ಪ್ರವಾದಿ ವರ್ಚಸ್ಸು ಎಂದೂ ಕುಗ್ಗದು

ಪ್ರಸ್ತುತ ಜಗತ್ತನ್ನೇ ಕೆರಳಿಸಿದ, ಭಾರತದ ಕೆಲವು ರಾಜಕೀಯ ನಾಯಕರ ಪ್ರವಾದಿ (ಸ.ಅ) ಕುರಿತಿರುವ ಅವಹೇಳನವು ಮುಸ್ಲಿಂ ಲೋಕ ಜನತೆಗೆ ನೋವುಂಟುಮಾಡಿದೆ. ಇಂತಹ ಅವಹೇಳನಗಳಿಗೆ ಪ್ರವಾದಿ (ಸ.ಅ) ಅರ್ಹರೇ ಎಂಬ ಪ್ರಶ್ನೆ ಇಂದು ಎಲ್ಲರ ಮನಸ್ಸಿನಲ್ಲೂ ಮೂಡಿಬರುತ್ತಿದೆ. ಕ್ರಿ.ಶ ಆರನೇ ಶತಮಾನ (AD.571) ರಲ್ಲಿ ಅರೇಬಿಯಾದ ಮಕ್ಕ ಎಂಬ ಪ್ರದೇಶದಲ್ಲಾಗಿತ್ತು ಪೈಗಂಬರ್ ಮುಹಮ್ಮದ್ (ಸ.ಅ) ರವರ ಜನನ. ಇತಿಹಾಸ ತಜ್ಞರು ಕತ್ತಲೆ ಯುಗ ಎಂದೇ ಕರೆದಿದ್ದ ಆರನೇ ಶತಮಾನದಲ್ಲಿ ಜೀವಿಸಿ, ಹೆಣ್ಣು, ಹೆಂಡ ಮತ್ತು ಯುದ್ದಕ್ಕಾಗಿ ಮಾತ್ರ ಜೀವನ ನಡೆಸುತ್ತಿದ್ದ ಸಮೂಹವನ್ನು ಶ್ರೇಷ್ಠತೆಯ ಉತ್ತುಂಗಕ್ಕೇರಿಸಲು ಪ್ರವಾದಿಯವರು ಬಹಳ ಶ್ರಮ ವಹಿಸಿದ್ದಾರೆ. 

ಇಂಟರ್ನೆಟ್ ಜಗತ್ತಿನಲ್ಲಿ ವಾಸಿಸುತ್ತಿರುವ ನಾವು ಒಮ್ಮೆ ಜಗತ್ತಿನಲ್ಲಿ ಅತೀ ಶ್ರೇಷ್ಠ ವ್ಯಕ್ತಿ ಯಾರು ಎಂದು ಗೂಗಲ್ ಮಾಡಿ ನೋಡುವಾಗ, 1400 ವರ್ಷಗಳ ಹಿಂದೆ ಜೀವಿಸಿದ ಪ್ರವಾದಿಯವರ ಹೆಸರು ನಿಮಗೆ ಉತ್ತರವಾಗಿ ಲಭಿಸುತ್ತಿದೆ. ಕೇವಲ ಗೂಗಲಿನ ಉತ್ತರದಿಂದ ಇದು ಸಾಬೀತು ಪಡಿಸಲು ಸಾಧ್ಯವಲ್ಲವೆಂದು ಹಲವರು ವಾದಿಸಿದ್ದಾರೆ. ಅದು ಸಾಧ್ಯವಾಗದೇ ಹೋದರೇ ಇತಿಹಾಸದ ಪುಟಗಳನ್ನು ವಕ್ರೀಕರಿಸುವ ಮುನ್ನ ಅವುಗಳನ್ನು ಅಧ್ಯಯನ ನಡೆಸುವುದು ಸೂಕ್ತವಾಗಿರುತ್ತದೆ. 1978 ರಲ್ಲಿ ಮೈಕಲ್ ಎಚ್ ಹಾರ್ಟ್ ಎಂಬ ಕ್ರೈಸ್ತ ಬರಹಗಾರ ರಚಿಸಿದ ದ 100: ಎ ರಾಂಕಿಂಗ್ ಆಫ್ ದ ಮೋಸ್ಟ್ ಇನ್ಫುವೆನ್ಶಿಯಲ್ ಪರ್ಸನ್ ಇನ್ ಹಿಸ್ಟರಿ ಎಂಬ ಪುಸ್ತಕದಲ್ಲಿ ಅವರು ಗೌತಮ ಬುದ್ದ ಕನ್ಫೂ್ಶ್ಯಸ್ ಹಾಗೂ ಮೋಸಸ್ ಇವರೆಲ್ಲರಿಗಿಂತಲೂ ಮುಂಚಿತವಾಗಿ ಉಲ್ಲೇಖಿಸಿದ ನಾಮ ಪ್ರವಾದಿ ಮುಹಮ್ಮದ್ (ಸ.ಅ)ರವರದ್ದಾಗಿದೆ. ಈ ಪುಸ್ತಕ ರಚಿಸಿದ ಬಳಿಕ ಅವರು ಮಹಮ್ಮದ್ (ಸ.ಅ) ರವರನ್ನು ಕೋಮು ವಾದಿಯೆಂದು ಕರೆಯಲು ಅವರ ಇತಿಹಾಸ ಕಲಿಯಲು ಪ್ರಾರಂಭಿಸಿದೆ, ಆದರೆ ನಜ್ರಾನ್ ನ ಕ್ರೈಸ್ತ ಪುರೋಹಿತರಿಗೂ ತನ್ನ ಮದೀನ ಮಸೀದಿಯಲ್ಲಿ ತಂಗಲು ಸೌಕರ್ಯ ಒದಗಿಸಿ ಕೊಟ್ಟ ಮುಹಮ್ಮದ್ (ಸ.ಅ) ಎಂಬ ಮನುಷ್ಯ ಸ್ನೇಹಿಯನ್ನು ವರ್ಣಿಸಲು ಬಳಿಕ ನನಗೆ ಭಾಷಾ ಸಾಹಿತ್ಯ ಕಲಿಯ ಬೇಕಾಯಿತು ಎಂದರು. ಇದು ಒಂದು ಉದಾಹರಣೆ ಮಾತ್ರ ಇಂತಹ ಸಾವಿರಾರು ಪುಸ್ತಕಗಳು ಪೈಗಂಬರ್ ಮುಹಮ್ಮದ್ (ಸ.ಅ) ರವರ ಜೀವನ ಚರಿತ್ರೆ, ಸಾಮಾಜಿಕ ಸುಧಾರಣೆ ಇಂತಹ ಹಲವು ವಿಷಯಗಳನ್ನು ಆಧರಿಸಿ ರಚಿಸಲ್ಪಟ್ಟಿವೆ. 

