ಹೃದಯ  ಮತ್ತು  ಅಂಗವಿಕಲತೆ!

heartಹೈದರಾಬಾದಿನ ಖಾಸಗಿ ಸಂಸ್ಥೆಯೊಂದು ವಿಕಲಚೇತನ ಪಾಲನಾ ಕೇಂದ್ರವನ್ನು ನಡೆಸುತ್ತಿತ್ತು. ವಿಕಲಾಂಗರನ್ನು ವಿವಿಧ ರೀತಿಯ ಪ್ರಯೋಗಗಳ ಮೂಲಕ  ಶಕ್ತಿ ತುಂಬಿ ಧೈರ‍್ಯವಂತರನ್ನಾಗಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಸಚಲರನ್ನಾಗಿಸುವುದರಲ್ಲಿ ಅತೀವ ಕಾಳಜಿ ವಹಿಸುತ್ತದೆ. ಸಮಯ ಸಂದರ್ಭಕ್ಕನುಸಾರವಾದ ಭೋದನೆ, ಪ್ರಯೋಗ  ಮತ್ತು ಹತ್ತು ಹಲವು ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿತ್ತು. ಜಗತ್ತಿನ ಮಹಾನ್ ಸಾಧಕರಲ್ಲಿ ಅಂಗವಿಕಲರು ಮಾಡಿದ ಸಾಧನೆಗಳನ್ನು ಅವರು ಬರೆದ ದಾಖಲೆಗಳನ್ನು ಎಲೆ ಎಲೆಯಾಗಿ ಬಿಡಿಸಿ ಹೇಳಿ ವಿಕಲತೆಯ ಬಗ್ಗೆ ಇರುವ ಜಿಗುಪ್ಸೆ ಮತ್ತು ಖಿನ್ನತೆಯನ್ನು ಹೋಗೂಡಿಸಿ ವಿಶೇಷ ರೀತಿಯಲ್ಲಿ ಸಂಸ್ಥೆಯು ತುಂಬುತಿದ್ದ ಮನೋಸ್ಥೇಯಕ ಮೆಚ್ಚುವಂತದ್ದಾಗಿತ್ತು. ಈ ರೀತಿಯ ಒಂದು ಪ್ರಯೋಗ ಜಗತ್ತಿನಲ್ಲೇ ಗಮನವನ್ನೇ ಸೆಳೆದದ್ದು  ಅದ್ಬುತ ಮತ್ತು ಆಶ್ಚರ‍್ಯಕರ. ಸಂಸ್ಥೆಯ ಸುಪರ್ದಿಯಲ್ಲಿದ್ದ ಅಂಗವಿಕಲ ಮಕ್ಕಳಿಗೆ ವಿಶೇಷವಾದ ರೀತಿಯಲ್ಲಿ ಸ್ಪರ್ದೆಯೊಂದನ್ನು ಏರ್ಪಡಿಸಲಾಗಿತ್ತು. ನೂರು ಮೀಟರ್  ಓಟವಾಗಿತ್ತು ಸ್ಪರ್ಧೆ. ಸ್ಪರ್ದಾಳುಗಳಲ್ಲಿ ಕುರುಡರು, ಕಿವುಡರು, ಕಾಲು ಊದಿಕೊಂಡಿರುವವರು ನೆಟ್ಟಗೆ ನಿಲ್ಲಲಾಗದವರು ಎಲ್ಲರೂ ಇದ್ದರು. ಧೈರ್ಯವಂತರಾಗಿ ಬಂದು ಸ್ಪರ್ಧೆಯ ಮೈದಾನದಲ್ಲಿ ಸಿದ್ದರಾಗಿದ್ದರು. ಇನೇನು ಸೀಟಿ ಊದಿದ್ದೇ ತಡ ಒಮ್ಮೆಲೆ ತಮ್ಮ ತಮ್ಮ ಗುರಿಯತ್ತ ಮುನ್ನುಗ್ಗಿದರು. ಅವರಲ್ಲಿದ್ದ ಉತ್ಸಾಹ ಲವಲವಿಕೆಯನ್ನು ನೋಡಿದರೆ ಎಲ್ಲರು ಕಣ್ಣುಬಿಟ್ಟು ನೋಡುತ್ತಿದ್ದರು. ಅವರು ಓಟದ ಲೈನಲ್ಲಿ ಕಾಲೆಳೆಯುತ್ತಾ, ತೆವಳುತ್ತಾ, ಪರದಾಡುತ್ತಾ, ಸ್ಪರ್ಧೆ ಸಾಗುತ್ತಿತ್ತು. ಇದ್ದಕ್ಕಿದ್ದಂತೆಯೇ ಅವರಲ್ಲಿ ಒಬ್ಬಾತ ಕೆಳಗೆ ಬಿದ್ದು ಬಿಡುತ್ತಾನೆ. ಅನಿರೀಕ್ಷಿತವಾದ ಆಘಾತ ಬಿದ್ದವನನ್ನು ಮಾತ್ರ ಗಾಬರಿಗೊಳಿಸಿದ್ದಲ್ಲದೇ ಉಳಿದ  ಎಲ್ಲಾ ಸ್ಪರ್ದಾಳುಗಳನ್ನು ಅವಕ್ಕಾಗಿಸಿತ್ತು. ಕಾಲೆಳೆದು ತೆವಳುತ್ತಾ ಇದ್ದ ಸ್ಪರ್ದಾಳುಗಳು ನಿಂತಲ್ಲೇ ಕಲ್ಲಾಗಿ ಹೋಗಿದ್ದರು. ಯಾರೂ ಮುಂದೆ ಚಲಿಸುತ್ತಿಲ್ಲ. ಅವರೆಲ್ಲರೂ ಗುರಿಯನ್ನು ಮರೆತು ಬಿದ್ದವನ ಕಡೆ  ಮುನ್ನುಗ್ಗುತ್ತಾರೆ. ಬಿದ್ದವನನ್ನು ಕೈ ಹಿಡಿದು ಮೇಲಕ್ಕೆತ್ತಿ ಕೂರಿಸುತ್ತಾರೆ. ನಂತರ ನೀರು ಕೊಟ್ಟು ಮುಖಕ್ಕೆ ಸಿಂಪಡಿಸಿ ಸಂತೈಸುತ್ತಾರೆ. ನಾವೀಗ ಸ್ಪರ್ದಾಳುಗಳು ಎಂಬ ಪ್ರಜ್ಞೆಯೇ ಅವರಲ್ಲಿರಲಿಲ್ಲ. ಒಬ್ಬರಿಗಿಂತ ಒಬ್ಬರು ನಾ ಮುಂದು  ನಾ ಮುಂದು ಎಂಬಂತೆ ಸಹಕರಿಸಲು ಸಂತೈಸಲು ಧುಮುಕುತ್ತಿದ್ದರು. ಕೆಲ ಹೊತ್ತಿನ ಬಳಿಕ ಬಿದ್ದವನೇನು ಸುಧಾರಿಸಿಕೊಳ್ಳುತ್ತಾನೆ, ಸ್ಪರ್ಧಾಳುಗಳು ಮುಖ ಮುಖ ನೋಡಿಕೊಳ್ಳುತ್ತಾರೆ ನೀವೇನು ಮಾಡುವುದು ಮುಂದಕ್ಕೆ ಓಡುವುದೋ ಅಲ್ಲ ಸ್ಪರ್ಧೆಯಿಂದ ಹಿಂಜರಿಯುವುದೋ ಎಂದು ಚಿಂತಾಮಗ್ನರಾಗುತ್ತಾರೆ. ಅಷ್ಟರಲ್ಲಿ ಅವರಿಗೆ ಹೊಳೆದ ಉಪಾಯ ಬಹಳ ಅಚ್ಚರಿಯಾಗಿತ್ತು.  ಬಿದ್ದವನನ್ನು ಬಿಟ್ಟು ಓಡಿ ಹೋಗುವುದು ಸಮಂಜಸವಲ್ಲ. ಅಷ್ಟಕ್ಕೂ  ಸ್ಪರ್ಧೆಯನ್ನು ತೊರೆಯುವುದೂ ನ್ಯಾಯವಲ್ಲ. ಅವರೆಲ್ಲರೂ ಮುಖ ಮುಖ ನೋಡಿದರು. ಪರಸ್ಪರ ಭಾವನೆಗಳನ್ನು ಅರ್ಥೈಸಿಕೊಂಡರು. ಮನಸ್ಸು ಯಾರೂ ಯಾರನ್ನು ಬಿಟ್ಟು ಬಿಡದ ಹಂತಕ್ಕೆ ತಲುಪಿದರು. ಪರಸ್ಪರ ಬಿದ್ದಾಗ ಹಿಡಿದುಕೊಂಡ  ಕೈಯನ್ನು ಎಲ್ಲರೂ ಗಟ್ಟಿಯಾಗಿ ಹಿಡಿದುಕೊಂಡು ಒಂದಾಗಿ ಮುನ್ನುಗ್ಗಿದರು. ಗುರಿಮುಟ್ಟಿದರು ಯಾರೂ ಸೋಲಲಿಲ್ಲ. ಎಲ್ಲರೂ ಒಂದೇ ಸಮಯದಲ್ಲಿ  ವಿಜಯದ ಗೆರೆಯನ್ನು ದಾಟಿದರು. ಎಲ್ಲರೂ ಗೆದ್ದೇ ಬಿಟ್ಟರು. ಸಾಮಾನ್ಯವಾಗಿ ವಿಕಲರು ಅಬಲರು ಅಂತ ನಾವು ಅಂಗವಿಕಲರನ್ನು ಗುರುತಿಸಿದರೂ ಅಸಾಮಾನ್ಯವಾದ ಸಾಧನೆಯಾಗಿತ್ತು ಅವರು ಇತಿಹಾಸದ ಪುಟದಲ್ಲಿ ದಾಖಲಿಸಿದ್ದು. ಸಾಮಾನ್ಯ ಸ್ಪರ್ಧೆಗಿಂತ ಮಿಗಿಲಾಗಿ ಬದುಕಿನ ಸ್ಪರ್ಧೆಯನ್ನೇ ಗೆಲ್ಲುವ ರೀತಿಯನ್ನು ಪ್ರತಿಯೊಬ್ಬನಿಗೂ ಮಾದರಿಯಾಗುವ ರೀತಿಯಲ್ಲಿ ಅವರು ಮಾಡಿ ತೋರಿಸಿದರು. ಬದುಕು ಎಂದಾಕ್ಷಣ ಗೆಲ್ಲುವುದೇ ಗುರಿ ಹೇಗಾದರೂ ಮಾಡಿ  ಏನೆಲ್ಲಾ ಕುತಂತ್ರಗಳಿಂದ ಗೆಲುವನ್ನು ಪಡೆಯಬೇಕೆಂದು ಸಾಮಾನ್ಯವಾಗಿ ಎಲ್ಲರೂ ಹಂಬಲಿಸುತ್ತಾರೆ. ಆದರೆ ತನ್ನನ್ನು ತಾನೇ ಸೋಲಿಸಿ  ಇತರರನ್ನು ಗೆಲ್ಲಿಸುವಂತೆ ಮಾಡುವಾಗ ಮಾನವೀಯತೆಯ ತುತ್ತ ತುದಿ ಏರುವಲ್ಲಿ ಒಬ್ಬ ಗೆಲುವನ್ನು ಸಾಧಿಸುತ್ತಾನೆ. ಜಗತ್ತಿನ ಯಾವುದೇ ಸ್ಪರ್ಧೆ ಇರಲಿ, ಸಾಹಸವಿರಲಿ, ದಾಖಲೆಗಳಿರಲಿ, ವಿಸ್ಮಯವಿರಲಿ ಒಂದಲ್ಲ ಒಂದು ದಿನ ಅದು ಏನೂ ಅಲ್ಲದಾಗಿ ಹೋಗುತ್ತದೆ.ಆದರೆ ಪರರನ್ನು ಗುರಿ ಮುಟ್ಟಿಸುವ  ಕಾರ‍್ಯ ಯಾವತ್ತೂ ಕಡೆಗಣಿಸಲ್ಪಡುವುದಿಲ್ಲ ಅದು ಇನ್ನಷ್ಟು ಪ್ರಖರವಾಗಿ ಬೆಳಗುತ್ತದೆ.  ಈ ದೃಷ್ಠಿಕೋನದಲ್ಲಿ ಅಂಗವಿಕಲರನ್ನು ಅಳೆದು ತೂಗುವಾಗ ಅವರಲ್ಲಿದ್ದ ವಿಕಲತೆ , ವಿಕಲಾಂಗತೆಯು ಯಾವ ಲೆಕ್ಕಕ್ಕೆ ಬರುವುದಿಲ್ಲ. ವಿಕಲತೆಯನ್ನು ಮೀರಿ ಬೆಳೆದ  ವ್ಯಕ್ತಿತ್ವಗಳಾಗಿ ಅವರನ್ನು ನಾವು ನೋಡುತ್ತೇವೆ. ಇವರು ವಿಕಲಾಂಗರಾಗಿ ಚಿನ್ನ ಬೆಳ್ಳಿ ಪಡೆದ, ದಾಖಲೆಗಳ ಮೇಲೆ ದಾಖಲೆ ಬರೆದವರಿಗಿಂತಲೂ ಮಿಗಿಲಾಗಿರುತ್ತಾರೆ. ಕಾರಣ  ಅವರು ವಿಕಲಾಂಗರಾಗಿ ಸಾಧನೆ ಮೆರೆದವರು. ಸಾಧನೆ ಮಾಡಿದ ಇವರು ವಿಕಲತೆಯನ್ನೇ ಮರೆತವರು. ಇಂತಹಾ ಘಟನೆಗಳು ನಮಗೆ ನೀಡುವ ದೊಡ್ಡ ಪಾಠವೇನೆಂದರೆ ಅಂಗಾಂಗದಲ್ಲಿ ವಿಕಲತೆ ಸಮಸ್ಯೆಯಲ್ಲ. ಹೃದಯಕ್ಕೆ ವಿಕಲತೆ ತಾಗಬಾರದು ಎನ್ನುವುದಾಗಿದೆ. ಹೃದಯಕ್ಕೆ ಮನಸ್ಸಿಗೆ ವಿಕಲತೆ ಬಂತೆಂದಾದರೆ ಆತನ ಕಣ್ಣಿಗೆ ದೋಷ ಬರುತ್ತದೆ,  ನಂತರ  ಕಿವಿಗೆ ಹಾಗೆ ನಾಲಗೆಗೆ ವಿಕಲತೆ ಬಂದು ಆತನ ನೋಟ, ಮಾತು, ಕಂಡದ್ದು ಕೇಳಿದ್ದು ಎಲ್ಲವೂ ವಿಷಕಾರವಾಗಿ ಪರಿಣಮಿಸುತ್ತದೆ. ಆತನಿಂದ ಯಾರಿಗೂ ನೆಮ್ಮದಿ ಇಲ್ಲದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಪರಿಣಿತವಾದ ವೈದ್ಯರೇ ಇರಲಿ ಆತ ರಕ್ತ, ಕಫ, ಮೂತ್ರವನ್ನು ಪರೀಕ್ಷಿಸಿ ದೇಹ ಆರೋಗ್ಯದ ಏರುಪೇರನ್ನು ಮನವರಿಕೆ ಮಾಡುತ್ತಾನೆಯೇ ಹೊರತು ಹೃದಯದ ಅನಾರೋಗ್ಯವನ್ನು ತಿಳಿಯಲಾರ. ಹೃದಯದ ವಿಕಲತೆ ಎಲ್ಲಾ ವಿಕಲತೆ ಮತ್ತು ವಿಕೃತಿಗಿಂತ ದೊಡ್ಡ ಶಾಪವಾಗಿರುತ್ತದೆ. ಆ ಕಾರಣವಾಗಿ ಹೃದಯ ವಿಕಲಾಂಗನಿಂದ  ಹತ್ತು ಹಲವು ಮಂದಿಗೆ ತೊಂದರೆಯೇ ಆಗಿರುತ್ತದೆ. ಆತನ ನಾಲಗೆಯು ಯಾವತ್ತು ಕೆಟ್ಟದ್ದನ್ನೇ ಉದುರಿಸುತ್ತಿರುತ್ತದೆ ಮತ್ತು ಚಪ್ಪರಿಸುತ್ತಿರುತ್ತದೆ. ಆದರೆ ನಿರ್ಮಲ ಹೃದಯದವರು ಕೆಟ್ಟದು ಮಾತು ಮಾತ್ರವಲ್ಲ ದೇಹದ ಮುಚ್ಚುವ ಭಾಗವನ್ನು  ನಾಲಗೆಯಲ್ಲೂ ಸ್ಪರ್ಶಿಸುವುದಿಲ್ಲ, ಅದು ಅವರ ಹೃದಯದ ಪರಿಶುದ್ದತೆಯಾಗಿರುತ್ತದೆ. ಯಾವುದೇ ಅನಿವಾರ‍್ಯ ಸಂದರ್ಭದಲ್ಲೂ ಅದು ಇದು ಅಂತ ಹೇಳಿ ಸುಮ್ಮನಾಗುತ್ತಾರೆ. ಆದರೆ ಹೃದಯ ಕರಟಿ ಹೋದ ಕ್ಷುದ್ರ ಜೀವಿಗಳು ಮಾತ್ರ ಕೆಟ್ಟ ಜಾಗದಲ್ಲೇ ಬಿದ್ದುಕೊಂಡಿರುತ್ತಾರೆ, ಕೆಟ್ಟದನ್ನೇ ಮಾಡಿಕೊಂಡಿರುತ್ತಾರೆ  ಮತ್ತು ಆಡಿಕೊಂಡಿರುತ್ತಾರೆ. ಸಮಾಜವು ಇಂತವರಿಂದ ಅನೇಕ ಅಪಾಯಗಳನ್ನು ಎದುರಿಸಿದ್ದುಂಟು. ಕೆಲವು ಜನರು ಕೆಟ್ಟಾಗ ಸಾವಿರಾರು ಮಂದಿ ಬಲಿಯಾಗುತ್ತಾರೆ. ಆದರೆ ಕೆಲವೇ ಮಂದಿಯ ಹೃದಯ ಕೆಟ್ಟು ಹೋದಾಗ ಲಕ್ಷಾಂತರ ಮಂದಿ ಬಲಿಯಾದ ಇತಿಹಾಸ ಜಗತ್ತಿನುದ್ದಕ್ಕೂ ಇದೆ. ಹಿಟ್ಲರ್, ಮೊಸಲೊನಿ, ಬರೆದ ರಕ್ತ ರಂಜಿತ ಅದ್ಯಾಯ ಹೃದಯ ವಿಕಲತೆಯ ಕಾರಣವೇ ಆಗಿತ್ತು . ಹೃದಯ ಕೆಡುಕಾದರೆ ಎಲ್ಲವೂ ಕೆಡುಕು (ಹದೀಸ್) -ಮೌಲಾನಾ ಯು.