ಪ್ರಕಾಶದ ಮೇಲೆ ಪ್ರಕಾಶವಾದ ಕುರಾನ್
ಕುರಾನ್ ಎಂಬ ಪದದಲ್ಲಿ ಒಂದು ವಿಸ್ಮಯ ಶಕ್ತಿ ಇದೆ. ವಿಮರ್ಶೆಯಿಂದಲೂ ಮತ್ತು ಪ್ರಶಂಸೆಯಿಂದಲೂ ಹಲವಾರು ವರ್ಷಗಳ ಕಾಲ ಪ್ರಸಿದ್ಧಿ ಪಡೆದ ಗ್ರಂಥವಾಗಿದೆ ಪರಿಶುದ್ಧ ಕುರಾನ್. ವೇದ ಗ್ರಂಥಗಳಲ್ಲಿ ಉನ್ನತವಾದ ಸ್ಥಾನವು ಕೂಡ ಕುರಾನ್ ಗೆ ಇದೆ. ಕುರಾನ್ ಮತ್ತಿತರ ಮತ ಗ್ರಂಥಗಳಿಂದ ವಿಭಿನ್ನವಾಗಿ ಮಾನವನ ವಿವಿಧ ಕಾರ್ಯಗಳಲ್ಲಿ ಹಾಗೂ ಜೀವನ ವಿಷಯ ಗಳಲ್ಲಿರುವ ತೊಂದರೆಗಳಿಗೆ ಪರಿಹಾರವಾಗಿ ಮಾರ್ಪಟ್ಟಿದೆ. ಇದಕ್ಕೆ ಕಾರಣ ಈ ಗ್ರಂಥ ಒಂದು ದೈವಿಕವಾಗಿದೆ. ಇದು ವಸ್ತು ನಿಷ್ಠೆಯಲ್ಲಿ ಹಾಗೂ ಶಾಸ್ತ್ರೀಯವಾಗಿ ವ್ಯಕ್ತಪಡಿಸಲಾಗಿದೆ.
ಲೋಕವು ಸುವ್ಯವಸ್ಥೆಗೆ ಹಾಗೂ ಕಾನೂನು ಕ್ರಮಗಳಿಗೆ ಹೊಸ ರೀತಿಗಳನ್ನು ತಿಳಿಸಿಕೊಟ್ಟ ಇಸ್ಲಾಮಿನ ಮೂಲ ಪ್ರಮಾಣವಾಗಿದೆ ಪವಿತ್ರ ಕುರಾನ್. ಕುರಾನನ್ನು ಅವಲಂಬಿಸಿಯಾಗಿದೆ ಮತ್ತಿತರ ಪ್ರಮಾಣವನ್ನು ನಿಯಮ ರೇಖೆಯಾಗಿ ಸ್ವೀಕರಿಸುವುದು.! ಕುರಾನಿನ ವಿವರಣೆ ಮತ್ತಿತರ ಕಾರ್ಯಗಳನ್ನು ಕುರಾನಿನ ವ್ಯಾಖ್ಯಾನ ಎಂದು ಕರೆಯುತ್ತಾರೆ. ಕುರಾನಿನ ವಾಕ್ಯಗಳು ಅಥವಾ ಆಶಯಗಳು ತಿಳಿಯದೇ ಹೋದರೆ ಅದಕ್ಕೆ ಪ್ರತಿಯಾಗಿ ವಿವರಿಸುವುದೇ ಕುರಾನಿನ ವ್ಯಾಖ್ಯಾನ (ತಫ್ ಸೀರ್). ಕುರಾನಿನ ಪಾರಾಯಣ ಶಾಸ್ತ್ರವು ಕುರಾನಿನ ವ್ಯಾಖ್ಯಾನದಲ್ಲಾಗಿದೆ ಅನೇಕ ಪಂಡಿತರು ತಿಳಿಸಿಕೊಡುವುದು. ಇದರ ಹಲವಾರು ವ್ಯಾಖ್ಯಾನಗಳು ಅರಬ್ಬಿ ಭಾಷೆಯಲ್ಲಿ ಬರೆಯಲ್ಪಟ್ಟಿದ್ದು ಉರ್ದು, ಇಂಗ್ಲಿಷ್, ಮಲಯಾಳಂ, ಪಾರ್ಸಿ, ಬಂಗಾಳಿ ಎಂಬ ಭಾಷೆಗಳಲ್ಲಿ ಕುರಾನಿನ ವ್ಯಾಖ್ಯಾನ ದೊರಕುತ್ತದೆ. ಫಕರುದ್ದೀನ್ ರಾಝಿ ಅವರ "ತಫ್ ಸೀರ್ ಬ್ ನ್ ಕಂಸೀರ್" ಹಾಗೂ ಕುರ್ ತುಬಿಯವರ "ಅಲ್ ಅಹ್ ಕಾಮಿಲ್ ಕುರಾನ್" ಮುಂತಾದ ಗ್ರಂಥಗಳು ಪ್ರಧಾನ ವ್ಯಾಖ್ಯಾನಗಳಾಗಿವೆ.
ಕುರಾನ್ ಅಲ್ಲಾಹುವಿನ ಪುಣ್ಯ ವಚನಗಳಾಗಿವೆ. ಅದರ ವಿವರಣೆಗೆ ಹಾಗೂ ವ್ಯಾಖ್ಯಾನಕ್ಕೆ ಒಮ್ಮತದ ನೇತೃತ್ವವನ್ನು ಅಲ್ಲಾಹನು ಪ್ರವಾದಿಯವರಿಗೆ ವಹಿಸಿಕೊಟ್ಟಿದ್ದಾನೆ. ಅದನ್ನು ನೆಬಿಯವರು ನಿರ್ವಹಿಸುತ್ತಾ ಸ್ವಹಾಬಿಗಳಿಗೆ, ತಾಬಿ್ಗಳಿಗೆ, ತಬ್್ ತಾಬಿ್ಗಳಿಗೆ ನಿರಂತರವಾಗಿ ತಿಳಿಸಿಕೊಟ್ಟಿದ್ದಾರೆ. ಈ ಮೂರು ವಿಭಾಗದಿಂದ ಬಹುಮುಖ್ಯ ಸಂಶೋಧಕರಾದ ಪಂಡಿತರು ವ್ಯಾಖ್ಯಾನ ತಿಳಿದು ಅದನ್ನು ಅವಲಂಬಿಸಿ ಈ ಭೂಮಿಯಲ್ಲಿ ಜನರಿಗೆ ಅವಶ್ಯಕತೆಯ ಸಂಶೋಧನೆ ಮಾಡುತ್ತಾ ಇಸ್ಲಾಂ ವಿಶ್ವಾಸದ ಅನುಷ್ಠಾನಗಳನ್ನು ನಿಯಮ ಶಾಸ್ತ್ರಗಳನ್ನು ಕ್ರೋಡೀಕರಿಸಿ ವಿಶ್ವ ಜನತೆಗೆ ಸಮರ್ಪಿಸಿದರು.
