ಗದಗ ಜಿಲ್ಲೆ ಇತಿಹಾಸ; ನಯ ಸ್ವಭಾವದ ನಾಯಕ ದೂದ್ ನಾನಾ (ಖ.ಸಿ)
ಗದಗ ಜಿಲ್ಲೆ ಇತಿಹಾಸ; ನಯ ಸ್ವಭಾವದ ನಾಯಕ ದೂದ್ ನಾನಾ (ಖ.ಸಿ)

ಕರ್ನಾಟಕದ ಗದಗ ಜಿಲ್ಲೆಯು , ಕವಿ ಸಾಧು- ಸಂತರ ಜನ್ಮಭೂಮಿಯಾಗಿದ್ದು ಸಾಮರಸ್ಯದ ಸೌಧಕ್ಕೆ ಸಾಕ್ಷಿಯಾದ ನಾಡು. ಇಲ್ಲಿನ ಶಿರಹಟ್ಟಿ ತಾಲೂಕಿನ ಲಕ್ಷ್ಮೇಶ್ವರ ಎಂಬ ಪಟ್ಟಣದಲ್ಲಿ ಪ್ರಸಿದ್ಧ ಸೂಫಿ ಸಂತರಾದ ಹಜರತ್ ದೂದ್ ನಾನ ರವರ ದರ್ಗಾವಿದೆ. ಇತಿಹಾಸ ಪ್ರಸಿದ್ಧ ದರ್ಗವು ಎಲ್ಲಾ ಸಮುದಾಯದವರ ಆಶಾ ಕೇಂದ್ರವಾಗಿದೆ. ಇಲ್ಲಿ ಆದಿಕವಿ ಪಂಪನಿಂದ ಹಲವಾರು ಕನ್ನಡದ ಕವಿಗಳು ಈ ನಾಡಿನಲ್ಲಿ ಅತ್ಯಂತ ಪರಿಪಕ್ಷವಾದ ಶುದ್ಧ ಕನ್ನಡ (ತಿರುಳ್ಗನ್ನಡ) ಭಾಷೆಯನ್ನು ಮಾತನಾಡುತ್ತಿದ್ದರು. ಇಲ್ಲಿಗೆ ಬಾದಾಮಿ ಚಾಲುಕ್ಯರು ಬಂದು ಹಲವಾರು ದೇವಾಲಯಗಳನ್ನು ಕಟ್ಟಿ ಬೆಳೆಸಿದರು.

 

ಬಾದಾಮಿ ಚಾಲುಕ್ಯರ ಹೆಜ್ಜೆ ಗುರುತಿನಿಂದ ಹಿಡಿದು ರಾಷ್ಟ್ರಕೂಟರು, ಕಲ್ಯಾಣ ಚಾಲುಕ್ಯರು, ಕಳಚೂರಿಗಳು, ಸೇವುಣರು, ಹೊಯ್ಸಳರು ಕಡೆಯದಾಗಿ ವಿಜಯನಗರದ ವರೆಗಿನ ಎಲ್ಲಾ ಪ್ರಮುಖ ರಾಜನ ರಾಜಮನೆತನಗಳು ಇಲ್ಲಿ ಆಳ್ವಿಕೆ ನಡೆಸಿವೆ. ಇದು ಗದಗ ಜಿಲ್ಲೆಯ ಇತಿಹಾಸದ ಸಂಕ್ಷಿಪ್ತ ಮಾತ್ರ. ಇಲ್ಲಿನ ಇತಿಹಾಸ ಅಪಾರವಾದದ್ದು. ಹಿಂದೂ ಮುಸ್ಲಿಂ ಪರಸ್ಪರ ಸಂಘರ್ಷಕ್ಕೊಳಗಾಗದೆ ಸಾಗಿದ್ದರು. ಇನ್ನೂ ಇಲ್ಲಿನ ಮುಸ್ಲಿಂ ಆಳ್ವಿಕೆಯ ಪ್ರಮುಖ ಅಭಿವೃದ್ದಿಗಳು. ಲಕ್ಷ್ಮೇಶ್ವರ ತಾಲೂಕಿಗೆ ಬಂದು ಜನರ ಮನಸ್ಸನ್ನು ಶಾಂತಿಯ ಕಡೆಗೆ ಸೆಳೆದ ದೂದ್ ನಾನಾ ಎಂಬ ಹೆಸರಲ್ಲಿ ಪ್ರಸಿದ್ಧವಾದ ದೂವ್ ಪೀರ್ ರವರ ಕುರಿತಾಗಿದೆ ವಿವರಿಸುವುದು. ಇಲ್ಲಿ ಆದಿಲ್ ಶಾಹಿ ಯವರ ಕಾಲದಲ್ಲಿ ಕಟ್ಟಿಸಿದ ಜುಮಾ ಮಸೀದಿ ಇಂದು ಪ್ರಸಿದ್ಧವಾಗಿ ಆಕರ್ಷಣೀಯವಾಗಿ ನಿಂತಿದೆ.

