ರಕ್ತದಾನ: ಇಸ್ಲಾಮಿನ ದೃಷ್ಟಿಕೋನದಲ್ಲಿ

      ಭಾರತೀಯ ರಕ್ತದಾನ ದಿನ ಒಕ್ಟೋಬರ್ ತಿಂಗಳಲ್ಲಿ ಆಚರಿಸುತ್ತೇವೆ. 1975ರ ಕಾಲದಿಂದ 'INDIA SOCIETY OF BLOOD TRANSFUSION AND IMUNAHAMETHOGY'ಎಂಬ ವಿಭಾಗ ಮೊದಲನೆಯಾದಾಗಿ ಅಕ್ಟೋಬರ್ 1 ರಕ್ತದಾನ ದಿನ ಎಂದು ಆಚರಿಸಿದರು. ತಮ್ಮ ರಕ್ತವನ್ನು ಅವಶ್ಯವಿರರುವವರಿಗೆ ಹಂಚಿ ರಕ್ತದಾನ ಶಿಬಿರಗಳನ್ನು ಆಚರಿಸಿದರು. 1971 ಅಕ್ಟೋಬರ್ 22 ರಲ್ಲಿ ಸ್ವರೂಪ ಕೃಷ್ಣ ಹಾಗೂ ಜೆ.ಜೆ. ಜೋಲಿಯ ನೇತೃತ್ವದಲ್ಲಿ 'INDIA SOCIETY OF BLOOD TRANSFUSION AND IMUNAHAMETHOGY'ಎಂಬ ವಿಭಾಗವನ್ನು ಸ್ಥಾಪಿಸಲಾಯಿತು.

     ಸ್ವಸನ್ನದ್ದ ರಕ್ತದಾನಕ್ಕೆ ದೇಶದ ಜನರೆಡೆಯಲ್ಲಿ ಜ್ಞಾನವನ್ನು ಹರಡಿಸುವುದು, ಅದರ ಪ್ರಾಮುಖ್ಯತೆಯನ್ನು ಜನರಿಗೆ ತಿಳಿಸಿ ಕೊಡುವುದು, ರಕ್ತದಾವಶ್ಯಾಬರುವ ಮುನ್ನ ಬ್ಲಡ್ ಬ್ಯಾಂಕ್ ನಲ್ಲಿ ರಕ್ತ ನಿಕ್ಷೇಪಿಸುವವರಿಗೆ ಪ್ರೋತ್ಸಾಹ ನೀಡುವುದು, ಆರೋಗ್ಯ ಸುರಕ್ಷಿಸಲು ರಕ್ತ ಶೇಖರಿಸಿ ಅದನ್ನು ಅವಶ್ಯವಿರುವವರಿಗೆ ನೀಡುವುದು, ರಕ್ತದಾನ ಮೂಲಕ ಮತ್ತೊಂದು ಜೀವಕ್ಕೆ ಸಹಾಯಿಯಾಗುವುದು ಇದೆಲ್ಲವೂ ಈ ಸಂಘಟನೆಯ ಪ್ರಧಾನ ಭರವಸೆಗಳು. ಜೂನ್ 14 ವಿಶ್ವ ರಕ್ತದಾನ ದಿನ ಎಂದು ಆಚರಿಸಲಾಗುತ್ತದೆ. ಮತ್ತು ಕೆಲವು ದೇಶಗಳು ವಿವಿಧ ದಿನಗಳಲ್ಲಿ ರಕ್ತದಾನ ದಿನವನ್ನು ಆಚರಿಸುತ್ತಾರೆ. ರಕ್ತದ ಅವಶ್ಯಕತೆಯಿರುವವರಿಗೆ ಸಹಾಯ ಮಾಡಲು ಮತ್ತು ಅವರೊಡನೆ ಸಂಪರ್ಕ ಬೆಳೆಸಲು ಈಗ ಹಲವಾರು ಸಂಘಟನೆಗಳು ಇದೆ. ಅವರು ರಕ್ತವನ್ನು ಮೊದಲೇ ಬ್ಲಡ್ ಬ್ಯಾಂಕ್ ನಲ್ಲಿ ನಿಕ್ಷೇಪಿಸಿ ನಂತರ ಆವಶ್ಯಕತೆ ಇರುವವರಿಗೆ ತಲುಪಿಸುತ್ತಾರೆ.