ಭಾರತದ ಪಿಲೋಸಫಿ ಪ್ರೊಫೇಸರ್ ಕೆ.ಎಸ್. ರಾಮಕೃಷ್ಣ ರಾವ್ 1989 ರಲ್ಲಿ ಮುಹಮ್ಮದ್ ದ ಪ್ರೊಫೆಟ್ ಆಫ್ ಇಸ್ಲಾಂ ಎಂಬ ಪುಸ್ತಕದಲ್ಲಿ ಅವರ ವಾಕ್ಯಗಳನ್ನು ಗಮನಿಸಿರಿ, ಮುಹಮ್ಮದ್ (ಸ.ಅ) ರ ವ್ಯಕ್ತಿತ್ವದ ಕುರಿತು ಹೇಳುದಾದರೆ ಅದರ ಸಂಪೂರ್ಣ ಸತ್ಯವನ್ನು ಗ್ರಹಿಸಿಕೊಳ್ಳುವುದು ಅಸಾಧ್ಯ. ಅದರ ಒಂದು  ಸಣ್ಣ ತುಣುಕನ್ನು ಮಾತ್ರ ನನಗೆ ಅರಿಯಲು ಸಾಧ್ಯವಾಗಿದೆ. ಒಂದರ ಹಿಂದೆ ಒಂದು ಎಂಬಂತೆ ಬರುವ ಅವರ ಜೀವನದ ಮುಗ್ಗುಗಳು ಅಧ್ಬುತವಾಗಿದೆ. ಮುಹಮ್ಮದ್ (ಸ.ಅ)  ಎಂಬ ಪ್ರವಾದಿ ಮುಹಮ್ಮದ್ (ಸ.ಅ)  ಎಂಬ ಯೋಧ, ಮುಹಮ್ಮದ್ (ಸ.ಅ)  ಎಂಬ ವ್ಯಾಪಾರಿ, ಮುಹಮ್ಮದ್ (ಸ.ಅ)  ಎಂಬ ಆಡಳಿತಗಾರ , ಮುಹಮ್ಮದ್ (ಸ.ಅ) ವಾಗ್ಮಿ ಮುಹಮ್ಮದ್ (ಸ.ಅ)  ಎಂಬ ಸುಧಾರಕ. ಮುಹಮ್ಮದ್ (ಸ.ಅ)  ಎಂಬ ಅನಾಥರ ಅಭಯ ಕೇಂದ್ರ ಮುಹಮ್ಮದ್ (ಸ.ಅ)  ಎಂಬ ಗುಲಾಮರ ಸಂರಕ್ಷಕ ಮುಹಮ್ಮದ್ (ಸ.ಅ)  ಎಂಬ ಮಹಿಳಾ ವಿಮೋಚಕ , ಮುಹಮ್ಮದ್ (ಸ.ಅ)  ಎಂಬ ನ್ಯಾಯಾಧೀಶ, ಮುಹಮ್ಮದ್ (ಸ.ಅ)  ಎಂಬ ಭಕ್ತ. ಈ ಎಲ್ಲಾ ಪ್ರಮುಖ ಪಾತ್ರಗಳಲ್ಲಿಯೂ ಬದುಕಿನ ಎಲ್ಲಾ ರಂಗದಲ್ಲೂ ಅವರೊಬ್ಬ ಸರಿ ಸಾಟಿಯಲ್ಲದ ನಾಯಕರೇ ಆಗಿದ್ದರು.

