ತೌಹೀದ್ ಅಥವಾ ಏಕದೈವ ವಿಶ್ವಾಸ

Beliefಪ್ರವಾದಿಯವರೇ ಹೇಳಿರಿ. ಅಲ್ಲಾಹನು ಏಕನಾಗಿದ್ದಾನೆ. ಅಲ್ಲಾಹನು ಯಾರನ್ನೂ ಆಶ್ರಯಿಸದವನು. ಎಲ್ಲರೂ ಅವನನ್ನು ಆಶ್ರಯಿಸುವವರು ಆಗಿದ್ದಾರೆ. ಅವನು ಯಾರಿಂದಲೂ ಜನಿಸಿದವನಲ್ಲ ಅವನಿಗೆ ಸಂತಾನವೂ ಇಲ್ಲ. ಅವನಿಗೆ ಸಮಾನವಾಗಿ ಒಂದೂ ಇಲ್ಲ. (112-1-4) ತೌಹೀದ್ ಸಂಬಂಧವಾಗಿ ಅಲ್ಲಾಹನು ಅವತರಿಸಿದ ಅಧ್ಯಾಯವಾಗಿದೆ ಇದು. ಇಸ್ಲಾಂ ಕಲಿಸುವ ತೌಹೀದ್ ಯಾವುದೆಂದು ಇದು ವ್ಯಕ್ತಪಡಿಸುತ್ತದೆ. ತೌಹೀದ್ ಎಂಬ ಪದದ ಅರ್ಥ ಏಕನಾಗಿಸುವುದು ಎಂದಾಗಿದೆ. ಅಲ್ಲಾಹನು ಅವನ ಗುಣಗಳಲ್ಲೂ , ಪ್ರವರ್ತಿಗಳಲ್ಲಿಯೂ ಏಕನಾಗಿದ್ದಾನೆ ಎಂದು ಅಂಗೀಕರಿಸುದು. ತೌಹೀದನ್ನು ಒಂದೇ ವಾಕ್ಯದಲ್ಲಿ ಏಕದೈವ ವಿಶ್ವಾಸವೆಂದು ಹೇಳಬಹುದು. ಏಕದೈವ ವಿಶ್ವಾಸವೆಂದರೆ, ಅವನ ಯಾವುದೇ ನೆಲೆಯಲ್ಲಿ ಬಹುತ್ವಕ್ಕೆ ಅವಕಾಶವಿಲ್ಲ ಎಂದಾಗಿದೆ. ಅಥವಾ ಸೃಷ್ಠಿಗಳಂತೆ ವಿವಿಧ ಘಟಕಗಳು ಸೇರಿ ಉಂಟಾಗುವುದಲ್ಲ. ಅವನಿಗೆ ಸಮಾನವಾಗಿ ಇನ್ನೊಂದು ಇಲ್ಲ ಎಂದಾಗಿದೆ. ಅಲ್ಲಾಹನ ಗುಣಗಳ ಏಕತ್ವ ಎಂದರೆ ಅವನ ಗುಣಗಳಂತಿರುವ ಗುಣ ಇನ್ನೊಬ್ಬರಿಗೆ ಇಲ್ಲ ಎಂದಾಗಿದೆ. ಪ್ರವರ್ತಿಯಲ್ಲಿ ಏಕತ್ವ ಎಂದರೆ ಇಲ್ಲದ ಒಂದನ್ನು ಸೃಷ್ಠಿಸುವವನು ಅವನು ಮಾತ್ರ. ಯಾರ ಸಹಾಯವು ಅವನಿಗೆ ಆವಶ್ಯವಿಲ್ಲ ಎಂದಾಗಿದೆ. ಒಟ್ಟಿನಲ್ಲಿ ಅಲ್ಲಾಹನ ಏಕತ್ವ ಎಂದರೆ ಯಾವದೇ ಸಮಯ ಯಾರ ಆವಶ್ಯವಿಲ್ಲದವನು. ಎಲ್ಲಾಸಮಯ ಎಲ್ಲರಿಗೂ ಆವಶ್ಯವಿರುವವನು ಆಗಿದ್ದಾನೆಂದು ವಿಶ್ವಾಸವಿರಿಸುದು . ಪ್ರವಾದಿವರ್ಯರು, ಔಲೀಯಾಗಲು, ಯಾರೇ ಆಗಿರಲಿ ಅಲ್ಲಾಹನ ಇರಾದೆಯಿಲ್ಲದೆ ಯಾವುದನ್ನು ಮಾಡಲು ಚಿಂತಿಸಲು ಅವರಿಗೆ ಸಾದ್ಯವಿಲ್ಲ ಕಲಿಮತು ತೌಹೀದ್ ಇಸ್ಲಾಮಿನಲ್ಲಿ ತೌಹೀದಿನ ಎಲ್ಲಾ ಆಶಯವನ್ನು ಒಳಗೊಂಡ ಪದವಾಗಿದೆ ಕಲಿಮತು ತೌಹೀದ್ ಅಥವಾ "ಲಾಹಿಲಾಹ ಇಲ್ಲಲಾ" ಎನ್ನೂವುದು. ಪ್ರವಾದಿ(ಸ.