ಏನಿದು ತಬ್ಲೀಗ್ ಜಮಾಅತ್ (ಭಾಗ-2)

ಬರೇಲ್ವಿಯರ ಪ್ರತಿರೋಧ ಉತ್ತರ ಪ್ರದೇಶದ ರಾಜಧಾನಿ ಲಕ್ನೋದಿಂದ ೨೩೬ ಕಿಮೀ ದೂರದಲ್ಲಿರುವ ಒಂದು ಗ್ರಾಮವಾಗಿದೆ ಬರೇಲಿ. ಅಲ್ಲಿಯೇ ಬರೇಲ್ವಿಗಳು ಎಂದು ಕರೆಯಲ್ಪಡುವ ಉತ್ತರ ಭಾರತದ ಸುನ್ನೀಗಳ ನಾಯಕ ಅಹ್‌ಲೇ ಹಝ್ರತ್ ಇಮಾಂ ಅಹ್ಮದ್ ರಝಾಖಾನ್ ಬರೇಲ್ವಿ(ರ) ಅಂತ್ಯ ವಿಶ್ರಾಂತಿ ಪಡೆಯುತ್ತಿರುವುದು. ಭಾರತೀಯ ಮೂಲದ ಸುನ್ನೀಗಳ ಆದ್ಯಾತ್ಮಿಕ ಕೇಂದ್ರವೂ ರಾಜಧಾನಿಯೂ ಆಗಿದೆ ಅದು. ಬಿದ್‌ಅತಿನ ಪೆಡಂಭೂತವನ್ನು ಸುನ್ನತಿನ ಪವಿತ್ರ ಮಂತ್ರದಲ್ಲಿ ಕೆಡವಿ ಸುನ್ನೀ ಸಮುದಾಯಕ್ಕೆ ಶಕ್ತಿ ತುಂಬಿದ ವ್ಯಕ್ತಿಯಾಗಿದ್ದಾರೆ ರಝಾಖಾನ್. ಮಲಯಾಳಿ ಏರಿಯಾದಲ್ಲಿ ಸಮಸ್ತ ಕೇರಳ ಜಂ ಇಯ್ಯತುಲ್ ಉಲಮಾ ನಿರ್ವಹಿಸಿದ ಮಹತ್ತರ ಹೊಣೆಗಾರಿಕೆಯನ್ನೇ ಆಗಿತ್ತು ರಝಾಖಾನ್ ಅಲ್ಲಿ ಮಾಡಿದ್ದು.  ಸಾವಿರದಷ್ಟು ಗ್ರಂಥಗಳನ್ನು ರಚಿಸಿದ ಅಹ್‌ಲೇ ಹಝ್ರತ್ ಕೈಯಾಡಿಸದ ವೈಜ್ಞಾನಿಕ ಕ್ಷೇತ್ರವೇ ಇಲ್ಲ ಅನ್ನಬಹುದು. ಖಾದಿಯಾನಿಸಂ, ಶಿಈಸಂ, ವಹಾಬಿಸಂ, ತಬ್ಲೀಗಿಸಂ, ನಾಚಾರಲಿಸಂ, ಮೋಡನಿಸಂ ಮೊದಲಾದ ಸರ್ವ ಬಿದ್‌ಅತ್‌ಗಳ ಕತ್ತನ್ನೇ ತುಂಡರಿಸುವಂತ ಗ್ರಂಥಗಳಾಗಿತ್ತು ಅವರು ರಚಿಸಿದ ಗ್ರಂಥಗಳೆಲ್ಲವೂ. ಮುಜದ್ದಿದುಲ್ ಉಮ್ಮಾ ಎಂದು ಮುಸ್ಲಿಂ ಲೋಕ ಬಣ್ಣಿಸಿದ ಆ ಮಹಾ ಪ್ರತಿಭೆಯಾಗಿತ್ತು ಭಾರತದಲ್ಲಿ ಇಸ್ಲಾಮಿನ ಪ್ರಚಾರದ ಸರಣಿಯನ್ನು ಸಂರಕ್ಷಣೆ ಮಾಡಲು