ಮುತ್ತಲಾಖ್: ಶರೀಅತ್ ಏನು ಹೇಳುತ್ತದೆ
ಮುತ್ತಲಾಖ್: ಶರೀಅತ್ ಏನು ಹೇಳುತ್ತದೆ
 ವಿವಾಹ ಮತ್ತು ಕುಟುಂಬ ಜೀವನವನ್ನು ಎಲ್ಲಾ ಧರ್ಮವೂ ಪವಿತ್ರವಾಗಿ ಪರಿಗಣಿಸಿದೆ. ಕೌಟುಂಬಿಕ ಜೀವನದ ವಿಷಯದಲ್ಲಿರುವ ಇಸ್ಲಾಮಿನ ವೀಕ್ಷಣೆ ಬಹಳ ವಿಶಾಲವಾಗಿದೆ. ವಿವಾಹವೆಂಬುವುದು ದೈವ ನಿರ್ಮಿತ ವ್ಯವಸ್ಥೆಯಾದರೂ ಅದು ಒಂದು ಒಡಂಬಡಿಯಾಗಿದೆ. ಅದನ್ನು ಖುರ್ ಆನ್ "ಘಣ ಒಪ್ಪಂದ" ಎಂದು ವಿಶೇಷಿ ಸುತ್ತದೆ; ಒಬ್ಬ ವ್ಯಕ್ತಿಯ ಕೊನೆಯವರೆಗಿರುವ ಜೀವನದ ಪ್ರಾರಂಭವೇ "ನಿಕಾಹ್".
ಸ್ತ್ರೀ-ಪುರುಷ ಪರಸ್ಪರ ಸ್ನೇಹದಿಂದ ಸೌಹಾರ್ದದಿಂದ ಸಹಕಾರದಿಂದ‌ ಬಾಳುವಾಗ  ಒಂದು ಆರೋಗ್ಯ ವಿರುವ ಕುಟುಂಬ ನಿರ್ಮಿತ ವಾಗುವುದು ;ಕೆಲವೊಮ್ಮೆ ಸಂಗರ್ಷ ಸಂಭವಿಸಬಹುದು, ಕೂಡಲೇ ಬೇರ್ಪಟ್ಟು ಮುರಿಯುವುದಲ್ಲ ಪವಿತ್ರ ಬಂಧ.
ಸ್ವಾಭಾವಿಕವಾಗಿ ಕೌಟುಂಬಿಕ ಜೀವನದಲ್ಲಿ ಉಂಟಾಗುವಂತಹ ಅಸ್ವಸ್ಥತೆಗಳನ್ನು ಪರಿಹರಿಸಲು ಪ್ರಯತ್ನಿಸಬೇಕು, ಅದು ವಿಫಲವಾದಾಗ ಮಾತ್ರ ಕುಟುಂಬ ಬೇರ್ಪಡಬಹುದು. ಇಸ್ಲಾಂ ಶರೀಅತ್ ವೀಕ್ಷಣದಲ್ಲಿ ವಿಚ್ಛೇದನವೆಂಬುವುದು ವಾಜಿಬ್, ಹರಾಮ್ , ಕರಾಹತ್ , ಸುನ್ನತ್  ಇತರ ಹಲವಾರು ವಿಧಿ ಇರಬಹುದು ಆದರೂ ಇಸ್ಲಾಂ ಧರ್ಮ ವಿಚ್ಛೇದನವನ್ನು ನಿರುತ್ಸಾಹಿ ಸುತ್ತದೆ. ಪ್ರತಿ ವಿಚ್ಛೇದನದಲ್ಲಿ ಅಲ್ಲಾಹನ ಸಿಂಹಾಸನ ಅಲುಗಾಡುತ್ತದೆ  ಎಂದಾಗಿದೆ ಪ್ರವಾದಿ ಬೋಧನೆ. ಕೌಟುಂಬಿಕ ಜೀವನದಿಂದ ಮನಸ್ಸಿಗೆ ಶಾಂತಿ ಲಭ್ಯವಾಗುತ್ತದೆ. ವಿಶ್ವದ ಶಾಸ್ತ್ರಿಕ ಮಾನಸಿಕ ವ್ಯವಸ್ಥೆಗಳನ್ನು ರೂಪಿಸುವ ಧರ್ಮವಾಗಿದೆ ಇಸ್ಲಾಮ್ ಎಂದು ಎಲ್ಲರಿಗೂ ತಿಳಿದಿರಬಹುದು.
