ಮುಸಲ್ಮಾನರ ಅಧಃಪತನ : ಕಾರಣಗಳು ಮತ್ತು ಪರಿಹಾರಗಳು

 (ಶಕೀಬ್ ಅರ್ಸಲಾನ್ ರ ಪುಸ್ತಕ ಪರಿಚಯ )

ಜಗತ್ತಿನಿಂದ ಮುಸಲ್ಮಾನರು ನಾಮಾವಶೇಷವಾಗುತ್ತಿದ್ದಾರೆಂದು ನೀವು ಇಂದು ತೀವ್ರವಾಗಿ ವಿಷಾದಿಸುತ್ತಿದ್ದೀರಾ ?
ನಾನು ನಿಮ್ಮೊಂದಿಗೆ ಪ್ರಶ್ನಿಸುತ್ತಿದ್ದೇನೆ ,ನಿಮ್ಮಲ್ಲಿ ನೈಜ ಮುಸಲ್ಮಾನರು ಇದ್ದಾರೆಯೇ?
                                                            - ಅಲ್ಲಾಮ ಇಕ್ಬಾಲ್ 

ಸರ್ವ ಕ್ಷೇತ್ರಗಳಲ್ಲಿಯೂ ಇತರರಿಗಿಂತ ಸದಾ ಮುಂದಿದ್ದ ಮುಸ್ಲಿಂ ಸಮುದಾಯ ಅದಃಪತನದತ್ತ ಸಾಗುತ್ತಿರುವುದು ಏತಕ್ಕಾಗಿದೆ ? ಅವರಲ್ಲಿ ಕಾಣಲು ಸಾಧ್ಯವಾಗುತ್ತಿರುವ ಧಾರ್ಮಿಕ ಮೌಲ್ಯಗಳ ಕೊರತೆಗೆ ಹೇತುವಾದುದ್ದೇನು? ಪೂರ್ವ ಕಾಲ ವೈಭವಕ್ಕೆ ಮರಳಲು ಇನ್ನು ಮುಸಲ್ಮಾನರಿಗೆ ಸಾಧ್ಯವಿಲ್ಲವೇ? ಮೊದಲಾದ ಪ್ರಶ್ನೆಗಳಿಗೆ ಉತ್ತರಗಳನ್ನಾಗಿದೆ , ಪ್ರಮುಖ ಫ್ಯಾನ್ ಇಸ್ಲಾಮಿಕ್ ಚಿಂತಕರೂ ಪ್ರಮುಖ ರಾಜಕಾರಣಿಯು ಆದ ಶಕೀಬ್ ಅರ್ಸಲಾನ್ "our decline and its causes and remedies" ಎಂಬ ಕೃತಿ ರಚಿಸಿರುವುದು . "لماذا تاخرون المسلمون " ( ಲಿಮಾ ಝಾ ತಅಕ್ಕರೂನಲ್ ಮುಸ್ಲಿಮೂನ್ )ಎಂಬ ಹೆಸರಿನಲ್ಲಿ ಅರಬಿ ಭಾಷೆಯಲ್ಲಿ ರಚಿಸಲ್ಪಟ್ಟರೂ ನಂತರ ಬಂದ ಇಂಗ್ಲಿಷ್ ತರ್ಜಮೆಯಿಂದಾಗಿದೆ ಈ ಕೃತಿ ಜನಪ್ರಿಯವಾದದ್ದು. ಮತ್ತು ಅಕಾಡೆಮಿಕ್ ವಲಯದಲ್ಲಿ ಚರ್ಚಾ ವಿಷಯವಾದದ್ದು.

