ಮುರಾದ್ ಹಾಫ್ಮನ್
ಇತ್ತೀಚಿಗೆ ನಿಧನರಾದ ಮುರಾದ್ ಹಾಫ್ಮನ್ ಸೆಪ್ಟೆಂಬರ್ 11ರ ದಾಳಿಯ ಹಿನ್ನೆಲೆಯಲ್ಲಿ ಪ್ರಸಿದ್ಧ ಅರೇಬಿಕ್ ಬರಹಗಾರರೊಂದಿಗಿನ ಸಂದರ್ಶನದ ಸಂಬಂಧಿತ ಭಾಗ*
*11/9 ಇದು ಸಹ ಇಸ್ಲಾಮಿನ ಅಭಿವೃದ್ಧಿಗೆ ಕಾರಣ*
*ವಿವರಣೆ: ಅಬ್ದುಲ್ ಹಖ್ ವಲಿಯಂಗಾವು.*
ಸೆಪ್ಟಂಬರ್ 11 ನ ಘಟನೆಗಳು ಪಾಶ್ಚಾತ್ಯ ಜಗತ್ತಿಗೂ ಇಸ್ಲಾಮಿನ ಬೆಳವಣಿಗೆಗೂ ಒಂದು ತಿರುವು ಎಂದು ನಿಮಗೆ ಅನಿಸುತ್ತಿದೆಯೇ?
ಅದೊಂದು ಪ್ರಮುಖ ತಿರುವು ಎಂದು ನಾನು ನಂಬುವುದಿಲ್ಲ. ಆದರೂ ಫೇಲ್ ಹಾರ್ಬರ್ ನಂತಹ ಅಮೇರಿಕಾದವರಿಗೆ ಅದು ಮುಖ್ಯವಾಗಿರಬಹುದು, ಜೊತೆಗೆ ವಿಶ್ವ ಇತಿಹಾಸಕ್ಕೆ ಒಂದು ಪ್ರಮುಖ ದಿನಾಂಕ ವಾಗಿರಬಹುದು. ಆದರೆ ಜಗತ್ತು ಸಹಜ ಸ್ಥಿತಿಗೆ ಮರಳಲಿದೆ. ಇಸ್ಲಾಮಿನ ಬೆಳವಣಿಗೆ ನೇರವಾಗಿ ಪಾಶ್ಚಾತ್ಯ ಜಗತ್ತಿನಿಂದ ಏರುತ್ತಲೇ ಇದೆ, ಅದಕ್ಕೆ ಸೆಪ್ಟೆಂಬರ್ 11 ಸ್ವಲ್ಪ ಅವೇಗ ಹೆಚ್ಚಿಸಿದೆಂದು ಅಂಕಿಅಂಶಗಳ ಪ್ರಕಾರ ವ್ಯಕ್ತವಾಗಿದೆ. ಜನರು ಎಂದಿಗಿಂತಲೂ ಹೆಚ್ಚಾಗಿ ಇಸ್ಲಾಮನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಸೆಪ್ಟೆಂಬರ್ 11ರ ನಂತರ ಅತಿ ಹೆಚ್ಚು ಮಾರ್ಪಟ್ಟ ಗ್ರಂಥಗಳು ಇಸ್ಲಾಮಿನದ್ದಾಗಿದೆ. ನಾನು ಸಂಪಾದಿಸಿದ ಕುರಾನ್ ಅನುವಾದ ಜರ್ಮನಿಯಲ್ಲಿ ಒಂದು ವರ್ಷದಲ್ಲಿ 40 ಸಾವಿರ ಪ್ರತಿಗಳು ಮಾರಾಟವಾಗಿವೆ. ಸಂಕ್ಷಿಪ್ತವಾಗಿ ಇಸ್ಲಾಂ ಧರ್ಮ ಬೆಳೆಯುತ್ತಲೇ ಇದೆ ಅದಕ್ಕೆ ಸೆಪ್ಟೆಂಬರ್ 11 ಸ್ವಲ್ಪ ಅವೇಗ ಹೆಚ್ಚಿಸಿದೆಂದು ಮಾತ್ರ.
