ಸಹನೆಯ ಪ್ರತೀಕ: ಖಲೀಲುಲ್ಲಾಹೀ ಇಬ್ರಾಹಿಂ(ಅ)‎  ಅಧ್ಯಾಯ : 03‎,04‎

   

   ಅಧ್ಯಾಯ : 03  (ಇಬ್ರಾಹಿಂ ನನ್ನು ನಾಶ ಮಾಡುವುದೊಂದೇ ಮಾರ್ಗ)

 

ಇಬ್ರಾಹಿಂ ತನ್ನ ಉಜ್ವಲ ವಿಶ್ವಾಸದಿಂದ ಮಗ್ನರಾಗಿರುವುದನ್ನು ಕಂಡ ಜನರು ನಿಬ್ಬೆರಗಾದರು. ಅವರು ಪರಸ್ಪರ ಪ್ರಶ್ನಾ ‎ಚಿಂತೆಯಲ್ಲಿ ಮುಳುಗಿದರು. ಅವರ ವಿಗ್ರಹಗಳನ್ನು ಮುರಿದು ಹಾಕಿದ ಕಾರಣ. ಆ ಸಮೂಹದವರೆಲ್ಲ ಒಟ್ಟುಗೂಡಿ ಇಬ್ರಾಹಿಂನನ್ನು ‎ಕಟ್ಟಿ ಹಾಕಿ ನಮ್ರೂದನ ಬಳಿ ಕರೆ ತಂದರು. ನಮ್ರೂದನು ಕೂಡ ಇಬ್ರಾಹಿಂ ನನ್ನು ಏನು ಮಾಡಬೇಕು ಎಂದು ‎ಚಿಂತಾಮಗ್ನನಾದನು ಬಳಿಕ ನಮ್ರೂದ್  ಒಂದು ತೀರ್ಮಾನಕ್ಕೆ ಬಂದ, ನಮ್ರೂದ್ ಹೇಳಿದ ''ನಮ್ಮ ಆರಾಧನೆಗೆ ತಡೆಯಾಗಿ ‎ನಿಂತ ಇಬ್ರಾಹಿಂ ನನ್ನು ನಾಶ ಮಾಡುವುದೊಂದೇ ಮಾರ್ಗವಾಗಿದೆ".‎

ನಮ್ರೂದನು ಸೈನಿಕರೊಡನೆ ಆಜ್ಞಾಪಿಸಿದ "ಈ ಸುತ್ತಮುತ್ತಲಿನ ಎಲ್ಲಾ ಮರದ ತುಂಡುಗಳನ್ನು ಒಟ್ಟುಗೂಡಿಸಿ ಲೋಕದಲ್ಲಿ ‎ಇದುವರೆಗೂ ಇನ್ನೂ ಮುಂದೆಯೂ ಯಾರು ಕಾಣದಂತಹ ಬೆಂಕಿ ಕೆಂಡ ಮಾಡಿ ಅದರಲ್ಲಿ ಇಬ್ರಾಹಿಂನ್ನು ಹಾಕಿ ಶಿಕ್ಷಿಸಿ" ಸೈನಿಕರಲ್ಲ ‎ತಮ್ಮ ಕೆಲಸದಲ್ಲಿ ನಿರತರಾದರು. ಸುತ್ತಮುತ್ತಲಿನ ಮಾತ್ರವಲ್ಲದೆ ಇನ್ನಿತರ ರಾಜ್ಯಗಳಿಂದಲೂ ಮರದ ತುಂಡುಗಳನ್ನು ತಂದು ‎ಹಾಕಿ ಅದಕ್ಕೆ ಬೆಂಕಿ ಹಚ್ಚಿದರು. ಆ ಬೆಂಕಿಯ ಶಾಖದಿಂದ ಬಾನೆತ್ತರದಲ್ಲಿ ಹಾರಾಡುತ್ತಿದ್ದ ಹಕ್ಕಿಯೂ ದಹನವಾಗಿ ‎ಬೂದಿಯಾಗುತ್ತಿತ್ತು. ಅದು ಇದುವರೆಗೂ ಭೂಮಿಯಲ್ಲಿ ಯಾರೂ ಕಾಣದಂತಹ ಬೆಂಕಿ ಕೆಂಡವಾಗಿತ್ತು ಒಬ್ಬನನ್ನು ಶಿಕ್ಷಿಸಲು ‎ತಯಾರಿಸಿದ ಬೆಂಕಿ ಕುಂಡವನ್ನು ನೋಡಲು ದಶಲಕ್ಷ ಜನರು ಒಟ್ಟುಗೂಡಿದರು ಹತ್ತಿರ ಹೋಗಲು ಭಯವಾಗುತ್ತಿತ್ತು. ಇಬ್ರಾಹಿಂ ‎ನನ್ನು ಮಿಂಜನಿಕಲ್ಲಿ ಇಟ್ಟು ಬೆಂಕಿಗೆ ಎಸೆದರು. ಬೆಂಕಿಯನ್ನು ಸೃಷ್ಟಿಸಿದವನಿಗೇನು ಬೆಂಕಿಯನ್ನು ತನ್ನಗಿಸಲು ಕಷ್ಟವೇ?. ಅಲ್ಲಾಹನು ‎ಬೆಂಕಿಯ ಬಳಿ ಹೇಳಿದನು. " ಓ ಬೆಂಕಿಯೆ ನೀನು ಇಬ್ರಾಹಿಂ (ಅ.ಸ) ನನ್ನು ಸಂರಕ್ಷಿಸು ಅವರ ಶರೀರವನ್ನು ಸಂರಕ್ಷಿಸು.‎

