ಅಬೂಬಕ್ಕರ್ (ರ) ಆಡಳಿತಾತ್ಮಕ ಸಾಧನೆಗಳು ಮತ್ತು ವಿಯೋಗ
ಮಶಿಯ್ಯಿಬುನು ಹಾರಿಸ್ (ರ)ರನ್ನು ಇರಾಖಿನ ಭಾಗಕ್ಕೆ ಕಳುಹಿಸಿದ್ದರೆಂದು ಮುಂಚೆ ಪ್ರಸ್ತಾವಿಸಿದೆಯಲ್ಲ. ನಂತರ ಖಾಲಿದುಬ್ ನು ವಲೀದ್ (ರ)ರವರ ನೇತೃತ್ವದಲ್ಲಿ ಒಂದು ಮುಸ್ಲಿಂ ವಸ್ತ್ರಧಾರಿ ಸೈನ್ಯವನ್ನು ಅಲ್ಲಿಗೆ ಕಳುಹಿಸಿದರು. ಅದರೊಂದಿಗೆ ಆ ಭಾಗದಲ್ಲಿ ಯುದ್ಧ ಆರಂಭಿಸಿತು .ಹಿಜಿರಾ12ರಲ್ಲಿ ಖಾಲಿದ್ ರವರು ಹಿರಾ ಕೈವಶ ಮಾಡಿದರು. ವರ್ಷಕ್ಕೆ 70000 ಪವನ್ ಟ್ಯಾಕ್ಸ್ ನಿಶ್ಚಯಿಸಿದರು. ಅನ್ಯ ರಾಜ್ಯದಿಂದ ಮುಸ್ಲಿಮರು ಮೊದಲನೆಯಾಗಿ ಸ್ವೀಕರಿಸಿದ ಟ್ಯಾಕ್ಸ್ ಇದಾಗಿದೆ ಎಂದು ಹೇಳಲ್ಪಡುತ್ತದೆ.
ಹೀರ :ಅಧೀನ ಗೊಳಿಸಿದ ನಂತರ ಖಾಲಿದ್ (ರ) ಐಲತ್ತಿನ ಎದುರಾಗಿ ಅಲ್ಲಿಯ ಆಡಳಿತ ಅಧಿಕಾರಿಯಾಗಿದ್ದ ಯರ್ ಮುಸನ್ನು ಪರಾಜಯಗೊಳಿಸಿ ಐಲತ್ತನ್ನು ಕೈವಶಮಾಡಿಕೊಂಡರು.ಒಂದು ಲಕ್ಷ ರೂಪಾಯಿ ಬೆಲೆ ಬರುವ ಆ ವ್ಯಕ್ತಿಯ ಕಿರೀಟ ಖಾಲಿದ್(ರ) ರವರಿಗೆ ಸಿಕ್ಕಿತು. ಇದನ್ನು ಅನುಸರಿಸಿ ಕಿಸ್ರಾ ಕಳುಹಿಸಿದ ಬೇರೆ ಬೃಹತ್ ಸೈನ್ಯಗಳನ್ನು ಕೂಡ ಖಾಲಿದ್(ರ) ಪರಾಜಯ ಗೊಳಿಸಿದರು. ನಂತರ ಖಾಲಿದ್(ರ) ಯೂಫ್ರೆಟೀಸ್, ಟೈಗ್ರಿಸ್ ಎಂಬ ನದಿಗಳ ಭಾಗಗಳಿಗೆ ಎದುರಾದರು. ಆ ಪ್ರದೇಶಗಳಲ್ಲಿದ್ದ ಎಲ್ಲಾ ಪಟ್ಟಣಗಳನ್ನು ಅಧೀನ ಗೊಳಿಸಿದರು. ಮುಂದುವರೆದು ಇರಾಖಿನ ಬೇರೆ ಪ್ರದೇಶಗಳನ್ನು ಅಧೀನ ಗೊಳಿಸಿದರು. ಹೀಗೆ ಹಿ.12ರಲ್ಲಿ, ಇರಾಖಿನ ಸರ್ವ ಪ್ರದೇಶಗಳಲ್ಲಿ ಮುಸ್ಲಿಂ ಗಳ ವಿಜಯಪತಾಕೆ ಹಾರತೊಡಗಿತು. ಈ ಯುದ್ಧಗಳಿಂದ ಮುಸ್ಲಿಮರಿಗೆ ಅಳತೆ ಇಲ್ಲದಷ್ಟು ಯುದ್ಧ ಸಂಪತ್ತುಗಳು ಲಭಿಸಿತು. ಅದರಲ್ಲಿ ಇದರಲ್ಲಿ ಒಂದಂಶ,ಹುರ್ ಮುಸಿನ ಕಿರೀಟವನ್ನು ಮದೀನಾಕ್ಕೆ ಕಳುಹಿಸಿದರು. ಬಾಕಿ ಇರುವುದನ್ನು ಭಟರೆಡೆಯಲ್ಲಿ ವಿತರಿಸಿದರು.