ಒಂದು ಭಾವಚಿತ್ರವೂ ಇಲ್ಲದೇ ಕೋಟ್ಯಾಂತರ ಜನರ ಮನಸ್ಸಿನಲ್ಲಿ ಜನಪ್ರೀಯತೆ ಪಡೆದುಕೊಂಡ ಪ್ರವಾದಿಯವರು ನಿಂದನೆ ಹಾಗೂ ವಿಮರ್ಶನೆಗಳಿಗೆ ಅರ್ಹನಲ್ಲ ಎಂಬುವುದಾಗಿದೆ ಸರಿ. ಪ್ರವಾದಿ ನಿಂದನೆಗಳು ಇಂದೂ ನಿನ್ನೆ ಪ್ರಾರಂಭವಾದಲ್ಲ. 63 ವರ್ಷದ ಮುಹಮ್ಮದ್ ರವರ ಜೀವನದಲ್ಲಿ ಹಲವು ಬಾರಿ ಅವರು ಅಕ್ರಮಗಳಿಗೆ ಹಾಗೂ ನಿಂದನೆಗಳಿಗೆ ಒಳಗಾಗಿದ್ದಾರೆ. ಎಫ್. ಡಬ್ಲು.ಬರ್ಲಿ ರವರ ಇಟ್ಸ್ ಅಬೌಟ್ ಮುಹಮ್ಮದ್, ಎ ಬಯೋಗ್ರಾಫಿ ಆಫ್ ದ ವರ್ಲ್ಡ್ ಸ್ ಮೋಸ್ಟ್ ನೊಟೋರಿಯಸ್ ಪ್ರೊಫೆಟ್  ಎಂಬ ಪುಸ್ತಕಗಳು ಇದರ ಸರಳ ಉದಾಹರಣೆಗಳಾಗಿವೆ. ಇಂದು ಸಮಾಜದಲ್ಲಿ ಭುಗಿಲೆದ್ದಿರುವ ಪ್ರವಾದಿ ನಿಂದನೆಗಳನ್ನು ಖಂಡಿಸಿ ಹಲವು ಪ್ರತಿಭನಟನೆಗಳು ನಡಯುತ್ತಿವೆ. ನಾನು ಈ ಲೇಖನದ ಮೂಲಕ ಪ್ರವಾದಿಯರ ಮೇಲೆ ನಡೆಯುತ್ತಿರುವ ವಿಮರ್ಶನೆಗಳ ನೈಜ ಮುಖ ತೋರಿಸಲು ಉದ್ದೇಶಿಸುತ್ತೇನೆ.

ಮುಹಮ್ಮದ್ (ಸ.ಅ) ಓರ್ವ ಕಾಮಪ್ರೇಮಿಯೇ?