ಇಬ್ರಾಹಿಂ ಬೂದಿ ಆಗುವುದನ್ನು ನೋಡಲು ಬಂದ ದಶಲಕ್ಷ ಜನರು ಇಬ್ರಾಹೀಂ ನೆಬಿ ಬೆಂಕಿಯಿಂದ ನಡೆದು ಬರುವುದನ್ನು ಕಂಡು ‎ನಿಬ್ಬೆರಗಾದರು. ಅವರೆಡೆಯಲ್ಲಿ ಮತ್ತೇ ಮಾತು ಕಥೆ ಪ್ರಾರಂಭಿಸಿತು. ಲಕ್ಷಾಂತಾರ ಜನರಿಗೆ ಇಬ್ರಾಹಿಂ ನ ದೈವನು ಏಕ ‎ದೈವನಾಗಿದ್ದಾನೆ ಎಂದು ಮನವರಿತು ಇಸ್ಲಾಮ್ ಎಂಬ ಪವಿತ್ರ ದೀನಿಗೆ ಅತಿಥಿಗಳಾಗಿ ಬಂದರು. ಆದರೂ ಬಾಕಿ ಇರುವ ಜನರಿಗೆ ‎ಇನ್ನೂ ಮನವರಿಕೆಯಾಗಿಲ್ಲ ಅವರು ಇಬ್ರಾಹಿಂ ನನ್ನು ಹೇಗೆ ಸೋಲಿಸಬೇಕೆಂದು ಚರ್ಚಿಸಲಾರಂಭಿಸಿದರು. ಅವರು ಮತ್ತೆ  ಮತ್ತೆ ‎ಕುತಂತ್ರ ಮಾಡಲು ತೊಡಗಿದರು.‎

 

 

              ಅಧ್ಯಾಯ : 04  (ಆ ಶಾಶ್ವತನಾದ ಏಕದೈವನು ಯಾರಾಗಿದ್ದಾನೆ)

 

ಒಂದು ದಿನ ಮುಂಜಾನೆ ಇಬ್ರಾಹಿಂ ಸ್ವತಃ  "ವಿಗ್ರಹಗಳು ದೇವರಲ್ಲ ಎಂದು ನನಗೆ ಖಚಿತವಾಗಿದೆ ಆದರೆ ಆ ಶಾಶ್ವತನಾದ ಏಕದೈವನು ಯಾರಾಗಿದ್ದಾನೆ" ಇದನ್ನು ಅರಿಯಲು ಇಬ್ರಾಹಿಂ ತನ್ನ ಎಲ್ಲಾವನ್ನು ತ್ಯಜಿಸಿ ಮನೆಯಿಂದ ಹೊರಟರು. ನಡೆದು ನಡೆದು ಅತಿ ಕೊನೆಯಲ್ಲಿ ಒಂದು ಬೆಟ್ಟದ ತುದಿಯಲ್ಲಿ ವಿಶ್ರಮಕ್ಕೆ ಬೇಕಾಗಿ ಗುಹೆಯವರೆಗೆ ಇದ್ದ ಕಲ್ಲಲ್ಲಿ ಮಲಗಿದರು. ರಾತ್ರಿ ಆದಾಗ ಪಕ್ಷಿಗಳ ಚಿಲಿಪಿಲಿಕೆಯಲ್ಲಿ ಎಚ್ಚರಿತನಾದ ಇಬ್ರಾಹಿಂ ಅತಿ ಸುಂದರದಿಂದ ಮಿನುಗುವ ಒಂದು ತಾರೆಯನ್ನು ನೋಡಿ ಇದಾಗಿರಬಹುದೋ ನನ್ನ ದೈವ ಎಂದು ಆಲೋಚಿಸಿದರನು. ಸ್ವಲ್ಪ ಹೊತ್ತಿನಲ್ಲಿ ಅದು ಮಾಯವಾದಾಗ ಇದು ನನ್ನ ದೇವನಲ್ಲ ನನ್ನ ದೇವನು ಶಾಶ್ವತನಾಗಿದ್ದಾನೆ ಎಂದು ಮನವರಿತು ಕಾದು ಕುಳಿತರು. ಇಬ್ರಾಹಿಂ ಭೂಮಿಯನ್ನೇ ಮಿನುಗಿಸುವ ಚಂದ್ರನನ್ನು ನೋಡಿ  ಇದಾಗಿರಬಹುದೋ ನನ್ನ ದೈವ ಎಂದು ಆಲೋಚಿಸಿದರು.

ಸ್ವಲ್ಪ ಹೊತ್ತಿನಲ್ಲಿ ಅದು ಕೂಡ ಮಾಯವಾದಾಗ ಇಬ್ರಾಹಿಂ ಇದು ನನ್ನ ದೈವ ನಲ್ಲ ಎಂದು ಮನವರಿತ  ಅವನು ಬೇಸರದಿಂದ ಬೆಳಕು ಕಾಣುವವರೆಗೆ ಕಾದು ಕುಳಿತು. ಮುಂಜಾನೆ ಸೂರ್ಯನ ಕಿರಣ ಭೂಮಿಗೆ ಬಿದ್ದಾಗ, ಸೂರ್ಯಕಿರಣ ಚಂದ್ರನಿಗೆ ಶಕ್ತಿಯಾಗಿದೆ ಹಾಗಾದರೆ ಇದಾಗಿರಬಹುದು ನನ್ನ ದೈವ ಎಂದು ಆಲೋಚಿಸಿದ. ಆದರೆ ಮತ್ತೆ ರಾತ್ರಿ ಆದಾಗ ಸೂರ್ಯನು ಮುಳುಗುವುದು ಕಂಡು ಇಬ್ರಾಹಿಂ ಒಂದು ನಿಮಿಷಕ್ಕೆ ನಿಬ್ಬೆರಗಾದನು ಇಷ್ಟು ಪ್ರಕಾಶವನ್ನು ನೀಡುವ ಸೂರ್ಯನು ಕೂಡ ನನ್ನ ದೈವನಲ್ಲಾದರೆ ಯಾರಾಗಿರಬಹುದು, ನನ್ನ ದೈವ ಎಂದು  ಬೇಸರದಲ್ಲಿರುವಾಗ ಜಿಬ್ರೀಲ್ (ಅ)  ಇಬ್ರಾಹಿಂ ನ ಬಲಿ ಬಂದು ಅಲ್ಲಾಹನಾಗಿದ್ದಾನೆ ಏಕ ದೇವನು ಸೂರ್ಯ, ಬೆಟ್ಟ, ಭೂಮಿ, ಇವೆಲ್ಲವೂ ಅವನ ಒಂದು ಸೃಷ್ಟಿ ಮಾತ್ರವಾಗಿದೆ . ಎಂದು ಕಲಿಸಿ ತದನಂತರ ಇಬ್ರಾಹಿಂ ಅನ್ನು ಅಲ್ಲಾಹು ದೂತನಾಗಿ ಆಯ್ಕೆ ಮಾಡಿದ್ದಾನೆ ಎಂಬ ಸಂತೋಷವಾರ್ತೆ ತಿಳಿಸಿದ್ದು .ಇಬ್ರಾಹಿಂ(ಅ) ಅಲ್ಲಾಹನಾಗಿದ್ದಾನೆ ನಿಜವಾದ ದೇವನು ಎಂದು ಮನವರಿತು ಗುಹೆಯಲ್ಲಿಯೇ ಅಲ್ಲಾಹನಿಗೆ ಮನನೊಂದು ಕೃತಜ್ಞತೆಯಲ್ಲಿ ಮುಳುಗುತ್ತಾರೆ.

                                                                                                                                                                         -ಇಶಾನ್ ನಿಡ್ಮಾರ್

Files

Related Posts

Leave A Comment

Voting Poll

Get Newsletter