ಇಸ್ಲಾಂ ಸ್ತ್ರೀಯರಿಗೆ ಅನಾವಶ್ಯಕ ಆದೇಶಗಳನ್ನು ನೀಡುತ್ತಿದೆ ಎಂದು ಪ್ರಚ ರಿಸಲು ಅವರು ಶ್ರಮಪಡುತ್ತಿದ್ದಾರೆ; ಇಸ್ಲಾಮಿನಲ್ಲಿ ವಿಚ್ಛೇದನದ ಮುಂಚೆ ಅವನು ಒಪ್ಪಿಕೊಳ್ಳಬೇಕಾದ ಹಲವು ಶಿಸ್ತು ಮರ್ಯಾದೆ ಗಳಿವೆ. ಕುಟುಂಬದ ಉಸ್ತುವಾರಿ ಪೂರೈಸಲಿಕ್ಕಿರುವ ಅರ್ಹತೆ ಪುರುಷನಿಗಿದೆ, ಹಾಗೂ ಅಸ್ವಸ್ಥತೆಗಳು ಉಂಟಾಗುವಾಗ ಪರಿಹರಿಸಲಿಕ್ಕಿರುವ ಜವಾಬ್ದಾರಿ ಪುರುಷನಿಗಿದೆ.
ಇಂತಹ ಸ್ಥಿತಿಯಲ್ಲಿ ನಾವು  ಪಾಲಿಸಿಕೊಳ್ಳಬೇಕಾದ ಮೂಲ ಶಿಸ್ತುಗಳನ್ನು ಕುರ್ ಆನ್ ಆಜ್ಞಾಪಿಸುತ್ತದೆ. ಮಹಿಳೆಯರು ನಿಮಗೆ ಅಪಮರ್ಯಾದೆ ತೋರುತ್ತಾರೆ ಎಂದು ನೀವು ಭಯಪಡುತ್ತಿದ್ದರೆ ಅವರನ್ನು ನೀವು ಉಪದೇಶಿಸಿ, ಇನ್ನು ವಿಫಲವಾದರೆ ಮಲಗುವ ಕೋಣೆಗಳಲ್ಲಿ ಅವರಿಂದ ದೂರವಿರಿ ಎಂಬುವುದೇ ಖುರ್ ಆನಿನ ಕಲ್ಪನೆ.
ಹೌದು, ಇದೊಂದು ಸೈಕಾಲಜಿಗೆ ಸಮೀಪಿಸಬೇಕಾದ ಕಾರ್ಯವಾಗಿದೆ ಎಂದು ಆಧುನಿಕ  ಮನಶ್ಶಾಸ್ತ್ರಜ್ಞರು ಒಪ್ಪಿಕೊಂಡಿದ್ದಾರೆ - " ನಾನು ಹೀಗೆ ಬೇರ್ಪಡಲು ಕಾರಣ ನನ್ನ ತಪ್ಪಲ್ಲವೇ ಎಂದು ಮಹಿಳೆಯ ಮನಸ್ಸಿನಲ್ಲಿ ಚಿಂತೆ ಹುಟ್ಟಲು ಇದೊಂದು ಪ್ರೇರಣೆಯಾಗಿದೆ, ತನ್ನ ಗಂಡನಿಗೆ ತಾನು ಬೇಡವೇ ಎಂಬ ಚಿಂತೆ ಹುಟ್ಟಿ ಪುನ: ರಾಜಿಯಾಗಲು ಸಹ ಇದು ಕಾರಣವಾಗಬಹುದು.