ಇಮಾಮ್ ಅಬೂ ಹನೀಫ, ಇಮಾಮ್ ಶಾಫೀ, ಇಮಾಮ್ ಅಹಮದ್ ಬುನು ಹಂಬಲ್ ಎಂಬುವವರು ಇವರಲ್ಲಿ ಪ್ರಮುಖರಾಗಿದ್ದಾರೆ. ನೆಬಿಯವರು ತಮ್ಮ ನಡೆ-ನುಡಿಯಿಂದಾಗಿದೆ ಸ್ವಹಾಬಿಗಳಿಗೆ ವ್ಯಾಖ್ಯಾನ ಅರ್ಥೈಸಿದ್ದು. ಇದನ್ನು ಅವಲಂಬಿತವಾಗಿ ಸ್ವಹಾಬಿಗಳು ತಾಬಿ್ ಹಾಗೂ ತಬ್್ ತಾಬಿ್ಗಳಿಗೆ ವಿವರಿಸಿದ್ದರು. ಇಂತಹ ತತ್ವಗಳ ಆಶಯಗಳಿಂದಿರುವ ವ್ಯಾಖ್ಯಾನ ಗಳಾಗಿದೆ ಅರ್ಥಪೂರ್ಣ ವ್ಯಾಖ್ಯಾನ. ಇದರ ವಿರುದ್ಧವಾಗಿ ಸ್ವಂತ ಕಲ್ಪನೆಗಳಿಂದ ವ್ಯಾಖ್ಯಾನ ಬರೆಯುವುದು ನಿಷಿದ್ಧವು ಮತ್ತು ತದನಂತರದ ಫಲ ನರಕ ವಾಗಿರುತ್ತದೆ. ಅರ್ಥಪೂರ್ಣವಾದ ವ್ಯಾಖ್ಯಾನಗಳಿಂದ ಇಸ್ಲಾಮಿನ ವಿಜ್ಞಾನ ಶಾಖೆಗಳು ಪ್ರಸಿದ್ಧಿ ಪಡೆಯುತ್ತಾ ವಿಶ್ವ ತೊಂದರೆಗಳಿಗೆ ವ್ಯವಸ್ಥಿತವಾಗಿ ಬಗೆಹರಿಸುವ ತನಕ ಅದು ಬೆಳೆದು ನಿಂತಿದೆ.
ವಿಶುದ್ಧ ಕುರಾನ್'ನ ವ್ಯಾಖ್ಯಾನವೋ ಅನುವಾದವೋ ನಿಜವಾದ ಕುರಾನ್ ಅಲ್ಲ. ಅದರ ಸ್ಥಾನದಲ್ಲೂ ಅಲ್ಲ. ಅದೇ ಸಂದರ್ಭದಲ್ಲಿ ನೈಜವಾದ ಕುರಾನಿನ ಆಶಯಗಳನ್ನು ತಿಳಿಯತಕ್ಕ ಯೋಜನೆಯಾಗಿದೆ ವ್ಯಾಖ್ಯಾನ. ಕುರಾನಿನ ಅರ್ಥವ್ಯಾಪ್ತಿಯನ್ನು ಪೂರ್ಣವಾಗಿ ತೆರೆದಿಡಲು ವ್ಯಾಖ್ಯಾನಗಳಿಗೆ ಅಸಾಧ್ಯವಾಗಿದೆ. ಕುರಾನ್ ಅಲ್ಲಾಹುವಿನ ಕಲಾಮು ಆಗಿದೆ. ಅದರ ಅಸ್ತಿತ್ವಕ್ಕೆ ಪ್ರತ್ಯೇಕ ಭಾಷೆಯೋ ಲಿಪಿಗಳೋ ಇಲ್ಲ. ಇದನ್ನು ಕೇಳಲೋ ಸ್ಪರ್ಶಿಸಲೋ ನಮಗೆ ಸಾಧ್ಯವಿಲ್ಲ. ಅದೇ ಸಂದರ್ಭದಲ್ಲಿ ಅಸ್ತಿತ್ವದಲ್ಲಿರುವ ವಿಶೇಷಣಗಳು ಪ್ರಕಟವಾಗುವ ಪದಗಳಾಗಿವೆ ನಾವು ಕಾಣುವ ಮತ್ತು ಪಠಿಸುವ ಈ ಗ್ರಂಥ. ಪ್ರತ್ಯೇಕ ಕ್ರಮಗಳಿಂದ, ಘಟಕದಿಂದ ಕ್ರಮೀಕರಿಸಿದ ಪದಗಳಾಗಿವೆ ಕುರಾನ್. ಅಂತಹ ಪದಗಳಿಗೆ ಮತ್ತು ಕ್ರಮಗಳಿಗೆ ಬದಲಾವಣೆಯಾದರೆ ಅದು ಕುರಾನ್ ಆಗುವುದಿಲ್ಲ. ಹಾಗೆ ಪದಕ್ರಮ ಇಲ್ಲದ ಅರಬಿ ಪದದೊಂದಿಗೆ ಅರಬೇತರ ಪದ ಸೇರಿಸಿದರೂ ಕೂಡ ಕುರಾನ್ ಆಗುವುದಿಲ್ಲ.
ಅವತೀರ್ಣ ಕ್ರಮದಲ್ಲ ಲ್ಲ ಕುರಾನ್ ಕ್ರೋಡೀಕರಿಸುವುದು. ಕುರಾನಿನಲ್ಲಿ "ಫಾತಿಹಾ ಸೂರತ್" ಪ್ರಥಮ ಅಧ್ಯಯವು "ನ್ನಾಸ್" ಸೂರತ್ ಕೊನೆಯ ಅಧ್ಯಾಯವಾಗಿದೆ. ಹಾಗಾದರೆ ಪ್ರಥಮವಾಗಿ ಅವತೀರ್ಣಗೊಂಡದ್ದು "ಅಲ್ ಕಲಂ" ಹಾಗೂ ಕೊನೆಯದಾಗಿ ಅವತೀರ್ಣಗೊಂಡದ್ದು "ಬರಾಅತ್" ಅಧ್ಯಾಯವಾಗಿದೆ. ಹಾಗೂ ಪ್ರಥಮವಾಗಿ ಅವತೀರ್ಣಗೊಂಡ ಸೂಕ್ತ" ಅಲ್ ಕಲಮಿನ" ಪ್ರಥಮ ಸೂಕ್ತ ಕೊನೆಯದಾಗಿ ಅವತೀರ್ಣಗೊಂಡ ಸೂಕ್ತ "ಅಲ್ ಬಕರದ 281" ಸೂಕ್ತವಾಗಿದೆ.
ಕುರಾನ್ ಪೂರ್ತಿ ಪಠಿಸುವವನು ಪಾರಾಯಣ ಮಾಡಬೇಕಾದ ರೀತಿಯಾಗಿದೆ ಈಗ ಕುರಾನಿನಲ್ಲಿ ಕಾಣಲ್ಪಡುವುದು. ಇದು ಪ್ರವಾದಿಯವರು ತಿಳಿಸಿಕೊಟ್ಟದಾಗಿದೆ. ತದನಂತರ ಅವರ ಅನುಚರರು ಕುರಾನಿನ ವಿವಿಧ ಪ್ರತಿಗಳು ತಯಾರು ಮಾಡಿದಾಗ ಇದೇ ಕ್ರಮಗಳನ್ನು ಹಿಂಬಾಲಿಸಿದರು.