ಈಜಿಪ್ಟಿನ ಪ್ರಮುಖ ಮಾಸಿಕ ಪತ್ರಿಕೆ ಅಲ್ ಮನ್ನಾರ್ ನ ಮೂಲಕ ಹಲವಾರು ಭಾಗಗಳಾಗಿ ಪ್ರಸಿದ್ದೀಕರಿಸಲ್ಪಟ್ಟು ನಂತರ ಅವುಗಳ ಸಂಕಲನವಾಗಿ ಹೊರಬಂದ ಈ ಕೃತಿ ರಚಿಸಲ್ಪಡುವುದಕ್ಕೆ ಪ್ರೇರಣೆಯಾದದ್ದು ಎರಡು ಪ್ರಶ್ನೆಗಳಾಗಿತ್ತು. ಇಂಡೋನೇಶ್ಯದ ಜಾವಾದಲ್ಲಿನ ಸಿಂಬಾಸಿ ಕೋರ್ಟ್ ನ ಜಡ್ಜ್ ಆಗಿದ್ದ ಶೇಕ್ ಮಹಮ್ಮದ್ ಬಿಸ್ತೂನಿ ಪ್ರಕಟಿಸಿದ ಅಂಕಣ ಒಂದರಲ್ಲಿ ಈ ಎರಡು ಪ್ರಶ್ನೆಗಳನ್ನು ಶಕೀಬ್ ಅರ್ಸಲಾನ್ ರೊಂದಿಗೆ ಕೇಳಿದ್ದರು. 


ಒಂದು : ಜಾಗತಿಕ ಮಟ್ಟದಲ್ಲಿ ಮುಸಲ್ಮಾನರ ಅದಃಪತನಕ್ಕಿರುವ ಕಾರಣಗಳೇನು? ಸುಪ್ರಧಾನ ಮೇಖಲೆಗಳಲ್ಲಿ (ಮುಖ್ಯವಾಗಿ ಆಧ್ಯಾತ್ಮಿಕ ವಿಷಯಗಳಲ್ಲಿ ) ಮುಸ್ಲಿಂಗಳಿಗೆ ಅನುಭವಿಸಬೇಕಾಗಿ ಬಂದ ಅಘಾತಗಳಿಗೆ ಕಾರಣವೇನು?


 ಎರಡು : ಇಸ್ಲಾಂ ಧರ್ಮದ ಮೌಲ್ಯಗಳನ್ನು ಹಿಂಬಾಲಿಸಿಕೊಂಡು ಯುರೋಪಿನ್ ದೇಶಗಳ ಹಾಗೆ ಅಭಿವೃದ್ಧಿ ಹೊಂದಲು ಮುಸಲ್ಮಾನರಿಗೆ ಸಾಧ್ಯವಿಲ್ಲವೇ?

ಮೇಲೆ ಕೇಳಲಾದ ಪ್ರಶ್ನೆಗಳಿಗೆ ಉತ್ತರವಾಗಿಯಾಗಿದೆ ಈ ಪುಸ್ತಕ ರಚಿಸಲ್ಪಟ್ಟದ್ದು.


