ಟಿಪ್ಪು ವಿವಾದ ಸರಿಯೇ?

tippuಮೈಸೂರಿನ ಹುಲಿಯೆಂದು ಪ್ರಖ್ಯಾತರಾದ ಹಝ್ರತ್ ಟಿಪ್ಪು ಸುಲ್ತಾನ್ (ರ.ಅ) ರವರ ಕಾಲದಲ್ಲಿ ಹಿಂದೂ ಮತ್ತು ಮುಸಲ್ಮಾನ ಬಾಂಧ್ಯವ್ಯ ತುಂಬಾ ಅನ್ಯೋನ್ಯವಾಗಿ. ಸ್ನೇಹಮಯವಾಗಿ ಸಾಗುತ್ತಿತ್ತು. ಅದಾಗಿಯೂ ಕೆಲವು  ಪೂರ್ವಾಗ್ರಹ ಪೀಡಿತ ಇತಿಹಾಸಕಾರರು  ಟಿಪ್ಪು ಸುಲ್ತಾನರ ತೇಜೋವಧೆ  ಮಾಡಲು ವಿಫಲ ಯತ್ನವನ್ನು ಮಾಡುತ್ತಿರುವುದು ವಿಪರ್ಯಾಸ.  ಟಿಪ್ಪು ಸುಲ್ತಾನ್ (ರ.ಅ) ಮತ್ತು ಹೈದರ್‌ಆಲಿರವರು ಯಾವತ್ತಿಗೂ ಯಾವ ಧರ್ಮವನ್ನೂ ದ್ವೇಷಿಸಿರಲಿಲ್ಲ.  ಆದರೆ ತಮ್ಮ ಧರ್ಮವಾದ ಇಸ್ಲಾಮಿನ ಖಡಕ್ ಪಾಲಕರಾಗಿದ್ದರು. ಹಾಗಂತ ಅವರು ಇಸ್ಲಾಂ ಅಲ್ಲದ ಇನ್ನಿತರ ಯಾವುದೇ ಧರ್ಮವನ್ನು ದ್ವೇಷಿಸಲೋ, ಬಡಿಯಲೋ ಇಲ್ಲವಾಗಿಸಲೋ  ಹೋಗಿರಲಿಲ್ಲ. ಟಿಪ್ಪು ಸುಲ್ತಾನ (ರ.ಅ)  ತಮ್ಮ ಅಡಳಿತ ಕಾಲದಲ್ಲಿ ಸರ್ವಧರ್ಮದವರೊಂದಿಗೆ ಸೌಹಾರ್ದತೆಯೊಂದಿಗೆ ಇದ್ದರು. ಅವರು ಹಿಂದೂ ಧರ್ಮಗುರುಗಳನ್ನು ಗೌರವಿಸಿದರು ಹಾಗೂ ಅನೇಕ ದೇವಾಲಯಗಳಿಗೆ ಜೀರ್ಣೋದ್ದಾರ ಮಾಡಿದ್ದರೆಂಬುದನ್ನು ಚರಿತ್ರೆಗಾರರು ಉಲ್ಲೇಖಿಸಿದ್ದಾರೆ. ಇದಕ್ಕೆ ಉದಾಹರಣೆ ಶೃಂಗೇರಿ ಮಠದ ಜಗದ್ಗುರುಗಳಿಗೆ ಅವರು ಕೊಟ್ಟ ಕಾಣಿಕೆ!  ಇಂದು ನಾವೇ ದೇಶೋದ್ದಾರಕರೆಂದು ಬೀಗುವ  ಮರಾಠರು ಅಂದು ಧ್ವಂಸಗೊಳಿಸಿದ್ದ ಶಾರದಾಂಭ ದೇವಾಲಯದ ಪುನರ್ ನಿರ್ಮಾಣಕ್ಕೆ ಟಿಪ್ಪು ಸುಲ್ತಾನ್ (ರ.ಅ)  ಸಹಾಯವನ್ನು ಮಾಡಿದ್ದರು. ಇದು ಆಗ ಅವರ ನಡುವೆ ನಡೆದಿದ್ದ ಪತ್ರ ವ್ಯವಹಾರಗಳಿಂದ ತಿಳಿದು ಬರುತ್ತದೆ ಶೃಂಗೇರಿ ಮಠದ ಗುರುಗಳಾದ ಶಂಕರಾಚಾರ್ಯರಿಗೆ ಹೈದರ್ ಆಲಿ ಮತ್ತು ಟಿಪ್ಪು ಸುಲ್ತಾನ್ (ರ.