ಮಹತ್ತರ ಪಾತ್ರ ವಹಿಸಿದ್ದು. ದೇಯೂಬಂದಿಗಳ ಚಿತ್ತ ಬಿದ್‌ಅತ್ ವಿಚಾರಧಾರೆಯತ್ತ ಸಾಗುತ್ತಿರುವುದನ್ನೂ ಅವರಲ್ಲಿ ವಹ್ಹಾಬಿಸಂ ಉಂಟುಮಾಡಿದ ಹಿಡಿತವನ್ನೂ ಮೊದಲೇ ಅರ್ಥಮಾಡಿಕೊಂಂಡು ಅದನ್ನು ನಖಶಿಖಾಂತ ಖಂಡಿಸಿರುವುದರಿಂದಲೇ ಅಹ್‌ಲೇ ಹಝ್ರತ್ ಇವರ ದೃಷ್ಠಿಯಲ್ಲಿ ಗುಮ್ಮವಾಗಿ ಕಂಡದ್ದು. ಬಿದ್‌ಅತನ್ನು ಲೌಖಿಕವಾಗಿಯೂ, ಪ್ರಮಾಣದ ಆಧಾರದಲ್ಲಿಯೂ ವಿರೋಧಿಸುವುದರ ಜೊತೆಗೆ ಸಾಮಾಜಿಕ ಕೆಡುಕುಗಳನ್ನು ಅಳಿಸುವಂಥ ಒಂದು ಸಮರ್ಥ ಪೀಳಿಗೆಯನ್ನು ಕಟ್ಟಲು ಅವರು ಅವಿಶ್ರಾಂತ ಶ್ರಮವಹಿಸಿದ್ದರು. ೩೦-೦೯-೨೦೦೯ರಲ್ಲಿ ಇಂಡಿಯಾ ಟುಡೇ  ಪ್ರತಿಕೆ ವರದಿ ಮಾಡಿದ ಸರ್ವೇಯಂತೆ ಭಾರತೀಯ ಮುಸ್ಲಿಮರಲ್ಲಿ ಬಹು ಸಂಖ್ಯಾತರು ಬರೇಲ್ವಿ ವಿಚಾರಧಾರೆಯನ್ನು ಅಂಗೀಕರಿಸುವವರಾಗಿದ್ದಾರೆ. ಬ್ರಿಟನಿಗೆ ವಲಸೆ ಹೋಗಿ ಅಲ್ಲಿ ವಾಸ ಮಾಡುತ್ತಿರುವ ದಕ್ಷಿಣ ಏಷ್ಯನ್ ದೇಶಗಳ ಹೆಚ್ಚಿನ ಮುಸ್ಲಿಮರೂ ಬರೇಲ್ವಿ ವಿಚಾರಧಾರೆ ಅನುಸರಣೆ ಮಾಡುವವರೆಂದೂ ಲಂಡನಿನ ಟೈಂ ಮ್ಯಾಗಝಿನ್(೨೬-೪-೨೦೧೦) ತಿಳಿಸಿದೆ. ಸಮೀಕ್ಷೆಯ ಪ್ರಕಾರ ಪಾಕಿಸ್ತಾನದ ಜನತೆಯಲ್ಲಿ ಹೆಚ್ಚಿನವರು ಬರೇಲ್ವಿಗಳಾಗಿದ್ದಾರೆ ಎಂದು ತಿoಡಿಟಜತಿiಜe೪ಡಿeಠಿoಡಿಣ.