 

ಇಲ್ಲಿನ ಒಂದೇ ಕಲ್ಲಿನಲ್ಲಿ ಮಾಡಿದ ಸರವಣಿಗೆ ಕುತೂಹಲಕರ. ಇದೀಗ ದೂದ್ ನಾನಾ ರವರ ಸಂಕ್ಷಿಪ್ತ ಆತ್ಮ ಚರಿತ್ರೆಯನ್ನು ಮುಂದಿಡೊಣ. ಇವರ ತಂದೆಯ ಹೆಸರು ಸಯ್ಯದ್ ಶಾಹ್ ಮಹಮ್ಮದ್ ಖಾದಿರಿ. ಇವರ ತಂದೆ ಬಗ್ದಾದ್ ನಿಂದ ವಲಸೆ ಬಂದರು. ನಂತರ ಕರ್ನಾಟಕದ ತುಮಕೂರು ಜಿಲ್ಲೆಯಿಂದ ಮದುವೆಯಾದರು. ಅಲ್ಲಿ ಅವರಿಗೆ ಒಂದು ಮಗು ಜನಿಸಿತು.. ಅವರೇ ದೂದ್ ನಾನಾ ತುಮಕೂರಿನಿಂದ ಅಂಗರ್ ಕಟ್ಟೆ ಎಂಬ ಸ್ಥಳಕ್ಕೆ ಪಾಲಾಯನಗೈದರು. ಅಲ್ಲಿ ಅವರಿಗೆ ಜನರು ಭೂಮಿಯನ್ನು ಬಹುಮಾನವಾಗಿ ನೀಡಿದ್ದರು. ನಂತರ ಅವರ ಅಜ್ಜನ ಆತ್ಮೀಯ ಜೀವನವನ್ನು ನೋಡಿ ತಿಮ್ಮಕ್ಕಟ್ಟೆಗೆ ಬದಲಾದರು.

 

ಹಝ್ರತ್ ದೂದ್ ನಾನಾ ಇವರಿಗೆ ಮೂರು ಮುರ್ಷಿದ್ ಗಳಿದ್ದರು. ಆದರೆ ಈ ಮೂವರು ಮದುವೆಯಾಗಲಿಲ್ಲ ಏಕೆಂದರೆ ದೂದ್ ನಾನಾ ಕೂಡಾ ಮದುವೆಯಾಗಲಿಲ್ಲ. ನಂತರ ಕರ್ನಾಟಕದ ಬಂಕ ಪುರ್, ಸವಣೂರು, ಅಲ್ಲಿಂದ ಹುಬ್ಬಳ್ಳಿಯಲ್ಲಿರುವ ಮಸ್ಸಾಲೀ ಶಾ ಭಾವ ರಹ್ಮತುಲ್ಲಾ ಅವರ ದರ್ಗಾದ ಬಳಿ ವಾಸಿಸಲು ಅವಕಾಶ ಲಭಿಸಿತು. ಅಲ್ಲಿ ಒಂದು ಚಿಕ್ಕ ಮದರಸ ನಿರ್ಮಿಸಿ ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದರು. ಇಸ್ಲಾಂ ದೀನಿನಲ್ಲಿ ಅತೀವ ಅತ್ಮೀಯತೆಯನ್ನು ಕಂಡ ಕುಟುಂಬಸ್ಥರು ಇವರನ್ನು ಮನೆಯಿಂದ ಹೊರಕ್ಕೆ ತಳ್ಳಿದರು. ಕುರ್ ಆನ್ ನಲ್ಲಿ ಒಂದು ವಾಕ್ಯವಿದೆ; ಆತ್ಮೀಯತೆಯ ಹೆಜ್ಜೆ ಹಾಕುತ್ತಿದ್ದಂತೆ ಆಕ್ರಮಗಳು ಅಧಿಕವಾಗುತ್ತಲೇ ಇರುತ್ತದೆ. ಅದನ್ನು ಅಧಿಜಿಯಸಿದವರಿಗೆ ಈ ಭೂಮಿಯಲ್ಲಿ ವಾಸಿಸಲು ಸ್ಥಳ ಹಾಗೂ ಪರಲೋಕದಲ್ಲಿ ಅದಕ್ಕೆ ತಕ್ಕ ಪ್ರತಿಫಲವನ್ನು ನೀಡಲಾಗುವುದು ಎಂದು.

