ಅಹ್ಮದ್ - ತೀಜಾನೀ ಬಿನ್ ಉಮರ್
ಇಸ್ಲಾಮಿನ ಪ್ರಭೋಧನಾ ರಂಗದಲ್ಲಿ ನಿರತರಾದ,ಪ್ರಸಿದ್ಧ ತಸವ್ವುಫ್ ವಿದ್ವಾಂಸ ಆಫ್ರಿಕನ್ ವಂಶದ ಸಾರಥಿ ಶೈಖ್ ಆಹ್ಮದ್ ತೀಜಾನೀ ಉಮರ್. ಆತ್ಮೀಯ ರಂಗದಲ್ಲಿ ಶೋಭಿಸುವ ಇವರು ಆಫ್ರಿಕನ್ ರಾಜ್ಯಗಳ ಸೂಫೀ ಪಂಡಿತರ ಸರಣಿಯ 'ತೀಜಾನೀ' ತ್ವರೀಕತ್ ನ ಆಧುನಿಕ ಪಂಡಿತರಲ್ಲಿ ಓರ್ವರು. (ಕೇರಳದ ಹಲವರು ಈ ಸರಣಿಯನ್ನು ಹಿಂಬಾಲಿಸುವವರು ಇದ್ದಾರೆ). ಮಾತುರೀದೀ ಮದ್ಹಬ್ ವಿಶ್ವಸಿಸುವ , ಹನಫಿ ಮದ್ಹಬ್ ಹಿಂಬಾಲಿಸುವ ಹಾಗೂ ವಹ್ಹಾಬಿಸಂ ಅನ್ನು ಶಕ್ತವಾಗಿ ನಿರಾಕರಿಸುವ ಸುನ್ನೀ ಪಂಡಿತರಾಗಿದ್ದಾರೆ. ಅದ್ಭುತ ಶೈಲಿಯಲ್ಲಿ ಕುರ್ ಆನ್ ಪಾರಾಯಣದ ಇದ್ದರೂ ಪ್ರಸಿದ್ಧಿ ಗಳಿಸಿದ್ದು ಸೂಫೀ ಸಂಗೀತದಲ್ಲಾಗಿದೆ.
1950 ಪಶ್ಚಿಮ ಆಫ್ರಿಕಾದ ಘಾನದ ಅಸಾಮನ್ಗಿಸ ಎಂಬ ಊರಿನಲ್ಲಿ ಜನಿಸಿದರು. (ಪ್ರಸ್ತುತ 71 ವರ್ಷ). ಹುಟ್ಟು ನಾಡು ಆಫ್ರಿಕದಲ್ಲಾದರೂ ಅವರ ಓಡಾಟವೂ ಉತ್ತರ ಅಮೇರಿಕದಲ್ಲಾಗಿತ್ತು. ಘಾನದ ಅದಾಕಫಾ ಕಾಲೇಜಿನಲ್ಲಿ ಅರಬಿ ಭಾಷೆ ಹಾಗೂ ಇಸ್ಲಾಮಿಕ್ ಸ್ಟಡೀಸ್ ನ ನಂತರ ಘಾನದಲ್ಲಿ ಮೆತಡಿಸ್ಟ್ ಹೈಸ್ಕೂಲಿನಲ್ಲಿ ಬೈಬಲ್ ಶಾಸ್ತ್ರ ಹಾಗೂ ಅದರ ಇತಿಹಾಸವನ್ನು ಕಲಿತರು. ಮೀಡಿಯಾ ಬ್ರೋಡ್ ಕ್ಯಾಸ್ಟಿಂಗ್, ಮಾಸ್ ಮೀಡಿಯದಲ್ಲಿ ನೈಪುಣ್ಯತೆವುಳ್ಳ ಇವರು ಜಾತಿ ತಾರತಮ್ಯ (study of comparative religion) ಕಲಿಕೆಯಲ್ಲಿ ಎಂ.ಎ ಪದವಿ ಸ್ವೀಕರಿಸಿದರು.
