- Madannur Noorul Huda
- Aug 13, 2023 - 07:37
- Updated: Jun 14, 2024 - 05:47
- 429
ಚಾಪ್ಪನಂಙಾಡಿ ಬಾಪು ಮುಸ್ಲಿಯಾರ್ (ನಮ್ಮನಗಲಿ 43 ವರ್ಷ)
ಹಿ 1334 ರಂಝಾನ್ 14 ರಂದು ಚಾಪ್ಪನಂಙಾಡಿಯ ಪಾರಂಗಿಮೂಚಿಕ್ಕಲ್ ಏರಿಯಾಡನ್ ವೆಳ್ಳಂಙರ ಹಸನ್ ಮುಸ್ಲಿಯಾರ್ ಮತ್ತು ಕೊಲ್ಲಂತೊಡಿ ಬಿಯುಮ್ಮಾ ದಂಪತಿಯ ಮಗನಾಗಿ ಮುಹಮ್ಮದ್ ಎಂಬ ಬಾಪು ಮುಸ್ಲಿಯಾರ್ ಜನಿಸಿದರು.
ತನೂರ್ ಅಬ್ದುರಹ್ಮಾನ್ ಶೇಖ್ ಅವರ ಪ್ರಮುಖ ಶಿಷ್ಯರಾಗಿದ್ದ ತಂದೆ , ತಂದೆ ಆರನೇ ವಯಸ್ಸಿನಲ್ಲಿ ನಿಧನರಾದರು. ತಾಯಿಯ ಸಂರಕ್ಷಣೆ ಯಿಂದ ಬೆಳೆದರು
ಒಂಬತ್ತನೆಯ ವಯಸ್ಸಿನಲ್ಲಿ, ಮುಹಿದ್ದೀನ್ ಮುಸ್ಲಿಯಾರ್ ಅವರ ಒದುಕುಂಙಲ್ ದರ್ಸ್‌ನಲ್ಲಿ ದರ್ಸ್ ಅಧ್ಯಯನ ಮಾಡಲು ಪ್ರಾರಂಭಿಸಿದರು. ಅವರು ಪಾಲಚ್ಚಿರಮಾಡ್ , ಮಾಂಬಾಡ್ , ನಾದಾಪುರಂ , ಮನ್ನಾರ್ಕಡ್ , ಚಾಪ್ಪನಂಙಾಡಿ ಮತ್ತು ಕರಿಂಗಪ್ಪಾರ ದರ್ಸ್ ಗಳಲ್ಲಿಯೂ ಅಧ್ಯಯನ ಮಾಡಿದರು. ಅಧ್ಯಯನಕ್ಕೆ ಸಂಬಂಧಿಸಿದ ಪ್ರತಿಯೊಂದು ವಿಷಯದಲ್ಲೂ ಪ್ರವೀಣರಾದವರನ್ನು ಗುರುಗಳಾಗಿ ಸ್ವೀಕರಿಸುವ ಅಭ್ಯಾಸವಾಗಿತ್ತು ಅವರದ್ದು. ಮುಹಮ್ಮದ್ ಹಸನ್ ಮುಸ್ಲಿಯರ್, ಮಮ್ಮುಂಙಿ ಮುಸ್ಲಿಯಾರ್ , ಥಾಝಕೋಡ್ ಕುನ್ಞಾಲವಿ ಮುಸ್ಲಿಯಾರ್ , ಪರವಣ್ಣ ಮುಹಿಯ್ಯದ್ದೀನ್ ಕುಟ್ಟಿ ಮುಸ್ಲಿಯಾರ್ ಮತ್ತು ಕಾಟೇರಿ ಮುಹಮ್ಮದ್ ಮುಸ್ಲಿಯಾರ್ ಮೊದಲಾದ ಪ್ರಮುಖರು ಗುರುಗಳಾಗಿದ್ದರು.
ಅಧ್ಯಯನದಲ್ಲಿ ಹಲವು ವರ್ಷಗಳನ್ನು ಕಳೆದ ನಂತರ ಮೌಲಾನ ಪರವಣ್ಣ ಉಸ್ತಾದ್ ಅವರು ವೆಲ್ಲೂರು ಬಾಖಿಯಾತ್ ಗೆ ಹೋಗಬೇಕೆಂದು ಸಲಹೆ ನೀಡಿದರು. ಪ್ರವಾಸವನ್ನು ನಿಗದಿಪಡಿಸಲಾಗಿತ್ತು ಆದರೆ ಜ್ವರದಿಂದಾಗಿಮುಂದೂಡಲಾಯಿತು. ಕೊಟ್ಟಕ್ಕಲ್, ಪಾಲಪ್ಪುರ, ಮಾನಂದೇರಿ, ಪಾರನ್ನೂರ್ ಕೈವೇಲಿಕ್ಕಲ್ ಮತ್ತು ಕೂತುಪರಂಬು ಮುಂತಾದ ಸ್ಥಳಗಳಲ್ಲಿ ದರ್ಸ್ ನಡೆಸಿದರು. ಬಾಪು ಮುಸ್ಲಿಯಾರ್ ತನ್ನ ಆನುವಂಶಿಕ ಆಧ್ಯಾತ್ಮಿಕ ಮಾರ್ಗ, ವರಿಷ್ಠರ ಆದರ್ಶಗಳು ಮತ್ತು ಅವರ ಹಲವು ವರ್ಷಗಳ ತೀರ್ಥಯಾತ್ರೆಯ ಮೂಲಕ ಸಮಾಜದಲ್ಲಿ ಆಧ್ಯಾತ್ಮಿಕ ಚೈತನ್ಯವನ್ನು ಹರಡಿ ಅನೇಕ ಸಂಸ್ಥೆಗಳಿಗೆ ಜನ್ಮ ನೀಡಿದರು. ಪುಣ್ಯ ಸಮಸ್ತ ಮುಶಾವರ ಸದಸ್ಯರು, ಪುಣ್ಯ ಸಮಸ್ತ ಮಲಪ್ಪುರಂ ಜಿಲ್ಲಾ ಅಧ್ಯಕ್ಷರು ಮತ್ತು ಜಾಮಿಯಾ ನೂರಿಯಾ ಕಾಲೇಜು ಅಧ್ಯಕ್ಷರಾಗಿದ್ದರು.
1978 ನವೆಂಬರ್ 27(1398 ದುಲ್ ಹಿಜ್ಜಾ 26) ರಂದು ನಮ್ಮನಗಲಿದರು.
ಅಲ್ಲಾಹನು ಈ ಮಹಾನ್ ವ್ಯಕ್ತಿಯೊಂದಿಗೆ ಜನ್ನತುಲ್ ಫಿರ್ದೌಸ್ನಲ್ಲಿ ನಮ್ಮನ್ನು ಒಟ್ಟುಗೂಡಿಸಲಿ ಆಮೀನ್
ಶಬೀರ್ ಪಾಂಡವರ ಕಲ್ಲು
Related Posts
Leave A Comment
Popular Posts
Recommended Posts
Voting Poll
ಹೊಸದಾಗಿ ಪ್ರಾರಂಭಿಸಲಾದ ಇಸ್ಲಾಮ್ ಆನ್ ವೆಬ್ ಕನ್ನಡ ಪೋರ್ಟಲ್ ನೊಂದಿಗೆ ನಿಮ್ಮ ಅನುಭವವನ್ನು ನೀವು ಹೇಗೆ ಮೌಲ್ಯಮಾಪನ ಮಾಡುತ್ತೀರಿ.
Get Newsletter
Subscribe to our newsletter to get latest news, popular news and exclusive updates.