ಇತಿಹಾಸಗಳಲ್ಲಿನ ವಾರಿಯಂ ಕುನ್ನತ್
            1921ರಲ್ಲಿ ಮಲಬಾರ್ ಸೂಪ್ರಂಟ್ ಆಗಿದ್ದ ರೋಬರ್ಟ್ ಹಿಚ್ಕೊಕ್ ಉಲ್ಲೇಖದಲ್ಲಿ "ಭಾರತದಲ್ಲಿ ಬ್ರಿಟಿಷ್ ಸೇನೆ ಎದುರಿಸಿದ ಅತಿ ದೊಡ್ಡ ಸವಾಲು ಏರನಾಡಿನ ಕುಞ್ಞಹಮದ್ ಹಾಜಿ ನೇತೃತ್ವದ ವಿರುದ್ಧ ನಡೆಸಿದ ಹೋರಾಟವಾಗಿತ್ತು" (R H Hitchcock 1983 Peasent Revolt In Malabar, History Malabar Rebellion 1921)
ಬ್ರಿಟಿಷರು ತಮ್ಮ ಆಡಳಿತ ವಿಸ್ತರಣೆಗಾಗಿ ಬ್ರಿಟಿಷ್ ವಿರುದ್ಧ ಕ್ರಾಂತಿಕಾರಿ ಹೋರಾಟ ನಡೆಸಿದ ವೀರ ದೇಶಾಭಿಮಾನಿಗಳನ್ನು ಹಿಂದು ವಿರೋಧಿ, ಮತಾಂಧದ ಬಣ್ಣ ಹಚ್ಚಿ ಕೋಮು ಧ್ರುವೀಕರಣಕ್ಕಾಗಿ ಪ್ರಾರಂಭದಿಂದಲೇ ಪ್ರಯೋಗಿಸಲಾದ ಒಂದು ಕುತಂತ್ರವಾಗಿರುತ್ತದೆ ಇದು. ಬ್ರಿಟಿಷರು ಹಾಗೂ ಬ್ರಿಟಿಷ್ ಆಳ್ವಿಕೆಯಲ್ಲಿ ಅವರ ಪರವಾಗಿ ಕೆಲಸ ನಿರ್ವಹಿಸಿದ ಪೋಲಿಸ್ ಅಧಿಕಾರಿಗಳಲ್ಲದೆ ಯಾವುದೇ ನಿಷ್ಪಕ್ಷ ಇತಿಹಾಸಗಾರು ಭಾರತೀಯ ಹೋರಾಟಗಾರರನ್ನು ಹಿಂದೂ ವಿರೋಧಿ, ಮತಾಂಧ ಎಂದು ಚಿತ್ರೀಕರಿಸಿದನ್ನು ಎಲ್ಲೂ ಸಹ ನೋಡಲು ಸಾಧ್ಯವಿಲ್ಲ. ಬ್ರಿಟಿಷರಿಗೆ ಅವರ ಅಜೆಂಡಾ ನಡವಳಿಕೆಗೆ ತರಲು ಹಿಂದೂ ಮುಸ್ಲಿಮರ ನಡುವೆ ಒಡಕು ಸೃಷ್ಟಿಸಿ ಹೋರಾಟದ ವೀರ್ಯ ಕುಗ್ಗಿಸುವುದು ಅನಿವಾರ್ಯವಾಗಿತ್ತು‌. ಅದಕ್ಕಾಗಿ ಇಲ್ಲಸಲ್ಲದ ಗಾಳಿಸುದ್ಧಿಗಳನ್ನು ಹಬ್ಬಿಸಿ ಅಪನಂಬಿಕೆಗಳನ್ನು ಸೃಷ್ಟಿ ಮಾಡಿರುತ್ತಾರೆ.
ತಮ್ಮ ಅಧಿಕಾರದ ಅಸ್ತಿತ್ವಕ್ಕಾಗಿ ಕೋಮು ಧ್ರುವೀಕರಣಕ್ಕೆ ಪ್ರಯತ್ನಿಸುತ್ತಿರುವ ಕೆಲವು ದುಶಕ್ತಿಗಳು ಇಂದಿಗೂ ಸಹ ಬ್ರಿಟಿಷರ ಅದೇ ಒಡದು ಆಳುವ ತಂತ್ರವನ್ನು ಬಳಸಿ ಅವರ ಕಪೋಲ ಕಲ್ಪಿತ ಇತಿಹಾಸವನ್ನು ಪ್ರಚಾರ ಪಡಿಸಿ ಧರ್ಮ ಧರ್ಮಗಳ ನಡುವೆ ವಿಶಬೀಜ ಬಿತ್ತುವ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ. ಇದಕ್ಕಾಗಿ ಬ್ರಿಟಿಷ್ ವಿರುದ್ಧ ಚಳುವಳಿಯ ಕ್ರಾಂತಿಕಾರಿ ಹೋರಾಟಗಾರ ವಾರಿಯನ್ ಕುನ್ನತ್ ಕುಞ್ಞಹಮದ್ ಹಾಜಿಯನ್ನು ಮಾಪಿಳ ಗಲಭೆಕೋರನಾಗಿ, ಹಿಂದೂ ವಿರೋಧಿಯಾಗಿ ಸಂಘಪರಿವಾರ ಶಕ್ತಿಗಳು ಚಿತ್ರೀಕರಿಸುತ್ತಿದ್ದಾರೆ. ಮಲಬಾರ್ ‌ಹೋರಾಟ ಸಂಧರ್ಭದಲ್ಲಿ ಕೆಲವು ಪ್ರದೇಶಗಳಲ್ಲಿ ನಾಯಕರು ತಿಳಿಯದೆ, ಅವರ ಬೆಂಬಲವಿಲ್ಲದೆ ಕೆಲವು ಕಿಡಿಗೇಡಿಗಳು ನಡೆಸಿದ ಕೊಲೆ ವಾರಿಯಂ ಕುನ್ನತರ ಹೆಸರಿನಲ್ಲಿ ಎತ್ತಿಕಟ್ಟಿ ವಿಮರ್ಶೆ, ಆರೋಪ ನಡೆಸುತ್ತಿದ್ದಾರೆ. ಆದರೆ ಮಲಾಬಾರ್ ದಂಗೆಯಲ್ಲಿ ವಾರಿಯನ್ ಕುನ್ನತ್ ಕುಞ್ಞಹಮದ್ ಹಾಜಿಯರೊಂದಿಗೆ ಬ್ರಿಟಿಷ್ ವಿರುದ್ಧ ಹೋರಾಟದಲ್ಲಿ ನೇತೃತ್ವ ವಹಿಸಿದ ಹಾಗೂ ನಿಷ್ಪಕ್ಷ ಇತಿಹಾಸಗಾರರು ಉಲ್ಲೇಖಿಸಲಾಗಿದ್ದು ಇವರ ವಾದಕ್ಕೆ ನೇರ ವಿಪರೀತವಾಗಿದೆ.