ಪೂರ್ವಿಕರ ವಿಜಯ 

ಮುಸಲ್ಮಾನರ ಅಧಃಪತನದ ಮುಖ್ಯ ಕಾರಣಗಳು ಹೇಳುವುದಕ್ಕಿಂತ ಮುಂಚೆ ನಮ್ಮ ಮಧ್ಯಕಾಲೀನ ತಲೆಮಾರಿನ ಪೂರ್ವಿಕರ ಜಾಗತಿಕ ಮಟ್ಟದಲ್ಲಿನ ಮೈಲುಗೈಗೆ ಕಾರಣವಾದ ಪ್ರಧಾನ ಘಟಕಗಳನ್ನು ಲೇಖಕರು ಈ ಪುಸ್ತಕದಲ್ಲಿ ವಿವರಿಸುತ್ತಿದ್ದಾರೆ. ಒಬ್ಬ ಮುಸ್ಲಿಮನಿಗೆ ಸಂಬಂಧಿಸಿದಂತೆ ಜೀವನದ ಬಹುಮುಖ್ಯ ಪ್ರಚೋದನೆ ಮತ್ತು ಉನ್ನತಿಯ ಮಾರ್ಗ ಪರಿಶುದ್ಧ ಕುರಾನ್ ಆಗಿದೆ. ಪೂರ್ವಜರ ಜೀವನದ ವಿವಿಧ ಸಂದರ್ಭಗಳನ್ನು ಆಳವಾಗಿ ಕಲಿತರೆ ನಮಗೆ ಅವುಗಳಿಂದ ವ್ಯಕ್ತವಾಗುವ ಒಂದು ರೂಪವೊಂದಿದೆ, ಅದು ಪರಿಶುದ್ಧ ಕುರಾನ್ ನ ಕಿರಣಗಳಿಂದ ಪ್ರಕಾಶಪೂರಿತವಾದ ಈಮಾನಿಕ ಸತ್ತೆಯ ಮನೋಹರ ಚಿತ್ರವಾಗಿದೆ. ಪ್ರವಾದಿ ಆಧ್ಯಾಪನೆಯನ್ನು ಸ್ವಲ್ಪವೂ ಕೊರತೆಗಳಿಲ್ಲದ ಹಾಗೆ ಅವರು ಹಿಂಬಾಲಿಸಿದ್ದರು. ಸತ್ಕರ್ಮಗಳನ್ನು ಪ್ರೋತ್ಸಾಹಿಸುತ್ತಾ ಕೆಡುಕುಗಳನ್ನು ವಿರೋಧಿಸುತ್ತಾ, ಸಾಮುದಾಯಿಕ ಮಟ್ಟದಲ್ಲಿ ಧಾರ್ಮಿಕ ವಿಧಿ ವಿಧಾನಗಳು, ಆಚರಣೆಗಳನ್ನು ಜಾರಿಗೊಳಿಸಿದ್ದರು. ಪೂರ್ವಿಕರ ನೆರಳು ಸೋಕದ ಹಾಗೆ ಬೆಳೆದು ಬಂದ ಇಂದಿನ ತಲೆಮಾರಿನ ಮುಸಲ್ಮಾನರು ಧಾರ್ಮಿಕವಾಗಿಯು , ರಾಜಕೀಯವಾಗಿಯೂ ಕೆಳಮಟ್ಟದಲ್ಲಿದ್ದಾರೆ ಎಂಬುದಾಗಿದೆ ವಾಸ್ತವ.

ಪ್ರಮುಖ ಕಾರಣಗಳು :

 ಆಧುನಿಕ ಮುಸಲ್ಮಾನರ ಅಧಃಪತನದ ಪ್ರಮುಖ ಕಾರಣಗಳಾಗಿ ಇವೆರಡನ್ನು ಗಣಿಸಬಹುದು.

ಒಂದು : ಮುಸಲ್ಮಾನನೆಂಬ ಸತ್ವಬೋಧವನ್ನು ಮನಪೂರ್ವಕವಾಗಿ, ಅರಿಯದೆಯೋ ತ್ಯಜಿಸುತ್ತಾ ಇಸ್ಲಾಂ ಧರ್ಮದ ಸಾಮಾಜಿಕ ಮೌಲ್ಯಗಳನ್ನು ನಿರಾಕರಿಸುತ್ತಿರುವುದು . 1400 ವರ್ಷಗಳಷ್ಟು ಹಳೆಯ ಧರ್ಮವು ಪ್ರಾಕೃತ ಮತ್ತು ಅಪ್ರಸ್ತುತ ಎಂಬ ಮಿಥ್ಯ ಚಿಂತೆ ನವ ತಲೆಮಾರಿನ ಮುಸಲ್ಮಾನರನ್ನು ಬೇಟೆಯಾಡುತ್ತಿದೆ.


