾಂಧಿ " ನಾನು ಖಲೀಫ ಉಮರಿನ (ರ) ಆಡಳಿತವನ್ನು ಇಷ್ಟಪಡುವೆ"
ನಾವು ಈಗ ಬದಲಾದ ಭಾರತದಲ್ಲಿನ ಭಾರತೀಯ ಪ್ರಜೆಗಳು. ಇಂದಿನ ಪ್ರಮುಖ ಬದಲಾವಣೆಯಂದರೆ 1947ರ ನಂತರದ ಪೀಳಿಗೆ ಸರ್ಕಾರಗಳ ಅಧಿಕಾರ ಯಂತ್ರಗಳಾಗಿ, ಜನ ಪ್ರತಿನಿಧಿಗಳಾಗಿ ಹೊರಹೊಮ್ಮಿರುವುದು. ಇದು ಕಾಲದ ಚಲನಶೀಲತೆಯ ಪ್ರವಾಹದಲ್ಲಿ ಸಂಭವಿಸುವ ಸಹಜ ಪ್ರಕ್ರಿಯೆ ಎನ್ನುವ ಮಾತೇನೂ ನಿಜ. ಆದರೆ ಈ ಸತ್ಯದೊಳಗೆ ಇತಿಹಾಸ ಪುರುಷರ ಹೆಜ್ಜೆ ಗುರುತುಗಳ ಬಗ್ಗೆ ನಮಗೆ ವ್ಯಾಪಕ ಅರಿವಿದ್ದಲ್ಲಿ ವರ್ತಮಾನ ಯಶಸ್ಸು ಕಂಡುಕೊಳ್ಳಬಹುದು ಹಾಗೆ ನೋಡುವುದಾದರೆ. ಭಾರತದ ಪಿತಾಮಹ, ಮಹಾತ್ಮ ಗಾಂಧಿಯವರ ಹೆಜ್ಜೆ ಗುರುತುಗಳು ನಮಗೆ ಮಾದರಿ.
ಗಾಂಧಿ ಎಲ್ಲಿಯೇ ವಾಸವಾಗಿರುತ್ತಿದ್ದರೂ ಸಾಮಾನ್ಯರಂತೆ ರಾತ್ರಿಯನ್ನು ಬಯಲು ಹಾಸಿನಲ್ಲಿ ಕಳೆಯುತ್ತಿದ್ದರು. ಕೂಲಿ ಕಾರ್ಮಿಕರಿಂದ ಹಿಡಿದು ಎಲ್ಲಾ ಮನುಷ್ಯರು ಸಹ ಅವರ ಬೇಟಿಗೆಂದು ಬರುತ್ತಿದ್ದರು. ಬಹಳಷ್ಟು ಮಟ್ಟಿಗೆ ಗಾಂಧಿ ಪ್ರತಿಯೊಬ್ಬರಿಗೂ ಆಶ್ರಯವನ್ನ ನೀಡುತ್ತಿದ್ದರು, ತನ್ನ ವಿರೋಧಿಗಳನ್ನೂ ಕೂಡ, ಹಾಗೆಯೇ ಅವರು ಮಾಡಿದ್ದುದನ್ನೆಲ್ಲಾ ಸ್ವತ ಮರೆತು ಶಸ್ತ್ರ ರಹಿತ ಸೈನ್ಯದ ಒಂದು ಭಾಗವಾಗಿ ಇರುತ್ತಿದ್ದರು.
ಯಾವ ಶಕ್ತಿಗಳು ಅವರ ಒಗ್ಗಟ್ಟನ್ನು ಒಡೆಯಲಾಗದ ಹಾಗೆ ಅವರನ್ನೆಲ್ಲ ಒಂದುಗೂಡಿಸಿದರು, ಗಾಂಧಿಯ ನಿಯಮಗಳು ಬಹಳ ಸರಳವಾಗಿದ್ದವು ಅವುಗಳನ್ನು ಯಾರು ತಪ್ಪಾಗಿ ಭಾವಿಸುತ್ತೀರಲಿಲ್ಲ, ಹಾಗಾಗಿ ಗಾಂಧಿ ಎಂದರೆ ತನ್ನ ಮೇಲೆ ತಾನೇ ಸ್ವತಃ ವಿಜಯ ಸಾಧಿಸಿದ ವ್ಯಕ್ತಿಯಾಗಿದ್ದರು.
ಈ ಮಾಯಸೂತ್ರವನ್ನು ಗಾಂಧಿಯ ಅನುಯಾಯಿಗಳಿಗೆ ಮಾತ್ರ ತಿಳಿದಿರಲಿಲ್ಲ, ಅವರೊಂದಿಗೆ ರಾಷ್ಟ್ರದ ವಿಶಾಲ ಜನ ಸಮೂಹವೇ ಸಮ್ಮತಿಸಿತ್ತು. ಗಾಂಧಿ ಎಂದಿಗೂ ಯಾರನ್ನು ಉಪೇಕ್ಷಿಸುತ್ತಿರಲಿಲ್ಲ, ಅಷ್ಟೇ ಮತ್ತು ವಿಶಾಲವಾಗಿ ಗಾಂಧಿ ಅದ್ಭುತವಾದ ಫಲಿತಗಳನ್ನು ಸಾಧಿಸುತ್ತಿದ್ದರು. ಮತ್ತು ಅನೇಕ ಸಲ ಧನಗಾಹಿಗಲನ್ನು ಸಹ ದೇವರ ಸೇನಾನಿಗಳಾಗಿ ಪರಿವರ್ತಿಸುತ್ತಿದ್ದರು.
ಗಾಂಧಿ ಚದುರಂಗದಾಟದಲ್ಲಿ ಪುರುಷ- ಮಹಿಳೆ- ಭಾರತೀಯ-ಬ್ರಿಟಿಷರ ಎದುರಿಗೆ ಆಡಿದ ಬಹಳಷ್ಟು ಕಾಯಿಗಳಿದ್ದವು ಅವರಿಗೆ ಅದರಿಂದ ಸ್ವಾತಂತ್ರ ಗಳಿಸಿಕೊಳ್ಳುವ ಛಲವಿತ್ತು.ಗಾಂಧಿಯಿಂದ ಒಂದಲ್ಲ ಒಂದು ರೀತಿಯಲ್ಲಿ ಅತ್ಯಂತ ವಿರಳವೆಂಬ ರೀತಿಯಲ್ಲಾದರೂ ಬಳಕೆಗೊಳ್ಳದ ಭಾರತೀಯ ನೇತಾರರಾಗಲೀ, ಸದಸ್ಯರಾಗಲೀ, ಕಾರ್ಮಿಕ ಹಾಗೂ ಸಾಮಾನ್ಯ ಜನತೆಯೇ ಆಗಲಿ ವಿರಳವೆಂಬುದೇ ಸತ್ಯ.
ಈ ಭೂಮಿಯ ಮೇಲಿನ ಎಲ್ಲಾ ವೈಭವವನ್ನು ಪಕ್ಕಕ್ಕೆ ತಳ್ಳಿ ನಿಜವಾದ ಮಹಾತ್ಮ ಪರಿವಿಗೆ ತಲುಪಿದರು. ಪ್ರಜೆಗಳಲ್ಲಿ ತನ್ನ ಸುಖ ಶಾಂತಿಯನ್ನು ಕಂಡು, ಭಾರತದ ಅನಭಿಷಕ್ತ ಸಾಮ್ರಾಟರಾದರು.
ಬರಹ:ರಿಝ್ವಾನ್ ಪಡೀಲ್