ಅ) ರು ಹೇಳುತ್ತಾರೆ. ನಾನು ಮತ್ತು ನನ್ನ ಪೂರ್ವಿಕರು ಹೇಳಿದ ವಾಖ್ಯದಲ್ಲಿ ಅತೀ ಶ್ರೇಷ್ಠವಾದುದು ಲಾಹಿಲಾಹ ಇಲ್ಲಲ್ಲಾ ಎಂದಾಗಿದೆ. ಈ ವಾಕ್ಯದ ಸರಿಯಾದ ಅರ್ಥ ಅಲ್ಲಾಹನಲ್ಲದೆ ಬೇರೆ ಇಲಾಹ್ ಇಲ್ಲ ಅವನು ಮಾತ್ರವಾಗಿದ್ದಾನೆ ಸತ್ಯವಾದ ಇಲಾಹ್. ಇಲಾಹ್ ಎಂದರೆ ಆರಾದನೆಗೆ ಅರ್ಹನಾದವನು ಎಂದಾಗಿದೆ. ನಿಶ್ಚಯವಾಗಿಯೂ ಆರಾದನೆಗೆ ಅರ್ಹನಾದವನು ಬೇರಾರೂ ಇಲ್ಲ ನನ್ನನ್ನು ಮಾತ್ರ ಆರಾದಿಸಿರಿ ಎಂಬ ದಿವ್ಯ ಸಂದೇಶ ನೀಡಿಯಲ್ಲದೆ ತಮಗಿಂತ ಮುಂಚೆ ಯಾವೊಬ್ಬ ಪ್ರವಾದಿಯನ್ನು ನಾನು ಕಲುಹಿಸಿಲ್ಲ.(ಅಂಬಿಯಾಹ್ 35) ತೌಹೀದನ್ನು ತೌಹೀದುಲ್ ಉಲೂಹಿಯ್ಯ , ತೌಹೀದುರ್ರುಬೂಬಿಯ್ಯ ಎಂದೆಲ್ಲ ವಾಕ್ಯನಿಸಿದ್ದು ಎಂಟನೇ ಶತಮಾನಗಳಲ್ಲಿ ಜೀವಿಸಿದ್ದ ಕೆಲವು ನೂತನವಾದಿಗಳಾಗಿದ್ದಾರೆ. ಇಬ್ನು ತೀಮಿಯ್ಯ ಇವರಲ್ಲಿ ಪ್ರಮುಖನು. ಅದಕ್ಕೆ ಮುಂಚೆ ಏಳು ಶತಮಾನಗಳಲ್ಲಿ ಜೀವಿಸಿದ್ದ ಇಮಮುಗಳು, ಮುಹದ್ದಿಸುಗಳು ಈಗಿನಂತಹ ವಿಭಜನೆ ನಡೆಸಲಿಲ್ಲ. ಇಲಾಹ್ ರಬ್ಬ್ ಎನ್ನುವ ಶಬ್ದ ಭಾಷಾರ್ಥದಲ್ಲಿ ಎರಡಾದರೂ ಪ್ರತ್ಯಕ್ಷದಲ್ಲಿ ಅದು ಒಂದಾಗಿದೆ . ನಿಮ್ಮ ಇಲಾಹ್ ಅಲ್ಲಾಹು ಮಾತ್ರವಾಗಿದ್ದಾನೆ. ನಿಮ್ಮ ರಬ್ಬ್ ಅಲ್ಲಾಹನು ಮಾತ್ರವಾಗಿದ್ದಾನೆ ಎಂದು ಹೇಳಿದ ಅಲ್ಲಾಹನು ಒಂದೇ ತೌಹೀದ್ ಕಲಿಸಿಕೊಟ್ಟಿದ್ದಾನೆ.

Related Posts

Leave A Comment

Voting Poll

Get Newsletter