ಕೆ ಅಬ್ದುಲ್ ಅಝೀಝ್ ದಾರಿಮಿ ಹೃದಯ  ಮತ್ತು  ಅಂಗವಿಕಲತೆ! ಹೈದರಾಬಾದಿನ ಖಾಸಗಿ ಸಂಸ್ಥೆಯೊಂದು ವಿಕಲಚೇತನ ಪಾಲನಾ ಕೇಂದ್ರವನ್ನು ನಡೆಸುತ್ತಿತ್ತು. ವಿಕಲಾಂಗರನ್ನು ವಿವಿಧ ರೀತಿಯ ಪ್ರಯೋಗಗಳ ಮೂಲಕ  ಶಕ್ತಿ ತುಂಬಿ ಧೈರ‍್ಯವಂತರನ್ನಾಗಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಸಚಲರನ್ನಾಗಿಸುವುದರಲ್ಲಿ ಅತೀವ ಕಾಳಜಿ ವಹಿಸುತ್ತದೆ. ಸಮಯ ಸಂದರ್ಭಕ್ಕನುಸಾರವಾದ ಭೋದನೆ, ಪ್ರಯೋಗ  ಮತ್ತು ಹತ್ತು ಹಲವು ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿತ್ತು. ಜಗತ್ತಿನ ಮಹಾನ್ ಸಾಧಕರಲ್ಲಿ ಅಂಗವಿಕಲರು ಮಾಡಿದ ಸಾಧನೆಗಳನ್ನು ಅವರು ಬರೆದ ದಾಖಲೆಗಳನ್ನು ಎಲೆ ಎಲೆಯಾಗಿ ಬಿಡಿಸಿ ಹೇಳಿ ವಿಕಲತೆಯ ಬಗ್ಗೆ ಇರುವ ಜಿಗುಪ್ಸೆ ಮತ್ತು ಖಿನ್ನತೆಯನ್ನು ಹೋಗೂಡಿಸಿ ವಿಶೇಷ ರೀತಿಯಲ್ಲಿ ಸಂಸ್ಥೆಯು ತುಂಬುತಿದ್ದ ಮನೋಸ್ಥೇಯಕ ಮೆಚ್ಚುವಂತದ್ದಾಗಿತ್ತು. ಈ ರೀತಿಯ ಒಂದು ಪ್ರಯೋಗ ಜಗತ್ತಿನಲ್ಲೇ ಗಮನವನ್ನೇ ಸೆಳೆದದ್ದು  ಅದ್ಬುತ ಮತ್ತು ಆಶ್ಚರ‍್ಯಕರ. ಸಂಸ್ಥೆಯ ಸುಪರ್ದಿಯಲ್ಲಿದ್ದ ಅಂಗವಿಕಲ ಮಕ್ಕಳಿಗೆ ವಿಶೇಷವಾದ ರೀತಿಯಲ್ಲಿ ಸ್ಪರ್ದೆಯೊಂದನ್ನು ಏರ್ಪಡಿಸಲಾಗಿತ್ತು. ನೂರು ಮೀಟರ್  ಓಟವಾಗಿತ್ತು ಸ್ಪರ್ಧೆ. ಸ್ಪರ್ದಾಳುಗಳಲ್ಲಿ ಕುರುಡರು, ಕಿವುಡರು, ಕಾಲು ಊದಿಕೊಂಡಿರುವವರು ನೆಟ್ಟಗೆ ನಿಲ್ಲಲಾಗದವರು ಎಲ್ಲರೂ ಇದ್ದರು. ಧೈರ್ಯವಂತರಾಗಿ ಬಂದು ಸ್ಪರ್ಧೆಯ ಮೈದಾನದಲ್ಲಿ ಸಿದ್ದರಾಗಿದ್ದರು. ಇನೇನು ಸೀಟಿ ಊದಿದ್ದೇ ತಡ ಒಮ್ಮೆಲೆ ತಮ್ಮ ತಮ್ಮ ಗುರಿಯತ್ತ ಮುನ್ನುಗ್ಗಿದರು. ಅವರಲ್ಲಿದ್ದ ಉತ್ಸಾಹ ಲವಲವಿಕೆಯನ್ನು ನೋಡಿದರೆ ಎಲ್ಲರು ಕಣ್ಣುಬಿಟ್ಟು ನೋಡುತ್ತಿದ್ದರು. ಅವರು ಓಟದ ಲೈನಲ್ಲಿ ಕಾಲೆಳೆಯುತ್ತಾ, ತೆವಳುತ್ತಾ, ಪರದಾಡುತ್ತಾ, ಸ್ಪರ್ಧೆ ಸಾಗುತ್ತಿತ್ತು. ಇದ್ದಕ್ಕಿದ್ದಂತೆಯೇ ಅವರಲ್ಲಿ ಒಬ್ಬಾತ ಕೆಳಗೆ ಬಿದ್ದು