ವಿಚ್ಛೇದನಕ್ಕೆ ಕಾಲಿಡುವ ಮೊದಲು ಅವರಲ್ಲಿರುವ ಅಸ್ವಸ್ಥತೆಗಳನ್ನು ಪರಿಹರಿಸಲು ಪ್ರಯತ್ನಿಸಬೇಕೆಂದು ಕುರ್ ಆನ್ ಕಲ್ಪಿಸುತ್ತದೆ ,ಅದೂ ಅಸಾಧ್ಯವಾಗಿ ಬೇರ್ಪಡೆಗೆ ಹತ್ತಿರವಿರುವಾಗ ಎರಡು ಪಕ್ಷದಿಂದ ಓರ್ವ ವ್ಯಕ್ತಿಯನ್ನು ಆರೈಸಿ ಪ್ರತಿನಿಧಿಯಾಗಿ ಮುಂದಿಸಬೇಕು; ಕೊನೆಯದಾಗಿ ಎರಡು ಪಕ್ಷವು ಒಂದಾಗಬೇಕು ಎಂಬ ನಿರ್ಧಾರ ಹೊರಬಂದರೆ ಅಲ್ಲಾಹನು ಅವರನ್ನು ಒಗ್ಗೂಡಿಸುತ್ತಾನೆ, ಅದು ಕೂಡ ವಿಫಲವಾದರೆ ಅವನಿಗೆ ವಿಚ್ಛೇದನ ಮಾಡಬಹುದು - ಅದು ಶುದ್ಧೀಕರಣದ ಸಮಯದಲ್ಲಿ ಮಾತ್ರ , ಮುಟ್ಟಿನ ಸಮಯದಲ್ಲಿ ವಿಚ್ಛೇದನ ಸರಿಯಾಗುತ್ತದೆಯಾದರೂ ನಿಷೇಧಿಸಲ್ಪಟ್ಟಿದೆ.
ಹೀಗೆ ವಿಚ್ಛೇದನದ ನಂತರ ಸಹ ,ಹೆಂಡತಿ  ಇದ್ದ ಅವಧಿಯಲ್ಲಿ ಗಂಡನ ಸಂರಕ್ಷಣದಲ್ಲಿಯಾಗಿರಬೇಕು ಮುಟ್ಟಿನ ಮಹಿಳೆಯಾದರೆ ಮೂರು ಶುದ್ದಿ ಕಾಲವಾಗಿದೆ ಅವಳ ಇದ್ದಾ; ಇದರೆಡೆಯಲ್ಲಿ ಅವರಿಬ್ಬರ ಮಧ್ಯೆ ಶಾಂತಿ ಸಮಾಧಾನ ನಿರ್ಮಿತವಾದರೆ ಗಂಡನಿಗೆ ಹೆಂಡತಿ ಯನ್ನು ಇದ್ದ ನಂತರ ಪುನಃ ನಿಕಾಹ್ ಮಾಡಬಹುದು.
ಈತರ ಕ್ರಮಕ್ರಮವಾಗಿಯಾಗಿದೆ ವಿಚ್ಛೇದನ ನಡೆಸುವುದು; ಮೂರನೇ ವಿಚ್ಛೇದನ ಪಡೆದ ನಂತರ ಪುನಃ ವಿವಾಹಕ್ಕೆ ಅನುಮತಿ ಇಲ್ಲ, ಅವಳನ್ನು ಬೇರೆ ಪುರುಷ ಮದುವೆ ಮಾಡಿ ಶಾರೀರಿಕ ಬಂದ ರೂಪಗೊಂಡ ನಂತರ ವಿಚ್ಛೇದನ ಸಹ ಪಡೆದರೆ ಮಾತ್ರ ಮೊದಲನೆಯ ಗಂಡನಿಗೆ ಪುನಃ ನಿಕಾಹ್ ಹೇಳಲು ಅನುಮತಿ. ಈ ವಿಷಯದಲ್ಲಿ ಖುರ್ ಆನ್ ಸ್ಪಷ್ಟವಾಗಿ ಹೇಳಿದೆ; ಹೀಗೆ ಮೂರು ತಲಾಖ್ ನಡೆದ ನಂತರವಿರುವ ಕಾಲ ಕಷ್ಟದಲ್ಲಿಯಾಗಬಹುದೇ ಎಂಬ ಭಯ ಒಬ್ಬ ವ್ಯಕ್ತಿಗೆ ಬರಬಹುದೆಂಬ ಮನವರಿಕೆಯಿಂದ ಇಸ್ಲಾಂ ಈತರ ತಂತ್ರ ಪ್ರಕಾರವಾಗಿರುವ ಸಮೀಪನ ಸ್ವೀಕರಿಸಿರುವುದು.
