ಸ್ಪೇನಿನ ಮುಸ್ಲಿಂ ಆಡಳಿತ –ಅಮವಿಗಳು

ಅಮವಿಗಳ ರಾಜಧಾನಿಯಾದ ಡಮಸ್ಕಸನ್ನು ವಶಪಡಿಸಿದ ಅಬ್ಬಾಸಿಗಳು ಅಮವೀ ಕುಟುಂಬಗಳನ್ನು ಹತ್ಯಾಕಂಡ ಮಾಡಲು ಆರಂಭಿಸಿದರು. ಅಮವೀ ಕುಟುಂಬಸ್ಥನಾದ ಅಬ್ದುಲ್ ರಹ್ಮಾನ್ ನಿಗೆ ಅಂದು 19 ವಯಸ್ಸಾಗಿತ್ತು. ಯುಫ್ರಟೀಸ್ ನದಿಯ ತೀರದಲ್ಲಿ ಒಂದು ಕಾಡಿನ ಮಧ್ಯದಲ್ಲಿ ಇರುವ ಮನೆಯಲ್ಲಿ ಅವರು ಕುಟುಂಬಸ್ಥರೊಂದಿಗೆ ಅಡಗಿ ಕೂತಿದ್ದರು.ಅಬ್ಬಾಸೀ ಸೈನ್ಯವು  ಅಲ್ಲಿಗೆ ತಲುಪಿದಾಗ ಅಬ್ದುಲ್ ರಹ್ಮಾನ್ ಹಿಂಬಾಗಿಲು ಮೂಲಕ ಓಡಿ ಹೋಗಿ ರಕ್ಷೆ ಹೊಂದಿದರು. ನದಿಯನ್ನು ದಾಟಿದ ಅಬ್ದುಲ್ ರಹ್ಮಾನ್ ದಡ ಸೇರಿ ಈಜಿಪ್ತಿಗೂ ಅಲ್ಲಿಂದ ಆಫ್ರಿಕಾಗೂ ತಲುಪಿದರು. ಆ ಕಾಲದಲ್ಲಿ ಸ್ಪೇನಿನ ಕೆಲವರೊಂದಿಗೆ ಸಂಬಂಧಿಸಿ ಅವರ ಸಹಾಯದೊಂದಿಗೆ ಸ್ಪೇನಿಗೆ ತಲುಪಿ ಅಲ್ಲಿ ಒಂದು ಸ್ವತಂತ್ರ ಆಡಳಿತವನ್ನು ಕೂಡ ಸ್ಥಾಪಿಸಿದರು.

ಅಬ್ದುಲ್ ರಹ್ಮಾನ್ ದಾಖಿಲ್:

ಸ್ಪೇನಿನ ಈ ಅಮವೀ ಆಡಳಿತ ಎರಡುವರೆ ಶತಮಾನದ ತನಕ ನೆರೆಗೊಂಡಿತು. ಬೇರೆ ಊರಿನಿಂದ ಬಂದು ಅಬ್ದುಲ್ ರಹ್ಮಾನ್ ಆಡಳಿತ ಸ್ಥಾಪಿಸಿದ್ದರಿಂದ ಚರಿತ್ರೆ ಅವರನ್ನು ಅಬ್ದುಲ್ ರಹ್ಮಾನ್ ದಾಖಿಲ್ ಎಂದು ಕರೆಯುತ್ತದೆ.ಅಬ್ದುಲ್ ರಹ್ಮಾನ್ ತನ್ನ ರಾಜಧಾನಿಯಾಗಿ ಕೊರ್ಡುವ ನಗರವನ್ನಾಗಿತ್ತು ಆರಿಸಿದ್ದು. ಅಲ್ಲಿ ಅವರು ಸ್ಥಾಪಿಸಿದ ಮಸೀದಿಯಾಗಿದೆ "ಜಾಮಿಅ ಕುರ್ತುಬಾ". 33 ವರ್ಷ ಅವರು ಆಡಳಿತ ನಡೆಸಿದರು.

ಹಿಶಾಂ  ಮೊದಲನೆಯವನು:

ಅಬ್ದುಲ್ ರಹ್ಮಾನ್ ದಾಖಿಲ್ ರ ಮರಣದ ನಂತರ ಅವರ ಪುತ್ರ ಹಿಶಾಂ ಮೊದಲನೆಯವನು ಆಡಳಿತಕೇರಿದನು. ಹಿಜರಿ 171 ರಿಂದ 180 ರ ತನಕ ವಾಗಿದೆ ಅವನು ಆಡಳಿತ ನಡೆಸಿದ್ದು. ಉಮರ್ ಬಿನು ಅಬ್ದುಲ್ ಅಝೀಝ್ ರನ್ನು ಅನುಷ್ಮರಿಸುವ ನೀತಿಯ ಮತ್ತು ಸಮಾಧಾನದ ಆಡಳಿತವಾಗಿದ್ದು ಅವರದು.


