ಮಕಾಸಿದು ಶರೀಅ ಇಸ್ಲಾಮಿಕ್ ಕಾನೂನುಗಳ ಪ್ರಮುಖ ಲಕ್ಷ್ಯಗಳು
       

   ಮಾನವನ ಇಹಪರ ವಿಜಯಕ್ಕಾಗಿ ಸೃಷ್ಟಿಕರ್ತನಾದ ಅಲ್ಲಾಹನು ನೀಡಿದ ಧರ್ಮ ಇಸ್ಲಾಂ. ಅದರ ನಿಯಮಾವಳಿಗಳಾಗಿದೆ ಶರೀಅತ್. ಮಾನವನಿಗೆ ಅನಿವಾರ್ಯವಾದ ಎಲ್ಲಾ ಕಾರ್ಯಗಳನ್ನು ಅದು ಒಳಗೊಂಡಿದೆ. ಶರೀಅದ ಬಾಹ್ಯವಾದ ವಿಧಿ ಕರ್ಮಗಳೊಂದಿಗೆ ಶರೀಅದಲ್ಲಿ ಅಡಗಿರುವ ಯುಕ್ತಿ ಅಥವಾ ಪ್ರಮುಖ ಲಕ್ಷ್ಯಗಳು, ಉದ್ದೇಶಗಳು: ಯಾತಕ್ಕಾಗಿ ಈ ವಿಧಿ ನಿರ್ಣಯಿಸಲಾಯಿತು? ಅದರಿಂದ ಮಾನವನಿಗೆ ಏನು ಪ್ರಯೋಜನ ? ಮೊದಲಾದ ಕಾರ್ಯಗಳನ್ನು ಚರ್ಚಿಸುವ ಒಂದು ವಿಜ್ಞಾನ ಶಾಖೆಯಾಗಿದೆ "ಮಕಾಸಿದು ಶ್ಶರೀಅ".

 

ಅಖಿಲ ಪ್ರಪಂಚದಲ್ಲೆಡೆ ಹರಡುತ್ತಿರುವ ಇಸ್ಲಾಮೋಫೋಬಿಯ ದ ಮುಖಾಂತರ ಇವತ್ತು ಶರೀಅ ಹೆಚ್ಚಾಗಿ ತಪ್ಪು ಕಲ್ಪನೆಗೆ ಬಲಿಯಾಗುತ್ತಿದೆ. ಇದರ ಪರಿಣಾಮವಾಗಿ ಸ್ವತಃ ಮುಸ್ಲಿಂ ಸಮುದಾಯದಿಂದಲೂ ಶರೀಅ ವನ್ನು ಆಧುನೀಕರಿಸಿ ಪುನಃ ರಚಿಸಲು ಶಬ್ದಿಸಲಾಗುತ್ತಿದೆ. ಈ ಕೃತ್ಯಗಳ ಮೂಲ ಇಸ್ಲಾಂ ಶರೀಅ ದ ಪ್ರಮುಖ ಲಕ್ಷ್ಯಗಳ ಬಗ್ಗೆ ಇರುವ ಅಜ್ಞಾನವಾಗಿದೆ. ಮಾತ್ರವಲ್ಲ, ಶಾಸ್ತ್ರಪರವಾಗಿಯೂ ಯುಕ್ತಿ ಪರವಾಗಿಯೂ ಮಾತ್ರ ಕಾರ್ಯಗಳನ್ನು ಸ್ವೀಕರಿಸುವ ಜನಾಂಗವಾಗಿದೆ ಆಧುನಿಕ ಸಮೂಹ. ಕುರಾನ್ ಸ್ವತಃ ಯುಕ್ತಿ ಯುತವಾದದ್ದು ಎಂದು, ತನ್ನ ಪ್ರವಾದಿಯರು ತತ್ವಜ್ಞಾನವನ್ನು ಅಧ್ಯಾಪಿಸುವವರಾಗಿದ್ದಾರೆ ಎಂಬ ಅಲ್ಲಾಹನ ಪರಿಚಯ, ಇಸ್ಲಾಂ ಯುಕ್ತಿ ಭದ್ರವಾದ ನಿಯಮಗಳನ್ನಾಗಿವೆ ಒಳಗೊಂಡಿರುವುದು ಎಂದು ಭೋದಿಸುತ್ತದೆ. ಇದನ್ನು ಪರಿಚಯಿಸುವುದು ಆಗಿದೆ ಮಕಾಸಿದು ಶರೀಅ ಎಂಬ ವಿಜ್ಞಾನ ಶಾಖೆಯಿಂದ ಇಸ್ಲಾಂ ಪಂಡಿತರು ಉದ್ದೇಶಿಸುವುದು.