15ನೇ ವರ್ಷದಲ್ಲಿ ಕುರ್ ಆನ್ ಕಂಠಪಾಠ ಹಾಗೂ 21 ನೇ ವರ್ಷದಲ್ಲಿ ಬೈಬಲ್ ಕಲಿತರು. ಕರ್ಮಶಾಸ್ತ್ರದ ರಂಗದಲ್ಲಿ ಕಲಿಯಲು ಆಸಕ್ತಿವುಳ್ಳ ಕಾರಣ ಜಾತಿ ತಾರತಮ್ಯ ಕಲಿಕೆ, ಜ್ಯೋತಿಶಾಸ್ತ್ರ, ಕಲಾ ಸಾಹಿತ್ಯದ ವಿತ್ಯಸ್ತ ರಂಗದಲ್ಲಿ ಅರಿವನ್ನು ಸಂಪಾದಿಸಿದರು. 1970 ರಲ್ಲಿ ತನ್ನ 20 ನೇ ವರ್ಷದಲ್ಲಿ ಅಮೇರಿಕ ತೆರಳಿ ಪ್ರಬೋಧನೆಯನ್ನು ಪ್ರಾರಂಭಿಸಿದರು.
ವಿಶ್ವದ 115 ರಾಷ್ಟ್ರಗಳನ್ನು ಸಂದರ್ಶಿಸಿ ಅಂತರಾಷ್ಟ್ರೀಯ ಸಮಾರಂಭಗಳು ಹಾಗೂ ವಿಶ್ವವಿದ್ಯಾನಿಲಯಗಳು ಇನ್ನಿತರ ಹಲವಾರು ಸ್ಥಳಗಳಲ್ಲಿ ಪ್ರಭಾಷಣೆಯ ಮೂಲಕ ಲೋಕದಲ್ಲೆಡೆ ಚಿರಪರಿಚಿತರಾದರು. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಶಾಂತಿ ಸಮ್ಮೇಳನದಲ್ಲಿ ಪ್ರಮುಖ ವ್ಯಕ್ತಿಯಾಗಿದ್ದರು. ಚಿಕಾಗೋ ಎಂಬ ಗ್ರಾಮ ಪ್ರದೇಶಗಳಲ್ಲಿ ಶಾಂತಿಯನ್ನು ಸ್ಥಾಪಿಸುತ್ತಾ ವಿಶ್ವದ ಶಾಂತಿ ಸ್ಥಾಪನೆಯ ಹಲವಾರು ನಿಯಮಾವಳಿಗಳನ್ನು ಪಟ್ಟಿ ಮಾಡಲು ಸಹಾಯಕರಾಗಿದ್ದರು. ಆಫ್ರಿಕನ್ ಮುಸ್ಲಿಂ ಓರ್ಗನೈಝೇಷನ್ ಜನರಲ್ ಸೆಕ್ರೆಟರಿ, ಫಾನ ನ್ಯಾಷನಲ್ ಕೌನ್ಸಿಲ್ ಫಾರ್ ಇಸ್ಲಾಮಿಕ್ ಸೆಲೆಬ್ರೇಶನ್ ನಿರ್ದೇಶಕ, ಲಾಕೋಸಿನ ಕುರಾನ್ ಇನ್ಸ್ಟಿಟ್ಯೂಟ್ ಡೈರೆಕ್ಟರ್, ನೈಜೀರಿಯಾದ ಟೆಲಿವಿಷನ್ ರಿಲೀಜಿಯಸ್ ಎಜುಕೇಶನ್ ಬೋರ್ಡ್ ಕ್ಯಾಸ್ಟರ್ ಎಂಬ ಇನ್ನಿತರ ರಂಗದಲ್ಲಿ ನಿರತರಾದ ಇವರು ಈಗ ಅಮೆರಿಕ ಇಂಟರ್ನ್ಯಾಷನಲ್ ಅಸೋಸಿಯೇಷನ್ ಆಫ್ ಸೂಫೀಸಂ ಹಾಗೂ ಇಸ್ಲಾಮಿಕ್ ಸ್ಟಡೀಸ್ ಹಾಗೂ ರಿಸರ್ಚ್ ಅಸೋಸಿಯೇಷನ್ (ISSRA) ಎಂಬ ಸಂಘಟನೆಯ ನಿರ್ದೇಶಕ ಹಾಗೂ ಯೂನಿವರ್ಸಲ್ ಇಸ್ಲಾಮಿಕ್ ಸೆಂಟರ್ ಇದರ ಅಧ್ಯಕ್ಷರು ಹಾಗೂ ಐಕ್ಯರಾಷ್ಟ್ರ ಸಭೆಯ ಅಂತರಾಷ್ಟ್ರೀಯ ಶಾಂತಿಯ ಧಾರ್ಮಿಕ ಪಂಡಿತರು ಮತ್ತು ಅಂತಾರಾಷ್ಟ್ರೀಯ ಕೌನ್ಸಿಲ್ (world council of religious leaders) ಎಂಬ ರಂಗದಲ್ಲಿ ಸದಸ್ಯರಾಗಿ ಹೊರಹೊಮ್ಮಿದ್ದಾರೆ.