      ಪರಿಶುದ್ಧ ಇಸ್ಲಾಂ ಮತ್ತೊಬ್ಬರಿಗೆ ಸಹಾಯ ಮಾಡಬೇಕು ಅದು ಪುಣ್ಯ ಲಭಿಸುವ ಕಾರ್ಯವೆಂದು ತಿಳಿಸಿ ಕೊಡುತ್ತದೆ ಆದರೆ ದೇವರಿಗೆ ತೃಪ್ತಿ ಹೊಂದಿದ ಕಾರ್ಯದಲ್ಲಾಗಿರಬೇಕು. ತನ್ನ ಸನ್ನಿಹಿತ ನೆರಹೊರೆಯವರು ಹಸಿವಿನಿಂದ ಬಳಲುವಾಗ ಹೊಟ್ಟೆ ತುಂಬ ಆಹಾರ ಸೇವಿಸುವವನು ನಮ್ಮವನಲ್ಲ ಎಂದು ಪ್ರವಾದಿ ವಚನದಿಂದ ಸಿಗುವ ಸಂದೇಶವೂ, ಇಸ್ಲಾಂ ಧರ್ಮ ಅನುವದಿಸಿದ ಕಾರ್ಯವನ್ನು ಅನುಸರಿಸುವುದು ಮತ್ತು ನಿಷಿದ್ಧಗೊಳಿಸಿ ಕಾರ್ಯವನ್ನು ವಿರೊಧಿಸುವುದು. ರಕ್ತ ನಜಸ್ ಆಗಿದೆ ಆದರೆ ಅತ್ಯಾವಶ್ಯಕತೆ ಇರುವಾಗ ಅದು ಅನುವದನೀಯವಾಗಿದೆ. ರಕ್ತದಾನ ನಡೆಸುದು ಇಸ್ಲಾಂ ತಡೆಯುವುದಿಲ್ಲ ಆದರೆ ರಕ್ತವನ್ನು ಮಾರಾಟ ಮಾಡುವುದನ್ನು ನಿಷಿದ್ಧಗೊಳಿಸಿದೆ. ಕಾರಣ ರಕ್ತ ಎಂಬುದು ನಜಸ್ ಆಗಿದೆ. ನಜಸ್ ಮಾರಾಟ ಮಾಡುವುದು ಇಸ್ಲಾಂನಲ್ಲಿ ನಿಷಿದ್ಧ. ರಕ್ತವು ಶರೀರದಿಂದ ಹೊರ ಬಂದರೆ ಅದು ನಜಸ್ಸಿನ ವಿಧಿ ನೀಡಲಾಗುತ್ತದೆ.

      ರಕ್ತಕುಡಿಯುವ ಅವಶ್ಯವಿದ್ದರೆ ಅದನ್ನು ಕುಡಿಯುವುದರಲ್ಲಿ ಯಾವ ತೊಂದರೆಯೂ ಇಲ್ಲ ಎಂದು ಕರ್ಮಶಾಸ್ತ್ರ ಗ್ರಂತವಾದ ಶರಹುಲ್ ಮಹಝನಲ್ಲಿ ವ್ಯಕ್ತಪಡಿಸಲಾಗಿದೆ. ರೋಗ ಶಮನಕ್ಕೆ ಬೇಕಾಗಿ ರಕ್ತದಾನ ನಡೆಸುವುದು ಮತ್ತು ಅದನ್ನು ಅವಶ್ಯಕ್ಕೆ ತಕ್ಕ ಉಪಯೋಗಿಸುವುದನ್ನು ಇಸ್ಲಾಂ ಹಲಾಲ್ ಮಾಡಿದೆ. ಮುಂಬರುವ ಕಾಲದಲ್ಲಿ ರಕ್ತವನ್ನು ತೆಗೆದಿಟ್ಟು ಉಪಯೋಗಿಸಲು ಬ್ಲಡ್ ಬ್ಯಾಂಕ್ ಕುರಿತಾದ ಮಾಹಿತಿಯನ್ನು ಕರ್ಮ ಶಾಸ್ತ್ರ ಗ್ರಂಥದಿಂದ ಆರ್ಥ್ಯಸಿಕೊಳ್ಳುವ ಸಾಧ್ಯವಾಗುತ್ತದೆ. ಅಲ್ಲಾಹನಿಗೆ ತೃಪ್ತಿಯಾಗುವ ರೀತಿಯಲ್ಲಿ ಅವಶ್ಯಕತೆ ಇರುವವರಿಗೆ ರಕ್ತದಾನ ನಡೆಸಿದರೆ ಹಲವಾರು ಪುಣ್ಯ ಲಭಿಸುತ್ತದೆ.

   ಬರಹ: ಸಫಾದ್ ಉಜಿರೆ

Related Posts

Leave A Comment

Voting Poll

Get Newsletter