ಕೆಲ ಇಸ್ಲಾಂ ವಿಮರ್ಶಕರೂ ಪ್ರವಾದಿಯವರನ್ನು ಭೋಗಪ್ರೇಮಿ ಹಾಗೂ ಸ್ತ್ರೀ ವಿರೋಧಿ ಎಂದು ಚಿತ್ರೀಕರಿಸುವುದನ್ನು ಗಮನಿಸುವಾಗ ಅವರ ಜೀವನ ಚರಿತ್ರೆ ಕಲಿತ ಯಾರಿಗೂ ಇದೊಂದು ದೊಡ್ಡ ಮೂರ್ಖತನವಾಗಿ ಅನುಭವವಾಗಬಹುದು. ಈ ಜಗತ್ತಿನಲ್ಲಿ ಇಷ್ಟೊಂದು ವ್ಯಕ್ತವಾಗಿ ಸಂಗ್ರಹಿಸಲ್ಪಟ್ಟ ಜೀವನ ಯಾರದ್ದು ಇಲ್ಲ ಎಂಬುವುದು ಸತ್ಯಾಂಶವಾಗಿದೆ. ಆರನೇ ಶತಮಾನದಲ್ಲಿ ಅರೇಬಿಯಾದ ಮೂಲೆ ಮೂಲೆಗಳಲ್ಲೂ ಲೈಂಗಿಕ ಅರಾಜಕತೆ ವ್ಯಾಪಕವಾಗಿತ್ತು. ಯಾವುದೇ ನೈತಿಕ ನಿಯಮಗಳು ಜಾರಿಯಲ್ಲಿ ಇರಲಿಲ್ಲ. ವಿಶುದ್ದ ಆರಧನಾಲಯವಾದ ಕಅ್ಬದ ಪರಿಸರವನ್ನು ಸಹಾ ಲೈಂಗಿಕ ಕೃತ್ಯಗಳಿಗಾಗಿ ಉಪಯೋಗಿಸಿರುವ ಉದಾಹರಣೆಗಳಿವೆ. ಬಾಲ್ಯ ವಿವಾಹಗಳಿಗೆ ನಿಷೇಧವಿರಲಿಲ್ಲ. ವಿವಾಹ ಎಂಬುವುದು ಯಾವುದೇ ನಿಯಂತ್ರಣಗಳಿಲ್ಲದೆ ಸಾಗುತ್ತಿದ್ದ ಲೈಂಗಿಕ ಕ್ರಿಯೆಗಳನ್ನು ಮರೆಮಾಚಲು ಉಪಯೋಗಿಸುತ್ತಿದ್ದ ತಡೆಗೋಡೆಯಾಗಿತ್ತು. ವೇಶ್ಯಾವಾಟಿಕೆಯಲ್ಲಿ ತೊಡಗಿದವರು ಅಗತ್ಯವಿರುವವರನ್ನು ಬಹಿರಂಗವಾಗಿ ಆಮಂತ್ರಿಸಿತ್ತಿದ್ದರು ಹಾಗೂ ತಮ್ಮ ವೃತ್ತಿ ವೇಶ್ಯವಾಟಿಕೆಯಾಗಿದೆ ಎಂದು ತಿಳಿಸಲು ಬೇಕಾಗಿ ಮನೆಗಳ ಮುಂದೆ ದ್ವಜಗಳನ್ನು ಜಾಹಿರಾತುಗಳಾಗಿ ಸ್ಥಾಪಿಸುತ್ತಿದ್ದರು. 

ಇಷ್ಟು ಲೈಂಗಿಕ ಸ್ವಾತಂತ್ರ್ಯ ಜಾರಿಯಲ್ಲಿದ್ದ ಸಮೂಹದಲ್ಲಿ ಮುಹಮ್ಮದ್ (ಸ.ಅ) ರವರು ತನ್ನ ವಿಮರ್ಶಕರಿಗೆ ಯಾವುದೇ ರೀತಿಯಲ್ಲಿ ವಿಮರ್ಶಿಸಲು ಸಾಧ್ಯವಾಗದಂತಹ ಜೀವನ ಸಾಗಿಸಿದರು.

ಮುಹಮ್ಮದ್ (ಸ.ಅ) ಅತೀ ಸುಂದರನೂ ಸುಶೀಲನೂ ಆಗಿದ್ದರು ಎಂಬುವುದು ಅವರ ಅನುಚರರ ಮಾತುಗಳಿಂದ ವ್ಯಕ್ತವಾಗಿದೆ. ಹಾಗೂ ಅವರ ಚೆಲುವಿನ ಬಗ್ಗೆ ಹದೀಸ್ (ಪ್ರವಾದಿ ವಚನ) ದಲ್ಲಿ ಒಂದು ಭಾಗ ಇದೆ. ಅವರ ಸದ್ಗುಣತೆ ಹಾಗೂ ಕುಟುಂಬ ಮಹಿಮೆಯಿಂದ ಅಂದಿನ ಅರೇಬಿಯಾದಲ್ಲಿ ಅವರು ಎಲ್ಲರ ಮನಗೆದ್ದಿದ್ದರು.

ಇಷ್ಟರ ಮೇರೆಗೂ ಮುಹಮ್ಮದ್ (ಸ.ಅ) ರವರು ಪ್ರಥಮ ಪತ್ನಿಯಾದ  ಖದೀಜಾ ರವರನ್ನು ವರಿಸುವಾಗ ಅವರ ವಯಸ್ಸು 25 ದಾಟಿತ್ತು. ಇದಕ್ಕೆ ಮುಂಚಿತವಾಗಿ ಅವರು ಯಾವುದೇ ಅನೈತಿಕ ಲೈಂಗಿಕ ಕ್ರಿಯೆಗಳಲ್ಲಿ ಪಾಳ್ಗೊಂಡದ್ದಾಗಿಯೋ, ಲೈಂಗಿಕ ಕ್ರಿಯೆಗಳಿಗೆ ಪ್ರೋತ್ಸಾಹ ನೀಡಿದ್ದಾಗಿಯೋ ಯಾವುದೇ ಪುರಾವೆಗಳಿಲ್ಲ. ಕಿಂಚಿತ್ತೂ ನಿಯಂತ್ರಣಗಳಿಲ್ಲದ ಮಕ್ಕ ನಗರದಲ್ಲಿ ಅವರಿಗೆ ವಿಶುದ್ದ ಜೀವನ ಸಾಗಿಸಲು ಸಾಧ್ಯವಾಯಿತು.

ಸಮ ವಯಸ್ಕಳನ್ನು ಅಥವಾ ತನಗಿಂತ ಚಿಕ್ಕವಳೋ ಆದ ಸುಂದರಿಯನ್ನು ವರಿಸಲು ಸಾಧ್ಯವಿದ್ದರೂ ತನಗಿಂತ ಹದಿನೈದು ವರ್ಷ ದೊಡ್ಡವಳೂ ವಿಧವೆಯೂ ನಾಲ್ಕು ಮಕ್ಕಳ ತಾಯಿಯೂ ಆದ ಖದೀಜಾ ಬೀವಿಯರನ್ನು ಪ್ರವಾದಿಯವರು ವರಿಸಿದರು. ಈ ವಿವಾಹ ಲೈಂಗಿಕ ಅಗತ್ಯಕ್ಕೆ ಸೀಮಿತವಾಗಿರಲಲ್ಲ. ಪ್ರಭೋಧನೆ ಪ್ರಾರಂಭಿಸಿದ ಬಳಿಕ ಹಲವು ಸಂಧರ್ಭಗಳಲ್ಲಿ ಖದೀಜಾ (ರ) ಪ್ರವಾದಿಯರಿಗೆ ಆಸರೆಯಾಗಿದ್ದಾರೆ. ಅರೇಬಿಯಾದ ಒಂದು ಪ್ರಸಿದ್ದ ವ್ಯಾಪಾರಿಯೂ ಆದ ಖದೀಜಾಳ ಆಸರೆ ಮುಹಮ್ಮದ್ (ಸ.ಅ) ರವರಿಗೆ ಅಗತ್ಯವಾಗಿತ್ತು.

ಜಗತ್ತಿನ ನಾನಾ ಭಾಗದಲ್ಲಿ ಜಾರಿಯಲ್ಲಿದ್ದಂತೆ ಅರೇಬಿಯಾದಲ್ಲೂ ಅಂದು ಬಹು ಪತ್ನಿತ್ವ ವ್ಯಾಪಕವಾಗಿತ್ತು. ಅದು ಮಾನ್ಯತೆಯ ಹಾಗೂ ಮಹತ್ವದ ಗುರುತಾಗಿತ್ತು ಅಂದಿನ ಕಾಲದಲ್ಲಿ ಅರೇಬಿಯಾದ ಪ್ರಮಾಣಿಗಳು ಕುಟುಂಬ ಮಹಿಮೆ ಹೇಳಿ ಅಹಂಕರಿಸುವವರಾಗಿದ್ದರು. ಅಂದು ಏಕ ಪತ್ನಿಯಿದ್ದರೆ ಅದೊಂದು ಅಪವಾದವಾಗಿತ್ತು ಆದರೂ ಪ್ರಥಮ ಪತ್ನಿ ಮರಣಹೊಂದುವರೆಗೂ ಪ್ರವಾದಿ (ಸ.ಅ)  ಯಾರನ್ನು ವರಿಸಿರಲಿಲ್ಲ. ಅವರಿಗೆ 50 ವಯಸ್ಸು ದಾಟುವವರೆಗೂ ಅವರು ಏಕ ಪತ್ನಿಯ ಜೊತೆಗೆ ಜೀವನ ಸಾಗಿಸಿದರು. ಮುಹಮ್ಮದ್ (ಸ.ಅ) ಓರ್ವ ಕಾಮಪ್ರೇಮಿಯಾಗಿದ್ದರೇ ಅವರ ಯೌವನದಲ್ಲಿ ಅವರು ಖದೀಜಾ (ರ) ರವರನ್ನು ಉಪೇಕ್ಷಿಸಿ ತರುಣಿಯರನ್ನು ವರಿಸಲು ಅವರಿಗೆ ಸಾಧ್ಯವಾಗುತ್ತಿತ್ತು. ಇದು  ಮಾತ್ರವಲ್ಲದೇ ಖದೀಜಾ (ರ) ರವರ ಮರಣದ ಬಳಿಕ ಎರಡನೇಯದ್ದಾಗಿ ಅವರು ವಿವಹವಾಗಿದ್ದು ತನಗಿಂತ ಪ್ರಾಯವಿರುವ ಸೌದಾ ಎಂಬ ವಿಧವೆಯಾದ ಮಹಿಳೆಯನ್ನಾಗಿದೆ.

