ಹಝ್ರತ್  ಖಬ್ಬಾಬ್ ಬಿನ್ ಅರತ್ (ರ)
ಹಝ್ರತ್ ಖಬ್ಬಾಬ್ ಬಿನ್ ಅರತ್ (ರ)
ಇವರು ಓರ್ವ ಪ್ರಧಾನ ಸ್ವಾಹಾಬಿವರ್ಯರು, ಇಸ್ಲಾಮಿನ ಪ್ರಥಮ ಕಾಲದ ಅನುಯಾಯಿಗಳಲ್ಲಿ ಒಬ್ಬರು. ಒಂದು ದಿನ ಮಕ್ಕಾದಲ್ಲಿ ಗುಲಾಮನ ಆವಶ್ಯಕತೆ ಇದ್ದ ಕಾರಣ ಉಮ್ಮು ಅಮ್ಮಾರ್ ಎಂಬ ರಾಜನು ಖಬ್ಬಾಬ್ ಬಿನ್ ಅರತ್ತ್ ಎಂಬ ಗುಲಾಮರನ್ನು ಖರೀದಿಸಿದರು. ಆಗ ಅವರಿಗೆ ಸಣ್ಣ ಪ್ರಾಯವಾಗಿತ್ತು.
                  (ಇಬ್ಬರ ಸಂಭಾಷಣೆ)
ರಾಜ: ನಿನ್ನ ಹೆಸರೇನು?
ಗುಲಾಮ: ಖಬ್ಬಾಬ್ 
ರಾಜ: ನಿಮ್ಮ ತಂದೆಯ ಹೆಸರೇನು? ಖಬ್ಬಾಬ್: ಅಲ್ ಅರ್ರತ್ 
ರಾಜ: ನೀವು ಎಲ್ಲಿಂದ ಬರುತ್ತಿದ್ದೀರಿ?
ಖಬ್ಬಾಬ್ : ನಜ್ದ್ 
ರಾಜ: ನೀವು ಈ ಊರಿನವರಲ್ಲ. ಮತ್ತೇಕೆ ಇಲ್ಲಿ?ಖಬ್ಬಾಬ್: ನಮ್ಮಲ್ಲಿರುವ ವಾಗ್ವಾದಗಳೇ ಇದಕ್ಕೆಲ್ಲಾ ಕಾರಣ ಅದರಿಂದ ಹಲವಾರು ಮಂದಿ ಗುಲಾಮರಾಗಿದ್ದಾರೆ.
                 ****************
ರಾಜನು ಖಾಬ್ಬಾಬ್ ರವರಿಗೆ ಒಂದಂಗಡಿಯನ್ನು ನಿರ್ಮಿಸಿಕೊಟ್ಟರು. ಖಬ್ಬಾಬ್ (ರ) ಇದರಲ್ಲಿ ಜೀವನ ಸಾಗಿಸುತ್ತಿದ್ದರು. ಇದು ಜಾಹಿಲಿಯ ಕಾಲದಲ್ಲಾಗಿತ್ತು. ಭೀಕರವಾದ ಕಾಲ, ಮೂರ್ತಿಗಳನ್ನು ಆರಾಧಿಸುತ್ತಿದ್ದ ಈ ವೇಳೆಯಲ್ಲಾಗಿತ್ತು ಇಸ್ಲಾಮಿನ ಉದಯ. ಇಸ್ಲಾಂ ಧರ್ಮದ ಕುರಿತು ಸಮಗ್ರವಾಗಿ ಇವರು ಕಲಿತರು ಮತ್ತು ಪ್ರವಾದಿಯ ಸಮ್ಮುಖದಲ್ಲಿ ಇಸ್ಲಾಮಿಗೆ ಸೇರ್ಪಡೆಯಾದರು.
             ****************
ಖಬ್ಬಾಬ್(ರ) ಇಸ್ಲಾಮಿಗೆ ಮತಾಂತರಗೊಂಡ ವಿಷಯ ತನ್ನ ರಾಜ ಉಮ್ಮ ಅಮ್ಮಾರ್ ಗೆ ಗೊತ್ತಾಯಿತು. ಹಾಗೂ ಉಮ್ಮು ಅಮ್ಮಾರ್ ರವರು ಖಬ್ಬಾಬ್ ರೊಂದಿಗೆ ಕೇಳುತ್ತಾರೆ.
ಉಮ್ಮು ಅಮ್ಮಾರ್: ಖಬ್ಬಾಬ್ ನೀನು ಯಾತಕ್ಕಾಗಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದೀರಾ?
