ಸಪೂರ ಸರ್ಕಾರ ವಿರುದ್ಧ ಯುಎಪಿಎ ಕೇಸ್ ದಾಖಲು*: *ಕೋವಿಡ್ ೧೯ ಕಾಲದಲ್ಲಿ ಸರ್ಕಾರದಿಂದ ಸೇಡು ತೀರಿಸುವ ಪ್ರಯತ್ನ
    ಪೌರತ್ವ ತಿದ್ದುಪಡಿ ಕಾಯ್ದೆ ಯನ್ನು ದೇಶದ ಪ್ರಸ್ತುತ ಸರ್ಕಾರ ಜಾರಿಗೊಳಿಸಲು ನಿರ್ದೇಶಿಸಿದಾಗ ದೇಶದಲ್ಲಿ ಹಲವಾರು ಪ್ರತಿಭಟನೆಗಳು ನಡೆದವು.ಅದರಲ್ಲಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳು ನಡೆಸಿದ ಆಹೋರಾತ್ರಿ ಉಗ್ರ ಪ್ರತಿಭಟನೆಗಳು ದೇಶ ಮಾತ್ರವಲ್ಲದೆ ವಿಶ್ವದಲ್ಲೆಡೆ ಗಮನಸೆಳೆದವು.
            ಜಾಮಿಯಾ ವಿದ್ಯಾರ್ಥಿಗಳ ವಿರುದ್ಧ ಪೊಲೀಸರು ನಡೆಸಿದ ಕ್ರೂರ ಕೃತ್ಯಗಳಿಂದಾಗಿ ಶಾಹಿನ್ ಬಾಗ್ ಪ್ರತಿಭಟನೆಯೂ ಉಗ್ರ ರೂಪ ಪಡೆಯಿತಲ್ಲದೆ ವಿಶ್ವದ ಗಮನ ಸೆಳೆಯಲು ಕಾರಣವಾಯ್ತು.ಅಂದಿನ ಪ್ರತಿಭಟನೆಯ ನಾಯಕತ್ವ ವಹಿಸಿದ ಒಂದೇ ಕಾರಣಕ್ಕೆ ಜಾಮಿಯಾ ಕೋಡ್ ನೇಶನ್ ಕಮಿಟಿ ಮೀಡಿಯಾ ಕೊಡಿ ನೇಟರ್ ಸಪೂರ ಸರ್ಕಾರ ವಿರುದ್ಧ ಕೋರೋಣ ಕಾಲದಲ್ಲೂ ಸಂಘಪರಿವಾರ ಹಗೆ ಸಾಧಿಸಲು ಪ್ರಯತ್ನಿಸುತ್ತಿದೆ. ದೆಹಲಿ ಗಲಭೆ ಹೆಸರಲ್ಲಿ ಗರ್ಭಿಣಿಯಾಗಿರುವ ಸಪೂರ ಸರ್ಕಾರ ವಿರುದ್ಧ ಕೇಸು ದಾಖಲಿಸಿ ಒಂದು ತಿಂಗಳಿನಿಂದ ತಿಹಾರ್ ಜೈಲಿನಲ್ಲಿ ಬಂದಿಸಲಾಗಿದೆ.
ಯಾರು ಈ ಸಪೂರ ಸರ್ಕಾರ
        ದೆಹಲಿ ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯದ ಎಂಫಿಲ್ ವಿದ್ಯಾರ್ಥಿಯಾಗಿದ್ದಾರೆ 27 ವರ್ಷದ ಸಪೂರ ಸರ್ಕಾರ.ಪೌರತ್ವ ನಿಯಮ ಜಾರಿಯಾದ ಸಂದರ್ಭದಲ್ಲಿ ಶಾಹಿನ್ ಬಾಗ್ ನಲ್ಲಿ ನಡೆದ ಪ್ರತಿಭಟನೆಯಲ್ಲಿ
‌ ಮುಂಚೂಣಿಯಲ್ಲಿದ್ದರು ಸಪೂರ ಸರ್ಕಾರ ಹಾಗೂ ಅದರ ಮೀಡಿಯ ಕೊಡಿ ನೇಟರ್ ಕೂಡ ಆಗಿದ್ದರು. ಎಂಬುದು ಅಲ್ಲಿ ನೆರೆದ ವಿದ್ಯಾರ್ಥಿಗಳ ಅಭಿಪ್ರಾಯವಾಗಿತ್ತು. ಡಿಸೆಂಬರ್ 12 ನೇ ತಾರೀಖಿನಂದು ಭಾರತದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪೌರತ್ವ ತಿದ್ದುಪಡಿ ಮಸೂದೆಗೆ ಅಂಗೀಕಾರ ನೀಡಿದ್ದರು. ಹಾಗೂ ಇದರ ವಿರುದ್ಧ ನಡೆದ ಮೊಟ್ಟಮೊದಲನೆಯ ಪ್ರತಿಭಟನೆಯನ್ನು ಆರಂಭಿಸಿದ್ದು ಜಾಮಿಯ ಮಿಲಿಯಾ ವಿದ್ಯಾರ್ಥಿಗಳಾಗಿದ್ದರು. ಡಿಸೆಂಬರ್ 15ರಂದು ವಿದ್ಯಾರ್ಥಿನಿಲಯದಲ್ಲಿ ನಡೆದ ಪ್ರತಿಭಟನೆಯಲ್ಲಿ ಸಪೂರ ಸರ್ಕಾರ್ ಪಾಲ್ಗೊಂಡಿದ್ದರು.ಪ್ರತಿಭಟನೆ ಹತ್ಯೆಗೈಯ್ಯಲು ಶ್ರಮಿಸಿದ ಪೊಲೀಸರು ಕಂಪ್ಯೂಟರ್ ಗಳನ್ನು ನಾಶಪಡಿಸಿದಲ್ಲದೆ ಗ್ರಂಥಾಲಯಕ್ಕೆ ನುಗ್ಗಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದರು.