ಬಿಡುತ್ತಾನೆ. ಅನಿರೀಕ್ಷಿತವಾದ ಆಘಾತ ಬಿದ್ದವನನ್ನು ಮಾತ್ರ ಗಾಬರಿಗೊಳಿಸಿದ್ದಲ್ಲದೇ ಉಳಿದ  ಎಲ್ಲಾ ಸ್ಪರ್ದಾಳುಗಳನ್ನು ಅವಕ್ಕಾಗಿಸಿತ್ತು. ಕಾಲೆಳೆದು ತೆವಳುತ್ತಾ ಇದ್ದ ಸ್ಪರ್ದಾಳುಗಳು ನಿಂತಲ್ಲೇ ಕಲ್ಲಾಗಿ ಹೋಗಿದ್ದರು. ಯಾರೂ ಮುಂದೆ ಚಲಿಸುತ್ತಿಲ್ಲ. ಅವರೆಲ್ಲರೂ ಗುರಿಯನ್ನು ಮರೆತು ಬಿದ್ದವನ ಕಡೆ  ಮುನ್ನುಗ್ಗುತ್ತಾರೆ. ಬಿದ್ದವನನ್ನು ಕೈ ಹಿಡಿದು ಮೇಲಕ್ಕೆತ್ತಿ ಕೂರಿಸುತ್ತಾರೆ. ನಂತರ ನೀರು ಕೊಟ್ಟು ಮುಖಕ್ಕೆ ಸಿಂಪಡಿಸಿ ಸಂತೈಸುತ್ತಾರೆ. ನಾವೀಗ ಸ್ಪರ್ದಾಳುಗಳು ಎಂಬ ಪ್ರಜ್ಞೆಯೇ ಅವರಲ್ಲಿರಲಿಲ್ಲ. ಒಬ್ಬರಿಗಿಂತ ಒಬ್ಬರು ನಾ ಮುಂದು  ನಾ ಮುಂದು ಎಂಬಂತೆ ಸಹಕರಿಸಲು ಸಂತೈಸಲು ಧುಮುಕುತ್ತಿದ್ದರು. ಕೆಲ ಹೊತ್ತಿನ ಬಳಿಕ ಬಿದ್ದವನೇನು ಸುಧಾರಿಸಿಕೊಳ್ಳುತ್ತಾನೆ, ಸ್ಪರ್ಧಾಳುಗಳು ಮುಖ ಮುಖ ನೋಡಿಕೊಳ್ಳುತ್ತಾರೆ ನೀವೇನು ಮಾಡುವುದು ಮುಂದಕ್ಕೆ ಓಡುವುದೋ ಅಲ್ಲ ಸ್ಪರ್ಧೆಯಿಂದ ಹಿಂಜರಿಯುವುದೋ ಎಂದು ಚಿಂತಾಮಗ್ನರಾಗುತ್ತಾರೆ. ಅಷ್ಟರಲ್ಲಿ ಅವರಿಗೆ ಹೊಳೆದ ಉಪಾಯ ಬಹಳ ಅಚ್ಚರಿಯಾಗಿತ್ತು.  ಬಿದ್ದವನನ್ನು ಬಿಟ್ಟು ಓಡಿ ಹೋಗುವುದು ಸಮಂಜಸವಲ್ಲ. ಅಷ್ಟಕ್ಕೂ  ಸ್ಪರ್ಧೆಯನ್ನು ತೊರೆಯುವುದೂ ನ್ಯಾಯವಲ್ಲ. ಅವರೆಲ್ಲರೂ ಮುಖ ಮುಖ ನೋಡಿದರು. ಪರಸ್ಪರ ಭಾವನೆಗಳನ್ನು ಅರ್ಥೈಸಿಕೊಂಡರು. ಮನಸ್ಸು ಯಾರೂ ಯಾರನ್ನು ಬಿಟ್ಟು ಬಿಡದ ಹಂತಕ್ಕೆ ತಲುಪಿದರು. ಪರಸ್ಪರ ಬಿದ್ದಾಗ ಹಿಡಿದುಕೊಂಡ  ಕೈಯನ್ನು ಎಲ್ಲರೂ ಗಟ್ಟಿಯಾಗಿ ಹಿಡಿದುಕೊಂಡು ಒಂದಾಗಿ ಮುನ್ನುಗ್ಗಿದರು. ಗುರಿಮುಟ್ಟಿದರು ಯಾರೂ ಸೋಲಲಿಲ್ಲ. ಎಲ್ಲರೂ ಒಂದೇ ಸಮಯದಲ್ಲಿ  ವಿಜಯದ ಗೆರೆಯನ್ನು ದಾಟಿದರು. ಎಲ್ಲರೂ ಗೆದ್ದೇ ಬಿಟ್ಟರು. ಸಾಮಾನ್ಯವಾಗಿ ವಿಕಲರು ಅಬಲರು ಅಂತ ನಾವು ಅಂಗವಿಕಲರನ್ನು ಗುರುತಿಸಿದರೂ ಅಸಾಮಾನ್ಯವಾದ ಸಾಧನೆಯಾಗಿತ್ತು ಅವರು