ಆದರೆ ಇಂತಹ ಘಟನೆಗಳು ಈಗಿನ ಮುಸಲ್ಮಾನರನ್ನು ಗಂಭೀರವಾಗಿ ಪರಿಣಾಮ ಬೀರಿವೆ ಎಂಬುದು ನಿಜವಲ್ಲವೇ?
ಖಂಡಿತ, ನಾನು ಸೇರಿದಂತೆ ಎಲ್ಲರೂ ಪರಿಣಾಮಗಳನ್ನು ಅನುಭವಿಸುತ್ತಿದ್ದೇವೆ. ಅವನು ಮುಸ್ಲಿಂ ಎಂಬ ಕಾರಣಕ್ಕೆ ಆತ ಉಗ್ರಗಾಮಿ ಎಂದು ಶಂಕಿಸಲಾಗಿದೆ. ಅಮೆರಿಕ ಹೋದರೆ ಎಂದಿಗಿಂತಲೂ ವಿರುದ್ಧವಾಗಿ ಅಧಿಕಾರಿಗಳು ವರ್ತಿಸುತ್ತಿದ್ದಾರೆ, ಸಾಮಾನುಗಳಿಗಾಗಿ ಗಂಟೆ- ಗಂಟೆಗಳ ಕಾಲ ಕಾಯಬೇಕಾಗಿದೆ, ಅನುಮಾನದ ನೆರಳಿನಲ್ಲಿ ಎಲ್ಲೆಡೆ ನೋಡಲಾಗುತ್ತಿದೆ. ಸೆಪ್ಟೆಂಬರ್ 11ರ ನಂತರ ಅಮೆರಿಕದಲ್ಲಿ ಐ.ಎಸ್. ಎನ್. ಎ( ಇಸ್ಲಾಮಿಕ್ ಸೊಸೈಟಿ ಆಫ್ ನಾರ್ತ್ ಅಮೇರಿಕ) ಮೊದಲ ಬಾರಿಗೆ ಮುಸ್ಲಿಮರ ಸಭೆ ಬಹಳ ಅಸಕ್ತಿ ಹೊಂದಿತ್ತು, ಅದರಲ್ಲಿ ಹೆಚ್ಚು ಯುವಕರು ಹಾಗೂ ಹಿಜಾಬ್ ಧರಿಸಿದ ಯುವತಿಯರು ಹೀಗೆ 42000 ಮುಸ್ಲಿಮರು ಭಾಗವಹಿಸಿದ್ದರು, ಇಷ್ಟು ಜನರು ಸೇರುವುದು ಇದೇ ಮೊದಲು, ಅದು ವಾಷಿಂಗ್ಟನ್ನಲ್ಲಿ, ತಮ್ಮ ನಂಬಿಕೆಯನ್ನು ಪಟ್ಟುಹಿಡಿದು ತಾವು ಉಗ್ರಗಾಮಿಗಳಲ್ಲ ಎಂದು ಘೋಷಿಸುವುದಾಗಿತ್ತು ಇದರ ಉದ್ದೇಶ.
ಚರ್ಚೆಗಳಲ್ಲಿ, ಸಂಭಾಷಣೆಗಳಲ್ಲಿ ಮರುಪರಿಶೀಲನ ಅವಶ್ಯಕತೆಯಿದೆಂದು ನೀವು ಭಾವಿಸುತ್ತೀರಾ?
ಸಹಜವಾಗಿ, ಸಮಯಕ್ಕೆ - ಸ್ಥಳಕ್ಕೆ ಅನುಗುಣವಾಗಿ ವಿಧಾನಗಳನ್ನು ಬದಲಾಯಿಸಲೇಬೇಕಾಗಿದೆ, ಅದಲ್ಲವೇ ಉಪದೇಶದಲ್ಲಿರುವ ತರ್ಕ. ಧರ್ಮವನ್ನು ಎಂದಿಗೂ ಅನುವಂಶಿಕವಾಗಿ ಪಡೆಯಲು ಸಾಧ್ಯವಿಲ್ಲ. ಆದ್ದರಿಂದ ಪ್ರತಿ ಪೀಳಿಗೆಯು ಮತ್ತೆ ಮತ್ತೆ ಕುರ್ ಆನ್ ಸುನ್ನತ್ ಗೆ ಮರಳಬೇಕು. ಪ್ರತಿ ಪೀಳಿಗೆ ತಮ್ಮ ಪ್ರತಿಕೂಲ ಸಂದರ್ಭಗಳನ್ನು ಹೇಗೆ ನೆರವೇರಿದರೆಂದು ಅರ್ಥ ಮಾಡಿದರೆ ಮಾತ್ರ ನಮ್ಮ ಸಂದರ್ಭ ಹೇಗೆ ನಿಯಮಿಸಬಹುದೆಂದು ತಿಳಿಯಲು ಸಾಧ್ಯ.
ಈ ವರೆಗೆ ನಡೆದ ಇಸ್ಲಾಮಿಕ್ ಬೌದ್ಧಿಕ ಚಿಂತನೆ ಮತ್ತು ಕರ್ಮಶಾಸ್ತ್ರ ವಿಶ್ಲೇಷಣೆ ಮಾನವೀಯತೆಗೂ, ಪ್ರಪಂಚದೊಂದಿಗೂ, ವಿಶಿಷ್ಯ ಪಾಶ್ಚಿಮಾತ್ಯ ಜಗತ್ತಿನೊಂದಿಗೂ ಪರಿಣಾಮಕಾರಿಯಾಗಿ ವ್ಯವಹರಿಸಿಲ್ಲ ಎಂದು ಕೆಲವರು ಹೇಳುತ್ತಾರೆ. ಈ ಬಗ್ಗೆ ಒಂದು ಪಾಶ್ಚಿಮಾತ್ಯ ಹಾಗೂ ಮುಸ್ಲಿಂ ಚಿಂತಕರಾದ ನಿಮ್ಮ ಪ್ರತಿಕ್ರಿಯೆ ಏನು?
ಹೌದು, ನಾನು ಈ ಮಾತನ್ನು ಒಪ್ಪುತ್ತೇನೆ. ಪಶ್ಚಿಮದಲ್ಲಿರುವ ಓರಿಯೆಂಟಲಿಸಂನೊಂದಿಗೆ ಸಂವಹನ ನಡೆಸುವ ಮಟ್ಟಕ್ಕೆ ಮುಸ್ಲಿಂ ಜಗತ್ತು ಇನ್ನೂ ಅಭಿವೃದ್ಧಿ ಹೊಂದಿಲ್ಲ ಎಂದು ನನಗೆ ತೋರುತ್ತದೆ. ವಿವಿಧ ಅರೇಬಿಕ್, ಪರ್ಷಿಯನ್, ಫಾರೆಸ್ ಮುಂತಾದ ಭಾಷಾ ಮಾತನಾಡುವ, ಇಸ್ಲಾಂ ಧರ್ಮದ ಬಗ್ಗೆ ಸಾಕಷ್ಟು ತಿಳಿದಿರುವ ತಜ್ಞರು ಪಶ್ಚಿಮದಲ್ಲಿ ಇದ್ದಾರೆ. ಆದಾಗ್ಯೂ ಅವರಲ್ಲಿ ಹೊರಹೊಮ್ಮಿದೆ ತಜ್ಞರು ಬಹಳ ವಿರಳವೆಂದೇ ಹೇಳಬಹುದು. ಪಾಶ್ಚಿಮಾತ್ಯರು ಇಸ್ಲಾಮನ್ನು ಆಳವಾಗಿ ಅರ್ಥಮಾಡಿಕೊಳ್ಳಲು ಸಿದ್ದರಾಗಿದ್ದಾರೆ, ಅದುವೇ ಎಲ್ಲಾ ಸಮುದಾಯವು ಬಯಸುವುದು. ಮುಸ್ಲಿಂ ಜಗತ್ತಿನಲ್ಲಿ ಆಕ್ಸಿಡೆಂಟಲಿಸಂ ನಂತಹ ಯಾವುದೇ ವಿಷಯವಿಲ್ಲ ಎಂದು ಹೇಳಬಹುದು. ಪಾಶ್ಚಾತ್ಯ ಭಾಷೆಗಳು, ಇತಿಹಾಸ ಮತ್ತು ಅವರ ತತ್ವಶಾಸ್ತ್ರವನ್ನು ತಿಳಿದ ಜನರು ಇರಬೇಕಾಗಿದೆ. ನಾನು ಎರಡು ಜಗತ್ತನ್ನು ಸಾಕಷ್ಟು ಅರ್ಥ ಮಾಡಿದ್ದೇನೆ,ಹಾಗಾಗಿ ನಾನು ಮುಸ್ಲಿಂ ಜಗತ್ತಿನಲ್ಲಿ ಇದ್ದಾಗ ಪಶ್ಚಿಮವನ್ನು ಹಾಗೂ ಪಾಶ್ಚಿಮಾತ್ಯದಲ್ಲಿದ್ದಾಗ ಇಸ್ಲಾಂ ಧರ್ಮವನ್ನು ವಿವರಿಸಲು ಪ್ರಯತ್ನಿಸುತ್ತಿದ್ದೇನೆ.