ಛಿom ವರದಿಯಲ್ಲೂ ಹೇಳುತ್ತದೆ. ಅಹ್ಲ್ ಹಝ್ರತ್‌ರವರ ಅವಿಶ್ರಾಂತ ದುಡಿಮೆ ನಿಷ್ಕಳಂಕ ಅರ್ಪನಾಭಾವದ ನಿಯ್ಯತ್ತು ದಕ್ಷಿಣ ಏಷ್ಯಾದ ದೇಶಗಳಲ್ಲಿ ಮುಸ್ಲಿಮರ ಈಮಾನಿಗೆ ಬೆಂಗಾವಲಾಗಿ ಪರಿಣಮಿಸಿತು. ಬಿದ್‌ಅತನ್ನು ವಿರೋಧಿಸಿ ಸುನ್ನತ್ ಜಮಾಅತನ್ನು ಸಂಸ್ಥಾಪಿಸುವಲ್ಲಿ ಅವರು ನೀಡಿದ ಕೊಡುಗೆ ಎಂಥದ್ದೆಂದು ಈ ಲೆಕ್ಕಾಚಾರದಿಂದ ತಿಳಿಯಬಹುದು. ನಂತರದ ಹಿಂಬಾಲಕರು ಮುಸ್ತಫಾ ರಸಾಖಾನ್(೧೮೯೨-೧೯೮೨), ಹಾಮಿದ್ ರಸಾಖಾನ್(೧೮೭೫-೧೯೪೩), ಅಬ್ದುಲ್ ಅಲೀಂ ಸಿದ್ದೀಕ್(೧೮೯೨-೧೯೫೪),  ನಈಮುದ್ದೀನ್  ಮುರಾದಾಬಾದಿ(೧೮೮೩-೧೯೪೮), ಸಯ್ಯದ್ ಅಬ್ದುಲ್ಲಾ ಶಾ ನಕ್ಷಾಬಂದಿ, ಹೈದರ್‌ಬಾದಿ(೧೮೭೨-೧೯೬೪), ಮುಫ್ತಿ ಅಹ್ಮದ್ ಯಾರ್‌ಖಾನ್ ನಹೀಮಿ(೧೯೦೬-೧೯೭೧), ಶಾ ಅಹ್ಮದ್ ನೂರಾನಿ ಪಾಕಿಸ್ಥಾನ್(೧೯೨೬-೨೦೦೩), ಮುಜದ್ದೀನ್ ಅಬ್ದುಲ್ ವಹಾಬ್ ಸಿದ್ದೀಕಿ ಲಹೋರ್(೧೯೪೭-೧೯೯೪), ಶೈಖ್ ಮುಹಮ್ಮದ್ ಕರಂಥಾ ಅಲ್ ಅಸ್‌ಹರಿ(೧೯೧೮-೧೯೯೮), ಸಯ್ಯದ್ ಶುಜಾಹತ್ ಅಲೀ ಖಾದಿರಿ(೧೯೪೧-೧೯೯೩), ಅಲ್ಲಾಮ ಅರ್ಶದುಲ್ ಖಾದಿರಿ(೧೯೨೫-೨೦೦೨) ಮೊದಲಾದವರು ಅಹ್ಲೆ ಹಝ್ರತ್‌ರವರ ನಂತರ ಭಾರತ ಖಂಡದಲ್ಲಿ ಸುನ್ನೀ ಸಮುದಾಯಕ್ಕೆ ನಾಯಕತ್ವ ನೀಡಿದವರು. ಮುಸ್ತಫಾ ರಸಾಖಾನ್ ಮತ್ತು ಹಾಮಿದ್ ರಸಾಖಾನ್ ಎಂಬಿಬ್ಬರು ಅಹ್ಲೆ ಹಝ್ರತ್‌ರವರ ಸುಪುತ್ರರಾಗಿದ್ದಾರೆ. ಹದಿಮೂರನೇ ವಯಸ್ಸಿನಲ್ಲೇ ಮುಫ್ತಿಯಾಗಿ ಗುರುತಿಸಲ್ಪಟ್ಟ ಮುಸ್ತಫಾ ರಸಾಖಾನ್ ರವರ ೫೦೦೦೦ ಫತ್ವಾಗಳ ಸಂಕಲನವಿದೆ. ಫತವಾ ಮುಸ್ತಫಾವಿಯಾ ಎಂದು ಅದರ ಹೆಸರು. ಅದಲ್ಲದೆ ವಿವಿಧ ವಿಷಯಗಳಲ್ಲಿ ಸುಮಾರು