ಇತಿಹಾಸದ ಪುಟದಲ್ಲಿ ದಾಖಲಿಸಿದ್ದು. ಸಾಮಾನ್ಯ ಸ್ಪರ್ಧೆಗಿಂತ ಮಿಗಿಲಾಗಿ ಬದುಕಿನ ಸ್ಪರ್ಧೆಯನ್ನೇ ಗೆಲ್ಲುವ ರೀತಿಯನ್ನು ಪ್ರತಿಯೊಬ್ಬನಿಗೂ ಮಾದರಿಯಾಗುವ ರೀತಿಯಲ್ಲಿ ಅವರು ಮಾಡಿ ತೋರಿಸಿದರು. ಬದುಕು ಎಂದಾಕ್ಷಣ ಗೆಲ್ಲುವುದೇ ಗುರಿ ಹೇಗಾದರೂ ಮಾಡಿ  ಏನೆಲ್ಲಾ ಕುತಂತ್ರಗಳಿಂದ ಗೆಲುವನ್ನು ಪಡೆಯಬೇಕೆಂದು ಸಾಮಾನ್ಯವಾಗಿ ಎಲ್ಲರೂ ಹಂಬಲಿಸುತ್ತಾರೆ. ಆದರೆ ತನ್ನನ್ನು ತಾನೇ ಸೋಲಿಸಿ  ಇತರರನ್ನು ಗೆಲ್ಲಿಸುವಂತೆ ಮಾಡುವಾಗ ಮಾನವೀಯತೆಯ ತುತ್ತ ತುದಿ ಏರುವಲ್ಲಿ ಒಬ್ಬ ಗೆಲುವನ್ನು ಸಾಧಿಸುತ್ತಾನೆ. ಜಗತ್ತಿನ ಯಾವುದೇ ಸ್ಪರ್ಧೆ ಇರಲಿ, ಸಾಹಸವಿರಲಿ, ದಾಖಲೆಗಳಿರಲಿ, ವಿಸ್ಮಯವಿರಲಿ ಒಂದಲ್ಲ ಒಂದು ದಿನ ಅದು ಏನೂ ಅಲ್ಲದಾಗಿ ಹೋಗುತ್ತದೆ.ಆದರೆ ಪರರನ್ನು ಗುರಿ ಮುಟ್ಟಿಸುವ  ಕಾರ‍್ಯ ಯಾವತ್ತೂ ಕಡೆಗಣಿಸಲ್ಪಡುವುದಿಲ್ಲ ಅದು ಇನ್ನಷ್ಟು ಪ್ರಖರವಾಗಿ ಬೆಳಗುತ್ತದೆ.  ಈ ದೃಷ್ಠಿಕೋನದಲ್ಲಿ ಅಂಗವಿಕಲರನ್ನು ಅಳೆದು ತೂಗುವಾಗ ಅವರಲ್ಲಿದ್ದ ವಿಕಲತೆ , ವಿಕಲಾಂಗತೆಯು ಯಾವ ಲೆಕ್ಕಕ್ಕೆ ಬರುವುದಿಲ್ಲ. ವಿಕಲತೆಯನ್ನು ಮೀರಿ ಬೆಳೆದ  ವ್ಯಕ್ತಿತ್ವಗಳಾಗಿ ಅವರನ್ನು ನಾವು ನೋಡುತ್ತೇವೆ. ಇವರು ವಿಕಲಾಂಗರಾಗಿ ಚಿನ್ನ ಬೆಳ್ಳಿ ಪಡೆದ, ದಾಖಲೆಗಳ ಮೇಲೆ ದಾಖಲೆ ಬರೆದವರಿಗಿಂತಲೂ ಮಿಗಿಲಾಗಿರುತ್ತಾರೆ. ಕಾರಣ  ಅವರು ವಿಕಲಾಂಗರಾಗಿ ಸಾಧನೆ ಮೆರೆದವರು. ಸಾಧನೆ ಮಾಡಿದ ಇವರು ವಿಕಲತೆಯನ್ನೇ ಮರೆತವರು. ಇಂತಹಾ ಘಟನೆಗಳು ನಮಗೆ ನೀಡುವ ದೊಡ್ಡ ಪಾಠವೇನೆಂದರೆ ಅಂಗಾಂಗದಲ್ಲಿ ವಿಕಲತೆ ಸಮಸ್ಯೆಯಲ್ಲ. ಹೃದಯಕ್ಕೆ ವಿಕಲತೆ ತಾಗಬಾರದು ಎನ್ನುವುದಾಗಿದೆ. ಹೃದಯಕ್ಕೆ ಮನಸ್ಸಿಗೆ ವಿಕಲತೆ ಬಂತೆಂದಾದರೆ ಆತನ ಕಣ್ಣಿಗೆ ದೋಷ ಬರುತ್ತದೆ,  ನಂತರ  ಕಿವಿಗೆ ಹಾಗೆ ನಾಲಗೆಗೆ ವಿಕಲತೆ ಬಂದು ಆತನ ನೋಟ, ಮಾತು, ಕಂಡದ್ದು ಕೇಳಿದ್ದು