ಮೂರು ತಲಾಖ್ ಆಗಿದೆ ಇಸ್ಲಾಂ ಅನುಮತಿಸಿರುವುದು, ಹೀಗೆ ಮೂರು ತಲಾಖನ್ನು ಒಗ್ಗೂಡಿಸುವ ಹೆಸರಾಗಿದೆ ಮುತ್ತಲಾಖ್. ಇದು ಒಂದೇ ಕುಳಿತದಲ್ಲಿ ಹೇಳಬಾರದು, ಕೆಲವರ ಪ್ರತೀಕಾರ ನೋಡುವಾಗ ಇಸ್ಲಾಂ ವಿಚ್ಛೇದನವನ್ನು ಆಜ್ಞಾಪಿಸಿದೆ ಎಂದು ತೋರುತ್ತದೆ, ಅದು ಅವರ ಆಜ್ಞೆತೆಯಾಗಿದೆ; ಒಂದೇ ಕುಳಿತದಲ್ಲಿ ಮೂರು ತಲಾಖ್ ಹೇಳುವವರನ್ನು ಪ್ರವಾದಿಯವರು ಅಧಿ ಶಕ್ತವಾಗಿ ತಿರಸ್ಕರಿಸಿದ್ದಾರೆ.
ಇಮಾಮ್ ನಸಾಯೀ (ರ) ರವರು ಉಲ್ಲೇಖಿಸಿದ ಒಂದು ಹದೀಸಿನಲ್ಲಿ ಕಾಣಬಹುದು: "ಹೆಂಡತಿಯನ್ನು ಮೂರು ತಲಾಖ್ ಹೇಳಿದ ಒಬ್ಬ ವ್ಯಕ್ತಿಯ ಕುರಿತು ನಾವು ಪ್ರವಾದಿ ಯಲ್ಲಿ ಹೇಳಿದೆವು ತಕ್ಷಣ ಅಲ್ಲಿಂದ ಕೋಪಗೊಂಡು "ನಾನು ನಿಮ್ಮ ನಡುವೆ ಇರುವಾಗ ನೀವು ಅಲ್ಲಾಹನ ಗ್ರಂಥದೊಂದಿಗೆ ಆಡುತ್ತಿದ್ದೀರಾ" ಎಂದು ಪ್ರಶ್ನಿಸಿದರು ,  ಕೂಡಲೇ ಒಬ್ಬ ಶಿಷ್ಯ ನಾನು ಅವನನ್ನು ಕೊಲ್ಲಲೇ? ಎಂದು ಸಹಾ ಕೇಳಿಹೋದ. ಮೊತ್ತದಲ್ಲಿ ಅನುಮತಿ ಇದ್ದರೂ ಕೂಡ ಅದರ ಗೌರವ ಎಷ್ಟೆಂದು ಈ ಹದೀಸ್ ಮೂಲಕ ತಿಳಿಯಬಹುದು
ವಿಚ್ಛೇದನದ ಸಮಯದಲ್ಲಿ ಒಂದು ಅಥವಾ ಎರಡು ಅಥವಾ ಮೂರು ಎಂದು ಅಂದುಕೊಂಡಷ್ಟು ಮಾನ್ಯವಾಗಿರುತ್ತದೆ, ನಿರ್ದಿಷ್ಟ ಸಂಖ್ಯೆ ಉದ್ದೇಶಿಸದೆ ವಿಚ್ಛೇದನ ಪಠ್ಯವನ್ನು ಹೇಳಿದರೆ ಕೇವಲ ಒಂದೇ ತ್ವಲಾಖ್ ಸಂಭವಿಸುತ್ತದೆ. ಒಂದೇ ಕುಳಿತದಲ್ಲಿ ಮೂರು ತಲಾಖ್ ಪಠಿಸುವುದನ್ನು ಪ್ರತ್ಯೇಕ ನಿರುತ್ಸಾಹಗೊಳಿಸಬೇಕು. ರುಕಾನಾ ಇಬ್ನ್ ಅಬ್ದಿಯ್ಯಝೀದ್ (ರ) ತನ್ನ ಹೆಂಡತಿ ಸುಹೈಮತನ್ನು "ಅಲ್ಬತ್ತ" ಎಂಬ ಪದ ಉಪಯೋಗಿಸಿ ತಲಾಖ್ ಹೇಳಿದರು. ಅದಲ್ಲದೆ ಪ್ರವಾದಿ(ಸ) ರನ್ನು ತಿಳಿಸಿ, 'ನಾನು ಅದು ಮೂಲಕ ಒಂದೇ ತಲಾಖನ್ನು ಉದ್ದೇಶಿಸಿರುವುದು ಎಂದು ಹೇಳಿದನು; 'ನೀನು ಒಂದೇ ತಲಾಖ್ ಖಚಿತಪಡಿಸಿದ್ದೀಯವೆಂದು ಅಲ್ಲಾಹನಿಗೆ ಸಾಕ್ಷಿ ಹೇಳಲು ತಯಾರಾ?' ಎಂದು ಪ್ರವಾದಿ ಕೇಳಿದರು. ಹೌದು, ನಾನು ತಯ್ಯಾರೆಂದು ಅವರು ಉತ್ತರಿಸಿದರು. ಆದ್ದರಿಂದ ಪ್ರವಾದಿ ಅವಳನ್ನು ಅವನ ಬಳಿಗೆ ಹಿಂದಿರುಗಿಸಿದರು.
ಇಮಾಮ್ ನವವೀ (ರ) ರವರು  ಮೇಲೆ ಸೂಚಿಸಿದ ಹದೀಸ್ ಅನ್ನು ವಿಷದೀಕರಿಸಿ ಶರಹ್ ಮುಸ್ಲಿಂನಲ್ಲಿ ಹೀಗೆ ಉಲ್ಲೇಖಿಸುತ್ತಾರೆ ಅಲ್ಬತ್ತ ಎಂಬ ಪದವನ್ನು ಒಂದಕ್ಕೂ, ಮೂರಕ್ಕೂ ಉಪಯೋಗಿಸಬಹುದು. ಅದಲ್ಲದೆ ಮೂರು ಸಹ ಉದ್ದೇಶಿಸಿ ಪಠಿಸಿದರೆ ಮೂರು ಕೂಡ ಸರಿಯಾಗುತ್ತದೆ ಎಂದು ಹೇಳಿದ್ದಾರೆ. ಒಂದೇ ಕುಳಿತದಲ್ಲಿ ಮೂರು ಉದ್ದೇಶಿಸಿದ್ದರೂ ಒಂದೇ ಸರಿಯಾಗುತ್ತಿದ್ದರೆ ರುಕ್ಕಾನಾ (ರ)  ರಿಂದ ಒಂದೆಂದು ಪ್ರತಿಜ್ಞೆ ಮಾಡುವ ಅಗತ್ಯವಿಲ್ಲದಿತ್ತು. ಈ ವಿಷಯದಲ್ಲಿ ಉಮರ್ (ರ)ನ ಕಾಲದಲ್ಲಿ ಹಲವಾರು ಒಡನಾಟದ ಸಮನ್ವಯವು ಇತ್ತು. ಹಾಗೂ ಮೂರು ತಲಾಖುಗಳು ಒಂದೇ ಸಂದರ್ಭದಲ್ಲಿ ಸರಿಯಾಗುತ್ತದೆ ಎಂಬುವುದಾಗಿದೆ ನಾಲ್ಕು ಮಝ್ ಹಬ್ ವಿದ್ವಾಂಸರ ಅಭಿಪ್ರಾಯ.