 

ಒಂದು ದಿವಸ ದೂದ್ ನಾನಾ ಆ ದರ್ಗಾದಲ್ಲಿ ನೆಲೆಸುತ್ತಿದ್ದಾಗ ಅವರ ಬಳಿಗೆ ಅಲ್ಲಿಗೆ ಅಬ್ದುಲ್ ರಜಾಕ್ ಎಂಬ ವ್ಯಕ್ತಿ ಆಗಮಿಸುತ್ತಾರೆ, ಇವರನ್ನು ಕುಟುಂಬದಿಂದ ಹೊರಗೆ ಹಾಕಿರುತ್ತಾರೆ. ಏಕೆಂದರೆ ಬರಿ ಮನೆಯವರಿಗೆ ಇಸ್ಲಾಮಿಕ್ ಹಾದಿಯಲ್ಲಿರುವುದನ್ನು ಸಹಿಸುವುದಕ್ಕೆ ಆಗುತ್ತಿರಲಿಲ್ಲ. ಇವರು ದೂದ್ ನಾನಾರ ಬಳಿ ಮೂರು ದಿವಸ ತಂಗಿದ್ದರು. ಅಲ್ಲಿಂದ ಅವರ ಮನಸ್ಸಿನಲ್ಲಿ ಪ್ರೀತಿ ಹುಟ್ಟಿ ಚಿಗುರುಡೆಯಿತು. ಅವರಿಗೆ ದೂದ್ ನಾನ ರವರ ಜೀವನ ಆಕರ್ಷಣೀಯವಾಗಿ ಕಂಡಿತು, ಹೀಗಿರುವಾಗ ಹೆಂಡತಿ ಮಕ್ಕಳನ್ನು ಬಿಟ್ಟು ಬೇಸರದಲ್ಲಿರುವ ರಜಾಕ್ ಬೇಗ್ ರವರನ್ನು ಕಂಡಾಗ ಇವರಿಗೆ ಬೇಸರವಾಗಿ ಕೇಳಿದರು; " ನೀನು ಒಂದು ಸಲ ಮನೆಗೆ ಹೋಗು" ಆಗ ರಜಾಕ್ ಬೇಗ್ ಹೇಳಿದರು " ನಾನು ಮನೆಗೆ ಹೋದರೆ " ಎ೦ದು ಮರುತ್ತರ ನೀಡಿದರು. ಏನಾದರೂ ಆಗಲಿ ತನ್ನ ಮನೆಯವರನ್ನು ಒಳ್ಳೆಯ ಹಾದಿಗೆ ತರಲು ಮನೆಗೆ ಧಾವಿಸಿದರು. ಪುನಃ ಮನೆಯವರನ್ನು ಉದಾತ್ತ ಹಾದಿಗೆ ಕರೆದಾಗ ಮನೆಯವರು ಅವಹೇಳನೆ ಮಾಡಿ, ದೂದ್ ನಾನಾ ರವರ ಕುರಿತು ಅಸಭ್ಯ ಮಾತನಾಡಿದರು. ಪುನಃ ದೂದ್ ನಾನಾ ರವರ ಬಳಿಗೆ ಹೋಗಿ ಅವರೊಡನೆ ವಾಸ ಮುಂದುವರಿಸಿದರು. ಹಲವಾರು ದಿನಗಳು ಕಳೆದವು, ಕೌಟುಂಬಿಕ ಸಾಂಗತ್ಯವಿಲ್ಲದ ಅಬ್ದುಲ್ ರಜಾಕ್ ರವರಿಗೆ ಒಂದು ವಾರ್ತೆ ತಲುಪಿತು. ಅದು ಅವರ ಕುಟುಂಬದವರೇ ಬಂದು ವಿಷಯವನ್ನು ವಿಸ್ತಾರವಾಗಿ ಹೇಳಿದರು. ಮನೆಯಿಂದ ಹೊರ ಹಾಕಿದವರು ಹೊರ ಹಾಕಲ್ಪಟ್ಟವನ ಮುಂದೆ ಬೇಡುತ್ತಿದ್ದಾರೆ. ಅಬ್ದುಲ್ ರಜಾಕ್ ಬೇಗ್ ರವರ ಪತ್ನಿಯ ಮುಖದಲ್ಲಿ ಮುಳ್ಳಿನ ಆಗಿರುವ ವಸ್ತು ಮೊಳಕೆಯಾಗಿದೆ. ಮುಖ ಸಂಪೂರ್ಣವಾಗಿ ವಿಕೃತವಾಗಿತ್ತು. ಅಬ್ದುಲ್ ರಜಾಕ್ ಬೇಗ್ ಗೆ ಕುಟುಂಬದವರಲ್ಲಿ ಹೇಳಲಾಗದ ದುಃಖವಿತ್ತು. ನಂತರ ಹೇಳಿದರು ತಾವು ದೂದ್ ನಾನಾ ರವರ ಕುರಿತ ಅಸಭ್ಯ ಮಾತಾಡಬಾರದಿತ್ತು. ತಮ್ಮ ತಪ್ಪಿಗೆ ತಾವು ಖಂಡಿತ ದೂದ್ ನಾನಾ ರಲ್ಲಿ ಕ್ಷಮೆ ಕೇಳಬೇಕು. ಅವರು ದೂದ್ ನಾನಾ ರವರ ಬಳಿಗೆ ಹೋಗಿ ತಮ್ಮ ದುಃಖ ದುಮ್ಮಾನವನ್ನು ವ್ಯಕ್ತಪಡಿಸಿದರು. ಆದರೆ ದೂದ್ ನಾನಾರವರು ತನಗೆ ಯಾವುದೇ ಬೇಸರವಿಲ್ಲ ಎಂಬ ನಯ ಸ್ವಭಾವವನ್ನು ತೋರಿಸಿಕೊಟ್ಟರು, ನಂತರ ದೂದ್ ನಾನಾ ರವರ ಹಸ್ತವನ್ನು ರಜಾಕ್ ಬೇಗ್ ರವರ ಧರ್ಮಪತ್ನಿಯ ಮುಖಕ್ಕೆ ಸವರಿದಾಗ ಮುಖ ಯತಾ ಸ್ಥಿತಿಗೆ ಬದಲಾಯಿತು. ಜನರಿಗೆ ಈ ಘಟನೆಯು ಅತ್ಯಾಕರ್ಷಕವಾಯಿತು. ದೂದ್ ನಾನಾ ರವರನ್ನು ಲಕ್ಷ್ಮೇಶ್ವರದಲ್ಲೇ ತಂಗಳು ಹೇಳಿದರು. ಹಾಗೆ ಜನಮನಸ್ಸಿನೆಡೆಯಲ್ಲಿ ಸ್ಥಾನ ಪಡೆದು ಪ್ರಸಿದ್ಧರಾದರು.