ಎಲ್ಲವೂ ವಿಷಕಾರವಾಗಿ ಪರಿಣಮಿಸುತ್ತದೆ. ಆತನಿಂದ ಯಾರಿಗೂ ನೆಮ್ಮದಿ ಇಲ್ಲದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಪರಿಣಿತವಾದ ವೈದ್ಯರೇ ಇರಲಿ ಆತ ರಕ್ತ, ಕಫ, ಮೂತ್ರವನ್ನು ಪರೀಕ್ಷಿಸಿ ದೇಹ ಆರೋಗ್ಯದ ಏರುಪೇರನ್ನು ಮನವರಿಕೆ ಮಾಡುತ್ತಾನೆಯೇ ಹೊರತು ಹೃದಯದ ಅನಾರೋಗ್ಯವನ್ನು ತಿಳಿಯಲಾರ. ಹೃದಯದ ವಿಕಲತೆ ಎಲ್ಲಾ ವಿಕಲತೆ ಮತ್ತು ವಿಕೃತಿಗಿಂತ ದೊಡ್ಡ ಶಾಪವಾಗಿರುತ್ತದೆ. ಆ ಕಾರಣವಾಗಿ ಹೃದಯ ವಿಕಲಾಂಗನಿಂದ  ಹತ್ತು ಹಲವು ಮಂದಿಗೆ ತೊಂದರೆಯೇ ಆಗಿರುತ್ತದೆ. ಆತನ ನಾಲಗೆಯು ಯಾವತ್ತು ಕೆಟ್ಟದ್ದನ್ನೇ ಉದುರಿಸುತ್ತಿರುತ್ತದೆ ಮತ್ತು ಚಪ್ಪರಿಸುತ್ತಿರುತ್ತದೆ. ಆದರೆ ನಿರ್ಮಲ ಹೃದಯದವರು ಕೆಟ್ಟದು ಮಾತು ಮಾತ್ರವಲ್ಲ ದೇಹದ ಮುಚ್ಚುವ ಭಾಗವನ್ನು  ನಾಲಗೆಯಲ್ಲೂ ಸ್ಪರ್ಶಿಸುವುದಿಲ್ಲ, ಅದು ಅವರ ಹೃದಯದ ಪರಿಶುದ್ದತೆಯಾಗಿರುತ್ತದೆ. ಯಾವುದೇ ಅನಿವಾರ‍್ಯ ಸಂದರ್ಭದಲ್ಲೂ ಅದು ಇದು ಅಂತ ಹೇಳಿ ಸುಮ್ಮನಾಗುತ್ತಾರೆ. ಆದರೆ ಹೃದಯ ಕರಟಿ ಹೋದ ಕ್ಷುದ್ರ ಜೀವಿಗಳು ಮಾತ್ರ ಕೆಟ್ಟ ಜಾಗದಲ್ಲೇ ಬಿದ್ದುಕೊಂಡಿರುತ್ತಾರೆ, ಕೆಟ್ಟದನ್ನೇ ಮಾಡಿಕೊಂಡಿರುತ್ತಾರೆ  ಮತ್ತು ಆಡಿಕೊಂಡಿರುತ್ತಾರೆ. ಸಮಾಜವು ಇಂತವರಿಂದ ಅನೇಕ ಅಪಾಯಗಳನ್ನು ಎದುರಿಸಿದ್ದುಂಟು. ಕೆಲವು ಜನರು ಕೆಟ್ಟಾಗ ಸಾವಿರಾರು ಮಂದಿ ಬಲಿಯಾಗುತ್ತಾರೆ. ಆದರೆ ಕೆಲವೇ ಮಂದಿಯ ಹೃದಯ ಕೆಟ್ಟು ಹೋದಾಗ ಲಕ್ಷಾಂತರ ಮಂದಿ ಬಲಿಯಾದ ಇತಿಹಾಸ ಜಗತ್ತಿನುದ್ದಕ್ಕೂ ಇದೆ. ಹಿಟ್ಲರ್, ಮೊಸಲೊನಿ, ಬರೆದ ರಕ್ತ ರಂಜಿತ ಅದ್ಯಾಯ ಹೃದಯ ವಿಕಲತೆಯ ಕಾರಣವೇ ಆಗಿತ್ತು . ಹೃದಯ ಕೆಡುಕಾದರೆ ಎಲ್ಲವೂ ಕೆಡುಕು (ಹದೀಸ್)

-ಮೌಲಾನಾ ಯು.ಕೆ ಅಬ್ದುಲ್ ಅಝೀಝ್ ದಾರಿಮಿ

Related Posts

Leave A Comment

Voting Poll

Get Newsletter