ಖುರಾನಿನ ಕ್ರತಕ ಬುದ್ಧಿಮತೆ ಮತ್ತು ನೈತಿಕತೆ
ಜಗತ್ತು ಅಣುವಿನಿಂದ ಪರಮಾಣುವಿನೆಡೆಗೆ, ಅಂಗಳದಿಂದ ಮಂಗಳದವರೆಗೆ ಸಾಗಿಬಿಟ್ಟಿದೆ. ಕಿರು ಬೆರಳಿನಲ್ಲಿ ಜಗತ್ತನ್ನು ಹೊತ್ತು ಮಾನವ ಸಾಗುತ್ತಿದಾನೆ ಇದಕ್ಕೆಲ್ಲ ಭದ್ರಬುನಾದಿ ಅಥವಾ ತಾಪು ಕಾಲಿಟ್ಟದ್ದು ಕೃತಕ ಬುದ್ದಿಮತೆ. ಈ ಬುದ್ದಿಮತೆಯು ಜಗತ್ತಿನ ಅತೀ ದೊಡ್ಡ ಕ್ರಾಂತಿಕಾರಿ ಯುಗಕ್ಕೆ ಕಾರಣವಾಗಿ ಮಾರ್ಪಟ್ಟಿತು. ಮಾನವನ ನಾಗರಿಕತೆಯು ಚರಿತ್ರೆ ಪುಟಗಳಲ್ಲಿ ಸರಿ-ತಪ್ಪು ಬಗ್ಗೆ ಇಷ್ಟಕ್ಕೂ ಪ್ರಶ್ನೆಗಳುನ್ನು ಎಬ್ಬಿಸಿದ ಕ್ರಾಂತಿಯಾಗಿದೆ ಕೃತಕ ಬುದ್ದಿಮತೆ. ಇದು ಕೇವಲ ಯಂತ್ರಗಳು ಲೆಕ್ಕಾಚಾರ ಮಾಡುವುದಲ್ಲ ತಂತ್ರಜ್ಞಾನವೇ ಈ ಚಿಂತನೆಯ ಬಾಗಿಲಿನ ಮುಂಭಾಗದಲ್ಲಿ ಮಣಿದು ನಿಂತಿದೆ. ಯಂತ್ರಗಳು ಊಹಿಸುತ್ತವೆ. ಅವಲೋಕಿಸುತ್ತವೆ, ತೀರ್ಮಾನಿಸುತ್ತವೆ. ಮತ್ತು ಕೆಲವೊಮ್ಮೆ ನೈತಿಕ ಆಯ್ಕೆಗಳನ್ನು ಶಿಫಾರಸು ಮಾಡುತ್ತವೆ. ಆದರೂ ಇಂತಹ ಅದ್ಭುತ ವೈಶಲ್ಯದ ಪ್ರಗತಿಯ ನಡುವೆಯೂ ಬಹಿರಂಗದ ಅಂತರಾಳದಿಂದ ಪ್ರತಿಧ್ವನಿಸುವ ಸಾಮರಸ್ಯಕರ ಪ್ರಶ್ನೆಯು ಇನ್ನೂ ಉಳಿದಿದೆ:
ಆತ್ಮಸಾಕ್ಷಿಯಿಲ್ಲದೆ ಜ್ಯಾನವಿರಬಹುದೇ? ಅಥವಾ ಕರುಣೆಯಿಲ್ಲದೆ ಬುದ್ದಿವಂತಿಕೆ ಇರಬಹುದೇ? ಈ ಸಮಯ ಕುರಾನ್ ಮಾನವೀಯತೆಯ ತಿಳಿವಳಿಕೆಯ ಮಿತಿಗಳ ಬಗ್ಗೆ ಎಚ್ಚರಿಸುತ್ತಿದೆ.
