ಆತ್ಮ ಸಂತೃಪ್ತಿ ನೀಡುವ ಜೀವನವೇ ಮುಖ್ಯ
   

ಬಿಹಾರಿನ ಕಿಶನ್ ಗಂಜ್ ಜಿಲ್ಲೆಯೂ ಸೀಮಾಂಜರ್ ವಲಯವೂ ಕೇರಳದಲ್ಲಿ ಇರುವ ಮುಸಲ್ಮಾನರಿಗೆ ಚಿರಪರಿಚಿತ ಸ್ಥಳ. 40 ವರ್ಷ ಮುಂಚೆ ಮಲಪ್ಪುರಂ ಚೆಮ್ಮಾಡ್ ಎಂಬ ಗ್ರಾಮದಲ್ಲಿ ದಾರುಲ್ ಹುದಾ ಸ್ಥಾಪನೆ ಇಂದು ಉತ್ತರ ಭಾಗದ ಮುಸಲ್ಮಾನರಲ್ಲಿ ಆಕಾಂಶೆ ಮೂಡಿಸಿ, ಬಿಹಾರ್ ವಲಯದ ಬದೀಜಾನ್ ಪಂಚಾಯತಿನ ರುವಿಯ ಗ್ರಾಮದಲ್ಲಿ  ಕುರ್ತುಬ ಸ್ಥಾಪನೆಗೆ ಅಡಿಪಾಯ ಹಾಕಲು ಮುಂದಾಯಿತು. ಈ ಸ್ಥಳವು ಮಳೆ ಬಂದರೆ ಗುಂಡಿ ಬೀಳುವ ಜಾಗವಾಗಿತ್ತು. ಇದು ಚರಿತ್ರೆಯಲ್ಲಿ ಪುನರಾವರ್ತನೆಯಲ್ಲದ ಬೇರೇನೂ ಅಲ್ಲ ಎಂದು ವ್ಯಕ್ತವಾಗಿ ಹೇಳಬಹುದು.ಇದಕ್ಕೆಲ್ಲಾ ಕಾರಣ ವೆಂಟೋ ವಿದ್ಯಾಭ್ಯಾಸ ಅವಾರ್ಡ್ ಪಡೆದ ಡಾ.ಝುಬೈರ್ ಹುದವಿಯವರಾಗಿದ್ದಾರೆ. ಇವರಲ್ಲಿ ನಡೆಸಿದ ವಿಶೇಷ ಮುಖಾಮುಖಿ ಮಾತುಕತೆ ವಿವರಿಸುತ್ತಿದ್ದೇವೆ.

           ಡಾಕ್ಟರ್ ಝುಬೈರ್ ಹುದವಿ ಚೇಗನ್ನೂರ್/ಅಬ್ದುಲ್ ಹಖ್

 

 ಪ್ರಶ್ನೆ: ತಮ್ಮ ಕಾರ್ಯನಿಲುವನ್ನು ಕೇರಳದಿಂದ ಬಿಹಾರಿಗೆ ತಿರುಗಿಸಲು ಕಾರಣ ಏನು? ದಾರುಲ್ ಹುದಾ ರಿಜಿಸ್ಟ್ರಾರ್, ಎಂ ಜಿ ವಿಶ್ವ ವಿದ್ಯಾಲಯದಲ್ಲಿ ಅರೇಬಿಕ್ ವಿಭಾಗ ಸ್ಥಾಪಿಸುವುದು ಇಂತಹ ವಿಭಿನ್ನ ಅಕಾಡೆಮಿಕ್ ನೆಲೆಯಿಂದ ಉತ್ತರ ಭಾಗದಲ್ಲಿರುವ ಮುಸಲ್ಮಾನರ ಹತ್ತಿರ ಸಾಗಲು ಬದಲಾವಣೆ ತಂದ ಸಂಭವವೇನಾದರೂ ಏನು?

ಕೇರಳದಿಂದ ಹೊರಗೆ ಹೋಗುವುದು ಬಾಲ್ಯದಿಂದಲೇ ಹುಟ್ಟಿ ಬಂದ ಗುರಿ. 1992 ದಾರುಲ್ ಹುದಾ ಪ್ರಾರಂಭಿಸಿದ ದಿನದಿಂದ ಕೇರಳದ ಹೊರಗಿರುವ ಸಂಸ್ಥೆಯ ಯಾತ್ರೆಯಲ್ಲಿ  ನಾನೂ ಒಬ್ಬನಾಗಿ ಇದ್ದೆ. 2002 ರಿಂದ 2008ರ ವರೆಗೆ ಉನ್ನತ ಶಿಕ್ಷಣ ದೆಹಲಿಯ ಜವಾಹರ್ ಲಾಲ್ ವಿಶ್ವವಿದ್ಯಾಲಯದಲ್ಲಿ ಆಗಿತ್ತು. ಜೆ ಎನ್ ಯು ವಿಶ್ವವಿದ್ಯಾಲಯದಲ್ಲಿರುವಾಗ ದೈನಂದಿನ ಯಾತ್ರೆಯಲ್ಲಿ ಇಂತಹ ಸ್ಥಳಗಳಿಗೆ ಸಂದರ್ಶನ ಹಾಗೂ ದೆಹಲಿಯಲ್ಲಿರುವ ಕೆಲವು ಕಾರ್ಯಕ್ರಮದಲ್ಲಿ ಭಾಗಿಯಾಗಲು ಸಾಧ್ಯವಾಯಿತು. ಜೆ.ಎನ್.ಯು ನಿಂದ ಪುನಃ ದಾರುಲ್ ಹುದಾ ಯೂನಿವರ್ಸಿಟಿಗೆ ಮರಳಿ ಅಲ್ಲಿ ರಿಜಿಸ್ಟ್ರಾರ್ ಆಗಿ ಸೇವೆ ಸಲ್ಲಿಸುವಾಗಲು ದೆಹಲಿಯಲ್ಲಿ ನಡೆಸಿದ ಕಾರ್ಯಕ್ರಮದ ಸಾಧನೆಯ ಗುರಿ ಕಣ್ಣೆದುರು ಕಾಣುತ್ತಿತ್ತು. ಕೇರಳದ ಹೊರಗೆ ದಾರುಲ್ ಹುದಾ ನಿರ್ಮಿಸಿದ ಬಂಗಾಳ, ಅಸ್ಸಾಂ, ಹೀಗಿರುವ ಆಫ್ ಕ್ಯಾಂಪಸ್ ಗಳ ಪ್ರವರ್ತನಾ ಕಾರ್ಯದಲ್ಲಿ ನನಗೂ ಭಾಗಿಯಾಗಲು ಸಾಧ್ಯವಾಯಿತು. ಹಾಗೆಯೇ ದಾರುಲ್ ಹುದಾದ ಪೂರ್ವ ಸಂಘಟನೆಯಾದ "ಹಾದಿಯ" ನಿರ್ಮಿಸಿದ ಮದ್ರಸದ ಆರಂಭದಲ್ಲಿಯೇ ಜೊತೆ ನಿಲ್ಲಲು ಸಾಧ್ಯವಾಯಿತು.

ಇಂತಹ ಹುಡುಕಾಟದಿಂದಲೂ ನಿರಂತರವಾದ ಅಲೆದಾಟದಿಂದಲೂ ನಡೆದ ವಿದೇಶ ಯಾತ್ರೆ ಆಗಿರಬಹುದು ಈ ದಾರಿಗೆ ಕೊಂಡೊಯ್ಯಲು ಕಾರಣ. ಉತ್ತರ ಭಾಗದಲ್ಲಿ ಅಭಿವೃದ್ಧಿ ಕಾರ್ಯದಲ್ಲಿ ನಿರಂತರವಾಗಿ ಕೆಲಸ ಮಾಡಿದರೆ ಇಂದಲ್ಲ, ನಾಳೆ ಇದು ಚೇತರಿಸಿ ಅಭಿವೃದ್ಧಿಗೊಳ್ಳಬಹುದು ಎಂಬ ಚಿಂತನೆ ಮನಸ್ಸಿನಲ್ಲಿ ಚಿಮ್ಮಿತು. ಅದಕ್ಕೆ ಕಾರಣ ಹಲವಾರು ಬಾರಿ ದೆಹಲಿಯ ಗಲ್ಲಿಗಳಲ್ಲಿ ಕಂಡ ಅನುಭವಗಳು, ಅಲ್ಲಿದ್ದ ಮುಸಲ್ಮಾನರ ಅವಸ್ಥೆಯನ್ನು ಚಿಂತಿಸಿ ಮನನೊಂದ ನೋವುಗಳು, ಹಾಗೂ ಈ ಊರು ಐತಿಹಾಸಿಕವಾದ ಊರಾದರೂ ಕೆಲವು ಸಮುದಾಯಗಳು ಮರು ಹುಟ್ಟಿ ಬಂದ ಚರಿತ್ರೆಯ ಕುರಿತಿರುವ ಜ್ಞಾನ, ಮುಸ್ಲಿಂ ಸಮುದಾಯ ಮಾತ್ರವಲ್ಲದೆ ಬಾಕಿ ಸಮುದಾಯವೂ ಕೆಲಹಂತದಿಂದ ಮೇಲೆಕ್ಕೇರಿದ ಅರಿವು ಇಲ್ಲ. ಹೀಗಿರುವಾಗ ನಾವು ಪ್ರವರ್ತನಾ ರಂಗದಲ್ಲಿ  ಸಕರಾತ್ಮಕ ಕ್ರಿಯಾಶೀಲತೆಯನ್ನು ತಂದರೆ ಏನಾದರು ಗಳಿಸಲು ಸಾಧ್ಯ ಎಂಬ ಧೈರ್ಯ ಉಂಟಾಯಿತು.

 ಪ್ರಶ್ನೆ: ಈ ವಿಧ್ಯಾಭ್ಯಾಸ ಸ್ಥಾಪನೆಗೆ ಹಲವಾರು ಗಣ್ಯರು ಆರ್ಥಿಕವಾಗಿ ನೆರವು ನೀಡಬಹುದು, ಆದರೆ ಆರ್ಥಿಕ ಹೊರತು ಬೇರೆ ಯಾವುದಾದರೂ ಹಾದಿಯಲ್ಲಿ ಜನರಿಂದ ನೆರವು ಪಡೆಯಲು ಯೋಚನೆ ಇದೆಯೇ?

ಮೊದಲ ಆವಶ್ಯಕತೆ ಆರ್ಥಿಕ ಸಹಾಯವೇ ಆಗಿದೆ. ನಂತರ ನಾಯಕತ್ವ ಗುಣವಿರುವ, ಇನ್ನಿತರ ಕಾರ್ಯಗಳನ್ನೆಲ್ಲ ಬದಿಗಿಟ್ಟು  ಎಲ್ಲವನ್ನೂ ತ್ಯಜಿಸಿ ಅಧ್ವಾನಿಸುವ  ಹಲವಾರು ಜನರು ಇದಕ್ಕೆ ಬೇಕಾಗಿದೆ.

 "ಇದರ ಹಿಂದೆ ನಡೆದರೆ ಜೀವತ್ಯಾಗ ಮಾಡಬೇಕಾಗುತ್ತದೆ" ಎಂದು ಯೋಚಿಸಿ ಹಲವರು ಇದರಿಂದ ಹಿಂಜರಿಯುತ್ತಾರೆ. ಆದರೆ ಹಾಗೇನೂ ಇಲ್ಲ, ನಾವೆಲ್ಲರೂ ಆಗ್ರಹಿಸಿದ ಪದವಿಗೆ ಬಂದು ತಲುಪಿದ್ದೇವೆ. ಮುಖ್ಯ ಏನು ಅಂದರೆ “ಮಾಡುವ ಕ್ರಿಯೆಗಳು ಸಂತೃಪ್ತಿಯಿಂದ ಆಗಿರಬೇಕು" ಎನ್ನುವುದಾಗಿದೆ. ಆದ್ದರಿಂದ ಇದನ್ನು ಪ್ಯಾಷನ್ ಮಾಡುವವರು ಇಲ್ಲಿ ಬಂದು ತಲುಪುವುದೊಂದಿಗೆ "ನೈಜ ಜೀವನ ಪಡೆದರು" ಎಂದು ಹೇಳುವುದಾಗಿದೆ ಉತ್ತಮ. ಆರ್ಥಿಕವಾಗಿ ನಷ್ಟ ಹೊಂದಿದರೂ, ಸಮಯ ನಷ್ಟವಾದರೂ ಹಾಗೂ ಇನ್ನಿತರ ದುಃಖದುಮ್ಮಾನಗಳು ಜೀವನದಲ್ಲಿ ಇದ್ದರೂ ಅದ್ಯಾವುದನ್ನೂ ಲೆಕ್ಕ ಮಾಡದೆ ಇಂತಹ ವಿದ್ಯಾಭ್ಯಾಸ ಸ್ಥಾಪನೆಯನ್ನು ಉತ್ಸಾಹವಾಗಿ ಜೊತೆ ಸೇರಿಸುವವವರು ಅತ್ಯಾವಶ್ಯವಾಗಿದೆ. ಆರ್ಥಿಕವಾಗಿ ಮುಂಚೂಣಿಯಲ್ಲಿರುವವರು ಇದ್ದರೂ ಅವರನ್ನು ಇಂತಹ ಸ್ಥಾಪನೆಗಳಿಗೆ ಕರೆ ತರುವಂತಹ ಪ್ರವರ್ತನೆಗಳು ನಮ್ಮ ಭಾಗದಿಂದ ಉಂಟಾಗಬೇಕು. ಆ ವಿಧದಲ್ಲಿರುವ ಬೆಂಬಲ ಆವಶ್ಯ. ಅಂತಹ ಸಹ ಪ್ರವರ್ತಕರು ನನಗೆ ಇರುವುದರಿಂದ ಕಿಶನ್ ಗಂಜ್ ಪದ್ಧತಿ ಉನ್ನತ ರೀತಿಯಲ್ಲಿ ಸಾಗುತ್ತಿದೆ. ಕುಟುಂಬವನ್ನೇ ಇಲ್ಲಿಗೆ ಕರೆತಂದು ಇದಕ್ಕೋಸ್ಕರ ಜೀವನ ತ್ಯಾಗ ಮಾಡುವ ಸಿ. ಟಿ.ಅಬ್ದುಲ್ ಖಾದರ್ ಹಾಜಿ "ಕುರ್ತುಬಾ"ದ ಒಂದೊಂದು ಹಂತವನ್ನು ಅತಿ ಸೂಕ್ಷ್ಮವಾಗಿ ವೀಕ್ಷಿಸುವ ಸಈದ್ ಹುದವಿಯೂ ಇಲ್ಲಿ ತಲುಪಿ ನೈಜ ಜೀವನ ಆನಂದಿಸುತ್ತಿದ್ದಾರೆ.