ಖಬ್ಬಾಬ್: ಹೌದು ಒಡೆಯ! ಇಸ್ಲಾಂ ತುಂಬಾ ವಿಶ್ವಾಸಾರ್ಹ ಧರ್ಮ. ಇಸ್ಲಾಂ ಧರ್ಮ ಒಳ್ಳೆಯದನ್ನು ಬಯಸುತ್ತೆ. ಇದು ನನಗೆ ಹಿತವೆಂದು ಅನಿಸಿತು ಅದಕ್ಕೆ ಇಸ್ಲಾಂ ಧರ್ಮಕ್ಕೆ ಸೇರ್ಪಡೆಗೊಂಡೆ. ನಂತರ ಸಿಡಿಲು ಆಕ್ರೋಶ ಭರಿತ ಬೆಂಕಿ ಕೆಂಡಗಳ ತೀರ ಉರಿಯುವ ಕಣ್ಣುಗಳಲ್ಲಿ ರಾಜ ಉಮ್ಮ ಅಮ್ಮಾರ್ ಮಂತ್ರಿಗಳ ಹತ್ತಿರ ಖಬ್ಬಾಬ್ ರನ್ನು ಶಿಕ್ಷಿಸಲು ಆಜ್ಞಾಪಿಸುತ್ತಾರೆ. ಹಾಗೂ ರಾಜಭಟರು ಇಸ್ಲಾಂಗೆ ಮತಾಂತರ ಗೊಂಡ ಎಲ್ಲಾ ಜನರಿಗೆ ಶಿಕ್ಷೆಯನ್ನು ವಿಧಿಸಿದರು. 
             *************
ಎಲ್ಲಾ ದಿವಸವು ಅವರನ್ನು ಕಠಿಣ ಕ್ರೂರವಾಗಿ ಶಿಕ್ಷಿಸುತ್ತಿದ್ದರು. ಅವರನ್ನು ಅಬು ನೌಫ್ ಎಂಬ ದುಷ್ಟ ಹಿಂಸಿಸುತ್ತಿದ್ದನು. ಅವರನ್ನು ಪ್ರತಿನಿತ್ಯ ಬೆಂಕಿಯನ್ನು ಕೆನ್ನಾಲೆ ಗೆ ಹಾಕುತ್ತಿದ್ದರು. ಅವರು ಕೇಳುತ್ತಿದ್ದರು ನಿನಗೆ ಲಾತ – ಉಝ ಗೊತ್ತಿದೆಯೇ?. ಖಬ್ಬಾಬ್ (ರ) ಉತ್ತರಿಸಿದರು,ಹಾ ಗೊತ್ತು ಅದೊಂದು ಕಲ್ಲಿನಿಂದ ಕೆತ್ತನೆ ಮಾಡಿದಂತಹ ಶಿಲ್ಪಿಗಳು. ಅವರು ಮತ್ತೊಮ್ಮೆ ಪ್ರಶ್ನಿಸಿದರು ನಿಮಗೆ ಮಹಮ್ಮದ್ ( ಸ) ಗೊತ್ತಾ? ಅವರು ಉತ್ತರಿಸಿದರು ಹಾಗೂ ಗೊತ್ತು ಅವರೊಬ್ಬ ಮಹಾಮನುಷ್ಯ. ಅಲ್ಲಾಹನ ಪ್ರೀತಿಯ ರಸೂಲ್ ಅವರಿಗೆ ಸರಿಸಮಾನರು ಯಾರೂ ಇಲ್ಲ ಮತ್ತು ತುಂಬಾ ಕಠಿಣ ಕಠೋರವಾದ ಶಿಕ್ಷೆಯನ್ನು ನೀಡಿದರು. ಖಬ್ಬಾಬರು ಸಹಿಸಿದರು. ಜೀವನ ಕಾಲದಲ್ಲಿ ಪ್ರವಾದಿ (ಸ) ರ ಸೇವಕರಾದರು. ಬದರ್, ಉಹ್ದ್, ಕಂದಖ್ ಎಂಬ ಹಲವು ಯುದ್ಧಗಳಲ್ಲಿ ಪಾಲ್ಗೊಂಡರು. ಮಹಾನರಾದ ಖುಲಫಾ ರಾಶಿದೀಗಳ ಕಾಲದಲ್ಲಿ ಚೆನ್ನಾಗಿ ಜೀವಿಸಿದರು. ಪ್ರವಾದಿ (ಸ) ರೊಂದಿಗೆ ಖಬ್ಬಾಬ್ ರವರು ಹಿಜ್ರಾ ಹೋದರು. ಅವರು ಮದೀನಾ ನಗರದ ಶ್ರೀಮಂತರಾದರು. ಅವರು ತನ್ನ ಖಜಾನೆಯನ್ನು ಜನರಿಗೆ ಬೇಕಾಗಿ ತೆರೆದಿದ್ದರು. ಜೀವನದಲ್ಲಿ ಒಳಿತು ಮಾಡಿ ಜನರ ಪ್ರೀತಿಗಳಿಸಿ ಈ ಲೋಕದಿಂದ ಕಣ್ಮರೆಯಾದರು......... ಅಂದು ಮದೀನಾ ನಗರವು ನಿಶ್ಚಲವಾಗಿ ಬಿಕೋ ಎನ್ನುತ್ತಿತ್ತು...

Related Posts

Leave A Comment

Voting Poll

Get Newsletter