ಸ್ವೀಕರಿಸಲ್ಪಟ್ಟ ಪಾರಾಯಣ ರೀತಿ 7 ವಿಧಗಳಾಗಿವೆ. ಪ್ರಬಲವಾದ ಪರಂಪರೆಯ ನೆಬಿಯವರಿಂದ ಉದ್ಧರಿಸಲ್ಪಡುವುದಾಗಿದೆ ಸ್ವೀಕರಿಸಲ್ಪಟ್ಟ ಪಾರಾಯಣ ರೀತಿಯ ಯಥಾರೂಪ. ಕ್ರಮವಲ್ಲದ ಪಾರಾಯಣ ರೀತಿ ನಿಷಿದ್ಧವಾಗಿದೆ. ಏಳು ಪಾರಾಯಣ ರೀತಿಗಳಿಗೆ ಏಳು ಇಮಾಮರು ಇದ್ದಾರೆ. ಅವರಲ್ಲಿ ಇಮಾಮ್ ಅಬೂ ಅಮ್ ರುಬ್ ನುಲ್ ಅಲಾಲ್, ಇಮಾಮ್ ಇಬ್ ನ್ ಕಬೀರಿ, ನಾಫಿ್ಬ್ ನ್ ಅಬ್ದುಲ್ ರಹ್ಮಾನ್, ಇಬ್ ನು ಆಮಿರ್,ಆಸಿಮುಬ್ ನ್ ಅಬೀನ ಜೂದ್, ಅಲಿಯ್ಯುಬ್ ನ್ ಹಂಝತುಲ್ ಕಸಾಈ, ಹಂಝತುಬ್ ನ್ ಹಬೀಬ್ ಎಂಬುವವ ರಾಗಿದ್ದಾರೆ ಈ ಇಮಾಮರುಗಳು. ಆಸಿಮುಬ್ ನ್ ಅಬೀ ನಜೂದ್ ರವರ ವರದಿಯಾಗಿದೆ 'ಹಫ್ ಸ್' ಎಂಬವರಿಂದ ಲಭಿಸಿದ ಕುರಾನ್ ಪಾರಾಯಣ ರೀತಿಯಾಗಿದೆ ಕೇರಳದಲ್ಲಿ ಪ್ರಚಲಿತದಲ್ಲಿರುವುದು. ಆಸಿಮ್(ರ) ರಿಂದ ಹಫ್ ಸ್(ರ) ರ ಮೂಲಕ ಬಂದದ್ದಾಗಿದೆ ಕೇರಳದ ಪ್ರಚಲಿತ ಕುರಾನ್ ಪಾರಾಯಣ. ಪವಿತ್ರ ಕುರಾನಿನ ಪ್ರತ್ಯೇಕತೆ ಎಂದರೆ ಅದು ಸರ್ವಕಾಲಿಕ ವಾಗಿದೆ. ಆಧುನಿಕ ತೊಂದರೆಗಳಿಗೆ ಕುರಾನ್ ಸಲಹೆಗಳನ್ನು ನೀಡಿದೆ.
ಆಧುನಿಕ ತೊಂದರೆಗಳನ್ನು ಆರ್ಥಿಕತೆಯ, ರಾಷ್ಟ್ರ ರಾಜಕೀಯ, ಸಮೂಹ, ವಿಜ್ಞಾನ, ಎಂಬ ನಾಲ್ಕು ಭಾಗವಾಗಿ ವಿಂಗಡಿಸಬಹುದು. ಈ ನಾಲ್ಕು ವಿಷಯದಲ್ಲಿ ಕುರಾನ್ ಸರ್ವಾಧಿಪತ್ಯ ನಡೆಸುತ್ತದೆ. ಆಧುನಿಕವು ಈಗ ಅನೇಕ ಚರ್ಚೆಗಳಿಗೆ ವಿಧೇಯವಾಗುವುದು ಆರ್ಥಿಕತೆಯ ವಿಷಯದಲ್ಲಾಗಿದೆ. ಇತ್ತೀಚಿನ ದಿನಗಳಲ್ಲಾಗಿದೆ ಅತೀ ಹೆಚ್ಚು ಆರ್ಥಿಕ ಸಂಕಷ್ಟ ಎದುರಾಗುತ್ತಿರುವುದು. ವಿಶ್ವ ನಮ್ಮ ಕೈಯಲ್ಲಿದೆ ಎಂದು ಅಹಂಕರಿಸುತ್ತಿದ್ದ ಹಲವಾರು ಅಂತರಾಷ್ಟ್ರೀಯ ಸ್ಥಾಪನೆಗಳು ಆರ್ಥಿಕ ಸಂಕಷ್ಟದಿಂದ ತೊಂದರೆ ಅನುಭವಿಸುತ್ತಿದೆ. ಈ ಸಂದರ್ಭದಲ್ಲಿ ಕುರಾನ್ ನ ಆರ್ಥಿಕ ಕ್ರಮವನ್ನು ಒಮ್ಮೆ ಅವಲೋಕಿಸಿದರೆ ಒಳ್ಳೆಯದು. ದೈವಿಕ ಧರ್ಮವಾದ ಇಸ್ಲಾಂ ಆಗಿದೆ ಆರ್ಥಿಕ ಕ್ರಮವನ್ನು ಈ ಲೋಕಕ್ಕೆ ಸಮರ್ಪಿಸಲು ಅರ್ಹವಾದ ಧರ್ಮ. ಇದರ ಕಾರಣದಿಂದ ಕುರುಆನ್ ನಮ್ಮನ್ನು ರೋಮಾಂಚನಕಾರಿಯಾಗಿಸುವುದು. ಸ್ಥಿರವಾದ ಒಂದು ಆರ್ಥಿಕ ವ್ಯವಸ್ಥೆಗೆ ಅವಶ್ಯಕತೆ ಇರುವ ಹಾಗೂ ಅನಾವಶ್ಯಕತೆ ಇರುವ ಎಂಬಂತೆ ಕುರಾನ್ ತಿಳಿಸಿಕೊಡುತ್ತದೆ.
ಕಳ್ಳತನ, ಬಡ್ಡಿ, ಸುಲಿಗೆ, ವಂಚನೆ, ಇತ್ಯಾದಿಗಳನ್ನು ಕುರಾನ್ ಅನಾವಶ್ಯಕತೆಯಾಗಿ ಕಾಣುತ್ತದೆ. ಹಾಗೂ ಇದರ ವಿರುದ್ಧ ತೀವ್ರವಾಗಿ ವಿರೋಧ ವ್ಯಕ್ತಪಡಿಸಿದೆ. ಇಂತಹ ಅನಾವಶ್ಯಕ ವಿಚಾರಗಳು ಇಲ್ಲದೆ ಆರ್ಥಿಕ ಸ್ಥಿತಿಯನ್ನು ಕ್ರಮೀಕರಿಸಲು ಕಲ್ಪಿಸುತ್ತದೆ. "ಬಡ್ಡಿ" ಆಗಿದೆ ಇಂದಿನ ಆರ್ಥಿಕ ಸಂಕಷ್ಟಕ್ಕೆ ಕಾರಣ ಎಂದು ಆರ್ಥಿಕ ತಜ್ಞರ ಅಭಿಪ್ರಾಯ..
