ಕಬರ್ ಸಂದರ್ಶನ

qabrಸದಾಚಾರಗಳನ್ನು ಅನಾಚಾರಗಳೆಂದೂ ಅನಾಚಾರಗಳನ್ನು ಸದಾಚಾರಗಳೆಂದೂ ಹೇಳುತ್ತಿರುವುದು ಸಮಾಜದ ಕೆಲವೊಂದು ನೂತನ ಪಂಗಡಗಳಿಗೆ ಫ್ಯಾಶನ್ ಆಗಿದೆ. ಇಸ್ಲಾಂ ಧರ್ಮದಲ್ಲಿ ಸತ್ಕರ್ಮವೆಂದು ಸಾಬೀತಾದ ಹಲವು ಕಾರ‍್ಯಕ್ರಮಗಳನ್ನು ನೂತನ ಆಚಾರಗಳೆಂದು ಪ್ರಚಾರ ಪಡಿಸಿ ಮುಸ್ಲಿಮರನ್ನು ಇಕ್ಕಟ್ಟಿಗೆ ಸಿಲುಕಿಸುವುದರಿಂದ ಇವರಿಗುಂಟಾಗುವ ಲಾಭವೇನು ಎಂದು ತಿಳಿಯುವುದಿಲ್ಲ. ಈ ಸಾಲಿಗೆ ಸೇರಿದ ಒಂದು ಸತ್ಕರ್ಮವಾಗಿದೆ ಕಬರ್ ಸಂದರ್ಶನ. ಇದನ್ನು ಎತ್ತಿ ಹಿಡಿದು ೯೯% ಮುಸ್ಲಿಮರನ್ನು ಮುಶ್ರಿಕ್‌ಗಳೆಂದೂ ಗೋರಿ ಆರಾಧಕರೆಂದೂ ಪ್ರಚಾರ ಮಾಡುವುದು ದೌರ್ಭಾಗ್ಯಕರ. ಗೋರಿ ಸಂದರ್ಶನ ಇಸ್ಲಾಮಿನಲ್ಲಿ ಸುನ್ನತ್ ಆದ ಒಂದು ಸತ್ಕರ್ಮವೆಂಬುವುದರ ಬಗ್ಗೆ ಮುಸ್ಲಿಮರೆಡೆಯಲ್ಲಿ ಭಿನ್ನಾಭಿಪ್ರಾಯಕ್ಕೆ ಸ್ಥಾನವೇ ಇಲ್ಲ. ಇಮಾಂ ನವವೀ ತನ್ನ ಶರಹು ಮುಸ್ಲಿಂನಲ್ಲಿ ಕಬರ್ ಝಿಯಾರತ್ ಪುಣ್ಯ ಕರ್ಮವೆಂಬುವುದಕ್ಕೆ ಮುಸ್ಲಿಂ ಜಗತ್ತಿನಲ್ಲಿ ಒಮ್ಮತವಿದೆ ಎಂದು ಸ್ಪಷ್ಟಪಡಿಸಿದ್ದಾರೆ. (ಪುಟ ೧-೩೧೪) ತುಹ್ಫಾ ೩-೧೯೯) ಮಾತ್ರವಲ್ಲ ಶರಹುಲ್ ಮುಹದ್ದಬ್ ೫೩೦೯, ನಿಹಾಯ ೩,೩೫  ಶರಹುಲ್ ಮಿನ್‌ಹಾಜ್ ೨-೨೦೯ ಮೊದಲಾದ ಗ್ರಂಥಗಳಲ್ಲಿ ಇದನ್ನು ಸ್ಪಷ್ಟ ಪಡಿಸಲಾಗಿದೆ. ಇಸ್ಲಾಮಿನ ಮೊದಲ ಹಂತದಲ್ಲಿ ಗೋರಿ ಸಂದರ್ಶನವನ್ನು ನಿಷೇಧಿಸಲಾಗಿತ್ತೆಂಬುದು ಸರಿಯೇ ನವ ಮಸ್ಲಿಮರ ಶ್ರದ್ದೆ ಮತ್ತು ನಂಬಿಕೆ ದೃಡವಾಗಲು ಮತ್ತು ಅಜ್ಞಾನ ಕಾಲದ ಮೂಡ ನಂಬಿಕೆಗಳೆಲ್ಲ ಮರೆತು ಹೋಗಲು ಈ ರೀತಿ ಗೋರಿ ಸಂದರ್ಶನವನ್ನು ನಿಷೇಧಿಸಲಾಗಿತ್ತು. ಮುಸ್ಲಿಮರ ವಿಶ್ವಾಸ ದೃಡ ಗೊಂಡ ನಂತರ ಈ ನಿಷೇಧವನ್ನು ತೆರವುಗೊಳಿಸುತ್ತಾ ಪ್ರವಾದಿ(ಸ.ಅ)ರು ಹೀಗೆ ಹೇಳಿದರು- ನಾನು ಕಬರ್ ಸಂದರ್ಶಿಸುವುದಕ್ಕೆ ನಿಮಗೆ ನಿಷೇದ ಹೇರಿದ್ದೆ. ತಿಳಿಯಿರಿ ಈಗ ನೀವು ಗೋರಿ ಸಂದರ್ಶಿಸಿರಿ ಅದು ನಿಮ್ಮನ್ನು ತ್ಯಾಗಿಗಳೂ, ಮರಣದ ಬಗ್ಗೆ ಸ್ಮರಿಸುವಂತೆಯೂ ಮಾಡುತ್ತದೆ(ಮುಸ್ಲಿಂ ೧:೩೧೪). ಸುಲೈಮಾನ್ ಬಿನ್ ಬುರ‍್ದುದುಲ್ ಅಸ್‌ಲಮಿ(ರ) ರಿಂದ ವರದಿಯಾದ ಹದೀಸಿನಲ್ಲಿ ಹೀಗಿದೆ- ’ಪ್ರವಾದಿ(ಸ)ರು ತನ್ನ ಅನುಚರರಿಗೆ ಕಬರ್ ಸಂದರ್ಶಿಸಿದ ನಂತರ ಏನೆಲ್ಲಾ ಹೇಳಬೇಕೆಂದು ಕಲಿಸಿ ಕೊಡುತ್ತಿದ್ದರು. ಕಬರ್ ಸಂದರ್ಶನ ಸುನ್ನತ್ ಎಂಬುದನ್ನು ಇದರಿಂದಲೇ ಗ್ರಹಿಸಬಹುದಾಗಿದೆ.

-ಅಲ್ ಅಹ್ಸನ್ ಮಾಸಿಕ

Files

Related Posts

Leave A Comment

Voting Poll

Get Newsletter