ಸಹನೆಯ ಪ್ರತೀಕ : ಇಬ್ರಾಹೀಂ (ಅ.ಸ)

                                                                                     ಅಧ್ಯಾಯ : 01 (ದುರಹಂಕಾರಿಯಾದ ನಮ್ರೂದ್ )

 ತುಂಬಾ ಕಾಲದ ಹಿಂದಿನ ಘಟನೆ,ಇರಾಖಿನಲ್ಲಿರುವ ಸುಂದರವಾದ ಬಾಬಿಲ್ ಎಂಬ ಪಟ್ಟಣ. ಸುಂದರ ಅಂದರೆ ಬಲು ಸುಂದರ ಬೆಟ್ಟ,ಗುಡ್ಡ,ಮರ,ಗಿಡಗಳ ಕಾಮನ... ಹಚ್ಚ ಹಸಿರಿನ ಸಿರಿ .....ಹುಲ್ಲು,ಹಣ್ಣು ಹಂಪಲು ಹೂವುಗಳಂತೂ ಸಸ್ಯ ರಾಶಿ...ಅದರಲ್ಲಿ ಯಾತ್ರೆಗಾರರ ಕೂಗಾಟ ವಿಶ್ವಾಸಿಗಳ ಗುಂಪು ಅದೇ ರೀತಿ  ಅವಿಶ್ವಾಸಗಳಾದಂತಹ ಸಾರಂಗಗಳ ಸಾಲು ಸಾಲು...ಒಟ್ಟಾರೆ ಪ್ರಾಣಿ ಪಕ್ಷಿಗಳ ನಿಸರ್ಗಧಾಮ.

ಆದರೆ ಊರಿನಂತೆ ಆಗಿರಲಿಲ್ಲ ಅಲ್ಲಿಯ ಆಡಳಿತಾಧಿಕಾರಿ ದುರಹಂಕಾರಿಯಾದ ,ಅವಿಶ್ವಾಸಿಯಾಗಿದ್ದ ನಮ್ರೂದ್ ಆಗಿದ್ದ ಅಲ್ಲಿಯ ರಾಜ .ಒಂದು ಸುಂದರವಾದ ರಾತ್ರಿ ನಮ್ರೂದ್ ತನ್ನ ನಿದ್ರೆಯಲ್ಲಿ ಮುಳುಗಿದ್ದ , ಆ ವೇಳೆ ಒಂದು ನಕ್ಷತ್ರದ ಕಿರಣ ಇಡೀ ಭೂಮಿಯನ್ನೇ ಮಿನುಗಿಸುವ ಚಂದ್ರನಿಗಿಂತ ಪ್ರಕಾಶವಾಗಿ ಅವನು ಕನಸು ಕಂಡನು.

ಮುಂಜಾನೆಯ ಸೂರ್ಯನ ಕಿರಣ ಮುಖಕ್ಕೆ ಅರಳಿದಷ್ಟ ರಲ್ಲಿ ನಮ್ರೂದನಿಗೆ ಎಚ್ಚರವಾಯಿತು.ಹೇಳಿದ ತಕ್ಷಣ ಸ್ವಪ್ನ ವ್ಯಾಖ್ಯಾನಿಸುವನನ್ನ ಕರೆಸಿ ತನ್ನ ಕನಸನ್ನು ವಿವರಿಸಿದನು. ಸ್ವಲ್ಪ ಯೋಚಿಸಿ ನಮ್ರೂದನಿಗೆ ತಕ್ಷಣವೇ ಕನಸು ವ್ಯಾಖ್ಯಾನಿಸಿ ನೀಡಿದ. ಅರಮನೆಗೆ ಖುಷಿಯಿಂದ ಬಂದ ಅವನು ನಮ್ರೂದನಿಗೆ ತಿಳಿಸಿದ್ದು ಅತಿ ದುಃಖ ವಾರ್ತೆ.