ಅ) ಇಬ್ಬರೂ ಸಹ ಅನೇಕ ಪತ್ರಗಳನ್ನು ಬರೆದಿದ್ದಾರೆ. ಅವುಗಳೆಲ್ಲವೂ ಕನ್ನಡದಲ್ಲಿದೆ. ಎಲ್ಲಾ ಪತ್ರಗಳಲ್ಲೂ ಶಂಕರಾಚಾರ್ಯರನ್ನು ಸಂಬೋಧಿಸುವ ಮರ್ಯಾದೆಯ ರೀತಿ ಸರ್ವ ಅಡಳಿತಗಾರರಿಗೂ ಮಾದರಿಯಾಗಿತ್ತು. ಯಾವಾಗಲೂ ಪ್ರತಿಯೊಂದು ಲೆಟರ್‌ನಲ್ಲಿಯೂ ಶ್ರೀ ಮತ್ಸರಮಹಂಸಾರಿ ಯಥೋಕ್ತ ಬಿರುದಾಂಕಿತರಾದಂಥ ಶ್ರೀ ಸಚ್ಚಿದಾನಂದ ಭಾರತೀ  ಮಹಾಸ್ವಾಮಿಗಳವರಿಗೆ ಟಿಪ್ಪು ಸುಲ್ತಾನ್ ಬಾದ್‌ಶಾಹರವರ ಸಲಾಂ ಎಂದು ಆರಂಭವಾಗಿರುತ್ತದೆ. ಇಂತಹ ಹಲವು ಪತ್ರಗಳು ಟಿಪ್ಪು ಸುಲ್ತಾನ್ (ರ.ಅ) ರವರು ಪರ ಧರ್ಮದ್ವೇಷಿಯಾಗಿರಲಿಲ್ಲವೆಂದು ಸಾರಿ ಹೇಳುತ್ತದೆ. ಶಾರದಾಂಬೆ ಮಂದಿರಕ್ಕಾಗಿ ೪೦೦ ರಹತಿ ಕಳುಹಿಸಿದ್ದ, ಮಠಕ್ಕಾಗಿ ’ಸಲ್ಲಗೇಶ’ ನೆಂಬ ಆನೆಯನ್ನು ಕಳುಹಿಸಿ ಕೊಟ್ಟಿದ್ದ ಪರಧರ್ಮ ಸಹಿಷ್ನುವಾಗಿದ್ದ ಟಿಪ್ಪು ಸುಲ್ತಾನ್ (ರ.ಅ) ರವರನ್ನು ಮದಾಂದ, ಹಿಂದು ಧರ್ಮದ್ವೇಷಿ ಎಂದೆಲ್ಲ ಹೇಳಿ ಕೇಂದ್ರ ಸರಕಾರದಿಂದ ಪ್ರಸ್ತಾವಿತ ಟಿಪ್ಪು ಸುಲ್ತಾನ ವಿಶ್ವ ವಿದ್ಯಾನಿಲಯವನ್ನು ವಿರೋಧಿಸುವವರು  ಇತಿಹಾಸವನ್ನು ಪರಿಶೀಲಿಸಬೇಕು. ಟಿಪ್ಪು ಸುಲ್ತಾನರ ಬಗ್ಗೆ ಇಲ್ಲಸಲ್ಲದನ್ನು ಹೇಳಿ, ಸುಳ್ಳುಗಳನ್ನು ಬಿತ್ತುವ ಕಠೋರ ಹೃದಯಿಗಳು, ಏನೂ ಅರಿಯದ ಮುಗ್ಧ ಹಿಂದೂಗಳು ಟಿಪ್ಪು ಸುಲ್ತಾನ (ರ.ಅ)ರ ಬಗ್ಗೆ ತಾತ್ಸಾರ ಭಾವನೆ, ಕಠಿಣ ನಿಲುವನ್ನು ಹೊಂದುವಂತೆ ಪ್ರೇರೆಪಿಸಿ ಇತಿಹಾಸವನ್ನು ವಕ್ರಗೊಳಿಸಿ ರಾಜಕೀಯ ಲಾಭಗೊಳಿಸುವ ಹುನ್ನಾರದಲ್ಲಿದ್ದಾರೆ. ದೇಶದ ಶಾಂತಿ ಸಾಮರಸ್ಯ ಸೌಹಾರ್ದಪ್ರಿಯ  ಜನತೆಯು ಇದನ್ನು ಅರಿತುಕೊಳ್ಳಬೇಕಾಗಿದೆ. ಟಿಪ್ಪು ಸುಲ್ತಾನರ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಮುಕ್ತವಕಾಶವನ್ನು ’ಸತ್ಯಾದಾರ’ ಒದಗಿಸಿಕೊಡುತ್ತದೆ. ಎಲ್ಲವೂ ನಿಷ್ಪಕ್ಷವಾಗಿ ವಸ್ತು ನಿಷ್ಠ ಮತ್ತು ಆಧಾರ ಸಹಿತವಾಗಿರಲಿ. -ಖಲಂದರ್ ಅಝೀಝ್ ಕಾಮಿಲ್ ಅಝ್‌ಹರಿ ಅಲ್‌ಖಾದ್ರಿ ಜಾವಗಲ್

Related Posts

Leave A Comment

Voting Poll

Get Newsletter