ಬ್ರಿಟಿಷ್ ವಿರುದ್ಧ ಚಳುವಳಿಯಲ್ಲಿ ವಾರಿಯಂ ಕುನ್ನತ್ ಕುಞ್ಞಹಮದ್ ಹಾಜಿಯರೊಂದಿಗೆ ಹೋರಾಟಕ್ಕೆ ನೇತೃತ್ವ ವಹಿಸಿದ ಕೆ. ಮಾಧವನ್ ನಾಯರ್ (ಮಲಬಾರ್ ಕಲಾಪಂ), ಮೊಯಿಕುನ್ನತ್ ಬ್ರಹ್ಮಧತ್ತನ್ ನಂಬೂದಿರಿಪ್ಪಾಡ್ ( ಖಿಲಾಫತ್ ಸ್ಮರಣಗಳ್), ಹಾಗೂ ಎಂ ಗಂಗಾಧರನ್ ( ಮಲಬಾರ್ ಕಲಾಪಂ), ಕೆ ಎಂ ಪಣಿಕ್ಕರ್ ( ಮಲಬಾರ್ ಕಲಾಪಂ), ಪ್ರೊ. ಎಂ ಪಿ ಎಸ್ ಮೇನೋನ್ (ಮಲಬಾರ್ ಸಮರಂ: N P ನಾರಾಯಣ ಮೇನೋನ್ ಸಹ ಪ್ರವರ್ತಗರುಂ), ಎ ಕೆ ಕೋಡೂರ್ (ಮಾಪ್ಪಿಳ ಆಂಗ್ಲೊ ಯುದ್ಧಂ), ಕೆ ಕೆ ಕರೀಂ (ವಾರಿಯಂ ಕುನ್ನತ್ ಕುಞ್ಞಹಮದ್ ಹಾಜಿ) ಮುಂತಾದ ಅನೇಕ ಇತಿಹಾಸಗಾರರ ಕೃತಿಗಳಲ್ಲಿ ವಾರಿಯಂ ಕುನ್ನತ್ತರನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಎಲ್ಲೂ ಸಹ ವಾರಿಯಂ ಕುನ್ನತ್ತರನ್ನು ಹಿಂದೂ ವಿರೋಧಿಯಾಗಿ ಉಲ್ಲೇಖಿಸಲಾಗಿಲ್ಲ. ನಿಷ್ಪಕ್ಷ ಇತಿಹಾಸಗಾರರ ಕೆಲವೊಂದು ಉಲ್ಲೇಖಗಳು ನಮಗೆ ಪರಿಶೀಲಿಸಬಹುದಾಗಿದೆ.
ಮಲಬಾರಿನ ಅಂದಿನ ಡೆಪ್ಯುಟಿ ಕಲೆಕ್ಟರಾಗಿದ್ದ ಸಿ ಗೊಪಾಲನ್ ನಾಯರ್ "ವಾರಿಯಂ ಕುನ್ನತ್ ಹಿಂದೂಗಳ ರಾಜ ಹಾಗೂ ಖಿಲಾಫತ್ ಸೇನೆಯ ಕೇನಲ್ ಆಗಿದ್ದರು." ಎಂದು ಪ್ರಸ್ತಾಪಿಸಿದ್ದಾರೆ. (ಮಲಬಾರ್ ರಿಬಲ್ಯನ್ ಪುಟ 77) ಕೆ ಎನ್ ಪಣಿಕ್ಕರ್ Against Lord and State: Religion and Peasant Uprisings in Malabar 1836 - 1921 Page 156)
ಹಿಂದೂ ಮುಸ್ಲಿಮರ ನಡುವೆ ಒಡಕು ಉಂಟಾಗಬಾರದೆಂದು ಅವರು ಉದ್ಘೋಷಿಸಿದರು, ಸ್ವ ಇಚ್ಛೆಯಿಂದ ಅಲ್ಲದೆ ಇಸ್ಲಾಮಿಗೆ ಮತಾಂತರಗೊಂಡ ಯಾವುದೇ ವ್ಯಕ್ತಿ ಸರಿಯಾದ ಮುಸ್ಲಿಂ ಆಗುವುದಿಲ್ಲ ಎಂದು ಹಾಜಿಯರು ಹೇಳಿದರು, ಮಹಿಳೆಯರನ್ನು ಅತ್ಯಾಚಾರ ನಡೆಸಲು ಪ್ರಯತ್ನಿಸುವವರಿಗೆ ಮರಣದಂಡನೆ ವಿಧಿಸಿದರು. ಹಿಂದೂಗಳ ಆಸ್ತಿಗಳನ್ನು ದರೋಡೆ ನಡೆಸುವವರ ಕೈ ಕಡಿಯುವುದಾಗಿ ಅವರು ಆದೇಶ ಹೊರಡಿಸಿದರು. (ಪ್ರೊ. ಎಂ ಪಿ ಎಸ್ ಮೇನೋನ್, ಮಲಬಾರ್ ಸಮರಂ ಪುಟ 113)
ಬ್ರಿಟಿಷರಿಗಾಗಿ ರಹಸ್ಯಗಳನ್ನು ತಲುಪಿಸುವವರ ಧರ್ಮ ಪರಿಗಣಿಸದೆ ಶಿಕ್ಷೆಗೆ ಗುರಿಪಡಿಸಿದರು. ಬ್ರಿಟಿಷರ ಪರ ಕಾರ್ನಿರ್ವಹಿಸಿದ ರಿಟೆರ್ಡ್ ಮುಸ್ಲಿಂ ಪೋಲಿಸ್ ಸಿಬ್ಬಂದಿ ಚೇಕುಟ್ಟಿಯ ತಲೆ ಕಡಿಯಲು ಆದೇಶ ನೀಡಿದ್ದು ವಾರಿಯಂ ಕುನ್ನತ್ ಕುಞ್ಞಹಮದ್ ಹಾಜಿಯಾಗಿದ್ದರು.