"ಈ ಊರಲ್ಲಿ ಒಬ್ಬ ಶಿಶು ಜನಿಸುವನು ಅವನು ದೊಡ್ಡವನಾದ ಮೇಲೆ ನಮ್ಮ ಆರಾಧ್ಯ ದೈವವನ್ನು ತಡೆದು ತನ್ನ ಏಕದೈವತ್ವವನ್ನು ಜನರ ಬಳಿ ಪ್ರಬೋಧನೆ ಮಾಡುವನು " ಇದು ಕೇಳಿ ಚಿಂತಾಮಗ್ನನಾದ ನಮ್ರೂದನು ತನ್ನ ಸೈನಿಕರೊಡನೆ. "ಇನ್ನು ಈ ಭೂಮಿಯಲ್ಲಿ ಹುಟ್ಟುವ ಎಲ್ಲಾ ಮಗುವನ್ನು ಕೊಂದು ಹಾಕಿ'' ಎಂದು ಆಜ್ಞಾಪಿಸಿದ. ಈ ಆಜ್ಞೆಯ ಮೇರೆಗೆ  ಸೈನಿಕರೆಲ್ಲ ಮುಗ್ಧ ಹಸುಳಿಗಳನ್ನು ಕೊಂದು ಹಾಕಕತೊಡಗಿದರು. ಇದು ಕಂಡ ಜನರು ನಿಬ್ಬೆರಗಾದರೂ ಅದೇ ರೀತಿ ಸ್ತಂಭೀ ಭೂತರಾಗಿದ್ದರು.

                                                                  ಅಧ್ಯಾಯ : 02 (ಅರೇ ಇದು ಯಾರು ಹೀಗೆ ಮಾಡಿದ್ದು)

ಆಝರ್ ಎಂಬ ಮಧ್ಯವಯಸ್ಕನಾದವನಿಗೆ ಒಂದು ಮಗು ಹುಟ್ಟಿತು. ತನ್ನ ಪ್ರಿಯ ಪತ್ನಿ ಗರ್ಭಿಣಿಯಾಗಿರುವಾಗಲೆ ಅವನು ಗುಹೆಯೊಂದರಲ್ಲಿ ಸ್ಥಳ ಕ್ರಮೀಕರಿಸಿದ್ದ. ಅವಳು ಮಗುವಿಗೆ ಅಲ್ಲೇ ಜನ್ಮ ತಾಳಿ ತನ್ನ ಮುದ್ದಾದ ಮಗುವನ್ನು ಅಲ್ಲೇ ಬಿಟ್ಟು ಬಂದಳು. ದಿನನಿತ್ಯ ತನ್ನ ಮಗುವನ್ನು ಮುದ್ದಾಡಿಸಿ, ಹಾಲು ನೀಡಿ ಹಿಂದುರುಗುತ್ತಿದ್ದಳು. ದಿನಗಳು - ವಾರಗಳಾಗಿ ,ವಾರಗಳು -ತಿಂಗಳುಗಳಾಗಿ,ತಿಂಗಳುಗಳು - ವರ್ಷಗಳಾಗಿ ಉರುಳಿದ್ದು ಗೊತ್ತಾಗಲೇ ಇಲ್ಲ.ಮಗು ಬೆಳೆದು ದೊಡ್ಡವನಾದಾಗ ಆಝರ್ ಮತ್ತು ತನ್ನ ಪ್ರಿಯ ಪತ್ನಿ ಅವನನ್ನು ಮನೆಗೆ ಕರೆ ತಂದರು.