ಇಸ್ಲಾಂ ಧರ್ಮದ ಕುರಿತು ಅಧ್ಯಯನ ನಡೆಸಲು ಅವರಾರು ಮುಂದಾಗುತ್ತಿಲ್ಲ ಎಂಬುವುದಾಗಿದೆ ಖೇದಕರ ಸಂಗತಿ . ಪಾಶ್ಚಿಮಾತ್ಯರು ಮತ್ತು ಅವರು ಪ್ರತಿಪಾದಿಸುತ್ತಿರುವ ಲಿಬರಲ್ ಸಿದ್ದಾಂತವನ್ನು ಅಭಿವೃದ್ಧಿಯ ಪ್ರತೀಕವಾಗಿ ಕಾಣುವುದು ಮುಸಲ್ಮಾನರೆಡೆಯಲ್ಲಿ ಮುಖ್ಯವಾಗಿ ಯುವಕರಲ್ಲಿ ವ್ಯಾಪಕವಾಗಿದೆ ಎಂದು ಲೇಖಕರು ವಿಷಾದ ವ್ಯಕ್ತಪಡಿಸುತ್ತಾರೆ . ಮುಸಲ್ಮಾನರೆಲ್ಲರೂ ಸಹೋದರರೆಂಬ (ಮುಸ್ಲಿಂ ಬ್ರದರ್ ಹುಡ್) ಆಶಯದ ಮೇಲಿನ ಪರಸ್ಪರ ಸಹಾಯ - ಸಹಕಾರದ ಮನೋಭಾವ ನಮ್ಮಲ್ಲಿ ಕಣ್ಮರೆಯಾಗಿದೆ ಎಂಬುದನ್ನು ಲೇಖಕರು ಚಾರಿತ್ರಿಕ ಪುರಾವೆಗಳನ್ನು ನೀಡುತ್ತಾ ಸಮರ್ಥಿಸುತ್ತಾರೆ . ಮುಸ್ಲಿಂ ಸಹೋದರ್ಯದ ಆಶಯದ ಮೇಲೆ ಒಗ್ಗಟ್ಟಾಗಿ ನಿಂತಾಗ ವಿಜಯ ಸಾಧ್ಯವಾದುದನ್ನು ನಮಗೆ ಚರಿತ್ರೆ ಪುಟಗಳಲ್ಲಿ ನೋಡಬಹುದಾಗಿದೆ. 1911 ರಿಂದ 1912 ರವರೆಗೆ ನಡೆದ ಇಟಲಿಯ ಟ್ರಿಪೋಲಿ ಅಧಿನಿವೇಶವನ್ನು ಕೇವಲ ಒಂದೇ ವರ್ಷದ ಕಾಲಾವಧಿಯಲ್ಲಿ ಹಿಮ್ಮೆಟ್ಟಿಸಲಾಗಿತ್ತು. ಟರ್ಕಿ ಮತ್ತು ಈಜಿಪ್ಟ್ , ಟ್ರಿಪೋಲಿಗೆ ಸಹಾಯಕವಾಗಿ ನಿಂತಾಗ ಈ ವಿಜಯ ಸಾಧ್ಯವಾಗಿತ್ತು. ಶತ್ರುಗಳ ವಿರುದ್ಧ ಒಗ್ಗಟ್ಟಾಗಿ ನಿಂತು ಕ್ಷಮಾ ಮನೋಭಾವ, ಪರಸ್ಪರ ನಂಬಿಕೆ ಮತ್ತು ಅಚಂಚಲವಾದ ಈಮಾನ್ ನೊಂದಿಗೆ ಹೋರಾಡುವುದಾದರೆ ಗೆಲುವು ನಿಶ್ಚಿತ ಎಂಬುವುದರಲ್ಲಿ ಸಂಶಯವಿಲ್ಲ. ಅಲ್ಲಾಹನು ಹೇಳುತ್ತಾನೆ: ಪ್ರವಾದಿವಾದಿಯರೇ ನೀವು ಸತ್ಯ ವಿಶ್ವಾಸಿಗಳನ್ನು ಹೋರಾಟಕ್ಕಾಗಿ ಪ್ರೋತ್ಸಾಹಿಸಿರಿ ಕ್ಷಮಾ ಶೀಲರಾದ 20 ಮಂದಿ ನಿಮ್ಮಲ್ಲಿದ್ದಾರೆ ಅವರಿಗೆ ಇನ್ನೂರು ಮಂದಿಯನ್ನು ಸೋಲಿಸಲು ಸಾಧ್ಯವಾದೀತು. ನೂರ ಮಂದಿ ಇದ್ದರೆ ಸತ್ಯ ನಿಷೇಧಿಗಳಿಂದ ಸಾವಿರ ಮಂದಿ ವಿರುದ್ಧ ಅವರಿಗೆ ಗೆಲುವು ಸಾಧಿಸಬಹುದು, ಅವರು ಸತ್ಯವನ್ನರಿಯದ ಒಂದು ಸಮೂಹವಾಗಿದ್ದಾರೆ (ಕುರಾನ್ - 8:63).