وما اوتيتم من العلم إلا قليل
ನಿಮಗೆ ಸ್ವಲ್ಪ ಜ್ಞಾನವನ್ನು ಮಾತ್ರ ನೀಡಲಾಗಿದೆ. [ಅಲ್- ಇಸ್ರಾ ] [7:85]
ಈ ವಚನವು ಸಾವಿರ ವರ್ಷಗಳ ಮುಂಚೆಯೇ ಧರೆಗಳಿದ್ದರೂ ಇಂದಿಗೂ ಕ್ರಾಂತಿಯ ಕಿಚ್ಚನ್ನೂ ಎಡೆಬಿಡದೆ ಹಬ್ಬಿಸುತ್ತಿದೆ. ಪ್ರಸ್ತುತ ವಚನವು ಅಲ್ಲಾಹನ ಅನಂತ ಸ್ಥಾನದ ಮುಂಚೆ ನಮ್ರತೆಯ ಶುಭ್ರ ಸಂದೇಶವನ್ನು ಸಾರುತ್ತಿದೆ. ಮಾನವ ಬುದ್ಧಿಮತೆ ಎಷ್ಟೇ ಮುಂದುವರಿದರೂ ಅದು ಎಂದಿಗೂ ಸೀಮಿತ ಗ್ರಹಿಕೆಯ ಸಣ್ಣ ಪಾತ್ರೆಯೊಳಗೆ ಬಂಧಿತವಾಗಿರುತ್ತದೆ. ಆದರೆ ಇಂದಿನ ಬುದ್ಧಿಮತೆ ಯಾತಚಿತ್ತವಾಗಿ ಈ ಆಶಯಕ್ಕೆ ಎದುರಾಗುತ್ತಿದೆ.
ಕೃತಕ ಬುದ್ದಿಮತೆಯು ಎಷ್ಟೇ ಕ್ರಾಂತಿ ಎಬ್ಬಿಸಿದರೂ, ಎಷ್ಟೇ ಕೊಡುಗೆ ನೀಡಿದರೂ, ಕೃತಕ ಬುದ್ಧಿಮತೆಯ ಯುಗದಲ್ಲಿ ಈ ವಚನದ ಎಚ್ಚರಿಕೆಯೂ ಎಂದಿಗೂ ಕೊನೆಗೊಂಡಿಲ್ಲ. ಯಂತ್ರಗಳು ಕಲಿಯಲು, ಹೊಂದಿಕೊಳ್ಳಲು ಮತ್ತು ತೀರ್ಪುಗಳನ್ನು ಪ್ರಸ್ತಾಪಿಸಲು ಪ್ರಾಂಭಿಸಿದಾಗ ಮಾನವೀಯತೆಯ ಹಿಂದೆಂದಿಗಿಂತಲೂ ಅತಿ ವಿಭಿನ್ನವಾಗಿ ನೈತಿಕ ಪರೀಕ್ಷೆಯನ್ನು ಎದುರಿಸುತ್ತಿವೆ. ಕಾಲಚಕ್ರ ಉರುಳತೊಡಗಿತಂದೆ ತಂತ್ರಜ್ಞಾವು ಇನ್ನು ಮುಂದೆ ಕೇವಲ ಮನುಷ್ಯನ ಸೇವಕರಾಗಿ ಮಾತ್ರ ಕಾರ್ಯ ನಿರ್ವಹಿಸುವುದಿಲ್ಲ, ಬದಲಿಗೆ ಅವು ಅವನ ಸ್ವಭಾವ ನಿರೂಪಣೆ, ಜೀವನ ಶೈಲಿಯ ನಿರೂಪಣೆ ಮತ್ತು ಅವನ ಭಾವನೆಗಳನ್ನು ಅವನ ನಂಬಿಕೆಗಳನ್ನು ಸಹ ರೂಪಿಸಲು ಪ್ರಾರಂಭಿಸುತ್ತದೆ. ಆರಂಭಿಕ ಯುಗದಲ್ಲಿ ಕಂಪ್ಯೂಟರ್‌ಗಳು ಕೇವಲ ಡೇಟಾ ಸಂಸ್ಕರಣೆಯ ಸಾಧನಗಳಾಗಿದ್ದವು, ಆದರೆ ಇವತ್ತು ಆಧುನಿಕ ಕಂಪ್ಯೂಟರ್‌ಗಳು ತೀರ್ಪು ನೀಡುವ ಸಾಮರ್ಥ್ಯವಿರುವ ಘಟಕಗಳಾಗಿ ವಿಕಸನಗೊಂಡಿವೆ.