ವಿಶ್ವ ಮಾರಾಟದ ಪ್ರೊಡಕ್ಟ್ ಗಳಿಗೆ (ತಯಾರಿಕೆ) ಹೆಚ್ಚು ಡಿಮ್ಯಾಂಡ್(ಬೇಡಿಕೆ)ಗೆ ಕಾರಣ ಮರೆಮಾಚುವುದು. ಆಗ ಉತ್ಪಾದಕರು ಕಳ್ಳ ಲಾಭ ವನ್ನು ಗುರಿಯಾಗಿಸುತ್ತಾರೆ. ಇಲ್ಲಿ ಗ್ರಾಹಕರಿಗೆ ಬಾಧಿಸುವುದು ನ್ಯಾಯ ಬೆಲೆಗೆ ಖರೀದಿಸಬೇಕಾದ ವಸ್ತುಗಳನ್ನು ಎರಡು ಪಟ್ಟು ಹೆಚ್ಚು ಬೆಲೆಗೆ ತೆರಬೇಕಾಗುತ್ತದೆ. ಪ್ರತೀ ಪೌರನಿಗೂ ಲಭಿಸಬೇಕಾದ ಹಕ್ಕುಗಳು ಕೆಲವೊಮ್ಮೆ ಇಲ್ಲದಾಗುತ್ತದೆ. ಸಮೂಹದ ಧನಿಕನ ಅವನ ಸಂಪತ್ತನ್ನು ಮತ್ತು ಆಡಂಬರ ಐಷಾರಾಮಿ ಜೀವನಕ್ಕೆ ಖರ್ಚು ಮಾಡುವ ಸಂಪತ್ತಾಗಿದೆ ನಷ್ಟವಾಗುವುದು. ಬಡ್ಡಿ, ಕಳ್ಳ ಲಾಭ, ದುಂದುವೆಚ್ಚ ಇತ್ಯಾದಿಗಳು ಆರ್ಥಿಕ ಸ್ಥಿತಿಯನ್ನು ಇನ್ನಷ್ಟು ಕುಗ್ಗಿಸುತ್ತದೆ. ಇದರ ವಿರುದ್ಧ ಕುರಾನ್ ತೀವ್ರ ವಿರೋಧ ವ್ಯಕ್ತಪಡಿಸುತ್ತದೆ. ಇಂತಹ ನೀಚ ಕೃತ್ಯ ಇಲ್ಲದೆ ದಾರಿದ್ರ್ಯ ನೀಗಿಸುವ ಸಮತ್ವವನ್ನು ಪಾಲಿಸುವ ಒಂದು ಆರ್ಥಿಕ ಸುವ್ಯವಸ್ಥೆಯಾಗಿದೆ ಇಸ್ಲಾಂ ವಿವರಿಸಿದ್ದು.
ಇಸ್ಲಾಮಿನ ಆರ್ಥಿಕ ವ್ಯವಸ್ಥೆ ಮತ್ತಿತರ ಆರ್ಥಿಕ ಕಲ್ಪನೆಗಳಿಂದ ಎಷ್ಟೋ ಉತ್ತುಂಗಕ್ಕೇರಿದೆ. ಸಾರ್ವಜನಿಕ ವಿಷಯಗಳಲ್ಲಿ ಇಸ್ಲಾಂಗೆ ವ್ಯವಸ್ಥಿತವಾದ ಕಲ್ಪನೆ ಇದೆ. ಉತ್ತಮ ಪೌರನಿಂದ ಉತ್ತಮ ಕುಟುಂಬವು ಇದರಿಂದ ಉನ್ನತ ಸಮೂಹವು ಈ ಸಮೂಹದಿಂದ ರಾಷ್ಟ್ರವನ್ನು ಕ್ಷೇಮ ವನ್ನಾಗಿಸಬಹುದು. ಈ ತತ್ವವನ್ನು ಆಧರಿಸಿ ಉತ್ತಮ ಪೌರನನ್ನಾಗಿ ನಿರ್ಮಾಣ ಮಾಡುವುದು ಆಗಿದೆ ಇಸ್ಲಾಮಿನ ಗುರಿ. ಆಧುನಿಕ ಜಗತ್ತಿನ ಮೂಲೆ ಮೂಲೆಯಲ್ಲಿ ಕಷ್ಟಕಾರ್ಪಣ್ಯ, ಸೋಲು ಇತ್ಯಾದಿಗಳು ಮುಗಿಬೀಳುತ್ತವೆ. ವ್ಯಬಿಚಾರ ದಿನದಿಂದ ದಿನಕ್ಕೆ ವ್ಯಾಪಿಸುತ್ತಿದ್ದು, ಮಧ್ಯಪಾನದ ವ್ಯಸನಿಗಳು ಹೆಚ್ಚುತ್ತಿದ್ದು, ಕೊಲೆ ಸುಲಿಗೆಗಳು ಸರ್ವೇ ಸಾಮಾನ್ಯವಾಗಿದ್ದು, ಮತ್ತು ಜಗತ್ತಿನ ಹಲವು ರಾಷ್ಟ್ರಗಳು ಸಲಿಂಗ ಕಾಮವನ್ನು ಶಿಕ್ಷಾರ್ಹ ಅಪರಾಧವಲ್ಲವೆಂದು ಘೋಷಿಸಿದೆ ಇಷ್ಟು ನೀಚವಾದ ಕೃತ್ಯಕ್ಕೆ ತಲುಪಿದೆ ನಮ್ಮ ಈ ಪ್ರಪಂಚ. ತಂದೆ-ತಾಯಿಯರನ್ನು ವೃದ್ಧಾಶ್ರಮದಲ್ಲಿರಿಸುವ ಮಕ್ಕಳು, ಗುರುಗಳನ್ನು ಅಗೌರವದಿಂದ ಕಾಣುವ ವಿದ್ಯಾರ್ಥಿಗಳು, ಬಹುಮಾನಿಸಬೇಕಾದನ್ನು ಅವಮಾನಿಸಿ ಬದುಕಲು ಇಂದಿನ ಆಧುನಿಕ ಮನುಷ್ಯನು ತಯಾರಾಗಿದ್ದಾನೆ.
ಸಾರ್ವಜನಿಕ ಕಾರ್ಯಗಳಲ್ಲಿ ವಿಜಯ ದೊರಕಿದೆ ಎಂದು ಜಾಲಾಡುವ ವಿಜ್ಞಾನ ಯುಗದಲ್ಲಿ ಅಸ್ಪೃಶ್ಯತೆ, ವರ್ಣ ವಿವೇಚನೆ ಗಗನಕ್ಕೇರುತ್ತಿದೆ. ಇಂತಹ ದುಷ್ಟ ಪಿಡುಗುಗಳಿಂದ ತುಂಬಿತುಳುಕುತ್ತಿರುವ ಸಂದರ್ಭದಲ್ಲಿ ಹಲವಾರು ಮಹಾನ್ ವ್ಯಕ್ತಿಗಳು ಕುರಾನ್ ಅಧ್ಯಯವನ್ನು ನಡಸಿದ್ದಾರೆ. ಅನೇಕ ಜನರು ಕುರಾನನ್ನು ವಿಮರ್ಶಿಸಿದರು. ಪ್ರಯೋಗಿಕವಾಗಿ ವಿಜಯ ಸಾಧಿಸಲು ಕುರಾನ್ ಗೆ ಮಾತ್ರ ಸಾಧ್ಯ ಈ ಕುರಾನ್ ಅವತೀರ್ಣವಾದ ಕಾಲದಲ್ಲಿದ್ದ ಇಸ್ಲಾಂ ಗುಲಾಮಗಿರಿಯನ್ನು ನೀಗಿಸಿ, ಸರ್ವಸಮಾನತೆಯನ್ನು ಸಾರಿದೆ ಮತ್ತು ಸಮಾಜದ ಕೆಡುಕುಗಳನ್ನು ನೀಗಿಸಲು ಶ್ರಮ ವಹಿಸಿದೆ. ಪರಿಶುದ್ಧ ಕುರಾನ್ ಗುಲಾಮಗಿರಿಗೆ ಪ್ರೋತ್ಸಾಹ ನೀಡುತ್ತಿದೆ ಎಂದು ಹೇಳುವ ಬುದ್ಧಿ ಇಲ್ಲದ ಹೀನ ಜನರು ನಮ್ಮಲ್ಲಿದ್ದಾರೆ. ಗುಲಾಮನನ್ನು ಅಸಭ್ಯವಾಗಿ ಬೈಯುವುದು, ವರ್ಧನೆ, ಆಹಾರ ಕೊಡದಿರುವುದು, ಶಿಕ್ಷಿಸುವುದು, ಜೀವನ ಸೌಕರ್ಯ ಕೊಡದಿರುವುದು, ತಾಳಲಾರದ ಭಾರ ಹೊರಿಸುವುದು, ಹಗಲು ರಾತ್ರಿಯೆನ್ನದೆ ಕೆಲಸ ಮಾಡಿಸುವುದು ಇತ್ಯಾದಿಗಳನ್ನು ಪ್ರಥಮವಾಗಿ ನಿಷೇಧಿಸಿದ್ದು ಕುರಾನ್ ಆಗಿದೆ. ಇದರ ಪ್ರಭಾವದಿಂದ ಗುಲಾಮಗಿರಿ ಪದ್ಧತಿ ತೊಲಗುತ್ತಾ ಬಂತು. "ಗುಲಾಮಗಿರಿಗಳನ್ನು ವಿಮೋಚನೆ ಮಾಡಿದರೆ ಇದು ನಿಮ್ಮ ಪಾಪಗಳಿಗೆ ಪಶ್ಚಾತಾಪ ವಾಗಿದೆ" ಎಂದು ಕುರಾನ್ ಪ್ರತಿಪಾದಿಸುತ್ತದೆ. 23 ವರ್ಷದೊಳಗೆ ಗುಲಾಮಗಿರಿ ಪದ್ಧತಿಯನ್ನು ಇಲ್ಲದಾಗಿಸಿದೆ. ಮನುಷ್ಯನಿಗೆ ಪೌರ ಸ್ವಾತಂತ್ರ್ಯ ದೊರಕಿಸಿದ ಕೀರ್ತಿ ಇಸ್ಲಾಂಗೆ ಇದೆ.