ಎರಡು :ಮುಸ್ಲಿಂ ಜಗತ್ತು ಎಂದೆಂದಿಗೂ ಎದುರಿಸುತ್ತಿರುವ ಮಹಾ ವಿಪತ್ತಾಗಿದೆ ನಮ್ಮೊಳಗೆ ಇರುವ ವಿಶ್ವಾಸ ಘಾತುಕರ ದ್ರೋಹ. ಪ್ರವಾದಿವರ್ಯರ ಕಾಲದಿಂದಲೇ ನಮ್ಮ ಸಮುದಾಯಕ್ಕೆ ಮಾರಕ ವ್ಯಾಧಿಯಾಗಿ ಪರಿಣಮಿಸಿರುವ ಇವರು ಈ ಕಾಲದಲ್ಲಿ ಪೂರ್ವಾಧಿಕ ಶಕ್ತಿಯೊಂದಿಗೆ ಕಾರ್ಯಚರಿಸುತ್ತಿದ್ದಾರೆ .ತಮ್ಮ ಸ್ವಂತ ಅವಶ್ಯಕತೆಗಳನ್ನು ಪೂರೈಸಲು ಬೇಕಾಗಿ ಧಾರ್ಮಿಕ ಆಚಾರ - ನಂಬಿಕೆಗಳನ್ನು ಒತ್ತೆಯಿಡುವ ಇವರು ಮುಸ್ಲಿಂ ಜಗತ್ತಿಗೆ ಉಂಟು ಮಾಡುತ್ತಿರುವ ತಲೆನೋವು ಚಿಕ್ಕದೇನಲ್ಲ .ಪ್ರಸಿದ್ಧ ಇಸ್ಲಾಮಿಕ್ ನಗರವಾದ ಮೊರೊಕೊ ನಗರವನ್ನು ಫ್ರಾನ್ಸ್ ದಂಡೆಯಾತ್ರೆಯೊಂದಿಗೆ ವಶಪಡಿಸಲು ಯತ್ನಿಸಿದಾಗ ಫ್ರೆಂಚ್ ಸರ್ಕಾರದ ಆಮಿಷಕ್ಕೊಳಗಾಗಿ ಮುಸ್ಲಿಂ ಜನತೆಯನ್ನು ವಂಚಿಸಿದ ಮಂತ್ರಿ ಮಾಕರಿ (maqree) ಮತ್ತು ಬಗದಾದಿ ಪಾಷಾ ಫೈಸ್ ಎಂಬ ಸರ್ಕಾರಿ ನೌಕರ ಅಲ್ಲಿನ ಮುಸಲ್ಮಾನರನ್ನು ಬಲತ್ಕಾರದಿಂದ ಕ್ರಿಸ್ತಾನಿಟಿಗೆ ಮತಾಂತರಿಸಿದ್ದು ಮತ್ತು ಕುರಾನ್ ಪ್ರತಿಗಳನ್ನು ದ್ವಂಸ ಮಾಡಿದ್ದು ಲೇಖಕರು ದುಃಖದೊಂದಿಗೆ ಪುಸ್ತಕದಲ್ಲಿ ವಿವರಿಸುತ್ತಿದ್ದಾರೆ .