'ಅಲಿ ಇಜೆಟ್‌ಪೆಗೊಲಿಕ್ ' ಒಮ್ಮೆ ಹೇಳುತ್ತಾರೆ: ಕೃತಕ ಬುದ್ದಿಮತೆ ಇನ್ನು ಮುಂದೆ ನಿಷ್ಕ್ರಿಯ ಸಾಧನವಲ್ಲ, ಅದು ಈಗ ಬದುಕಿನ ಮೌಲ್ಯಮಾಪನ ಮಾಡುತ್ತದೆ. ಗಣನೆಯಿಂದ ನೈತಿಕ ಅನುಚರಣೆಯ ಈ ಬದಲಾವಣೆಯ ಮಾನವ ಕುಲದ ಆತ್ಮ ಸಾಕ್ಷಿಯನ್ನು ಜಾಗ್ರತಗೊಳಿಸಬೇಕು. ತೀರ್ಪು ತೀರ್ಮಾನಗಳು ನೈತಿಕತೆಯನ್ನು ಬೇರ್ಪಟ್ಟು ಹೃದಯ ಮತ್ತು ಆತ್ಮದ ಒಲವನ್ನು ಪಡೆಯಬೇಕು.
ಪವಿತ್ರ ಗ್ರಂಥವಾದ ಕುರಾನ್ ನಿರಂತರವಾಗಿ ಜ್ಞಾನವನ್ನು ಜವಾಬ್ದಾರಿಯೊಂದಿಗೆ ಸಂಯೋಜಿಸುತ್ತವೆ. ಇದು ಚಿಂತನೆ [ತಫಕ್ಕೂರ್] ತಾರ್ತಿಕತೆ [ತವಕ್ಕುಲ್] ಮತ್ತು ನೈತಿಕ ಸಂಯಮ [ತಕ್ವಾ] ವನ್ನು ಆದೇಶಿಸುತ್ತದೆ. ಇಸ್ಲಾಂನಲ್ಲಿ ಜ್ಞಾನವು ಒಂದು ತಟಸ್ಥವಲ್ಲ. ಅದು ನ್ಯಾಯ ಮತ್ತು ಕರುಣೆಯನ್ನು ಎತ್ತಿಹಿಡಿಯುವ ಕರ್ತವ್ಯವನ್ನು ಹೊಂದಿದೆ. ಇನ್ನೊಂದುಕಡೆ ಬುದ್ಧಿಮತೆಯ ಕಡೆ ನೋಡುವುದಾದರೆ ಬುದ್ಧಿಮತೆ ದತ್ತಾಂಶದಿಂದ ಕಲಿಯುತ್ತಿವೆ.
ದುರಾಸೆ, ಪಕ್ಷಪಾತ, ಮತ್ತು ಪೂರ್ವಗ್ರಹದಿಂದ ನಡೆಸಲ್ಪಡುವ ಮಾನವ ಸಮಾಜದಿಂದ ಉತ್ಪತ್ತಿಯಾಗುವ ದತ್ತಾಂಶ. ಇದರಿಂದ ಸಮಾಜವು ಕಲುಷಿತವಾಗಿ ಮಾರ್ಪಡುತ್ತಿದೆ. ಆದ್ದರಿಂದ Ai ನಮ್ಮ ಜಗತ್ತನ್ನು ಪ್ರತಿಬಿಂಬಿಸಿದಾಗ ಅದು ನಮ್ಮ ನೈತಿಕ ವೈಫಲ್ಯಗಳನ್ನು ಸಹ ಪ್ರತಿಬಿಂಬಿಸುತ್ತವೆ. ಪ್ರಸ್ತುತ ಚಾಲ್ತಿಯಲ್ಲಿರುವ ಯಂತ್ರಗಳು ನಮ್ಮ ಬುದ್ದಿ ಶಕ್ತಿಯಿಂದ ಮಾತ್ರವಲ್ಲದೆ ನಮ್ಮ ಒಲವುಗಳಿಂದ ಕೂಡ ತರಬೇತಿ ಕಾರಗತಮಾಡಿವೆ. ಆ ಒಲವುಗಳು ಭ್ರಷ್ಟವಾಗಿದ್ದರೆ ಪ್ರತಿಬಿಂಬವು ಹಾಗೆಯೇ ಇರುತ್ತದೆ.
