ವಾರದಲ್ಲಿ ದ್ವಿದಿನದ ವ್ರತಾನುಷ್ಠಾನ ಅಲ್ಶಿಮೆಸ್ಸಿಗೆ ಪರಿಹಾರವೆಂದು ವಿಶ್ಲೇಷಣೆ

ವಾರದಲ್ಲಿ ಎರಡು ದಿನವಿರುವ ವ್ರತಾನುಷ್ಠಾನವು ಅಲ್ಶಿಮೆಸ್ಸ್‌ ಸ್ಕೀಸೋಫ್ರಾನಿಯ ಮೊದಲಾದ ಮಾನಸಿಕ ರೋಗಗಳಿಗೆ ಪರಿಹಾರ ಕಾಣಬಹುದೆಂದು ಆಧುನಿಕ ವಿಶ್ಲೇಷಣೆಯು ಸಾರಿ ಹೇಳುತ್ತಿದೆ. ಚಿಕಾಗೋದಲ್ಲಿ ಇಲ್ಲಿನೋಯ್ಡ್‌ ವಿಶ್ವವಿದ್ಯಾಲಯದ ಸಂಶೋಧಕರ ಪರಿಶ್ರಮವಾಗಿತ್ತು ಇದರ ಹಿಂದೆ. ಅಲ್ಶಿಮಸ್ಸ್‌ ರೋಗ ಬರುವುದರಲ್ಲಿ ಆಹಾರಕ್ರಮಕ್ಕೆ ದೊಡ್ಡ ಪಾಲು ಇದೆಯೆಂದು ವಿಶ್ವವಿದ್ಯಾಲಯದ ಪೋಷಕವಿಭಾಗ ಪ್ರೊಫೆಸರ್‌ ಕ್ರಿಸ್ಟ ವರಡಿರವರ ನೇತ್ರತ್ವದಲ್ಲಿ ನಡೆದ ಪ್ರಯೋಗದಲ್ಲಿ ಸಂಶೋಧಿಸಲಾಯಿತು. ಅಜೀರ್ಣ, ಮತಿವಿಕಲ್ಪ, ಕ್ಯಾನ್ಸರ್ ಮೊದಲಾದ ಮಹಾಮಾರಿ ರೋಗಗಳಿಗೆ ಎರಡು ದಿನದ ಉಪವಾಸ ಗುಣಕರವಾಗಿದೆಯೆಂದು ಸಂಶೋಧಕರು ತಿಳಿಸಿದ್ದಾರೆ.

ಯುಐಸ್‌ ನ್ಯಾಶನಲ್‌ ಇನ್ಸ್ಟಿಟ್ಯೂಟ್‌ ಆಫ್‌ ಎಯ್‌ ಜೀಂಗ್‌ ಇಲಿಗಳಲ್ಲಿ ಇಂತಹ ಪ್ರಯೋಗಗಳನ್ನು ಪರೀಕ್ಷಿಸಿ ಸಾಕ್ಷಿ ಮುಖಾಂತರ ವ್ಯಕ್ತಪಡಿಸಿದರು. ವಿಶ್ವದಲ್ಲಿ 35 ಮಿಲಿಯನ್‌ ವಿಭಾಗಗಳಲ್ಲಿ ಹರಡುತ್ತಿರುವ ಅಲ್ಶಿಮೇಸ್ಸಿಗೆ ಇದುವರೆಗೆ ಬೇಕಾದ ಪರಿಹಾರ ಸಿಗದೆ ಇರುವ ನಿಟ್ಟಿನಲ್ಲಿ, ಜೋಯ್ಸ ಹೋಪ್ಕಿನ್ಸ್‌ ವಿಶ್ವವಿದ್ಯಾಲಯದಲ್ಲಿ ನ್ಯೂರೋವಿಜ್ಞಾನ ಪ್ರೊಫೆಸರ್‌ಗಳಿಗೆ ಮಾಟ್ಟ್‌ಸನ್‌ ಈ ವಿಷಯಗಳಲ್ಲಿ ಹೊಸ ಪ್ರಯೋಗಗಳು ನಡೆಸಲು ತಯಾರಾಗುತ್ತಿದ್ದಾರೆ. ಎರಡು ದಿನದ ವ್ರತಾನುಷ್ಠಾನ ಮಾನಸಿಕ ದೌರ್ಬಲ್ಯಗಳಿಗೆ ಪರಿಹಾರವೆಂದು ಅವರು ಇತ್ತೀಚೆಗೆ ನಡೆಸಿದ ಪ್ರಯೋಗಗಳ ಮುಖಾಂತರ ತಿಳಿಸಿದ್ದಾರೆ.

ಮಾಂಜಸ್ಟರ್‌ ಯೂನಿವರ್ಸಿಟಿಯ ಪ್ರೊಫೆಸರಾದ ಡೋನಿ ಹೋವಲ್‌ ಮತ್ತು ಮೈಕಲ್‌ ಹಾರ್ವಿಯವರಿಬ್ಬರೂ ಸೇರಿ ಬರೆದ ʼTHE 2-DAY DIET’ ಎಂಬ ಪುಸ್ತಕ ಈ ಸಂಶೋಧನೆಗಳಿಗೆ ಪ್ರೋತ್ಸಾಹ ನೀಡುತ್ತಿದೆ. ವ್ರತಾನುಷ್ಠಾನ  ಸ್ತನಕ್ಯಾನ್ಸರ್‌ ಎಂಬ ರೋಗಕ್ಕೆ ಪರಿಹಾರವಾಗಿದೆಯೆಂದು ಪುಸ್ತಕದಲ್ಲಿ ಹೇಳುತ್ತಿದೆ.ಇದೆಲ್ಲಾ ಮಾಹಿತಿಗಳ ಹೊರತಾಗಿ ಪ್ರತಿಯೊಂದು ವಾರದಲ್ಲಿ ಗುರುವಾರ ಮತ್ತು ಸೋಮವಾರ ವ್ರತಾನುಷ್ಠಾನಕ್ಕೆ ಸಾವಿರ ವರ್ಷಗಳ ಹಿಂದೆಯೇ ಇಸ್ಲಾಂ ಧರ್ಮವು ಪ್ರತ್ಯೇಕ ಪುಣ್ಯವನ್ನು ನೀಡಿದೆ.

- ತಮೀಮ್ ಮುಹ್ಸಿನ್

Related Posts

Leave A Comment

Voting Poll

Get Newsletter