ಚಿಂತನಾರ್ಹ ಪ್ರಮುಖ ದರ್ಶನ್ ಕವಿ ಮತ್ತು ತತ್ವಜ್ಞಾನಿಯಾದ ಅಲ್ಲಾಮ ಇಕ್ಬಾಲ್ ತನ್ನ "ಏ ನೌ ಜವಾನ್ ಮುಸ್ಲಿಂ" ಎಂಬ ಕವಿತೆ ಪ್ರಾರಂಭಿಸುವುದು ಹೀಗೆ ಆಗಿದೆ
 ." ಕಬಿ ಏ ನೌಜವಾನ್ ಮುಸ್ಲಿಂ ಕಬೀ ತದಬ್ಬುರ್
 ಬೀ ಕಿಯಾ ತೂನೆ ಕ್ಯಾ ಗರ್ದೂನ್ ಥಾ ಜಿಸ್ಕಾ ಹೇ ಇಕ್ ಟೂಟ ಹುವಾ ತಾರಾ "
 

"ಜಗತ್ತೆಂಬ ಗಗನದಲ್ಲಿ ನೀನು ಕುಬ್ಜ ನಕ್ಷತ್ರ ವಾಗುವುದನ್ನು ಯಾವಾಗಲಾದರೂ ಚಿಂತಿಸಿದ್ದೆಯಾ" ಎಂಬುದಾಗಿದೆ ಮೇಲೆ ಹೇಳಲಾದ ಕವಿತೆಯ ಸಾರ .ಈ ಮೂಲಕ ಇಕ್ಬಾಲ್ ಪ್ರತಿಪಾದಿಸುವುದು ಮುಸ್ಲಿಂ ಸಮುದಾಯದಲ್ಲಿ ತರಬೇಕಾದ ಬದಲಾವಣೆಗಳ ಕುರಿತಾಗಿದೆ. ಅಲ್ಲಾಮ ಇಕ್ಬಾಲ್ ರ ಶಿಕ್ವಾ ಮತ್ತು ಜವಾಬ್ - ಎ -ಶಿಕ್ವಾ ಕೃತಿಗಳೊಂದಿಗೆ ಸಾಮ್ಯತೆ ಇರುವ ಕೆಲವೊಂದು ವಿಷಯಗಳನ್ನು ಆರ್ಸಲಾನ್ ರ ಈ ಪುಸ್ತಕದಲ್ಲಿ ಕಾಣಬಹುದಾಗಿದೆ.

" ಅಲ್ಲಾಹನಿಗೂ ಅವನ ಪ್ರವಾದಿರ್ಯರಿಗೂ ಮತ್ತು ಮತ್ತು ಸತ್ಯ ವಿಶ್ವಾಸಿಗಳಿಗೆ ಆಗಿದೆ ಪ್ರೌಢಿ "ಎಂಬ ಕುರಾನ್ ಸೂಕ್ತವನ್ನು(63:8) ಲೇಖಕರು ಅರ್ಥೈಸಿರುವುದು ಈ ರೀತಿಯಲ್ಲಾಗಿದೆ : ಪ್ರೌಢಿ ಇದೆ ಎಂದು ಹೇಳುವಾಗ ಇಂದಿನ ಮುಸಲ್ಮಾನರಾದ ನಾವು ಗರ್ವ ಪಡುತ್ತೇವೆ. ಆದರೆ ನಮ್ಮ ಇಂದಿನ ಪರಿಸ್ಥಿತಿಯನ್ನು ಅವಲೋಕಿಸುವಾಗ ಒಂದಾದರೆ ಕುರಾನ್ ಹೇಳೋದು ತಪ್ಪಾಗಿರಬೇಕು. ಅದು ಅಸಾಧ್ಯವಾಗಿದೆ ಕಾರಣ ಸೃಷ್ಟಿಕರ್ತನ ಕಲಾಂ ಆದ ಪವಿತ್ರ ಕುರಾನ್ ತಪ್ಪುಗಳಿಂದ ಮುಕ್ತವಾದದ್ದಾಗಿದೆ. ಆಗ ಒಂದೇ ಒಂದು ಸಾಧ್ಯತೆಯಾಗಿದೆ ಬಾಕಿಯಾಗುವುದು ಸೂಕ್ತದಲ್ಲಿ ಪರಾಮರ್ಶಿಸಲ್ಪಟ್ಟ ಸತ್ಯ ವಿಶ್ವಾಸಿಗಳಲ್ಲಿ ಈಗಿನ ಅಧಿಕ ಮಂದಿ ಮುಸಲ್ಮಾನರು ಒಳಪಡುವುದಿಲ್ಲ ಎಂಬುದಾಗಿದೆ ನೈಜ ವಿಷಯ.