ಸ್ತ್ರೀ ಸ್ವಾತಂತ್ರ್ಯವು ಮತ್ತು ಬಹುಪತ್ನಿತ್ವದ ಕುರಿತು ಇಸ್ಲಾಮನ್ನು ವಿಮರ್ಶಿಸುವವರಿದ್ದಾರೆ. ಈ ಎರಡು ವಿಷಯಗಳ ಬಗ್ಗೆ ಕುರಾನಿನ ಕಲ್ಪನೆಯು ಪ್ರಕೃತಿಗೆ ಹೊಂದಿಕೆ ಇದೆ ಎಂದು ನಿಷ್ಪಕ್ಷ ಜನರು ವಿಶ್ವಾಸ ಹೊಂದಿರುತ್ತಾರೆ. ರಾಷ್ಟ್ರೀಯ ಪಕ್ಷಗಳು ಮತ್ತು ಮತ್ತಿತರ ಸಂಘಟನೆಗಳು ಸ್ತ್ರೀಯರ ಹಕ್ಕನ್ನು ಕಲಿಯುವಾಗ ನಿಶ್ಶಬ್ದವಾಗಿ ಕುರಾನ್ ಸ್ತ್ರೀಯರಿಗೆ ಮರೆ ಮುಚ್ಚುವ ವಸ್ತ್ರ ಧರಿಸಲು ನಿರ್ದೇಶಿಸಿದಾಗ ಮಾತ್ರ ಇಸ್ಲಾಮನ್ನು ಟೀಕಿಸುವುದು. ಪ್ರಪಂಚದಲ್ಲಿ ಸ್ತ್ರೀಯರಿಗೆ ಜೀವಿಸಲು ಅವಕಾಶ ನೀಡಿರುವುದು, ತಂದೆಯ ಆಸ್ತಿಯಿಂದ ಹೆಣ್ಣುಮಕ್ಕಳಿಗೆ ಪಾಲು ಲಭಿಸಲು ಕಾರಣ ಕುರಾನ್ ಆಗಿದೆ. ಪುರಾತನ ಸಂಸ್ಕಾರಗಳು ಹಾಗೂ ಆಧುನಿಕ ದರ್ಶನಗಳು ಸ್ತ್ರೀಗಳನ್ನು ಪರಿಗಣಿಸಲಿಲ್ಲ. ಅಲ್ಲಾಹು ಸ್ತ್ರೀಯರಿಗೆ ಮರೆ ಮುಚ್ಚುವ ವಸ್ತ್ರವನ್ನು ಧರಿಸಬೇಕೆಂದು ಹೇಳಿದರೆ ಅದನ್ನು ಟೀಕಿಸುವ ಹಲವರು ಇದ್ದಾರೆ. ಅವರಿಗೆ ಪ್ರಪಂಚ ಜ್ಞಾನವೇ ಇಲ್ಲ ಎಂದು ಹೇಳಬಹುದು. ರಾಷ್ಟ್ರೀಯ ಎಂಬುದು ಮಂಗನ ಕೈಯಲ್ಲಿರುವ ಒಂದು ಹೂ ಮಾಲೆಯಾಗಿ ಮಾರ್ಪಟ್ಟಿದೆ. ರಾಷ್ಟ್ರ ಬೇಕಾದರೆ ಮತ್ತು ದೇಶವು ಉತ್ತುಂಗಕ್ಕೇರ ಬೇಕಾದರೆ ಪೌರರಿಗೆ ಎಲ್ಲಾ ಹಕ್ಕುಗಳು ದೊರೆಯುವಂತಾಗಬೇಕು ಧಾರ್ಮಿಕ ಮೌಲ್ಯಗಳನ್ನು ಪರಿಗಣಿಸಬೇಕು. ಅರ್ಥವ್ಯಾಪ್ತಿ ರಾಷ್ಟ್ರೀಯದಲ್ಲಿದೆಯೇ? ಕುರಾನ್ ಕಲ್ಪಿಸುವ ರಾಷ್ಟ್ರೀಯತೆಯು ಅರ್ಥವ್ಯಾಪ್ತಿ ಇರುವುದಾಗಿದೆ. ಅರಬ್ ರಾಷ್ಟ್ರವನ್ನು ಆಳುತ್ತಿದ್ದ ಮದೀನಾದ ರಾಜಕುಮರನಲ್ಲಿ" يا محمد ااعدل ا" ಎಂದು ಸ್ವಾತಂತ್ರ್ಯ ಊಹಿಸಬಹುದಾಗಿದೆ.
ವಿಶ್ವ ಮಾರಾಟದ ಪ್ರೊಡಕ್ಟ್ ಗಳಿಗೆ (ತಯಾರಿಕೆ) ಹೆಚ್ಚು ಡಿಮ್ಯಾಂಡ್(ಬೇಡಿಕೆ)ಗೆ ಕಾರಣ ಮರೆಮಾಚುವುದು. ಆಗ ಉತ್ಪಾದಕರು ಕಳ್ಳ ಲಾಭ ವನ್ನು ಗುರಿಯಾಗಿಸುತ್ತಾರೆ. ಇಲ್ಲಿ ಗ್ರಾಹಕರಿಗೆ ಬಾಧಿಸುವುದು ನ್ಯಾಯ ಬೆಲೆಗೆ ಖರೀದಿಸಬೇಕಾದ ವಸ್ತುಗಳನ್ನು ಎರಡು ಪಟ್ಟು ಹೆಚ್ಚು ಬೆಲೆಗೆ ತೆರಬೇಕಾಗುತ್ತದೆ. ಪ್ರತೀ ಪೌರನಿಗೂ ಲಭಿಸಬೇಕಾದ ಹಕ್ಕುಗಳು ಕೆಲವೊಮ್ಮೆ ಇಲ್ಲದಾಗುತ್ತದೆ. ಸಮೂಹದ ಧನಿಕನ ಅವನ ಸಂಪತ್ತನ್ನು ಮತ್ತು ಆಡಂಬರ ಐಷಾರಾಮಿ ಜೀವನಕ್ಕೆ ಖರ್ಚು ಮಾಡುವ ಸಂಪತ್ತಾಗಿದೆ ನಷ್ಟವಾಗುವುದು. ಬಡ್ಡಿ, ಕಳ್ಳ ಲಾಭ, ದುಂದುವೆಚ್ಚ ಇತ್ಯಾದಿಗಳು ಆರ್ಥಿಕ ಸ್ಥಿತಿಯನ್ನು ಇನ್ನಷ್ಟು ಕುಗ್ಗಿಸುತ್ತದೆ. ಇದರ ವಿರುದ್ಧ ಕುರಾನ್ ತೀವ್ರ ವಿರೋಧ ವ್ಯಕ್ತಪಡಿಸುತ್ತದೆ. ಇಂತಹ ನೀಚ ಕೃತ್ಯ ಇಲ್ಲದೆ ದಾರಿದ್ರ್ಯ ನೀಗಿಸುವ ಸಮತ್ವವನ್ನು ಪಾಲಿಸುವ ಒಂದು ಆರ್ಥಿಕ ಸುವ್ಯವಸ್ಥೆಯಾಗಿದೆ ಇಸ್ಲಾಂ ವಿವರಿಸಿದ್ದು.