ಪ್ರಶ್ನೆ: ಕೇರಳದಲ್ಲಿ ಪ್ರತ್ಯೇಕವಾಗಿ ಮಲಬಾರ್ ಭಾಗದಲ್ಲಿ ಇನ್ನೂ ಇಂತಹ ಧರ್ಮಸ್ಥಾಪನೆ ಪ್ರಾರಂಭಿಸುವುದರ ಬಗ್ಗೆ ಏನಾದರೂ...

ಇನ್ನೂ ಧರ್ಮಸ್ಥಾಪನೆ ಬೇಡ ಎಂದಾಗಿದೆ ನನ್ನ ಅಭಿಪ್ರಾಯ. ಇರುವ ಸ್ಥಾಪನೆಗಳ ಗುಣಮಟ್ಟವನ್ನು ಹೆಚ್ಚಿಸಿ, ಹೊಸ ಯುಗದ ಅಗತ್ಯಗಳಿಗೆ ಅನುಗುಣವಾಗಿ ಅವುಗಳಲ್ಲಿ ಬದಲಾವಣೆ ತರಬೇಕು. ನಾವು ಕೇರಳದಲ್ಲಿ ಸಮುದಾಯ ನಿಧಿಯಿಂದ ಅನೇಕ ಕೆಲಸಗಳನ್ನು ಮಾಡಿದ್ದೇವೆ. ಯುರೋಪ್‌ಗೆ ಹೋಲಿಸಬಹುದಾದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಲ್ಲಿ ಉನ್ನತ ಮಟ್ಟಕ್ಕೆ ತಲುಪಿರುವ ರಾಜ್ಯವಾಗಿದೆ ನಮ್ಮ ರಾಜ್ಯ.ಆದರೂ ನಾವು ಅದಕ್ಕೋಸ್ಕರ ಮತ್ತಷ್ಟೂ ಹಣವನ್ನು ಖರ್ಚು ಮಾಡುತ್ತಿದ್ದೇವೆ, ನಾವು ದಾನ ಕಾರ್ಯಗಳ ಹೆಸರಿನಲ್ಲಿ ನಡೆಸುತ್ತಿರುವ ಅನೇಕ ಸಂಸ್ಥೆಗಳು ಸಮುದಾಯವು ಶೀಘ್ರದಲ್ಲೇ ಸಮುದಾಯಕ್ಕೆ ಹೊರೆಯಾಗುತ್ತದೆಯೇ ಎಂದು ಯೋಚಿಸಬೇಕಿದೆ. Palliative ತರ ಕಡಿಮೆ ವೆಚ್ಚದಲ್ಲಿ ದೊಡ್ಡ ಫಲಾನುಭವಿ ಜಾಲವನ್ನು ತಲುಪುವ ವ್ಯವಸ್ಥೆಗಳ ಅವಶ್ಯಕತೆ ಇದೆ ಎಂದು ಹೇಳಬಹುದು. ಅದೇ ಸಮಯದಲ್ಲಿ, ನಮ್ಮ ಅನೇಕ ವ್ಯವಸ್ಥೆಗಳನ್ನು ಕೆಲವೇ ಜನರು ಹೆಚ್ಚಿನ ವೆಚ್ಚದಲ್ಲಿ ನಡೆಸುತ್ತಾರೆ. ಕೇರಳದ ಹೊರಗಿರುವವರು 40 ವರ್ಷ ಹಿಂದಿರುವಾಗ ನಾವು ಅನಗತ್ಯವಾಗಿ ಖರ್ಚು ಮಾಡಬಾರದು.