 

ಪ್ರಸಿದ್ಧ ಪಂಡಿತನೂ, ಬರಹಗಾರನರೂ, ಬಹು ಮುಹಮ್ಮದ್ ಜಾಬಿರ್ ಅಲಿ ಹುದವಿ ಯವರಾಗಿದ್ದಾರೆ ಈ ಕೃತಿಯನ್ನು ರಚಿಸಿದ್ದು. ಈ ವಿಜ್ಞಾನ ಶಾಖೆಯಲ್ಲಿರುವ ಎಲ್ಲಾ ಭಾಗಗಳನ್ನೂ ಇದರಲ್ಲಿ ಉಲ್ಲೇಖಿಸಿದ್ದಾರೆ. ತನ್ನ ಅಧ್ಯಾಪನ ಪರಿಜ್ಞಾನ ಮತ್ತು ಇತರ ಪ್ರಬಂಧಗಳು ಮತ್ತು ಪ್ರಮುಖ ಗ್ರಂಥಗಳು ಈ ಕೃತಿ ರಚನೆಗೆ ಅವಲಂಬಿಸಿದ್ದಾರೆ. ಇಸ್ಲಾಮಿನ ಬಗ್ಗೆ ಇರುವ ಚರ್ಚೆಗಳು ಹರಡುತ್ತಿರುವಾಗ ಈ ವಿಷಯದಲ್ಲಿರುವ ಚರ್ಚೆಗಳು ಮತ್ತು ಅಧ್ಯಯನಗಳು ವಿಸ್ತಾರವಾಗಿ ನಡೆಯುತ್ತಿದೆ. ಈ ವಿಷಯದಲ್ಲಿ ಪೂರ್ಣವಾಗಿ ಬರೆದಿರುವ ಮೊದಲನೆಯ ಮಲಯಾಳ ಕೃತಿಯಾಗಿದೆ ಬಹು ಜಾಬಿರ್ ಅಲಿ ಹುದಾವಿ ರವರು ಬರೆದ "ಮಕಾಸಿದು ಶರೀಅ" ಪಠನಾರ್ಹವು ಗಹನವಾದ ಆಶಯಗಳ ಚರ್ಚೆಗಳನ್ನು ವ್ಯಕ್ತವಾದ ರೀತಿಯಲ್ಲಿ ಅನವಾರಣೆ ಮಾಡಲಾದ ಕೃತಿಯಾಗಿದೆ ಇದು.

 

