ಶೈಖುನಾ ಕೋಟ್ಟ  ಉಸ್ತಾದ್ ; ಉತ್ತರ ಕೇರಳದ  ಇಲ್ಮಿನ ಕೋಟೆ

         ಇವರು ಇಲ್ಮಿನ ಕೋಟೆಯಾಗಿದ್ದಾರೆ ; ಶೈಖುನಾ ಕೋಟೆ ಉಸ್ತಾದರನ್ನು ಹೀಗೆ ವಿಶೇಷ ಸಿದ್ದು  ಶಂಸುಲ್ ಉಲಮಾ ರವರಾಗಿದ್ದಾರೆ ............ ಉತ್ತರ ಕೇರಳದಲ್ಲಿ ಸಮಸ್ತವನ್ನು ಚುಕ್ಕಾಣಿ ಹಿಡಿದು ಕಾಪಾಡಿದ ಉಕ್ಕಿನ ಕೋಟೆಯಾಗಿದ್ದಾರೆ ಅವರು.

 ಹೌದು.....!
 ಶೈಖುನಾ ಅಬು ಉಮೈರ ಕೋಟ್ಟ ಅಬ್ದುಲ್ ಖಾದಿರ್ ಮುಸ್ಲಿಯಾರ್ .
 ಜ್ಞಾನದ ಮತ್ತು ತಾಳ್ಮೆಯ ಪರಿಪೂರ್ಣತೆ .

ಶೈಖುನಾರವರ ಜೀವನವೂ ಪೂರ್ವಿಕರು ಹೇಳುವ ತುಲೂಬಿಲ್ಲಾ (ಮಲಯಾಳಂ) ಎಂಬ ನುಡಿಯಂತಿತ್ತು. ಕೇರಳದಲ್ಲಿ ವಿರಳವಾಗಿ ಪ್ರಸಿದ್ಧಿ ಪಡೆದ ಕೆಲ ಪಂಡಿತರ ಪಟ್ಟಿಯಲ್ಲಿ ಇವರು ಓರ್ವರಾಗಿದ್ದಾರೆ. ಮಂದಹಾಸದಿಂದ, ಸಹನೆಯಿಂದ  ಮೌನದ ಮೂಲಕ ಜ್ಞಾನೋದಯದ ಕ್ರಾಂತಿಗಳನ್ನು ಸೃಷ್ಟಿಸಿದ ಅಕ್ಷರಾ ಸ್ನೇಹಿ ಇವರು . ಖಗೋಳಶಾಸ್ತ್ರದಲ್ಲಿ ಮರ್ಮ ಪ್ರಧಾನ ಮೌಲ್ಯಗಳನ್ನು ಕಂಡುಹಿಡಿದ ಜ್ಞಾನದಜ್ಯೋತಿ ಇವರು. ಉಲಮಾಗಳ ಪಂಡಿತ ಲೋಕಕ್ಕೆ ಸರಿಸಾಟಿಯಾಗಿತ್ತು ಇವರ ಜೀವನ. ತನ್ನ ಜೀವನದ ಹಾದಿಯಲ್ಲಿ ಶೈಖುನಾರವರು ಬಿಡಿಸಿಟ್ಟ ಜ್ಞಾನದ ಧಾರೆ ಚಿಂತನಾರ್ಹವಾಗಿದೆ. ಆ ಬರಹಗಳು ಪ್ರತಿಭೆಗಳು ಕೇರಳಕ್ಕೆ ಅಮೂಲ್ಯವಾದ ಕೊಡುಗೆಗಳನ್ನು ನೀಡಿವೆ. ಉತ್ತರ ಮಲಬಾರಿನಲ್ಲಿ ಧಾರ್ಮಿಕ ವೈಜ್ಞಾನಿಕ  ಕ್ಷೇತ್ರದಲ್ಲಿ ಉಸ್ತಾದರು ನಾಂದಿಯಿಟ್ಟ  ಐತಿಹಾಸಿಕ ಹಾದಿ ಗಮನಾರ್ಹವಾಗಿದೆ_
 _ ಫರಾಇಳ್ ನಲ್ಲಿ ಶೇಖುನಾರಿಗಿದ್ದ   ಸಾಮರ್ಥ್ಯ ಅಪಾರವಾಗಿದೆ_
 _ಪ್ರಭಾಷಣ ವೇದಿಕೆಗಳಲ್ಲಿ ಪ್ರಜ್ವಲಿಸುವ ವ್ಯಕ್ತಿತ್ವವಾಗಿತ್ತು ಅವರದ್ದು. ಎಂದೆಂದಿಗೂ ಅಳಿಸಲಾಗದ ಗುರುತನ್ನಿಟ್ಟಿದ್ದರು ಆ ದಿಸೆಯಲ್ಲಿ. ಶೈಖುನಾರನ್ನು ಮಹಾನರಾದ ಶಂಸುಲ್ ಉಲಮಾ ಗುರುತಿಸಿದ್ದೂ ಕೂಡ ಒಂದು ವೇದಿಕೆಯಲ್ಲಾಗಿತ್ತು. ಮಲಯಾಳಂ, ಅರೇಬಿಕ್, ಉರ್ದು, ಇಂಗ್ಲಿಷ್, ಕನ್ನಡ ಮತ್ತು ಫಾರಿಸಿ* ಎಂಬಿತ್ಯಾದಿ ಭಾಷೆಗಳಲ್ಲಿ  ಅವರಿಗಿದ್ದ ಪರಿಜ್ಞಾನವೂ  ಶೈಖುನಾರನ್ನು ಇತರರಿಂದ ಭಿನ್ನವಾಗಿಸುತ್ತದೆ._