ಕೇರಳದಲ್ಲಿ ಹೊಸ ಸಂಸ್ಥೆಗಳನ್ನು ಆರಂಭಿಸುವವರು ಇರುತ್ತಾರೆ ಅಂತಹವರನ್ನು ಇಲ್ಲಿಗೆ ಕರೆತರಬೇಕಾಗಿದೆ. ಸಂಸ್ಥೆಯ ಅಭಿವೃದ್ಧಿಯು ಇದರಲ್ಲಿ ಪ್ರಮುಖ ಅಂಶವಾಗಿದೆ. ಶಿಕ್ಷಣ ಕೇಂದ್ರಗಳು, ಔದ್ಯೋಗಿಕ ತರಬೇತಿ ಕೇಂದ್ರಗಳಲ್ಲಿ ಸರ್ಕಾರಿ ಯೋಜನೆಗಳ ಹೆಚ್ಚು ಪರಿಣಾಮಕಾರಿ ಬಳಕೆಗಾಗಿ ರಾಷ್ಟ್ರ ನಿರ್ಮಾಣಕ್ಕೆ ಜನರನ್ನು ಸಕ್ರಿಯಗೊಳಿಸುವ ಅತ್ಯಗತ್ಯ ಯೋಜನೆಗಳು ಉತ್ತರ ಭಾಗದಲ್ಲಿ ಮಾಡಲು ತುಂಬಾ ಇದೆ. “ಜನರಿಗೆ ಹೆಚ್ಚು ಉಪಯುಕ್ತವಾದುದನ್ನು ಮಾಡುವವನು ಉತ್ತಮ ವಿಶ್ವಾಸಿ” ಈ ತತ್ವವನ್ನು ನಾವು ಇಲ್ಲಿ ಪರಿಗಣಿಸಬೇಕಾಗಿದೆ. ಕೇರಳದಲ್ಲಿ ಇಂತಹ ಅನೇಕ ಸಂಸ್ಥೆಗಳು ಮತ್ತು ಸಂಸ್ಥೆಗಳಿವೆ. ಉದಾಹರಣೆಗೆ, ಕೇರಳದಲ್ಲಿ ಫoಡಿಂಗ್ ಆರ್ಫನೇಜ್ ಇರುವ ಅನೇಕ ಸಂಸ್ಥೆಗಳಿವೆ, ಪ್ರತಿ ರಾಜ್ಯದಲ್ಲಿ ಅಥವಾ ಪ್ರತಿ ಪ್ರಮುಖ ವಲಯದಲ್ಲಿ, ಅಂತಹ ಸಂಸ್ಥೆಯೂ ಅಭಿವೃದ್ಧಿಯನ್ನು ಮಾಡಬಹುದು, ಆದರೆ ಅದು ಈಗಿರುವ ವ್ಯವಸ್ಥೆಯಿಂದ ಸಾಧ್ಯವಿಲ್ಲ. ಅದಕ್ಕೆ ಮನೋಧೈರ್ಯವೂ ಮತ್ತು ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಬೇಕು. ಆದರೆ ನಾವು ಈ ರೀತಿಯ ಬೆಂಬಲವನ್ನು ಪಡೆದರೆ, ನಾವು ಮಾನವ ಸಂಪನ್ಮೂಲಗಳೊಂದಿಗೆ ಸಂಬಂಧ ಹೊಂದಲೂ, ಅವರೊಂದಿಗೆ ಆಲೋಚನೆಗಳನ್ನು ಹಂಚಿಕೊಳ್ಳಲೂ ಮತ್ತು ಅದಕ್ಕೆ ಸರಿಯಾದ ಸ್ಥಳಗಳನ್ನು ತೋರಿಸಲೂ ಬಹುದು. ಅಂತಹ ಬೆಂಬಲಗಳು ಸಿಕ್ಕಿದರೆ ಒಳ್ಳೆಯ ರೀತಿಯಲ್ಲಿ ಡೆವೆಲಪ್ ಮಾಡಬಹುದು. ಆದರೆ ವ್ಯಾಪಾರ ಉದ್ಯಮವೂ ಬಹಳ ಮುಖ್ಯವಾದ ಭಾಗವಾಗಿದೆ. ಭಾರತವು ವಿದ್ಯೆಗೆ ಹೆಚ್ಚಿನ ಅವಕಾಶ ಹೊಂದಿದ ದೇಶವಾಗಿದೆ, ಹೀಗಾಗಿ ಈ ರೀತಿಯ ಹೆಚ್ಚಿನ ಅವಕಾಶವಿರುವ ದೇಶದಲ್ಲಿ ವ್ಯಾಪಾರವು ಅತ್ಯಂತ ಶಾಂತಿಯುತ ಸೇವಾ ಆಧಾರಿತ ಉದ್ಯಮವಾಗಿದೆ. ಇಂತಹ ಸಾಧ್ಯತೆಗಳನ್ನು ಬಿಹಾರ, ಬಂಗಾಳ, ಅಸ್ಸಾಂ ಮತ್ತು ಮಹಾರಾಷ್ಟ್ರದಲ್ಲೂ ಕಾಣಬಹುದು. ಈ ವ್ಯಾಪಾರದ ಅವಕಾಶಗಳನ್ನು ಸೇವಾ ಮನೋಭಾವ ಸೇರಿಸಿ ಉಪಯೋಗಿಸುವ ಮೂಲಕ, ಇದು ಉತ್ತಮ ಪ್ರಯೋಜನಗಳನ್ನು ತರುತ್ತದೆ.

ಪ್ರಶ್ನೆ: ಬಿಹಾರ್ ರಾಜ್ಯ ಆಯ್ಕೆ ಮಾಡಲು ಕಾರಣವಾದರೂ ಏನು ಬಿಹಾರ ಮುಸ್ಲಿಂ ಚರಿತ್ರೆ ಹೇಗಿತ್ತು?

ಹಲವಾರು ತಲೆಮಾರುಗಳಿಂದ ಹಸ್ತಾಂತರವಾದ ಬಿಹಾರ್ 2011ರಲ್ಲಿ ಬಿಹಾರ್ ನಲ್ಲಿ ನಡೆದ ಒಂದು ಸ್ಥಾಪನ ವಾರ್ಷಿಕೋತ್ಸವದಲ್ಲಿ ಅತಿಥಿಯಾಗಿ ಪಾಲ್ಗೊಳ್ಳಲು ಸಾಧ್ಯವಾಯಿತು. ಅಂದು ಶಿಕ್ಷಣದ ಪ್ರತಾಪ ಬಿಹಾರಿನ ಮುಕ್ಕು ಮೂಲೆಯಲ್ಲೂ ಅರಳಿತು. ಹಲವಾರು ಜನರಿಗೆ ವಿದ್ಯಾಭ್ಯಾಸವನ್ನು ನೀಡಿದ ಕಿಸ್ಸಾನ್ ಸ್ಕೂಲ್ ಎಂಬ ಸ್ಥಾಪನೆಯಾಗಿತ್ತು ಅದು. ಆದರೆ ಕಾಲಕ್ರಮೇಣ ಪ್ರತಾಪ ನಷ್ಟ ಹೊಂದಿತ್ತು.ಇದಾಗಿತ್ತು ಆದ್ಯಕಾಲದ ಬಿಹಾರ್.