ಹಿಜ್ರಾ (ಮಕ್ಕಾದಿಂದ ಮದೀನಕ್ಕೆ ಪ್ರವಾದಿ ನಡೆಸಿದ ಪಾಲಾಯನ) ದ ಬಳಿಕ ಪ್ರವಾದಿಯವರು ಮದೀನಾದ ಆಡಳಿತಗಾರನಾದರು. ಈ ಸಂಧರ್ಭದಲ್ಲಿ ತನ್ನ ಆಡಳಿತ ಪ್ರದೇಶದಲ್ಲಿರುವ ಯಾವ ತರುಣಿಯನ್ನು ವರಿಸಲು ಲೈಂಗಿಕವಾಗಿ ಉಪಯೋಗಿಸಲು ಅವರಿಗೆ ಸಾಧ್ಯವಾಗಿತ್ತು. ಆದರೆ ಅವರು ಇಂತಹ ನೀಚ ಕೃತ್ಯಗಳಿಗೆ ಹೋಗಿರಲಿಲ್ಲ. ಇದಕ್ಕೆ ಬದಲಾಗಿ ತಾನು ಆಡಳಿತಗಾರನಾದ ಬಳಿಕ ಅವರು ಯಾವೊಂದು ಕನ್ಯಕ್ಕೆಯನ್ನು ವರಿಸಲಿಲ್ಲ. ಅವರು ವಿವಾಹಗೈದ ಆಯಿಶ ಬೀವಿ ಎಂಬ ಸ್ತ್ರೀಯಲ್ಲದೇ ಬೇರೆ ಎಲ್ಲರೂ ವಿಧವೆಗಳಾಗಿದ್ದರು. ಅದಲ್ಲದೇ ತನ್ನ ಪತ್ನಿಯರಿಗೆ ಪ್ರವಾದಿಯವರು ಖುಲ್ಅ್ (ಪತಿಯಿಂದ ಬೇರ್ಪಡಲು ಇಸ್ಲಾಮಿನ ರೀತಿ)ನಡೆಸಲು ಅವಕಾಶ ನೀಡಿದ್ದರು . ಪ್ರವಾದಿಯರ ಯಾವೂಂದು ಪತ್ನಿಯೂ ಪ್ರವಾದಿಯರ ಜೊತೆ ನಾನು ಸಂಕಷ್ಟಗಳನ್ನು ಸಹಿಸಿದ್ದೇನೆಂದು ಉಲ್ಲೇಖಿಸಿಲಿಲ್ಲ.

ಅಯಿಶಾ ಜೊತೆ ನಡೆದದ್ದು ಬಾಲ್ಯ ವಿವಾಹವೇ

ಪ್ರೂಫೆಸರ್ ಕೆ.ಎಸ್ ರಾಮಕೃಷ್ಣ ರಾವ್ ರವರು ಮುಹಮ್ಮದ್(ಸ.ಅ) ಎಂಬ ಮಹಿಳಾ ವಿಮೇೂಚಕ ಎಂಬ ಪ್ರವಾದಿಯರ ಶ್ರೇಷ್ಟತೆಯನ್ನು ಬಹು ಪತ್ನಿತ್ವ ಆಯಿಶಾಳ ಜೊತೆಗಿರುವ ವಿವಾಹನವನ್ನು ಮುಂದಿಟ್ಟು ತಿರುಚಲು ಹಲವು ನಾಸ್ತಿಕರು ಹಾಗೂ ಇಸ್ಲಾಂ ವಿಮರ್ಶಕರು ಹಗಲಿರುಳು ಯತ್ನಿಸುತ್ತಿದ್ದಾರೆ.