ನಲ್ವತ್ತರಷ್ಟು ಗ್ರಂಥಗಳೂ ಅವರಿಗಿದೆ. ಹುಜ್ಜತುಲ್ ಇಸ್ಲಾಂ ಎಂದು ಕರೆಯಲ್ಪಟಡುವ ಎರಡನೆಯ ಪುತ್ರ ಹಾಮಿದ್ ರಝಾಖಾನ್ ರವರು ನಮಾಝ್‌ನಲ್ಲಿ ಅತ್ತಹಿಯ್ಯಾತಿನಲ್ಲಿರುವಾಗ ಇಹಲೋಕ ತ್ಯಜಿಸಿದ್ದು. ತಂದೆಯ ಖಬರ್‌ನ ಬಳಿಯೇ ಈ ಎರಡು ಸುಪುತ್ರರ ಖಬರ್ ಇರುವುದು ಇದೆ ಮುಸ್ತಫಾ ರಸಾಖಾನ್‌ರವರ ಸುಪುತ್ರ ಅಕ್ತರ್ ರಸಾಖಾನ್, ಮುಹಮ್ಮದ್ ಇಂದಾದ್ ಹುಸೈನ್ ಪಿರ್‌ಸಾದ್, ತೂರಬುಲ್ ಹಖ್‌ಖಾದಿರಿ, ದೆಹಲಿ ಇಮಾಂ ಮುಫ್ತಿ ಮುಕರ್ರಂ ಅಹ್ಮದ್ ...... ಮೊದಲಾದವರು ಈಗ ಬರೇಲ್ವಿ ನಾಯಕರಾಗಿ ಪ್ರಸಿದ್ದರಾದವರು.  ಪಾಕಿಸ್ಥಾನ ಪ್ರಧಾನ ಮಂತ್ರಿ ಯೂಸುಫ್ ಶಾ ಗೀಲಾನಿ, ವಿದೇಶಿ ಸಚಿವರಾಗಿದ್ದ ಶಾ ಮುಹಮ್ಮದ್ ಖುರೈಶಿ ಮೊದಲಾದವರು ಬರೇಲ್ವಿ ಪ್ರಮುಖರು. ಬರೇಲ್ವಿಯ ದಾರುಲ್ ಉಲೂಂ ಮನ್ಸಸರೆ-ಇಸ್ಲಾಂ, ಮುಬಾರಕ್‌ಪೂರಿನ ಜಾಮಿಅಃ ಅಶ್ರಫಿಯಾ ಇದೆಲ್ಲವೂ ಪ್ರಮುಖ ವಿದ್ಯಾಸಂಸ್ಥೆಗಳು.  ರಸಾ ಅಕಾಡೆಮಿ ಮುಂಬೈ, ದಅವತೆ ಇಸ್ಲಾಮಿ, ವರ್ಲ್ಡ್ ಇಸ್ಲಾಮಿಕ್ ಮಿಶನ್ ಇವು ಪ್ರಮುಖ ಸಂಘಟನೆಗಳು. ತಾಲೀಬಾನ್ ವಿರುದ್ದ ಕಠಿಣ ನಿಲುವು ತಾಳಿದ ಪಂಗಡವಾಗಿದೆ ಬರೇಲ್ವಿ. ಇಸ್ಲಾಮಿನ ಸಂರಕ್ಷಕರು ತಾಲಿಬಾನಿಗಳೆಂದು ಕೆಲವರು ಹೇಳಿದಾಗ ಅದು ವಹಾಬಿಸಂನ ಉಗ್ರಮುಖವೆಂದು ಬಹಿರಂಗವಾಗಿ ಘೋಷಿಸಿದ್ದು ಬರೇಲ್ವಿಗಳು.

Related Posts

Leave A Comment

Voting Poll

Get Newsletter