ಮರಣ ಹೊಂದಿದವರ ಮೇಲೆ ಖುರ್‌ಆನ್ ಪಾರಾಯಣ
ಮರಣ ಹೊಂದಿದವರ ಹೆಸರಲ್ಲಿ ಖುರ್‌ಆನ್ ಪಾರಾಯಣ ಮಾಡುವುದು ಸಲಫು ಸ್ವಾಲೀಹಿನರ ಎಡೆಯಲ್ಲಿ ಸರ್ವ ಸಾಧಾರಣವಾಗಿತ್ತು. ಇದನ್ನು ನೂತನವಾದಿಗಳ ನಾಯಕನಾದ ಇಬ್‌ನುಲ್‌ಖಯ್ಯಿಂನ ಅರ್ರೂಹ್ ಎಂಬ ಗ್ರಂಥದಲ್ಲಿ ಉಲ್ಲೇಖಿಸಲ್ಪಟ್ಟಿದೆ. ನೆಬಿ(ಸ.ಅ) ಹೇಳಿದರು ನಿಮ್ಮಿಂದ ಮರಣಗೊಂಡವರ ಮೇಲೆ ಸೂರಾಃ ಯಾಸೀನ್ ನೀವು ಪಾರಾಯಣ ಮಾಡಿರಿ(ಅಹ್ಮದ್ ಅಬೂದಾವೂದ್ ಇಬ್‌ನ್ ಮಾಜ) ಇಮಾಂ ನವಿ(ರ ) ಹೇಳುತ್ತಾರೆ. ಖುರ್‌ಆನಿನಿಂದ ಸ್ವಲ್ಪ ಓದುವುದು ಸುನ್ನತ್ತಾಗಿದೆಯೆಂದು ಇಮಾಂ ಶಾಫಿ(ರ) ಮತ್ತು ಅಸ್ಹಾಬುಗಳು ಪ್ರಸ್ತಾಪಿಸಿದ್ದಾರೆ. ಅವರು ಹೇಳುತ್ತಾರೆ ಖುರ್‌ಆನ್ ಪೂರ್ತಿ ಓದಿ ಮುಗಿಸುವುದೂ ಉತ್ತಮವಾಗಿದೆ (ಅಝ್‌ಕಾರ್) ಮಹಾನರಾದ ಖತೀಬು ಶಿಅಬೀನಿ(ರ) ಹೇಳುತ್ತಾರೆ. ಮಯ್ಯಿತಿನ (ಜಡ ಶರೀರ) ಬಳಿ ಖುರ್‌ಆನ್‌ನಿಂದ ಸುಲಭವುಳ್ಳದನ್ನು ಓದಬೇಕು. ಮಕ್ಬರಗಳ ಬಳಿ ಅದು ಸುನ್ನತ್ತಾಗಿದೆ.(ಮುಗ್ನಿ) ಮರಣ ಹೊಂದಿದವರಿಗೆ ಖುರ್‌ಆನ್ ಪಾರಾಯಣ ಮತ್ತು ಬೇರೆ ಕಾರ್ಯಗಳ ಪ್ರತಿಫಲ ಲಭಿಸುತ್ತದೆ ಎಂಬುವುದು ಅನಿಷ್ಯೇದ್ಯ ವಸ್ತುತವಾಗಿದೆ ಎಂದು ಇಬ್‌ನುಲ್ ಖಯಿಂ ತನ್ನ ಅರ್ರೂಹ್‌ನಲ್ಲಿ ಬರೆದಿದ್ದಾರೆ(೧೨೩ ಅರ್ರೂಹ್) ಇಮಾಂ ನವಮಿ ಹೇಳುತ್ತಾರೆ ಒಬ್ಬ ವ್ಯಕ್ತಿ ಯಾರಾದರೂ ತೀರಿದ ವ್ಯಕ್ತಿಗೆ ಖುರ್‌ಆನ್ ಓದಿ ಹದಿಯಾ ಮಾಡಿದರೆ ಆತ ಹೀಗೆ ಪ್ರಾರ್ಥಿಸಬೇಕು. ಅಲ್ಲಾಹುವೇ ನಾನು ಓದಿದ ಈ ಪ್ರತಿಫಲವನ್ನು ಇಂತಹವನ ಖಬರಿಗೆ ತಲುಪಿಸು ಅಲ್ಲಾ(೧೫೦- ಅಝಕಾರ್). ಮರಣ ಹೊಂದಿದವರ ಮೇಲಿನ ಸ್ವದಖಃ(ದಾನಧರ್ಮ) : ಈ ವಿಷಯವು ಪ್ರಮಾಣಗಳಿಂದ ದೃಡೀಕರಿತವಾಗಿದೆ. ಆಯಿಷಾಬೀ(ರ)ರಿಂದ ನಿವೇದನೆಗೊಂಡ ಹದೀಸ್. ಒಬ್ಬ ವ್ಯಕ್ತಿ ಬಂದು ನೆಬಿ(ಸ.ಅ)ರಲ್ಲಿ ಕೇಳಿದರು. ನನ್ನ ತಾಯಿ ಆಕಸ್ಮಿಕವಾಗಿ ತೀರಿಹೋದರು. ಅವರು ಮರಣದ ನಿಮಿಷ ಮುಂದೆ ಏನಾದರೂ ಮಾತನಾಡಲೂ ಆಗುತ್ತಿದ್ದರೆ ಧರ್ಮ ನೀಡು ಎನ್ನುತ್ತಿದ್ದರು. ಆದ ಕಾರಣ ನಾನು ಧರ್ಮ ನೀಡಿದರೆ ಅದರ ಫಲ ಅವರಿಗೆ ತಲುಪಬಹುದೇ? ಪ್ರವಾದಿ (ಸ.ಅ) ಹೇಳಿದರು, ಅದೇ ಲಭಿಸುತ್ತದೆ(ಮುತಫಖುನ್ ಅಲೈಹಿ ಹದೀಸ್) ಇಮಾಂ ನವವೀ(ರ) ಹೇಳುತ್ತಾರೆ. ಮರಣ ಶರೀರದ ಹೆಸರಲ್ಲಿ ನಡೆಸುವ ದಾನ ಧರ್ಮದ ಫಲ ಜಡಶರೀರಕ್ಕೆ ಲಭಿಸುತ್ತದೆ ಎಂಬ ಕಾರ್ಯದಲ್ಲಿ ಮುಸ್ಲಿಮರೆಡೆಯಲ್ಲಿ ಅಭಿಪ್ರಾಯ ವ್ಯತ್ಯಾಸವಿಲ್ಲ ಇದಾಗಿದೆ ಸತ್ಯ ಶರಹ್ ಮುಸ್ಲಿಂ(೧-೮೯).