ಅಲೀ ಬಿನ್ ಅಬೀ ತ್ವಾಲಿಬ್
ತನ್ನ ಬಾಲ್ಯಕಾಲದಲ್ಲಿ ಪ್ರವಾದಿಯವರ ಸ್ವಂತ ಮನೆಯಲ್ಲೇ ಬೆಳೆದು, ತನ್ನ ಹತ್ತನೇ ವಯಸ್ಸಿನಲ್ಲಿ ಇಸ್ಲಾಂ ಸ್ವೀಕರಿಸಿ, ಅತೀ ಚಿಕ್ಕ ವಯಸ್ಸಿನಲ್ಲಿ ಇಸ್ಲಾಂ ಸ್ವೀಕರಿಸಿದ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿ ನಬಿ (ಸ) ರೊಂದಿಗೆ ಒಳ್ಳೆಯ ಸಂಬಂಧ ಹೊಂದಿದ್ದಲ್ಲದೆ ಇಸ್ಲಾಮಿನ ಬೆಳವಣಿಗೆ ಹಾಗೂ ಅಭಿವೃದ್ಧಿಗೆ ತನ್ನಲ್ಲಾದಷ್ಟು ಶ್ರಮಪಟ್ಟವರು ಅಲೀ (ರ) .
ಪ್ರವಾದಿಯವರು ಮದೀನಾಗೆ ಹಿಜ್ರಾ ಹೋಗಲು ತೀರ್ಮಾನಿಸಿದ ಸಂದರ್ಭ, ಶತ್ರುಗಳು ನೆಬಿಯವರಿದ್ದ ಮನೆಯನ್ನು ಸುತ್ತುವರಿದಾಗ ನೆಬಿಯವರು ರಕ್ಷೆಗೊಂಡಿದ್ದು ಅಲೀ(ರ) ರನ್ನು ತನ್ನ ಹೂದಿಕೆಯಲ್ಲಿ ಮಲಗಿಸಿಯಾಗಿತ್ತು. ಹಿಜ್ರಾ ಸಮಯದಲ್ಲಿ ಪ್ರವಾದಿಯ ಹತ್ತಿರ ಸೂಕ್ಷಿಸಿಟ್ಟಿದ್ದ ವಸ್ತುಗಳನ್ನು ಅದರ ಅರ್ಹರಿಗೆ ಹಸ್ತಾಂತರಿಸಲು ಪ್ರವಾದಿಯವರು ನೇಮಿಸಿದ್ದು ಅಲೀ(ರ) ರನ್ನಾಗಿತ್ತು. ಪ್ರವಾದಿಯವರ ಕರುಳಕುಡಿ ಬೀವಿ ಫಾತಿಮಾರನ್ನು ಪ್ರವಾದಿಯವರು ವಿವಾಹಮಾಡಿಕೊಟ್ಟದ್ದು ಅಲೀ (ರ)ರಿಗಾಗಿತ್ತು ಪ್ರವಾದಿಯವರ ಪ್ರೀತಿಯ ಮೊಮ್ಮಕ್ಕಳಾದ ಹಸನ್ ಹಾಗೂ ಹುಸೈನ್(ರ)ರವರು ಅಲೀ(ರ) ಫಾತಿಮಾ(ರ) ದಂಪತಿಗಳ ಮಕ್ಕಳು.