_1939 ರ ನವೆಂಬರ್ 17 (ಹಿ. 1358 ಶವ್ವಾಲ್ 6) ರಂದು ಶುಕ್ರವಾರ ಕೋಟ್ಟಾ ಸೀಮೇಕೋಟ ಮಮ್ಮೂವಿ (ಮುಹಮ್ಮದ್ಕಾ) ಮತ್ತು ಖದೀಜಾ ದಂಪತಿಯ ಮಗನಾಗಿ  ಕಾಸರಗೋಡು ಜಿಲ್ಲೆಯಲ್ಲಿ ಶೈಖುನಾರವರು  ಜನಿಸಿದರು. ಮೊಗ್ರಾಲ್, ಕುಂಬ್ಳೆ ಪ್ರಾಥಮಿಕ ಶಾಲೆಯಲ್ಲಿ ಪ್ರಾರ್ಥಮಿಕ ತರಬೇತಿಯನ್ನು ಪೂರ್ತಿಗೊಳಿಸಿದ ಶೈಖುನಾ ಮುಂದಕ್ಕೆ ಒಳವಟ್ಟೂರ್, ಕರುವಲ್ತಿರುತ್ತಿ, ಪಡಣ, ತ್ರಿಕ್ಕರಿಪೂರ್, ಇಚ್ಲಙ್ಙೋಡ್ ಮುಂತಾದ ಸ್ಥಳಗಳಲ್ಲಿ ದರ್ಸ್ ಕಲಿಕೆ ಪೂರ್ತೀಕರಿಸಿದ ನಂತರ ಉನ್ನತ ವಿದ್ಯಾಭ್ಯಾಸಕ್ಕಾಗಿ 1964 ರಲ್ಲಿ ದ್ಯೋಬಂದ್, ದೆಹಲಿ ಮುಂತಾದ ಸ್ಥಳಗಳಿಗೆ ಯಾತ್ರೆ ಮಾಡಿದ್ದರು ಎಂಬುದಾಗಿದೆ ಇತಿಹಾಸ._