ಮಾನವನು ತನ್ನ ಅಲ್ಪ ಜ್ಞಾನದ ಅಹಂಮಿನ ಕೋಟೆಯಲ್ಲಿ ಮಾನವೀಯತೆಯ ದೈವಿಕ ಮಾರ್ಗದರ್ಶನವನ್ನು ಮರೆಯತೊಡಗಿದಾಗ ಕುರಾನ್ ಎಚ್ಚರಿಸತೊಡಗಿತು:
"افرأيت من اتخذ الهه هواه"
"ತಮ್ಮ ಸ್ವಂತ ಇಚ್ಛೆಯನ್ನು ತನ್ನ ದೇವನಾಗಿ ಸ್ವೀಕರಿಸಿದವನನ್ನು ನೀವು ಕಂಡಿಲ್ಲವೇ?"
ಮೇಲೆ ಸೂಚಿಸಿದ ವಚನವು ವ್ಯಕ್ತಿಗಳಿಗೆ ಮಾತ್ರವಲ್ಲ ತಂತಜ್ಞಾನ ಮತ್ತು ಲಾಭದ ವಿಗ್ರಹಗಳನ್ನು ಪೂಜಿಸುವ ಸಮಾಜಗಳಿಗೂ ಅನ್ವಯಿಸುತ್ತವೆ.
ರಿಯಾದ್ ಅಲ್- ಸ್ವಾಲಿಹಿನ್ ನಲ್ಲಿ ಕಂಡುಬರುವ ಒಂದು ನಿರೂಪಣೆಯಲ್ಲಿ ಒಬ್ಬ ಸಹಚರರು ಪ್ರವಾದಿಯವರ ಬಳಿ ಕೇಳಿದನು:
"ಓ ದೇವದೂತರೇ ಸದಾಚಾರ ಮತ್ತು ಪಾಪ ಎಂದರೇನು?"
ಪ್ರವಾದಿ (ಸ. ಅ ) ಹೇಳುತ್ತಾರೆ: "ಸದುಪಚಾರವೆಂದರೆ ಒಳ್ಳೆಯ ಗುಣ ಹಾಗು ಪಾಪ ಎಂಬುವುದು ನಿಮ್ಮ ಮನಸಾಕ್ಷಿಯನ್ನು ತೊಂದರೆಗೊಳಿಸುತ್ತದೆ ಮತ್ತು ಆ ಪಾಪವನ್ನು ಜನರು ತಿಳಿದುಕೊಳ್ಳುವುದನು ನೀನು ಇಷ್ಟಪಡುವುದಿಲ್ಲ."
ಈ ಆಳವಾದ ಹದೀಸ್ ನೈತಿಕತೆಯನ್ನು ಸರಳವಾಗಿ ವಿವರಿಸುತ್ತದೆ. ದೈವಿಕ ಬೆಳಕಿನಿಂದ ಮಾರ್ಗದರ್ಶಿಸಲ್ಪಟ್ಟ ಮಾನವ ಹೃದಯವನ್ನು ನಿರ್ಮಿಸುತ್ತವೆ. ವಿಕಾಸನಗೊಳ್ಳುತ್ತಿರುವ ಈ ಆಧುನಿಕ ಜಗತ್ತು ಬುದ್ಧಿವಂತ ಯಂತ್ರಗಳನ್ನು ಸೃಷ್ಠಿಸುವ ಆತುರದಲ್ಲಿ, ಮರೆತು ಬಿಟ್ಟ ಒಂದು ಪ್ರಶ್ನೆಯಿದೆ" ಬುದ್ದಿವಂತಿಕೆ ಯಾವುದಕ್ಕಾಗಿ?"