"ಸತ್ಯ ವಿಶ್ವಾಸಿಗಳಿಗೆ ಭಗವಂತನ ಸಹಾಯ ಇರುತ್ತದೆ "ಎಂಬ ಕುರಾನ್ ಸೂಕ್ತದಲ್ಲಿ ಸತ್ಯ ವಿಶ್ವಾಸಿಗಳು ಎಂದು ಪರಾಮರ್ಶಿಸಲ್ಪಡುತ್ತಿರುವುದು ನಮ್ಮ ಕುರಿತೇ ಎಂದು ಪುನರ್ - ಪರಿಶೋಧನೆ ನಡೆಸಬೇಕಾದ ಅನಿವಾರ್ಯತೆ ದಟ್ಟವಾಗುತ್ತದೆ.

 ಪರಿಹಾರಗಳು:


ಮುಸ್ಲಿಂ ಜಗತ್ತಿಗೆ ತನ್ನ ನಷ್ಟ ಹೊಂದಿದ ಪ್ರತಾಪವನ್ನು ಮರಳಿ ಪಡೆಯಲು ಸಾಧ್ಯವಾಗಬಹುದೇ ಎಂಬ ಪ್ರಶ್ನೆಗೆ ಪ್ರತಿಯಾಗಿ ಲೇಖಕರು ಮೂರು ಪ್ರಶ್ನೆಗಳನ್ನು ನಮ್ಮ ಮುಂದಿಡುತ್ತಾರೆ. ಜ್ಞಾನವೆಂಬ ಪ್ರಕಾಶವನ್ನು ಕರಗತ ಮಾಡಿಕೊಳ್ಳಲು ಪ್ರಚೋದನೆ ನೀಡುವ ಕುರಾನ್ ನ ದಾರಿಗೆ ಮರಳಿ ಹೋಗಬೇಕಿಲ್ಲವೇ? ಎರಡನೆಯದು, ಧರ್ಮದ ಮೇಲೆ ಅವಲಂಬಿತವಾದ ನವೋದಯವಾಗಬೇಕಲ್ಲವೇ ನಮ್ಮದು? ಮೂರನೆಯದಾಗಿ, ಯುಕ್ತಿಗೆ ಮಾತ್ರ ಪ್ರಾಮುಖ್ಯತೆ ನೀಡುವ ಪಾಶ್ಚಿಮಾತ್ಯ ನವೋದಯದ ಸಿದ್ಧಾಂತವನ್ನು ನಾವು ಹಿಂಬಾಲಿಸಬೇಕೆಂದಿದೆಯೇ? ಈ ಮೂರು ಪ್ರಶ್ನೆಗಳ ಉತ್ತರಗಳನ್ನು ವಿವರಿಸುವುದರೊಂದಿಗೆ ಪುಸ್ತಕದಲ್ಲಿನ " ಪರಿಹಾರಗಳು " ಎಂಬ ಅಧ್ಯಾಯವು ಪೂರ್ಣಗೊಳ್ಳುತ್ತದೆ.