 ಅಬ್ದುಲ್ ರಹ್ಮಾನ್ ನ ಕಾಲದಲ್ಲಿ ಶುರುವಾದ ಕೊರ್ಡೋವಾ ಮಸೀದಿಯ ನಿರ್ಮಾಣ ಹಿಶಾಂ ಪೂರ್ತಿ ಮಾಡಿದರು. ಕೊರ್ಡೋವಾ ನದಿಯ ಮೇಲೆ ಅವರು ಒಂದು ಸೇತುವೆ ನಿರ್ಮಾಣ ಮಾಡಿದರು. ಬೇಟೆಗೂ ಸವಾರಿಗೂ ತನ್ನಿತರ ಸ್ವಂತ ಉಪಯೋಗಕ್ಕೆ ಬೇಕಾಗಿ ನಿರ್ಮಿಸಿರುವುದು ಎಂಬ ಒಂದು ಆರೋಪಣೆ ಅವರ ಮೇಲೆ ಆರೋಪಿಸಲಾಯಿತು. ಆ ಕಾರಣದಿಂದ ತಾನು ಆ ಸೇತುವೆಯ ಮೂಲಕ ಯಾತ್ರೆ ಮಾಡುವುದಿಲ್ಲವೆಂದು ಅವರು ಶಪಥ ಮಾಡಿದರು. ಪಾತ್ರವಲ್ಲ ಆ ಶಪಥವನ್ನು ಮರಣದ ತನಕ ಪಾಲಿಸಿದರು. ಹಿಶಾಂ ತುಂಬಾ ಜರ್ನಪ್ರಿಯನಾದ ಒಬ್ಬ ಆಡಳಿತಗಾರನಾಗಿದ್ದರು. ಹಿಶಾಂ ರ ನಂತರ ಹಕಂ ಎಂಬವರು ಆಡಳಿತಕ್ಕೆ ಬಂದರು. ಹಿಜರಿ 180 ರಿಂದ 206 ರ ತನಕವಾಗಿದೆ ಅವರು ಆಡಳಿತ ನಡೆಸಿದ್ದು. ಅವರ ಆಡಳಿತದಲ್ಲಿ ಇದ್ದ ಕೆಲ ಕುಂದು ಕೊರತೆಗಳ ಕಾರಣ ಪ್ರಜೆಗಳ ಮತ್ತು ಪಂಡಿತರ ದ್ವೇಷಕ್ಕೆ ಕಾರಣರಾದರು.

ಅಬ್ದುಲ್ ರಹ್ಮಾನ್ ಎರಡನೆಯವನು:

ಇವರ ತುಂಬಾ ಯೋಗ್ಯನಾದ ಆಡಳಿತಗಾರನಾಗಿದ್ದರು. ಇವರಾಗಿದ್ದಾರೆ ಪ್ರಥಮವಾಗಿ ಸ್ಪೇನಿಗೆ ಒಂದು ನೌಕ ಪಡೆಯನ್ನು ರೂಪಿಸಿದ್ದು. ವಾದಿ ಕಬೀರ್ ನದಿಯ ತೀರದ ಸೆವಿಲ್ಲದಲ್ಲಿ ಒಂದು ಹಡಗು ನಿರ್ಮಾಣ ಕೇಂದ್ರ ಕೂಡ ಇವರ ಕಾಲದಲ್ಲಿ ನಿರ್ಮಿಸಲಾಗಿತ್ತು. ಅಬ್ಬಾಸೀ ಆಡಳಿತಗಾರರಾದ ಮುಅತಸಮ್, ಮಅಮೂನ್ ಎಂಬ ವರ ಸಮಕಾಲಿಕನಾಗಿದ್ದರು ಅಬ್ದುಲ್ ರಹ್ಮಾನ್ ಎರಡನೆಯವರು.ಅಬ್ದುಲ್ ರಹ್ಮಾನ್ ರ ನಂತರ ಮೂರು ಜನ ಒಟ್ಟಿಗೆ ಸ್ಪೇನ್ ನಲ್ಲಿ ಆಡಳಿತಕ್ಕಿಳಿದರು. ಆದರೆ ಅವರ ಕಾಲದಲ್ಲಿ ಆಡಳಿತ ಹದಗಟ್ಟಿತು ಮತ್ತು ದುರ್ಬಲಗೊಂಡಿತು.ಅವರ ನಂತರ ಅಬ್ದುಲ್ ರಹ್ಮಾನ್ ನಾಸಿರ್ ಆಡಳಿತ ಸ್ವೀಕರಿಸಿದರು.