ಕುರಾನ್ ದೃಷ್ಠಿಕೋನದಲ್ಲಿ ಬುದ್ದಿವಂತಿಕೆ ಎಂಬುವುದು ಸತ್ಯವನ್ನು ಗುರುತಿಸಲು ಮತ್ತು ಸೃಷ್ಟಿಕರ್ತನನ್ನು ಆರಾಧಿಸಲು ನೀಡಲಾದ ಪವಿತ್ರ ಕೊಡುಗೆಯಾಗಿದೆ. ಜ್ಞಾನವು ಅಲ್ಲಾಹನ ಗುಲಾಮಗಿರಿಯಿಂದ ಬೇರ್ಪಟ್ಟಾಗ ಅದು ವಿಷಕಾರಿಯಾಗುತ್ತದೆ. ಕೃತಕ ಬುದ್ಧಿಮತೆಯು ಅಪಾಯವೆಂದರೆ ಯಂತ್ರಗಳಲ್ಲ ಆದರೆ ತಮ್ಮ ಸೃಷ್ಟಿಕರ್ತನೇ ಹೊಣೆಗಾರಿಕೆಯಿಲ್ಲದೆ ಅವುಗಳನ್ನು ವಿನ್ಯಾಸಗೊಳಿಸುವುದು ಮಾನವರು ಎಂದು ಕರೆಯಲ್ಪಡುವ
"ಕೃತಜ್ಞತೆ ಇಲ್ಲದ ನರಪ್ರಾಣಿಗಳು."
ಯುವಲ್ ನೋಹ್ ಹರಾರಿ ತಮ್ಮ ನೆಕ್ಸಸ್ ಕಥೆಯಲ್ಲಿ ಪೇಪರ್ ಕ್ಲಿಪ್ ನ ಕಥೆ ಹೇಳಿದಂತೆ ಸಾಮಾಜಿಕ ಮಾಧ್ಯಮಗಳು ಹಲವು ಅಪಾಯಗಳನ್ನು ಹುಟ್ಟಿಸುತ್ತಿದೆ, ಎಂದರೆ ಅವುಗಳ ಅಲ್ಲಾರಿಥಮ್ ಗಳು ನಿರ್ದಿಷ್ಠ ಒಂದು ಗುರಿಯನ್ನು ಹೊಂದಿವೆ. ಮಾಧ್ಯಮದಲ್ಲಿ ಹೆಚ್ಚು ಸಕ್ರಿಯವಾಗಿ ತೊಡಗಿಸಿಕೊಳ್ಳದಿದ್ದರೆ ಇವುಗಳು ಕೋಪ, ಭಯ, ಮತ್ತು ಸುಳ್ಳು ಅಪ್ರಚಾರ ಸುದ್ಧಿಗಳನ್ನು ಹೆಚ್ಚಿಸುತ್ತವೆ. ಜನರನ್ನು ಚಿಂತನೆಗೆ ಒಯ್ಯದೇ , ಸ್ಕ್ರೋಲ್ ಮಾಡಲು ಪ್ರೇರೇಪಿಸುತ್ತವೆ. ಹೆಚ್ಚು ವಿಭಜನೆಯ ವಿಷಯಗಳು ಹೆಚ್ಚು ಗಮನ ಸೆಳೆಯುತ್ತದೆ.
ಅಲ್ಲಾಹನು ಅವನು ಕುರಾನಿನಲ್ಲಿ ವಿವರಿಸುತ್ತಾನೆ
"ولا تقف ما ليس لك به علم إنّ السمع
"والبصر والفؤاد كلّ أولئك كان عنه نسول"
"ನಿನಗೆ ಜ್ಞಾನವಿಲ್ಲದ ವಿಷಯವನ್ನು ಅನುಸರಿಸಬೇಡ, ನಿಜಕ್ಕೂ ಶ್ರವಣ, ಕೇಳುವಿಕೆ,ನೋಡುವಿಕೆ ಮತ್ತು ಹೃದಯ ಇವೆಲ್ಲವೂ ನಿಶ್ಚಯವಾಗಿಯುವು ಪ್ರಶ್ನಿಸಲ್ಪಡುವುದು"
[ ಅಲ್-ಇಸ್ರಾ 17:36 ]
ಈ ವಚನವು ಬುದ್ಧಿಶಕ್ತಿ ಮತ್ತು ಹೃದಯದ ಪ್ರತಿಯೊಂದು ಕ್ರಿಯೆಗೂ ಹೊಣೆಗಾರಿಕೆಯ ಬಗ್ಗೆ ಬಹಳ ಸೂಕ್ತವಾಗಿ ಎಚ್ಚರಿಸುತ್ತಿದೆ.
ಕೃತಕ ಬುದ್ಧಿಮತೆ ಮತ್ತು ನೈತಿಕತೆಯ ಭೇದಕವು ತಾಂತ್ರಿಕ ಚರ್ಚೆಯಲ್ಲ, ಇದು ಆಧ್ಯಾತ್ಮಿಕತೆಯ ಚರ್ಚೆಯಾಗಿದೆ. ಸರಿ ಮತ್ತು ತಪ್ಪು ವ್ಯಾಖ್ಯಾನಿಸುವ ಅಧಿಕಾರ ಯಾರಿಗಿದೆ ಎಂಬುದರ ಬಗ್ಗೆ ಯಂತ್ರಗಳು ಅಪಾರ ಮಾಹಿತಿಯನ್ನು ನೀಡಬಹುದು. ಆದರೆ ಅವು ಆತ್ಮೀಯತೆ ಮತ್ತು ಧಾರ್ಮಿಕತೆಯ ಮುಂದೆ ವಿಸ್ಮಯವನ್ನು ಅನುಭವಿಸಲು ಅಥವಾ ದಮನಿತರಿಗೆ ಸಾಧ್ಯವಿಲ್ಲ. ಕರುಣೆಯನ್ನು ಅನುಭವಿಸಲು ಸಾಧ್ಯವಿಲ್ಲ.
ಇಸ್ಲಾಂ ಧಾರ್ಮ ಎಂದಿಗೂ ಮಾನವರನ್ನು ಗೌರವಿಸುತ್ತಲೇ ಬಂದಿದೆ. ಪ್ರತ್ಯೇಕವಾಗಿ ಕುರಾನ್ ಮಾನವ ಜನಾಂಗವನ್ನು ಎಲ್ಲ ಸೃಷ್ಟಿಗಳಿಗಿಂತ ಮಿಗಿಲಾಗಿ ಗೌರವಿಸುತ್ತಿವೆ:
ولقد كرمنا بنى آدم
"ನಿಶ್ಚಯವಾಗಿಯೂ ನಾವು ಆದಮ್ ಸಂತತಿಯನ್ನು ಗೌರವಿಸಿದ್ದೇವೆ".
ಈ ಸೂಕ್ತದ ಒಳ ಅರ್ಥವನ್ನು ನೋಡುವುದಾದರೆ ಈ ಗೌರವವು ಕೇವಲ ಬುದ್ದಿವಂತಿಕೆಯಿಂದಲ್ಲ ಬದಲಾಗಿ ಆತ್ಮಸಾಕ್ಷಿಯಿಂದ ಹುಟ್ಟಿಕೊಂಡ ಮತ್ತು ಸುಳ್ಳಿನ ಬದಲಿಗೆ ಸತ್ಯವನ್ನು, ಅನ್ಯಾಯದ ಬದಲಿಗೆ ನ್ಯಾಯ ,ಅಧಿಕಾರವನ್ನು ಮತ್ತು ಕ್ರೌರ್ಯದ ಬದಲಿಗೆ ಕರುಣೆಯನ್ನು ಆಯ್ಕೆ ಮಾಡುವ ವಿಶಿಷ್ಟ ಸಾಮರ್ಥ್ಯದಿಂದ ಈ ಗೌರವವು ಮಾನವ ಕುಲಕ್ಕೆ ಸಲ್ಲುಸುತ್ತದೆ.
