ಉರ್ಕು,  ಮಂತ್ರ, ಪಿಂಗಾನೀ ಬರಹ

ಉರ್ಕು :(ತಾಯಿತ)ವು ನೂತನವಾದಿಗಳು ಸುನ್ನಿಗಳನ್ನು ಅಪಹಾಸ್ಯಗೊಳಿಸುವ ಒಂದು ಪ್ರಧಾನ ಆಯುಧವಾಗಿದೆ. ಈ ಉರ್ಕು ಬಹು ಸ್ವಹಾಬತೇ ಕಿರಾಂ ಮತ್ತು ಸಲಫಿ ಸ್ವಾಲಿಹುಗಳ ಜೀವನದಲ್ಲಿ ನಮಗೆ ಇದನ್ನು ಕಾಣಬಹುದಾಗಿದೆ. ಪ್ರವಾದಿ(ಸ.ಅ) ಹೇಳುತ್ತಾರೆ. ನಿಮ್ಮಲ್ಲಿ ಯಾರಾದರೂ ನಿದ್ದೆಯಿಂದ ಬೆಚ್ಚಿ ಎದ್ದರೆ ಅವನು ಅಊಝುಬಿ ಕಲಮಾತಿಲ್ಲಾಹಿ ತ್ವಾಮ್ಮಾತಿಮಿನ್ ಶರ್ರಿಮಾ ಕಲಕ್ ಎಂದು ಹೇಳಲಿ ಅವನನ್ನು ಯಾವುದೂ ತೊಂದರೆಗೊಳಿಸದು. ಇಬ್‌ನ್ ಉಮರ್(ರ.ಅ) ತನ್ನ ಪ್ರಾಯದ ಮಕ್ಕಳಿಗೆ ಇದನ್ನು ಕಲಿಸಿಕೊಡುತ್ತಿದ್ದು ಎಳೆಯ ಮಕ್ಕಳಿಗೆ ಚರ್ಮದಲ್ಲಿ ಬರೆದು ಕುತ್ತಿಗೆಗೆ ತೂಗು ಹಾಕುತ್ತಿದ್ದರು. (ಅಬೂದಾವೂದು ತುರ್ಮೂದಿ). ಇಮಾಂ ಮಾಲಿಕ್(ರ) ಹೇಳುತ್ತಾರೆ. ಅಲ್ಲಾಹನ ನಾಮಗಳು ಬರೆದು ರೋಗಿಗಳ ಕತ್ತಿನಲ್ಲಿ ತೂಗು ಹಾಕುವುದು ವಿರೋಧವಿಲ್ಲ(ರೂಹುಲ್ ಮಾನಿ) ೯-೯೧) ಉರ್ಕು ಕಟ್ಟುವುದು ಅನುವದನೀಯವೆಂದ ಇಮಾಂ ನವವೀ(ರ) ತನ್ನ ಶರಉಲ್ ಮುಅಝ್ಝಬ್(೯-೬೬) ರಲ್ಲಿ ಹೇಳಿದ್ದಾರೆ.  ಮಂತ್ರ : ಪ್ರಮಾಣಬದ್ದವಾಗಿ ಮುಸ್ಲಿಮರು ಆಚರಿಸಿ ಬರುತ್ತಿರುವ ಒಂದಾಗಿದೆ ಮಂತ್ರ ಪ್ರವಾದಿ(ಸ.ಅ) ಪ್ರವರ್ತಿಸಿ ಕಾಣಿಸಿಕೊಟ್ಟದ್ದೂ, ನಮ್ಮಲ್ಲಿ ಮಾಡಲು ಕಲ್ಪಿಸಿದ ಒಂದು ಕಾರ್ಯವೂ ಕೂಡ ಆಗಿದೆ ಈ ಮಂತ್ರ. ನೆಬಿ(ಸ.ಅ) ಹೇಳೂತ್ತಾರೆ. ಶಿರ್ಕಿಲ್ಲದ ಮಂತ್ರ ವಿರೋಧವಿಲ್ಲ (ಮುಸ್ಲಿಂ). ಅಬೂಸಈದುಲ್ ಖುದ್‌ರಿ(ರ.ಅ) ವಿಷ ಮುಟ್ಟಿದ ವ್ಯಕ್ತಿಯೊಬ್ಬರನ್ನು ಮಂತ್ರಿಸಿದ್ದೂ ಮಂತ್ರಕ್ಕೆ ತಕ್ಕ ಫಲ ಅಪೇಕ್ಷಿಸಿದ್ದೂ ಬುಖಾರಿ ಹಾಗೂ ಎಲ್ಲಾ ಹದೀಸ್ ಗ್ರಂಥಗಳಲ್ಲೂ ಕಾಣಬಹುದು. ವಿಶುದ್ದ ಖರ್‌ಆನ್ ಆತ್ಮೀಯ ರೋಗಗಳಿಗೆಂಬಂತೆ ಶಾರೀರಿಕ ರೋಗಗಳಿಗೂ ಔಷಧವಾಗಿದೆ ಎಂದು ಇಮಾಂ  ರಾಝೀ(ರ) ವ್ಯಕ್ತಗೊಳಿಸಿದ್ದಾರೆ.(ರಾಸಿ ೨೧-೩೪) ಆಧುನಿಕ ಸೂಫಿ ಪಂಡಿತರಲ್ಲಿ ಪ್ರಮುಖವಾದ ಶೇಖ್ ಮುಹಮ್ಮದ್ ಶ್ವಾಲಿಹ ಆಲ್ ಉಸೈಮೀನ್ ಹೇಳೂತ್ತಾರೆ. ನಬಿ(ಸ.ಅ) ಮತ್ತು ಸಹಾಬಿಗಳು ಮಂತ್ರಿಸುವವರಾಗಿದ್ದರು(ಫತಾವಾ ಉಸೈಮೀನ್ ೯-೯೧). ಪಿಂಗಾನೀ ಬರಹ ಮತ್ತು ಕುಡಿಯುವಿಕೆ ನಿಷ್ಕಳಂಕರಾದ ಸ್ವಲಪು ಸ್ವಾಲಿಹುಗಳನ್ನು ಆಧಾರವಾಗಿಸಿಕೊಂಡು ರೂಢಿಯಾಗಿ ಬಂದ ಮತ್ತೊಂದು ಕಾರ್ಯವಾಗಿದೆ. ಇದು ಅವರೆಡೆಯಲ್ಲಿ ಪ್ರಚಾರವಾಗಿ ನಡೆದು ಬಂದ ಚಿಕಿತ್ಸಾ ರೀತಿಯಾಗಿದೆ. ಪ್ರಸ್ತುತ ಪದ್ದತಿ ಇಸ್ರಾಅ ಸೂರತ್ತಿನ ೮೨ನೇ ವಾಕ್ಯವನ್ನು ಶುಚಿಯಿರುವ ಪಾತ್ರದಲ್ಲಿ ಬರೆದು ಶುದ್ದ ಜಲದಿಂದ ಮೂರು ಬಾರಿ ತೊಳೆದು ಮೂರು ಸಲ ಕುಡಿಯಬೇಕು(ಖುರ್ತುಬಿ ೩೧೭). ಇಮಾಂ ಅಹ್ಮದುಬುನು ಹಂಬಲ್(ರ) ಪ್ರಸವವೇದನೆ ಅನುಭವಿಸುವ ಸ್ತ್ರೀಗಳಿಗೆ ಪಿಂಗಾಣಿ ಬರೆದು ಕೊಡುತ್ತಿದ್ದರೆಂದು ಅದು ಕುಡಿದರೆ ಪ್ರಸವದ ತೊಂದರೆ ಅನುಭವಿಸಿರಲಿಲ್ಲವೆಂದೂ ಇಬ್‌ನುಲ್ ಖಯ್ಯಿಂ ವ್ಯಕ್ತ ಮಾಡಿದ್ದಾರೆ. (ಸಾದುಲ್ ಮಆದ್) ಆಧುನಿಕ ಪಂಡಿತನೂ ಸೌದಿ ಮುಫ್ತಿಯೂ ಆದ ಇಬ್‌ನು ಬಾಸ್ ಕೂಡಾ ಈ ಕಾರ್ಯವನ್ನು ಅಂಗೀಕರಿಸುತ್ತಾರೆ. ಅವರು ಹೇಳುತ್ತಾರೆ ಆಯತುಗಳು, ಶರಈಯಾದ ದುವಾಗಳು, ಕುಂಕುಮ ಉಪಯೋಗಿಸಿ ಶುಚಿಯಿರುವ ಪಾತ್ರದಲ್ಲಿ ಬರೆದು ಅದು ತೊಳೆದು ರೋಗಿಗೆ ಕುಡಿಯಲು