(ಪ್ರೊ. ಎಂ ಪಿ ಎಸ್ ಮೇನೋನ್, ಮಲಬಾರ್ ಸಮರಂ ಪುಟ 106)
ಮಲಬಾರ್ ಖಿಲಾಫತ್ ಹೋರಾಟದಲ್ಲಿ ವಾರಿಯಂ ಕುನ್ನತ್ತರೊಡನೆ ನೇತೃತ್ವ ವಹಿಸಿದ ನಾರಾಯಣ ಮೇನೋನರ ಸಂಭಂದಿಕರು ಮೇಲಾಟ್ಟೂರ್. ಮಣ್ಣಾರ್ಕಾಡ್, ಮಂಜೇರಿ, ಚೆರುಪುಲಶ್ಶೇರಿ, ಕೋಝಿಕೋಡ್ ಮುಂತಾದ ಸ್ಥಳಗಳಲ್ಲಿ ವಾಸವಾಗಿದ್ದರು. ಇವೆಲ್ಲವೂ ದಂಗೆ ಹರಡಿದ ಪ್ರದೇಶಗಳಾಗಿದ್ದರೂ ಸಹ ಯಾವುದೇ ಒಂದು ಹಿಂದೂ ಮನೆಗೆ ಮಾಪಿಳರು ಅಕ್ರಮ ನಡೆಸಲಿಲ್ಲ ಎಂಬುದು ಖಿಲಾಫತ್ ನಾಯಕರೊಂದಿಗೆ (ಪ್ರತ್ಯೇಕವಾಗಿ ಎಂ ಪಿ ಯೊಂದಿಗೆ) ಉಂಟಾಗಿದ್ದ ಗೌರವಕ್ಕೆ ಉದಾಹರಣೆಯಾಗಿದೆ. ಅದೂ ಅಲ್ಲದೆ ಹಿಂದೂಗಳಾದ ಖಿಲಾಫತ್ ಹೋರಾಟದಗಾರರಿಗೆ ಸಂರಕ್ಷಣೆ ನೀಡಿರುವುದು ಮುಸ್ಲಮರಾಗಿದ್ದಾರೆ. ತಮಗೆ ಮಾಪಿಳರಲ್ಲಿ ಸಂಪೂರ್ಣ ನಂಬಿಕಯಿದೆ ಎಂದು ಸಾಬೀತು ಪಡಿಸುವ ರೀತಿಯಲ್ಲಿ ಹಿಂದೂಗಳು ಅಧಿಕಾರಿಗಳಿಗೆ ಕಲುಹಿಸಲಾದ ಅನೇಕ ಪತ್ರಗಳು ಹಾಗೂ ಟೆಲಿಗ್ರಾಂಗಳು ಪತ್ತೆಯಾಗಿದೆ. ಇದನ್ನು ವುಡಿನಂತಹಾ ಬ್ರಿಟಿಷ್ ಇತಿಹಾಸಗಾರರು ಅವರ ಸೌಕರ್ಯಕ್ಕೆ ಅನುಸಾರವಾಗಿ ಮುಚ್ಚಿಟ್ಟುಕೊಂಡಿದ್ದಾರೆ. 1921 ಆಗಸ್ಟ್ 27ಕ್ಕೆ ಅಙ್ಙಾಡಿಪುರಂದಿಂದ ಚೆಂಗಳತ್ ಕರುಣಾಕರನ್ ಮೇನೋನ್ ಕಲುಹಿಸಿದ ಪತ್ರ ನೋಡಿ "ಅಙ್ಙಾಡಿಪುರಂದಲ್ಲಿ ಯಾವುದೇ ಒಂದು ಹಿಂದೂ ಕುಟುಂಬವನ್ನು ಸಹ ಮಾಪಿಳರು ಉಪದ್ರವಿಲಿಲ್ಲ. ಹಿಂದೂಗಳಿಗೆ ಸಹಾಯ ಮಾಡುತ್ತಿರುವುದು ಮಾಪಿಳರ ಒಳ್ಳೆಯ ಗುಣವಾಗಿ ಪರಿಗಣಿಸಬೇಕು. ನನ್ನ 16 ವಯಸ್ಸಿನ ಮಗಳು ಮೂರು ಪುತ್ರರು ಅಙ್ಙಾಡಿಪುರಂದಲ್ಲಿ ಯಾವುದೇ ಆತಂಕವಿಲ್ಲದೆ ವಾಸಿಸುತ್ತಿದ್ದಾರೆ ಎಂಬುದು ಮಾಪಿಳರಲ್ಲಿ ನನಗಿರುವ ವಿಶ್ವಾಸ ದೃಢಪಡಿಸುತ್ತಿದೆ. ಮಾಪಿಳರು ಅವರಿಗೆ ಬೇಕಾದ ಎಲ್ಲಾ ಸಹಾಯ ಸಹಕಾರಗಳನ್ನು ಮಾಡುತ್ತಾರೆ ಎಂಬ ನಂಬಿಕೆ ನನಗಿದೆ." ಎಂದಾಗಿತ್ತು ಕರುಣಾಕರನ್ ಮೇನೋನ್ ಬರೆದ ಪತ್ರ. (ಪ್ರಕಟಣೆ : ಹಿಂದೂ ದನಪತ್ರಿಕೆ 1921 ಆಗಸ್ಟ್ 21)
