ಸುನ್ನತ್ ಮತ್ತು ಬಿದ್ಅತ್

poster-sunnah-bidahಧರ್ಮದಲ್ಲಿ ಪುಣ್ಯವುಳ್ಳ ಯಾವುದೇ ನವೀನಾಚಾರವಿಲ್ಲ. ಇದರ ಆಧಾರವೂ ಅಲ್ಲಾಹನ ಹೇಳಿಕೆಯಾಗಿದೆ. “ಇಂದು ನಾನು ನಿಮ್ಮ ಧರ್ಮವನ್ನು ಪರಿಪೂರ್ಣಗೊಳಿಸಿದ್ದೇನೆ. ನನ್ನ ಕೊಡುಗೆಯನ್ನು ನಿಮ್ಮ ಮೇಲೆ ಪರಿಪೂರ್ಣಗೊಳಿಸಿದ್ದೇನೆ ಮತ್ತು ಇಸ್ಲಾಮನ್ನು ನಿಮ್ಮ ಧರ್ಮವೆಂಬ ನೆಲೆಯಲ್ಲಿ ಅಂಗಿಕರಿಸಿದ್ದೇನೆ.” ಮತ್ತು ಪ್ರವಾದಿ [ಸ] ಹೇಳಿರುವರು: “ಮತ್ತು ಎಲ್ಲಾ ನವೀನಾಚಾರಗಳು ಪಥಭ್ರಷ್ಟತೆಯಾಗಿದೆ ಹಾಗೂ ಎಲ್ಲಾ ಪಥಭ್ರಷ್ಟತೆಯು ನರಕದಲ್ಲಿದೆ.” ಧರ್ಮದಲ್ಲಿ ನವೀನಾಚಾರವೇನು? ಧರ್ಮದಲ್ಲಿ ಏನಾದರೂ ಕಾರ್ಯವನ್ನು ಹೆಚ್ಚು-ಕಡಿಮೆ ಮಾಡುವುದಾದರೆ ನವೀನಾಚಾರ. ಅಲ್ಲಾಹನು ಬಹುದೇವಾರಾಧಕರ ನವೀನಾಚಾರಗಳನ್ನು ರದ್ದುಪಡಿಸುತ್ತಾ ಹೇಳುತ್ತಾನೆ. “ಇವರ ಬಳಿ, ಇವರಿಗಾಗಿ ಧರ್ಮದ ಸ್ವರೂಪದಲ್ಲಿರುವ ಮತ್ತು ಅಲ್ಲಾಹು ಅನುಮತಿಸಿಲ್ಲದ ಜೀವನ  ವಿಧಾನವೊಂದನ್ನು ನಿಶ್ಚಯಿಸಿಕೊಟ್ಟಂತಹ ದೇವ ಸಹಭಾಗಿಗಳು ಇದ್ದಾರೆಯೇ? ಮತ್ತು ಪ್ರವಾದಿ[ಸ]ರವರು ಹೇಳಿರುವರು: ಯಾರಾದರೂ ನಮ್ಮ ಧರ್ಮದಲ್ಲಿ ಅದರಲ್ಲಿರದ ಆಚಾರವನ್ನು ತಂದರೆ ಅದು ರದ್ದುಗೊಲಿಸಲ್ಪಡುತ್ತದೆ. ಧರ್ಮದಲ್ಲಿ ಯಾವುದಾದರೂ ಪುಣ್ಯವುಳ್ಳ ಸುನ್ನತ್ (ಪ್ರವಾದಿ ಚರ್ಯೆ) ಇದೆಯೇ? ಹೌದು ಧರ್ಮದಲ್ಲಿ ಪುಣ್ಯವುಳ್ಳ ಸುನ್ನತ್ ಇದೆ, ಪ್ರವಾದಿ[ಸ]ರವರು ಹೇಳಿರುವರು. ಯಾರಾದರೂ ಧರ್ಮದಲ್ಲಿ ಪುಣ್ಯವುಳ್ಳ ಸುನ್ನತ್ತನ್ನು ಜಾರಿಗೊಳಿಸುತ್ತಾನೋ ಅವನಿಗೆ ಪ್ರತಿಫಲವಿದೆ ಮತ್ತು ನಂತರ ಯಾರೆಲ್ಲಾ ಆ ಸುನ್ನತಿನ ಪ್ರಕಾರ ಸತ್ಕರ್ಮವೆಸಗುವರೋ ಅವರ ಪ್ರತಿಫಲವೂ ಲಭಿಸುವುದು ಆದರೆ ಸತ್ಕರ್ಮವೆಸಗುವವರ ಪ್ರತಿಫಲದಲ್ಲಿ ಯಾವುದೇ ರೀತಿಯ ಕೊರತೆ ಮಾಡಲಾಗದು. ಮುಸ್ಲಿಮರಿಗೆ ಉತ್ಕ್ರಷ್ಟತೆ ಯಾವಾಗ ದೊರಕುವುದು? ಅಲ್ಲಾಹನ ಗ್ರಂಥ ಮತ್ತು ಪ್ರವಾದಿ[ಸ]ರವರ ಚರ್ಯೆಯನ್ನು ಕಾರ್ಯರೂಪಕ್ಕೆ ತಂದರೆ ಏಕದೇವ ಆರಾಧನೆಯನ್ನು (ತೌಹೀದ್) ಪ್ರಚಾರ ಪಡಿಸಿದರೆ ಮತ್ತು ದೇವಸಹಭಾಗಿತ್ವ (ಶಿರ್ಕ್)ದ ಎಲ್ಲಾ ರೂಪಗಳಿಂದ ಜನರಲ್ಲಿ ಭಯವುಂಟು ಮಾಡಿದರೆ ಹಾಗೂ ಅಲ್ಲಾಹನು ಶತ್ರುಗಳ ವಿರುದ್ದ ಧರ್ಮವನ್ನು ತಮ್ಮಿಂದಾದಷ್ಟು ಪ್ರಬಲಪಡಿಸಿದರೆ ಮುಸ್ಲಿಮರಿಗೆ ಉತ್ಕ್ರಷ್ಟತೆಯು ದೊರೆಯುವುದು. ಅಲ್ಲಾಹನು ಹೇಳುತ್ತಾನೆ, “ಸತ್ಯವಿಶ್ವಾಸಿಗಳೇ, ನೀವು ಅಲ್ಲಾಹನಿಗೆ ಸಹಾಯ ಮಾಡಿದರೆ ಅವನು ನಿಮಗೆ ಸಹಾಯ ಮಾಡುವನು ಮತ್ತು ನಿಮ್ಮ ಪಾದಗಳನ್ನು ಸ್ಥಿರಗೊಲಿಸುವನು. [ಕುರಾನ್, ೪೭: ೭] ನಿಮ್ಮ ಪೈಕಿ ಸತ್ಯವಿಶ್ವಾಸವಿರಿಸಿ ಸತ್ಕರ್ಮವೆಸಗಿದವರೊಡನೆ ಅಲ್ಲಾಹನು ಅವರಿಗಿಂತ ಮುಂಚಿನವರನ್ನು ಭೂಮಿಯಲ್ಲಿ ಪ್ರತಿನಿಧಿಗಳಾಗಿ ಮಾಡಿದಂತೆಯೇ ಅವರನ್ನು ಮಾಡುವನೆಂದು ವಾಗ್ದಾನ ಮಾಡಿರುವನು. ತಾನು ಅವರಿಗಾಗಿ ಮೆಚ್ಚಿರುವ ಅವರ ಧರ್ಮವನ್ನು ಸುಭದ್ರ ಬುನಾದಿಗಳಲ್ಲಿ ಸ್ಥಾಪಿಸುವನು ಮತ್ತು ಅವರ (ಪ್ರಚಲಿತ) ಭಾಯಾವಸ್ಥೆಯನ್ನು ಶಾಂತಿಯಾಗಿ ಮಾರ್ಪಡಿಸಿ ಬಿಡುವನು. ಅವರು ನನ್ನ ಆರಾಧನೆ ಮಾತ್ರ ಮಾಡಲಿ ಮತ್ತು ನನ್ನೊಂದಿಗೆ ಯಾರನ್ನೂ ಸಹಭಾಗಿಗಳಾಗಿ ಮಾಡದಿರಲಿ. [ಕುರಾನ್]

-ಫಹೀಮ್ ಅಕ್ತರ್ ಉಳ್ಳಾಲ

Related Posts

Leave A Comment

Voting Poll

Get Newsletter