ಲಂಡನ್ನಿನಲ್ಲಿ ಇಸ್ಲಾಂ ಧರ್ಮ ಸ್ವೀಕರಿಸುವವರ ಸಂಖ್ಯೆಯಲ್ಲಿ ಗಣನೀಯ ಏರಿಕೆ?.!

East_London_Mosque_Front_Viewಲಂಡನ್: ಕಳೆದೊಂದು ದಶಕದಲ್ಲಿ ಇಸ್ಲಾಂ ಧರ್ಮಕ್ಕೆ ಮತಾಂತರ ಹೊಂದಿದ ಬ್ರಿಟನ್ ಪ್ರಜೆಗಳ ಸಂಖ್ಯೆಯು ಅದರ ಹಿಂದಿನ ದಶಕಕ್ಕಿಂತ ಹೆಚ್ಚುಕಮ್ಮಿ ಎರಡು ಪಟ್ಟು ಹೆಚ್ಚಿದೆಯೆಂದು, ಅಂತರ್ ಧರ್ಮೀಯ ಚಿಂತನ ವೇದಿಕೆಯೊಂದು ನಡೆಸಿದ ಅಧ್ಯಯನ ವರದಿಯು ಬಹಿರಂಗ ಪಡಿಸಿದೆ. ಬ್ರಿಟನ್ ಸೇರಿದಂತೆ ಪಾಶ್ಚಾತ್ಯ ದೇಶಗಳಲ್ಲಿ ಇಸ್ಲಾಂ ಧರ್ಮವನ್ನು ನಕಾರಾತ್ಮಕವಾಗಿ ಬಿಂಬಿಸುವ ಯತ್ನ ಆಗಾಗ್ಗೆ ನಡೆಯುತ್ತಿದೆ ಯಾದರೂ ಪ್ರತಿವರ್ಷವೂ ಸಾವಿರಾರು ಬ್ರಿಟಿಷರು ಇಸ್ಲಾಂ ಧರ್ಮವನ್ನು ಸ್ವೀಕರಿಸುತ್ತಿ ದ್ದಾರೆಂದು ‘ದಿ ಇಂಡಿಪೆಂಡೆಂಟ್’ ಪತ್ರಿಕೆ ವರದಿ ಮಾಡಿದೆ. ಬ್ರಿಟನ್‌ನಲ್ಲಿ ವಾಸಿಸುತ್ತಿರುವ ಇಸ್ಲಾಂ ಧರ್ಮಕ್ಕೆ ಮತಾಂತರ ಹೊಂದಿದವರ ನಿಖರ ಸಂಖ್ಯೆಯನ್ನು ಅಂದಾಜಿಸುವುದು ತೀರಾ ಕಷ್ಟ. ಬ್ರಿಟನ್‌ನ ಜನಗಣತಿಯಲ್ಲಿ ಓರ್ವ ವ್ಯಕ್ತಿಯು ನೂತನ ಧರ್ಮಕ್ಕೆ ಮತಾಂತರ ಗೊಂಡಿದ್ದಾನೆಯೇ ಅಥವಾ ಆ ಧರ್ಮದಲ್ಲಿ ಜನಿಸಿದ್ದಾನೆಯೇ ಎಂಬ ಬಗ್ಗೆ ದತ್ತಾಂಶಗಳನ್ನು ಸಂಗ್ರಹಿಸದಿರುವುದೇ ಇದಕ್ಕೆ ಕಾರಣವಾಗಿದೆ. ಈ ಮೊದಲು ಬ್ರಿಟನ್‌ನಲ್ಲಿ ಕಳೆದ ದಶಕದಲ್ಲಿ ಇಸ್ಲಾಂ ಸ್ವೀಕರಿಸಿದವರ ಸಂಖ್ಯೆ ೧೪ ಸಾವಿರ ಹಾಗೂ ೨೫ ಸಾವಿರದ ಮಧ್ಯೆ ಇರಬಹುದೆಂದು ಅಂದಾಜಿಸಲಾಗಿತ್ತು. ಆದರೆ ‘ಫೇಥ್ ಮ್ಯಾಟರ್ಸ್’ ಎಂಬ ಚಿಂತನ ವೇದಿಕೆಯೊಂದು ನಡೆಸಿದ ನೂತನ ಅಧ್ಯಯನವು ಕಳೆದ ದಶಕದಲ್ಲಿ ಇಸ್ಲಾಂ ಸ್ವೀಕರಿಸಿದ ಬ್ರಿಟಿಶ್ ಪ್ರಜೆಗಳ ಸಂಖ್ಯೆ ಸುಮಾರು ಒಂದು ಲಕ್ಷದಷ್ಟಿರಬಹುದೆಂದು ಅಂದಾಜಿಸಿದೆ ಹಾಗೂ ಪ್ರತಿವರ್ಷವೂ ಬ್ರಿಟನ್‌ನಾದ್ಯಂತ ಸರಾಸರಿ ೫ ಸಾವಿರ ಮಂದಿ ಇಸ್ಲಾಂ ಧರ್ಮಕ್ಕೆ ಮತಾಂತರ ಹೊಂದುತ್ತಿದ್ದಾರೆಂದು ಅದು ಹೇಳಿದೆ. ೨೦೦೧ರ ಸ್ಕಾಟ್‌ಲ್ಯಾಂಡ್ ಜನಗಣತಿ ಯನ್ನು ಬಳಸಿ ಸಂಶೋಧಕರು ಈ ಅಂಕಿ-ಅಂಶಗಳನ್ನು