ನೆಬಿಯೊಂದಿಗೆ ತಬೂಕ್ ಯುದ್ಧವಲ್ಲದ ಎಲ್ಲಾ ಯುದ್ಧದಲ್ಲೂ ಪಾಲ್ಗೊಂಡರು, ಖೈಬರ್ ಯುದ್ಧದ ಸಂದರ್ಭದಲ್ಲಿ ಅಲ್ಲಾಹು ಹಾಗೂ ಅವನ ಪ್ರವಾದಿ ತೃಪ್ತಿಹೊಂದಿದ ವ್ಯಕ್ತಿಗಾಗಿದೆ ಈ ಯುದ್ಧದ ಪತಾಕೆ ಎಂದು ಪ್ರವಾದಿಯವರು ಪ್ರಸ್ತಾಪಿಸಿದಾಗ ಎಲ್ಲಾ ಸ್ವಾಹಾಬಿಗಳು ಆ ಭಾಗ್ಯ ತಮಗೆ ಸಿಗಲಿ ಎಂದು ಪ್ರಾರ್ಥಿಸುತ್ತಿದ್ದ ವೇಳೆ ಯುದ್ಧ ಪತಾಕೆಯನ್ನು ಪ್ರವಾದಿಯರು ಅಲೀ(ರ) ರ ಕೈಗೆ ಹಸ್ತಾಂತರಿಸಿದರು. ಹಾಗೆಯೇ ಅಲೀ (ರ) ರವರು ಖೈಬರ್ ಯುದ್ದದಲ್ಲಿ ಮುಸ್ಲಿಂ ಸೈನ್ಯಕ್ಕೆ ನೇತೃತ್ವ ಕೊಟ್ಟು ಯುದ್ಧವನ್ನು ಗೆಲುವಿನ ದಡ ಸೇರಿಸಿದರು. ಇದರೊಂದಿಗೆ ಪ್ರವಾದಿಯವರು “ಇಹಲೋಕದಲ್ಲೂ ಪರಲೋಕದಲ್ಲೂ ಅಲೀ ನನ್ನ ಸ್ನೇಹಿತ” ಎಂದು ಬಣ್ಣಿಸಿದರು.
ಧೀರ, ವೀರ, ಭಕ್ತ, ಪಂಡಿತ ಹಾಗೂ ಸಾಹಿತ್ಯಗಾರ ಇಂತಹ ಅನೇಕ ವಿಶೇಷತೆಗೆ ಪಾತ್ರರು, ಪ್ರವಾದಿಯವರಿಂದ ಹಲವು ಹದೀಸನ್ನು ಅಲೀ(ರ) ವರದಿಮಾಡಿದ್ದಾರೆ. ಆಯಿಶಾ ಬೀವಿಯೊಂದಿಗೆ ಯಾರಾದರೂ ಮಸ್ ಅಲ ಕೇಳಿಬಂದರೆ ಅವರನ್ನು ಅಲೀ(ರ) ಸನ್ನಿಧಿಗೆ ಕಳಿಸುತ್ತಿದ್ದರು.
“ನಾನು ಅರಿವಿನ ನಗರವಾದರೆ ಅಲೀ ಅದರ ದ್ವಾರ” ಎಂದು ಪ್ರವಾದಿಯರು ನುಡಿದಿದ್ದಾರೆ. *******************
ಉಸ್ಮಾನ್ (ರ) ರವರ ನಂತರದ ಖಲೀಫರಾಗಿ ನೇಮಿಸಲ್ಪಟ್ಟರು. ಖಲೀಫರಾದ ನಂತರ ಕೇಂದ್ರವನ್ನು ಮದೀನಾದಿಂದ ಇರಾಕ್ ಗೆ ಸ್ಥಳಾಂತರಿಸಿದರು. ಖಲೀಫಾರಾಗಿ ನೇಮಿಸಲ್ಪಟ್ಟ ಮೇಲೆ ಅಲೀ(ರ) ರಿಗೆ ಉಸ್ಮಾನ್ (ರ) ರವರ ಕೊಲೆಗೈದವರನ್ನು ಹುಡುಕುವುದು ದೊಡ್ಡ ತಲೆನೋವಾಗಿತ್ತು. ಉಸ್ಮಾ ನ್ (ರ) ರವರ ಕೊಂದ ಕೆಲವರು ಮದೀನಾದಲ್ಲಿದ್ದರೆ ಕೆಲವರು ಅಲೀ(ರ) ರವರ ಸೈನ್ಯದಲ್ಲಿದ್ದರು. ವಿಷಯದ ಗಾಂಭೀರ್ಯತೆ ಅರಿಯದ ಕೆಲವು ಸ್ವಹಾಬಿಗಳು ಅಲೀ (ರ) ರ ವಿರುದ್ಧ ಯುದ್ಧಕ್ಕೂ ಮುಂದಾದರು. ಉಸ್ಮಾನ್(ರ) ರವರ ಕೊಲೆಗಾರರನ್ನು ಹುಡುಕಿ ಅವರನ್ನು ಶಿಕ್ಷಿಸಬೇಕು ಎಂದಾಗಿತ್ತು ಅವರ ವಾದ. ಪ್ರವಾದಿಯವರ ಪ್ರಿಯ ಪತ್ನಿ ಆಯಿಶಾ(ರ) ಹಾಗೂ ತ್ವಲ್ಲಾ(ರ) ರಂತಹ ಪ್ರಮುಖ ಸ್ವಹಾಬಿಯರು ಈ ಗುಂಪಿನಲ್ಲಿದ್ದರು. ಅವರು ಆಯಿಶಾ ಬೀವಿಯ ನೇತೃತ್ವದಲ್ಲಿ ಒಂದು ಸೈನ್ಯದೊಂದಿಗೆ ಬಸ್ವರಾಗೆ ತಲುಪಿದರೆ ಅಲೀ(ರ) ರ ಸೈನ್ಯ ಬಸ್ವರಾ ತಲುಪಿಯಾಗಿತ್ತು. ಇಬ್ಬರೂ ಪರಸ್ಪರ ಚರ್ಚೆ ನಡೆಸಿದರಲ್ಲದೆ ಆಯಿಶಾ ಬೀವಿ ತನ್ನ ಬೇಡಿಕೆಯನ್ನು ಅಲೀಯೊಂದಿಗೂ ಅಲೀ(ರ) ತನ್ನ ಅವಸ್ಥೆಯನ್ನು ಆಯಿಶಾ ಬೀವಿಯೊಂದಿಗೆ ಹೇಳಿದರು. ವಿಷಯ ಮನವರಿಕೆಯಾಗಿ ಇಬ್ಬರೂ ಹಿಂತಿರುಗಿ ಹೋಗಲು ತೀರ್ಮಾನಿಸಿದರು.ಆದರೆ ಕೆಲವರು ಗಲಭೆ ಮಾಡಲೆಂದೇ ಸೈನ್ಯವನ್ನು ಅಕ್ರಮಿಸಿದಾಗ ಮರು ವಿಭಾಗವೇ ನಮ್ಮನ್ನು ಆಕ್ರಮಿಸುತ್ತಿದೆ ಎಂದು ತಪ್ಪಾಗಿ ತಿಳಿದು ಎರಡು ಸೈನ್ಯವು ಯುದ್ಧ ಶುರುಮಾಡಿತು. ಅಲೀ(ರ) ಯುದ್ಧದಲ್ಲಿ ಗೆದ್ದು ಬಿಗಿದರು. ಅಲಿ (ರ) ಅಯಿಶಾ ಬೀವಿಗೆ ತಿಳಿಹೇಳಿ ಅವರನ್ನು ಮಾದೀನಾಗೆ ಕಳುಹಿಸಿದರು. ಚರಿತ್ರೆಯಲ್ಲಿ ಈ ಯುದ್ಧವು ಜಮಲ್ ಯುದ್ಧ ಎಂದು ಅರಿಯಲ್ಪಡುತ್ತದೆ.
ಅಲಿ(ರ) ಆಯಿಶಾ ಬೀವಿ ನಡುವಿನ ಗಲಭೆ ಕೊನೆಗೊಳ್ಳುವ ಹೊತ್ತಲ್ಲಿ ಅಲೀ(ರ) ಮತ್ತು ಮುಅವಿಯಾ (ರ) ನಡುವಿನ ಗಲಭೆ ಶುರುವಾಗಿತ್ತು, ಉನ್ಮಾನ್(ರ) ಕೊಲೆಗಾರರನ್ನು ಹುಡುಕದೆ ಅಲೀ(ರ) ರವರ ಖಿಲಾಫತ್ ಅಂಗೀಕರಿಸುವುದಿಲ್ಲ ಎಂದಾಗಿತ್ತು ಅವರ ವಾದ.