ಈ ದೌತ್ಯಕ್ಕೆ ಹಾದಿ ತೋರಿದ ಬೇರೆ ಒಂದು ಸತ್ಯವೆಂದರೆ ಡೆಲ್ಹಯಲ್ಲಿ ಕಲಿಯುತ್ತಿದ್ದ ಸಂದರ್ಭ ಅಲ್ಲಿಯ ಕೂಲಿಕಾರ್ಮಿಕರಲ್ಲಿ ಹಲವರು ಬಿಹಾರಿಗಳು ಅದರಲ್ಲೂ ನಮ್ಮ ಸಮುದಾಯದವರೇ ಅಧಿಕ, ದೆಹಲಿಯಲ್ಲಿ ಅಸೌಕರ್ಯ ಇದ್ದರೂ ಹಲವಾರು ರೇಖೆಗಳಿಲ್ಲದ  ಮದರಸಗಳು ಹಿಫ್ಲ್ ತರಬೇತಿ ಹಾಗೂ ಇನ್ನಿತರ ಇಸ್ಲಾಮಿಕ್ ಸ್ಥಾಪನೆಯನ್ನು ನಡೆಸುತ್ತಿದ್ದರು. ಅಲ್ಲಿ ಕಲಿಯುತ್ತಿದ್ದ ವಿದ್ಯಾರ್ಥಿಗಳು ಆರ್ಮಿಯ, ಕಿಶನ್ ಗಂಜ್ ಮತ್ತು ಇನ್ನಿತರ ನಗರಗಳಿಂದ ಬಂದವರಾಗಿದ್ದರು. ಕರ್ನಾಟಕ ಹಾಗೂ ಆಂಧ್ರಪ್ರದೇಶದಲ್ಲಿ ಕೂಡ ಇಂತಹ ಸ್ಥಾಪನೆಗಳು ಇವೆ. ಅಲ್ಲಿ ನೇತೃತ್ವ ವಹಿಸುವವರು ಹಾಗೂ ದರ್ಸ್ ನಡೆಸುವವರು ಹಾಗೂ ಮುತಅಲ್ಲಿಮರೂ ಬಿಹಾರ್ ನಿಂದ ಆಗಿದೆ ಅಧಿಕವೂ. 

ಬಿಹಾರದಲ್ಲಿ ಮುಸ್ಲಿಂ ಜನಘನತೆ ಜಾಸ್ತಿ ಇದ್ದರೂ ಭಾರತದಲ್ಲಿ ಮುಸ್ಲಿಂ ಜನಘನತೆಯಲ್ಲಿ ಹಿಂದುಳಿದ ರಾಜ್ಯವಾಗಿದೆ ಬಿಹಾರ್. ಕೇರಳದಲ್ಲೂ ಮುಸ್ಲಿಂ ಇದೆಯಾ ಎಂದು ಕೇಳುವ ಅಲ್ಪ ಅಭಿಮಾನ ಪಡುವ ಉತ್ತರ ಪ್ರದೇಶದ ಜನಾಂಗಗಳನ್ನು ಅಂದು ಕಾಣಲು ಸಾಧ್ಯವಾಗುತ್ತಿತ್ತು. ಹಾಗೆ ನೋಡುವಾಗ ಬಿಹಾರಿಗಳು ಸ್ವಲ್ಪ ಕೂಡ ಸಹಕಾರ ಮನೋಭಾವ ಇರುವವರು.

2017ರಲ್ಲಿ ದಾರುಲ್ ಹುದಾ ಇಸ್ಲಾಮಿಕ್ ವಿಶ್ವವಿದ್ಯಾಲಯದಲ್ಲಿ ನಡೆದ ಸಮ್ಮೇಳನದಲ್ಲಿ ನ್ಯಾಷನಲ್ ಇಂಟರೆನೇಶನ್ಲ್ ಸಂಗಮದಲ್ಲಿ ಪಾಲ್ಗೊಳ್ಳಲು ಬಿಹಾರಿನಿಂದ ಅಬ್ಸರ್ಬ್ ಆಗಿ ಐದು ಜನರು ಬಂದರು. ಕೇರಳದಲ್ಲಿ ವಿದ್ಯಾಭ್ಯಾಸದ ಕುರಿತಾದ ಚರ್ಚೆಗಳು ನಡೆಸಿ ಅದಕ್ಕೆ ಸಂಬಂಧಪಟ್ಟ ಕೆಲವು ಸ್ಥಳಗಳನ್ನು ಅವರಿಗೆ ತೋರಿಸಲಾಯಿತು. ನಂತರ ಅವರು ಮರಳಿದರು. ಅಲ್ಲಿಯೂ ಇದೇ ತರಹದ ವಿಶ್ವವಿದ್ಯಾಲಯವನ್ನು ನಿರ್ಮಿಸಲು ನಮ್ಮನ್ನು ಸಂಪರ್ಕಿಸಿದ್ದರು, ಹಾಗೆ 2018 ಫೆಬ್ರವರಿಯಲ್ಲಿ ನಾವಲ್ಲಿಗೆ ಧಾವಿಸಿದೆವು. 40 ವಯಸ್ಸಾದರೆ ಉತ್ತರಭಾರತದೆಡೆಗೆ ಹೋಗಬೇಕೆಂದು ತೀರ್ಮಾನಿಸಿದ್ದೆ. ಆ ತೀರ್ಮಾನವು ಬಿಹಾರಿಗೆ ಮಾತ್ರ ನಿಮಿತ್ತವಾಯಿತು. ಬಿಹಾರಿನಲ್ಲಿ ಶೇಕಡ 20ರಷ್ಟು ಮುಸಲ್ಮಾನರಿದ್ದಾರೆ. ಎಲ್ಲಾ ತರದ ಜನರು ಅವರೆಡೆಯಲ್ಲಿ ಕಾಣಲು ಸಾಧ್ಯವಾಗಬಹುದು. ಆದರೆ ಪ್ರಾಥಮಿಕ ಮತ ವಿದ್ಯಾಭ್ಯಾಸ ಹಾಗೂ ಶಾಲೆಯ ಪ್ರಾಥಮಿಕ ವಿದ್ಯಾಭ್ಯಾಸದಿಂದ ಒಂದು ತರಹದ ಪ್ರೋತ್ಸಾಹ ಕೂಡ ಸಿಗದವರಾಗಿದ್ದಾರೆ ಅವರು. ಭಾರತದ ಸಂವಿಧಾನದ ಪ್ರಕಾರ ಸರ್ಕಾರ ನಿಯಮಗಳನ್ನು ಉಂಟು ಮಾಡಿದರೂ ಅದೆಲ್ಲಿಗೂ ಫಲಿಸಲಿಲ್ಲ. ಸರಕಾರಿ ಮದರಸ ಎಂಬ ಹೆಸರಲ್ಲಿ ಒಂದನೇ ತರಗತಿಯಿಂದ ಪಿಜಿಯವರೆಗೆ ಕಲಿಯಲು 60 ರಲ್ಲಿ ಆರಂಭಿಸುವ ಒಂದು ಇಂಟಗ್ರೇಟ್ ಸರ್ಕಾರ ಸಂವಿಧಾನವಿದೆ. ಇದು ಕಿಶನ್ ಗಂಜ್ನಲ್ಲಿ ಯಲ್ಲಿ 72 ಇದೆ. ಆದರೆ ಅದು ಎಲ್ಲಿಗೂ ಫಲಿಸಲಿಲ್ಲ, ಮಾತ್ರವಲ್ಲ ಮುಸ್ಲಿಂ ಸಮುದಾಯವನ್ನು ಹಿಂದಕ್ಕೆ ತಳ್ಳಿತು. ಇದಾಗಿದೆ ನನಗೆ ಈಗಿನವರೆಗೆ ಅರಿವಾದದ್ದು.ಇದು ಹಲವಾರು ಪಂಡಿತರಿಗೆ ಜನ್ಮ ನೀಡಿದ ಭೂಮಿಯಾದರೂ ಅದೇನು ಸಾಮೂಹಿಕ ಪ್ರಗತಿ ಆಡಿಸ್ತಾನವಾಗಿ ಕೆಲಸ ಮಾಡಲಿಲ್ಲ. ಉಲಮಗಳು ಉಮರಾಗಳು ಸಾಮೂಹಿಕ ನೇತೃತ್ವ ಒಳಗೊಂಡಿರುವ ಗ್ರಾಮಗಳು ಎಲ್ಲಿಯೂ ಕಾಣಲು ಸಾಧ್ಯವಿಲ್ಲ. ಇದಾಗಿದೆ ಬಿಹಾರಿನ ಪೂರ್ಣ ಚಿತ್ರ.