ಮಾಪಿಳರ ಕ್ರೋದ ಜಮೀನುದಾರರೊಂದಿಗೆ ಹಾಗೂ ಅವರಿಗೆ ಸಹಕಾರ ನೀಡುತ್ತಿರುವ ಸಿಬ್ಬಂದಿಗಳೊಂದಿಗಾಗಿತ್ತು. ಖಿಲಾಫತ್ ಚಳುವಳಿಗಾರರು ಯಾರೂ ಸಹ ಹಿಂದೂಗಳಿಗೆ ಕಿರುಕುಳ ಕೊಡಲಿಲ್ಲ. ಬ್ರಿಟಿಷರಿಗೆ ಅನುವು ಮಾಡಿಕೊಡುವ ಹಿಂದೂಗಳನ್ನು, ಮುಸ್ಲಮರನ್ನು ಸಹ ಆಕ್ರಮಿಸಿದ್ದಾರೆ. (ಎಂ ಪಿ ಎಸ್ ಮೇನೋನ್, ಮಲಬಾರ್ ಸಮರಂ ಪುಟ - 104)
ವಾರಿಯಂ ಕುನ್ನತ್ ಕುಞ್ಞಹಮದ್ ಹಾಜಿಯ ಧಾರ್ಮಿಕ ಚಿಂತನೆಗಳೊಂದಿಗಿನ ದೇಶಪ್ರೇಮವನ್ನು ಗುರುತಿಸಲು ಅವರ ಪ್ರಸಿದ್ಧವಾದ ಒಂದು ಭಾಷಣ ಮಾತ್ರ ಸಾಕಾಗುತ್ತದೆ. ಬ್ರಟಿಷರಿಗೆ ಸಹಕಾರ ನೀಡುತ್ತಿದ್ದ ಖಾನ್ ಬಹದ್ದೂರ್ ಚೇಕುಟ್ಟಿ ಎಂಬ ಮುಸಲ್ಮಾನನ ತಲೆ ಕಡಿದು ಈಟಿಗೆ ನಾಟಿ ಮಂಜೇರಿಯಲ್ಲಿ ಕುಞ್ಞಹಮದ್ ಹಾಜಿ ನಡೆಸಿದ ಐತಿಹಾಸಿಕ ಘೋಷಣೆ "ಕ್ರಾಂತಿಕಾರಿ ಸರಕಾರದ (ವಾರಿಯಂ ಕುನ್ನತ್ ಸ್ಥಾಪಿಸಿದ ಮಲೆಯಾಳ ರಾಜ್ಯ) ಮಾರ್ಷಲ್ ಲಾ ಆಗಿ ಪರಿಗಣಿಸುತ್ತಿದೆ. ಏರನಾಡಿನವರೇ ನಾವು ತುಂಬಾ ಕಷ್ಟಗಳನ್ನು ಅನುಬವಿಸುತ್ತಿದ್ದೇವೆ. ಅನ್ಯರ ಕಾಲಡಿಯಲ್ಲಿ ನಿಂತುಕೊಳ್ಳಬೇಕಾದವರಾಗಿ ಮಾರ್ಪಟ್ಟಿದೆ. ಅದಕ್ಕೆ ಕಾರಣ ಬ್ರಿಟಿಷ್ ಸರ್ಕಾರವಾಗಿದೆ, ಅದನ್ನು ನಮಗೆ ಕೊನೆಗೊಳಿಸಬೇಕು. ಎಲ್ಲಾ ಸಂಕಷ್ಟಗಳಿಂದ ನಾವು ಮುಕ್ತರಾಗಬೇಕು. ಆಯುದಗಳನ್ನ ಹಿಡಿದು ಹೋರಾಟ ನಡೆಸಬೇಕಾದ ಸನ್ನಿವೇಶ ಎದುರಾಗಿದೆ. (ಮರಣದಂಡನೆಗೆ ಒಳಗಾದ ಚೇಕುಟ್ಟಿ ಸಾಹೇಬರ ತಲೆಗೆ ಬೆರಳು ತೋರಿಸಿ) ಆನಕ್ಕಾಯದ ಪೋಲೀಸ್, ಬ್ರಟಿಷರ ಏರನಾಡಿನ ಪ್ರತಿನಿಧಿಯ ತಲೆಯಾಗಿದೆ ಇದು. ಬ್ರಟಿಷರೊಂದಿಗೆ ಆಡಬೇಡಿ, ಜಮೀನ್ದಾರರೊಂದಿಗೆ ಆಡಬೇಡ ಎಂದು ಹೇಳಿ ಇವರು ನಮಗೆ ಬೆದರಿಕೆಯಾಕಿದ್ದರು. ನಮ್ಮ ವಿರುದ್ಧ ಕಾರ್ಯನಿರ್ವಹಿಸುವುದಾಗಿ ಶಪಥ ಮಾಡಿದನು. ಅದಕ್ಕಾಗಿ ಇಂದು ಇದನ್ನು ಅನುಭವಿಸಬೇಕಾಯಿತು. ನೀವು ಏನು ಹೇಳುತ್ತೀರಿ ? ನಾನು ಮಾಡಿದ್ದು ತಪ್ಪಾದಲ್ಲಿ ನನ್ನನ್ನು ಇಲ್ಲೇ ಕೊಂದು ಹಾಕಿ.(ಇಲ್ಲ ನೀವು ಮಾಡಿದ್ದು ಸರಿಯಾಗಿದೆ ಎಂದು ಅಲ್ಲಿ ನೆರದಂತಹಾ ಜನಸ್ತೋಮ ಧ್ವನಿ ಎತ್ತಿ ಕೂಗಿದರು)