ಅಬ್ದುಲ್ ರಹ್ಮಾನ್ ನಾಸಿರ್ :

ಸ್ಪೇನಿನ ಅಮವೀ ಆಡಳಿತಗಾರರಲ್ಲಿ ಅಧಿಕ ಜನಪ್ರಿಯ ಹೊಂದಿದ್ದು ಅಬ್ದುಲ್ ರಹ್ಮಾನ್ ನಾಸಿರ್ ಆಗಿದ್ದಾರೆ ಎಂದು ಹೇಳಬಹುದು. ಅಬ್ದುಲ್ ರಹ್ಮಾನ್ ಎಂಬ ಹೆಸರಿನಲ್ಲಿ ಆಡಳಿತದಲ್ಲಿ ಬರುವ ಮೂರನೆಯ ಆಡಳಿತಗಾರನಾಗಿದ್ದಾರೆ ಇವರು. ಆದ್ದರಿಂದ ಅಬ್ದುಲ್ ರಹ್ಮಾನ್ ಮೂರನೆಯವನು ಎಂಬ ನಾಮದಲ್ಲಿ ಇವರು ಅರಿಯಲ್ಪಟ್ಟರು.ಆ ಕಾಲದಲ್ಲಿ ದೇಶ ದೊಡ್ಡ ಸಂಕಷ್ಟದಲ್ಲಾಗಿತ್ತು. ಅಲ್ಲಲ್ಲಿಯೂ ಕೋಲಾಹಲಗಳು ಹರಡಿತ್ತು. ಅವರು ಅದೆಲ್ಲವನ್ನು ತನ್ನ ನಿಯಂತ್ರಣದಡಿಯಲ್ಲಿ ನಿಭಾಯಿಸಿದರು.


ಅವರು ಸೈನ್ಯವನ್ನು ಬಲವರ್ತನೆ ಮಾಡಿದರು. ಆ ಕಾಲದಲ್ಲಿ ಒಂದು ಲಕ್ಷ ಸೈನಿಕರಿದ್ದರು. ಆ ಸೈನ್ಯದಲ್ಲಿ ಸ್ಪೇನಿನ ನೌಕ ಪಡೆಗೆ ಆ ಕಾಲದಲ್ಲಿ 200ಕ್ಕೂ ಅಧಿಕ ಹಡಗುಗಳು ಇದ್ದವು ಎಂಬುವುದು ಚರಿತ್ರೆ.ಇವರ ಕಾಲದಲ್ಲಿ ಸ್ಪೇನಿನ ಪ್ರತಾಪ ಮತ್ತು ಶಕ್ತಿಯನ್ನು ಕಂಡ ಯುರೋಪಿಯನ್ನರು ಸ್ಪೇನಿನೊಂದಿಗೆ ರಾಜ ತಾಂತ್ರಿಕ ಸುಸಂಬಧ ಸ್ಥಾಪಿಸಲು ಮುಂದಾದರು. ರೋಮ್, ಫ್ರೆಂಚ್, ಜೇರ್ಮನ್ ಆಡಳಿತಗಳು ತಮ್ಮ ಪ್ರತಿನಿಧಿಯನ್ನು ಪ್ರಸ್ತುತ ಲಕ್ಷದೊಂದಿಗೆ ಸ್ಪೇನಿಗೆ ಕಳುಹಿಸಬೇಕಾಯಿತು.


ಆಡಳಿತ ರಂಗದಲ್ಲಿ ಸುಮಾರು ಪ್ರಶಂಸೆ ಪಡೆದರೂ ವೃತ್ತಿಜೀವನದಲ್ಲಿ ಅಬ್ದುಲ್ ರಹ್ಮಾನ್ ರ ಜೀವನ ಸುಖಕರವಾಗಿತ್ತು ಎಂಬ ಟೀಕೆಯನ್ನೊಳಗೊಂಡರು.ಅಬ್ದುಲ್ ರಹ್ಮಾನ್ ರ ನಂತರ ಪುತ್ರ ಹಕಂ ಎರಡನೆಯವನು ಆಡಳಿತ ಕೇರಿದನು. ಹಿಜರಿ 350 ರಿಂದ 366 ರ ತನಕ ವಾಗಿದೆ ಅವರು ಆಡಳಿತ ನಡೆಸಿದ್ದು. ಬರಹದಲ್ಲಿ ಮತ್ತು ಓದುವಿಕೆಯಲ್ಲಿ ತುಂಬಾ ಇಚ್ಛೆಯಿರುವ ಅವರು ಲಕ್ಷದಲ್ಲಿ ಅಧಿಕ ಗ್ರಂಥಗಳನ್ನು ರಾಜಕೀಯವಾಗಿ ಶೇಖರಿಸಿದ್ದರು. ಗ್ರಂಥಗಳನ್ನು ಸಂಗ್ರಹಿಸಲು ಬೇಕಾಗಿ 1,40,000 ಬರಹಗಾರರನ್ನು ಅವರು ನೇಮಿಸಿದರು ಎಂಬುದಾಗಿದೆ ಚರಿತ್ರೆ.