            ಪೊಲೀಸ್ ಅರೆಸ್ಟ್ ಮಾಡಿದ ರೀತಿ
‌           ಪೌರತ್ವ ನಿಯಮದ ವಿರುದ್ಧ ಪ್ರತಿಭಟನೆಯನ್ನು ಹತ್ಯೆಗೈಯ್ಯಲು ಫ್ಯಾಸಿಸಂ, ಕೋಮುವಾದಿಗಳು ನಡೆಸಿದ ಕುತಂತ್ರವಾಗಿದೆ ದೆಹಲಿ ಗಲಭೆ.ಬಿಜೆಪಿ ಮುಖಂಡ ಕಪಿಲ್ ಮಿಶ್ರಾ ಮುಸ್ಲಿಮರ ವಿರುದ್ಧ ಪ್ರಚೋದನಕಾರಿ ಹೇಳಿಕೆಯೇ ದೆಹಲಿಗೆ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ. ಕೇಂದ್ರಮಂತ್ರಿ ಅನುರಾಗ್ ಠಾಕೂರ್ *ದೇಶ್ ಕೊ ಗದ್ದಾ ರೊಂಕೋ ಗೋಲಿ ಮಾರೋ ಸಾಲಂಕೊ* ಎಂಬ ಪ್ರಚೋದನಕಾರಿ ವಾಕ್ಯವು ಕೂಡ ಇದಕ್ಕೆ ಕಾರಣವೆಂದು ಹೇಳಬಹುದು.ಆದರೂ ಮುಸ್ಲಿಮರ ವಿರುದ್ಧ ನಡೆದ ವರ್ಗೀಯ ಕಲಾಪ ಉತ್ತರವಾದಿಗಳಾಗಿ ಪೌರತ್ವ ಪ್ರತಿಭಟನೆಯಲ್ಲಿ ಭಾಗವಹಿಸಿದವರನ್ನು ಅರೆಸ್ಟ್ ಮಾಡುವ ವಿಚಿತ್ರವಾದ ಶೈಲಿಯಾಗಿತ್ತು ದೆಹಲಿ ಪೊಲೀಸ್ ಸ್ವೀಕರಿಸಿದ್ದು.ಗಲಭೆಗೆ ಪ್ರಮುಖ ಕಾರಣ ಸಪೂರ ಸರ್ಕಾರ ಆಗಿದ್ದಾರೆ ಎಂಬುವುದೇ  ಪೊಲೀಸ್ ವಾದ. ಗರ್ಭಿಣಿಯಾದರೂ ತನ್ನ ವಿರುದ್ಧ ಬಂದ ಅಪಪ್ರಚಾರಗಳನ್ನು ಸಹಿಸಿಕೊಳ್ಳಬೇಕಾಯಿತು.ಗರ್ಭದ ಕುರಿತು ಅಶ್ಲೀಲ ವಾರ್ತೆಗಳನ್ನು ಸಂಘಪರಿವಾರ ಮಾಧ್ಯಮಗಳ ಮೂಲಕ ವ್ಯಾಪಿಸಿದ ಕಾರಣ ದೆಹಲಿ ವನಿತಾ ಕಮಿನಿಷರ್, ದೆಹಲಿ ಪೋಲೀಸಿಗೆ ನೋಟಿಸ್ ಕಳುಹಿಸಿದರು.ಸಪೂರ ಸರ್ಕಾರ ವಿರುದ್ಧ ನಡೆಯುತ್ತಿರುವ ಸ್ತ್ರೀ ವಿರುದ್ಧ ಅಪಪ್ರಚಾರ ಸಂಬಂಧಿಸಿ ರಿಜಿಸ್ಟರ್ ಮಾಡಿದ ಎಫ್ಐಆರ್ ವಿವರಗಳು ಮೇ ೧೦ ಒಳಗಡೆ ತಿಳಿಸಿ ಕೊಡಬೇಕಾಗಿ ನೋಟಿಸಿನಲ್ಲಿ ವಿನಂತಿಸಲಾಗಿದೆ.