ಕೆಲವು ವಿಚ್ಛೇದನಗಳಲ್ಲಿ , ಗಂಡನಿಂದ ಮುಕ್ತಿ ಪಡೆಯಲು ಹಾಗೂ ಇನ್ನು ಗಂಡಂದಿರ ಬಳಿಗೆ ತಿರುಗಿ ಮರಳಲು ಇಷ್ಟಪಡದ ಮಹಿಳೆಯರು ಮುತ್ತಲಾಖ್ ಹೇಳಲು ಕೇಳಿಕೊಲ್ಲುತ್ತಾರೆ,  ಅಂತಹ ಸಮಯದಲ್ಲಿ ಅದು ಆಶೀರ್ವಾದವು ಆಗಿದೆ; ವಿಚ್ಛೇದನಕ್ಕೆ ಮೂರು ತಲಾಖ್ ಒತ್ತಾಯವಲ್ಲ; ಒಂದರಿಂದ ಸಹ ಮಾನ್ಯವಾಗುತ್ತದೆ. ಮುತ್ತಲಾಖ್ ಒಬ್ಬ ವ್ಯಕ್ತಿಯ ಭವಿಷ್ಯವನ್ನು ಹಾಳುಮಾಡುತ್ತದೆ  ಎಂಬುದು ನಿಜವಲ್ಲ, ಅವರಿಗೆ ಬೇರೆಯವರೊಂದಿಗೆ ವಿವಾಹ ಮಾಡುವುದರಿಂದ ಯಾವುದೇ ಅಡೆತಡೆಗಳಿಲ್ಲ; ಪುನಃ ವಿವಾಹಕ್ಕೆ ಅನುಮತಿ ಇಲ್ಲದ ಧರ್ಮಗಳ ವೈಯುಕ್ತಿಕ ಕಾನೂನುಗಳಿಗೆ ಹೋಲಿಸಿದರೆ ಇದು ತುಂಬಾ ಉನ್ನತ ಕಾನೂನು.; ಸಂಕ್ಷಿಪ್ತವಾಗಿ ಇಸ್ಲಾಂ ಶರೀಅತ್ ವೀಕ್ಷಣೆದಲ್ಲಿ ಮೂರು ತಲಾಖ್ ಗಳಿವೆ ,ಅದು ಒಂದೇ ಕುಳಿತದಲ್ಲಿ ಮಾಡುವುದನ್ನು ನಿರುತ್ಸಾಹಗೊಳಿಸಬೇಕು
 ಒಬ್ಬ ವ್ಯಕ್ತಿ ಒಂದೇ ವೇಳೆ ಮೂರು ತಲಾಖ್ ಗಳು ಉಚ್ಚರಿಸಿದರೆ ಮುತ್ತಲಾಖ್ ಸಂಭವಿಸುತ್ತದೆ. ತದನಂತರ ಮೇಲೆ ಸೂಚಿಸಿದ ಕರ್ಮ ನಡೆಯದೆ ಪುನಃ ವಿವಾಹ ಅನುವದನೀಯ ವಲ್ಲ; ಇದು ಅಲ್ಲಾಹನ ನಿಯಮಗಳನ್ನು ಪಾಲಿಸುವ ಪರಿಶುದ್ಧರಾಗಿರಬೇಕೆಂಬ ಪ್ರಜ್ಞೆ ಇರುವವರಿಗೆ ಅನ್ವಯಿಸುತ್ತದೆ; ಅಲ್ಲದೆ ಇತರರಿಗೆ ಹಾಗೆ ಬದುಕಬಹುದು. ಮರಿತು ಇದನ್ನು ಮುಸ್ಲಿಂ ಸಾರ್ವಜನಿಕರ ಮೇಲೆ ಹೇರಬಾರದು.

Related Posts

Leave A Comment

Voting Poll

Get Newsletter