ಒಂದು ಹೆಣ್ಣು ಮಗು ಜನಿಸಿದರೆ, ಅದನ್ನು ಅಪಶಕುನವಾಗಿ ಕಂಡು ಜೀವಂತವಾಗಿ ಮಣ್ಣು ಮಾಡುತ್ತಿದ್ದ, ಒಂದು ಸಮೂಹದಲ್ಲಿ ಹೆಣ್ಣಿಗೆ ಉನ್ನತ ಸ್ಥಾನ ಪಡೆದುಕೊಟ್ಟವರಾಗಿದ್ದಾರೆ ಪ್ರವಾದಿಯವರು ಇಂತಹ ವ್ಯಕ್ತಿಯನ್ನು ಸ್ತ್ರೀ ವಿರೋಧಿ ಎನ್ನುವುದು ಎಷ್ಟು ಸರಿ ಎಂದು ಚಿಂತಿಸಬೇಕಾಗಿದೆ.

ಆಯಿಶಾ ಬೀವಿಯವರನ್ನು ಪ್ರವಾದಿಯರು ಒಂಬತ್ತನೇ ವಯಸ್ಸಿನಲ್ಲಿ ವರಿಸಿದ್ದು ನಿಜವಾದ ಸಂಗತಿ. ಆದರೇ ವಿವಾಹದ ಮೂಲಕ ಪ್ರವಾದಿಯವರು ಪ್ರಸ್ತುತ ಸಮಾಜಕ್ಕೆ ಮಾದರಿಯಾದರು. ಕಾರಣ ಆ ಪ್ರಾಯದಲ್ಲಿ ವಿವಾಹವಾದರೆ ಸಂಭವಿಸಬಹುದು ಎಂದು ಆಧುನಿಕ ಯುಗ ಚಿಂತಿಸುವ ಯಾವೊಂದು ವಿಚಾರವೂ ಅವರ ನಡುವೆ ನಡೆಯಲಿಲ್ಲ. ಅದಲ್ಲದೇ ಈ ವಿವಾಹದೊಂದಿಗೆ ಬಾಲೆಯಾದ ಆಯಿಶಾ ಬೀವಿಯವರು ಸಂತೃಪ್ತರಾಗಿದ್ದರು. ಪ್ರವಾದಿಯವರ ಸಂದೇಶವನ್ನು ಜಗತ್ತಿಗೆ ತಲುಪಿಸುವ ವಿಷಯದಲ್ಲಿ ಅವರು ಮುಂಚೂಣಿಯಲ್ಲಿದ್ದರು.

2000 ಕ್ಕಿಂತಲೂ ಅಧಿಕ ಹದೀಸ್ (ಪ್ರವಾದಿ ವಚನ)ಗಳನ್ನು ಅವರು ವರದಿ ಮಾಡಿದರು. ಇಸ್ಲಾಂನ ಆರು ಬೃಹತ್ ಹದೀಸ್ ಗ್ರಂಥಗಳ 25 ಶೇಕಡ ಆಯಿಶಾರವರ ಕೊಡುಗೆಯಾಗಿದೆ. ಹಾಗೂ ಈ ವಿಷಯಗಳನ್ನು ಮತ್ತು ಸಾರಾಂಶಗಳನ್ನು ಆದರಿಸಿ ಆಯಿಶಾರವರು ಸ್ವಹಾಬಿ (ಪ್ರವಾದಿಯ ಅನುಚರರು)ಗಳೊಂದಿಗೆ ವಾದಗಳು ನಡೆಸಿದರು. ಇಸ್ಲಾಂನ ಶರೀಅತ್ ನಿಯಮಗಳನ್ನು ಜನರಿಗೆ ತಲುಪಿಸುವ ವಿಷಯದಲ್ಲಿ ಆಯಿಶಾರವರು ಪ್ರಮುಖ ಪಾತ್ರ ವಹಿಸಿದ್ದಾರೆ. 19 ನೇ ಶತಮಾನದ ವರೆಗೂ ಈ ವಿವಾಹದ ವಯಸ್ಸಿನ ವಿಚಾರದಲ್ಲಿ ಪ್ರವಾದಿಯವರನ್ನು ಯಾರೂ ಖಂಡಿಸಿರಲಿಲ್ಲ. ಅಂದು ಬಾಲ್ಯ ವಿವಾಹ ಅಷ್ಟೇ ವ್ಯಾಪಕವಾಗಿತ್ತು. ನಾವು ನಮ್ಮ ಅಜ್ಜಿ ಅಥವಾ ಮುತ್ತಜ್ಜಿಯ ವಿವಾಹದ ಪ್ರಾಯದಲ್ಲಿ  ಪರಿಶೀಲಿಸಿದರೆ ನಮಗದು ವ್ಯಕ್ತವಾಗುತ್ತದೆ. ಪ್ರವಾದಿಯವರು ಜೀವಂತವಾಗಿದ್ದ ಕಾಲದಲ್ಲಿದ್ದ ವಿಮರ್ಶಕರೂ ಅದರ ಬಳಿಕ ಬಂದ ಓರಿಯಂಟಲಿಸ್ಟ್ (orientalist) ವಿವಾಹದ ಪ್ರಾಯ ಯಾವುದೇ ಕೊರತೆಯನ್ನು ಕಂಡಿಲ್ಲ.