ನೀಡುವುದು ವಿರೋಧವಿಲ್ಲ. ಸಮುದಾಯದ ಪೂರ್ವಿಕರಲ್ಲಿ ಅನೇಕ ಮಂದಿ ಈ ರೀತಿ ಮಾಡಿದ್ದಾರೆ. ಇದು ಮಾಡುವ ವ್ಯಕ್ತಿ ಖೈರ್ ಮತ್ತು ಸ್ವಲಾಹ್‌ನ ಕಾರ್ಯದಲ್ಲಿ ಪ್ರಸಿದ್ದಿಯಾದ ವ್ಯಕ್ತಿಯಾಗಿರಬೇಕು ಈ ಕಾರ್ಯಗಳು ಇಬ್‌ನುಲ್ ಖಯ್ಯಿಂ ವ್ಯಕ್ತ ಮಾಡಿದ್ದಾರೆ.(ಫತಾವಾ ಇಬ್‌ನುಬಾಝ್) ಈ ಯದಾರ್ಥ್ಯವನ್ನು ಮುಜಾಹಿದ್ ಪಂಡಿತ ಸಂಘಟನೆಯ ಪ್ರಮುಖ ವ್ಯಕ್ತಿ ತೆರೆದ ಪುಟಗಳಿಂದ ಬರೆದಿದ್ದಾರೆ. ರೋಗ, ವಿಷಬಾಧೆ, ಮಾಟಬಾಧೆ, ಮುಂತಾದವುಗಳ ಶಮನಕ್ಕಾಗಿ ಗಲ್ಫ್ ಸಲಫಿಗಳು ಖೂರ್‌ಆನ್ ಮಂತ್ರಿಸಿ ಕೊಡುತ್ತಿದ್ದಾರೆ. ಸಲಫಿಗಳು ಈ ಕಾಲ ನೇತಾರನಾದ ಶೈಖ್ ಅಬ್ದುಲ್ ಅಸೀಸ್ ಬಿನ್ ಬಾಸು ಕೂಡಾ ನೀರು ಮಂತ್ರಿಸಿ ಊದಿ ಕೊಡುತ್ತಿದ್ದರು. ಮಂತ್ರಿಸಿ ಊದಿಕೊಟ್ಟು ಹಣ ಪಡೆಯುವ ಸಲಫಿ ಪಂಡಿತರನ್ನು ಕೂಡ ಗಲ್ಫಿನಲ್ಲಿ ಕಾಣಬಹುದು. ಚಿಕಿತ್ಸೆ ಎಂಬ ರೀತಿಯಲ್ಲಿ ಹಣ ಪಡೆಯುವುದಕ್ಕೆ ವಿರೋಧವಿಲ್ಲ ಎಂಬುವುದಾಗಿ ಅವರ ಅಭಿಮತ. (ಗಲ್ಫ್ ಸಲಫಿಸವುಂ ಮುಜಾಹಿದ್ ಪ್ರಸ್ತಾನವುಂ ಪುಟ ೬೬) ಮುಂದುವರೆದು ಅವರು ಇದಕ್ಕೆ ಆಧಾರವಾಗಿ ಹಲವು ಪಂಡಿತರ ಫತ್‌ವಾಗಳನ್ನು ಪರಿಚಯಿಸಿದ್ದಾರೆ. ೧)    ಸ್ವದಿ ಫತ್ವಾ ಬೋರ್ಡ್ ವಿಧಿ ಪ್ರ: ಖುರ್‌ಆನ್ ಓದಿ ರೋಗಿಯನ್ನು ಮಂತ್ರಿಸಿ ಊದಿ ಪ್ರತಿಫಲ ಪಡೆಯಬಹುದೇ? ಪ್ರತಿಫಲ ಆಗ್ರಹಿಸದೆ ಮಂತ್ರಿಸಿ ಊದಬಹುದೆ? ಉ: ಖುರ್‌ಆನ್ ಓದಿ ರೋಗಿಯನ್ನು ಮಂತ್ರಿಸಬಹುದೆಂದು ಮಾತ್ರವಲ್ಲ, ಅದು ಪುಣ್ಯ ಕರ್ಮ ಕೂಡ ಆಗಿದೆ. ತನ್ನ ಸಹೋದರನಿಗೆ ನೆರವಾಗಲು ಸಾಧ್ಯವಿರುವವನು ಅದು ಮಾಡಲಿ(ಮುಸ್ಲಿಂ) ನೆಬಿ (ಸ.