 ಏಳು ಅಧ್ಯಾಯಗಳಾಗಿ ಮಾಖಾಸಿದಿನ ಕುರಿತು ಪ್ರಾಥಮಿಕವಾಗಿ ತಿಳಿದಿರಬೇಕಾದ ಕಾರ್ಯಗಳನ್ನು ಸಂಗ್ರಹಿಸಿ ಪ್ರತಿಪಾದಿಸಲಾಗಿದೆ. ಮೊದಲನೆಯ ಅಧ್ಯಾಯದಲ್ಲಿ ಮಕಾಸಿದು ಶರೀಅ ದ ಅರ್ಥ ಮತ್ತು ಸಮಕಾಲೀನ ಪ್ರಶಸ್ತಿಯನ್ನು ವಿವರಿಸುತ್ತಾರೆ. ಮಕಾಸಿದ್, ಶರೀಅತ್ ಎಂಬೀ ಎರಡು ಪದಗಳು ಕೂಡಿದ ವಾಕ್ಯವಾಗಿದೆ ಮಕಾಸಿದು ಶರೀಅ. ಲಕ್ಷ್ಯ, ಉದ್ದೇಶ ಎಂದಾಗಿದೆ ಮಕಾಸಿದಿನ ಅರ್ಥ. ಶರೀಅತಿನ ಅರಬೀ ಭಾಷೆಯಲ್ಲಿ ಅರ್ಥ ಜಲಾಶಯ ಎಂದಾಗಿದೆ. ಇಸ್ಲಾಮಿಕ್ ನಿಯಮಾವಳಿಗಳಿಗೆ ಯಾಗಿದೆ ಶರೀಅತ್ ಎಂದು ಹೇಳುವುದು. ಶರೀಅತ್ ಇಂದು ಸಮೂಹಕ್ಕೆ ಸಮ್ಮಂದಿಸದ ಹಳೆಯ ನಿಯಮಗಳಾಗಿ ಆಗಿದೆ ಹಲವರು ತಿಳಿದುಕೊಂಡಿದ್ದು. ಅದರಿಂದ ಇಸ್ಲಾಮಿನ ನಿಯಮ ಏನೆಂದು ಮಾತ್ರ ಚರ್ಚಿಸದೆ ಯಾತಕ್ಕಾಗಿ ಆಗಿದೆ ಎಂದು ತಿಳಿಯಲು, ತಿಳಿಸಲು ಅನಿವಾರ್ಯವಾಗಿದೆ.

 

ಮಕಾಸಿದು ಶರೀಅ ಚರಿತ್ರೆಯಾಗಿದೆ ಎರಡನೇಯ ಅಧ್ಯಾಯ. ಇಸ್ಲಾಮಿನ ಇತರ ವಿಜ್ಞಾನ ಶಾಖೆಗಳು ರೂಪೀಕರಣ ಕೊಂಡ ಹಾಗೆ ಮಾಕಾಸಿದ್ ಕೂಡ. ಒಂದು ವಿಜ್ಞಾನ ಶಾಖೆಯಾಗಿ ರೂಪಿಸಲಾದದ್ದು ಹಿಜ್ರಾ 5ನೇ ಶತಮಾನದಲ್ಲಿದ್ದ ಉಸೂಲೀ ಪಂಡಿತರ ಕೃತಿಗಳಿಂದಾಗಿದೆ. ಇಮಾಮುಲ್ ಹರಮೈನಿಯಿಂದ ಶಾತ್ವಿಬೀ ವರೆಗಿರುವ ಪಂಡಿತರ ಕೊಡುಗೆಗಳಾಗಿವೆ ಇದರಲ್ಲಿ ಪ್ರದಾನ. ಇಮಾಮೂಲ್ ಹರಮೈನ್, ಅಲ್ ಗಸ್ಸಾಲಿ, ಉಸ್ಸು ಬಿನ್ ಅಬ್ದುಸ್ಸಲಾಮ್ ಪ್ರದಾನ ಪೂರ್ವ ಮಕಾಸಿದಿ ಪಂಡಿತರು. ಮಕಾಸಿದ್ ಪಠಣಗಳು ತುಂಬಾ ಶ್ರದ್ದೇಯವಾದ ಕಾಲವಾಗಿದೆ ಆಧುನಿಕ ಕಾಲ. ಆಧುನಿಕ ಕಾಲದ ಪಂಡಿತರ ಪೈಕಿ ಮುಹಮ್ಮದ್ ತಾಹೀರ್ ಬಿನ್ ಆಶೂರ್ ಪ್ರಥಮ ಸ್ಥಾನೀಯರಾಗಿದ್ದಾರೆ. ಅಲ್ಲದೆ ಮಕಾಸಿದಿನ ಎರಡನೇ ಪಿತಾಮಹಾ ಎಂದು ಕರೆಯಲಾಗುತ್ತದೆ. ಒಂದನೇ ಪಿತಾಮಹನಾಗಿ ಶಾತಿಬೀ ಯವರಾಗಿದ್ದಾರೆ. ಮುಹಮ್ಮದ್ ಅಲ್ಲಾಲ್ ಅಲ್ ಫಾಸಿ, ಡಾ|| ಅಹ್ಮದ್ ರೈಸೂನಿ, ಡಾ|| ಸಈದ್ ರಮಳಾನ್ ಬೂತಿ , ಡಾ|| ಯುಸೂಫ್ ಅಲ್ ಕರ್ಲಾವಿ ಮೊದಲಾದವರಾಗಿದ್ದಾರೆ ಆಧುನಿಕ ಇತರ ಮಕಾಸಿದೀ ಪಂಡಿತರು. 