ವಿವಾಹ ವೆಂಬುವುದು ಸಮಾಜದ ಸಮತೋಲನವಾಗಿದೆ. ಅದರ ವಯಸ್ಸು ಮಿತಿ ತೀರ್ಮಾನಿಸುವುದು ಆ ಕಾಲದ ಸಂಸ್ಕೃತಿಗಳಾಗಿರುತ್ತದೆ. 18+ ಎಂಬುವುದು ನಾವು ತೀರ್ಮಾನಿಸಿದ ಪ್ರಾಯ. ಪ್ರವಾದಿಯವರ ಕಾಲದಲ್ಲಿ ಅದು 9 ಆಗಿತ್ತು ಅದಲ್ಲದೇ ಸಾರ್ವತ್ರಿಕವಾಗಿ ವಯಸ್ಸು ನಿರ್ಣಯಿಸುವುದು ಅಸಾಧ್ಯ. ಭಾರತದ ವಿವಾಹ ಪ್ರಾಯದ ವಿಷಯವನ್ನೇ ಉದಾಹರಣೆಯಾಗಿ ಮುಂದಿಡೋಣ. 1949 ರ ವರೆಗೆ 15 ವರ್ಷವಾಗಿತ್ತು ಪ್ರಾಯದ ಮಿತಿ ಬಳಿಕ 1978 ರಲ್ಲಿ ಅದನ್ನು 18+ ಆಗಿ ಬದಲಾಯಿಸಿದರು. ಇತ್ತೀಚಿನ ದಿನಗಳಲ್ಲಿ ವಿವಾಹ ಪ್ರಾಯ 21 ಕ್ಕೆ ಏರಿಕೆ ಮಾಡಲಾಗುವುದು ಎಂಬ ಹೇಳಿಕೆಗಳು ಬಂದಿದ್ದು ಕಾಲಕ್ಕೆ ತಕ್ಕಂತೆ ಮನುಷ್ಯನ ಸಂಸ್ಕೃತಿಗಳು ಬದಲಾಗುತ್ತದೆ. ಅದಲ್ಲದೇ ಇಂತಹ ವಿಷಯಗಳನ್ನೂ ಮುಂದಿಟ್ಟು ಪ್ರವಾದಿ ಮುಹಮ್ಮದ್ ರವರನ್ನು ಕಾಮ ಪ್ರೇಮಿ ಸ್ತ್ರೀ ವಿರೋಧಿ ಎಂದೆಲ್ಲಾ ವಿರೋಧಿಸುವುದು ಇದು ಸಮೂಹದಲ್ಲಿ ಕೋಮು ಗಲಭೆಗಳಿಗೆ ಕಾರಣವಾಗುತ್ತದೆ. ಪ್ರವಾದಿಯವರ ಬದುಕನ್ನು ಪರಿಶೀಲಿಸಿದರೆ ಮಾತ್ರ ಅವರ ಶ್ರೇಷ್ಠತೆಯನ್ನು ಅರ್ಥೈಸಿಕೊಳ್ಳಲು ಸಾಧ್ಯ. ಇದಕ್ಕಾಗಿ ಪ್ರವಾದಿಯವರ ಜೀವನನ್ನೂ ಆದಾರಿಸಿ ಬೊಳುವಾರು ಮುಹಮ್ಮದ್ ಕುಂಞಿಯವರು ರಚಿಸಿದ "ಓದಿರಿ" ಹಾಗೂ ಮುಹಮ್ಮದ್ ಇಸ್ ಲೈಫ್ ಬೇಸ್ಡ್ ಆನ್ ದ ಅರ್ಲಿಯೆಸ್ಟ್ ಸೋರ್ಸ್ ಎಂಬ ಮಾರ್ಟಿನ್ ಲಿಂಗ್ಸ್ ರವರ ಪುಸ್ತಕ ಅಧ್ಯಯನ ನಡೆಸುವುದು ಉತ್ತಮ.

ಬರಹ:ಇಮ್ತಿಯಾಝ್ ಕಡಬ

Related Posts

Leave A Comment

Voting Poll

Get Newsletter