ಹಕಮಿನ ನಂತರ ಪುತ್ರ ಹಿಶಾಂ ಎರಡನೆಯವನು ಆಡಳಿತಕ್ಕೇರಿದನು. ಅವನ ಕಾಲದಲ್ಲಿ ಅಧಿಕಾರಕ್ಕೆ ಬೇಕಾಗಿ ಕೋಲಾಹಲಗಳು ನಡೆದವು. ಅನಂತರದ 20 ವರ್ಷಗಳ ಒಳಗೆ ಹತ್ತು ಜನರು ಅಧಿಕಾರಕ್ಕೆ ಏರಿಳಿದರು. ಅಂತ್ಯವಾಗಿ ಹಿಜರಿ 422 ರಲ್ಲಿ ಸ್ಪೇನಿನ ಅಮವೀ ಆಡಳಿತ ಕೊನೆಗೊಂಡಿತು.  ಅದರ ನಂತರ ಸ್ಪೇನಿನಲ್ಲಿ ಅನೇಕ ಸ್ವತಂತ್ರ ಆಡಳಿತಗಳು ಸ್ಥಾಪಿತವಾದವು.

ಈ ಆಡಳಿತ ಸ್ಪೇನಿನಲ್ಲಿ 284 ವರ್ಷ ಆಡಳಿತ ನಡೆಸಿದವು. ಸ್ಪೇನಿನ ರಾಜಧಾನಿಯಾದ ಕೊರ್ಡೋವಾ ಅಂದು ಬಗ್ದಾದ್ ನಗರದ ನಂತರ ಅತಿ ದೊಡ್ಡ ನಗರವಾಗಿತ್ತು. ಕೃಷಿ, ವ್ಯವಸಾಯ, ವಾಣಿಜ್ಯ ಮುಂತಾದ ರಂಗದಲ್ಲಿ ತುಂಬಾ ಅಭಿವೃದ್ಧಿ ಹೊಂದಿತ್ತು. ಸ್ಪೇನಿನ ಆಡಳಿತಗಾರರು ವಿಜ್ಞಾನ, ಸಾಹಿತ್ಯ ಕ್ಷೇತ್ರಗಳಲ್ಲಿ ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ತುಂಬಾ ಕಾಲದ ನಂತರವಾಗಿದೆ ಸ್ಪೇನಿನಲ್ಲಿ ಇಸ್ಲಾಂ ತಲುಪಿದ್ದು. ಅಬ್ಬಾಸೀ ಕಾಲದ ಉನ್ನತರಾದ ಪಂಡಿತ ಶ್ರೇಷ್ಠರನ್ನು ಆ ಕಾರಣದಿಂದಾಗಿ ಸ್ಪೇನಿನಲ್ಲಿ ಕಾಣಲು ಅಸಾಧ್ಯವಾಗಿದೆ.


ಈ ಕಾಲದ ಪ್ರಧಾನವಾದ ಒಬ್ಬ ಪಂಡಿತನಾಗಿದ್ದನು ಝಹ್ರಬಿ. ಅಬ್ದುಲ್ ರಹ್ಮಾನ್ ಹಾಗೂ ಹಕಮಿನ ಅರಮನೆ ವೈದ್ಯ ನಾಗಿದ್ದ ಅವರು ಶಸ್ತ್ರಕ್ರಿಯ ಪರಿಣಿತನಾಗಿದ್ದರು. ತಶ್ರೀಫ್ ಎಂಬ ಹೆಸರಲ್ಲಿ ಅವರು ಒಂದು ಗ್ರಂಥ ಕೂಡ ರಚಿಸಿದ್ದಾರೆ. ನಂತರದ ಕಾಲದಲ್ಲಿ ಯುರೋಪಿನಲ್ಲಿ ಶಸ್ತ್ರಕ್ರಿಯಾ ಪ್ರಕ್ರಿಯೆ ಆರಂಭಿಸುವುದು ಈ ಪುಸ್ತಕ ಮುಖಾಂತರವಾಗಿದೆ. ಇಬ್ನು ಅಬ್ದುರಬ್ಬ್ ಈ ಕಾಲದ ಪ್ರಧಾನ ಕವಿಗಳೊಬ್ಬರಾಗಿದ್ದಾರೆ. ಮತ ಪಂಡಿತರಲ್ಲಿ ಯಹ್ಯಾ ತುಂಬಾ ಪ್ರಶಸ್ತರಾಗಿದ್ದಾರೆ. ಅವರು ಹಝರತ್ ಇಮಾಮ್ ಮಾಲಿಕ್ ರ ಶಿಷ್ಯರಾಗಿದ್ದಾರೆ.