ಓ ....ಅಲ್ಲಾಹ್ .....ಏನೊಂದು ಅದ್ಭುತ ಏನು ಸೌಕರ್ಯವಿಲ್ಲದೆ ಕೇವಲ ಒಂದು ಗುಹೆಯಲ್ಲಿ ಬೆಳೆದ ಅವನು ಎಲ್ಲರಿಗಿಂತ ಬುದ್ದಿವಂತಿಕೆ ಉಳ್ಳವನಾಗಿದ್ದಾನೆ.ಅಲ್ಲಾಹು ತನ್ನ ಶಕ್ತಿಯಿಂದ ಆ ಮಗುವಿಗೆ ಎಲ್ಲಾ ಅನುಗ್ರಹಗಳನ್ನು ನೀಡಿ ಅನುಗ್ರಹಿಸಿದ್ದಾನೆ. ಸ್ವತಃ ಏನು ಮಾಡಲಾಗದ ವಿಗ್ರಹಗಳನ್ನು ಜನರು ಆರಾಧಿಸುವುದು ಆ ಬಾಲನಿಗೆ ಅದ್ಭುತಗೊಳಿಸಿತು. ತನ್ನ ಮೇಲೆ ಬರುವ ಅಕ್ರಮವನ್ನು ಸ್ವತಃ ತಡೆಯಲಾರದ ಪ್ರತಿಮೆಗೆ ಅವರು ಏಕೆ ಸುಜೂದ್ ಮಾಡುತ್ತಾರೆ? ಈ ಪ್ರಶ್ನೆ ಆ ಬಾಲನ ಮನಸೆಲ್ಲಾ ಸುತ್ತಾಡಿತು. ಅವನು ಕೆಡುಕಿನ ಹಾದಿಯಲ್ಲಿ ತುಳಿಯುತ್ತಿದ್ದ ಜನರನ್ನು ಬೋಧಿಸಿ ಸನ್ಮಾರ್ಗದತ್ತ ಕರೆತರಲು ಪ್ರಯತ್ನಿಸಿದನು. ತನ್ನ ಮಾತಿಗೆ ಅವರು ಕಿವಿ ಕೊಡುವುದಿಲ್ಲ ಎಂದು ಖಚಿತವಾದಾಗಲೇ ಅವನ ಮನಸ್ಸಿಗೆ ಒಂದು ಉಪಾಯ ಹುಟ್ಟಿತು.

ಒಂದು ದಿನ  ನಾಡಿನಲ್ಲಿ ಉತ್ಸವ ನಡೆಯುತ್ತಿತ್ತು.ನಾಡಿನ ಜನರೆಲ್ಲಾ ಉತ್ಸವದಲ್ಲಿ ಪಾಲ್ಗೊಂಡಿದ್ದರು. ನಾಡಿನಾದ್ಯಂತ ದಾರಿದೀಪಗಳಿಂದ ಅಲಂಕರಿಸಿತ್ತು. ಆ ಬಾಲ ಯಾರೂ ಕಾಣದೆ ವಿಗ್ರಹಗಳನ್ನಿರಿಸಿದ ಪ್ರದೇಶಕ್ಕೆ ಹೋಗಿ ಅಲ್ಲಿದ್ದ ಎಲ್ಲಾ ಸಣ್ಣಪುಟ್ಟ ವಿಗ್ರಹಗಳ ತಲೆ ಕಡಿದು ತನ್ನ ಖಡ್ಗವನ್ನು ಅಲ್ಲಿದ್ದ ಅತೀ  ದೊಡ್ಡ ವಿಗ್ರಹದ ಹೆಗಲ ಮೇಲೆ ನೇತುಹಾಕಿ ಅಲ್ಲಿಂದ ಜಾಗ ಖಾಲಿ ಮಾಡಿದ. ಮಾರನೇ ದಿನ ಜನರೆಲ್ಲ ಆರಾಧಿಸಲು ಬಂದ ಕ್ಷಣ ತಮ್ಮ ವಿಗ್ರಹಗಳನ್ನು ನೋಡಿ ಕೋಪೋದರಿತರಾದರು. ನಾವು ಇಲ್ಲಿರುವಾಗಲೇ ನಮ್ಮ ವಿಗ್ರಹಗಳನ್ನು ಯಾರೊ ಮೂರಿದು ಹಾಕಿದ್ದಾರೆ ಎಂದು ಅವರೆಡೆಯಲ್ಲಿ ಮಾತುಕತೆಗಳು ನಡೆಯಿತು. ಒಬ್ಬ ವ್ಯಕ್ತಿ ಕೇಳಿದ "ಅರೇ ಇದು ಯಾರು ಹೀಗೆ ಮಾಡಿದ್ದು" ಅದರಲ್ಲಿ ಇನ್ನೊಬ್ಬ ಅವಿಶ್ವಾಸಿ ಮರು ಉತ್ತರ ನೀಡಿದ ಅದು ಅವನೇ ಆ ಏಕ ದೈವನವನ್ನು ನಮ್ಮ ಎಡೆಯಲಿ ತಂದವನು "ಅವನ ಹೆಸರೇನು? ಇನ್ನೊಬ್ಬ ಹೇಳಿದ ಅವನೇ ಆ ಇಬ್ರಾಹಿಂ ಆಗ ಜನರು ಇಬ್ರಾಹಿಂನನ್ನು ಕರೆತಂದರು.