‌.          ಅರೆಸ್ಟ್ ವಿರುದ್ಧ ಪ್ರತಿರೋಧ
‌.      ಸಪೂರ ವಿರುದ್ಧ ನಡೆಯುತ್ತಿರುವ ಅಪಪ್ರಚಾರ ವಿರುದ್ಧ ಹಲವು ಸಂಘಟನೆಗಳು ಬೀದಿಗಿಳಿದರೂ london school of economics oxford cambridge ನಂತಹ ಪ್ರಖ್ಯಾತವಾದ ಹಲವು ಯೂನಿವರ್ಸಿಟಿ ಯ ಪ್ರೊಫೆಸರ್ ಸೇರಿದಂತೆ, ಬ್ರಿಟನ್ ನ 90 ಚಿಂತಕರು ಒಳಗೊಂಡ ತಂಡವು ಕೂಡಾ ಸಪೂರ ಸರ್ಕಾರ್, ಉಮರ್ ಖಾನ್, ಮೀರನ್ ಹೈದರ್ ,ಮೊಹಮ್ಮದ್ ಅಮೀರ್ ಮಿಂಟೋ ಅವರನ್ನು ಅರೆಸ್ಟ್ ಮಾಡಿದ ನಡವಳಿಯನ್ನು ವಿರೋಧಿಸಿದರು. ಇದರ ವಿರುದ್ಧ ಹೊರತಂದ ಪ್ರತಿ ಗಳಿಗೂ ಕೂಡ ಅವರು ಸಹಿ ಹಾಕಿದರು. ಭಾರತ ಮುಸ್ಲಿಂ ಸಂಘಟನೆಗಳು ಕೂಡ ಇದರ ವಿರುದ್ಧ ಶಕ್ತವಾದ ಪ್ರತಿಭಟನೆ ಪ್ರತಿಭಟಿಸಿದರು. ಹೋರಾಟಕ್ಕೆ ಸಪೂರ ಪತ್ನಿ ಹಾಗೂ ಕುಟುಂಬದಿಂದ ಶಕ್ತವಾದ ಬೆಂಬಲ ಲಭಿಸಿತ್ತು. ಸಪೂರ ಸರ್ಕಾರ್ ಬೆಂಬಲಿಸಿ ಸಹೋದರಿ ಪತ್ರ ಬರೆದರು "ನಾನು ನನ್ನ ಜೀವನದಲ್ಲಿ ಕಂಡ ಅತ್ಯಂತ ಶ್ರೇಷ್ಠ ಮಹಿಳೆ" ಎಂದು ಪತ್ರ ದಲ್ಲಿ ನಮೂದಿಸಲಾಗಿತ್ತು.
‌.     ಮುಸ್ಲಿಂ ಲೀಗ್ ನಿಂದ ನಿಯಮ ಸಹಾಯ
          ಸಂಘಪರಿವಾರ ಒತ್ತಾಶೆಯದಲ್ಲಿ ಕೇಂದ್ರ ಸರ್ಕಾರ ಅರೆಸ್ಟ್ ಮಾಡಿ ಯುಎಪಿಎ ಹೇರಿ ಜೈಲಿನಲ್ಲಿ ಬಂಧಿಸಿದ ವಿದ್ಯಾರ್ಥಿಗಳಿಗೂ ಹಾಗೂ ಆಕ್ಟಿಸ್ಟ್ ಗಳಿಗೂ ನಿಯಮ ಹೋರಾಟದಲ್ಲಿ ಮುಸ್ಲಿಂ ಲೀಗ್ ದೇಶೀಯ ಕಮಿಟಿ ನಿಯಮ ಸಹಾಯದೊಂದಿಗೆ ಮುನ್ನುಗುತ್ತಿದೆ. ಮೋಸವಾದ ಇಂತಹ ಕೃತ್ಯ ಗಳ ವಿರುದ್ಧ ಮಾತನಾಡುವವರನ್ನು ಬಯಪಡಿಸಿ ಜೈಲಿ ನಲ್ಲಿ ಬಂಧಿಸುವುದು ದೊಡ್ಡ ಮಾತಲ್ಲ.ಭಾರತದ ನ್ಯಾಯಾಲಯದಿಂದ ವಾಸ್ತವ ಹೊರತರುವೆವು ಎಂದು ವಿಶ್ವಾಸ ವ್ಯಕ್ತಪಡಿಸಿದರು.

Related Posts

Leave A Comment

Voting Poll

Get Newsletter