ದುಬೈ: ಇಸ್ಲಾಂ ಸ್ವೀಕರಿಸಿದ ಹೈದರಬಾದ್ ಕ್ರೈಸ್ತ ಕುಟುಂಬ

Haiderbad muslim-familyದುಬೈ: ಹೈದರಾಬಾದಿನ ಕ್ರೈಸ್ತ ಮೂಲದ ಇಡೀ ಕುಟುಂಬ ವೊಂದು ಇಸ್ಲಾಂ ಸ್ವೀಕರಿಸಿದ ಘಟನೆ ದುಬೈಯಿಂದ ವರದಿಯಾಗಿದೆ ಸಮುದಾಯದ ಒಂದು, ಇಬ್ಬರು ಮುಸ್ಲಿಮೇತರರು ಇಸ್ಲಾಂ ಸ್ವೀಕರಿಸುವುದು ಸಾಮಾನ್ಯವಾಗಿ ಕಂಡು ಬರುತ್ತಿದ್ದು; ಆದರೆ ಪೂರ್ತಿ ಕುಟುಂಬ ಇಸ್ಲಾಂ ಸ್ವೀಕರಿಸುತ್ತಿರುವುದು ಅಪರೂಪದ ಘಟನೆ, ಇದೀಗ ತಾಯಿ, ತಂದೆ, ಮಗ, ಮಗಳು ಎಂದು ಪೂರ್ತಿ ಕುಟುಂಬವೆ ಇಸ್ಲಾಂ ಸ್ವೀಕರಿಸಿದೆ. (ಅಲ್ ಹಂದುಲಿಲ್ಲಾಹ್). ಇಸ್ಲಾಂ ಧರ್ಮ ಕಲಿಸುವ ನ್ಯಾಯ, ಶಾಂತಿಯ ಸಂದೇಶ, ಅದು ಕಲಿಸುವ ಈ ಲೋಕದ ಜೀವನ ಮತ್ತು ಪರಲೋಕದ ಕಲ್ಪನೆ ನಮಗೆ ಇಸ್ಲಾಂ ಸ್ವೀಕರಿಸುವಂತೆ ಪ್ರೇರಣೆ ನೀಡಿದೆ ಎಂದು ಈಸಾ (ಮೊದಲ ಹೆಸರು: ಜೇಮ್ಸ್ ) ಹೇಳುತ್ತಾರೆ. ಹೈದರಾಬಾದಿನ ಪ್ರೊಟೆಸ್ಟೆಂಟ್ ಕ್ರೈಸ್ತ ಕುಟುಂಬದಲ್ಲಿ ಜನಿಸಿದ ಜೇಮ್ಸ್ ಕಳೆದ ಎರಡು ವರ್ಷಗಳಿಂದ ಇಸ್ಲಾಮಿನ ಅಧ್ಯಯನ ಮಾಡುತ್ತಿದ್ದು ಈಗ ಈಸಾ ಎಂದು ಮುಸ್ಲಿಂ ನಾಮಕರಣ ಮಾಡಿಕೊಂಡಿದ್ದಾರೆ. ತಮ್ಮ ಎರಡು ವರ್ಷದ ಅಧ್ಯಯನದಲ್ಲಿ ಸೌತ್ ಆಫ್ರಿಕಾ ಮೂಲದ ಅಹ್ಮೆದ್ ದೀದಾತ್ , ಮುಂಬೈ ಮೂಲದ ಡಾ ಜ್ಯಾಕಿರ್ ನಾಯಕ್ , ಕೆನಡಾದ ಯೂಸುಫ್ ಎಸ್ಟೇಟ್ ಅವರ ವಾದ ಮಂಡನೆಯ ವಿಚಾರಗಳು (ವೀಡಿಯೋ) ಆಳವಾಗಿ ಅಭ್ಯಸಿದ್ದೇವೆ ಎಂದೂ ಅವರು ನೆನಪಿಸುತ್ತಾರೆ. ಕುಟುಂಬವು ತಂದೆ ಮೊಹಮ್ಮದ್ , ತಾಯಿ ಮರಿಯಂ, ಮಗಳು ಆಯಿಶ , ಮಗ ಸಾರ ಆಗಿ ಮುಸ್ಲಿಂ ನಾಮಕರಣ ಮಾಡಿ ಕೊಂಡಿದೆ. ಮುತ್ತಕೀನ್ ಕೂಟದಲ್ಲಿ ಇವರನ್ನೂ ನಮ್ಮಲ್ಲರನ್ನೂ ಅಲ್ಲಾಹ್ ಸೇರಿಸಲಿ (ಆಮೀನ್).

Related Posts

Leave A Comment

Voting Poll

Get Newsletter