ಪ್ರಜಾಪ್ರಭುತ್ವ, ಜಾತ್ಯಾತೀತ, ಸಮಾನತೆಯ ಪರವಿರುವವರು ಈ ಭೂಮಿಯಲ್ಲಿದ್ದಾರೆ. ಆದರೆ ವಿಷಾದನೀಯ ಸಂಗತಿ ಎಂದರೆ, ಇಂತಹ ಮಾನವ ಹಕ್ಕುಗಳನ್ನು ಜಾರಿಗೊಳಿಸಲು ರಾಜಕೀಯ ಪಕ್ಷಗಳಿಗೂ ಯಾವುದೇ ರಾಷ್ಟ್ರಗಳಿಗೂ ಸಾಧ್ಯವಾಗುವುದಿಲ್ಲ. ವೋಟ್ ಹಾಕಲು ಉತ್ಸಾಹಭರಿತವಾಗಿ ಬಂದ ಪೌರನಲ್ಲಿ ತಮ್ಮ ವೋಟನ್ನು ಬೇರೆಯವರು ಚಲಾಯಿಸಿದ್ದಾರೆ ಎಂದು ಹೇಳಲ್ಪಡುವಾಗ ಅವನಿಗೆ ಲಭಿಸುವ ಪೌರ ಸ್ವಾತಂತ್ರ್ಯವೂ, ಪ್ರಜಾಪ್ರಭುತ್ವವೂ ಊಹಿಸಬಹುದಾಗಿದೆ. ಅಧಿಕಾರವನ್ನು ಹಿಡಿತದಲ್ಲಿಡಲು ಭಾರತದ ಸಂವಿಧಾನ ಹಾಗೂ ವಿಶ್ವದ ವಿವಿಧ ಹಲವಾರು ಪ್ರಜಾಪ್ರಭುತ್ವ ಸಂವಿಧಾನದ ಜಾತ್ಯಾತೀತ ವನ್ನು ಅಡವಿಟ್ಟು ನೀಚ ಕಾರ್ಯಗಳಿಗೆ ತೊಡಗಿಸಿಕೊಂಡಿದ್ದಾರೆ. ಇದಕ್ಕೆ ರಾಷ್ಟ್ರೀಯ ಪಕ್ಷಗಳಾಗಿವೆ ಶಾಪ.
ಈ ಸಂದರ್ಭದಲ್ಲಿ ಕುರಾನ್ ಪ್ರಜಾಪ್ರಭುತ್ವದ ಆಶಯ ನೀತಿಗಳಿಗೆ ಶ್ರದ್ಧೇಯವಾಗುವುದು. ಪ್ರಜಾಪ್ರಭುತ್ವದ ಉತ್ಕೃಷ್ಟ ರೀತಿಯಾದ ಪ್ರತ್ಯಕ್ಷ ಪ್ರಜಾಪ್ರಭುತ್ವವನ್ನಾಗಿದೆ ಕುರಾನ್ ಕಲಿಸಿಕೊಟ್ಟದ್ದು. ಪ್ರಜೆಗಳಿಗೆ ಕೆಡುಕು ಉಂಟುಮಾಡುವ ಸಾರ್ವಜನಿಕ ಕಾರ್ಯವನ್ನು ಚರ್ಚಿಸಿ ಸಮಾಲೋಚನೆಯಿಂದ ಬಗೆಹರಿಸಬೇಕೆಂದು ಕುರಾನ್ ಪ್ರತಿಪಾದಿಸುತ್ತದೆ. ಪ್ರವಾದಿಯವರ ನಂತರದ ಆಡಳಿತಾಧಿಕಾರಿಯಾಗಿ ಅಬೂಬಕ್ಕರ್(ರ) ರವರು ಆಗಬೇಕೆಂದು ನೆಬಿಯವರಿಗೆ ಹೇಳಬಹುದಿತ್ತು. ಪ್ರವಾದಿಯವರು ಏನು ಆಜ್ಞಾಪಿಸುತ್ತಾರೋ ಅದನ್ನು ಚಾಚೂತಪ್ಪದೆ ನಿರ್ವಹಿಸಲು ಸಿದ್ಧರಾದ ಸ್ವಹಾಬಿಯವರಲ್ಲಿ ನೆಬಿಯವರು ಈ ವಿಷಯವನ್ನು ನಿರ್ದೇಶಿಸದೆ ಬಿಟ್ಟರು. ಎಂದರೆ ತದನಂತರ ಪ್ರಜಾಪ್ರಭುತ್ವದ ರೂಪದಲ್ಲಿ ಆಗಿದೆ ಅಬೂಬಕ್ಕರ್(ರ)ರನ್ನು ಖಲೀಫರಾಗಿ ನೇಮಿಸಲ್ಪಟ್ಟದ್ದು. ಹೀಗೆ 4 ಖಲೀಫರನ್ನು ಈ ರೂಪದಲ್ಲಿ ನೇಮಿಸಿದ್ದು. "يا ايها الناس"ಎಂಬ ಅಭಿ ಸಂಬೋಧನೆಯೂ "ಪ್ರಜೆಗಳ ವಿಶ್ವಾಸದ ಹಾಗೆ ನಿಮ್ಮ ವಿಶ್ವಾಸ ಇರಲಿ" ಎಂಬ ಆಜ್ಞೆ ನಿರ್ದೇಶನಗಳು ಕುರಾನ್ ಪ್ರಜಾಪ್ರಭುತ್ವ
ಪ್ರಮೇಯಗಳನ್ನಾಗಿದೆ ಎತ್ತಿ ತೋರಿಸುವುದು ಎಂಬ ದೊಡ್ಡ ಉದಾಹರಣೆ.