ಪಾಶ್ಚಿಮಾತ್ಯ ಮುಸ್ಲಿಮರು ಪೂರ್ವದಿಂದ ಬೌದ್ಧಿಕ ಕೊಡುಗೆಗಳನ್ನು, ಕರ್ಮ ಶಾಸ್ತ್ರಗಳನ್ನು ಮಾತ್ರ ಬಳಸುತ್ತಿದ್ದಾರೆ ಎಂದು ಹಲವರ ವಿಶ್ವಾಸ, ಇದು ಸರಿಯೇ ಪಾಶ್ಚಾತ್ಯರು ಸ್ವತಂತ್ರ ಇಸ್ಲಾಮಿಕ್ ನ್ಯಾಯಶಾಸ್ತ್ರ, ಭೌತಿಕತೆ ಮತ್ತು ಸಂಸ್ಕೃತಿಯನ್ನು ಕೇಳಿಕೊಳ್ಳಬಹುದೇ?
ನಾನು ಈ ಮಾತನ್ನು ಒಪ್ಪುವುದಿಲ್ಲ, ಇಸ್ಲಾಮಿನ ಕುರಿತು ಹಲವಾರು ಪುಸ್ತಕಗಳು ಅರೇಬಿಕ್ನಿಂದ ಹೆಚ್ಚಾಗಿ ಇಂಗ್ಲಿಷ್ನಲ್ಲಿ ರಚಿಸಲಾಗಿದೆ. ತ್ಜಾಹ ಜಾಬಿರ್ ಅಲ್ ವಾನೀ ನಂತಹವರು ನೇತೃತ್ವ ವಹಿಸುವ ಇಸ್ಲಾಮಿಕ್ ಬೌದ್ಧಿಕ ಸ್ಥಾಪನೆಗಳು ವಾಷಿಂಗ್ಟನ್ ನಲ್ಲಿದೆ, ಫಾತಿಹ್ ಉಸ್ಮಾನ್ ನೇತೃತ್ವ ವಹಿಸುವ ಸ್ಥಾಪನೆ ಲೋಸ್ ಅಂದುಲ್ಸಿನಲ್ಲಿದೆ, ಸಾಕಿ ಬದ್ವಿ ನೇತೃತ್ವ ವಹಿಸುವ ಸ್ಥಾಪನೆ ಲಂಡನ್ನಲ್ಲಿದೆ. ನಾನು ಪ್ರತಿವರ್ಷ 20 ಪುಸ್ತಕಗಳ ವಿಮರ್ಶೆಯನ್ನು ಬರೆಯುತ್ತಿದ್ದೇನೆ. ಇಂಗ್ಲೆಂಡಿನ ಮಾರ್ಕ್ ಫೀಲ್ಡ್ (ಇಸ್ಲಾಮಿಕ್ ಸಂಘಟನೆ) ಪ್ರಕಟಿಸುವ ವಿಮರ್ಶೆಗಾಗಿ ನಾನು 4000 ಇಸ್ಲಾಮಿಕ್ ಪುಸ್ತಕಗಳನ್ನು ಓದುತ್ತಿದ್ದೇನೆ. ಪಾಶ್ಚಾತ್ಯ ಮುಸಿಲಿಂ ಚಿಂತಕರ ಕೃತಿಗಳು ಇಸ್ಲಾಮಿಕ್ ಪ್ರಪಂಚದ ಅಭಿವೃದ್ಧಿಗೆ ಹೆಚ್ಚಿನ ಕೊಡುಗೆ ನೀಡಿವೆ ಎಂದು ನಾನು ನಂಬುತ್ತೇನೆ. ಶೀಘ್ರದಲ್ಲಿ ಅಮೇರಿಕಾ, ಯುರೋಪಿನ ಮುಸ್ಲಿಮರು