ಪಟ್ಟಣಗಳು:

ರಾಜಧಾನಿ ನಗರವಾದ ಕೊರ್ಡೋವಾ ಅಲ್ಲದೆ ಅನೇಕ ಪಟ್ಟಣಗಳು ಸ್ಪೇನಿನಲ್ಲಿತ್ತು.

ಸೆವಿಲ್ಲ :ಸ್ಪೇನಿನ ಎರಡನೇ ದೊಡ್ಡ ನಗರ. ವ್ಯವಸಾಯ, ಹಡಗು ನಿರ್ಮಾಣ ಮುಂತಾದವುಗಳ ಕೇಂದ್ರ. ಯುದ್ಧೋಪಕರಣ ನಿರ್ಮಾಣ ರಂಗದಲ್ಲಿ ಕೂಡ ಸೆವಿಲ್ಲ ಮುಂದಾಗಿತ್ತು. ವಾಸ್ತು ವಿದ್ಯೆ, ತೋಟ ನಿರ್ಮಾಣ ಮುಂತಾದ ಕಾರ್ಯಗಳಲ್ಲಿಯೂ ಮುಂದಾಗಿತ್ತು.

ಟೊಲಿಡೋ :ಈಗಿನ ಸ್ಪೇನಿನ ರಾಜಧಾನಿಯಾದ ಮ್ಯಾಡ್ರಿಡ್ ನ ಸಮೀಪವಿರುವ ನಗರವಾಗಿದೆ ಟೊಲಿಡೋ. ಖಡ್ಗಗಳಿಗೆ ತುಂಬಾ ಪ್ರಶಸ್ತಿ ಕೇಳಲ್ಪಟ್ಟ ನಗರವಾಗಿದೆ ಟೊಲಿಡೋ.

ವಲನ್ಸಿಯ :ತೋಟಗಳ ಸಮೃದ್ಧಿಗೆ ಹೆಸರು ಕೇಳಲ್ಪಟ್ಟ ನಗರ. ಇಲ್ಲಿಯ ಇಟ್ಟಿಗೆಗಳು ಮತ್ತು ರೋಮ ವಸ್ತ್ರಗಳು ಬಹಳ ಪ್ರಶಸ್ತವಾಗಿದೆ.

ಮೂರ್ಸಿಯ :ಜಲ ಸೇವನೆ ಪದ್ಧತಿಗಳ ಕೇಂದ್ರ. ಚಿತ್ರಕಲೆ ಮಾಡಿದ ವಸ್ತ್ರಗಳ ನಿರ್ಮಾಣದಲ್ಲಿ ಪ್ರಸಿದ್ಧವಾಗಿತ್ತು ಈ ನಗರ.

ಮರಿಯ್ಯ :ರೋಮವಸ್ತ್ರಗಳ ದೊಡ್ಡಕೇಂದ್ರ. ನೂರಕ್ಕೂ ಅಧಿಕ ರೋಮ ಸಂಸ್ಕರಿಸುವ ಶಾಲೆಗಳು ಇಲ್ಲಿ ಇತ್ತು. ಆಯುಧಗಳು ಮತ್ತು ದೊಡ್ಡ ದೊಡ್ಡ ಹಡಗುಗಳನ್ನು ಇಲ್ಲಿ ನಿರ್ಮಿಸಲ್ಪಡುತ್ತಿತ್ತು.

ಮಲಾಕ:ದೊಡ್ಡ ಬಂದರು. ಇಲ್ಲಿಯ ದ್ರಾಕ್ಷಿಗಳು ಲೋಕ ಪ್ರಸಿದ್ಧವಾಗಿದ್ದವು.

Related Posts

Leave A Comment

Voting Poll

Get Newsletter