ದೇಶ, ಭಾಷೆ, ಜಾತಿ ವರ್ಣ ಭೇದವಿಲ್ಲದೆ ಮಾನವರೆಲ್ಲರೂ ಸಮಾನರಾಗಿದ್ದಾರೆ. ದೈವ ಭಕ್ತವಿರುವವನು ಸಮೂಹದಲ್ಲಿ ಉತ್ಕೃಷ್ಟನೂ ಮಹನೀಯನೂ ಆಗಿದ್ದಾನೆ ಎಂಬುದು ಕುರಾನಿನ ಘೋಷಣೆ. ಸೃಷ್ಟಿಕರ್ತನಲ್ಲಿ ಭಕ್ತಿ ಇರುವವನಿಗೆ ಮಾತ್ರ ಸೃಷ್ಟಿಗಳ ತೊಂದರೆಗಳನ್ನು ಆತ್ಮಸ್ಥೈರ್ಯದಿಂದ ಬಗೆಹರಿಸಬಹುದು. ಆಗ ಅವನು ಜನಸೇವಕ ನಾಗುತ್ತಾನೆ. ಇಲ್ಲಿ ನಾವು ಗಮನಿಸಬೇಕಾದ ವಿಷಯ ಮನುಷ್ಯನನ್ನು ವ್ಯತ್ಯಸ್ತವಾಗಿ ಪರಿಗಣಿಸಿ ಭಿನ್ನತೆ ಒಡಕು ಮಾಡುವುದಲ್ಲ ಕುರಾನಿನ ಉದ್ದೇಶ. ಬದಲು ದೈವಿಕ ಪಾದದಲ್ಲಿ ಮನುಷ್ಯನನ್ನು ಏಕೀಕರಿಸುವುದು ಕುರಾನಿನ ಗುರಿ. ಆಧುನಿಕ ಜಗತ್ತು ಬದಲಾಗುತ್ತಿರುವ ಸಮಯದಲ್ಲಿ ಪ್ರಜಾಪ್ರಭುತ್ವ ಸಮಾನತೆ ಮಾನವ ಹಕ್ಕುಗಳ ಎಲ್ಲಾ ಸಾಧ್ಯತೆಗಳನ್ನು ವಿಶ್ವ ಜನತೆಗೆ ತಿಳಿಸಿ ಕೊಟ್ಟದ್ದು ಕುರಾನಿನ ಧ್ವಜ ವಾಹಕ ರಾಗಿದ್ದಾರೆ. ಅವರನ್ನು ಈ ಮಹನೀಯ ಕಾರ್ಯಕ್ಕೆ ಪ್ರೇರೇಪಿಸಿದ್ದು ಕುರಾನಿನ ವಚನಗಳಾಗಿವೆ. ಸೂರ್ಯ ಉದಯಿಸುವ ಎಲ್ಲಾ ದಿನದಲ್ಲಿ ಯುದ್ಧ ಮಾಡುತ್ತಿದ್ದ ಔಸ್ ಖಸ್ ರಜ್ ಯುದ್ಧ ರಣಾಂಗದಲ್ಲಿ ತನ್ನ ಸಹೋದರ ನೀರು ಕುಡಿಯದೆ ರಕ್ತ ಸಾಕ್ಷಿಯಾದ ಕಾರಣ ನನಗೂ ನೀರು ಬೇಡ ಎಂಬ ಮಾತು ಹೇಳುವ ತನಕ ಸೌಹಾರ್ದತೆ ಬೆಳೆಸಲು ಪ್ರವಾದಿಯವರಿಗೆ ಸಾಧ್ಯವಾದದ್ದು ಪವಿತ್ರ ಕುರಾನಿನ ಪ್ರೇರಣೆಯಿಂದಾಗಿದೆ.
ಕತ್ತರಿಯಿಂದ ರಿಬ್ಬನ್ ತುಂಡರಿಸಿ ಉದ್ಘಾಟನೆ ನಡೆಸುವ ಸಾವಿರಾರು ರಜಪೂತರ ಸ್ಥಾಪನೆಯ ಉದ್ಘಾಟನೆಗೆ ಆಮಂತ್ರಿಸಿದಾಗ ಕತ್ತರಿಯನ್ನು ದೂರ ಬಿಸಾಡಿ ರಿಬ್ಬನ್ ಗಳನ್ನೆಲ್ಲಾ ಒಂದಾಗಿಸಿ ಐಕ್ಯತೆಯ ಸಂದೇಶವನ್ನು ಪ್ರಸಾರ ಮಾಡಲು ಮೊಹಿನುದ್ದೀನ್ ಜಿಸ್ತಿಕಬ್ ರವರಿಗೆ ಪ್ರಚೋದನೆ ಮಾಡಿದ್ದು ಕುರಾನಿನ ಮನಮುಟ್ಟುವ ಆಶಯಗಳು ಆಗಿದೆ.
ಕಳೆದುಹೋದ ಕಾಲದ ಪ್ರವಾದಿಗಳು,
ರಾಜರುಗಳು, ನಿರೀಶ್ವರವಾದಿಗಳು, ಚರಿತ್ರಾ ಕಾಲದ ಜನ ವಿಭಾಗಗಳು, ಶಿಲಾಯುಗ ನಗರಗಳು, ಗ್ರಾಮಗಳು, ಕಟ್ಟಡಗಳು ಕರಕುಶಲಗಳು, ಗುಹ ವಾಸಿಗಳು , ಚರಿತ್ರ ಪುರುಷರು, ಸಮುದ್ರ, ಭೂಮಿ, ಆಕಾಶ, ನಕ್ಷತ್ರ ಗೋಳಗಳು ಹಾಗೂ ಹಲವಾರು ಕಾರ್ಯಗಳು ಚರಿತ್ರ ಪರವಾದ ವಸ್ತುಗಳು ಇತ್ಯಾದಿಗಳನ್ನು ಕುರಾನ್ ವಿವರಿಸಿದೆ. ಇಲ್ಲಿ ಗಮನೀಯ ಸಂಗತಿ ಎಂದರೆ ಕುರಾನ್ ಚರಿತ್ರ ಬೋಧಿಸಲು ಅವತೀರ್ಣಗೊಂಡ ಗ್ರಂಥವಲ್ಲ. ಕುರಾನ್ ಚರಿತ್ರೆ ವಿವರಿಸುವುದಾದರೆ ಅದರಿಂದ ಧಾರ್ಮಿಕ ಉತ್ತುಂಗದ ಉದ್ದೇಶವಿದೆ. ಇದನ್ನು ನಾನು ಪ್ರತ್ಯೇಕವಾಗಿ ಹೇಳಲು ಕಾರಣ ಇಂತಿಂತಹ ಚರಿತ್ರೆ ಕುರಾನಿನಲ್ಲಿ ಇದೆಯಾ? ಎಂದು ಕೇಳುವ ಸ್ವಲ್ಪ ಜನರು ನಮ್ಮಲ್ಲಿದ್ದಾರೆ. ಅವರಿಗೂ ಒಂದು ಉತ್ತರವಾಗಿದೆ. ಕುರಾನಿನಲ್ಲಿ ತುಂಬಾ ಚರಿತ್ರೆ ವಿದೆ ಆದರೆ ಇದು ಚರಿತ್ರೆ ಗ್ರಂಥವಲ್ಲ. ನಮಗೆ ಒಂದು ಕಾರ್ಯ ಗೊತ್ತಿದೆ ಕುರಾನ್ ಎಲ್ಲಿ ಚರಿತ್ರೆ ಹೇಳಿದರೂ ಕೂಡ ಅದು ವಸ್ತುನಿಷ್ಠ ಯಾಗಿರುವ ಚರಿತ್ರೆ ಯಾಗಿರುತ್ತದೆ. ಅದಕ್ಕೆ ಕುರಾನ್ ಒಂದು ದೈವಿಕ ಗ್ರಂಥವಾಗಿದೆ. ಮತ್ತಿತರ ಗ್ರಂಥಗಳಿಂದ ಇಂತಹ ವಸ್ತುನಿಷ್ಠವಾದ ಚರಿತ್ರೆ ಸೋತು ಹೋದದ್ದು ಅದೊಂದು ದೈವಿಕ ಗ್ರಂಥವಲ್ಲದ ಕಾರಣ. ಪ್ರಪಂಚೋಲ್ಪತ್ತಿ, ಮನುಷ್ಯೋಲ್ಪತ್ತಿ ಬಗ್ಗೆ ಇಷ್ಟು ವ್ಯಕ್ತವಾದ ರೀತಿಯಲ್ಲಿ ಯಾವ ಗ್ರಂಥವಾಗಿದೆ ಬೋಧಿಸಿದ್ದು.