ಸಂಗ್ರಹಿಸಿದ್ದಾರೆ. ಈ ಸಮೀಕ್ಷೆಯಲ್ಲಿ ಮಾತ್ರ ವ್ಯಕ್ತಿಗಳು ತಾವು ಸಮೀಕ್ಷೆಯ ಸಂದರ್ಭದಲ್ಲಿ ಅನುಸರಿ ಸುತ್ತಿರುವ ಧರ್ಮ ಹಾಗೂ ಹುಟ್ಟಿನಿಂದ ಇದ್ದ ಧರ್ಮದ ಬಗ್ಗೆ ಮಾಹಿತಿಯನ್ನು ಕಲೆ ಹಾಕಲಾಗಿತ್ತು. ಈ ಸಮೀಕ್ಷೆಯ ದತ್ತಾಂಶಗಳ ಮೂಲಕ ಸ್ಕಾಟ್‌ಲ್ಯಾಂಡ್‌ನಲ್ಲಿ ಮುಸ್ಲಿಂ ಧರ್ಮಕ್ಕೆ ಮತಾಂತರ ಹೊಂದಿದವರ ಪ್ರಮಾಣವನ್ನು ವಿಭಜಿಸಲಾಯಿತು ಹಾಗೂ ಆ ಮೂಲಕ ಇಡೀ ಬ್ರಿಟನ್‌ನಲ್ಲಿ ಇಸ್ಲಾಂ ಸ್ವೀಕೃತರ ಸರಾಸರಿ ಸಂಖ್ಯೆಯನ್ನು ಅಂದಾಜಿಸ ಲಾಯಿತು. ಈ ಎಲ್ಲಾ ಅಧ್ಯಯನದ ಮೂಲಕ ೨೦೦೧ರ ವೇಳೆ ಬ್ರಿಟನ್‌ನಲ್ಲಿ ಇಸ್ಲಾಂ ಧರ್ಮಕ್ಕೆ ಮತಾಂತರ ಹೊಂದಿದವರ ಸಂಖ್ಯೆ ೬೦,೬೯೯ರಷ್ಟಿತ್ತೆಂದು ಅಂದಾಜಿಸಲಾಯಿತು. ಒಂದು ವರ್ಷದಲ್ಲಿ ಎಷ್ಟು ಮಂದಿ ಇಸ್ಲಾಂ ಧರ್ಮ ಸ್ವೀಕರಿಸುತ್ತಿದ್ದಾರೆಂಬ ಬಗ್ಗೆ ಲೆಕ್ಕಹಾಕಲು ಸಂಶೋಧಕರು ಲಂಡನ್‌ನ ವಿವಿಧ ಮಸೀದಿಗಳಲ್ಲಿಯೂ ಸಮೀಕ್ಷೆಯನ್ನು ನಡೆಸಿದ್ದಾರೆ.ಅಧ್ಯಯನದ ಬಗ್ಗೆ ವಿವರಗಳನ್ನು ನೀಡಿರುವ ‘ಇಂಟರ್ ಫೇಥ್ ಮ್ಯಾಟರ್ಸ್’ನ ನಿರ್ದೇಶಕ ಫಿಯಾಝ್ ಮುಘಲ್, ಬ್ರಿಟನ್‌ನಲ್ಲಿ ಇಸ್ಲಾಂ ಸ್ವೀಕರಿಸಿ ದವರ ನಿಖರ ಸಂಖ್ಯೆಯನ್ನು ಅಂದಾಜಿಸು ವುದು ತೀರಾ ಕಷ್ಟಕರವೆಂದು ಹೇಳಿದ್ದಾರೆ. ನೂತನ ಅಂಕಿ-ಅಂಶಗಳ ಪ್ರಕಾರ ಪ್ರತಿ ೬೦೦ ಬ್ರಿಟಿಷರಲ್ಲಿ ಓರ್ವ ಇಸ್ಲಾಂ ಧರ್ಮವನ್ನು ಸ್ವೀಕರಿಸುತ್ತಿರುವುದು ದೃಢಪಟ್ಟಿದೆ ಎಂದು ಬ್ರಿಟನ್ ಮೂಲದ ‘ಮುಸ್ಲಿಮ್ಸ್ ಫಾರ್ ಯುಕೆ’ ಎಂಬ ಸಂಘಟನೆಯ ಸ್ಥಾಪಕ ಇನಾಯತ್ ಬಂಗ್ಲಾವಾಲಾ ಹೇಳುತ್ತಾರೆ. ಬ್ರಿಟನ್ ಸೇರಿದಂತೆ ಪಾಶ್ಚಾತ್ಯ ದೇಶಗಳಲ್ಲಿ ಇಸ್ಲಾಂ ಧರ್ಮವನ್ನು ನಕಾರಾತ್ಮಕವಾಗಿ ಬಿಂಬಿಸುವ ಯತ್ನ ಆಗಾಗ್ಗೆ ನಡೆಯುತ್ತಿದೆಯಾದರೂ ಪ್ರತಿವರ್ಷವೂ ಸಾವಿರಾರು ಬ್ರಿಟಿಷರು ಇಸ್ಲಾಂ ಧರ್ಮವನ್ನು ಸ್ವೀಕರಿಸುತ್ತಿದ್ದಾರೆಂದು ‘ದಿ ಇಂಡಿಪೆಂಡೆಂಟ್’ ಪತ್ರಿಕೆ ವರದಿ ಮಾಡಿದೆ.

Related Posts

Leave A Comment

Voting Poll

Get Newsletter