ನಿನ್ನೆ ನಾನೋಂದು ವಿಷಯ ಕೇಳಲ್ಪಟ್ಟೆ, ಇದು ಹಿಂದೂಗಳ ಹಾಗೂ ಮುಸ್ಲಿಮರ ನಡುವಿನ ಯುದ್ದವಾಗಿದೆ ಎಂದು ಕೆಲವರು ಅಪಪ್ರಚಾರ ನಡೆಸುತ್ತಿದ್ದಾರೆ. ಬಿಳಿಯರು ಅವರ ಸಿಲ್ಬಂಧಿಗಳಾದ ಆನಕ್ಕಾಯಂ ಚೇಕುಟ್ಟಿಯಂತವರು, ಸೃಷ್ಟಿಕರ್ತನ ಸೃಷ್ಟಿಗಳನ್ನು ನಾಲ್ಕು ಜಾತಿಗಳಾಗಿ ಬೇರ್ಪಡಿಸಿ ಜನರನ್ನು ಗುಲಾಮರನ್ನಾಗಿಸಿದ ಜಮೀನ್ದಾರರು ಸೇರಿ ಈ ರೀತಿ ಅಪಪ್ರಚಾರ ನಡೆಸುತ್ತಿದ್ದಾರೆ. ನಮಗೆ ಹಿಂದೂಗಳೊಂದಿಗೆ ಯಾವುದೇ ದ್ವೇಷ ಇಲ್ಲ. ಆದರೆ ಬ್ರಿಟಿಷ್ ಸರ್ಕಾರಕ್ಕೆ ಸಹಾಯ ನೀಡಿ ನಮ್ಮ ರಹಸ್ಯಗಳನ್ನು ತಲುಪಿಸಿ ದ್ರೋಹ ಬಗೆಯುವವರು ಯಾರೇ ಆದರೂ ಅವರನ್ನು ಕಠಿಣ ಶಿಕ್ಷೆಗೆ ಒಳಪಡಿಸಲಾಗುವುದು. ಹಿಂದೂಗಳು ಸಹ ಈ ನಾಡಿನವರಾಗಿದ್ದಾರೆ. ಅಕಾರಣವಾಗಿ ಹಿಂದೂಗಳನ್ನು ಆಕ್ರಮಿಸುವುದು, ಅವರ ಆಸ್ತಿಪಾಸ್ತಿಗಳನ್ನು ದರೋಡೆ ನಡೆಸುವವರನ್ನು ಶಿಕ್ಷಿಸಲಾಗುವುದು. ಇದು ಮುಸ್ಲಿಂ ರಾಜ್ಯವನ್ನಾಗಿ ಮಾಡುವ ಉದ್ದೇಶ ಇಲ್ಲ. ಹಿಂದೂಗಳನ್ನು ಯಾರು ಭಯಪಡಿಸಬಾರದು.ಆವರ ಅನುಮತಿಯಿಲ್ಲದೆ ಅವರನ್ನು ಧರ್ಮಾಂತರಗೊಳಿಸಬಾರದು. ಅವರ ಆಸ್ತಿಗಳನ್ನು ಅನ್ಯಾಯವಾಗಿ ನಾಶಪಡಿಸಬಾರದು. ಅವರು ಸಹ ನಮ್ಮಂತೆಯೇ ಕಷ್ಟ ಅನುಭವಿಸುವವರಾಗಿದ್ದಾರೆ. ಎಲ್ಲರೂ ಪರಸ್ಪರ ಕೈಜೋಡಿಸಬೇಕು. ಅಗತ್ಯ ಬಂದಲ್ಲಿ ಈ ನಾಡಿಗಾಗಿ ಹೋರಾಡಿ ಮರಣವರಿಸಲು ನಾವು ತಯ್ಯಾರಿದ್ದೇವೆ. (ಉದ್ಧರಣಿ: ಸರ್ದಾರ್ ಚಂದ್ರೋತ್, ದೇಶಭಿಮಾನಿ 1946 ಆಗಸ್ಟ್ 25)
ವಾರಿಯಂ ಕುನ್ನತ್ತರ "ಸ್ವತಂತ್ರ ರಾಜ್ಯ"ಕ್ಕೆ ವೆಟ್ಟಿಕ್ಕಾಡ್ ಬಟ್ಟತ್ತಿರಿಪಾಡ್, ಪಾಂಡಿಯಾಟ್ ನಂಬೀಷನ್ ಎಂಬವರು ಧನ, ಭೂಮಿ, ಆಹಾರ ನೀಡಿ ಸಹಕರಿಸಿದರು ಹಾಗೂ 500ರಷ್ಟು ಹಿಂದೂಗಳು ವಾರಿಯಂ ಕುನ್ನತ್ತರ ಸೇನೆಯಲ್ಲಿ ಸೇರಿರುವುದಾಗಿ ಬ್ರಹ್ಮದತ್ತನ್ ನಂಬೂದಿರಿಪ್ಪಾಡ್ ಖಿಲಾಫತ್ ಸ್ಮರಣೆ ಎಂಬ ಕೃತಿಯಲ್ಲಿ (ಪುಟ 54) ವಿವರಿಸುತ್ತಿದ್ದಾರೆ.