ಆಧುನಿಕ ಕ್ಷೇಮ ರಾಷ್ಟ್ರದ ಸಂವಿಧಾನ ವೆಲ್ಲವೂ ಎತ್ತಿ ಹೇಳುವುದಾಗಿದೆ ಸೆಕ್ಯುಲರಿಸಂ (ಜಾತ್ಯಾತೀತ) ಇತ್ತೀಚಿನ ಹಲವಾರು ರಾಷ್ಟ್ರಗಳ ಸಂವಿಧಾನಗಳಲ್ಲಿ ಸೆಕ್ಯುಲರಿಸಂ (ಜಾತ್ಯಾತೀತತೆ) ಒಂದು ಪ್ರಧಾನವಾದ ಕಾರ್ಯವಾಗಿ ಅಂಗೀಕರಿಸಲಾಗಿದೆ. ಜಾತ್ಯತೀತತೆ ಎಂದರೆ, ಧರ್ಮಕ್ಕೆ ಸಮಾನತೆಯ ಹಕ್ಕುಗಳನ್ನು ಹಾಗೂ ಎಲ್ಲ ಧರ್ಮಕ್ಕೆ ಪ್ರಾಧಾನ್ಯ ನೀಡುವುದು. ಇದರ ಮುಖ್ಯ ಆಶಯವೆಂದರೆ ಸ್ವಂತವಾಗಿ ಒಂದು ಧರ್ಮದ ಅನುಯಾಯಿ ಆಗಬೇಕೆಂದಲ್ಲ ಅದರ ಬದಲು ಸ್ವಂತ ಧರ್ಮದ ಹಾಗೆ ಮತ್ತಿತರ ಧರ್ಮವನ್ನು ಪರಿಗಣಿಸಬೇಕು ಎಂಬುದಾಗಿದೆ.
ಸಂವಿಧಾನದಲ್ಲಿ ಇದನ್ನು ಪ್ರಾಧಾನ್ಯತೆ ಯಿಂದ ಕಾಣಲು ಕಾರಣವೇನೆಂದರೆ, ಧರ್ಮಗಳು ಪರಸ್ಪರ ಭಿನ್ನತೆಯಿಂದ ಇರಬಾರದು. ಇಂತಹ ಭಿನ್ನತೆ ರಾಷ್ಟ್ರದ ಬೆಳವಣಿಗೆಗೆ ಅಡ್ಡಿಯುಂಟು ಮಾಡುತ್ತದೆ ಎಂಬುದು ಕಟು ಸತ್ಯ. ಕುರಾನ್ ಈ ವಿಷಯದಲ್ಲಿ ಸಮಾನವಾದ ಕಲ್ಪನೆಗಳನ್ನು ತಿಳಿಸಿದೆ. ಇದರ ಅರ್ಥ ಸ್ವಂತ ಧರ್ಮಕ್ಕೆ ಪ್ರಾಧಾನ್ಯತೆ ಕಲ್ಪಿಸುವುದಿಲ್ಲ ಎಂದಲ್ಲ. ಕುರಾನಿನ ಈ ವಾಕ್ಯ ಹೀಗೆ ಗಮನಿಸಬಹುದು"" ಅಸ್ ಲಾಮ್ ಎಂಬ ದೈವಿಕ ಕರೆಯು ಜನರಿಗೆ ಬೇಕಾಗಿದೆ. ಈ ಸಂದರ್ಭದಲ್ಲಿ ಕುರಾನ್ ವಿವರಿಸುವ ಜಾತ್ಯತೀತತೆ ಎಂಬುವುದು "ಮತ್ತೊಂದು ಧರ್ಮದೊಂದಿಗೆ ಸ್ಪರ್ಧೆ ನಡೆಸುವುದು ಹಾಗೂ ಅನ್ಯಧರ್ಮದ ದೈವಗಳನ್ನು ಪರಿಹಾಸ್ಯ ಮಾಡುವುದು ಅಲ್ಲ ಮತ್ತು ಇದು ನಿಷಿದ್ಧವಾಗಿದೆ" ಇದು ಕುರಾನಿನ ಜಾತ್ಯಾತೀತ ಅಭಿಪ್ರಾಯಗಳಿಗೆ ತೀವ್ರ ವಿರೋಧ ವ್ಯಕ್ತಪಡಿಸಿದೆ. ಹಾಗೂ ಬಲತ್ಕಾರದಿಂದ ಹಿದಾಯತ್ ಇಲ್ಲದೆ ಇಸ್ಲಾಂ ಧರ್ಮ ಸ್ವೀಕರಿಸಲು ಯಾರಿಂದಲೂ ಸಾಧ್ಯವಿಲ್ಲವೆಂದು ಕುರಾನಿನ(10:99)ರ ವಚನದಲ್ಲಿ ಗುರುತಿಸಲ್ಪಟ್ಟಿದೆ. ಮದೀನ ಎಂಬ ಹೊಸ ರಾಷ್ಟ್ರ ಕಟ್ಟಿಸಿ ಕೊಡುವಾಗ ಅಲ್ಲಿನ ಅಲ್ಪಸಂಖ್ಯಾತರಾದ ಜೂದರು ಹಾಗೂ ಕ್ರೈಸ್ತರಿಗೆ ಸಂರಕ್ಷಣೆ ಕೊಡಬೇಕೆಂಬ ಒಪ್ಪಂದವನ್ನು ಅಂಗೀಕರಿಸಬೇಕೆಂದು ಮದೀನದ ರಾಷ್ಟ್ರಪತಿ ಅಲ್ಲಿನ ಜನರಲ್ಲಿ ಸಂವಾದನ ನಡೆಸಿದ್ದಾರೆ. ಇಲ್ಲಿ ಜಾತ್ಯತೀತೆಯ ಅವಶ್ಯಕತೆಯನ್ನು ಮತ್ತು ಅದರ ಮಹತ್ವವನ್ನಾಗಿದೆ ನೆಬಿಯವರು ತಿಳಿಸಿಕೊಡುವುದು ಹಾಗೂ ಜೂದನ ಶವವನ್ನು ಗೌರವಿಸಿ ನುಡಿಯನ್ನು ನಡೆಯಿಸಿದರು. ಹೀಗೆ ಕುರಾನಿನ ಮಾರ್ಗದಂತೆ ನೆಬಿಯವರ ಅನುಯಾಯಿಗಳು ಕೂಡ ಹೀಗೆ ಮಾಡುತ್ತಿದ್ದರು. ಬಲತ್ಕಾರತೆ ಕುರಾನಿನ ರೀತಿ ಎಂದು ವಿಮರ್ಶಿಸುವ ವರ ಕಲ್ಪನೆ ತಪ್ಪಾಗಿದೆ. ಇಸ್ಲಾಮಿನ ಚರಿತ್ರೆಯನ್ನು ಅವರು ತಿಳಿಯಲಿಲ್ಲ. ಹೀಗೆ ಅವರು ಇಸ್ಲಾಮಿನ ಚರಿತ್ರೆಯನ್ನು ತಿಳಿದರೆ ಪ್ರತಿಯೊಂದು ಸಂಶಯಗಳಿಗೆ ಪರಿಹಾರ ಕೊಂಡುಕೊಳ್ಳಬಹುದು. "ಸತ್ಯನ್ವೇಶಿ ಸತ್ಯ ಕಂಡು ಹಿಡಿಯುವವನು" ಎಂಬ ನಾನ್ನುಡಿ ಕಟು ಸತ್ಯವಾಗಿದೆ.