 ಪ್ರಶ್ನೆ: ಕುರ್ತುಬಾದ ಪ್ರವರ್ತನೆ, ಸ್ಥಾಪನೆ, ಇತಿಹಾಸ, ಅಡ್ಮಿಷನ್, ಸ್ಥಾಪನೆಯ ಅನುಬಂಧವಾದ ಇತರ ಸ್ಥಾಪನೆಗಳ ಕುರಿತು...

ಬಿಹಾರದ ಆಯ್ಕೆ ಆಕಸ್ಮಿಕ...ಅದೇ ರೀತಿ ಕುರ್ತುಬಾವನ್ನೂ ಆಕಸ್ಮಿಕವೆಂದೇ ಹೇಳಬಹುದು. ಮೊದಲು ಶಿಕ್ಷಣ ಸಂಸ್ಥೆ ಆರಂಭಿಸುವ ಯೋಜನೆ ಇತ್ತು. ಅದರಲ್ಲಿ ಮುಖ್ಯವಾಗಿ ಶಾಲೆಗಳನ್ನು ಆರಂಭಿಸಬೇಕಿತ್ತು. ನವೋದಯದಂತೆ ಉತ್ತಮ ಶಿಕ್ಷಣ ನೀಡುವ ಶಾಲೆ. ವಿದ್ಯಾರ್ಥಿಗಳು ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಹಂತದವರೆಗೆ ಸರಿಯಾದ ಶಿಕ್ಷಣವನ್ನು ಪಡೆದರೆ ಉನ್ನತ ಮಟ್ಟದಲ್ಲಿ ಸಾರ್ವಜನಿಕ ವ್ಯವಸ್ಥೆಯಲ್ಲಿ ಸ್ಪರ್ಧಿಸಲು ಸಾಧಿಸಬಹುದು ಎಂದಾಗಿತ್ತು  ನಮ್ಮ ಚಿಂತೆ... ಅದಕ್ಕಾಗಿ ಅನೇಕ ಉತ್ತಮ ಶಾಲೆಗಳನ್ನು ಪ್ರಾರಂಭಿಸುವ ಪ್ರಾಥಮಿಕ ಚಿಂತನೆಯೊಂದಿಗೆ ಆಗಿದೆ ಕಿಶನ್‌ಗಂಜ್ನ ಉದಯ.

ಒಂದು ವರ್ಷದ ನಿರಂತರ ತನಿಖೆಯಿಂದ ಇತರ ಸಂಬಂಧಿತ ಕ್ಷೇತ್ರಗಳು ಮತ್ತು ಅಂತಹ ಶಾಲೆಗಳಲ್ಲಿ ಅಭಿವೃದ್ಧಿಯ ಅಗತ್ಯವಿದೆ ಎಂದು ತಿಳಿದುಬಂದಿದೆ. ಕಾರ್ಡೋವಾ ಇನ್‌ಸ್ಟಿಟ್ಯೂಟ್ ಆಫ್ ಎಕ್ಸಲೆನ್ಸ್ ಅನ್ನು ಸೇವಾ- ಆಧಾರಿತ ಆಸಕ್ತಿಯೊಂದಿಗೆ ಸಮುದಾಯ ಮತ್ತು ಸಮಾಜವನ್ನು ಮುನ್ನಡೆಸುವ ಮತ್ತು ರಾಷ್ಟ್ರ ನಿರ್ಮಾಣ ಪ್ರಕ್ರಿಯೆಗಳಲ್ಲಿ ಇತರರನ್ನು ಸಕ್ರಿಯವಾಗಿ ಭಾಗವಹಿಸುವ ಸಾಮರ್ಥ್ಯವನ್ನು ಹೊಂದಿರುವ ತಂಡವನ್ನು ರೂಪಿಸುವ ಕಲ್ಪನೆಯೊಂದಿಗೆ ಮೊದಲು ಸ್ಥಾಪಿಸಲಾಯಿತು. ಇದು ಧಾರ್ಮಿಕ ಮತ್ತು ದೈಹಿಕ ಶಿಕ್ಷಣವನ್ನು ಸಂಯೋಜಿಸುವ ಮತ್ತು ಜನರನ್ನು ವಿವಿಧ ಕ್ಷೇತ್ರಗಳಿಗೆ ತಯಾರಿಗೊಳಿಸುವ ಯೋಜನೆಯಾಗಿದೆ.