ಅವರೆಲ್ಲರ ಮನಸ್ಸಿನಲ್ಲಿ ಸಿಟ್ಟಿನ ಜ್ವಾಲೆಯ ಕಿಚ್ಚು ಹಚ್ಚಿತ್ತು. ಅವರು ಇಬ್ರಾಹಿಂನ ಬಳಿ ಕೇಳಿದರು "ನೀನೇಕೆ ನಮ್ಮ ವಿಗ್ರಹಗಳನ್ನು ಮುರಿದಾಕಿದೆ" ಇಬ್ರಾಹಿಂ ತನ್ನ ವಿಶ್ವಾಸವನ್ನು ಮನಸ್ಸಲ್ಲಿಟ್ಟು ಕೇಳಿದ ನನ್ನನ್ನು ಏಕೆ ಕೇಳುತ್ತಿದ್ದೀರಿ. ಖಡ್ಗ ಇರುವುದು ಆ ವಿಗ್ರಹದ ಮೇಲೆ ಆದುದ್ದರಿಂದ ಅದರ ಬಳಿ ಕೇಳಿರಿ "ನೀನೇನು ತಮಾಷೆ ಮಾಡುತ್ತಿದ್ದೀಯ ಅವರಿಗೆ ಮಾತಾಡುವ ಶಕ್ತಿ ಇಲ್ಲವೆಂದು ನಿನಗೆ ಗೊತ್ತಿಲ್ಲವೇ" ಎಂದು ಜನರು ಕೇಳಿದರು. ಇದೇ ತಕ್ಕ ಸಮಯ ಎಂದು ಅಂದುಕೊಂಡ ಇಬ್ರಾಹಿಂ ಹೇಳಿದ ''ಅದೇ ಅವರಿಗೆ ಮಾತಾಡಲು ಆಗುವುದಿಲ್ಲ ನೀವು ಹೇಳಿದನ್ನು ಕೇಳಲು ಕೂಡ ಆಗದು ಅಂತಹ ವಿಗ್ರಹವನ್ನು ನೀವು ಯಾಕೆ ಆರಾಧಿಸುತ್ತೀರಿ?. ಇಬ್ರಾಹಿಂ ನ ಪ್ರಶ್ನೆ ಕೇಳಿ ಅವರು ಉತ್ತರ ಮುಕ್ತರಾದರು ತಕ್ಷಣ ಅವರಿಂದ ಅರ್ಧ ಪಾಲು ಜನರು ಇಬ್ರಾಹಿಂನ ದೇವನು ಏಕದೇವನಾಗಿದ್ದಾನೆ ಎಂದು ವಿಶ್ವಸಿಸಲು ತೊಡಗಿದರು. ಈ ವಿಷಯ ವಿಶ್ವಾಸಿಗಳ ಸಿಟ್ಟಿನ ಜ್ವಾಲೆಯನ್ನು ಕಾಡ್ಗಿಚ್ಚಿನಂತೆ ಬಾನೆತ್ತರಕ್ಕೆ ಏರಿಸಿತು.

      

 

 

                                                                                                                                                                              ಇಶಾನ್ ನಿಡ್ಮಾರ್

Files

Related Posts

Leave A Comment

Voting Poll

Get Newsletter