 

 ಮಾಕಾಸಿದೀ ವಿಷಯದ ಕುರಿತು ವಿವರಣೆಗೆ ಹೋಗುವ ಮೂರನೇ ಅಧ್ಯಾಯ ಮಾಕಾಸಿದಿನ ವಿವಿಧ ಭಾಗಗಳನ್ನೂ ಪರಿಚಯಿಸುತ್ತಿದೆ. ಮಕಾಸಿದಿನ ಪ್ರಾಧಾನ್ಯವನ್ನು ಅನುಸರಿಸಿ ಳರೂರಿ (ಅನಿವಾರ್ಯ), ಹಾಜತಿ (ಆವಶ್ಯಕತೆ), ತಹ್ಸೀನೀ (ಅಲಂಕಾರಿಕ) ಎಂದು ಮೂರಾಗಿ ವಿಭಜಿಸಲಾಗಿದೆ. ಮಾನವಕುಲದ ಆಡಿಸ್ಥಾನ ಪರವಾದ ನೆಲೆಗೊಳ್ಳಲು ಅನಿವಾರ್ಯವಾದ ಕಾರ್ಯಗಳಾಗಿವೆ ಮೊದಲನೆಯದ್ದು. ಈ ಕಾರ್ಯಗಳ ಶರೀಅತಿನ ಅಡಿಸ್ಥಾನ ಪಂಚ ಲಕ್ಷ್ಯಗಳಾಗಿವೆ ಮತ,ಶರೀರ,ಬುದ್ಧಿ,ಸಂತಾನ,ಸಂಪತ್ತು ಎನ್ನಿವುಗಳಾಗಿವೆ. ಇಸ್ಲಾಂ ಶರೀಅದ ಸುಪ್ರಧಾನ ಲಕ್ಷ್ಯ ಈ ಐದು ಳರೂರಿಯತಿನ ಸಂರಕ್ಷಣೆಯಾಗಿದೆ. ಸುಖಕರವಾದ ಮಾನವ ಜೀವನಕ್ಕೋಸ್ಕರ ವಾಗಿದೆ ಎರಡನೆಯದ್ದು. ಅನಿವಾರ್ಯವೂ ಅವಶ್ಯಕತೆಯು ಅಲ್ಲದಿದ್ದರೂ ಸದ್ಗುನ ಶೀಲತೆಗಾಗಿಯು ದುಷ್ಕರ್ಮದ ತೊರೆಯುವಿಕೆಗಾಗಿದೆ ಮೂರನೆಯದ್ದು. ಬೇರೆ ಮಾನದಂಡಾನುಸಾರವಾಗಿ ಮಕಾಸಿದನ್ನು ಇನ್ನೂ ಕೆಲವು ರೀತಿಯಲ್ಲಾಗಿ ಭಾಗಿಸಲಾಗಿದೆ. 

 

ಇದರ ಅನುಬಂಧವಾಗಿ ಇಸ್ಲಾಮಿಕ್ ಶರೀಅದ ಪ್ರಮುಖ ಲಕ್ಷ್ಯಗಳಾದ ಮತ, ಶರೀರ, ಮಾನವ, ಬುದ್ಧಿ, ಸಂತಾನಪರಂಪರೆ, ಧನ ಎಂಬೀ ಪಂಚ ಲಕ್ಷ್ಯಗಳನ್ನು ಸಂರಕ್ಷಿಸಲು ಶರೀಅ ಕಲ್ಪಿಸುವ ವಿವಿಧ ದಾರಿಗಳನ್ನಾಗಿವೆ ನಾಲ್ಕನೇ ಅಧ್ಯಾಯದಲ್ಲಿ ಚರ್ಚಿಸಲಾಗುವುದು. ಈ ಅಧ್ಯಾಯದ ಕೊನೆಗೆ ಪಂಚ ಲಕ್ಷ್ಯ ಗಳೊಂದಿಗೆ ಅಭಿಮಾನ ಸಂರಕ್ಷಣೆಯ ಕುರಿತು ಪರಾಮರ್ಶಿಸಲಾಗುತ್ತಿದೆ. ಈ ಲಕ್ಷ್ಯಗಳ ಎಡೆಯಲ್ಲಿರುವ ಪ್ರಾಮುಖ್ಯತೆ ಕ್ರಮದ ಬಗ್ಗೆ ಯಾಗಿದೆ ಐದನೇಯ ಅಧ್ಯಾಯ. ಈ ಕಾಲದಲ್ಲಿ ತುಂಬಾ ಪ್ರಾಮುಖ್ಯತೆ ಇರುವ ಚರ್ಚಾ ವಿಷಯವಾಗಿದೆ ಇದು. ಮತ ಸಂರಕ್ಷಣೆಗೆೋ ಮಾನವ ಸಂರಕ್ಷಣೆಗೋ ಪ್ರಥಮ ಪರಿಗಣನೆ ನೀಡುವುದು? ಅನಿವಾರ್ಯ ಕಾರ್ಯಗಳನ್ನು ಅವಗಣಿಸಿ ಸುನ್ನತುಗಳಿಗೆ ಶ್ರೇಷ್ಠ ಕರ್ಮಗಳಿಗೆ ಪ್ರಾಮುಖ್ಯತೆ ನೀಡುವುದು, 'ಪ್ರಾಮುಖ್ಯತೆ' ಕೃತ್ಯವಾಗಿ ತಿಳಿಯದ ಕಾರಣವಾಗಿದೆ. ಯಾವುದನ್ನು ಯಾವುದಕ್ಕಿಂತ ಪ್ರಾಮುಖ್ಯತೆ ನೀಡಬೇಕು ಎಂದು ಚರ್ಚಿಸಲಾಗಿದೆ. ಇದನ್ನು ಫಿಕ್ಹುಲ್ ಅವ್ ಲಿಯಾ ಎಂದು ಹೇಳಲಾಗುತ್ತದೆ. ಕರ್ಮಶಾಸ್ತ್ರ ಗವೇಶನೆ ರಂಗದಲ್ಲಿ ಮಕಾಸಿದು ಶರೀಅ ದ ಪ್ರಶಕ್ತಿಯ ವಿವರಣೆಯಾಗಿದೆ ಆರನೆಯ ಅಧ್ಯಾಯ. ಮಕಾಸಿದ್ ಅಂದರೆ ಇಸ್ಲಾಂ ಶರೀಅತಿನ ಪ್ರಮುಖ ಲಕ್ಷ್ಯಗಳು ಅದರಿಂದ ಪ್ರಮುಖ ಲಕ್ಷ್ಯಗಳನ್ನು ತಿಳಿದು ಅವನು ಅಡಿಸ್ಥಾನವಾಗಿಸಿ ಇಸ್ಲಾಮಿಕ್ ನಿಯಮ ನಿರ್ಮಾಣವಾಗಿದೆ ಇಜ್ತಿಹಾದುಲ್ ಮಕಾಸಿದ್. ಪಾಶ್ಚಾತ್ಯ ಮಾಲಿಕತ್ವ ಚಿಂತನೆಗಳಿಂದ ರೂಪಗೊಂಡ ಅಭಿವೃದ್ಧಿ ವೀಕ್ಷಣೆ ಅಖಿಲ ಪ್ರಪಂಚದಲ್ಲಿ ನಾಶ ಬಿತ್ತುವಾಗ ಅದಕ್ಕೆ ಬದಲಾಗಿ ಸಮುದಾಯಕ್ಕೆ ಸ್ವೀಕಾರ್ಯ ಪ್ರಯೋಗಿಕ ಮತ್ತು ಆಧ್ಯಾತ್ಮಿಕವಾದ ಇಸ್ಲಾಮಿಕ್ ಮಾದರಿ ರೂಪಿಸಬೇಕು.