ಬುದ್ದಿವಂತಿಕೆ ಬೆಳೆಯುತ್ತಾ ಹೋದಂತೆ ನಂಬಿಕೆಯು ಪೂರ್ಣವಾಗುವುದನ್ನು ಖಚಿತಪಡಿಸುವುದು ಒಂದು ಪೂರ್ಣ ವಿಶ್ವಾಸಿಯ ಕರ್ತವ್ಯವಾಗಿದೆ. ಇಂತಹ ಸಮಯದಿ ಮಾತ್ರ ಜ್ಞಾನವು ಹೊರೆಯಾಗಿ ಉಳಿಯದೆ ಆಶೀರ್ವಾದವಾಗಿ ಉಳಿಯುವುದು. ಪ್ರಸ್ತುತ ಇಸ್ಲಾಂ ಧರ್ಮವೂ ಎಂದಿಗೂ ಪ್ರಗತಿಯ ಬೆಳವಣಿಗೆಯನ್ನು ತಿರಸ್ಕರಿಸುವುದಿಲ್ಲ ಆದರೆ ಅದನ್ನು ಹೊಣೆಗಾರಿಕೆಯೊಂದಿಗೆ ಒಯ್ಯುತ್ತದೆ. ಕುರಾನ್ ಜ್ಞಾನವನ್ನು ಹುಡುಕುವುದನ್ನು ಪ್ರೋತ್ಸಾಹಿಸುತ್ತದೆ ಆದರೆ ಯಾವಾಗಲೂ ನ್ಯಾಯ ಮತ್ತು ಕರುಣೆಯ ಮಿತಿ ತಂತ್ರಜ್ಞಾನವು ವಿಕಸನಗೊಳ್ಳಬೇಕು.
ಪ್ರತಿಯೊಬ್ಬ ವಿಶ್ವಾಸಿಯೂ ಈ ಜಗತ್ತಿನಲ್ಲಿ ತನ್ನ ಬಹುಮುಖ್ಯ ಪಾತ್ರದ ಬಗ್ಗೆ ಚಿಂತಿಸಬೇಕು,ಮನುಷ್ಯರು ಮುಂಬರುವ ಕಾಲದಲ್ಲಿ ತಂತ್ರಜ್ಞಾನದ ಯುಗದಲ್ಲಿ ನೈತಿಕತೆಯನ್ನು ರೂಪಿಸುವ ಮುಖ್ಯವಾದ ಪಾತ್ರವನ್ನು ವಹಿಸಬೇಕು. ಇಸ್ಲಾಮಿನ ದೃಷ್ಟಿಯಲ್ಲಿ ನೈತಿಕತೆಯು ಹೊರಗಿನಿಂದ ಹೇರಲ್ಪಡುವುದಿಲ್ಲ ಆದರೆ ಒಳಗೆ ಸಾಗರವಾಗಿ ಹರಿಯುತ್ತಿರುತ್ತವೆ.
"ಎಲ್ಲವನ್ನೂ ಅಲ್ಲಾಹು ನೋಡುತ್ತಿದ್ದಾನೆ ಮತ್ತು ಪ್ರತಿಯೊಂದು ಕ್ರಿಯೆಯನ್ನು ವಾಖಲಿಸುತ್ತಿದ್ದಾನೆ. ಎಲ್ಲದಕ್ಕೂ ನಿಶ್ಚಿತ ಪ್ರತಿಫಲವಿದೆ."
ಎಂಬ ನೈತಿಕತೆಯ ಚಿಂತನೆಯು ಎಂದಿಗೂ ಕೃತಕ ಬುದ್ದಿಮತೆ ಹೊಂದಿರುವುದಿಲ್ಲ , ಎಂದಿಗೂ ಅವನ್ನು ಪಡೆಯಲು ಸಾಧ್ಯವಿಲ್ಲ. ಏಕೆಂದರೆ ಕೃತಕ ಬುದ್ದಿಮತೆ ಎಂದಿಗೂ ಸತ್ಯದ ಹಾದಿಯ ಆತ್ಮವನ್ನು ಹೊಂದಿರುವುದಿಲ್ಲ. ಹೀಗಾಗಿ ವಿಶ್ವಾಸಿಯು ತಾಂತ್ರಿಕ ಯುಗದಲ್ಲಿ ನೈತಿಕತೆಯ ರಕ್ಷನಾಗಿ ಉಳಿಯಬೇಕು.
"ಜ್ಞಾನ ಎಂದಿಗೂ ಹೊತ್ತುವ ಬೆಂಕಿಯಾಗಿ ಅಲ್ಲ ಜ್ವಲಿಸುವ ಬೆಳಕಾಗಿ ಉಳಿಯುವಂತೆ ನೋಡಿಕೊಳ್ಳಬೇಕು."
ರಾಫಿ ಕೋಲ್ಪೆ