ಇಸ್ಲಾಮಿನ ಸುವರ್ಣ ಯುಗ ಎಂದರಿಯಲ್ಪಡುವ ಮಧ್ಯಕಾಲ ಯುಗದಲ್ಲಿನ ವೈಜ್ಞಾನಿಕ ಸಾಧನೆಗಳು ಯುರೋಪಿಯನ್ ನವೋದಯದ ಉಂಟಾಗುವಿಕೆಯಲ್ಲಿ ಅನಿಷೇದ್ಯ ಪಾತ್ರವನ್ನು ವಹಿಸಿದೆ ಎಂದು ಜಾರ್ಜ್ ಸಲೀಬಾ ತನ್ನ "Islamic Science and the making of the European Renaissance - Transformations "ಎಂಬ ಕೃತಿಯಲ್ಲಿ ಉಲ್ಲೇಖಿಸುತ್ತಾರೆ. ಮಧ್ಯಕಾಲೀನ ಯುಗದಲ್ಲಿನ ಮುಸಲ್ಮಾನರು ಅಷ್ಟೊಂದು ಉನ್ನತಿಗೆ ಏರಲು ಕಾರಣವಾದದ್ದು ಅವರು ಪವಿತ್ರ ಕುರಾನ್, ಪ್ರವಾದಿ ನುಡಿಗಳನ್ನು ಮತ್ತು ಇಸ್ಲಾಮಿನ ಧಾರ್ಮಿಕ ಮೌಲ್ಯಗಳನ್ನು ಅನುಸರಿಸಿ ಜೀವಿಸಿದ್ದರಿಂದಾಗಿದೆ.


ಪುಸ್ತಕ ಕೊನೆಗೊಳ್ಳುವುದು ಜಮಾಲುದ್ದೀನ್ ಅಫ್ಘಾನಿಯವರ ಒಂದು ಕಥೆಯೊಂದಿಗೆಯಾಗಿದೆ .ತನ್ನ ಮಗುವನ್ನು ಪ್ರಾಣಕ್ಕಿಂತ ಮಿಗಿಲಾಗಿ ಪ್ರೀತಿಸುವ ತಂದೆ, ಆ ಮಗು ಮಾರಕ ರೋಗಕ್ಕೆ ತುತ್ತಾಗಿ ಹಾಸಿಗೆ ಹಿಡಿದಾಗ ಏನು ಮಾಡಬೇಕೆಂದು ತಿಳಿಯದೆ ಪರಿಭ್ರಾಂತಿಯಿಂದ ಆ ತಂದೆ ಚಡಪಡಿಸುತ್ತಾನೆ, ಆಚೆ ಈಚೆ ಓಡಲು ಶುರುಮಾಡುತ್ತಾನೆ. ರೋಗ ಬಂದರೆ ಚಿಕಿತ್ಸೆ ಕೊಡಬೇಕು ಎಂಬರಿವಿಲ್ಲದ ಆ ತಂದೆ ಏನು ಮಾಡಿಯಾರು? ಪ್ರಾಣಕ್ಕೆ ಸಮಾನವಾಗಿ ಪ್ರೀತಿಸುವುದರಿಂದ ಮಾತ್ರ ಆ ಮಗುವಿನ ಪ್ರಾಣವನ್ನು ಉಳಿಸಲು ಸಾಧ್ಯವೇ?

ಅಶ್ರದ್ದೆಯ ನಿದ್ರೆಯಿಂದ ಇನ್ನೂ ಎದ್ದೇಳದ ತನ್ನ ಮುಸ್ಲಿಂ ಸಹೋದರರಿಗೆ ಎಚ್ಚರಿಕೆ ನೀಡಬೇಕೆಂಬ ಉದ್ದೇಶದಿಂದ ತಾನು ಈ ಕೃತಿ ರಚಿಸಿದ್ದಾಗಿ ಶಕೀಬ್ ಅರ್ಸಲಾನ್ ಕೊನೆಯದಾಗಿ ಹೇಳಿಕೊಳ್ಳುತ್ತಾರೆ.

Related Posts

Leave A Comment

Voting Poll

Get Newsletter