ಖುತುಬಾದ ಬಾಷೆ

qthbaಮಾತೃ ಬಾಷೆಯಲ್ಲಿ ಖುತುಬಾ ನಿರ್ವಹಿಸಬೇಕೆಂಬುದಕ್ಕೆ ಯಾವುದೇ ಅಧಿಕೃತ ಪುರಾವೆಗಳು ಅಲಭ್ಯ. ಪವಿತ್ರ ಕುರ್‌ಆನ್‌ನಲ್ಲಾಗಲೀ, ಹದೀಸ್‌ಗಳಲ್ಲಾಗಲಿ, ಸಚ್ಚಾರಿತ್ರ್ಯವಂತರಾದ ಸ್ವಹಾಬಿಗಳ ನಡೆವಳಿಕೆಯಲ್ಲಾಗಲೀ, ಪೂರ್ವಿಕರ ಗ್ರಂಥಗಳಲ್ಲಾಗಲಿ ಯಾವುದೇ ಆಧಾರಗಳನ್ನು ಈ ವಿಷಯಕ್ಕೆ ಸಂಬಂಧಿಸಿದಂತೆ ನೀಡಲು ನೂತನವಾದಿಗಳಿಗೆ ಅಸಾದ್ಯದ ಮಾತೇ ಸರಿ. ಖುತುಬಾ ಸ್ಥಳೀಯ ಬಾಷೆಯಲ್ಲಾಗಬೇಕೆಂಬುದು ನೂತನವಾದವಾಗಿದೆ. ಪರಂಪರಾಗತವಾಗಿ ಅರಬೀ ಭಾಷೆಯಲ್ಲೇ ನಿರ್ವಹಿಸಿಕೊಂಡು ಬಂದ ಖುತುಬವನ್ನು ದಿಡೀರ್ ಬದಲಾಯಿಸಬೇಕೆಂಬುದನ್ನು ಇಸ್ಲಾಮಿನ ಬಗ್ಗೆ ಗೊತ್ತಿದ್ದವರ‍್ಯಾರೂ ಒಪ್ಪಲು ಸಾದ್ಯವಿಲ್ಲ. ಕೆಲವೊಂದು ನೂತನ ಪಂಗಡಗಳು ಜನಸಾಮಾನ್ಯರನ್ನು ನಂಬಿಸುತ್ತಿರುವಂತೆ, ಇದು ಕೇರಳದ ಉಲಮಾಗಳ ಸಂಘಟನೆಯಾದ ’ಸಮಸ್ತ’ದ ಮಾತ್ರ ನಿಲುವು ಅಲ್ಲ. ಕೇರಳೇತರ ಉಲಮಾಗಳೂ ಈ ವಿಷಯದಲ್ಲಿ ಕೇರಳದ ’ಸಮಸ್ತ’ದೊಂದಿಗೆ ಕೈ ಜೋಡಿಸಿದ್ದಾರೆ. ಅವರೂ ಈ ಭಾಷಾಂತರ ವಾದವನ್ನು ಖಡಾ ಖಂಡಿತವಾಗಿ ವಿರೋಧಿಸಿದ್ದಾರೆ ಹಾಗೂ ಫತ್ವ ಹೊರಡಿಸಿದ್ದಾರೆ. ತಮಿಳುನಾಡಿನ ಉಲಮಾಗಳು ನೀಡಿದ ಒಂದು ಫತ್ವಾ ಹೀಗಿದೆ. ಅಲ್ಲಾಹನ ಪ್ರವಾದಿ(ಸ)ಗಳು, ಸತ್ಯವಂತರಾದ ’ಸ್ವಾಹಾಬಿಗಳು’, ತಾಬಿಉಗಳು, ತಾಬಿಹುತ್ತಾಉಗಳು, ಸಂಶೋಧಕರಾದ ಉಲಮಾಗಳು ಎಲ್ಲರೂ ಖುತುಬಾವನ್ನು ಅರಬಿಯಲ್ಲೇ ನಿರ್ವಹಿಸಿದ್ದಾರೆ. ಅಂದು ಪ್ರವಾದಿ(ಸ)ರ ಅನುಚರರು ಹಾಗೂ ತಾಬಿಉಗಳ ಕಾಲಘಟ್ಟದಲ್ಲಿ ಅರಬಿಯೇತರ ರಾಷ್ಟ್ರಗಳಲ್ಲೂ ಇಸ್ಲಾಂ ಪ್ರಚಾರಗೊಳ್ಳುತ್ತಿತ್ತು. ಅನ್ಯ ಭಾಷಿಕರಿಗೆ ಇಸ್ಲಾಮನ್ನು ಪರಿಚಯಪಡಿಸಬೇಕಾದ ಅನಿವಾರ್ಯ ಸಂದರ್ಭವಾಗಿತ್ತದು. ಹಾಗಿದ್ದರೂ ಕೂಡ ಎಲ್ಲೂ ಅರಬಿಯಲ್ಲದ ಭಾಷೆಯಲ್ಲಿ ಖುತುಬಾ ನಿರ್ವಹಿಸಿಲ್ಲ. ಅರಬಿಯೊಂದಿಗೆ ಅದರ ತರ್ಜುಮೆ ಮಾಡುವ ಸಂಪ್ರದಾಯವೂ ಇರಲಿಲ್ಲ. ಅರಬಿಯಲ್ಲಿ ಖುತುಬ ನಿರ್ವಹಿಸಿದರೆ ಮಾತ್ರ ಅದು ಪ್ರವಾದಿ(ಸ)ರ ಮತ್ತು ಸ್ವಹಾಬತ್ ಕೀರಾಮ್‌ಗಳ ಅನುಕರಣೆಯಾಗುತ್ತದೆ. ಅದೇ ಕಾರಣದಿಂದಾಗಿದೆ ಶಾಪೀ, ಮಾಲಿಕೀ, ಹಂಬಲೀ ಮದ್‌ಹಬ್‌ಗಳಲ್ಲಿ ಖುತುಬಾಗೆ ಅರಬಿ ಶರ್ತವಾಗಿದೆ ಎಂದು ಗ್ರಂಥಗಳಲ್ಲಿ ಉಲ್ಲೇಖಿಸಿದ್ದು. ಕೆಲವರಿಗೆ ಅರ್ಥವಾಗದಿದ್ದರೂ ಅನ್ಯ ಭಾಷೆ ಇಲ್ಲಿ ಬಳಸುವಂತಿಲ್ಲ. ಪತ್ಹುಲ್ ಮುಹೀನ್ ಎಂಬ ಗ್ರಂಥದಲ್ಲಿ ಈ ಬಗ್ಗೆ ಬರೆಯಲಾಗಿದೆ; ಪೂರ್ವಿಕರೊಂದಿಗಿನ ಅನುಕರಣೆ ಲಭ್ಯವಾಗಬೇಕಿದ್ದರೆ ಖುತುಬಾ ಅರಬಿಯಲ್ಲೇ ಆಗಬೇಕು. ಅರಬೀ ಖುತುಬವು ಜನರಿಗೆ ಅರ್ಥವಾಗದಿದ್ದರೂ ಅದೊಂದು ಉಪದೇಶವೆಂಬ ಗ್ರಹಿಕೆ ಉಂಟಾದರೆ ಸಾಕು. ಕಾಳೀ ಹುಸೈನ್ ಇದು ಹೇಳಿದ್ದಾರೆ. ಇಮಾಂ ನವವೀ(ರ) ರೌಳಾದಲ್ಲಿ ಹೀಗೆ ಬರೆದಿದ್ದಾರೆ. ಜನರು ಖುತುಬಾ ಆಲಿಸಿದರು. ಅದರೆ ಅದೇನೆಂದು ಅವರಿಗೆ ಅರ್ಥವಾಗಲಿಲ್ಲ. ಹಾಗಿದ್ದರೂ ಖುತುಬಾ ಸಿಂಧುವಾಗುತ್ತದೆ. ಶಾಫಿಗಳಿಗೆ ನಮಾಜ್, ಖುತುಬಾ ಹಾಗೂ ಇವುಗಳ ಕಡ್ಡಾಯ ಘಟಕಗಳೆಡೆಯಲ್ಲಿ ಮುವಾಲಾತ್ (ನಿರಂತರತೆ) ಕಡ್ಡಾಯವಾಗಿದೆ. ಈ ನಿರಂತರತೆ ನಷ್ಟ ಹೊಂದಿದರೆ ನಮಾಜ್ ಅಸಿಂಧುವಾಗುತ್ತದೆ. ಅರಬಿಯ ನಂತರ ಅರಬಿಯೇತರ ಭಾಷೆ ಬಳಸಿದರೆ ಈ ನಿರಂತರತೆಗೆ ಅಡ್ಡಿಯಾಗುತ್ತದೆ.

Related Posts

Leave A Comment

Voting Poll

Get Newsletter