 

ಇಸ್ಲಾಮಿನ ವಿವಿಧ ಕರ್ಮಶಾಸ್ತ್ರ ನಿಯಮಗಳ ಸತ್ವವನ್ನು ಪ್ರಮುಖ ಲಕ್ಷ್ಯಗಳನ್ನು ಪರಾಮರ್ಶಿಸುವುದು ಆಗಿದೆ ಕೊನೆಯ ಅಧ್ಯಾಯ. ನಮಾಜ್, ವೃತ್ತಿ ಅನುಷ್ಠಾನ ಮೊದಲಾದ ಪ್ರಧಾನ ಕರ್ಮಗಳ ಲಕ್ಷ್ಯಗಳನ್ನು ವಿವರಿಸುವುದು. ಸಕಾತ್,ಶುದ್ಧಿ ಮತ್ತು ಶಿಕ್ಷಾನಿಯಮಗಳ ಬಗ್ಗೆ ವಿವರಿಸಿದ್ದಾರೆ. ಮಕಾಸಿದ್ ಚರ್ಚೆಗಳಲ್ಲಿ ಪ್ರಾಧಾನ್ಯ ಇರುವ ಇನ್ನೂ ವಿಷಯಗಳು ಇದ್ದರೂ  ವಿಜ್ಞಾನ ಶಾಖೆಯನ್ನು ಪರಿಚಯಿಸುವ ಉದ್ದೇಶದಿಂದ ಈ ಹೇಳಿದ ವಿಷಯಗಳ ಬಗ್ಗೆ ಸಂಕ್ಷಿಪ್ತ ವಿವರಣೆ ಯಾಗಿದೆ ಈ ಕೃತಿ. ಆಧುನಿಕವೂ ಪ್ರಮುಖವೂ ಆದ ಗ್ರಂಥಗಳನ್ನೆಲ್ಲ ಅವಲಂಬಿಸಿ ಯಾಗಿದೆ ಇದರ ರಚನೆ. ವಿದ್ಯಾರ್ಥಿಗಳಿಗೂ, ಅಧ್ಯಾಪಕ ಪಂಡಿತರಿಗೂ ಸಾದಾರಣ ಜನರಿಗೂ ಉಪಕರಿಸುವ ಪ್ರಸ್ತುತ ಕೃತಿಯಾಗಿದೆ "ಮಕಾಸಿದು ಶರೀಅ ಇಸ್ಲಾಮಿಕ್ ನಿಯಮಗಳ ಪ್ರಮುಖ ಲಕ್ಷ್ಯಗಳು"

                                                                                        

                                                                                                           —ರಮೀಝ್ ಕಟ್ಟತ್ತಾರ್

Related Posts

Leave A Comment

Voting Poll

Get Newsletter