ವಾರಿಯಂ ಕುನ್ನತರ ಆಡಳಿತ ಪ್ರದೇಶದಲ್ಲಿ ಹಿಂದೂ ಮನೆಗಳಿಗೆ ಕಾವಲುಗಾರರನ್ನು ನೇಮಿಸಿದ್ದರು. ಹಿಂದೂ ಸ್ತ್ರೀಯರನ್ನು ಪಲ್ಲಕ್ಕಿಯಲ್ಲಿ ಒತ್ತು ಅವರವರ ಮನೆಗಳಿಗೆ ತಲುಪಿಸಿದ ಘಟನೆಗಳು ಸಹ ಉಂಟಾಗಿದೆ. (ಕೆ ಪಿ ಕೇಶವನ್ ಮೇನೋನ್, ಕಯಿಞ್ಞ ಕಾಲಂ)
ವಾರಿಯಂ ಕುನ್ನತ್ತರ ಅಂತ್ಯ ನಿಮಿಶಗಳು ಅನೇಕ ಸಂಶೋಧನೆಯ ಆಧಾರದಲ್ಲಿ ಎ ಕೆ ಕೋಡೂರ್ ತಯ್ಯಾರಿಸಿದ "ಆಂಗ್ಲೊ ಮಾಪಿಳ ಯುದ್ಧಂ" ಎಂಬ ಪುಸ್ತಕದಲ್ಲಿ ಸ್ಪಷ್ಟವಾಗಿ ವಿವರಿಸುತ್ತಿದ್ದಾರೆ. ಒಬ್ಬ ವೀರ ದೇಶಾಭಿಮಾನಿಯ ಕ್ರಾಂತಿಕಾರಿ ಹೋರಾಟವನ್ನು ಕೋಡೂರ್ ಅನಾವರಣಗಳಿಸಿದನ್ನು ನೋಡುವಾಗ
ಮನುವಾದಿಗಳು ಇತಿಹಾಸ ತಿರುಚಿ ಕೋಮು ಧ್ರುವೀಕರಣಕ್ಕೆ ಪ್ರಯತ್ನಿಸುತ್ತಿರುವುದು ಯಾವುದೇ ದೇಶಪ್ರೇಮಿಗೆ ಕೈಕಟ್ಟಿ ನೋಡಲು ಸಾಧ್ಯವಿಲ್ಲ.
1922 ಜನವರಿ 20 ಮಧ್ಯಾಹ್ನ
ವಾರಿಯಂ ಕುನ್ನತ್ ಹಾಗೂ ಅವರ ಎರಡು ಅನುಚರರನ್ನು ಮರಣದಂಡನೆಗೆ ಹಾಜರುಪಡಿಸಲಾಗುತ್ತದೆ. ಕೋಟು, ಮುಂಡಾಸು ಧರಿಸಿ ಕುರ್ಚಿಯಲ್ಲಿ ಕುಳಿತ ಹಾಜಿಯರ ಎರಡೂ ಕೈಗಳನ್ನು ಬಂಧಿಸಿ ಕುರ್ಚಿ ಸಮೇತ ದೇಹವನ್ನು ಕಟ್ಟಿಹಾಕಿ ಶಿಕ್ಷೆ ನಡೆಸುವ ಸಂದರ್ಭದಲ್ಲಿ ಕೊನೆಯ ಆಗ್ರಹ ಕೇಳಿದಾಗ ವಾರಿಯಂ ಕುನ್ನತ್ ಹೇಳುತ್ತಾರೆ " ನೀವು ನನ್ನನ್ನು ಕಣ್ಣು ಕಟ್ಟಿ ಹಿಂದಿನಿಂದ ಗುಂಡು ಹಾರಿಸಿ ಕೊಲ್ಲುವುದಲ್ಲವೇ ? ಆದರೆ ನನ್ನ ಕಣ್ಣು ಕಟ್ಟದೆ, ಬಂಧಿಸದೆ ನನ್ನ ಎದುರಿನಿಂದ ಗುಂಡು ಹಾರಿಸಬೇಕು. ನನ್ನ ಪ್ರಾಣ ಅಪಹರಿಸುವ ಗುಂಡು ನನ್ನ ಹೆದೆಗೆ ಬಂದು ತಗುಲುವುದು ನನ್ನ ಕಣ್ಣಾರೆ ಕಾಣಬೇಕು. ಈ ಮನ್ನಲ್ಲಿ ಮುಖಸೇರಿಸಿ ಮರಣವರಿಸಬೇಕು. ಎಂದು ವೀರ ಹೋರಾಟಗಾರ ವಾರಿಯಂ ಕುನ್ನತ್ ಕುಞ್ಞಹಮದ್ ಹಾಜಿ ಕೇಳಿಕೊಂಡರು. (ಹಿಚ್ ಕೋಕ್ ಬಲಬಾರ್ ರಿಬಲ್ಯನ್ ಪುಟ - 104)
ಅಂತ್ಯಾಭಿಲಾಷೆ ಅಂಗೀಕರಿಸಿ ಕಣ್ಣು ಮುಚ್ಚದೆ ಹೆದೆಗೆ ಗುಂಡಿಟ್ಟು ಬ್ರಿಟಿಷ್ ಸೇನೆ ಹಾಜಿಯ ಮರಣದಂಡನೆ ನಡವಳಿಕೆ ತಂದರು. ಅಂತ್ಯಕ್ರಿಯೆ ನಿರ್ವಹಿಸುವಾಗ ಪುಣ್ಯ ಪುರುಷಣಾಗಿ ಕಂಡು ಅಣುಸ್ಮರಣೆ ಕಾರ್ಯಕ್ರಮಗಳನ್ನು ನಡೆಸುತ್ತಾರೆ ಎಂಬ ಭಯದಿಂದ ಹಾಜಿಯರ ಸಮೇತ ಮೃತ ಶರೀರಗಳನ್ನು ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದರು. ಅದರೊಂದಿಗೆ ಮಲಯಾಳ ರಾಜ್ಯ ಎಂಬ ಕ್ರಾಂತಿಕಾರಿ ಸರ್ಕಾರದ ಎಲ್ಲಾ ಆಧಾರಗಳನ್ನು ಸಹ ಅಗ್ನಿಗೀಡಾಕಿದರು.