ಶೀಘ್ರದಲ್ಲೇ, ಶಾಲೆಯ ಜೊತೆಗೆ ಅನೇಕ ಸಾಂಸ್ಥಿಕ ಸಂಕೀರ್ಣಗಳು ಬೇಕಾಗುತ್ತವೆ ಎಂದು ತೋಚಿದೆ. ನಮ್ಮ ಕೇರಳದ ಶಿಕ್ಷಣ ಪ್ರಕ್ರಿಯೆಯಲ್ಲಿ ಕಲಿತವನಾಗಿ, ಕೇರಳದ ಸಾಂಸ್ಥಿಕ ಸಂಕೀರ್ಣಗಳ ಕೊಡುಗೆಗಳ ಬಗ್ಗೆಯೂ ನಾನು ಈಗಾಗಲೇ ಅರ್ಥಮಾಡಿಕೊಂಡಿದ್ದೇನೆ. ಕೇರಳದಲ್ಲಿ ಎಲ್‌ಕೆಜಿಯಿಂದ ಕಲಿಕಾ ವ್ಯವಸ್ಥೆಗಳಲ್ಲಿ ವಿವಿಧ ರೀತಿಯ ಸೌಲಭ್ಯಗಳಿವೆ. ಧಾರ್ಮಿಕ ಅಧ್ಯಯನಗಳು, ವೃತ್ತಿಪರ ತರಬೇತಿ ಸಂಸ್ಥೆಗಳು ಮತ್ತು ಅನಾಥರಿಗೆ ವೃತ್ತಿಪರ ಸಂಸ್ಥೆಗಳು ಇತ್ಯಾದಿ. ಇಂತಹ ಹಲವು ಕಾರಣಗಳಿಂದ ಕುರ್ತುಬಾ ವೆಲ್ಫೇರ್ ಫೌಂಡೇಶನ್ ಕೂಡ ಬರುವುದು. ಕುರ್ತುಬಾದ ಅಡಿಯಲ್ಲಿ, ಅಂತಹ ಗುಣಮಟ್ಟದೊಂದಿಗೆ ವಿವಿಧ ರೀತಿಯಲ್ಲಿ ಮುನ್ನಡೆಸಬಲ್ಲ ಸಾಮಾಜಿಕ ಎಂಜಿನಿಯರ್ ಆಗುವ ಪರಿಕಲ್ಪನೆಯೊಂದಿಗೆ ಈ ವ್ಯವಸ್ಥೆಯನ್ನು ರೂಪಿಸುವುಸಾಗಿತ್ತು ಗುರಿ. ನಾವು ಈಗ ಇದೇ ಮಾದರಿ ವನಿತಾವೃತ್ತಿಯೂ ಇರಲು ಅತಿಯಾಗಿ ಬಯಸುತ್ತೇವೆ.

ಸಂಸ್ಥೆಗೆ ಈಗ ಐದು ವರ್ಷ ತುಂಬಿದೆ. ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಂಡು ಕ್ಯಾಂಪಸ್ ರಚನೆಯಾಯಿತು. ಅದಕ್ಕೆ ಸಂಬಂಧಿಸಿದಂತೆ, ಅನೇಕ ಜನರು ಮಸೀದಿ ನಿರ್ಮಿಸಲು ಆಸಕ್ತಿ ಹೊಂದಿದ್ದಾರೆ. ಮಸೀದಿ ನಿರ್ಮಿಸುವುದಕ್ಕಿಂತ ಕಲಿಕೆಯ ಸೌಲಭ್ಯಗಳನ್ನು ನಿರ್ಮಿಸುವುದು ಆದ್ಯತೆಯಾಗಿದೆ ಎಂಬ ಚಿಂತನೆಯೊಂದಿಗೆ ತೊಡಗಿಸಿಕೊಳ್ಳಬಹುದಾದ, ಜನರ ಬೆಂಬಲದೊಂದಿಗೆ ಮಾಡಿದ ಈ ಸಂಸ್ಥೆಗಳ ಮೂಲಕ ನಮ್ಮ ಗುರಿಯನ್ನು ಸಾಧಿಸಲು ಅದು ಪ್ರಯತ್ನಿಸುತ್ತಿದೆ. ಮಸೀದಿಗಳಲ್ಲು, ಧಾರ್ಮಿಕ ಸಂಸ್ಥೆಗಳಲ್ಲಿ, ಪ್ರಾಥಮಿಕ ಶಾಲೆಗಳಲ್ಲಿ ಮತ್ತು ಇತರ ಧಾರ್ಮಿಕ ಶಿಕ್ಷಣ ಕೇಂದ್ರಗಳಲ್ಲಿ ಕಲಿಸುವ ಮಾನವ ಸಂಪನ್ಮೂಲಗಳನ್ನು ರಚಿಸುವುದು ಗುರಿಯಾಗಿದೆ. ಅವರು ಇಮಾಮತ್ ನಿಲ್ಲಲು ಮತ್ತು ಮೂಲಭೂತ ಧಾರ್ಮಿಕ ಕಾರ್ಯಗಳನ್ನು ಮುನ್ನಡೆಸಲು ಬಲ್ಲರು. ಇದು ನಮ್ಮ ಸಮುದಾಯ ಇರುವವರೆಗೂ ಆವಶ್ಯಕವಾಗಿದೆ.. 

ಈ ಮೂಲಕ ಕುರ್ತುಬಾ ಇನ್‌ಸ್ಟಿಟ್ಯೂಟ್ ಆಫ್ ಅಕಾಡೆಮಿಕ್ ಎಕ್ಸಲೆನ್ಸ್‌ನಷ್ಟು ಆಳವಾಗಿ ಅಲ್ಲದಿದ್ದರೂ, ಅಗತ್ಯ ಜ್ಞಾನವನ್ನು ಪಡೆದ ಹಲವಾರು ಜನರನ್ನು ಈ ಕ್ಷೇತ್ರಗಳಿಗೆ ತರಲು ಸಾಧ್ಯವಾಯಿತು.  ಸಂಸ್ಥೆಯು ತಮ್ಮ ಪ್ರಸ್ತುತ ಪರಿಸ್ಥಿತಿಯಿಂದ ಉತ್ತಮ ಸೌಲಭ್ಯಗಳನ್ನು ಪಡೆಯುವ ವ್ಯವಸ್ಥೆಯನ್ನು ಪ್ರಸ್ತಾಪಿಸುತ್ತದೆ. ಭವಿಷ್ಯದಲ್ಲಿ, ಇದೇ ರೀತಿಯ ಕೋರ್ಸ್‌ಗಳನ್ನು ಮಾಡುತ್ತಿರುವವರು ಮತ್ತು ಈ ಸಂಸ್ಥೆಗಳಿಂದ ನಾವು ಅಧ್ಯಯನ ಮಾಡಲು ಉದ್ದೇಶಿಸಿರುವ ಮಾನದಂಡಗಳನ್ನು ಪೂರೈಸುವ ಮತ್ತು ಸಂಸ್ಥೆಗೆ ಎಲ್ಲರೂ ಬಂದು ಕಲಿಯಬೇಕೆಂಬ ಬಯಕೆ ಇದೆ. ಅದಕ್ಕಾಗಿ ಪ್ರಯತ್ನಗಳು ನಡೆಯುತ್ತಿವೆ, ಇನ್ಶಾ ಅಲ್ಲಾ.