ಇರಾಖಿನ ವಿಜಯವನ್ನು ಅನುಸರಿಸಿ ಖಾಲಿದ್(ರ) ಪೇರ್ಷ್ಯನ್ ರಾಜನಾದ ಕಿಸ್ರಾಗೆ ಹೀಗೆ ಸಂದೇಶವೊಂದನ್ನು ಕಳುಹಿಸಿದರು." ಒಂದಾದರೆ ಇಸ್ಲಾಂ ಧರ್ಮ ಸ್ವೀಕರಿಸಬೇಕು, ಅಲ್ಲದಿದ್ದ ಜಿಸ್ ಯಾ ( ಟ್ಯಾಕ್ಸ್) ನೀಡಿರಿ, ಎರಡೂ ಕೂಡ ಸ್ವೀಕರಿಸುವುದಿಲ್ಲದಿದ್ದರೆ ಇರಾಖಿನ ಗತಿ ಪೇರ್ಷ್ಯಕ್ಕು ಬಂದೆರಗುತ್ತದೆ." ಕಿಸ್ರಾ ಈ ಸಂದೇಶವನ್ನು ಸ್ವೀಕರಿಸಲಿಲ್ಲ. ಇದನ್ನು ಅನುಸರಿಸಿ ಪೇರ್ಷ್ಯದಲ್ಲು ಕೂಡ ಯುದ್ಧ ಪ್ರಾರಂಭಿಸಿತು.
ಬಸ್ವರ ವಿಜಯ
ಇರಾಖಿನಲ್ಲಿ ಮುಸ್ಲಿಮರಿಗೆ ಖ್ಯಾತ ವಿಜಯಗಳು ಕೈಗೆಸಿಗುತ್ತಿರುವಾಗ, ಶ್ಯಾಮಿನ ಯುದ್ಧ ಸ್ಥಳಗಳಲ್ಲಿ ಹಲವಾರು ಯುದ್ಧಗಳಲ್ಲಿ ಅವರಿಗೆ ಪರಾಜಯ ಸಂಭವಿಸಿತು. ಶ್ಯಾಮಿನ ಸೈನ್ಯಾಧಿಕಾರಿ ಅಬು ಉಬೈದಾ(ರ) ಆಗಿದ್ದರಲ್ಲವೆ.ಅವರ ಅಧೀನದಲ್ಲಿರುವ ಸೈನ್ಯ ಗಳಿಗೆ ಪರಾಜಯ ಹೊಂದುತ್ತಿರುವುದನ್ನು ಕಂಡಾಗ ಇರಾಖಿನ ನಾಯಕತ್ವ ಮುಶಿಯ್ಯುಬುನು ಹಾರಿಸ್(ರ) ರಿಗೆ ನೀಡಿ ತನ್ನ ಸೈನ್ಯದೊಂದಿಗೆ ಶ್ಯಮಿಗೆ ಹೋಗಿ, ಅಲ್ಲಿರುವ ಮುಸ್ಲಿಂ ಸೈನ್ಯದೊಂದಿಗೆ ಭಾಗವಹಿಸಿ ಯುದ್ಧಮಾಡಲು ಖಲಿಫಾ ಅಬೂಬಕ್ಕರ್(ರ) ಖಾಲಿದ್ ಬಿನು ವಲೀದ್ (ರ) ರವರಲ್ಲಿ ಕಲ್ಪಿಸಿದರು.