ಮುಅವಿಯಾ(ರ) ರು ಅಲೀ(ರ) ರೊಂದಿಗೆ ಯುದ್ಧಕ್ಕೆ ಮುಂದಾದರು, ಯುದ್ಧವು ಪ್ರಾರಂಭವಾಯಿತು. ಅಲೀ(ರ) ಗೆಲ್ಲುತ್ತಾರೆ ಎಂದು ಮನವರಿಕೆಯಾದಾಗ ಮುಆವಿಯಾ(ರ) ಪರಿಶುದ್ಧ ಕುರಾನ್ ಅನ್ನು ಒಂದು ಕೋಲಿನಲ್ಲಿ ಎತ್ತಿ ಇನ್ನು ಮುಸ್ಹಫ್ ತೀರ್ಮಾನಿಸಲಿ ಎಂದರು ಅಲೀ(ರ) ರ ವಿಭಾಗದಿಂದ ಅಬೂ ಮೂಸಾ ಅಲ್ ಅಶ್‌ಅರಿ (ರ) ಹಾಗೂ ಮುಅವಿಯಾ(ರ)ರ ವಿಭಾಗದಿಂದ ಅಂರ್ ಬಿನ್ ಆಸ್(ರ) ಮಧ್ಯಸ್ಥಿಕೆ ವಹಿಸಿದರು. ಮುಸ್ಲಿಮರೆಲ್ಲರೂ ದೌಮತುಲ್ ಜಂದಲ್ ನಲ್ಲಿ ಕೂಡಿದರು.
ಅಬೂ ಮೂಸಾ ಅಲ್ ಅಶ್‌ಅರಿಗೆ ಕೊಟ್ಟ ಮಾತು ಆಮ್ಸ್ ಬಿನ್ ಆಸ್ ಕೇಳದ ಕಾರಣ ಆ ಒಪ್ಪಂದ ಪ್ರತಿಫಲಿಸಲಿಲ್ಲ. ಮುಸ್ಲಿಮರೆಲ್ಲರೂ ನಿರಾಶರಾಗಿ ಹಿಂತಿರುಗಿದರು. ಇನ್ನು ಯಾವುದೇ ಗೊಂದಲ ಉಂಟುಮಾದಡಿರಲು ಇಬ್ಬರೂ ಒಂದು ಒಪ್ಪಂದಕ್ಕೆ ಸಹಿಹಾಕಿದರು.
ಅಬೂ ಮೂಸಾ ಅಲ್ ಅಶ್‌ಅರಿಯನ್ನು ಮಧ್ಯಸ್ಥನನ್ನಾಗಿ ನೇಮಿಸಿದ್ದು ಕೆಲವರಿಗೆ ಸರಿ ಎನಿಸಲಿಲ್ಲ, ಮುಸ್ಲಿಮರೆಡೆ ಯುದ್ಧ ಏಳಲು ಅಲೀ(ರ) ಮುಅವಿಯಾ(ರ) ಹಾಗೂ ಅಮ್ ಬಿನ್ ಆಸ್ ಆಗಿದ್ದಾರೆ ಎಂದು ಅವರನ್ನು ವಧಿಸಬೇಕೆಂದು ಮೂವರು ಹೋದರೆ ಅದರಲ್ಲಿ ಮುಅವಿಯಾ(ರ) ಹಾಗೂ ಅಮ್ ಬಿನ್ ಆಸ್ (ರ) ರಕ್ಷೆ ಹೊಂದಿದರು. ಆದರೆ ಸುಬ್ಹ್ ನಮಾಝ್ ಮಾಡಲು ತೆರಳಿದ ಅಲೀ(ರ) ರನ್ನು ಇಬ್ರು ಮುಲ್ಲಿಂ ಎಂಬವನು ಹತ್ಯೆಗೈದನು.
‘ನಾಲ್ಕೂವರೆ ವರ್ಷಗಳ ಕಾಲವಾಗಿತ್ತು ಅಲೀ(ರ) ರವರ ಖಿಲಾಫತ್. ಸಿರಿಯಾ ಹಾಗೂ ಈಜಿಪ್ಟ್ ಅಲ್ಲದ ಎಲ್ಲಾ ಪ್ರದೇಶವನ್ನು ಅವರು ವಶಪಡಿಸಿದ್ದರು. ಇವರು ಹತ್ಯೆಗಯ್ಯಲ್ಪಟ್ಟ ನಂತರ ಇವರ ಮಗನಾದ ಹಸನ್ (ರ) ಆರು ತಿಂಗಳ ಕಾಲ ಖಲೀಫರಾದರು.