ಕ್ಯಾಲಿಕಟ್ ಸರಕಾರಿ ಕಾಲೇಜಿನ ಇತಿಹಾಸಧ್ಯಾಪಕ ಹಾಗೂ ಕೊಟಯಂ ಮಹಾತ್ಮ ಗಾಂಧಿ ವಿಶ್ವವಿದ್ಯಾಲಯದ
ವಿಸಿಟಿಂಗ್ ಪ್ರಧ್ಯಾಪಕರಾದ ಎಂ ಗಂಗಾಧರನ್ ರವರ "ಮಲಬಾರ್ ದಂಗೆ 1921 - 22" ಎಂಬ ಕೃತಿಯಲ್ಲಿ ವಾರಿಯಂ ಕುನ್ನತ್ ಕುಞ್ಞಹಮದ್ ಹಾಜಿಯ ಧೀರತೆ, ಹಿಂದೂಗಳಿಗೆ ಮಾಡಲಾದ ಸಹಾಯಗಳು, ಬ್ರಿಟಿಷರಿಗೆ ಹೋರಾಟಗಾರ ರಹಸ್ಯಗಳನ್ನು ತಲುಪಿಸುವ ಮಾಪಿಳರನ್ನು ಸಮೇತ ಶಿಕ್ಷೆಗೆ ಒಳಪಡಿಸಿದ್ದು, ನಿರ್ಬಂಧಿತ ಮತಾಂತರ ವಿರೋದಿಸಿದ್ದು ಇವೆಲ್ಲವನ್ನೂ ಗಂಗಾದರನ್ ರವರ ಪುಸ್ತಕದ 272ರಿಂದ 283ರ ವರೆಗಿನ ಪುಟಗಳಲ್ಲಿ ‌ಸ್ಪಷ್ಟವಾಗಿ ವಿವರಿಸುತ್ತಿದ್ದಾರೆ. ಬಲಬಾರ್ ಹೋರಾಟ ಧರ್ಮಾದಾರಿತವಾಗಿರಲಿಲ್ಲ ಅದು ಬ್ರಿಟಿಷ್ ವಿರುದ್ಧ ಹೋರಾಟವೇ ಆಗಿತ್ತು ಎಂದು ಹಿಚ್ ಕೋಕನ್ನು ಆಧರಿಸಿ ಗಂಗಾದರನ್ ರವರು ಕಚಿತಪಡಿಸಿ ಹೇಳುತ್ತಿದ್ದಾರೆ. (ಪುಟ 324) ಬ್ರಿಟಿಷ್ ಅಧಿಪತ್ಯದಿಂದ ಸ್ವಾತಂತ್ರ್ಯ ಪಡೆಯಲು ವೀರ ಮುಸಲ್ಮಾನರು ನಡೆಸಿದ ಹೋರಾಟವಾಗಿದೆ ಎಂದು ಕೆ ಮಾದವನ್ ಮೇನೋನ್ ರವರನ್ನು ಆಧರಿಸಿ (ಪುಟ 327) ರಲ್ಲಿ ಸಮರ್ಥಿಸಿಕೊಳ್ಳುತ್ತಿದ್ದಾರೆ.
ಮೇಲೆ ಸೂಚಿಸಲಾದ ಕೆಲವೊಂದು (ಇನ್ನಷ್ಟು ಇದೆ) ನಿಷ್ಪಕ್ಷ ಇತಿಹಾಸಗಾರರ ಅಭಿಪ್ರಾಯದಲ್ಲಿ ವಾರಿಯಂ ಕುನ್ನತ್ ಕುಞ್ಞಹಮದ್ ಹಾಜಿಯ ವ್ಯಕ್ತಿತ್ವ, ಸಂಕಲ್ಪಗಳು ಬಹಿರಂಗವಾಗಿದೆ. ಹಿಂದೂಗಳ ಆಸ್ತಿಪಾಸ್ತಿಗಳನ್ನು ದರೋಡೆ ನಡಸುವವರ ಕೈ ಕಡಿಯುವುದಾಗಿ ಹೆಚ್ಚರಿಕೆ ನೀಡಿದರು ಹಿಂದೂಗಳ ಮನೆಗಳನ್ನು ಆಕ್ರಮಿಸುವುದನ್ನು ಹಾಜಿಯವರೇ ಮುಂದೆ ಬಂದು ತಡೆಯಾಕಿದರು. ಬ್ರಿಟಿಷ್ ಸೇನೆಗೆ ಸಹಕಾರ ನೀಡಿದವರನ್ನು ಹಿಂದೂ ಮುಸ್ಲಿಂ ಎಂದು ಪರಿಗಣಿಸದೆ ಎಲ್ಲರನ್ನೂ ಶಿಕ್ಷೆಗೆ ಒಳಪಡಿಸಿದರು. ಕುಞ್ಞಹಮದ್ ಹಾಜಿಯೊಂದಿಗೆ ಹೋರಾಟರಂಗದಲ್ಲಿದ್ದ ಬ್ರಹ್ಮದತ್ತನ್ ನಂಬೂದಿರಿಪ್ಪಾಡ್, ಎಂ ಪಿ ನಾರಾಯಣನ್ ಮೇನೋನ್ ಮುಂತಾದವರು ಯಾರು ಅವರನ್ನು ಧ್ವೇಷಿಯಾಗಿ, ಮತಾಂಧನಾಗಿ ಬಿಂಬಿಸಲಿಲ್ಲ. ಹಿಂದೂ ಮುಸ್ಲಿಮರನ್ನು ಅವರು ಬೇರ್ಪಡಿಸಿ ನೋಡಿರಲಿಲ್ಲ. ಬ್ರಿಟಿಷರ ಪರವೋ, ವಿರುದ್ಧವೋ ಎಂಬುದು ಕುಞ್ಞಹಮದ್ ಹಾಜಿ ಸೂಕ್ಷ್ಮವಾಗಿ ವೀಕ್ಷಿಸುತ್ತಿದ್ದರು. ಬ್ರಿಟಿಷರಿಗೆ ನೆರವು ನೀಡಿದ ಹಿಂದೂಮುಸ್ಲಿಮರು ಅವರ ಶಿಕ್ಷೆಗ ಒಳಗಾಗಿದ್ದರು.