ಪೂರ್ವದ ಮುಸ್ಲಿಮರ ಬೌದ್ಧಿಕ ಪುನರ್ಜೀವನಕ್ಕೆ ದಾರಿ ಮಾಡಿಕೊಡಬಹುದು ಎಂದು ನನಗೆ ತೋರುತ್ತದೆ, ಕಾರಣ ಅವರು ಸೆನ್ಸಾರ್ಶಿಪ್ ಇಲ್ಲದೆ ಬರೆಯುತ್ತಾರೆ ಪ್ರಸ್ತುತ ಅವರಿಗೆ ಮಾತ್ರ ಅದು ಸಾಧ್ಯ.
ಮಾನವ ಹಕ್ಕುಗಳ ರಕ್ಷಣೆಯಲ್ಲಿ ವಿಶ್ವ ಸಮುದಾಯವು, ವಿಶ್ವಸಂಸ್ಥೆಯು ಮುಸ್ಲಿಮರನ್ನು ಅವಗಣಿಸುತ್ತಿದ್ದಾರೆಂಬುದು ನಿಜವಲ್ಲವೇ?
ಇದು ಸ್ವಲ್ಪ ಮಟ್ಟಿಗೆ ನಿಜ, ಪಲ್ಸ್ತಿನಿಯನ್ ವಿಷಯವು ಅದರ ಅಂತರಂಗದಲ್ಲಿದೆ ಎಂದು ನಾನು ಭಾವಿಸುತ್ತೇನೆ.
ಫೆಲೆಸ್ತೀನಿನ ವಿರುದ್ಧ ಇಸ್ರಾಯೇಲಿನ ನೀತಿಗಳು ಹಾಗೂ ಅಮೆರಿಕದ ಬೆಂಬಲ ಯುರೋಪಿನಲ್ಲಿ ಮತ್ತು ಅಮೆರಿಕದಲ್ಲೂ ವ್ಯಾಪಕವಾಗಿ ಟೀಕಿಸಲಾಗುತ್ತಿದೆ ಎಂಬುದು ನಿಜ. ವಾಷಿಂಗ್ಟನ್ನಿನ ನಿಯಂತ್ರಣ ತಜ್ಞರ ಮತ್ತು ಇಸ್ರಾಯೇಲಿನ ಕೈಯಲ್ಲೆಂಬ ಕಲ್ಪನೆಯೂ ಅಮೆರಿಕನ್ನವರಲ್ಲಿ ಬೆಳೆಯುತ್ತಿದೆ. ಈ ಅಪವಿತ್ರ ಮೈತ್ರಿಯಾಗಿದೆ ವಿಶ್ವಸಂಸ್ಥೆಯ ಮೇಲೆ ಪರಿಣಾಮ ಬೀರುತ್ತಿರುವುದು ಇದನ್ನೆಯಾಗಿದೆ ಚಚ್ನಿಯ, ಅಲ್ಜೀರಿಯ, ಪಾಕಿಸ್ತಾನದಂತಹ ರಾಷ್ಟ್ರಗಳ ಮಧ್ಯಸ್ಥಿಕೆಯಲ್ಲಿ ನಾವು ಕಾಣುತ್ತಿರುವುದು. ಇಸ್ರಾಯೇಲಿಗೆದುರಾದ ವಿಶ್ವಸಂಸ್ಥೆ ನಿರ್ಣಯಗಳು ಅಂಗೀಕರಿಸಲ್ಪಡುತ್ತಿಲ್ಲ, ಆದರೆ ಮುಸ್ಲಿಮ್ ರಾಷ್ಟ್ರಗಳ ವಿರುದ್ಧ ಶೀಘ್ರದಲ್ಲೇ ಅಂಗೀಕರಿಸಲ್ಪಡುತ್ತಿದೆ.