ಅ) ಪ್ರಸ್ತಾಪಿಸದ್ದಾರೆ. ಕೂಲಿ ಪಡೆಯದೆ ಮಂತ್ರಿಸುವುದು ಉತ್ತಮ. ಕೂಲಿ ಕೇಳಿ ಪಡೆಯುವುದರಲ್ಲೂ ವಿರೋಧವಿಲ್ಲ. ನೆಬಿ(ಸ.ಅ) ಅಂಗೀಕರಿಸಿದ ಕಾರ್ಯವಾಗಿದೆ. (ಖುರ್‌ಆನ್ ಸುನ್ನತ್‌ಗಳ ಕೊಂಡುಲ್ಲ ಚಿಗಿಲ್ಸ ಎಂಬ ಗ್ರಂಥ ೨೧. ೨)    ಶೈಖ್ ಸ್ವಾಲಿಹ್ ಫೌಸಾನ್‌ರ ಪತ್ರ ಪ್ರ: ಸದ್‌ವೃತ್ತನಾದ ಒಬ್ಬ ಮನುಷ್ಯನಿಂದ ಕಾಗದದಲ್ಲಿ ಖುರ್‌ಆನ್‌ನ ಆಯತುಗಳನ್ನು ಬರೆದು ಕಾಗದವನ್ನು ನೀರಿನಲ್ಲಿ ಕರಗಿದ ಬಳಿಕ ಅದನ್ನು ರೋಗಿ ಕುಡಿಯುವುದು, ಉಳಿದ ನೀರಿನಲ್ಲಿ ರೋಗಿ ಮೀಯುವುದು ಇದರ ಧಾರ್ಮಿಕ ವಿಧಿ ಏನು? ಉ: ಒಬ್ಬ ವ್ಯಕ್ತಿ ತನ್ನ ಸಹೋದರನಿಗೆ ರೋಗವಿರುವ ಭಾಗದಲ್ಲಿ ಖುರ್‌ಆನ್ ಓದಿ ಬದಿಕೊಡುವುದಾಗಿದೆ ಉತ್ತಮ. ನೀರಿನಲ್ಲಿ ಓದಿ ಊದಿ ಕುಡಿದರೂ ಸಾಕು. ೩)    ಶೈಖ್ ಮುಹಮ್ಮದ್ ಅಲ್‌ಹಂದು ನಜ್‌ದಿಯ ಫತ್ವಾ ಪ್ರ : ಖುರ್‌ಆನ್ ಓದಿ ಮಂತ್ರಿಸಿ ಊದುವ ಚಿಕಿತ್ಸಕರು, ಮಂತ್ರಿಸಿದ ಎಣ್ಣೆಯ ಬಾಟ್ಲಿಗಳು ನೀರಿನ ಬಾಟ್ಲಿಗಳು ಮಾರಾಟ ನಡೆಸುವ ವಿಧಿ ಏನು? ಉ : ಚೇಳು ವಿಷ ಬಾಧಿಸಿದವರನ್ನು ಮಂತ್ರಿಸಿ ಊದಿದ ಹದೀಸ್ ನೀರಿನಲ್ಲಿ ಮಂತ್ರಿಸಿ ಉದುವುದಕ್ಕೂ ಪ್ರತಿಫಲ ಪಡೆಯುವುದಕ್ಕೂ  ಆಧಾರವಾಗಿದೆ. ನನಗೂ ಒಂದು ಭಾಗ ನೀಡಿರಿ ಎಂಬ ಪ್ರವಾದಿ ವಚನ ಪ್ರತಿಫಲ ಅಪೇಕ್ಷೆಗೆ ಯಾವ ಅಡ್ಡಿಯೂ ಇಲ್ಲವೆಂದಾಗಿದೆ ಮನವರಿಕೆ ಮಾಡುವುದು (ಅಲ್‌ಫುರ್‌ಖಾನ್ ಸಂಚಿಕೆ ೧೦೮ ಪುಟ) (ಗಲ್ಫ್ ಸಲಫೀಸವುಂ, ಮುಜಾಹಿದ್ ಪ್ರಸ್ತಾನವುಂ ೬೬, ೬೭)

Related Posts

Leave A Comment

Voting Poll

Get Newsletter