 

ಇವರ ಜೀವನವನ್ನು ನಮ್ಮ ದೈನಂದಿನ ಜೀವನದಲ್ಲಿ ಕೊಂಡು ಬರಬೇಕು. ಜೀವನದಲ್ಲಿ ಎಷ್ಟೇ ಕಷ್ಟಕರ ಸಂದರ್ಭ ಬಂದರೂ ಆ ಪಟ್ಟಪಾಡುಗಳನ್ನು ಸಹಿಸಿ ಮುಂದೆ ಹೆಜ್ಜೆ ಇಡುತ್ತಾ ಹೋಗಬೇಕು ಎನ್ನುವುದಕ್ಕೆ ದೂದ್ ನಾನ ರವರೆ ಉದಾತ್ತ ಉದಾಹರಣೆ. ಈ ಭಾರತ ದೇಶದಲ್ಲಿ ಜಾಲಿಯ ಮರವನ್ನು ಕಡಿದು, ಶಾಂತಿ ಸೌಹಾರ್ದತೆಯ ತೋಟವನ್ನು ಬೆಳೆಸಬೇಕು. ಏಕೆಂದರೆ ಜಾಲಿಯ ಮರದಲ್ಲಿ ಉಪ್ಪದ್ರವಲ್ಲದೆ ಉಪಕಾರವೇನೂ ಇಲ್ಲ. ಹೊತ್ತಿ ಉರಿಯುವ ಕರ್ನಾಟಕಕ್ಕೆ ಹಚ್ಚ ಹಸುರಾದ ಸೊಬಗನ್ನು ತೊಡಿಸಿದ್ದರೆ ಈ ಭಾರತ ಹೆಮ್ಮೆಪಡುವ ಸುಂದರ ರಾಜ್ಯವಾಗಿ ಹೊರಹೊಮ್ಮುತ್ತಿತ್ತು. ಆದರೆ ಕೆಲವು ಕಾಟಕಾಯ ಕಿಂಕರರಿಂದ ರಾಜ್ಯ ಹದಗೆಡುತ್ತಿದೆ. ಯಾವುದಕ್ಕೂ ಸ್ವಯೋಚಿಸದೆ ಹಿಂದಿನ ಇತಿಹಾಸ ಮಹಾತ್ಮರ ಜೀವನ ಚರಿತ್ರೆಯನ್ನು ಕಲಿತು ಶಾಂತಿ ಸೌಹಾರ್ದತೆಯ ಬೆಳಕನ್ನು ಪಸರಿಸಬೇಕು.

Related Posts

Leave A Comment

Voting Poll

Get Newsletter