ವೆಳಿಮೂಕ್ಕ್ ಕೆ.ಟಿ ಮೊಹಮ್ಮದ್ ಮುಸ್ಲಿಯಾರ್, ಪರಪ್ಪಾಡ್ ಎ ಅಬ್ದುಲ್ಲಾ ಮುಸ್ಲಿಯಾರ್, ಪಾಣೂರ್ ಸೈಯ್ಯದ್ ಇಸ್ಮಾಯಿಲ್ ಪೂಕೋಯಾ ತಂಙಲ್, ವೆಲ್ಲೂರು ಪಿ.ವಿ. ಮುಹಮ್ಮದ್ ಮುಸ್ಲಿಯಾರ್, ಶೈಖುಲ್ ಹದೀಸ್ ಸಯ್ಯದ್ ಫಖ್ರದ್ದೀನ್ ಅಹ್ಮದ್ ಮುಸ್ಲಿಯಾರ್, ಚಾಲಿಯಂ ಅಬ್ದುರ್ರಹ್ಮಾನ್ ಮುಸ್ಲಿಯಾರ್, ಫಖ್ರುಲ್ ಹಸನ್, ಇಬ್ರಾಹಿಂ ಹಝ್ರತ್ ಬಲ್ಯಾವಿ, ಎಂಬಿತ್ಯಾದಿಗಳಾಗಿದ್ದರು ಶೈಖುನಾರ ಜೀವನ ಮಾರ್ಗದರ್ಶಿಗಳಾದ ಗುರುವರ್ಯರು..........
ಓದುವಿಕೆಯ ಬಳಿಕ  ಜ್ಞಾನ ಪಾಲು ಮಾಡುವುದರಲ್ಲಿ ನಿರತರಾದರು.
ಹೌದು...! ಅದೇ..... ಸುದೀರ್ಘವಾದ ತದ್ರೀಸ್ ಜೀವನ ........
ಎಂ.ಐ.ಸಿ ಅರ್ಷದುಲ್ ಉಲೂಮ್ ಮುತವ್ವಾಲ್ ಕಾಲೇಜು ಮಾಹಿನಾಬಾದ್-ಚಟ್ಟಂಚಾಲ್, ಕರ್ನಾಟಕದ ಮುಲ್ಕಿ ಪ್ರದೇಶದ ಶಾಫಿ ಜಮಾ ಮಸೀದಿಯಲ್ಲಿ  (13 ವರ್ಷ), ತಾಯಿಲಙ್ಙಾಡಿ ಖಿಲರ್ ಮಸೀದಿ, ತಿರುತ್ತಿ ಜುಮಾ ಮಸೀದಿ, ಪರಂಗಿ ಪೇಟೆ ಜುಮಾ ಮಸೀದಿ , ನೆಲ್ಲಿಕುನ್ನು ಜುಮಾ ಮಸೀದಿ, ಇಚಿಲಂಗೋಡ್ ಜುಮಾ ಮಸೀದಿ, ಚೆರುವತ್ತೂರ್ ಜುಮಾ ಮಸೀದಿ, ಪುತಿಯಂಙ್ಙಾಡಿ ಜುಮಾ ಮಸೀದಿ, ಮತ್ತು ಉಮ್ಮತೂರ್ ಕಾಲೇಜು ಹೀಗೆ ಉದ್ದಕ್ಕೆ ಸರಿಯುತ್ತ ಉಸ್ತಾದರು ದರ್ಸ್ ನಡೆಸಿದ ಪಟ್ಟಿ.

ಉತ್ತರ ಕೇರಳದ ಮಣ್ಣಿನಲ್ಲಿ ನೈಜ ಇಸ್ಲಾಮಿನ ಕಾವಲುಗಾರರಾಗಿ ಮುಂದೆ ಸರಿದರು. ಉತ್ತರ ಮಲಬಾರಿನಲ್ಲಿ ಸಮಸ್ತದ ಕಾರ್ಯವೈಕರಿಗಳನ್ನು ಗಗನೆತ್ತರಕ್ಕೆ ಬೆಳೆಸುವಲ್ಲಿ  ಶೈಖುನಾರದ್ದು ಕಿರಿದಲ್ಲದ ಮಹತ್ವದ ಪಾತ್ರವೇ ಆಗಿತ್ತು.
ಸಮಸ್ಥ ಕೇರಳ ಜಂ ಇಯ್ಯತುಲ್ ಉಲಮಾ ಇದರ ಕಾರ್ಯದರ್ಶಿ, ಮಂಗಳೂರು ಖಾಝಿಯರಾಗಿ  (1990 ರಲ್ಲಿ ಆರಂಭಗೊಂಡ ಖಾಝಿ ಸ್ಥಾನವು ಸತತ 18 ವರ್ಷಗಳು ಮುಂದೆ ಸರಿದವು), ಸಮಸ್ತ ಕಣ್ಣೂರು ಜಿಲ್ಲಾ ಕಾರ್ಯದರ್ಶಿ, ಸಮಸ್ತ ವಿದ್ಯಾಭ್ಯಾಸ ಬೋರ್ಡಿನ ಸದಸ್ಯರಾಗಿ , ಸಮಸ್ತ ಕಾಸರಗೋಡು ಜಿಲ್ಲಾ ಉಪ  ಅಧ್ಯಕ್ಷರಾಗಿ, ಮಲಬಾರ್ ಇಸ್ಲಾಮಿಕ್ ಕಾಂಪ್ಲೆಕ್ಸ್ ಉಪಾಧ್ಯಕ್ಷರಾಗಿ ಉಮ್ಮತೂರ್ ಅರೇಬಿಕ್ ಕಾಲೇಜಿನ ಪ್ರಾಂಶುಪಾಲರಾಗಿ , ಎಂ.ಐ.ಸಿ ಅರ್ಶದುಲ್ ಉಲೂಮ್ ಮುತವ್ವಾಲ್ ಕಾಲೇಜಿನ ಪ್ರಾಂಶುಪಾಲರಾಗಿ ಮತ್ತು ಚಲಿಯಂಕೋಡ್ ಮಸೀದಿ ಮದರಸ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ._