ವಾರಿಯಂ ಕುನ್ನತ್ ಬ್ರಿಟಿಷರ ನಿದ್ದೆಗೆಡಿಸುತ್ತಿದ್ದರು ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಬ್ರಿಟಿಷ್ ಸಿಬ್ಬಂದಿಯಾಗಿದ್ದ ಇವಾನ್ಸಿನ ಅವಲೋಕನ ಪ್ರಸಕ್ತವಾಗಿದೆ "ದಂಗೆಗಳಲ್ಲಿ ಅತ್ಯಂತ ಅಪಾಯಕಾರಿ ಹಾಗೂ ಸ್ವಾಧೀನ ಶಕ್ತಿಯಿರುವವರಾಗಿದೆ ಕುಞ್ಞಹಮದ್ ಹಾಜಿ"
ಭಾರತದ ಸ್ವಾತಂತ್ರ್ಯ ಹೋರಾದಲ್ಲಿ ಯಾವುದೇ ಪಾತ್ರ ವಹಿಸದ ಸಂಘಪರಿವಾರ, ತಮ್ಮ ಕೊಡುಗೆ ಶೂನ್ಯವಾಗಿರುವ ನಾಚಿಕೆಗೇಡನ್ನು ಮರೆಮಾಚಲು ಇನ್ನೊಬ್ಬರ ಕೊಡುಗೆಗಳನ್ನು ಅಳಿಸುವ ಪ್ರಯತ್ನಗಳನ್ನು ನಡೆಸುತ್ತಿರುವುದು ನಾವು ಕಾಣುತ್ತಲೇ ಇದೆ. ಆದ್ದರಿಂದ ಇವರ ಅಪಪ್ರಚಾರಗಳು ಫಲ ಕಾನುವುದಿಲ್ಲ ಎಂಬುದಕ್ಕೆ ಈ ಇತಿಹಾಸಗಳು ಸ್ಪಷ್ಟಸಾಕ್ಷ್ಯ.
ಒಂದು ಕಡೆ ತನ್ನನ್ನು ಜೈಲಿನಿಂದ ಬಿಡುಗಡೆಗೊಳಿಸಿದರೆ ನಾನು ನನ್ನ ಅನುಚರರು ನಿಮ್ಮ ವಿರುದ್ಧ ಹೋರಾಡುವುದಿಲ್ಲ ಎಂದು ಸಾವರ್ಕರ್
ಬ್ರಟೀಷರಿಗೆ ಕ್ಷಮೆ ಕೋರಿ ಪತ್ರ ಬರೆಯುವಾಗ ಇನ್ನೊಂದು ಕಡೆ ತನ್ನ ಅಂತ್ಯ ನಿಮಿಶದಲ್ಲಿ ಬ್ರಿಟಿಷರ ಬಂದೂಕಿನ ಮುಂದೆ ಹೆದೆಯೊಡ್ಡಿನಿಂತು ಈ ದೇಶದ ಜನತೆ ಅಧಿನಿವೇಶಿಗಳ ಮುಂದೆ ಮಂಡಿ ನಡುಗುವವರಲ್ಲ ಎಂಬ ಸಂದೇಶವನ್ನು ನೀಡಿ ದೇಶದ ಆದರ್ಶವನ್ನು ಕಾಪಾಡಿದ ವೀರ ಕ್ರಾಂತಿಕಾರಿ ವಾರಿಯಂ ಕುನ್ನತ್ತ್ ಕುಞ್ಞಹಮದ್ ಹಾಜಿ. ಇದರಲ್ಲಿ ಯಾವುದು ದೇಶಪ್ರೇಮ, ಯಾವುದು ದೇಶದ್ರೋಹ ?
ವಾರಿಯಂ ಕುನ್ನತ್ ಕುಞ್ಞಹಮದ್ ಹಾಜಿಯರ ನೆನಪುಗಳು ಎಂದಿಗೂ ಸಹ ಹಿಂತಿರುಗಿ ಬರಬಾರದೆಂದು ಬ್ರಿಟಿಷರು ಆಗ್ರಹಿಸಿದ್ದರು. ಆದರೆ ಶತಮಾನಗಳ ನಂತರವೂ ಯಾವುದೇ ಪ್ರವಾಹಕ್ಕೆ ಕೊಚ್ಚಿ ಹೋಗದೆ ವಾರಿಯಂ ಕುನ್ನತರ ಬ್ರಿಟಿಷ್ ವಿರುದ್ಧ ಹೋರಾಟ ಅಗ್ನಿಗೋಲವಾಗಿ ಜ್ವಾಲೆಯಬ್ಬಿಸುತ್ತಿದೆ ಎಂಬುದು ವಾಸ್ತವಿಕತೆ.
✒️ ಉನೈಸ್ ಹುಂಡಿ

Related Posts

Leave A Comment

1 Comments

Voting Poll

Get Newsletter