ಕುರ್ತುಬಾ ಅಡಿಯಲ್ಲಿ ವಿಶೇಷ ಶಾಲೆಗೆ ಕಟ್ಟಡ ನಿರ್ಮಾಣ ನಡೆಯುತ್ತಿದೆ. ಕುರುಡು, ಕಿವುಡ, ಆಟಿಸಂ, ಬುದ್ಧಿಮಾಂದ್ಯ ಅಥವಾ ಸೆರೆಬ್ರಲ್ ಪಾಲ್ಸಿಗೆ ಯಾವುದೇ ಶಿಕ್ಷಣದ ವ್ಯವಸ್ಥೆ ಇಂದು ಇಲ್ಲ. ಆ ಕೊರತೆಯನ್ನು ನೀಗಿಸಲು ಭಾರಿ ಪ್ರಯತ್ನ ನಡೆಯುತ್ತಿದೆ. “ವಡಗರ ತಣಲ್” ಸಹಯೋಗದಲ್ಲಿ ವಿಶೇಷ ಕರ್ಯಗಾರ ಆರಂಭಿಸಲು ಪ್ರಯತ್ನಿಸುತ್ತಿದೆ. ಅದನ್ನು ನಾವು ಬಹಳ ಬೇಗ ಮಾಡಬೇಕಾದ ಕೆಲಸವೂ ಆಗಿದೆ. ನಾನು ಇಲ್ಲಿಗೆ ಬಂದಾಗ ದೊಡ್ಡ ಕಷ್ಟವೆಂದರೆ ಅಂತಹ ಸಂಸ್ಥೆ ಇರಲಿಲ್ಲ. ಈಗ ನಾವು ಆ ಕನಸಿನ ಕಡೆಗೆ ನಡೆಯುತ್ತಿದ್ದೇವೆ. ಅಲ್ಹಮ್ದುಲಿಲ್ಲಾಹ್.

 ಪ್ರಶ್ನೆ: ಕುರ್ತಾಬಾ ವೆಲ್ಫೇರ್ ಫೌಂಡೇಶನ್ನ ಗುರಿ ಬಿಹಾರ್ ಮಾತ್ರವೇ ಅಥವಾ ಅದನ್ನು ಇತರ ರಾಜ್ಯಗಳಿಗೂ ವಿಸ್ತರಿಸುವುದೇ?

ಈಗ ಬಿಹಾರದತ್ತ ಗಮನ ಹರಿಸಲಾಗಿದೆ. ಭಾರತದ ವಿವಿಧ ಪ್ರದೇಶಗಳ ಜನರು, ಶೈಕ್ಷಣಿಕವಾಗಿ  ನಿರಂತರ ಸಂಪರ್ಕದಲ್ಲಿದ್ದಾರೆ. ಇತ್ತೀಚೆಗೆ ಯೂತ್ ಲೀಗ್ ಇದರ ಚಿಂತನ್ ಮಿಲನ್ ಗೆ ಹೋದಾಗಲೂ ಹಲವರು ಸಂಪರ್ಕಿಸಿ, ಹರಿಯಾಣದ ನುಹ್ ಜಿಲ್ಲೆ, ಕಾನ್ಪುರ್, ಮಹಾರಾಷ್ಟ್ರದ ನಾರ್, ಕಾಶ್ಮೀರ, ಜಾರ್ಖಂಡ್ ಮತ್ತು ಇತರ ಅನೇಕ ಸ್ಥಳಗಳಿಗೆ ಸೇರಿದ ಜನರು ಅನೇಕ ಯೋಜನೆಗಳು ಮತ್ತು ಕೆಲಸಗಳನ್ನು ಮಾಡಲು ಬೇಡಿಕೆಯನ್ನು ಇಟ್ಟಿದ್ದಾರೆ. ವರಣಾಸಿ ವಿಮಾನ ನಿಲ್ದಾಣದ ಬಳಿ 10 ಎಕರೆ ಜಾಗದಲ್ಲಿ ಶಿಕ್ಷಣ ಸಂಸ್ಥೆ ಸ್ಥಾಪಿಸಲು ಆಸಕ್ತರು ಇದ್ದಾರೆ. ಭಾರತದಲ್ಲಿ ಒಟ್ಟು 100 ಶಾಲೆಗಳನ್ನು ಹೊಂದುವ ಕನಸನ್ನು ಜನರಿಗೆ ಹೇಳುತ್ತಾ ಅದನ್ನು ಸಾಧಿಸುವ ಹಂತಕ್ಕೆ ಜನರನ್ನು ತರುವುದು ಇದರ ಉದ್ದೇಶವಾಗಿದೆ. ಇದನ್ನೆಲ್ಲ ಮುನ್ನಡೆಸಬಲ್ಲ ಮಾನವ ಸಂಪನ್ಮೂಲ ಸೃಷ್ಟಿಸುವುದು ಮುಖ್ಯ. ಮುಂಚೂಣಿಯಲ್ಲಿರುವ ಹೆಚ್ಚಿನ ಜನರನ್ನು ಕಂಡುಹಿಡಿದರೆ ಹೆಚ್ಚು ಯೋಜನೆಗಳನ್ನು ಅಭಿವೃದ್ಧಿಪಡಿಸಬಹುದು. ಪ್ರಾಮಾಣಿಕವಾಗಿ ಕೆಲಸ ಮಾಡುವವರಿಗೆ ಹಲವು ಸಾಧ್ಯತೆಗಳಿವೆ.

ಈ ಸಮುದಾಯದ ಅಭಿವೃದ್ಧಿಯು ಸಾಮಾಜಿಕ ಅಭಿವೃದ್ಧಿ ಮತ್ತು ರಾಷ್ಟ್ರೀಯ ಅಭಿವೃದ್ಧಿಗೆ ಕಾರಣವಾಗಿದೆ. ಕನಿಷ್ಠ ಪಕ್ಷ ನಾವು ಸಮುದಾಯದ ಅಭಿವೃದ್ಧಿಯ ಭಾಗವಾಗಬೇಕು, 90 ಲಕ್ಷ ಮುಸ್ಲಿಮರನ್ನು ಹೊಂದಿರುವ ಕೇರಳದಲ್ಲಿ ನಾವು ನಮ್ಮ ಎಲ್ಲಾ ಚಟುವಟಿಕೆಗಳನ್ನು ಮಾಡುತ್ತೇವೆ. ಕೇರಳದ ಹೊರಗೆ ಅನೇಕ ಶಿಕ್ಷಣ ಸಂಸ್ಥೆಗಳಿಗೆ ಅವಕಾಶಗಳಿವೆ ಮಾತ್ರವಲ್ಲ, ಅವು ಅಲ್ಲಿ ಅತ್ಯಗತ್ಯವಾಗಿದೆ.. ಸಮುದಾಯವು ಆ ಅಗತ್ಯಗಳಿಗೆ ಕನಿಷ್ಠ ಸಣ್ಣ ರೀತಿಯಲ್ಲಿ ಕೊಡುಗೆ ನೀಡಲು ಪ್ರಯತ್ನಿಸುತ್ತಿದೆ..

     

                                            ಅನುವಾದಕರು:ಸಫಾದ್ ಸೋಮಂತಡ್ಕ ,

                                                                        ತಮೀಮ್ ಪರ್ಲಡ್ಕ

   

         

Related Posts

Leave A Comment

Voting Poll

Get Newsletter