ಕುಂಬಟಡಾಜೆಯ ಖಾಝಿಯಾಗಿದ್ದ ಅಬ್ದುಲ್ ರಹಮಾನ್ ಮುಸ್ಲಿಯಾರ್ ಅವರ ಮಗಳು ರುಖಿಯಾ ಳಾಗಿದ್ದರು ಶೇಖುನಾ ರವರ ಪತ್ನಿ.
ಇಷ್ಟೆಲ್ಲ ಇದ್ದರೂ ಕೂಡ, ಶೈಖುನಾ ರವರು ನಶ್ವರ ದುನಿಯಾದ ಹಿಂದೆ ನಡೆಯಲಿಲ್ಲ. ದುಬೈ ಗವರ್ಮೆಂಟಿನ ಶಿಕ್ಷಣ ಇಲಾಖೆಯೂ ಪರಮಾಧಿಕಾರ ಸ್ಥಾನಕ್ಕೆ ಕರೆಯುತ್ತಿದ್ದಾಗ ಮಂದಸ್ಮಿತನಾಗಿ ತಿರಸ್ಕರಿಸಿದ್ದು ಇದಕ್ಕೆ ಬಹುದೊಡ್ಡ ಉದಾಹರಣೆಯಾಗಿದೆ........... 
 ವಿದ್ಯಾರ್ಥಿ, ಶಿಕ್ಷಕ, ಸಂಶೋಧಕ, ಜ್ಞಾನ ಸ್ನೇಹಿ, ಸಂಘಟನಾ ಕಾರ್ಯಕರ್ತ, ಖಾಝಿ, ಬರಹಗಾರ, ಉಪನ್ಯಾಸಕ, ಬಹು ಭಾಷಾ  ಪಂಡಿತ ಇವೆಲ್ಲವು ಶೈಖುನಾರ ಜೀವನವನ್ನು ಧನ್ಯ ಗೊಳಿಸಿತು .2008 ರ ಸೆಪ್ಟೆಂಬರ್ 3 (1429 ರಂಜಾನ್ 3) ರ ಬುಧವಾರ ಸಂಜೆ 4 ಗಂಟೆಗೆ ಸರಿಯಾಗಿ ಶೈಖುನಾರು ಅಲ್ಲಾಹನ ಕರೆಗೆ ಉತ್ತರಿಸಿದರು. ಮೊಗ್ರಾಲ್ ಕಡಪ್ಪುರಂ ಮಸೀದಿಯಲ್ಲಿ ಅಂತ್ಯ ವಿಶ್ರಮಗೊಳ್ಳುತ್ತಿದ್ದಾರೆ...

ನಮ್ಮನ್ನು ಅವರೊಂದಿಗೆ ಸ್ವರ್ಗದಲ್ಲಿ ಒಗ್ಗೂಡಿಸಲಿ......


ಕನ್ನಡಕ್ಕೆ ; ಮಹಮ್ಮದ್ ಶಮಿ ಉಪ್ಪಿನಂಗಡಿ
ಮೂಲ ಮಲಯಾಳಂ

Related Posts

Leave A Comment

Voting Poll

Get Newsletter