ಖಾಲಿದ್(ರ) ಶ್ಯಾಮಿಗೆ ಹೊರಡುವ ಮುಂಚೆಯೇ ಬ್ಯಾಂಗಲ್ ಅಬೂ ಉಬೈದ (ರ) ರವರ ಆಜ್ಞೆ ಪ್ರಕಾರ ಶುರ್ ಜಯಿಲ್ (ರ) ರವರ ನೇತೃತ್ವದಲ್ಲಿ ಸೈನಿಕ ಸಂಘವೊಂದು ಬಸ್ವರ ನಗರವನ್ನು ಸುತ್ತು ವರೆದು ಆಕ್ರಮಣ ಮಾಡಿಯಾಗಿತ್ತು. ಶತ್ರುಗಳ ಶಕ್ತಿಕೇಂದ್ರವಾಗಿದ್ದ ಬಸ್ವರವನ್ನು ಬೇಕಾದಷ್ಟು ಮುನ್ನೆಚ್ಚರಿಕೆಗಳಿಲ್ಲದೆ ತಯಾರಾದ ಫಲವಾಗಿ ಶುರ್ ಜಯಿಲ್ (ರ) ರವರ ಸೈನ್ಯಕ್ಕೆ ಕಠಿಣವಾದ ಹಿನ್ನಡೆ ಸಿಗಲು ತೊಡಗಿತು. ಭಾಗ್ಯಕ್ಕೆ ಅದೇ ಸಮಯ ಖಾಲಿದ್ (ರ) ಮತ್ತು ಸೇನೆಯು ಅಲ್ಲಿಗೆ ತಲುಪಿತು. ಕಠಿಣವಾದ ಹೋರಾಟದ ನಂತರ ಶತ್ರುಗಳು ಅವರ ಭದ್ರವಾದ ಕೋಟೆಯಲ್ಲಿ ಅಭಯ ಯಾಚಿಸಲುಬಲವಂತರಾಗಿದ್ದರು.
ನಂತರ ಅವರು ಹೊಸ ನೇತಾರನ ಅಧೀನದಲ್ಲಿ ಕೋಟೆಯಿಂದ ಹೊರ ಬಂದು ಮುಸ್ಲಿಮರೊಂದಿಗೆ ಯುಧ್ದ ಮುಂದುವರೆಸಿದರು.ಆದರೆ ಅಬ್ದುರಹ್ಮಾನ್ ಬಿನು ಅಬೀಬಕ್ಕರ್ (ರ) ರವರ ಖಾಲಿದ್ ಬಿನು ವಲೀದ್ (ರ) ರವರ ಅಧೀನದಲ್ಲಿರುವ ಮುಸ್ಲಿಂ ಸೈನ್ಯ ಸಂಘಗಳು ಕೆಚ್ಚೆದೆಯಿಂದ ಹೋರಾಡಿ, ಶತ್ರುಗಳನ್ನು ಪರಾಜಯಗೊಳಿಸಿ, ರಣಾಂಗಳದಿಂದ ಅವರನ್ನು ಓಡಿಸಿದರು. ಅವರು ಮತ್ತೆಯು ಕೋಟೆಯೊಳಗೆ ಪ್ರವೇಶಿಸಿ ಬಾಗಿಲನ್ನು ಮುಚ್ಚಿದರು. ಮುಸ್ಲಿಮರು ಕೋಟೆಯ ಬಾಗಿಲ ಬಳಿ ತಮ್ಮ ಪತಾಕೆಯನ್ನು ಹಾರಿಸಿದರು.
ಮುಸ್ಲಿಮರಿಗೆ ಅಧೀನವಾಗುವುದಲ್ಲದೆ ತಮಗೆ ಗತ್ಯಂತರವಿಲ್ಲ ವೆಂದು ಹೇಳಿದ ಕಾರಣ ಬಸ್ವರದ ಮಾಜಿ ನೇತಾರ ರೋಮಾನಸ್ ಅವರ ಮನೆಯಲ್ಲಿರತೊಡಗಿದರು. ಅವರ ಕೌಶಲದಲ್ಲಿ ಸುರಂಗಮಾಡಿ ಹೊರ ಬಂದು ಮುಸ್ಲಿಮರೊಂದಿಗೆ ಸಹಕರಿಸಿ ಅವರ ಸಂಘದೊಂದಿಗೆ ಮತ್ತೆಯೂ ಒಳೆಗೆ ಹೋಗಿ ಕೋಟೆ ಬಾಗಿಲನ್ನು ತೆಗೆದರು. ಇದರೊಂದಿಗೆ ಮುಸ್ಲಿಂ ಸೈನ್ಯ ಬಸ್ವರಕ್ಕೆ ಪ್ರವೇಶಿಸಿತು. ಅಲ್ಲಿ ಭಯಂಕರ ಯುದ್ಧ ನಡೆಯಿತು. ಕೊನೆಯದಾಗಿ ಶತ್ರುಸೈನ್ಯ ಪರಾಜಯಗೊಂಡಿತು.ಬಸ್ವರ ಅಧೀನಗೊಂಡ ನಂತರ ಮುಸ್ಲಿಮರು ಅಲ್ಲಿಯ ನಿವಾಸಿಗಳಿಗೆ ಸುರಕ್ಷಿತತ್ವ ನೀಡಿದರು.