ಅದೇ ಸಮಯ ಅದು ಮುಸ್ಲಿಂ ರಾಷ್ಟ್ರಗಳಿಗೆ ಒಂದು ಜವಾಬ್ದಾರಿಯೂ ಆಗಿದೆ. ವಸಾಹತುಶಾಹಿಯ ನಂತರ ಮುಸ್ಲಿಮ್ ಲೋಕವು ವಿವಿಧ ರಾಷ್ಟ್ರಗಳಾಗಿ ವಿಂಗಡಿಸಲಾಗಿದೆ, ಅದು ಈಗ ಸಮುದಾಯವಾಗಿರದೆ ಸ್ವತಂತ್ರ ರಾಷ್ಟ್ರಗಳಾಗಿ ಕಾರ್ಯನಿರ್ವಹಿಸುತ್ತಿದೆ. ಆದ್ದರಿಂದ ಅವರಿಗೆ ಅನೇಕ ಕಾರ್ಯಗಳಲ್ಲಿ ಏಕಾಗ್ರತೆಯಲ್ಲಿ ಇರಲು ಸಾಧ್ಯವಾಗುತ್ತಿಲ್ಲ, ಇದುವೇ ವಿಶ್ವ ರಾಷ್ಟ್ರಗಳು ಕೈಗೊಳ್ಳುತ್ತಿರುವುದು.
ನೀವು ನಾಗರಿಕ ಸೇವೆಯಿಂದ ನಿವೃತ್ತರಾದ ಸ್ಥಿತಿಯಲ್ಲಿ ಮುಂದೆ ಏನು ಯೋಜನೆಯಲ್ಲಿದ್ದೀರಾ?
ನನಗೆ 72 ವರ್ಷ, ನಾನು ಬರಹ - ಓದುವಿಕೆಯಲ್ಲಿ ಗಮನಹರಿಸುತ್ತಿದ್ದೇನೆ. ಹಾಗೂ ಇಸ್ಲಾಂ ಧರ್ಮದ ಬಗ್ಗೆ ಸುಮಾರು 10 ಪುಸ್ತಕಗಳನ್ನು ಬರೆದಿದ್ದೇನೆ. "ಜರ್ನಿ ಟು ಮಕ್ಕ" ಎಂಬ ಪುಸ್ತಕ ನನ್ನ ದಿನಚರಿಗಳಲ್ಲಿ ಒಂದಾಗಿದೆ. ಇಸ್ಲಾಮಾಬಾದಿನಲ್ಲಿರುವ 'ಇಸ್ಲಾಮಿಕ್ ಸ್ಟಡೀಸ್' ಗಾಗಿ ಹಾಗೂ ವಾಷಿಂಗ್ಟನ್ನಲ್ಲಿರುವ 'ಅಮೇರಿಕನ್ ಜರ್ನಲ್ ಫಾರ್ ಇಸ್ಲಾಮಿಕ್ ಸೋಶಿಯಲ್ ಸ್ಟಡೀಸ್' ಗಾಗಿ ಮತ್ತು ಇಂಗ್ಲೆಂಡಿನಲ್ಲಿರುವ 'ಎಕೌಂಟರ್ಸ್' ಗಾಗಿ, ಜರ್ಮನಿಯಲ್ಲಿರುವ ಇಸ್ಲಾಮಿಕ್ ಪತ್ರಿಕೆಗಳಿಗಾಗಿಯು ಹಲವಾರು ಲೇಖನಗಳನ್ನು ಬರೆಯುತ್ತಿದ್ದೇನೆ.